Skip to main content

ನಮ್ಮ ದೇಶ ಆಧ್ಯಾತ್ಮದ ತಳಹದಿಯಲ್ಲಿ ನಿಂತಿದೆ. ಅನಾದಿ ಕಾಲದಿಂದಲೂ ಭಾರತ ಆಧ್ಯಾತ್ಮಿಕತೆಯಲ್ಲಿ ಉನ್ನತ ಮಟ್ಟದಲ್ಲಿದೆ. ಆದರೆ ಇಂದು ಆಧ್ಯಾತ್ಮಿಕತೆಯು ಕೇವಲ ವಯಸ್ಸಾದವರಿಗೆ ಮಾತ್ರ ಎಂಬ ಭಾವನೆ ಎಲ್ಲರಲ್ಲೂ ಬೇರೂರಿಬಿಟ್ಟಿದೆ. ಹೀಗಿರುವಾಗ ಆಧ್ಯಾತ್ಮದಿಂದ ಇಂದಿನ ಜನಾಂಗ ದೂರ ಸರಿಯುತ್ತಿರುವುದು ಸರಿಯೆ??

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ಎಚ್.ಎಸ್. ಪ್ರಭಾಕರ ಸೋಮ, 11/23/2009 - 00:48

ಸರಿಯೇ ಎಂಬ ನಿಮ್ಮ ಪ್ರಶ್ನೆಗೆ `ಸರಿಯಲ್ಲ' ಎಂಬುದೇ ನನ್ನ ಉತ್ತರ ಕಿರಣ್ ಅವರೇ.
ಆದರೆ ಇಂದು ಆಧ್ಯಾತ್ಮಿಕತೆಯು ಕೇವಲ ವಯಸ್ಸಾದವರಿಗೆ ಮಾತ್ರ ಸೀಮಿತವಾಗಿ, ಆಧ್ಯಾತ್ಮದಿಂದ ಇಂದಿನ ಜನಾಂಗ ದೂರ ಸರಿಯುತ್ತಿದ್ದರೆ- ಅದಕ್ಕೆ ದೇಶದಲ್ಲಿ ಉಂಟಾಗುತ್ತಿರುವ ಅನೇಕ ವಿಕೃತ ಪರಿವರ್ತನೆಗಳು ಹಾಗೂ ಅವುಗಳಿಗೆ ನೀರೆರೆಯುವ ಸಮೂಹ ಮಾಧ್ಯಮಗಳು ಕಾರಣ. ದುರಾದೃಷ್ಟಕ್ಕೆ ನಾನೂ ಓರ್ವ ಮಾಧ್ಯಮ ವೃತ್ತಿಯಲ್ಲಿರುವವನೇ ಆಗಿರುವುದು ಪರಿಸ್ಥಿತಿಯ ವ್ಯಂಗ್ಯವೇ ಸರಿ ಎನಿಸಿಬಿಟ್ಟಿದೆ!!

ಉಮಾಶಂಕರ ಬಿ.ಎಸ್ ಸೋಮ, 11/23/2009 - 09:48

ಜನರು ಆಧ್ಯಾತ್ಮದಿಂದ ದೂರವೇನು ಸರಿಯುತ್ತಿಲ್ಲ ಬದಲಾಗಿ ಆಧ್ಯಾತ್ಮವನ್ನೇ ತಮ್ಮ ಆದಾಯದ ಮೂಲವಾಗಿಸಿಕೊಳ್ಳುತ್ತಿದ್ದರೆಂಬುದು ನನ್ನ ಅಭಿಪ್ರಾಯ, ಆಧ್ಯಾತ್ಮವೇನಾದರೂ ಕಡಿಮೆಯಾಗಿದ್ದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಗುಡಿ, ಚರ್ಚು, ಮಸೀದಿಗಳು ದಿನ ನಿತ್ಯ ಹೊಸದಾಗಿ ಹುಟ್ಟುಕೊಳ್ಳುತ್ತಿರಲಿಲ್ಲ ಅಲ್ಲವೇ? ಆಧ್ಯಾತ್ಮವನ್ನು ಯುವಜನತೆ ನೋಡುವ ದೃಷ್ಟಿ ಬದಲಾಗಿದೆಯೆಂದು ನನ್ನ ಅಭಿಪ್ರಾಯ ಕಿರಣ ರವರೆ.

  • 747 views