ಕದ್ದ SMS ಜೋಕುಗಳು.................

ಬರೆದವರು: ಉಮಾಶಂಕರ ಬಿ.ಎಸ್ - ಕಳುಹಿಸಿದ ದಿನ 15 January 2010

ಅಬಕಾರಿ ಇಲಾಖೆಯ 9 ಹೊಸ ಯೋಜನೆಗಳು

1. ಮರಳಿ ಬಾ ಬಾರಿಗೆ
2. ಕುಡುಕರ ಅಂಗಳ
3. ಮದ್ಯಾಹ್ನದ ಮದ್ಯಪಾನ
4. ಭಾಗ್ಯದ ಬ್ರಾಂದಿ ಯೋಜನೆ
5. ದುಡಿ ಕುಡಿ ಯೋಜನೆ
6. ಕುಡುಕರಿಗಾಗಿ ದೇವದಾಸ್ ವಸತಿ ಶಾಲೆ
7. ಕುಡಿತ ಬಿಟ್ಟವರನ್ನು ಬಾರ್ ಕಡೆ ಆಕರ್ಷಿಸಲು ಮದ್ಯಪಾನ ಮೇಳ
8. ಕುಡುಕರ ಪ್ರತಿಭ ಪ್ರದರ್ಶನಕ್ಕಾಗಿ ಮದ್ಯಪಾನ ಕಾರಂಜಿ
9. ಜಿಲ್ಲಾ ಮಟ್ಟದ ಬಾರ್ & ರೆಸ್ಟೋರೆಂಟ್ ಗಳ ದರ್ಶನ
Sponsor :ಸರ್ವ ಕುಡುಕರ ಅಭಿಯಾನ (ಎಲ್ಲರೂ ಕುಡಿಯೋಣ ಎಲ್ಲರಿಗೂ ಕುಡಿಸೋಣ)


ರಾಜಕಾರಣಿ ವೇಷ  


ಕಳ್ಳ-೧: ಏನ್ ಗುರು ಈ ಗೆಟಪ್......? ಒಳ್ಳೆ ರಾಜಕಾರಣಿ ವೇಷ ಹಾಕ್ಬಿಟ್ಟಿದ್ದೀಯಾ ?
ಕಳ್ಳ-೨: ಹೂಂ ಶಿಷ್ಯ, ಈ ಗೆಟಪ್‍ನಲ್ಲಿ ಹೋದ್ರೆ ಯಾವ ನನ್ಮಗ ನನ್ನ ಕಳ್ಳ ಅಂತ ಗುರ್ತು ಹಿಡೀತಾನೆ ?

  ಮಹಿಳೆಯ ಅಭಿನಂದನೆ

ಕಳ್ಳನನ್ನು ಹಿಡಿದು ಹೊಡೆದು ಮೂರ್ಚೆ ಹೋಗುವಂತೆ ಮಾಡಿದ ಮಹಿಳೆಯನ್ನು ಅಭಿನಂದಿಸುತ್ತ ಪೋಲೀಸ್ ಅಧಿಕಾರಿ:
'ನಿಮ್ಮ ಸಾಹಸ ಮೆಚ್ಚಿಕೊಳ್ಳಬೇಕಮ್ಮಾ. ಇದೆಲ್ಲಾ ನಿಮಗೆ ಹೇಗೆ ಸಾಧ್ಯವಾಯಿತು' ಎಂದು ಕೇಳಿದರು.
ಮಹಿಳೆ: 'ನಿಜವಾಗಿ ಹೇಳಬೇಕೂಂದ್ರೆ ಆಗ ಬಂದವ ಕಳ್ಳ ಅಂತ ನನಗೆ ಗೊತ್ತೇ ಇರಲಿಲ್ಲ. ಅಷ್ಟು ರಾತ್ರೀಲಿ ಬಂದವ ನನ್ನ ಗಂಡನೇ ಅಂತ ತಿಳಿದು ಒನಕೆಯಿಂದ ಒಂದು ಬಿಗಿದೆ. ಆದರೆ ಚೀರಿಕೊಂಡ ಧ್ವನಿ ಬೇರೆ ಬಂತು' ಎಂದಳು.



ಅಪಘಾತ ವಲಯ ಅನ್ನೊ ಬೋರ್ಡು


ಈ ಹೈವೇ ತಿರುವಿನಲ್ಲಿ ’ಅಪಘಾತ ವಲಯ ನಿಧಾನವಾಗಿ ಚಲಿಸಿ’ ಅನ್ನೊ ಬೋರ್ಡು ಇತ್ತು ಈಗ ಕಾಣ್ತಾ ಇಲ್ಲವಲ್ಲ ???
ಬೋರ್ಡು ಹಾಕಿದ ಮೇಲೆ ಒಂದೂ ಅಪಘಾತ ಆಗಲಿಲ್ಲ ಸಾರ್. ಆದರಿಂದ ತೆಗೆದುಬಿಟ್ವಿ.


 


ಎಕ್ಸಿಡೆಂಟ್


ಪೋಲೀಸ್ : ಹೇಗಪ್ಪಾ ಎಕ್ಸಿಡೆಂಟ್ ಆಯ್ತು?
ಡ್ರೈವರ್ : ಅದೇ ಸರ್ ನಂಗೂ ಗೊತ್ತಾಗ್ತಾ ಇಲ್ಲ...!! ನಾನಾಗ ನಿದ್ದೆ ಮಾಡ್ತಾ ಇದ್ದೆ..!!!


ಏಟು - ತಿರುಗೇಟು


ಪೋಲೀಸ್: ಡೈನಮೋ ಇದ್ರೂ ಯಾಕ್ರೀ ಲೈಟಿಲ್ದೆ ಹೊಗ್ತಿದ್ದೀರಿ ?
ಸೈಕಲ್ ಸವಾರ: ರಸ್ತೆ ತುಂಬಾ ಲಿಟ್ ಇರುವಾಗ ಸೈಕಲ್‍ಗೆ ಯಾಕೆ ಸಾರ್ ಲೈಟು?
ಸೈಕಲ್ ಸವಾರ: ಸಾರ್ ! ಸಾರ್ ! ಚಕ್ರದ ಗಾಳಿ ಯಾಕೆ ಬಿಡ್ತಾ ಇದೀರಿ ?
ಪೋಲೀಸ್: ಹೊರಗೆಲ್ಲಾ ಇಷ್ಟೊಂದು ಗಾಳಿ ಇರುವಾಗ ಚಕ್ರಕ್ಕೆ ಯಾಕ್ರೀ ಗಾಳಿ !!!


ಡಾಕ್ಟರ್ ಮತ್ತು ರೋಗಿ...


ಡಾಕ್ಟರ್: ನಿಮ್ಮ ಕಿವಿಯಲ್ಲಿ 'ಹಲ್ಲಿ', ಹೋಗುವವರೆಗೆ ಏನು ಮಾಡುತ್ತಿದ್ದಿರಿ ?
ರೋಗಿ: ಸಾರ್ ಮೊದಲು ಕಿವಿ ಒಳಗೆ ಸೊಳ್ಳೆ ಹೋಯ್ತು, 
ಅದನ್ನು ಹಿಡಿಯೋಕೆ 'ಹಲ್ಲಿ' ಹೋಯ್ತು, 
ಅದಕ್ಕೆ ನಾನು ಹಲ್ಲಿ ಆ ಸೊಳ್ಳೆಯನ್ನು ಹಿಡ್ಕೊಂಡು ಬರುತ್ತೆ ಅಂತ ಸುಮ್ಮನಿದ್ದೆ. !!!


ಸ್ವಿಮ್ - ಸ್ಲಿಮ್


ಡಾಕ್ಟರ್ ಗುಂಡನಿಗೆ : ಎಲ್ಲೋದ್ರು ಡೈಲಿ ಸ್ವಿಮ್ ಮಾಡಿ ನೀವು ಸ್ಲಿಮ್ ಆಗ್ತೀರ.
ಗುಂಡ : ಹಲ್ಲೋ ಸುಮ್ಮನಿರಯ್ಯ ಸಾಕು ತಿಮಿಂಗ್ಳಗಳು ಡೈಲಿ ಸ್ವಿಮ್ ಮಾಡಲ್ವ ಅವು ಯಾಕೆ ಸ್ಲಿಮ್ ಆಗಿಲ್ಲ..... !!!


ಡಾ. Pshychotherapist


ಒಮ್ಮೆ ಡಾ. ಚೋಪ್ರ, Pshychotherapist, ಮನೆಯ ಮುಂದೆ ತಮ್ಮ ಹೆಸರನ್ನು ಬರೆಸಿಕೊಳ್ಳಲು ಆಸೆಯಾಗುತ್ತದೆ.
ಅದಕ್ಕೆ ಒಬ್ಬ painterನಿಗೆ ಕೆಲಸ ಒಪ್ಪಿಸುತ್ತಾನೆ.
ಆ painter ಕುಡಿದ ನಶೆಯಲ್ಲಿ ಹೀಗೆ ಬರೆಯುತ್ತಾನೆ.....
ಡಾ. ಚೋಪ್ರ, Pshycho The Rapist !!!


ಹೂವಿನ ಹಾರ


ರೋಗಿ : ಆಪರೇಷನ್ ಥಿಯೇಟರ್‌ನಲ್ಲಿ ಹೂವಿನ ಹಾರ ಯಾಕಿದೆ ?
ಡಾಕ್ಟರ್ : ಇದು ನನ್ನ ಮೊದಲ ಆಪರೇಷನ್. ಸಕ್ಸಸ್ ಆದ್ರೆ ನನಗೆ, ಫೇಲ್ ಆದ್ರೆ ನಿನಗೆ ! ! !


ನಾಲ್ಕು ನಾಲ್ಕು ಜನ


ಒಮ್ಮೆ ಗುಂಡ ಕಣ್ಣಿನ ಡಾಕ್ಟರ್ ಬಳಿ ಹೋದ :
ಗುಂಡ : ಡಾಕ್ಟರೆ ಏಕೋ ಇತ್ತಿಚೆಗೆ ನಾನು ಯಾರನ್ನಾದರೂ ನೋಡಿದರೆ ಇಬ್ಬಿಬ್ಬರು ಕಾಣುತ್ತಾರೆ.... ?
ಡಾಕ್ಟರ್ : ಅದನ್ನು ಹೇಳುವುದಕ್ಕೆ ಯಾಕ್ರಿ ನಾಲ್ಕು ಜನ ಬಂದ್ದಿದ್ದೀರ ! ! !


ಸ್ಕೂಲ್‍ಗೇ ಹೋಗಿಲ್ಲ .....


ಡಾಕ್ಟರ್ : ನಿಮ್ಮ ಕಿಡ್ನಿ ಫೇಲ್ ಆಗಿದೆ. !
ಗುಂಡ : ಏನ್ ಹೇಳ್ತಿದೀರಾ ಡಾಕ್ಟರ್ ? ನನ್ನ ಕಿಡ್ನಿ ಸ್ಕೂಲಿಗೇ ಹೋಗಿಲ್ಲ. ಹಾಗಿರೋವಾಗ ಕಿಡ್ನಿ ಫೇಲ್ ಆಗೋದು ಹೇಗೆ ???

ನಿಮ್ಮ ರೇಟಿಂಗ್: None ಒಟ್ಟೂ ರೇಟಿಂಗ್: 3.7 (3 ಓಟುಗಳು)
shakila 's picture
ಬುಧ, 17/03/2010 - 17:04 ರಂದು shakila (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: ಕದ್ದ SMS ಜೋಕುಗಳು.................

ಇದು ತುಂಬಾ ನನಗೆ ನಗು ಬರುತ್ತೆ ತುಂಬಾ ಚನ್ನಾಗಿ ಇದೆ

shakila 's picture
ಬುಧ, 17/03/2010 - 17:03 ರಂದು shakila (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: ಕದ್ದ SMS ಜೋಕುಗಳು.................

ಇದು ತುಂಬಾ ನನಗೆ ನಗು ಬರುತ್ತೆ ತುಂಬಾ ಚನ್ನಾಗಿ ಇದೆ

BASAVARAJ GOKAVI's picture
ಬುಧ, 24/02/2010 - 17:06 ರಂದು BASAVARAJ GOKAVI (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: ಕದ್ದ SMS ಜೋಕುಗಳು.................

naskara ri nanu hubliyvnu nim joke tumne chanagidave e tara joke nan E-mail ge kasri sara. nimge nanu runi aagiddene.

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
ಕೂಡಿಸು 2 ಉತ್ತರ 12
ಈ ಸುಲಭವಾದ ಗಣಿತ ಪ್ರಶ್ನೆಗೆ ಉತ್ತರ ಕೊಡಿ. ಉತ್ತರವನ್ನು ಅಂಕೆಗಳಲ್ಲಿ ಬರೆಯಿರಿ. ಉದಾ: 2 + 4 ಗೆ 6 ಎಂದು ಬರೆಯಿರಿ.
ಬರೆದವರು
ಉಮಾಶಂಕರ ಬಿದರಕೋಟೆ ಸಣ್ಣೇಗೌಡ
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
ಪೂರ್ತಿ ಕಪ್ಪಗೆ, ಸರಾಸರಿ ಎತ್ತರ, ನೋಡಿದ ಕೂಡಲೆ ಕಾಣುವ ಬಿಳಿ ಹಲ್ಲು, ನೀಟಾಗಿ ಬಾಚಿದ ಕೂದಲು, ವಟಗುಟ್ಟುವ ಕಪ್ಪೆ ಹಾಗೆ ಮಾತನಾಡುವವರು ಯಾರಾದರು ಎದುರು ಬಂದರೆ ಅದು ಖಂಡಿತ ನಾನೇ ಆಗಿರುತ್ತೇನೆ
ಇವರ ವಿಸ್ಮಯ ಪುಟ