Skip to main content

ಸ್ರವೀಣ್ ಪೂಡಾ ಅವರೊಂದಿಗೆ ಸಂದರ್ಶನ

ಬರೆದಿದ್ದುNovember 19, 2009
27ಅನಿಸಿಕೆಗಳು

ತೀರ ಇತ್ತೀಚೆಗೆ ಕರ್ನಾಟಕದ ಪ್ರಸಿದ್ದ ಕನ್ನಡ ದೈನಿಕ "ಗೋಸುಂಬೆ ಪತ್ರಿಕೆ" ಯಲ್ಲಿ ಪ್ರಸಾರವಾದ ಜಾತ್ಯಾತೀತವಾದಿ, ಸಮಾಜವಾದಿ ಮುಖಂಡ, ಶ್ರೀ ಸ್ರವೀಣ್ ಪೂಡಾ ರವರ ಸಂದರ್ಶನದ ಆಯ್ದ ಭಾಗಗಳನ್ನು ನಿಮ್ಮ ಅವಗಾಹನೆಗಾಗಿ ಇಲ್ಲಿ ಕೊಡಲಾಗುತ್ತಿದೆ.

ಸಂದರ್ಶಕಃ- ನಮಸ್ಕಾರ ಸ್ರವೀಣ್ ಪೂಡಾ ಅವರೆ, ಗೋಸುಂಬೆ ಪತ್ರಿಕೆಗೆ ಸ್ವಾಗತ
ಸ್ರ ಪೂಃ- ನಮಸ್ಕಾರ

ಸಂ= ಮೊದಲಿಗೆ ಗಾಂಧೀಜಿ ಅವರ ಬಗ್ಗೆ ಏನಾದರೂ ಹೇಳಿ

ಸ್ರ ಪೂ=೨೦ನೇ ಶತಮಾನಾದಲ್ಲಿ ಜಗತ್ತಿಗೆ ಸತ್ಯ ಅಹಿಂಸೆ ಪಾಠ ಹೇಳಿದ ಮುಗ್ಧ ಜೀವ ಸ್ವಾಮಿ... ಅವರು ಅವರನ್ನ ಹಿಂದೂ ಅಂತಾನೆ ಕರ್ಕೋಟಾ ಇದ್ರು.. ಆದ್ರೆ ಹಿಂದೂ ಮುಸ್ಲಿಮ್ ಬಾಯೀ ಬಾಯೀ ಅಂದ್ರೂ ಅನ್ನೋದೇ ತಪ್ಪಾಗಿ ಕಾಂತು ನಿಮ್ಗೆ ಅಲ? ಮುಸ್ಲಿಮ್ಸ್ ಹೀಗೆ ಹಿಂಸೆ ಮಾಡೊಕೆ ಕಾರಣ ಅವರ ಧರ್ಮದಲ್ಲಿ ಹೇಳಿರೋ (ಅ)ನೀತಿ ಪಾಠ. ಆದ್ರೆ ನಂ ಧರ್ಮದಲ್ಲಿ ಹೇಳಿರೋದು ಶಾಂತಿ ಪಾಠ. ಶಾಂತಿ ಪರಿಪಾಲನೇನೆ ಹಿಂದುತ್ವ. ಅದನ್ನೇ ಗಾಂಧಿ ಬುದ್ಧ ಮಾಡಿದ್ದು. ಅವರು ನಿಜವಾದ ಹಿಂದೂ. ಯಾವ್ಡೇ ಧರ್ಮದ ಹೆಸರಲ್ಲಿ ಸಂಘ ಕಟ್ಟದೇ. ಹಿಂದುತ್ವನ ದಲ್ಲಿ ಪಾಠ ಹೇಳಿದ್ರು. ಆದ್ರೆ ನಿಮ್ ಗೋಡ್ಸೆ ಅಂಡ್ ಮೋದಿ ಕಂಪನೀ ಎನ್ ಮಾಡ್ತ ಇದೆ. ಕೊಲೆ ಅತ್ಯಾಚಾರ. ಇದು ನಿಮ್ ಹಿಂದುತ್ವನ.. ಧರ್ಮೊ ರಕ್ಷತಿ ರಕ್ಷಿತಹ ಅನ್ನೋದರ ಅರ್ಥ ಬಹುಶ ಗಾಂಧಿ ಅಂತ ಹಿಂದೂಗಳಿಗೆ ಮಾತ್ರ ಗೊತ್ತಾಗಿದೆ ಅನ್ಸತ್ತೆ ಮುಸ್ಲಿಮ್ಸ್ ನೇತಿ ಪಾಠಕ್ಕು ಹಿಂದೂ ಪಾಠಕ್ಕು ವ್ಯತ್ಯಾಸ ಇಲ್ಲದ ಹಾಗೆ ಮಾಡ್ತ ಇದಿರಾ
ನೆನಪಿರಲಿ

ಸಂ= ಗಾಂಧೀಜಿ ಹಾಗೂ ಕನ್ನಡ ಲಿಪಿಯ ಬಗ್ಗೆ ತಾವು ಸಾಕಷ್ಟು ತಿಳಿದುಕೊಂಡಿದ್ದೀರಿ ಸ್ರವೀಣ್.

ಸ್ರ ಪೂ= ಢನ್ಯವಾಡ

ಸಂ= ಸರಿ ನಮ್ಮ ದೇಶದ ಬಗ್ಗೆ ನಿಮಗಿರೋ ಅಭಿಪ್ರಾಯ ಏನು ಪೂಡಾರವರೇ ?
ಸ್ರ ಪೂ=ನಾನು ನನ್ ದೇಶನ ಭರ್ತಾ ಅಂತ ಕಾರಿತೀನಿ ಹಿಂದುಸ್ತಾನ್ ಅಂತ ಅಲ್ಲ.. ನಾನು ಭಾರ್ತೀ ಹಿಂದುಸ್ತಾನಿ ಅಲ್ಲ..

ಸಂ= ಭಾರ್ತಿ ಅಂದ್ರೆ ವಿಷ್ಣುವರ್ಧನ್ ಅವರ ಹೆಂಡತಿ ಬಗ್ಗೆ ಹೇಳ್ತಾ ಇದ್ದೀರಾ?
ಸ್ರ ಪೂ=ಇನ್ನೊಬ್ಬರ ಹೆಂಡತಿನ ಹೀಯಾಳಿಸೋರೆಲ್ಲ ಹಿಂದುಸ್ತಾನಿಗಲಾದರೆ ಭಾರ್ತಿಯರೋಗೋದು ಯಾವಾಗ..

ಸಂ=ಅಂದರೆ ನಿಮ್ಮ ಮಾತಿನ ಅರ್ಥ
ಸ್ರ ಪೂ=ನಿಮ್ಗೆ ಅರ್ಥ ಆಗ್ಬೋದು ಅನ್ಕೊನ್ಡು ಸುಮ್ನಾದೆ.. ಕಾಲ್ ಏಲೀಳೆ ಬೇಕು ಅನ್ನೋರಿಗೆ ಕಾರಣ ಬೇಕಾಗೊತ್ತೇ ಅನ್ನೋದು ಮರೆತಿದ್ದೆ

ಸಂ= ಖಂಡಿತ ನಾನು ನಿಮ್ಮ ಕಾಲು ಎಳೀತಿಲ್ಲ ಪೂಡಾರವರೇ, ನನಗೆ ನಿಜವಾಗಲೂ ಅರ್ಥವಾಗಲಿಲ್ಲ
ಸ್ರ ಪೂ=ತೀರಾ ಒಂದು ಸೈಧನ್ತಿಕ ನೆಲಗಟ್ಟಿನ ಮೇಲೆ ನೆಡಿವಾಗ ತಪ್ಪು ಕಾಣತ್ತೆ ಆದ್ರೆ ಅದೇ ಆ ದಾರಿಗೆ ಮುಳ್ಳು ಅನ್ನೋ ನಿಮ್ಮ ವಾದ ಯಾಕ್ ಬೇರೆ ಧರ್ಮಾಂಡರ ವಿರುದ್ಧ ಕಾಣೋದಿಲ್ಲ.. ನನ್ನ ವಾದದಲ್ಲೂ ತಪ್ಪಿರಬಹುದು.. ಆದ್ರೆ ನಿಮ್ಮ ಧರ್ಮಾಂಡರ ತಪ್ಪು ನಿಮ್ಗೆ ಕಾಣೋದೇ ಇಲ್ವಾ? ಇದೆ ನಿಮ್ಮಲ್ಲಿ ನನ್ನ ಪ್ರಶ್ನೆ........

ಸಂ= ಸರಿ ಈ ವಿಷಯ ಇಲ್ಲಿಗೇ ಬಿಡಿ
ಸ್ರ ಪೂ=ಇನ್ನೂ ಏನಾದ್ರೂ ಅರ್ಥ ಆಗ್ಲಿಲ್ಲ ಅಂತ ಕೇಳಿದ್ರೆ ಬಹುಶಃ ನಿಮ್ಮ ಓಲೈಕೆಗೆ ಅಷ್ಟೇ..

ಸಂ= ಮೊನ್ನೆ ನಡೆದ ದಿನಕ್ಕೊಂದು ಹಾಸ್ಯ ವಿವಾದದ ಬಗ್ಗೆ ತಾವೇನು ಹೇಳ್ತೀರಿ?
ಸ್ರ ಪೂ= ಬ್ರಾಹ್ಮಣರು ಸ್ವಾಮೀ ಬ್ರಾಹ್ಮಣರು. ನಾನೇ ಮೋದ್ಲ ಸಲ ಒಂದು ಆಸ್ಯ ನೋಡಿ ಜಾತಿ ಕಾಂಡಿ ಹೀಡಿದಿರೊದು. ಇದೇ ಕೆಲಸ ಒಬ್ಬ ಪಾಕಿಸ್ತಾನಿ ಮಾಡಿದ್ರೆ ಅವ್ನಿಗೆ ನೊಬೆಲ್ ಕೋಡ್ತಾಯಿದ್ರು, ನಾನು ಭಾರ್ತಿಯ ನೋಡಿ ಮಿಸ್ಸಾಗೋಯ್ತು ಒಪ್ಟೀರಾ?

ಸಂ=ಅಂದರೆ ಇಲ್ಲಿ ಭಾರತೀಯರೆಲ್ಲ ನಿಮಗೆ ವಿರುದ್ದವಾಗಿ ನಿಂತರೆ?
ಸ್ರ ಪೂ= ಹೌದು, ಎಲ್ಲರೂ ಬ್ರಾಹ್ಮಾಣರೇ ನೋಡಿ

ಸಂ= ಅಂದರೆ
ಸ್ರ ಪೂ= ಅವರೀಗೆ ಮತ್ರ ಒಂದು ಜೋಕ ನ ನೊಡಿ ನಗೋಷ್ಟು ಹಾಸ್ಯ ರಸಿಕತೆ ಇರೋದು

ಸಂ= ಇದ್ರಲ್ಲಿ ರಸಿಕತೆ ಏನು ಬಂತು? ಜೋಕ್ ನೋಡಿ ಎಲ್ಲಾರೂ ನಗಲೇ ಬೇಕಲ್ವೆ?3
ಸ್ರ ಪೂ=ಹಾಗಲ್ಲ, ಒಂದು ಜೋಕ್ ಯಾರ್ದಾರೂ ಹೆಂಡ್ತೀ ಮೇಲೆ ಬರಿದೀದಾರೆ ಖಂಡಿತ ಅದ್ನು ಬ್ರಾಹ್ಮಣಾರೇ ಬರ್ದೀರ್ಬೋದು, ಇದು ನನ್ನ ಸಂಶೋಢನೆ.

ಸಂ= ಗುಜರಾತ್ ನಲ್ಲಿ ಈಗ ಅಭಿವೃದ್ದಿಯ ಗಾಳಿ ಬೀಸುತ್ತಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಪೂಡಾಜೀ?
ಸ್ರ ಪೂ=ಆರ್ ಎಸ್ ಎಸ್ ನ ನಾಥೂರಾಮ್ ಗೋಡ್ಸೆ ನು ಒಬ್ಬ ಭಯೋತ್ಪಾದಕ. ನರೇಂದ್ರ ಮೋದೀನೂ ಒಬ್ಬ ಭಯೋತ್ಪಾದಕ. ಇವರ ಜೊತೆ ನಿಂತಿರೋ ಪಕ್ಷ, ಸಂಘಟನೆಗಳು ಒಂದು ಭಯೋತ್ಪಾದಕ ಪಕ್ಷ ಅಥವಾ ಸಂಘಟನೆ..

ಸಂ= ನಾಥೂರಾಂ ಒಬ್ಬ ದೇಶ ಭಕ್ತನಾಗಿದ್ದ ಅಂತ ಹೇಳ್ತಾರಲ್ಲ.
ಸ್ರ ಪೂ=ಗಾಂಧಿನ ಕೊಂಡ ಕೊಲೆ ಪತಕನಿಗೆ ಬೆಂಬಲ ಕೊಡೋ ಜನಕ್ಕೂ ಪ್ರೀತಿ ತೊರ್ಸೊ ಜನ ನೋಡಿ ಸ್ವಾಮಿ... ದೇವರು ಧರ್ಮದ ಪರ ಯಾರ್ ನಿಂತು ಇದೆ ಪ್ರೀತಿ ತೋರಿಸ್ತಿರಾ ಅಲ್ವಾ.. ಕೊಲೆ ಪತಕ ಇರ್‍ಲಿ, ಅತ್ಯಾಚಾರಿ ಇರ್‍ಲಿ. ಒಟ್ಟಿನಲ್ಲಿ ಧರ್ಮ ಉಲ್ಸೋ ಬೆಳ್ಸೋ ಲೇಬಲ್ ಅಂತೂ ಹಾಕಿರ್ಬೇಕು.

ಸಂ= ನನಗಂತೂ ಅರ್ಥ ಆಗ್ಲಿಲ್ಲ
ಸ್ರ ಪೂ=ಅರ್ಥ ಆಗತ್ತೆ ಬಿಡಿ.. ಬೇರೆ ಅವರ ಕಾಲ್ ಎಳಿಯೊದು, ಇನ್ನೊಬ್ಬರ ಹೆಂಡತಿನ ಹೀಯಾಳಿಸೋದು ಬಿಡಿ ಅರ್ತ ಆಗುತ್ತೆ

ಸಂ=ಸರ್ ನಾನು ಸಂದರ್ಶಕ
ಸ್ರ ಪೂ= ಓ ಸಾರಿ, ನಾನೆಲ್ಲೋ ವಿಸ್ಮಯ ನಾಗರದ ಓದುಗರು ಅನ್ಕೊಂಡೇ

ಸಂ=ಊರೆಲ್ಲಾ ಒಂದು ದಾರಿ ಆದ್ರೆ ಎಡವಟ್ಟನಿಗೇ ಒಂದು ದಾರಿ ಅಂತಾರೆ.
ನಾನು ಹಿಡಿದ ಮೊಲಕ್ಕೆ ಮೂರೇ ಕಾಲು ಅಂತ ವಾದ ಮಾಡುವವರಿಗೆ ಏನು ಹೇಳ್ತೀರಾ?

ಸ್ರ ಪೂ= ನಿಜಾವಾದ ಭಾರ್ತೀ ಅಂದರೆ ಅವ್ರೇ. ಮೊಲಕ್ಕೆ ನಿಜವಾಗ್ಲೂ ಮೂರೇ ಕಾಲು ಇರೋದು. ನಾಲ್ಕು ಕಾಲು ಇದ್ದಾರೆ ಅದು ಬ್ರಾಹ್ಮಣರ ಮೋಲ. ಬೇರೆ ಜಾತಿ ಮೊಲದಿಂದ ಇನ್ನೊಂದು ಕಾಲು ಕಿತ್ಕೊಂಡಿರಬೇಕು. ಒಪ್ಟೀರಾ?

ಸಂ= ಇತ್ತೀಚೆಗೆ ಎಲ್ಲಾರೂ ನಿಮಗೆ ಉಗಿಯೋರೆ ಜಾಸ್ತಿ ಆಗಿದಾರೆ. ನಿಮಗೆ ಬೆಂಬಲಿಸೋರು ಯಾರೂ ಇಲ್ಲ ಇದರ ಬಗ್ಗೆ ಏನು ಹೇಳ್ತೀರಿ?
ಸ್ರ ಪೂ= ನಿಜ ಸ್ವಾಮೀ. ಮೂರೂ ಬಿಟ್ಟೋರು ಊರಿಗೇ ದೊಡ್ಡ್ಡ ಓರು ಅಂತ ಕೇಳಿದ್ರಾ
ದೊಡ್ದವರಾಗಬೇಕೆಂದಾರೆ ಇದೆಲ್ಲಾ ಸಹಜ

ಸಂ= ಜನ ಯಾಕೆ ನಿಮ್ಮ ಕನ್ನಡ ಲಿಪಿ ಬಗ್ಗೆ ಮಾತಾಡ್ತಾರೆ ?
ಸ್ರ ಪೂ=ಯಾಕಂದ್ರೆ ಅವರಿಗೆ ವಿಷ್ಯ ಮುಖ್ಯ ಆಗಿತ್ತು ನಿಮ್ಗೆ ನನ್ನ ವಿರೋದ್ಜಿಸೊಕೆ ಸಿಕ್ಕಿದ್ದು ನನ್ನ ವ್ಯಾಕರಣ ಈಗ ಅದನ್ನು ನಿಮ್ಗೊಸ್ಕರ ನನ್ನ ಸೋಂಬೇರಿತನನ ಬಿಟ್ಟು ತಿದ್ಕೊನ್ಡಿದಿನಿ.

ಸಂ= ತಿದ್ದಿ ಕೊಂಡಿದ್ದರೂ ಇಷ್ಟೋಂದು ತಪ್ಪಗಳು ಹೇಗೆ ಬಂತೂ ಪೂಡಾ ಸರ್ ?
ಸ್ರ ಪೂ= ಮೊಸರಲ್ಲಿ ಕಲ್ಲು ಹುಡ್ಕೊದು ಆನೋದು ಇದೆ.. ಅದು ಟೈಪಿಂಗ್ ತೊಂದ್ರೆ ಸ್ವಾಮಿ. ನಿಮ್ಗೆ ಅರ್ಥ ಆಗ್ಬೋದು ಅನ್ಕೊನ್ಡು ಸುಮ್ನಾದೆ..

ಸಂ= ಸಾರಿ, ಪೂಡಾರವರೇ.. ಅಂದ್ರೆ ನಿಮ್ಮ ಮಾತು ಅಂದ್ರೆ ಮೊಸರಿದ್ದ ಹಾಗೆ ಅಲ್ವೇ ?
ಸ್ರ ಪೂ=ನನ್ನ ಅಭಿಪ್ರಾಯಗಳೆಂದರೆ ಗಟ್ಟಿಯಾದ ಕೋಣದ ಹಾಲಿನಿಂದ ತೆಗೆದ ಹುಳಿ ಹುಳಿ ಮೊಸರಿದ್ದ ಹಾಗೆ, ಅದಕ್ಕೆ ನಮಗೆಲ್ಲಾ ಇತ್ತೀಚೆಗೆ ಮೊಸರಿನಂತಹ ಸ್ರವೀಣ್ ರವರ ಮಾತುಗಳನ್ನು ಕಂಡರೆ ವಾಕರಿಕೆ ಬರುತ್ತಿದೆ
ಅಂತ ವಿಸ್ಮಯನಗರ ದ ಓದುಗರೋಬಾರು ಹೇಲಿದಾರೆ

ಸಂ= ಸರಿ. ಯಾವ್ದಾದ್ರೂ ವಿಷಯದ ಬಗ್ಗೆ ಮಾತಾನಾಡುವಾಗ ಅದರೆ ಬಗ್ಗೆ ತಿಳುವಳಿಕೆ ಇಲ್ಲದೆ ಮಾತನಾಡುವುದು ತಪ್ಪಲ್ವೇ?
ಸ್ರ ಪೂ= ಆತರ ಇದ್ದಿದ್ರೆ ಇದುವರೆಗೂ ನಾನು ಬಾಯಿ ಮುಚ್ ಕೊಂದು ಕೂತಿರ್ ಬೇಕಾಕ್ತಾ ಇತ್ತು.ಇಂಗ್ಲೀಶ್ ಅಲ್ಲಿ ಹೆಳೊದಾದ್ರೆ ಈ ವಾದದಲ್ಲಿ ನಿಮ್ಮ ವಿವೇಚನೆ ನಿಮ್ಮ ಕೈಲಿ ಇರಲಿ..

ಸಂ= ಆದರೆ ಇದು ಇಂಗ್ಲೀಷ್ ಅಲ್ವಲ್ಲಾ?
ಸ್ರ ಪೂ=ಇಂಗ್ಲೀಶ್ ಅಲ್ಲಿ ಹೇಳೋದಾದ್ರೆ ಅನ್ನೋದು ಹೇಳಿರ್ಲಿಲ್ಲ.. be carefull

ಸಂ= ಮತ್ತೆ ತುಂಬಾ ಜನ ನಿಮಗೆ ಗೂಬೆ, ಆಷಾಢಭೂತಿ, ಡೋಂಗಿ ಜಾತ್ಯಾತೀತವಾದಿ ಅಂತ ಕರೀತಾರಲ್ಲ?
ಸ್ರ ಪೂ= ಕರೀಲಿ ಬಿಡೀ ಸ್ವಾಮಿ, ನಿಜಾನೇ ಅಲ್ವೇ ಅದೂ

ಸಂ= ತುಂಬಾ ತಲೆ ನೋಯುತ್ತಾ ಇದೆ. ಕೊನೆಯ ಪ್ರಶ್ನೆ
ವೇದಗಳ ಬಗ್ಗೆ ನೀವೇನು ಹೇಳ್ತೀರಿ
ಸ್ರ ಪೂ= ಬೇರೆವರ ಮಾತುಗಳು ತಲೆನೋವು ತರ್ಸಿಲ್ಲ, ಬೇರೆ ಅವರ ಹೆಂಡತಿನ ಹೀಯಾಳಿಸಿದ್ದ್ ತಲೆನೋವು ತರ್ಸಿಲ್ಲ. ಆದ್ರೆ ನನ್ ಸ್ಪೆಲಿಂಗ್ ಮಿಸ್ಟೇಕ್ ತರುಸ್ಟು ನೊಡಿ.. ನನ್ಗೆ ನಿಮ್ ತಲೆನೋವು ಅರ್ಥ ಆಗತ್ತೆ ಬಿಡಿ..
ಯಾವ್ದಾದ್ರೂ ವಿಷಯದ ಬಗ್ಗೆ ಮಾತಾನಾಡುವಾಗ ಅದರೆ ಬಗ್ಗೆ ತಿಳುವಳಿಕೆ ಇಲ್ಲದೆ ಮಾತಾಡ್ಬೋದು ಅಂತ ಮದ್ಲೆ ಹೇಳೀದೆನೆ.
ಈಗ ವೇದಗಳ ಬಗ್ಗೆ ಹೇಳ್ತೀನಿ ಕೇಳಿ
ಇಯಾದನ್ನ ಯಾವ ಶಾಸ್ತ್ರದಲ್ಲೂ ಹೇಳಿಲ್ಲ ಹೇಳಿದ್ರು ಅದನ್ನ ನಂಬೊ ಅಗತ್ಯ ಇಲ್ಲ.. ವಿದ್ಯೆ ಎಲ್ಲರ ಸ್ವತ್ತು ಇಡೀ ಮನುಕುಲದ ಅಗತ್ಯ. ಆದ್ರೆ ಈ ವೇಧಾ ಅನ್ನೋದು ಕಲಿಕೆಯಲ್ಲಿ ಅಂತ ಅತ್ಯಗತ್ಯ ಅಲ್ಲ ಅನ್ನೋದು ಎಷ್ಟೋ ಕಡೆ ನಿರ್ವಿವಾದ. ನೀವ್ ಸುಮ್ನೇ ಇಲ್ಲಿ ಮತ್ತೆ ವೇಧಗಳ ಅಗತ್ಯಾನ ಪ್ರಶ್ನಿಸಿದ್ರೆ ಮತ್ತೆ ವೇಧಾಜ್ಞಾನ ಪ್ರಿಯರು ನಿಮ್ಮ ದಾರಿ ತಪ್ಪಿಸೋ ಪ್ರಯತ್ನ ನೆಡಿಬೊದು

ಸಂ=??????????????????????????
ಸ್ರ ಪೂ=ಸರಿ, ಸಂದರ್ಸಕ್ರೆ ಈ ತರ ಮೂರ್ಚೆ ಹೋದ್ರೆ ಹ್ಯಾಗೆ ಸ್ವಾಮೀ?
ನನ್ನ ಸಂದರ್ಷನ ಇಲ್ಲ್ ಗೇ ನೀಲ್ ಸ್ತೀನಿ. ಒಪ್ಟೀರಾ ?
ನಮಸ್ಕ್ ಆರ

ಲೇಖಕರು

ಬಾಲ ಚಂದ್ರ

ಹೊಳೆ ದಂಡೆ

ನನ್ನ ಲೇಖನಗಳನ್ನು ಓದಿ
ನನ್ನ ಬಗ್ಗೆ ನಿಮಗೇ ತಿಳಿಯುತ್ತೆ.

ಅನಿಸಿಕೆಗಳು

Ullas Hindustani ಗುರು, 11/19/2009 - 16:51

ಹ್ಹ್ಹ...ಹ್ಹ್....ಹ್ಹ್....ಹ್ಹ್...ಹ್ಹಾ.... ಬಾಲುರವರೆ ನಿಜಕ್ಕೂ ಅಡ್ಬುಥಾ ಸಂಡರ್ಷಣ.. ಣಣಗಂತು ನಕ್ಕು ನಕ್ಕು ಶಾಕಾಯ್ಥು..

ಸತೀಶ ಎಮ್.ಬಿ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 11/19/2009 - 17:19

ಅಧ್ಬುತ ಸಂದರ್ಶನ!... ನಿಜಕ್ಕೂ ಸ್ರವೀಣ ಪೂಡಾ ರವರ ಮನಸ್ಥಿತಿಯನ್ನು ಬಿಂಬಿಸುವಂತಿದೆ. ಅಭಿನಂದನೆಗಳು.

ಸತ್ಯ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 11/19/2009 - 17:44

ಬಾಲಚಂದ್ರ ಅವರೆ..... ತುಂಬಾ ಚೆನ್ನಾಗಿ ಸಂದರ್ಶನ ಮೂಡಿ ಬಂದಿದೆ.... 8) :dance:

ಬಾಲ ಚಂದ್ರ ಗುರು, 11/19/2009 - 17:47

ಸತೀಶ್, ಉಲ್ಲಾಸ್ ಹಾಗೂ ಸತ್ಯ ಅವರೆ
ಧನ್ಯವಾದಗಳು

ಸಸ್ನೇಹ
ಬಾಲ ಚಂದ್ರ

ಕಿಟ್ಟಿ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 11/19/2009 - 17:51

ಹಾಯ ಬಾಲಚಂದ್ರರವರೆ,
"ಸ್ರವೀಣ ಪೂಡಾ" ಅವರ ಜನ್ಮ ಜಾಲಾಡಿ ಬಿಟ್ಟಿದೆ ಈ ಲೇಖನ... ಆದರೆ ಇದು ಯಾರನ್ನು ಬೊಟ್ಟು ಮಾಡುತ್ತಿದೆ ಎಂದು ನಿಮಗೂ ತಿಳಿದಿದೆ, ನಮಗೂ ತಿಳಿದಿದೆ...! ಹಿಂದೆ "ಗಂಧ", "ಬೆಣ್ಣೆ ಗೋವಿಂದು" ಮುಂತಾದವರು ಸಹ ಇದೇ ರೀತಿ ಇತರರ ಬರಹಗಳ ಮೇಲೆ ಅಭಿಪ್ರಾಯ ಬರೆಯುತ್ತಿದ್ದರು. (ಸಧ್ಯಕ್ಕೆ ಅವರ ಮೇಲೆ Article ಬರಲಿಲ್ಲ ಪುಣ್ಯ...!). ವಿಸ್ಮಯ ನಗರಿ ಎಲ್ಲರ ತಾಣ... ನನ್ನ ಅಭಿಪ್ರಾಯದಂತೆ ಇತರರ ಮೇಲೆ ತೆಗಳಿ ಬರೆಯುವುದು ಬೇಡ ಪ್ಲೀಸ್ . ತುಂಬ ಕಮೆಂಟ್ಸ್ ಮಾಡಿದರೆ ಮುಂದೆ ಅವರೇ ತಾವಾಗಿಯೇ ತೊಂದರೆಗೆ ಸಿಕ್ಕಿಹಾಕಿಕೊಳ್ಳುತ್ತಾರೆ ಬಿಡಿ... :)

ಬಾಲ ಚಂದ್ರ ಗುರು, 11/19/2009 - 18:01

ಪ್ರೀತಿಯ ಕಿಟ್ಟಿ,
ಖಂಡಿತಾ ಇದು ತೆಗಳುವ ಉದ್ದೇಶದಿಂದ ಬರೆದಿದ್ದಲ್ಲ. ಅವರ ವಿಚಾರಸರಣಿಯನ್ನು ಹಾಸ್ಯಾಸ್ಪದ ದೃಷ್ಟಿ ಕೋನದಿಂದ ನೋಡಿರುವ ಲೇಖನ ಅಷ್ಟೇ.
ಧನ್ಯವಾದಗಳು

ಸಸ್ನೇಹ
ಬಾಲ ಚಂದ್ರ

ಉಮಾಶಂಕರ ಬಿ.ಎಸ್ ಗುರು, 11/19/2009 - 20:36

ಪ್ರೀತಿಯ ಬಾಲು,
ಹಾಸ್ಯದ ದೃಷ್ಟಿಯಿಂದ ನೋಡಿದರೆ ಹೌದು ನಿಮ್ಮ ಲೇಖನ ಚೆನ್ನಾಗಿದೆ, ನೀವು ತುಂಬಾ ಒಳ್ಳೆಯ ಬರಹ ಗಾರರು
ಪ್ಲೀಸ್ ನಮ್ಮಗಳ ಚರ್ಚೆ ಆರೋಗ್ಯಕರವಾಗಿರಲಿ, ಹೌದು ಕೆಲವರು ಅತಿಯಾಗಿ ವರ್ತಿಸುತ್ತಿದ್ದಾರೆ ಅನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅವರಂತೆ ನಾವು ವರ್ತಿಸಲು ಪ್ರಯತ್ನಿಸಿದರೆ ಅವರಿಗೂ ನಮಗೂ ಏನೂ ವ್ಯತ್ಯಾಸವಿಲ್ಲ ಅಲ್ಲವೆ?

ಬಾಲ ಚಂದ್ರ ಶುಕ್ರ, 11/20/2009 - 09:41

ಪ್ರೀತಿಯ ಉಮಾಶಂಕರ್,
ಧನ್ಯವಾದಗಳು
ಅತಿಯಾಗಿ ವರ್ತಿಸುವವರಿಗೆ ಇದು ಸಣ್ಣ ಸೂಜಿ ಮದ್ದಿನ ಔಷಧಿ ಅಷ್ಟೇ ಇದು. ಖಂಡಿತಾ ನಾನು ಅವರಂತೆ ವರ್ತಿಸುತ್ತಿಲ್ಲ

ಸಸ್ನೇಹ
ಬಾಲ ಚಂದ್ರ

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 11/19/2009 - 21:04

ಹಹ್ಹಹ್ಹ....ಸಖ್ಖತ್ತಾಗಿದೆ! ತುಂಬ timely ಯಾಗಿದೆ. ಆದ್ರೂ ಇದರಲ್ಲಿ spelling mistakes ಅಷ್ಟಾಗಿ ಇಲ್ಲ ನೋಡಿ !

praveen sooda ಗುರು, 11/19/2009 - 21:46

ಯಾರನ್ನ ನಿಸ್ವಾರ್ಥ ಜಾತ್ಯತೀತ ಅಂತ ಒಪ್ಪಿದೀರಾ ಹೇಳಿ.. ಗಾಂಧಿನೆ ಹೀಯಾಳಿಸೋ ಜನ ನೀವು ನನ್ನ ಹೀಯಾಳಿಸಿದರಲ್ಲಿ ಆಶ್ಚರ್ಯ ಇಲ್ಲ ಬಿಡಿ. ಧರ್ಮಾಂದರೆಲ್ಲ ಹೀಗೆ ಅನ್ಸತ್ತೆ. ನಿಮ್ಮ ಕಲೆ ಸ್ವಲ್ಪ ಒಳ್ಳೇ ಕೆಲಸಕ್ಕೆ ಬಂದಿದ್ರೆ ಉಪಯೋಗ ಆಗ್ತಾ ಇತ್ತು ಅನ್ಸತ್ತೆ.. ಇದು ನಿಮ್ ಪ್ರಕಾರ ಒಳ್ಳೇ ಕೆಲ್ಸಾನೆ.. ಬಾಲಚಂದ್ರ ಅವ್ರೆ ಧನ್ಯವಾದಗಳು.. ನಿಮ್ಮ ಅಭಿಪ್ರಾಯದ ಬಗ್ಗೆ ನಿಮ್ಮ ಒಲವು ನಾಳೆ ಇನ್ನೂ ಯಾರ್ ಯಾರ್ ನ ಹೀಯಾಳಿಸೋ ಮಟ್ಟಕ್ಕೆ ಇಳಿಯತ್ತೋ ಗೊತ್ತಿಲ್ಲ.. ಆದ್ರೆ ಇಲ್ಲಿ ನನ್ನ ಜನ್ಮ ಜಲೋದೋ ಅಂಥದ್ದು ಏನು ಇಲ್ಲ.. ಯಾವ್ದೋ ೨೦ ಶತಮಾನದ ಹಿಂದಿನ ವೇದ ಪುರಾಣ ನಂಬಿರೋ ಜನಕ್ಕೆ ಹೀಗೆಲ್ಲ ಬಾರಿಯೋ ಅಭ್ಯಾಸ ಹೊಸದಲ್ಲ ಬಿಡಿ. ಇಂಥ ವೇದ ಜ್ಞಾನ ನಿಮ್ಗೆಲ್ಲ ಇರೋದು ನೋಡಿ ನನ್ನ ವೇದ ದ್ವೇಷದ ಬಗೆ ಹೆಮ್ಮೆಬಂತು.. ಧನ್ಯವಾದಗಳು ಎಲ್ಲ ಧರ್ಮ ಪ್ರಿಯ ಹಾಗೂ ವೇದಾಜ್ನಾನಿಗಳಿಗೆ..

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 11/20/2009 - 10:24

ಸೂಡಾ.... ಬಾಲು ಸಮಾ ಇಕ್ಬಿಟ್ನಲ್ಲೋ ಮಗಾ.. ಚಿಂತಿಲ್ಲ ಬಿಡು. ಯಾರೇನೆ ಯೋಳಿದ್ರೂ ನಿನ್ಗ್ಯಾವನ್ಲಾ ಸಾಟಿ.
ಮದಕರಿ ನಾಯ್ಕ ಅಲ್ಲಲ್ಲ ದೊಣ್ಣೆ ನಾಯ್ಕ ಅನ್ಸ್ಕಬೇಕು ಅಂದ್ಕಾ ಇವೆಲ್ಲಾ ಕಾಮನ್ನು. ಯಾರಾರ್ದ್ರೂ ಕ್ಯಾಕ್ರ್ಸಿ ತುಪ್ಪಿದ್ರು ಅಂದ್ಕ,.... ವರೆಸ್ಕಬೇಕು... ನಡೀತಿರ್ಬೇಕು....... ನಿಂದು ನಡೀತಿರ್ಲಿ. ಮತ್ತೆ ನೀ ಯೋಳಿದ್ದು ಸರಿ ಮಗಾ. ಯೀ ಬ್ರಾಮಿನ್ಸು ಲೋಕಾನೆಲ್ಲ ಆಳ್ಮಾಡಿಟ್ಟವ್ರೆ. ಆದ್ರೆ ಇವ್ರುರತ್ರಾ ಕ್ಯಾತೆ ಅಂತ ತ್ಯಗೀಬೇಕೂ ಅಂದಿದ್ರೆ ಸರಿಯಾಗಿ ಕನ್ನಡ ಬರೆಯಕ್ಕೆ ಬರ್ಬೇಕು ಮಗಾ. ಈಗೆ ಅದೇನೋ ವಯುಸ್ಕರ ಶಿಕ್ಷಣನೋ ನಲಿ ಕಲಿ ಅಂತನೋ ಯೇನೋ ವಂದೈತೆ ನೋಡು ಮಗ. ಸೇರ್ಕಂಡು ಕಲಿ. "ಏಳು" ಅನ್ನೋದನ್ನ "ಹೇಲು" ಅಂತ ಟೈಪು ಹಾಕಿ ಈ ಅವಸ್ಥೆ ಬಂದೈತೆ ನಿಂಗೆ. ಅದ್ನ ಯಟ್ಲೀಸ್ಟು ಸರಿಮಾಡ್ಕಂಡು ಯೀ ಬ್ರಾಮಿನ್ಸು ಮಾಡಿಟ್ಟಿರೋ ನರಕುದಾಗೆ ಫೈಟಿಂಗು ಮುಂದುವರೆಸು ಮಗಾ.... ನಿನ್ ಜತೀಗೆ ಮದಕರಿ ನಾಯ್ಕ ಅವ್ನೆ.

ಬಾಲ ಚಂದ್ರ ಶುಕ್ರ, 11/20/2009 - 09:45

ಸ್ರವೀಣ್ ಪೂಡಾರವರೇ,
ಕ್ಷಮಿಸಿ ಪ್ರವೀಣ್ ಸೂಡಾರವರೇ,
ನೀವು ಎಷ್ಟು ಮಾತ್ರದ ನಿಸ್ವಾರ್ಥ ಜಾತ್ಯಾತೀತ ಎಂಬುದು ವಿಸ್ಮಯ ನಗರಿಯ ಸುಮಾರು ಓದುಗರಿಗೆಲ್ಲಾ ಗೊತ್ತು. ದಯವಿಟ್ಟು ಅಂತಹ ಶಬ್ದವನ್ನು ತಮಗೆ ತಾವೇ ಆರೋಪಿಸಿಕೊಳ್ಳ ಬೇಡಿ.ಇಷ್ಟಕ್ಕೂ ನಿಮಗೆ ಈ ಲೇಖನದಲ್ಲಿ ಧರ್ಮಾಂದತೆ ಕಾಣಿಸಿದ್ದರಲ್ಲಿ ಆಶ್ಚರ್ಯವೇನು ಇಲ್ಲ. ಯಾಕೆಂದರೆ ಜೋಕು ನೋಡಿ ಜಾತಿ ಕಂಡು ಹಿಡಿಯುವ ಜನ ನೀವು.
ಇನ್ನು ವೇದಗಳ ಬಗ್ಗೆ ನಾನೇನೂ ಹೇಳುವುದಿಲ್ಲ
ಯಾಕೆಂದರೆ ಅದು ಇನ್ನೊಂದು ಅಂಕಣದಲ್ಲಿ ಚರ್ಚೆಗೊಳಗಾಗಿ ನಿಮಗೆ ಮುಖಭಂಗವಾಗಿರುತ್ತದೆಂದು ನಂಬಿದ್ದೇನೆ.

ಬಾಲ ಚಂದ್ರ

ಬಾಲ ಚಂದ್ರ ಶುಕ್ರ, 11/20/2009 - 09:56

ಆತ್ಮೀಯರಾದ ರಾಜೇಶ್ ಹೆಗಡೆ, ಹಾಗೂ ಇತರ ಓದುಗ ಮಿತ್ರರೇ, ಕೆಲವು ವಿಷಯಗಳನ್ನು ನಾನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ
1) ನನ್ನ ಈ ಲೇಖನವು ಎಲ್ಲೂ ಅಸಭ್ಯತೆಯಿಂದ ಅಶ್ಲೀಲತೆಯಿಂದ ಕೂಡಿಲ್ಲ
2) ಈ ಲೇಖನದ ಧಾಟಿ ಹಾಸ್ಯದ ಸ್ವರೂಪದಲ್ಲಿದ್ದರೂ, ಎಲ್ಲೂ ಅಪಹಾಸ್ಯದ ಸೋಂಕಿಲ್ಲ
3) ಇದು ಕೇವಲ ಕಾಲ್ಪನಿಕವಾಗಿದ್ದರೂ, ಇದರಲ್ಲಿ ಸಂದರ್ಶಕರ ಪ್ರಶ್ನೆ ಹಾಗೂ ಕೆಲವು ಸಾಲುಗಳನ್ನು ಹೊರತು ಪಡಿಸಿ ಮಿಕ್ಕ ಸುಮಾರು 80% ಬರಹವನ್ನು
ವಿಸ್ಮಯ ನಗರದ ಪ್ರತಿಕ್ರಿಯ ಶೂರರೊಬ್ಬರ ಲೇಖನಗಳಿಂದ cut & paste ಮಾಡಲಾಗಿದೆ
4) ಒಬ್ಬನೇ ವ್ಯಕ್ತಿ ಎಷ್ಟು ಬಾರಿ ಬೇಕಾದರೂ ದೂರು ನೀಡಬಹುದು.

ಉಮಾಶಂಕರ ಬಿ.ಎಸ್ ಶುಕ್ರ, 11/20/2009 - 11:29

ಪ್ರಿಯ ಬಾಲುರವರೆ,
ಈ ಸ್ರವೀಣ್ ಪೂಡಾ ಕ್ಷಮಿಸಿ ಪ್ರವೀಣ್ ಸೂಡಾ ಅವರು ನಮ್ಮ ಮಧ್ಯೆ ಇರುವಂತಹ ಕಾಲೆಳೆಯುವ (ವಿಚಿತ್ರ) ಬುದ್ದಿಜೀವಿಗಳ ಪ್ರತಿನಿದಿಯಷ್ಟೆ. ಅವರು ಬೊಗಳುವುದು ಎಂದಿಗೂ ನಿಲ್ಲುವುದಿಲ್ಲ ಅದರಿಂದ ಕರ್ನಾಟಕವೆಂಬ ದೇವಲೋಕವೇನು ಹಾಳಾಗುವುದಿಲ್ಲ ಅಲ್ಲವೆ? ಅವರಿರುವುದೇ ಬೊಗಳಲು, ನಾವ್ಯಾಕೆ ತಲೆ ಕೆಡಿಸಿಕೊಳ್ಳಬೇಕು.
ಅಂದಹಾಗೆ ಬುದ್ದಿಜೀವಿಗಳಿಗೆ ಹೊಸ ವ್ಯಾಖ್ಯಾನ (Definetion) ವಿದ್ಯೆ ಕಲಿಯುತ್ತಿರುವವ ವಿದ್ಯಾರ್ಥಿ ಅದೇರೀತಿ ಬುದ್ದಿಕಲಿಯುತ್ತಲೇ ಇರುವವ ಬುದ್ದಿಜೀವಿ, ವಿದ್ಯಾರ್ಥಿ ವಿದ್ಯೆ ಕಲಿತು ವಿದ್ಯಾರ್ಥಿ ಜೀವನ ಮುಗಿಸಿ ಫ್ರೌಡನಾಗುತ್ತಾನೆ. ಆದರೆ ಬುದ್ದಿಜೀವಿ ಜೀವಮಾನ ಪೂರ್ತಿ ಬುದ್ದಿಕಲಿಯುತ್ತಲೇ ಇರುತ್ತಾನೆ. ಅವರದು ಅರ್ಧವಿದ್ಯೆ ಗರ್ವಭಂಗ ಎಂದಹಾಗೆ...
ಉಮಾಶಂಕರ

ಶಿವಕುಮಾರ ಕೆ. ಎಸ್. ಶುಕ್ರ, 11/20/2009 - 17:15

ಇಷ್ಟೊಂದು ವಿಸ್ತ್ರತವಾಗಿ, ವಿವರವಾಗಿ ಪೂಡಾರವರ, ಅವರ ವಿಚಾರಧಾರೆಯ, ವಾಕ್ಕುಗಳ ಸಂದರ್ಶನ ಮಾಡಿದ್ದೀರಿ! ನೀವು ಹೇಳಿರುವುದೆಲ್ಲವನ್ನೂ ನಾನು ಒಪ್ಪುತ್ತೇನೆ...

ಬಾಲ ಚಂದ್ರ ಶುಕ್ರ, 11/20/2009 - 17:34

ಧನ್ಯವಾದಗಳು ಶಿವಣ್ಣ

ಸಸ್ನೇಹ
ಬಾಲ ಚಂದ್ರ

ಸಂತೋಶ ಇನಾಮದಾರ್ ಶುಕ್ರ, 11/20/2009 - 21:15

ಸೂಪರ್.. ಆದ್ರೆ ನಮ್ಮ ಪಾರ್ವತಕ್ಕನ ಜೋಕನ್ನ ಇನ್ನೂ ಯಾಕೆ ತೆಗೆದಿದಾರೆ? ಅನ್ಯಾಯ ಮಾರಾಯ್ರೆ.. ಅದ್ರಲ್ಲಿ ನಮ್ಮ ಆ ಶೂರರು (ಸೋಡಾ ಬುಡ್ಡಿ(ಬುದ್ಧಿಯಿಂದ)) ಚಿಂತನಾ ಸರಣಿ ನೋಡಿ ಗಾಬ್ರಿ ಆಗ್ಬಿಟ್ಟಿದ್ದಿವಿ ಎಲ್ಲಾ. ಕಡೆ ವರ್ಗೂ ಅವ್ರು ಸಿಕ್ಖರ ಬಗ್ಗೆ ಮಾತಾಡಲಿಲ್ಲ.. ನಾನೆಲ್ಲೋ ಅವ್ರ ಪರವಾಗಿ ಮಾತಾಡ್ತರೆ ಅನ್ಕೊಂಡಿದ್ದೆ.. ಸೋಡಾರವರು ಕರ್ನಾಟಕಕ್ಕೆ ಮಾತ್ರ ಸೀಮಿತವಾದ (ವಿಚಿತ್ರ)ಬುದ್ಧಿವಾದಿ ಅಲ್ವಾ..

praveen sooda ಶುಕ್ರ, 11/20/2009 - 22:12

ಸಂತೋಶ್ ಅವರೇ ಒಂದು ಕಡೆ ಬೇರೆ ಪಾರ್ವತಮ್ಮನ ಹೀಯಾಳಿಸೋರನ್ನ ಅತಿ ಆತ್ಮೀಯತೆ ಇಂದ ನೊಡ್ತಿರ ಇನ್ನೋದು ಕಡೆ ದೊಡ್ಡ ಧಾರ್ಮಿಕರ ಪರ ಪೇಜ್ ಘಟ್ಟಲೆ ಬರೀತೀರಾ. ನನ್ಗೆ ಅನುಮಾನ ಶುರು ಆಗಿದೆ ಇಷ್ಟ್ ದಿನ ನಾನ್ ನೋಡಿ ಬೆಳೆದ ಧರ್ಮ ಹಿಂದುನ ಅಥವಾ ನೀವ್ ಈಗ ಹೇಳ್ತಾ ಇರೋದು ಹಿಂದೂ ಧರ್ಮನ ಅಂತ.. ನೀವ್ ಹೇಳ್ತಾ ಇರೋದೇ ಆದ್ರೆ ನಾನ್ ಹಿಂದೂ ಅಲ್ಲಪ್ಪಾ. ಆಮೇಲೆ ನಾನ್ ಹಿಂದುತ್ವದ ಹೆಸರಲ್ಲಿ ಹಿಂಸೆ ತಪ್ಪು ಅಂತ ಹೇಳಿದ್ನೆ ಹೊರತು ನಾನು ಮುಸ್ಲಿಮ್ ಪರ ಅಂತ ಹೇಳಿಲ್ಲ. ನಿಮ್ಗೆ ಹೆಗ್‌ಬೇಕು ಹಾಗೆ ನನ್ನ ಮಾತನ್ನ ತಿರುಗಿಸಿದರೆ ಎನ್ ಮಾಡ್ಲಿ. ಆಮೇಲೆ ತುಂಬಾ ಮುಖ್ಯವಾದ ವಿಷ್ಯ ಅಂದ್ರೆ ಬೇರೊಬ್ಬರ ಅಭಿಪ್ರಾಯಾಣ ಸಹಿಸೋಕೆ ಆಗ್ದೇ ಇದ್ರೆ ಹೀಗೆ ವಾದ ಮಾಡೋ ಅಗತ್ಯಾನೆ ಇಲ್ಲ ಅನ್ಸತ್ತೆ.. ನೀವ್ ಏನೋ ನಿಮ್ ಆಲೋಚನೆ ಬರೀತೀರಾ ಅದಕ್ಕೆ ಬೇರೊಬ್ಬ ಸಭಾಷ್ ಅಂತಾರೆ.. ಧನ್ಯವಾದ ಅಂತೀರಾ ಮತ್ತೊಬ್ಬ ಕೀಪ್ ಇಟ್ ಅಪ್ ಅಂತಾರೆ ನೀವ್ ಥ್ಯಾಂಕ್ ಯೂ ವೆರೀ ಮಚ್ ಅಂತೀರಾ. ಮಧ್ಯ ಯಾವಾದಾದ್ರೂ ನಿಮ್ಗೆ ಇಷ್ಟ ಇಲ್ದೇ ಇರೋ ಅಭಿಪ್ರಾಯ ಬಂದ್ರೆ ಇಷ್ಟೂದ್ದ ಸಂದರ್ಶನ ಮಾಡ್ತಿರ. ಅದನ್ನೇ ನಿಮ್ಮ ಗೆಲುವು ಅಂತೀರಾ. ಇದು ವಾದ ಅನ್ಕೊನ್ಡು ನನ್ನ ಅಭಿಪ್ರಾಯ ಹೇಳಿದ್ದೆ. ಆದ್ರೆ ಇದು ಬೆನ್ನು ತಟ್ಟೀಸ್ಕೊಲ್ಲೋ ಚಪಲಕ್ಕೆ ಅಂತ ಈಗ ಗೊತ್ತಾಯ್ತು. ಇನ್ನೂ ಮುಂದು ನಾನ್ ವಾದ ಮಾಡ್ಬೇಕ? ಖಂಡಿತ ಬೇಡ.

Ullas Hindustani ಶುಕ್ರ, 11/20/2009 - 22:29

ಮೊದಲು ಆ ಕೆಲಸಮಾಡಿ. ನೀವ್ ಒಬ್ಬರು ವಾದ ಮಾಡೋದ್ ನಿಲ್ಸಿದ್ರೆ ವಿಸ್ಮಯದಲ್ಲಿ ಹೆಚ್ಚಿನವರ ಟೈಮ್ ಸೇವ್ ಮಾಡಿದ ಪುಣ್ಯ ಸಿಗುತ್ತೆ.

ಎಚ್.ಎಸ್. ಪ್ರಭಾಕರ ಶನಿ, 11/21/2009 - 01:01

ಪ್ರೀತಿಯ ಪ್ರವೀಣ್ ಸೂದ ಅವರೇ ನಮಸ್ಕಾರ. ಮೊದಲಿನಿಂದ ನಿಮ್ಮ ವಾದ ಸರಣಿ ನೋಡುತ್ತಿರುವ ನನಗೆ ಒಂದಂತೂ ಸ್ಪಷ್ಟವಾಗಿದೆ. ನೀವು ಎಡ ಪಂಥೀಯ ಧೋರಣೆ ಹೊಂದಿದವರು ಹಾಗೂ ಬರೀ ಇಂತಹ ಧೋರಣೆಗಳ ಸಂಪನ್ಮೂಲಗಳನ್ನು ಬಳಸಿಕೊಂಡೇ ರೂಪಿತವಾಗಿರುವ `ರೆಡಿ ಮೇಡ್ ಬುದ್ಧಿ ಜೀವಿ' ಎಂಬುದು (ನೀವು ಹಾಗೆ ಬಾಯಿ ಬಿಟ್ಟು ಹೇಳದಿದ್ದರೂ ಸಹ) ತಿಳಿಯುತ್ತದೆ.
ದಯವಿಟ್ಟು ತಾಳ್ಮೆಯಿಂದ ನನ್ನ ಮಾತುಗಳನ್ನು ಒಮ್ಮೆ ಕೇಳಿ: ( ಎಡ ಪಂಥವೇ ಆಗಲಿ; ಬಲ ಪಂಥವೇ ಆಗಲಿ ಎರಡೂ ಒಂದೇ ಕಣ್ರೀ. ಒಂದು ದೇಹದಿಂದ ಎಡಗೈ ಎಂಬ ಕಾರಣಕ್ಕೋ ಅಥವಾ ಬಲಗೈ ಎಂಬ ಕಾರಣಕ್ಕೋ ಅದನ್ನು ತುಂಡರಿಸುವುದು ಹೇಗೆ ಅಸಾಧ್ಯವೋ ಹಾಗೆಯೇ ಇದೂ ಸಹ! ಇಡೀ ವಿಶ್ವ, ಅದರಲ್ಲಿನ ಎಲ್ಲ `ಇಸಂ'ಗಳು, ವಾದ-ಪ್ರತಿವಾದಗಳು, ಪ್ರಕ್ಷಿಪ್ತಗಳು, ಮೂಢ ನಂಬಿಕೆಗಳು, ಸ್ವಯಂ ಧೋರಣೆಗಳು ಇತ್ಯಾದಿಗಳೆಲ್ಲವನ್ನೂ ನಿಜವಾಗಿಯೂ ಅವುಗಳ ಒಳಗೇನಿದೆ ಎಂದು ಒಮ್ಮೆ ಬಗ್ಗಿ ನೋಡಿಯಾದರೂ ಪರಸ್ಪರ ತುಲನೆ ಮಾಡಿ ನಂತರ ಮಾತನಾಡಬೇಕು ಕಣ್ರೀ.
3) ನೀವು ಹೇಳುತ್ತಿರುವ `ಹಿಂದೂ ಧರ್ಮ' ಹಾಗೂ `ಧರ್ಮಾಂಧತೆ', `ಜಾತಿ', ವರ್ಣ ಇತ್ಯಾದಿ ಪದಗಳ ನಿಜವಾದ ಅರ್ಥ ಮೊದಲು ತಿಳಿದುಕೊಳ್ಳಬೇಕು.
ಧರ್ಮ ಎಂದರೆ- `ಆತ್ಮನಃ ಪ್ತತಿಕೂಲಾನಿ; ಪರೇಶಾಂ ನ ಸಮಾಚರೇತ್' ಎಂದು ಅರ್ಥ ಕಣ್ರೀ! ಇದನ್ನೇ ಸರಳ ಕನ್ನಡದಲ್ಲಿ ಹೇಳಬೇಕೆಂದರೆ, ನಿನ್ನ ಆತ್ಮಕ್ಕೆ (ಅಂದರೆ ನಿನಗೆ) ಯಾವುದು ಪ್ತತಿಕೂಲವೋ ಅದನ್ನು ಪರೇಶಾಂ ನ ಸಮಾಚರೇತ್- ಎಂದರೆ `ಮತ್ತೊಬ್ಬರಿಗೆ ಮಾಡಬೇಡ' ಎಂದು ಹೇಳುವುದೇ ಧರ್ಮ. ಉದಾ: ಇನ್ನೊಬ್ಬ ನಿಮ್ಮ ಕತ್ತನ್ನು ಕತ್ತರಿಸುತ್ತಿರುವಾಗ ನೀವು ಬಹಳ ಚೆನ್ನಾಗಿ ಕತ್ತರಿಸುತ್ತೀಯ... ಇನ್ನೊಂದಷ್ಟು ಕತ್ತರಿಸು ಎಂದು ಹೇಳುವಿರಾ!? ಇಲ್ಲವಲ್ಲಾ? ಅಂದರೆ ಅದು ನಿಮಗೆ ಪ್ರತಿಕೂಲ. ಹಾಗಿದ್ದ ಮೇಲೆ ನೀವು ಮತ್ತೊಬ್ಬರ ಕತ್ತು ಕತ್ತರಿಸಬೇಡಿ ಅಷ್ಟೆ ಮುಗಿಯಿತು. ಇದನ್ನು ಯಾವ ಕೃತ್ಯಕ್ಕೆ ಬೇಕಾದರೂ ಹೋಲಿಸಿಕೊಳ್ಳಬಹುದು; ಅಂದರೆ ಧರ್ಮದ ಮೂಲ `ಅನುಕಂಪ'- ಅದನ್ನೇ ಬಸವಣ್ಣನವರು ಸರಳ ವಚನದಲ್ಲಿ `ದಯೆಯೇ ಧರ್ಮದ ಮೂಲವಯ್ಯಾ' ಎಂದು ಬಿಡಿಸಿಕೊಟ್ಟರು. ಬಸವಣ್ಣರನ್ನು ನೀವು ಒಪ್ಪುವುದು ನಿಜವೇ ಆಗಿದ್ದಲ್ಲಿ ಈ ಧರ್ಮವನ್ನೂ ನೀವು ಒಪ್ಪಲೇಬೇಕು!
3) ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನ ಇತ್ಯಾದಿಗಳೆಲ್ಲ ಧರ್ಮಗಳಲ್ಲ ಸೂದ ಅವರೇ. ಅವೆಲ್ಲ ಕೇವಲ ಮತಗಳು ಅಷ್ಟೆ. ಗಮನಿಸಿ ನೋಡಿ; ಹಿಂದೂ ಮತಕ್ಕೆ ಹೊರತುಪಡಿಸಿ ಉಳಿದೆಲ್ಲಕ್ಕೂ ಒಬ್ಬ ಮತಾಚಾರ್ಯರಿದ್ದೇ ಇದ್ದಾರೆ. ಅಂದರೆ ಆ ಮತಾಚಾರ್ಯರ ನಂತರ ಹುಟ್ಟಿದವು ಇವೆಲ್ಲ ಅಷ್ಟೆ. ಹಿಂದೂ ಮತಕ್ಕೆ ಮಾತ್ರ 10 ಸಾವಿರ ವರ್ಷಗಳಷ್ಟು ಹಿಂದಿನ ಸನಾತನ ವೇದಗಳೇ ಮೂಲ (ಆ ಕುರಿತು ಚರ್ಚಿಸಲು ಬೇರೆ ಅಂಕರಣ ಇದೆ. ನಿಮಗೆ ಆಸಕ್ತಿ ಇದ್ದರೆ ಅಲ್ಲಿ ಬಂದು ಕೇಳಿ ಉತ್ತರಿಸುತ್ತೇನೆ) ಧರ್ಮ ಎಂದರೆ ಏನು ಎಂದು ಮೇಲೆ ವಿವರಿಸಿದ್ದೇನೆ. ಭಿಕ್ಷುಕ ಮನೆ ಮುಂದೆ ನಿಂತು ಅಮ್ಮಾ ಧರ್ಮ ಮಾಡಿ ತಾಯಿ ಎನ್ನುತ್ತಾನೆಯೇ ಹೊರತು, ಹಿಂದೂ ಮಾಡಿ, ಕ್ರೈಸ್ತ ಮಾಡಿ, ಮುಸ್ಲಿಂ ಮಾಡಿ ಎನ್ನುವುದಿಲ್ಲ ಅಲ್ಲವೇ?
4) ಹಿಂದುತ್ವದ ಹೆಸರಲ್ಲಿ ಹಿಂಸೆ ತಪ್ಪು ಎಂಬ ನಿಮ್ಮ ವಾದ ಒಪ್ಪತಕ್ಕದ್ದೇ. ಅದನ್ನು ಯಾರೂ ವಿರೋಧಿಸಿಲ್ಲ; ವಿರೋಧಿಸುವುದು ಸಾಧ್ಯವೋ ಇಲ್ಲ; ಸಾಧುವೂ ಅಲ್ಲ ಆಯ್ತೆ?

praveen sooda ಶನಿ, 11/21/2009 - 08:58

ಎಚ್.ಎಸ್. ಪ್ರಭಾಕರ ಸಾರ್ ನಿಮ್ ಮಾತಲ್ಲಿ ಸತ್ಯ ತುಂಬಾ ಇದೆ. ಬಹುಶಃ ನಾನು ರೆಡಿ ಮೆಡ್ ಅನ್ನೋದು ನಿಜ ಇರ್ಬೋದು. ಆದ್ರೆ ನಾನು ದಿನ ನನ್ನ ಸುತ್ತಮುತ್ತ ನೋಡೋ ಆಗು ಹೋಗುಗಳನ್ನ ಗಮಿನಿಸಿದ್ದೇನೆ ಹೊರಟು ಯಾವ್ಡೇ ವೇದಾಜ್ನಾನ ಹೊಂದಿಲ್ಲ ನಿಜ.. ಆದ್ರೆ ನೀವೇ ನೊಡಿ ನಮ್ಮ ಸುತ್ತಮುತ್ತ ಅದೆಷ್ಟೋ ಸಾಧರಿಕರಿದ್ದಾರೆ ಅವರೆಲ್ಲ ವೇದಾಜ್ನಾನಿಗಳಲ್ಲ. ಅದು ಅಲ್ಲದೇ ನಮ್ಮ ಸುತ್ತಮುತ್ತ ಇರೋ ಕೆಲವು ಕೆಟ್ಟ ರಾಜಕಾರಣಿಗಳಿರಬಹುದು ಅಥವಾ ಯಾವ್ಡೇ ಕೆಟ್ಟ ನಡವಲಿಕೆ ಯ ಜನ ಇರ್ಬೋದು ಅವರಲ್ಲಿಎಲ್ಲ ಕೂಡ ವೇದಾಜ್ನಾನಿಗಳಿಲ್ಲ.. ಇದನ್ನೇ ನಾನ್ ಹೇಳಿದ್ದು ವೇದಾಜ್ನಾನ ಆಗ್ಯಾಗತ್ಯ ಅನ್ನೋದನ್ನ ವಿರೋಧಿಸಿದೀನಿ ಅಷ್ಟೇ. ಉದಾಹರಣೆಗೆ ನಾನು ಮಿಡ್ಲ್ ಸ್ಕೂಲ್ ಓದೋವಾಗ ನಂಗೆ ತುಂಬಾ ಒಳ್ಳೇ ಟೀಚರ್ಸ್ ಇದ್ರು ಈಗ್ಲೂ ಕೊಡ ಅವರ್ಯಾರು ನನ್ನ ನೆನಪಿನ್ದ ದೂರಹೋಗಿಲ್ಲ. ಅವ್ರಲ್ಲಿ ಒಬ್ರು ಕ್ರೈಸ್ಟಾರು, ಒಬ್ಬರು ಜೈನರು ಇದ್ರು ಎಲ್ಲ ವಿಧ್ಯಾರ್ಥಿಗಳನ್ನ ಎಷ್ಟು ಪ್ರೀತಿ ಇಂದ ಮಾತಡಿಸ್ತ ಇದ್ರು ಅನ್ನೋದು ನಂಗೆ ನೆನಪಿದೆ. ಅವ್ರಲ್ಲಿ ಯಾರು ವೇದಾಜ್ನಾನಿಗಳನ್ನ. ಆಮೇಲೆ ನಂಗೂ ಹಿಂದೂ ಧರ್ಮದ ಬಗ್ಗೆ ಒಂದು ಗೌರವ ಇದೆ ಅದಕ್ಕೆ ಕಾರಣ ಇದು ಯಾವ್ಡೇ ಒಬ್ಬ ಆಚಾರ್ಯ ಅಥವಾ ಧರ್ಮಪುರುಷ ನಿಂದ ಹುಟ್ಟಿದಲ್ಲ. ಬೇರೆ ಯಾವ್ದೇ ಧರ್ಮಗಳು ಹೀಗೆ ಇಲ್ಲ ಆನ್ಬೋದು. ಆದ್ರೆ ನೀವ್ ಉದಾಹರಿಸಿದ ಬೇರೆ ಎಲ್ಲ ಧರ್ಮಗಳು ಕೂಡ ಬೇರೆ ಯ್ಯಾಯಾವ್ಡೊ ಧರ್ಮದ ವಿರುದ್ಧ ಹುಟ್ಟಿದ ಬಂಡಾಯ ಧರ್ಮ ಅಥವಾ ಮತಗಳು. ಬೌದ್ಧ ಧರ್ಮ ಕೂಡ ಹಿಂದೂ ಧರ್ಮದ ವಿರುದ್ಧ ಬೆಳೆದ ಬಂಡಾಯ ಧರ್ಮ. ಅದು ಅಲ್ಲದೇ ನಮ್ಮ ಧರ್ಮದಲ್ಲಿನ ಹುಳುಕುಗಳನ್ನ ಒಪ್ಪದೇ ಅದರ ಪರ ಮಾತಡೊದು ತಪ್ಪಗತ್ಟೆ ಅಲ್ವಾ? ಹಿಂದುತ್ವದ ಹೆಸರಲ್ಲಿ ಹಿಂಸೆ ತಪ್ಪು ಎಂಬ ನಿಮ್ಮ ವಾದ ಒಪ್ಪತಕ್ಕದ್ದೇ. ಅದನ್ನು ಯಾರೂ ವಿರೋಧಿಸಿಲ್ಲ; ಅಂದಿದ್ರಿ ಒಮ್ಮೆ ಹಿಂದಿನ ವಾದಗಾಗಳನ್ನ ಓದಿ ಎಲ್ಲೋ ಕೆಲವರು ಬಿಟ್ರೆ ಇನ್ ಎಲ್ಲ ಕೂಡ ಆ ಹಿಂಸೇನಾ ಪ್ರತಿಪಾದಿಸೋ ಧೋರಣೆ ಹೊಂದಿದ್ದರೆ. ಅದು ಅಲ್ಲದೇ ನಾನ್ ಎಲ್ಲೂ ಕೂಡ ಅಸಹನೀಯ ವರ್ತನೆಯನ್ನ ತೋರಿಲ್ಲ ನನ್ನ ಅಭಿಪ್ರಾಯಾಣ ಹೇಳ್ತಾ ಬಂದಿದೀನಿ ಅಷ್ಟೇ. ಖಂಡಿತ ನನ್ನ ಅಭಿಪ್ರಾಯಗಳು ತಪ್ಪು ಅನಿಸಿದಾಗ ತಿದ್ದಿಕೊಳ್ಳೋ ಪ್ರಯತ್ನ ಮಾಡ್ತಿನಿ ಹೊರತು ಅವರ ವಾದ ನನ್ಗೆ ಸರಿ ಇಲ್ಲ ಅಂತ ಹೀಯಾಳಿಸಿದ್ದಿಲ್ಲ.. ಹಾಗಿದ್ದರೆ ಅದು ನನ್ನ ತಪ್ಪು ಹಾಗೂ ತಿದ್ದಿಕೊಳ್ಳೋ ಪ್ರಯತ್ನ ಮಾಡೊನ.

ಎಚ್.ಎಸ್. ಪ್ರಭಾಕರ ಶನಿ, 11/21/2009 - 22:08

ಪ್ರವೀಣ್ ಅವರೇ ನಮಸ್ಕಾರ.
1) ವೇದ ಮತ್ತು ವೇದ ಜ್ಞಾನ- ಇವರೆಡೂ ಒಂದೇ ಅರ್ಥ. ಇದು `ವಿದ್' ಎಂಬ ಧಾತುವಿನಿಂದ ರಚಿತವಾದ ಪದ. ವಿದ್ ಎಂದರೆ ಜ್ಞಾನ, ಅದರ ಲಾಭ ಹಾಗೂ ವಿಚಾರಣೆ ಇತ್ಯಾದಿ ಅರ್ಥಗಳನ್ನು ಪಡೆಯುತ್ತಾ ಹೋಗುತ್ತದೆ. ಹೀಗಾಗಿ ವೇದ ಎಂಬುದು ಮನುಕುಲದ ಅರಂಭದಿಂದ ಮನುಕುಲ ವಿನಾಶದವರೆಗೂ ವ್ಯಾಪಿಸಿದೆ. ನೀವು, ನಿಮ್ಮ ಬಾಲ್ಯ ಹಾಗೂ ಈಗಿನ ಸಾಮಾಜಿಕ ವಿದ್ಯಮಾನಗಳು ಎಲ್ಲದರಲ್ಲೂ ಒಂದಲ್ಲ ಒಂದು ರೀತಿ ವೇದ ಇದ್ದೇ ಇದೆ. ಅದು ನೇರವಾಗಿ ನಿಮಗೆ ಕಾಣುತ್ತಿಲ್ಲ. ಏಕೆಂದರೆ ವೇದ ಎಂದರೆ ಏನು ಹಾಗೂ ಅದರಲ್ಲಿ ಏನಿದೆ ಎಂದು ತಿಳಿಯುವ ಪ್ರಯತ್ನವನ್ನೇ ನೀವು ಮಾಡಿಲ್ಲ. ದಯವಿಟ್ಟು ಕುತೂಹಲಕ್ಕಾದರೂ ಒಮ್ಮೆ ಅಭ್ಯಾಸ ಮಾಡಿ ನೋಡಿ; ನಂತರ ನಾನೇ ಬೇಡವೆಂದರೂ ನೀವು ಅದನ್ನು ಬಿಡುವುದಿಲ್ಲ ಗೊತ್ತೆ!?
2) ವೈರುದ್ಯಗಳು, ಅಪಾರ್ಥಗಳು, ವಿಪರೀತಗಳು,, ಹಿಂಸೆಗಳು, ತಪ್ಪುಗಳು, ಬಹು ದೊಡ್ಡ ಪ್ರಮಾದಗಳು, ಬಂಡಾಯಗಳು ಇತ್ಯಾದಿಗಳೆಲ್ಲ ಹಿಂದೂ ಸೇರಿದಂತೆ ಜಗತ್ತಿನ ಎಲ್ಲ ಮತಗಳಲ್ಲೂ ಇರುವುದೇ ಆಗಿದೆ. ಹಾಗೆ ನೋಡಿದರೆ ಇತರ ಮತಗಳೊಂದಿಗೆ ಹೋಲಿಕೆ ಮಾಡಿದಾಗ ಜಾತಿ ಪದ್ಧತಿ ಹೊರತುಪಡಿಸಿದರೆ ಹಿಂದೂ ಮತವೇ ಸಾವಿರ ಪಾಲು ಮೇಲು ಪ್ರವೀಣ್! ಅಲ್ಲದೆ, ವೇದಗಳನ್ನು ಮೂಲವಾಗಿಟ್ಟುಕೊಂಡಿರುವ ಸನಾತನ ಹಿಂದೂ ಮತದಲ್ಲಿನ ಬಹುತೇಕ ತತ್ವಗಳು, ಧೋರಣೆಗಳು, ಸತ್ಯಗಳು ಹಾಗು ವಿಚಾರಗಳನ್ನೇ ಇತರ ಮತಗಳೂ ಸಾರಿವೆ; ಸಾರುತ್ತಿವೆ.
3) ಇನ್ನು ನಮ್ಮ ಹಿಂದೂ ಮತದಲ್ಲಿನ ಹುಳುಕುಗಳ ವಿಚಾರಕ್ಕೆ ಬರೋಣ. ನಮ್ಮ ಬಹುದೊಡ್ಡ ಹುಳುಕು ಜಾತಿ ಪದ್ಧತಿ. ಜಾತಿಯನ್ನು ವೇದಗಳು ಖಂಡಿತ ಹೇಳಿಲ್ಲ ಪ್ರವೀಣ್. ಕರ್ಮಾಧಾರಿತವಾಗಿದ್ದ ವರ್ಣಾಶ್ರಮ ಧರ್ಮ ಎಂಬುದು ಜಾತಿ ಆಧಾರಿತವಾಗಲು ಸಾಮಾಜಿಕ ಪರಿವರ್ತನೆಗಳು ಕಾರಣ ಪ್ರವೀಣ್. ನಾವು ಯಾವುದೇ ವಿಷಯ ವಿಮರ್ಶಿಸುವಾಗ ಆಯಾ ಕಾಲ, ದೇಶ, ಪರಿಸ್ಥಿತಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಜಾತಿ ಪದ್ಧತಿ ಪ್ರಬಲಗೊಳ್ಳಲು ಹಲವು ಕಾರಣಗಳು ಇವೆ:
`ಕರ್ಮಾಧಾರಿತ ವರ್ಣಾಶ್ರಮ ಧರ್ಮವು ಜನ್ಮಾಧಾರಿತ ಜಾತಿ ಪದ್ಧತಿಯಾಗಿ ಅವನತಿಗೊಂಡಿದ್ದರ ಭಾಗವಾಗಿ ಸಂಭವಿಸಿದ ದುರಂತವಿದು. ವರ್ಣಾಶ್ರಮ ಧರ್ಮದ ಪ್ರಕಾರ ಸಂಸ್ಕೃತಿಯ ನಿರ್ಮಾತೃಗಳೆಲ್ಲ (ಅವರು ಜನ್ಮತಃ ಏನೇ ಆಗಿದ್ದರೂ; ಕರ್ಮತಃ) ಬ್ರಾಹ್ಮಣರೇ ಆಗುತ್ತಾರೆ. ಆದರೆ ಕಾಲ ಕ್ರಮೇಣ ಈ ವರ್ಣಾಶ್ರಮ ಧರ್ಮವು ಹೊರಗಿನ ಜನಾಂಗೀಯ ಮತ್ತು ಒಳಗಿನ ತಾತ್ವಿಕ ದಾಳಿಗಳನ್ನು ಎದುರಿಸಲು ಸಾಧ್ಯವಾಗದೆ, ಅವನ್ನು ತನ್ನೊಳಗೆ ಅನುಸಂಧಾನ ಮಾಡಿಕೊಳ್ಳುವ ಸುಲಭ ಮಾರ್ಗವಾಗಿ (ಹುಟ್ಟಿನ ಆಧಾರದ) ಜಾತಿ ಪದ್ಧತಿಯಾಗಿ ಮಾರ್ಪಾಡಾಯಿತು. ಈ ಸಾಮಾಜಿಕ ಪುನಾರಚನೆಯ ಪ್ರಕ್ರಿಯೆಯಲ್ಲಿ ಉದ್ಭವವಾದ `ಹೊಸ ಬ್ರಾಹ್ಮಣರು' ಸಂಸ್ಕೃತಿ ಹಾಗೂ ಸಂಸ್ಕೃತ ಲೋಕವನ್ನು ತಮ್ಮ ವಾರಸುದಾರಿಕೆಯಾಗಿ ಮಾಡಿಕೊಳ್ಳಲು ನಡೆಸಿದ ರಾಜಕೀಯವೇ- ಅದು ಮಡಿ, ಮೈಲಿಗೆಗಳ, ವಿಧಿ ನಿಷೇದಗಳ, ಅಮಾನವೀಯ ಶ್ರೇಣೀಕರಣಗಳ ಲೋಕವಾಗಿ ಪ್ರತಿಬಿಂಬಿತವಾಗಲು ಕಾರಣವಾಯಿತು.
ಸ್ಥೂಲವಾಗಿ ಹೇಳುವುದಾದರೆ, ಗುಣಮಟ್ಟದ (ಅಂದರೆ ಹುಟ್ಟಿನ ಪರಿಗಣನೆಯಿಲ್ಲದ) ಸೃಜನಶೀಲ `ಬ್ರಾಹ್ಮಣರು' ನಿರ್ಮಿಸಿದ ಸಾಮುದಾಯಿಕ ಜ್ಞಾನವನ್ನು ಹುಟ್ಟಿನಿಂದ ಗುಣವಾಗೇ ಪಡೆದ (ಜಡ) ಬ್ರಾಹ್ಮಣರು ತಮ್ಮ ವರ್ಗದ ಹಿತಕ್ಕಾಗಿ, ಮೇಲ್ಮೆಗಾಗಿ, ಅಧಿಕಾರಕ್ಕಾಗಿ ಆಸ್ತಿಯನ್ನಾಗಿ ಸಂಘಟಿಸಿಕೊಂಡ ರಾಜಕಾರಣದ ಫಲವಿದು. ಈ ಸಂಘಟನೆ ಸ್ರ್ಮುತಿ ಪುರಾಣಗಳ ರೂಪದಲ್ಲಿ ನಡೆಯಿತು. ಪುರೋಹಿತಶಾಹಿ ಆರಂಭವಾದದ್ದೇ ಹೀಗೆ!' ಎಂದು ನಮ್ಮ ಸಮಾಜ ವಾದಿಗಳಲ್ಲಿ ಒಬ್ಬರಾದ ಮಾನ್ಯ ಡಿ.ಎಸ್. ನಾಗಭೂಷಣ ಅವರ ಅಭಿಪ್ರಾಯವಾಗಿದೆ. ಇದರಲ್ಲಿ ಸತ್ಯವೂ ಇರಬಹುದು; ಊಹೆಯೂ ಇರಬಹುದು; ಆದರೆ ಒಟ್ಟಾರೆ ಸತ್ಯಕ್ಕೆ ಹತ್ತಿರವಾಗಿರುವಂತೆ ಕಾಣುತ್ತದೆ!! ಹೌದಲ್ಲವೆ?
ಏನಾದರೂ ಆಗಿರಲಿ; ನೀವು ಮೊದಲು ಇದೇ ವಿಸ್ಮಯ ನಗರಿಯಲ್ಲಿ ವೇದಗಳ ಕುರಿತು ನಾನು ಸನ್ಮಾನ್ಯ ಸುಧಾಕರ ಶರ್ಮರನ್ನು ಸಂದರ್ಶಿಸಿ ಬರೆದಿರುವ ಲೇಖನ ಮೊದಲು ಓದಿ. ಒಂದು ವೇಳೆ ಆಸಕ್ತಿ ಹುಟ್ಟಿದ್ದೇ ಆದಲ್ಲಿ ಇದೇ ವಿಸ್ಮಯ ನಗರಿಯಲ್ಲಿ ಹರಿಹರಪುರ ಶ್ರೀಧರ್ ಕಳುಹಿಸಿರುವ ವೇದ ಸುಧೆ ಭಾಗ 1ರಿಂದ10 ರವರೆಗಿನ ಆಡಿಯೋ ಕೇಳಿ ನೋಡಿ. ನಂತರ ಪ್ರತಿಕ್ರಿಯಿಸಿ.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 11/26/2009 - 15:05

ಸೃಜನಶೀಲ `ಬ್ರಾಹ್ಮಣರು' ಅಥವಾ ಬ್ರಾಹ್ಮಣರ ಸೃಜನಶೀಲತೆ ; ಬೇರೆ ಜಾತಿಯವರಿಗೆ ಆಶಾಢದಲ್ಲಿ ಮದುವೆಯಾಗಬಾರದು ಎಂದು ಹೇಳಿ ಛತ್ರಗಳ ರೇಟು ಕಡಿಮೆ ಮಾಡಿಸಿಕೊಂಡು ಅದೇ ಆಶಾಢದಲ್ಲಿ ಸಾಲು ಸಾಲು ಮದುವೆಯಾಗುವದು.

ಕರ್ಮಾಧಾರಿತವಾಗಿದ್ದ ವರ್ಣಾಶ್ರಮ ಧರ್ಮ ಅಂದರೇನು ಸಾರ್? ಇವರದ್ದು ಇಂತಹ ಕರ್ಮ ಅದಕ್ಕಾಗಿ ಇಂತಹ ವರ್ಣ ಅಂತ ನಿರ್ಣಯಿಸುವವ ಯಾವೂರ ದೊಣ್ಣೆನಾಯಕ?

ಇನ್ನು ಬ್ರಾಹ್ಮಣರಲ್ಲಿ ಒಳ್ಳೆಯವರೂ ಇರುತ್ತಾರಾ?

ಅಲ್ಲಾ ಸಾರ್ ನೀವು ಬೊಮ್ಮನ್ನಾ?

praveen sooda ಗುರು, 11/26/2009 - 22:43

ಎಚ್.ಎಸ್. ಪ್ರಭಾಕರ ಸರ್.. ನಾನು ಇತ್ತೀಚೆಗೆ ತುಂಬಾ ಇದರ ಪರ ವಿರೋಧಗಳ ಬಗ್ಗೆ ಲೇಖನಗಳನ್ನು ಸಂಗ್ರಹಿಸಿ ಓದಿದೆ.. ಅದರಲ್ಲಿ ನನ್ನ ನಿರ್ಣಯಗಳಲ್ಲಿ ಮೊದಲನೆಯದು ಇಲ್ಲಿನ ಪ್ರತಿವಾದಿಗಳಿಗೆ ಸಂಬಂಧಿಸಿದ್ದು.. ಇಲ್ಲಿನ ಅನೇಕ ವಾದಿಗಳು ಬ್ರಾಹ್ಮಣ್ಯ ಪ್ರಿಯರು.. ಆದ್ರೆ ಅವರ ಪದ ಬಳಕೆಗಳು ವೇದಾಜ್ನಾನಿಗಳಿಗೆ ತುಂಬಾ ವಿರುದ್ಧವಾಗಿದೆ ಆದರೆ ಅವರೆಲ್ಲ ಅವರ ಮಹಾ ವೇದಾಜ್ನಾನ ಇಷ್ಟು ಕೆಲ ಮಟ್ಟಕ್ಕೆ ಬಳಕೆ ಮಾಡಿದರೆ ಅಂದ್ರೆ ವೇದಾಜ್ನಾನದ ಉಪಯೋಗ ಇಲ್ಲ. ಅವರಿಗೆ ವೇದಗಳ ಬಗ್ಗೆ ಜ್ಞಾನನೆ ಇಲ್ಲ ಅನ್ನೋ ಹಾಗಿಲ್ಲ ಕಾರಣ ಅವರು ವೇದಗಳ ಪರಿಣಿತರು ಅಂತ ದೃಡ ಪಡಿಸಿದರೆ(ಕೆಲವು ಕಾಪೀ ಪೇಸ್ಟ್ ಮೂಲಕ). ಮುಂದಿನದು ಅಂದ್ರೆ.. ನಾನು ಸ್ವತಃ ರಾಮಕೃಷ್ಣ ಪರಮಹಂಸ ಮಿಶನ್ ಅಲ್ಲಿ ಇದ್ದ್ ಒಬ್ಬ ವೃದ್ಧರನ್ನ ಮಾತಡಿಸಿದೆ.. ಅವರು ಹೇಳೋದು ವೇದದಲ್ಲಿ ಎಲ್ಲ ಧರ್ಮದ ಸತ್ವವನ್ನ ಮೀರಿದ ಸತ್ವಃ ಇದೆ ಅಂತ.. ಅದನ್ನ ಒಪ್ಪೊದೆ ಆದ್ರೆ ಬುದ್ಧ ಬೇರೆ ಧರ್ಮ ಕಟ್ಟೋ ಅಗತ್ಯ ಇರ್ಲಿಲಾ.. ಇದರ ಅರ್ಥ ನಮ್ಮ ಧರ್ಮದಲ್ಲಿನ ಕೊರತೆ ಅಂತ ತಾನೇ.. ಅದು ಅಲ್ಲದೇ ನಮ್ಮಲ್ಲಿ ತುಂಬಾ ನ್ಯೂನ್ಯತೆ ಇದೆ ಅದನ್ನ ಒಪ್ಪಿ ಕೂಡ ನಾನ್ ಒಬ್ಬ ಹಿಂದೂ.. ಆದ್ರೆ ಜನ ಸಾಮಾನ್ಯರೆಲ್ಲ ವೇದ ಜ್ಞಾನಿ ಆಗ್ಬೇಕು ಅನ್ನೋ ವಾದ ನಂಗೆ ಒಪ್ಪೋಕೆ ಆಗ್ತಾ ಇಲ್ಲ. ಮೊದಲೇ ಹೇಳಿದ ಹಾಗೆ ನಮ್ಮಲ್ಲಿ ನಾನ್ ಕಂಡ ಹಾಗೆ ತುಂಬಾ ಸುಸಂಸ್ಕೃತರು ಇದರೆ ಅವರ್ಯಾರು ವೇದ ಓದಿದವರಲ್ಲ.. ನಾನ್ ಹೇಳಿದ್ದು ಇಷ್ಟೇ ಜೀವನಾವಶ್ಯಕತೆಗೆ ವೇದ ಅತ್ಯಾವಶ್ಯಕ ಅಲ್ಲ.. ಆದ್ರೆ ಕೆಲವು ವೇದಪ್ರಿಯರು(ಜ್ಞಾನಿ ಅನ್ನೋ ಪದ ಸೂಕ್ತ ಅಲ್ಲ) ಅದನ್ನ ಒಪ್ಪೊ ಧೈರ್ಯ ಮಾಡ್ತ ಇಲ್ಲ. ಅದು ಅಷ್ಟು ಅವಶ್ಯಕ ಅನ್ನೋರು ವೇದಾಜ್ನಾನ ಹೊಂದಿರೋರು ಹೀಗೆಲ್ಲ ನೆಡೊಕೊತಾರೆ ಅಂದ್ರೆ ನಿಮ್ಮ ಅವರ ವೇದ ಬೇರೆ ಬೇರೆ.. ನೀವು ಅವರ ಪರ ವಾದ ಮಾಡ್ತ ಇಲ್ಲ ನೀವು ನಿಮ್ಮ ವೇದಪರ ವಾದ ಮಾಡ್ತ ಇದಿರಾ ಅಂದ್ರೆ ಸರಿ ನಿಮ್ಮ ವಾದ ನಾನು ಒಪ್ತೀನಿ.. ನಿಮ್ಮ ಅಭಿಪ್ರಾಯಗಳಿಗೆ ನನ್ನ ಗೌರವ ಇದೆ. ಖಂಡಿತ ನಾನು ವೇದಗಳ ಬಗ್ಗೆ ತಿರಸ್ಕೃತ ಭಾವನೆ ತೋರಿದ್ದಾರೆ ಕ್ಷಮೆ ಇರಲಿ. ಆದರೆ ಕೆಲ ವೇದ ಪ್ರಿಯರ ನೆಡವಳಿಕೆಗಿನ್ತ ನನ್ನದು ಪರ್ವಾಗಿಲ್ಲ ಅನ್ನೋದು ನೀವು ಹಿಂದಿನ ವಾದಗಳನ್ನ ಒದಿರೊದ್ರಿನ್ಡ ತಿಳಿದಿರಬಹುದು...

ಸತ್ಯ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 11/26/2009 - 17:45

ಲೋ ಅನಾಮಿಕ ಮುಚ್ಕೊಳ್ಳಯ್ಯ ಸಾಕು...ನೀನು ಬರೆದಿರೊದನ್ನ ನೋಡಿದ್ರೆ ಗೊತ್ತಾಗುತ್ತೆ ನಿಂಗೇನು ಗೊತ್ತಿಲ್ಲ ಅಂತ....

manju sringeri (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 11/27/2009 - 11:12

soda glsu vadadu hoytu, adru neenu "nayi bayige" kolu hakokelsa madbardagittu.

ಎಚ್.ಎಸ್. ಪ್ರಭಾಕರ ಶುಕ್ರ, 11/27/2009 - 14:14

ಪ್ರವೀಣ್ ಸೂಡರಿಗೆ ನಮಸ್ಕಾರ. ಶಭಾಷ್ ಪ್ರವೀಣ್! ನನ್ನ ಸಲಹೆ ಸ್ವೀಕರಿಸಿ ವೇದಗಳ ಕುರಿತು ಅಧ್ಯಯನ ಹಾಗೂ ಅಲ್ಲಲ್ಲಿ ವಿಚಾರಣೆ ಆರಂಭಿಸಿದ್ದೀರಿ. ಅದಕ್ಕಾಗಿ ಧನ್ಯವಾದ. ಈಗ ನೀವು ವೇದ ಹೇಳಿದ ಒಂದು ಸತ್ಯವನ್ನೇ ನಿಮಗೇ ಗೊತ್ತಿಲ್ಲದೆ ಪಾಲಿಸುತ್ತೀದ್ದೀರಿ! ಯಾರು ಏನೇ ಹೇಳಲಿ (ವಾಚ್ಯವಾಗಿಯಾದರೂ ಸರಿ; ಅಥವಾ ಗ್ರಂಥ ರೂಪವಾಗಿಯಾದರೂ ಸರಿ) ಏಕ್ ದಂ ಯಾವುದನ್ನೂ ಒಪ್ಪಿಕೊಳ್ಳಬೇಡ; ಅದರ ಪೂರ್ವಾಪರ ವಿಚಾರಣೆ ಮಾಡಿ, ನಂತರ ಅದು ಸತ್ಯ ಎಂದು ಗೋಚರಿಸಿದರೆ ಮಾತ್ರ ಒಪ್ಪಿಕೋ (ವೇದದ ಇನ್ನೊಂದು ಅರ್ಥವೇ ಇದು- (ವಿದ್- ವಿಚಾರಣಾ) ಎಂದೇ ವೇದವು ಹೇಳುತ್ತದೆ. ಈಗಿನ ನಮ್ಮ ವಿಚಾರವಾದವೂ ಸಹ ಇದನ್ನೇ ಅಲ್ಲವೇ ಹೇಳುವುದು?
ಅದರ ಮುಂದುವರೆದ ಭಾಗವೆಂಬಂತೆ ನಿಮಗೆ ಕೆಲವು ಅಗತ್ಯ ಸಲಹೆಗಳನ್ನು ನೀಡಬೇಕಾಗಿದೆ.ವೇದಗಳ ಕುರಿತು ನಿಜವಾಗಿಯೂ ತಿಳಿಯಬೇಕೆಂಬ ಅಪೇಕ್ಷೆ ಇರುವವರು ಈಗಿನ ಪರಿಸ್ಥಿತಿಯಲ್ಲಿ ತುಂಬಾ ತುಂಬಾ ಎಚ್ಚರಿಕೆ ಹಾಗೂ ಮುಂಜಾಗ್ರತೆ ವಹಿಸಬೇಕು ಪ್ರವೀಣ್. ಯಾವುದೋ ಕಲಬೆರಕೆ ವಿಷಯ, ತಪ್ಪು ಕಲ್ಪನೆ, ಅಪಭ್ರಂಶ ಅಥವಾ ವಾದವನ್ನು ಆಧಾರವಾಗಿ ಇಟ್ಟುಕೊಂಡು ಹೊರಟರೆ ಯಥಾಪ್ರಕಾರ ದಾರಿ ತಪ್ಪುವುದು ಖಚಿತ. ಹೀಗಾಗಿ ಈಗ ನಾವು ನಂಬಿರುವ, ಬದುಕು ಸಾಗಿಸುತ್ತಿರುವ ರೀತಿ ನೀತಿಗಳನ್ನೆಲ್ಲ ಸದ್ಯಕ್ಕೆ ಬದಿಗಿಟ್ಟು ಮೊದಲು ಮುಕ್ತ ಮನಸ್ಸು ಹೊಂದಬೇಕು. ಇದನ್ನು ಸರಳವಾಗಿ ನಿದರ್ಶನ ಸಹಿತ ಹೇಳುತ್ತೇನೆ ಕೇಳಿ: ಅತ್ಯಂತ ಬೆಲೆ ಬಾಳುವ ಮುತ್ತೊಂದು ನಾನಾ ಪರಿಸ್ಥಿತಿ ಅಥವಾ ಕಾರಣಗಳಿಗಾಗಿ ಸಮುದ್ರದ ಆಳಕ್ಕೆ ಇಳಿದುಬಿಟ್ಟಿದೆ ಎಂದಿಟ್ಟುಕೊಳ್ಳಿ. ಮುತ್ತುಗಳನ್ನು ಆರಿಸುವವರು (ಜ್ಞಾನ ಅರಸುವವರು) ನೀವಾಗಿದ್ದ ಪಕ್ಷದಲ್ಲಿ ಹೇಗಾದರೂ ಮಾಡಿ ಅದನ್ನು ಆರಿಸಿ ತರಲು ಸಮುದ್ರಕ್ಕೆ ಇಳಿಯುತ್ತೀರಿ. ಸಮುದ್ರ ಹಾಗು ಅದರ ಆಳ ಎಂದರೆ ಹೇಳುವುದೇನಿದೆ? ಒಳಗೆ ಇಳಿದಂತೆಲ್ಲಾ ತಿಮಿಂಗಲಗಳು, ಆಕ್ಟೋಪಸ್ ಗಳು, ಸಹಸ್ರಾರು ಮೀನುಗಳು, ಕೆಲವು ಅಪಾಯಕಾರಿ ಜಲ ಚರಗಳು, ಆಮ್ಲಜನಕದ ಅಭಾವ ಇತ್ಯಾದಿ ನಾನಾ ಪ್ರಾಣಾಂತಿಕ ಸಮಸ್ಯೆಗಳು ಎದುರಾಗುತ್ತವೆ. ಇದನ್ನೆಲ್ಲ ಎದರುರಿಸಲು ನೀವು ಸರ್ವ ಸಿದ್ಧತೆ ಮಾಡಿಕೊಂಡೇ ಆಳಕ್ಕೆ ಇಳಿಯಬೇಕು. ಒಮ್ಮೆ ಆ ಮುತ್ತು ತಂದಿರೋ-ಮುಗಿಯಿತು. ಮತ್ತೆ ನೀವು ಸಣ್ಣ ಪುಟ್ಟು ಮುತ್ತುಗಳತ್ತ ಗಮನ ಹರಿಸುವುದೂ ಇಲ್ಲ; ಸಮುದ್ರಕ್ಕೆ ಇಳಿಯುವ ಅಗತ್ಯವೂ ಬೀಳುವುದಿಲ್ಲ!! ಅಂದರೆ, ಈಗ ಪ್ರಚಲಿತವಿರುವ 18 ಪುರಾಣಗಳು, ಅವುಗಳು ಹೇಳುವ ವಿಕೃತ ವಿಚಾರಗಳು, ಹಲವಾರು ಸ್ಮೈತಿಗಳು, ಶಾಸ್ತ್ರಗಳು, ಪೂಜೆ ಪುನಸ್ಕಾರಗಳು, ಮುಕ್ಕೋಟಿ ದೇವತೆಗಳ ಕಲ್ಪನೆ, ದಶಾವತಾರ ಕಲ್ಪನೆ ಇತ್ಯಾದಿ ಕಲಬೆರಕೆಯ ತಿಮಿಂಗಲಗಳನ್ನೆಲ್ಲ ತಿಪ್ಪೆಗೆ ಒಗಾಯಿಸಿ. (ಅವುಗಳಲ್ಲೂ ಇರಬಹುದಾದ ಕೆಲವೇ ಉತ್ತಮ ವಿಚಾರಗಳನ್ನು ಆಯ್ದುಕೊಳ್ಳುವುದು ಬೇರೆ ಮಾತು ಬಿಡಿ). ನಂತರ ಶುದ್ಧ ಮನಸ್ಸಿನಂದಷ್ಟೇ ಶುದ್ಧ ಜ್ಞಾನ ಹುಡುಕಬೇಕು. ಇದು ತುಂಬಾ ಕಷ್ಟ ಎಂದು ಗೊತ್ತು. ಅಲ್ಲಾ ಪ್ರವೀಣ್, ಕೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಊರೆಲ್ಲಾ ಅಲೆಯುವುದು ಏಕೆ? ನಾನು ನಿಮಗೆ ಮತ್ತೊಂದು ಸಲಹೆ ನೀಡಿದ್ದೆ. ಇದೇ ವಿಸ್ಮಯ ನಗರಿಯಲ್ಲಿ ನಾನು ಬರೆದಿರುವ ಸುಧಾಕರ ಶರ್ಮರ ಸಂದರ್ಶನ ಆಧಾರಿತ ಲೇಖನ ಓದಲು ಹಾಗೂ ಇದೇ ತಾಣದಲ್ಲಿ ಹರಿಹರಪುರ ಶ್ರೀಧರ್ ಕಳುಹಿಸಿರುವ ವೇದ ಸುಧೆ ಆಡಿಯೋಗಳನ್ನು ಸರ್ಚ್ ಮಾಡಿ ತಾಳ್ಮೆಯಿಂದ ಕೇಳಲು ಸೂಚಿಸಿದ್ದೆ. ನೀವು ಹಾಗೆ ಮಾಡಿದ್ದಿದ್ದರೆ ರಾಮಕೃಷ್ಣ ಮಿಷನ್ ವೃದ್ಧರ ಬಳಿ ಹೋಗುವ ಪ್ರಮೇಯವೇ ಬರುತ್ತಿರಲಿಲ್ಲ ಗೊತ್ತೆ!?
ಇನ್ನು ನಿಮ್ಮ ಜಿಗುಪ್ಸೆ ಹಾಗೂ ಶಂಕೆಗಳ ವಿಚಾರಕ್ಕೆ ಬರುತ್ತೇನೆ:
1) ಪ್ರತಿವಾದಿಗಳಿಗೆ ಸಂಬಂಧಿಸಿದಂತೆ:ಜ್ಞಾನ ಅರಸುವವರು ವಾದ ಪ್ರತಿವಾದಗಳಿಗೆ ತಲೆ ಕೆಡಿಸಿಕೊಳ್ಳಬಾರದು. ಮೇಲಾಗಿ ಇಂತಹ ವಾದ ಪ್ರತಿವಾದಗಳಿಂದಲೇ (ಚಿನ್ನವನ್ನು ಎರಕ ಹೊಯ್ದಂತೆ) ಜ್ಞಾನ ಸಂಪಾದನೆ ಆಗುತ್ತದೆ ಎಂಬುದನ್ನು ಮರೆಯಬಾರದು. ಒಂದು ವಿಚಾರ ಚೆನ್ನಾಗಿ ತಿಳಿದುಕೊಳ್ಳಿ. ಸರ್ವೇ ಸಾಮಾನ್ಯ ಈಗ ಜಗತ್ತಿನಲ್ಲಿ ವೇದಗಳು ಹಾಗೂ ಅವುಗಳ ಮಹತ್ವವನ್ನು ಅಲ್ಪ ಪ್ರಮಾಣ ತಿಳಿದುಕೊಂಡಿರುವವರು ಇದ್ದಾರೆಯೇ ಹೊರತು `ಸಂಪೂರ್ಣ ವೇದ ಜ್ಞಾನಿ'ಗಳು ಬೆರಳೆಣಿಕೆಯಷ್ಟು ಮಾತ್ರ ಸಿಗಬಹುದೇನೋ! ಹೀಗಾಗಿ ನೀವು ವೇದ ಜ್ಞಾನಿ ಎಂದು ಯಾರಿಗೂ ಉಲ್ಲೇಖಿಸುವ ಅಗತ್ಯವಿಲ್ಲ. ಪ್ರಸ್ತುತ ಜಗತ್ತಿನ ಆಗು ಹೋಗು, ವಾದ ಪ್ರತಿವಾದ, ಇಸಂಗಳು, ಶಿಕ್ಷಣ ಕ್ರಮ ಇತ್ಯಾದಿ ಯಾವುದನ್ನೂ ನೀವು ವೇದಗಳೊಂದಿಗೆ ಸಮೀಕರಣ ಮಾಡಲು ಹೋಗಬೇಡಿ. ಅದೇ ನೀವು ಮಾಡುತ್ತಿರುವ ದೊಡ್ಡ ತಪ್ಪು. ಪದಗಳ ಬಳಕೆಗೂ, ತಿಳಿವಳಿಕೆಗೂ, ನಡವಳಿಕೆಗೂ ಮತ್ತು ವೇದಗಳಿಗೂ ಯಾವುದೇ ಸಂಬಂಧವಿಲ್ಲ. ಇವೆಲ್ಲಾ ಮನುಷ್ಯ ಸಹಜ ಗುಣ ಸ್ವಭಾವಗಳು ಅಷ್ಟೆ! ಯಾವುದೇ ಮನುಷ್ಯನಲ್ಲೂ ಸಾತ್ವಿಕ, ರಾಜಸ ಹಾಗೂ ತಾಮಸ ಎಂಬ ಮೂರು ಗುಣ ಸ್ವಭಾವಗಳು ಇದ್ದೇ ಇರುತ್ತವೆ. (ಸಾತ್ವಿಕ (ಸತ್ವ ಗುಣ ಪ್ರಧಾನ), ರಾಜಸ (ಕ್ಷತ್ರಿಯ ಗುಣ ಪ್ರಧಾನ) ಮತ್ತು ತಾಮಸ (ಅಜ್ಞಾನ-ಅಂಧಕಾರ). ವೇದಗಳೂ ಇವನ್ನು ತಿಳಿಸಿಕೊಡುತ್ತವೆ. ಯಾವ ವ್ಯಕ್ತಿಯಲ್ಲಿ ಯಾವ ಗುಣ ಪ್ರಧಾನವಾಗಿರುತ್ತದೋ ಆ ವ್ಯಕ್ತಿ ಹಾಗೆ ವರ್ತಿಸುತ್ತಾನೆ. ಇದು ಪ್ರಕೃತಿಯಷ್ಟೇ ಸಜಹ. ಸದ್ಯಕ್ಕೆ ಜಗತ್ತಿನಲ್ಲಿ ಬಹುತೇಕ ರಾಜಸ ಗುಣವೇ ಪ್ರಧಾನವಾಗಿ ಕಾರ್ಯ ನಿರ್ವಹಿಸುತ್ತಿದೆ. ಉದಾ: ಕಳೆದ ಬಾರಿ ನಾನು ನಿಮಗೆ ನೀಡಿದ ಪ್ರತಿಕ್ರಿಯೆಗೆ `ಅನಾಮಿಕ'ರೋರ್ವರು ಮರು ಪ್ರತಿಕ್ರಿಯೆ ನೀಡಿದರು. ಇದನ್ನು ಓದಿದ ಸತ್ಯ ಎಂಬುವರು ಕೂಡಲೇ `ಲೋ ಅನಾಮಿಕ ಮುಚ್ಕೊಳ್ಳಯ್ಯ ಸಾಕು... ನೀನು ಬರೆದಿರೊದನ್ನ ನೋಡಿದ್ರೆ ಗೊತ್ತಾಗುತ್ತೆ ನಿಂಗೇನು ಗೊತ್ತಿಲ್ಲ ಅಂತ..'ಎಂದು ಝಾಡಿಸಿಬಿಟ್ಟರು. ಅಂದರೆ, ಈ ವಿಷಯದಲ್ಲಿ ಆ ಅನಾಮಿಕ ಅಜ್ಞಾನಿ ಆಗಿದ್ದರೂ ಸಹ ತನಗೆ ಎಲ್ಲವೂ ತಿಳಿದಿದೆ ಎಂಬಂತೆ ಪ್ರತಿಕ್ರಿಯಿಸುತ್ತಾನಲ್ಲಾ ಎಂದು ತಿಳಿದ ಕೂಡಲೇ ಅವರಿಗೆ ಸತ್ಯ ಅವರಿಗೆ ಸಿಟ್ಟು ಬಂತು (ರಾಜಸ). ಜಗತ್ತಿನ ಎಲ್ಲರಿಗೂ ಇರುವಂತೆಯೇ ಅದು ಅವರಲ್ಲಿನ ಗುಣ ಸ್ವಭಾವ ಅಷ್ಟೆ. ಹಾಗಾಗಿ ಕೂಡಲೇ ಝಾಡಿಸಿದರು. (ಒಂದಲ್ಲ ಒಂದು ಬಾರಿ ನಾವು-ನೀವು ಹಾಗೂ ಎಲ್ಲರೂ ಹೀಗೆ ಮಾಡುತ್ತೇವೆ ಎಂಬುದನ್ನು ಮರೆಯಬಾರದು) ಒಂದು ವೇಳೆ ಪರಮ ಸಾತ್ವಿಕನೊಬ್ಬ ಈ ಪರಿಸ್ಥಿತಿ ಎದುರಿಸುವಾಗ ಏನು ಹೇಳುತ್ತಿದ್ದ? ನೀವೇ ಊಹಿಸಿ! `ಸನ್ಮಾನ್ಯ ಅನಾಮಿಕರೇ! ತಾವು ಹೀಗೆಲ್ಲಾ ಅಗೌರವವಾಗಿ ಮಾತನಾಡಬಾರದು; ಅದು ನಿಮ್ಮ ಮಾನಸಿಕ ಆರೋಗ್ಯಕ್ಕೇ ಒಳ್ಳೆಯದಲ್ಲಪ್ಪ; ಹೋಗಲಿ ಬಿಡಿ; ಆ ದೇವರು ನಿಮಗೆ ಒಳ್ಳೆಯದು ಮಾಡಲಿ' ಎನ್ನುತ್ತಿದ್ದರು; ಹೌದಲ್ಲವೆ?
ಅದೇ ಪರಿಸ್ಥಿತಿಯನ್ನು ತಾಮಸ ಗುಣ ಪ್ರಧಾನ ಇರುವ ಯಾರಾದರೂ ಎದುರಿಸಿದ್ದರೆ ಏನು ಹೇಳುತ್ತಿದ್ದರು? `ಲೋ ಬೋ....ಮಗನೆ...ನೀ ಯಾರಿಗೆ ಹು... ಧೈರ್ಯವಿದ್ದರೆ ಎದುರಿಗೆ ಬಾರೋ; ನೀನು ಹುಟ್ಟ... ಎನಿಸಿಬಿಡುವೆ. ನಾನು ಯಾವ ಜಾತಿಯವನಾದರೆ ನಿನಗೇನೋ ಸೂ...ಹಾಗಾದರೆ ನೀನೇನು ಹೊ...ಮಾ...ಜಾತಿಯವನೇನೋ...!' ಎಂದೆಲ್ಲ\ ಬಡಬಡಿಸುತ್ತಿದ್ದರಲ್ಲವೆ? (ಅಜ್ಞಾನ- ಅಂಧಕಾರ-ಅರಿಷಡ್ ವರ್ಗ ಪ್ರಧಾನ)!
ಜಗತ್ತಿನ ಎಲ್ಲರೂ ಸಾತ್ವಿಕ ಗುಣ ಬೆಳೆಸಿಕೊಳ್ಳಬೇಕು ಎಂದು ವೇದಗಳು ಹೇಳುತ್ತವೆ. ಇದರಲ್ಲಿ ತಪ್ಪೇನಿದೆ? ಅನುಸರಿಸಿದರೆ ಸಾತ್ವಿಕರಾಗುತ್ತಾರೆ; ಇಲ್ಲವಾದರೆ ರಾಜಸರಾಗುತ್ತಾರೆ; ಅನಗತ್ಯ ದ್ವೇಷ ಬೆಳೆಸಿಕೊಂಡರೆ ತಾಮಸರಾಗುತ್ತಾರೆ; ಅಷ್ಟೆ! ಯಾರು ಏನೇ ಆದರೂ ಅದರ ಲಾಭ ನಷ್ಟಗಳೂ ಅವರವರದ್ದೇ ಅಲ್ಲವೆ?
2) ವೇದದಲ್ಲಿ ಎಲ್ಲ ಧರ್ಮದ ಸತ್ವವನ್ನ ಮೀರಿದ ಸತ್ವಃ ಇದೆ ಅಂತ.. ಅದನ್ನ ಒಪ್ಪೊದೆ ಆದ್ರೆ ಬುದ್ಧ ಬೇರೆ ಧರ್ಮ ಕಟ್ಟೋ ಅಗತ್ಯ ಇರ್ಲಿಲಾ.. ಇದರ ಅರ್ಥ ನಮ್ಮ ಧರ್ಮದಲ್ಲಿನ ಕೊರತೆ ಅಂತ ತಾನೇ..? ಎಂದು ಪ್ರಶ್ನಿಸಿದ್ದೀರಿ. ಮೊದಲನೆಯದಾಗಿ ತಾವು ತಿಳಿಯಬೇಕಾದ್ದು; ಧರ್ಮವನ್ನು ಯಾರೂ ಕಟ್ಟಲು ಸಾಧ್ಯವಿಲ್ಲ. ಕೇವಲ ಅನುಸರಿಸಬೇಕಷ್ಟೆ. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಏಸುಕ್ರಿಸ್ತ, ಪೈಗಂಬರ್ ಇವರು ಯಾರೂ ಸಹ ವೇದಗಳನ್ನು ವಿರೋಧಿಸಲಿಲ್ಲ; ಬದಲಿಗೆ ವೇದಗಳ ಹೆಸರಿನಲ್ಲಿ ಪ್ರಚಲಿತವಿದ್ದ (ಸುಳ್ಳು) ಪುರಾಣ, ಪುಣ್ಯ ಕಥೆಗಳು, ಸೃತಿಗಳಲ್ಲಿನ ಅಪಭ್ರಂಶಗಳನ್ನ ವಿರೋಧಿಸಿದರು. ವೇದಗಳಲ್ಲಿ ಇರುವ ಸತ್ಯ ವಿಚಾರಗಳನ್ನೇ ಸರಳವಾಗಿ ತಮ್ಮ ಜನಕ್ಕೆ ಅವರುಗಳು ಬೋಧಿಸಿದರು. ಅವರ ವಿಚಾರ ಧಾರೆಗಳಿಗೆ ಮನಸೋತು ಅವರ ಹೆಸರಿನಲ್ಲಿ ಅವರ ಅನುಯಾಯಿಗಳು ಒಂದು ಮತ ಸ್ಥಾಪಿಸಿದರು. ಅದರಲ್ಲಿ ನೀವು ಹೇಳುವ ಬೌದ್ಧ ಮತವೂ ಒಂದು! ಅಷ್ಟೇ ಹೊರತು ಬುದ್ಧ ಸೇರಿದಂತೆ ಬೇರೆ ಯಾರೂ ಬೇರಾವುದೋ `ಧರ್ಮ'ಕ್ಕೆ ವಿರುದ್ಧ ತಮ್ಮದೇ ಆದ `ಧರ್ಮ' ಸ್ಥಾಪಿಸಲಿಲ್ಲ! ಇಡೀ ಮನುಕುಲದಲ್ಲಿ ಇರುವುದು ಒಂದೇ ಧರ್ಮ-ಅದು ಮಾನವ ಧರ್ಮ.
4) ಹೌದು! ಹಿಂದೂ ಮತದಲ್ಲಿ ಅನೇಕ ನ್ಯೂನತೆಗಳು, ಅಪಾರ್ಥಗಳು, ವಿಕೃತ ಆಚರಣೆಗಳೂ ಇವೆ. ಆದರೆ ಅದೆಲ್ಲ ಶತ ಶತಮಾನಗಳಿಂದ ನಾವು ಮಾಡಿಕೊಂಡಿರುವ ತಪ್ಪುಗಳೇ ಹೊರತು ಅದಕ್ಕೂ ವೇದಗಳಿಗೂ ಸಂಬಂಧವಿಲ್ಲ. ಇದೆಲ್ಲವನ್ನೂ ಕಂಡು ರೋಸಿಯೇ ಅಂಬೇಡ್ಕರ್ ಬೌದ್ಧ ಮತ ಸೇರಿದ್ದು. ಅದೆಲ್ಲ ಭಾರತೀಯರಾದ ನಾವು ಮಾಡಿಕೊಂಡ ಸ್ಯಯಂಕೃತ ಅಪರಾಧ. ಇನ್ನಾದರೂ ಸರಿಯಾದ ತಿಳಿವಳಿಕೆಯ ಬೆಳಕಿನಲ್ಲಿ ಸಾಗಬೇಕು. ಆದರೆ ಇಂತಹ ಸ್ವಯಂಕೃತ ಅಪರಾಧಗಳಿಗೆಲ್ಲ ವೇದವೇ ಕಾರಣ ಎಂದೋ; ಅಥವಾ ಒಂದು ವರ್ಗ ಮಾತ್ರ ಕಾರಣ ಎಂದೋ ಭಾವಿಸುವುದೂ ಸಹ ಮತ್ತೆ ಅಜ್ಞಾನವೇ ಅಗುತ್ತದೆ! (ಏಕೆ ಹೀಗಾಗಿರಬಹುದು ಎಂಬುದನ್ನು ಈ ಮುಂಚೆ ನಾನು ನಿಮಗೆ ನೀಡಿರುವ ಪ್ರತಿಕ್ರಿಯೆಯಲ್ಲೇ ಇದೆ; ಮತ್ತೊಮ್ಮೆ ನೋಡಿಕೊಳ್ಳಿ)
3) ಜನ ಸಾಮಾನ್ಯರೆಲ್ಲ ವೇದ ಜ್ಞಾನಿ ಆಗ್ಬೇಕು ಅನ್ನೋ ವಾದ ನಂಗೆ ಒಪ್ಪೋಕೆ ಆಗ್ತಾ ಇಲ್ಲಎಂದಿದ್ದೀರಿ: ಪ್ರವೀಣ್ ನಾನೊಂದು ಪ್ರಶ್ನೆ ಕೇಳುವೆ; ದಯವಿಟ್ಟು ತಪ್ಪು ತಿಳಿಯಬೇಡಿ: ನೀವು ಕಳ್ಳರೆ, ನೀವು ಸುಳ್ಳರೆ? ನೀವು ದಗಾಕೋರರೆ? ನೀವು ಮನೆಹಾಳರೆ?- ಈ ನನ್ನ ಪ್ರಶ್ನೆಗಳಿಗೆ `ಅಲ್ಲ' ಎಂಬುದು ನಿಮ್ಮ ಉತ್ರರವಾಗಿದ್ದರೆ ನೀವು ವೇದಗಳನ್ನು ಅನುಸರಿಸುತ್ತಿದ್ದೀರಿ ಎಂದೇ ಅರ್ಥ! ಹಾಗಾದರೆ ನಿಮ್ಮಂತೆಯೇ ಸಮಾಜವೂ ಒಳ್ಳೆಯ ಸಮಾಜ ಆಗಬೇಡವೆ? ಯಾವುದೆಲ್ಲವನ್ನೂ ತೆಗೆದು ತಿಪ್ಪೆಗೆ ಒಗಾಯಿಸಬೇಕು ಎಂದು ನಾನು ಮೊದಲೇ ಹೇಳಿದ್ದೇನೆ. ಆದರೆ ಅವುಗಳ ಜತೆಯಲ್ಲಿ ಮುತ್ತು ರತ್ನಗಳನ್ನೂ ತೆಗೆದು ಒಗಾಯಿಸಿ ಎಂದು ನಾನು ಹೇಳಿಲ್ಲವಲ್ಲಾ? ಒಂದು ರಾಷ್ಟ್ರ ಸರಿಯಾದ ದಿಕ್ಕಿನಲ್ಲಿ ಮುಂದೆ ಸಾಗಲು ಒಂದು ಸಂವಿಧಾನ ಎಂಬುದು ಹೇಗೆ ಅಗತ್ಯವೋ ಹಾಗೆಯೇ ಈ ಜಗತ್ತಿನಲ್ಲಿ ಮಾನವ ಜೀವಿ ಹೇಗೆ ಜೀವಿಸಬೇಕು ಎಂಬುದಕ್ಕೂ ಒಂದು ಸಂವಿಧಾನ ಇದೆ- ಅದೇ ವೇದ! ಹೌದು ಪ್ರವೀಣ್, ವೇದ ಎಂಬುದು ಮನುಕುಲದ ಸಂವಿಧಾನ ಗೊತ್ತೆ? ಅದು ಜನ ಸಾಮಾನ್ಯರಿಗೆ ಬೇಡವೆ?
6) ...ನಿಮ್ಮ ಅವರ ವೇದ ಬೇರೆ ಬೇರೆ...ಎಂದು ಹೇಳಿದ್ದೀರಿ. ಈ ಜಗತ್ತಿನಲ್ಲಿ ಇರುವುದು ಒಂದೇ ವೇದ ಪ್ರವೀಣ್. ಅದರ ಅಡಿಯಲ್ಲಿ ಸಾವಿರಾರು ಜ್ಞಾನ ಶಾಖೆಗಳು ಇವೆ. ಮೊದಲೇ ಹೇಳಿದಂತೆ ಮಾನವರಲ್ಲಿನ ಗುಣ ಸ್ವಭಾವ ಬೇರೆ ಬೇರೆ ಇವೆ ಅಷ್ಟೆ. ವೇದ ಅನುಸರಿಸಿದವನು ನಿಜವಾದ ಮನುಷ್ಯನಾಗುತ್ತಾನೆ; ಅನುಸರಿಸದೇ ಇರುವವನು ತನ್ನ ಸ್ವಭಾವ, ಕೆಲಸ ಕಾರ್ಯಗಳಿಗೆ ಅನುಸಾರವಾಗಿ ಹಾಗೆಯೇ ಸವೆದು ಹೋಗುತ್ತಾನೆ ಅಷ್ಟೆ!
ಹೀಗಾಗಿ ಮೊದಲು ತಲೆಯಲ್ಲಿನ ಇತರ ಅನಾರೋಗ್ಯಕರ ವಿಚಾರಗಳನ್ನೆಲ್ಲ ಬದಿಗಿಟ್ಟು ಮೇಲೆ ಹೇಳಿದ ನನ್ನ ಸಲಹೆ ಪಾಲಿಸಿ ನೋಡಿ; ನಿಮಗೇ ತಿಳಿಯುತ್ತದೆ; ವೇದದ ಮಹತ್ವ ಎಂತದೆಂದು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.