Skip to main content

ಥ್ರೀ ಈಡಿಯಟ್ಸ್ ( ಒಂದು ಅಧ್ಬುತ ಚಿತ್ರ )

ಬರೆದಿದ್ದುDecember 28, 2009
12ಅನಿಸಿಕೆಗಳು

ಚಿತ್ರ --- ಥ್ರೀ ಈಡಿಯಟ್ಸ್
ನಿರ್ದೇಶನ ----ರಾಜ್ ಕುಮಾರ್ ಹಿರಾನಿ
ಸಂಗೀತ----- ಶಂತನು ಮೊಯ್ತ್ರಾ
ಸಾಹಿತ್ಯ-------ಸ್ವಾನಂದ ಕಿರ್ಕಿರೆ
ತಾರಾಗಣ------ ಅಮೀರ್ ಖಾನ್, ಮಾಧವನ್,ಶರ್ಮಾನ್ ಜೋಶಿ, ಬೊಮ್ಮನ್ ಇರಾನಿ,ಕರೀನಾ ಕಪೂರ್.

ಮೊನ್ನೆ ಬಿಡುಗಡೆಯಾದ ಥ್ರೀ ಈಡಿಯಟ್ಸ್ ಚಿತ್ರ ಮೂರೇ ದಿನಗಳಲ್ಲಿ 65 ಕೋಟಿ ರೂಪಾಯಿ ದೋಚಿದೆಯಂತೆ!
ಚಿತ್ರ ನೋಡಿದವರಿಗೆ ಆಶ್ಚರ್ಯವೇನಿಲ್ಲ ಅನ್ನಿಸುತ್ತದೆ. ಒಂದು ಸರಳ ಸತ್ಯವನ್ನು ನಮ್ಮ ಮುಂದೆ ಚಿತ್ರ ಅನಾವರಣಗೊಳಿಸುತ್ತಾ ಹೋಗುತ್ತದೆ. ಹಾಗೆ ನೋಡಿದರೆ ಕಥೆ ಸರಳವಾದದ್ದೇ.
ಮೂರು ಜನ ವಿದ್ಯಾರ್ಥಿಗಳು ಒಂದೇ ಕಾಲೇಜಿನ ಸಹಪಾಠಿಗಳು ಮತ್ತು ಹಾಸ್ಟೆಲ್ ನ ರೂಂ ಮೇಟ್ಸ್. ಮೂವರಿಗೂ ತಮ್ಮದೇ ಆದ ವಿಭಿನ್ನ ಪ್ರಪಂಚ. ತಮ್ಮದೇ ಸಮಸ್ಯೆಗಳು.
ಇವರಲ್ಲಿ ಇಬ್ಬರು ಹತ್ತು ವರ್ಷದ ನಂತರ ಆಕಸ್ಮಿಕ ಪಿತೂರಿಯೊಂದರಿಂದ ಭೇಟಿಯಾಗುತ್ತಾರೆ. ಅವರಿಬ್ಬರಿಗೂ ತಮ್ಮ ಗೆಳೆಯ ರಾಂಚೂನನ್ನು ( ಅಮೀರ್ ಖಾನ್) ನೋಡುವ ಆಸೆ. ಆದರೆ ರಾಂಚೂನನ್ನು ಹುಡುಕುತ್ತಾ ಇಬ್ಬರೂ ತಮ್ಮ ಹಳೆಯ ನೆನಪುಗಳೊಂದಿಗೆ ಹೊರಡುವ ಪ್ರಯಾಣವೇ ಚಿತ್ರ ದ ಮುಖ್ಯ ಕಥೆ. ಕಾಲೇಜಿನಲ್ಲಿ ಇವರು ನಡೆಸಿದ ಕಾರುಬಾರುಗಳು ನಗೆಯುಕ್ಕಿಸಿದರೆ, ಕೆಲವು ದೃಶ್ಯಗಳು ಕಣ್ಣನ್ನು ಒದ್ದೆಯಾಗಿಸುತ್ತದೆ.ರಾಂಚೂ ಒಂದು ರೀತಿಯ ಪವಾಡ ಪುರುಷ. ತನ್ನ ಸುತ್ತ ಮುತ್ತಲಿನ ಪ್ರಪಂಚವನ್ನು ಬದಲಾಯಿಸುವುದರಲ್ಲಿ ನಿಷ್ಣಾತ. ಪ್ರತಿಭಾವಂತ. ಆದರೆ ನಮ್ಮ ಶಿಕ್ಷಣ ನೀತಿಯ ಬಗ್ಗೆ ಭ್ರಮನಿರಸನ ಹೊಂದಿರುವಾತ. ಇವರಿಬ್ಬರ ಪಾಲಿಗೆ ದೇವತಾ ಮನುಷ್ಯ
ಕೊನೆಗೆ ರಾಂಚೂ ಇವರಿಬ್ಬರಿಗೆ ದೊರೆಯುವನೇ? ಕಾಲೇಜಿನಲ್ಲೇ ಪ್ರತಿಭಾವಂತನಾಗಿದ್ದ ಆತ ಈಗೇನುಮಾಡುತ್ತಿದ್ದಾನೆ ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ
ವೀಕ್ಷಿಸಿ ---ಥ್ರೀ ಈಡಿಯಟ್ಸ್

ಪ್ರಿನ್ಸಿಪಾಲ್ ನ ಪಾತ್ರದಲ್ಲಿ ಬೊಮ್ಮನ್ ಇರಾನಿಯ ನಟನೆಯಂತೂ ಅಧ್ಬುಥ. ಇನ್ನು ಹಾಡುಗಳಂತೂ ಮಧುರವಾಗಿದೆ. ಯಾವುದೂ ಚಿತ್ರದ ಓಟಕ್ಕೆ ಧಕ್ಕೆ ತರುವುದಿಲ್ಲ.
ಕಥೆಯ ಬಗ್ಗೆ ಹೇಳುವುದಾದರೆ ನಿರ್ದೇಶಕರು ಚೇತನ ಭಗತ್ ರ , 5 point someone, ಮತ್ತು three mistakes of my life. ಕೃತಿಗಳಿಂದ ಸ್ಪೂರ್ತಿ ತೆಗೆದುಕೊಂಡಿದ್ದಾರೆ ಎನ್ನಿಸುತ್ತದೆ.

ಒಟ್ಟಾರೆ ಹೇಳುವುದಾದರೆ, ನೀವು ಈ ಚಿತ್ರ ನೋಡದಿದ್ದರೆ ಖಂಡಿತಾ ಏನನ್ನೋ miss ಮಾಡಿಕೊಳ್ಳುತ್ತೀರಿ.

so dont miss THREE IDIOTS

ಸಸ್ನೇಹ
ಬಾಲ ಚಂದ್ರ

ಲೇಖಕರು

ಬಾಲ ಚಂದ್ರ

ಹೊಳೆ ದಂಡೆ

ನನ್ನ ಲೇಖನಗಳನ್ನು ಓದಿ
ನನ್ನ ಬಗ್ಗೆ ನಿಮಗೇ ತಿಳಿಯುತ್ತೆ.

ಅನಿಸಿಕೆಗಳು

ವಿನಯ್_ಜಿ ಸೋಮ, 12/28/2009 - 13:18

ಬಾಲ ಚಂದ್ರ ರವರೆ,
ಕೇವಲ ಒಂದು ವಾರದಲ್ಲಿ ಈ ಚಿತ್ರದ ಗಳಿಕೆ 20 ಕೋಟಿ ರೂಪಾಯಿ!!! ಸುದ್ದಿ ಮಾಧ್ಯಮ ಮತ್ತು ಜನರಿಂದ ಸಾಕಷ್ಟು ಹೊಗಳಿಕೆ ಪಡೆದಿರುವ ಈ ಚಿತ್ರದ ಬಗ್ಗೆ ನೀವು ಒಂದು ವಿಶ್ಲೇಷಣೆ ಬರೆದರೆ ಚೆನ್ನ... :). ಅದಕ್ಕಾಗಿ ಕಾಯುತ್ತಿರುತ್ತೇನೆ...

ಬಾಲ ಚಂದ್ರ ಮಂಗಳ, 12/29/2009 - 16:18

ಪ್ರೀತಿಯ ವಿನಯ್,
ಇದರ ವಿಶ್ಲೇಷಣೆ ಕೂಡ ಬರೆದಿದ್ದೆ, ಆದರೆ ಯಾಕೋ ಅದು ಕಾಣಿಸುತ್ತಿಲ್ಲ.ಬಹುಶಃ ತಾಂತ್ರಿಕ ಸಮಸ್ಯೆ ಇರಬಹುದು. ಮತ್ತೆ ಅಷ್ಟು ಉದ್ದ ಟೈಪು ಕುಟ್ಟಲು ಸಮಯ ಸಿಕ್ಕಿದಾಗ ಖಂಡಿತಾ ಬರೆಯುತ್ತೇನೆ.

ಸಸ್ನೇಹ
ಬಾಲ ಚಂದ್ರ

ಮೇಲಧಿಕಾರಿ ಮಂಗಳ, 12/29/2009 - 19:50

ಹಾಯ್ ಬಾಲಚಂದರ್ ಅವರೇ,

ಸಮಸ್ಯೆಯನ್ನು ಪರಿಹಾರ ಮಾಡಲಾಗಿದೆ. :)

ಬಾಲ ಚಂದ್ರ ಧ, 12/30/2009 - 09:32

ಧನ್ಯವಾದಗಳು ಮೇಲಧಿಕಾರಿಗಳೇ,

ನಾನು ಬರೆದೇ ಇಲ್ಲ ಎಂದು ಗಂಧ ತಿಳಿದುಕೊಂಡು ನನ್ನ ಮರ್ಯಾದೆ ತೆಗೆಯುತ್ತಿದ್ದರು.

ಸಸ್ನೇಹ
ಬಾಲ ಚಂದ್ರ

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 12/29/2009 - 10:30

ಬಾಲ, ಇದು ಹಿಂದಿ ಚಿತ್ರ ಎಂದ ಕಾರಣಕ್ಕೆ "ಒಂದು ಅಧ್ಬುತ ಚಿತ್ರ" ಎಂಬ ಹಣೆಪಟ್ಟಿ ಕಟ್ಟಬೇಕಾದ ನಿಮ್ಮ ಅನಿವಾರ್ಯತೆಗೆ ಅನುಕಂಪವಾಗುತ್ತಿದೆ. ಯಾಕೆ, ಇದಕ್ಕೆ "ಕದ್ದ ಮಾಲು" ಎಂದು ಹೇಳಲು ಮನಸ್ಸು ಬರುತ್ತಿಲ್ಲವೋ? ಅಥವಾ ಇದು ಕದ್ದ ಮಾಲಲ್ಲ ಎಂದು ಸಮರ್ಥಿಸಲು ತೊಡೆ ತಟ್ಟಿ ಅಖಾಡಾಕ್ಕೆ ಇಳಿಯುತ್ತೀರೋ? ನಿಮ್ಮಂತ ಸುಪುತ್ರರನ್ನು ಪಡೆದ ಕನ್ನಡ ತಾಯಿ ಧನ್ಯೋ ಧನ್ಯ!!!!!!!!!

ಬಾಲ ಚಂದ್ರ ಮಂಗಳ, 12/29/2009 - 16:25

ಈ ಚಿತ್ರದ ಕಥೆಯನ್ನು ಚೇತನ್ ಭಗತ್ ರವರ
THREE MISTAKES OF MY LIFE ಮತ್ತು FIVE POINT SOME ONE ಕೃತಿಗಳಿಂದ ಸ್ಪೂರ್ತಿ ತೆಗೆದು ಕೊಂಡಿದ್ದಾರೆ. ಆದರೆ ನಿರ್ದೇಶಕರು ಈ ವಿಷಯವನ್ನು ಗೌಪ್ಯವಾಗೇನೂ ಇಟ್ಟಿಲ್ಲ. so ಇದು ಕದ್ದ ಮಾಲು ಹೇಗಾಗುತ್ತದೆ ಅನಾಮಿಕರೇ? ಹಿಂದಿ ಚಿತ್ರ ಎಂದ ಮಾತ್ರಕ್ಕೆ ಅದ್ಭುತ ಚಿತ್ರ ಎನ್ನುವಂತಹ ಕನ್ನಡಿಗ ನಾನಲ್ಲ.
ಕಥೆ, ಚಿತ್ರಕಥೆ, ಸಂಭಾಷಣೆ, ಛಾಯಾಗ್ರಹಣ ಎಲ್ಲದರಲ್ಲೂ ಉತ್ತಮವಾದ ದುನಿಯಾ ಚಿತ್ರವನ್ನು ಐದು ಬಾರಿ ನೋಡಿದ್ದೇನೆ, ಅದೂ ಚಿತ್ರ ಮಂದಿರದಲ್ಲೇ.
ಇದಕ್ಕೇನೆನ್ನುತ್ತೀರಿ ?

ಸಸ್ನೇಹ
ಬಾಲ ಚಂದ್ರ

ಗಂಧ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 12/29/2009 - 16:40

ಮೊದಲನೆಯದಾಗಿ: ಹೇಳಿ ಕದ್ದರೆ ಅದು ನಿಮ್ಮ ಪ್ರಕಾರ ಕಳುವಲ್ಲ; 'ಸ್ಪೂರ್ತಿ'!. ನಮ್ಮ ಕಡೆ ಅದನ್ನು "ದರೋಡೆ" ಅನ್ನುತ್ತಾರೆ.
ಎರಡನೆಯದಾಗಿ: ದುನಿಯಾ ನೀವು ಅನೇಕ ಬಾರಿ ನೋಡಿದ್ದು ಸಂತೋಷ. ( ನಿಮ್ಮ ಕನ್ನಡತನದ ಬಗೆಗೆ ನನಗಿದ್ದ ಅಭಿಪ್ರಾಯ ತುಸು ಬದಲಾಯಿಸಿ ಕೊಳ್ಳುತ್ತೇನೆ) ಆದರೆ ದುನಿಯಾ " ಒಂದು ಅಧ್ಭುತ ಚಿತ್ರ" ಎಂದು ವಿಮರ್ಶೆ ಬರೆಯಲು ತಮಗೆ ಸಾಧ್ಯವಾಗದ್ದಕ್ಕೆ ವಿಷಾದಿಸುತ್ತೇನೆ.
ಕೊನೆಯದಾಗಿ: ಅನಾಮಿಕನಾಗಿ ಕಾಮೆಂಟ್ ಮಾಡಿದ್ದು ನಾನೇ. ಯಾಕೋ ಹೆಸರು ಕಾಣಿಸುತ್ತಿಲ್ಲ.ಬಹುಶಃ ತಾಂತ್ರಿಕ ಸಮಸ್ಯೆ ಇರಬಹುದು.

ಬಾಲ ಚಂದ್ರ ಮಂಗಳ, 12/29/2009 - 17:05

ಮೊದಲನೆಯದಾಗಿ: ಹೇಳಿ ಕದ್ದರೆ ಅದು ನಿಮ್ಮ ಪ್ರಕಾರ ಕಳುವಲ್ಲ; 'ಸ್ಪೂರ್ತಿ'!. ನಮ್ಮ ಕಡೆ ಅದನ್ನು "ದರೋಡೆ" ಅನ್ನುತ್ತಾರೆ
ನಿಮ್ಮ ಕಡೆಯವರ ಭಾಷಾ ಜ್ಞಾನಕ್ಕಾಗಿ ವಿಷಾದಿಸುತ್ತೇನೆ.ಈ ನಿರ್ದೇಶಕರು ದರೋಡೆ ಮಾಡಿ ಕಥೆ ಚಿತ್ರಕಥೆ, ಸಂಭಾಷಣೆ ಎಲ್ಲಾ ನನ್ನದೇ ಅಂತೆಲ್ಲೂ ಹೇಳಿಕೊಳ್ಳಲಿಲ್ಲ ( ಯೋಗರಾಜ್ ಭಟ್ ಥರಾ ) ಅದರ ಬದಲಾಗಿ ಅವರಿಗೆ ಸಲ್ಲಿಸಬೇಕಾದ cridit ಎಲ್ಲಾ ಸಲ್ಲಿಸಿದ್ದಾರೆ

ಎರಡನೆಯದಾಗಿ: ದುನಿಯಾ ನೀವು ಅನೇಕ ಬಾರಿ ನೋಡಿದ್ದು ಸಂತೋಷ. ( ನಿಮ್ಮ ಕನ್ನಡತನದ ಬಗೆಗೆ ನನಗಿದ್ದ ಅಭಿಪ್ರಾಯ ತುಸು ಬದಲಾಯಿಸಿ ಕೊಳ್ಳುತ್ತೇನೆ) ಆದರೆ ದುನಿಯಾ " ಒಂದು ಅಧ್ಭುತ ಚಿತ್ರ" ಎಂದು ವಿಮರ್ಶೆ ಬರೆಯಲು ತಮಗೆ ಸಾಧ್ಯವಾಗದ್ದಕ್ಕೆ ವಿಷಾದಿಸುತ್ತೇನೆ.
ಅದರ ಬಗ್ಗೆ ನನಗೂ ವಿಷಾದವಿದೆ. ಆದರೆ ಅದಕ್ಕಿಂತಾ ವಿಷಾದವಿರುವುದು ದುನಿಯಾ ಚಿತ್ರ ಬಿಡುಗಡೆಯಾದಾಗ ನಾನಿನ್ನೂ ವಿಸ್ಮಯನಗರಿಯ ಪ್ರಜೆಯಾಗಿರಲಿಲ್ಲ.

ಕೊನೆಯದಾಗಿ: ಅನಾಮಿಕನಾಗಿ ಕಾಮೆಂಟ್ ಮಾಡಿದ್ದು ನಾನೇ. ಯಾಕೋ ಹೆಸರು ಕಾಣಿಸುತ್ತಿಲ್ಲ.ಬಹುಶಃ ತಾಂತ್ರಿಕ ಸಮಸ್ಯೆ ಇರಬಹುದು.

ಈ ಮಾತನ್ನು ವ್ಯಂಗ್ಯವಾಗಿ ಹೇಳಿಲ್ಲ ಎಂದು ಕೊಳ್ಳುತ್ತೇನೆ. ನಾನು ನಿಜವಾಗಿಯೂ ಇದರ ಸಂಪೂರ್ಣ ವಿಮರ್ಶೆ ಬರೆದಿದ್ದೆ. ಬೇಕಾದರೆ ಈ ಲೇಖನದ ಕೊನೆ ಸಾಲನ್ನು ಗಮನಿಸಿ, ಅದು ಅಪೂರ್ಣವಾಗಿದೆ. ಜೊತೆಗೆ ಬರೀ ಚಿತ್ರ ನಟರ ಹೆಸರು, ನಿರ್ದೇಶಕರ ಹೆಸರು ಬರೆದು ಅದನ್ನು ಅದ್ಭುತ ಚಿತ್ರ ಎಂದು ಕರೆಯಲು ನಾನೇ ಬೇಕಾಗಿತ್ತೇ? ಯೋಚಿಸಿ

ಸಸ್ನೇಹ
ಬಾಲ ಚಂದ್ರ

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 12/29/2009 - 17:12

neevu heliddu sari bala chandra avre......Hagiddare SPOORTI anno padakke artha ne illa anno matu heltidare gandha avru......ashtakku adannu kadambari atva pustaka adarita chitra anbodu..

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 12/29/2009 - 12:00

ree swami cenema bagge bariyuttare andre adanno nodlarade bariyuttare anta tilkondiddira?....yavude cnema chennagidre abipraya helidre tappenu......summane hindi kannada antella namm nammalle beda bava madbedi....ishte kal kali idre AVTAR bagge baredaga yak sumnidri.....this is not good.....

ಬಾಲ ಚಂದ್ರ ಮಂಗಳ, 12/29/2009 - 16:19

ಇರಲಿ ಬಿಡಿ ಅನಾಮಿಕರೇ,
ಹೂವಿನ ಗಿಡದಲ್ಲಿ ಮುಳ್ಳುಗಳಿರುವಂತೆ ನಮ್ಮ ವಿಸ್ಮಯ ನಗರಿಯಲ್ಲಿ ಇಂತಹವರೂ ಇರಲಿ.

ಸಸ್ನೇಹ
ಬಾಲ ಚಂದ್ರ

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 12/29/2009 - 16:35

Illi besarada sangathi endare hindi kannada anta beda bava madodu.......hindi namma rashtra bhashe alve.....navellaa bharathiyaru alve...edakku migilagi cenema yavude bhasheyalli irali adra bagge vimarshe madidare tappe....che che...

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.