Skip to main content
Submitted by _V_K_ on ಸೋಮ, 11/02/2009 - 14:43

ವೇದಾಭ್ಯಾಸ ಕೇವಲ ಹುಟ್ಟಿನಿಂದ ಬ್ರಾಹ್ಮಣರಾಗಿರುವವರಿಗೆ ಮೀಸಲು ಎಂಬುದು ಈಗಿನ ಶಾಸ್ತ್ರ ಪಟುಗಳು ಪಾಲಿಸಿಕೊಂಡು ಬರುತ್ತಿರುವ ಧರ್ಮ(?). ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?
-ಅದು ನಿಜಕ್ಕೂ ಶಾಸ್ತ್ರಗಳಲ್ಲಿ ಹೇಳಲ್ಪಟ್ಟದ್ದೇ?
-ಈ ವಿಷಯ ಯಾವುದಾದರೂ ರಾಜಕೀಯಕ್ಕೊಳಗಾಗಿದೆಯೇ?
-ಈ ಮನಸ್ಥಿತಿಯ ಅನಿವಾರ್ಯತೆ ಈಗ ಇದೆಯೇ?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

hariharapurasridhar ಧ, 11/04/2009 - 20:15

ವಿಸ್ಮಯನಗರಿಯಲ್ಲಿ ಸ್ವಲ್ಪ ಸುತ್ತಾಡಿ ಉತ್ತರ ಸಿಗುತ್ತೆ.
http://www.vismayanagari.com/node/5369
ಮೇಲಿನ ಕೊಂಡಿಯ ಜೊತೆಗೆ ವೇದ ಸುಧೆ ಸರಣಿಯನ್ನು ಓದಿ, ನಂತರ ಚರ್ಚೆ ಆರಂಭಿಸಿದರೆ ಉತ್ತಮ.

praveen sooda ಗುರು, 11/12/2009 - 21:16

ಯಾವ್ ವಿದ್ಯೇನು ಯಾವ ಯಾವ ಜನಾಂಗಕ್ಕೂ ಮೀಸಲಲ್ಲ... ಇಯಾದನ್ನ ಯಾವ ಶಾಸ್ತ್ರದಲ್ಲೂ ಹೇಳಿಲ್ಲ ಹೇಳಿದ್ರು ಅದನ್ನ ನಂಬೊ ಅಗತ್ಯ ಇಲ್ಲ.. ವಿದ್ಯೆ ಎಲ್ಲರ ಸ್ವತ್ತು ಇಡೀ ಮನುಕುಲದ ಅಗತ್ಯ. ಆದ್ರೆ ಈ ವೇಧಾ ಅನ್ನೋದು ಕಲಿಕೆಯಲ್ಲಿ ಅಂತ ಅತ್ಯಗತ್ಯ ಅಲ್ಲ ಅನ್ನೋದು ಎಷ್ಟೋ ಕಡೆ ನಿರ್ವಿವಾದ. ನೀವ್ ಸುಮ್ನೇ ಇಲ್ಲಿ ಮತ್ತೆ ವೇಧಗಳ ಅಗತ್ಯಾನ ಪ್ರಶ್ನಿಸಿದ್ರೆ ಮತ್ತೆ ವೇಧಾಜ್ಞಾನ ಪ್ರಿಯರು ನಿಮ್ಮ ದಾರಿ ತಪ್ಪಿಸೋ ಪ್ರಯತ್ನ ನೆಡಿಬೊದು.. ಇಂಗ್ಲೀಶ್ ಅಲ್ಲಿ ಹೆಳೊದಾದ್ರೆ ಈ ವಾದದಲ್ಲಿ ನಿಮ್ಮ ವಿವೇಚನೆ ನಿಮ್ಮ ಕೈಲಿ ಇರಲಿ..

ಉಮಾಶಂಕರ ಬಿ.ಎಸ್ ಭಾನು, 11/15/2009 - 21:48

ಪ್ರವೀಣ್ ರವರೆ ನಿಮ್ಮ ವಾದದ ಮೊದಲ ಸಾಲಿಗೆ ನನ್ನ ಸಂಪೂರ್ಣ ಒಪ್ಪಿಗೆ ಮತ್ತು ಸಹಮತವಿದೆ, ಹೌದು ಯಾವ ವಿದ್ಯೆಯೂ ಯಾರ ಸ್ವತ್ತಲ್ಲ. ಆದರೆ ವೇದಗಳಲ್ಲಿ 'ನೀವು ತಿಳಿದಿರುವುದಕ್ಕಿಂತ ಹೆಚ್ಚೇನು ಇಲ್ಲ' ಎಂಬ ನಿಮ್ಮ ಅಹಂಭಾವ ನಿಮ್ಮ ಅಲ್ಪ ಜ್ನಾನವನ್ನು ಜಗಜ್ಜಾಹಿರುಗೊಳಿಸಿದೆ.ಆ ವೇದಗಳಲ್ಲಿಯೂ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತ ಅನೇಕಾನೇಕ ವಿಷಯಗಳು ಅಡಗಿವೆ. ಎನ್ನುವ ಸತ್ಯ ನಿಮ್ಮಂತಹ ಜ್ನಾನಿಗಳು ಈಗಾಗಲೇ ಒಪ್ಪಿದ್ದಾರೆ.

praveen sooda ಧ, 11/18/2009 - 19:18

ಉಮಾಶಂಕರ ಬಿ.ಎಸ್ ಅವರೇ ವೇದದಲ್ಲಿ ಏನಿದೆ ಏನಿಲ್ಲ ಬಿಡಿ.. ಆದ್ರೆ ವೇದದ ಜ್ಞಾನ ಇಲ್ಲದೇ ಈ ದೇಶದಲ್ಲಿ ಎಷ್ಟು ಜನ ಹಿಂದೂಗಳೇ ಬದುಕಿಲ್ಲ. ಆದ್ರೆ ನಾನ್ ನಂಬಿರೋ ಹಾಗೆ ನಂ ದೇಶದಲ್ಲಿ ಜಾತೀವಾರು ಪದ್ಧತಿಗೆ ಈ ವೇದನೆ ಪೀಠಿಕೆ ಅನ್ಸತ್ತೆ. ಅದು ಅಲ್ಲ್ದೇ ವೇದ ಹೇಳಿದ್ದು ಒಂದಾದ್ರೆ ಅದನ್ನ ತಿರುಚಿ ಉಪಯೋಗಿಸಿದ್ದು ಅನೇಕ. ನಮ್ಮ ಬಸವಣ್ಣನವರ ವಚಗಳಿರಬಹುದು ಅಥವಾ ಸರ್ವಜ್ಞನ ತ್ರಿಪದಿ ಇರ್ಬೋದು, ಡಿ ವಿ ಜಿ ಕಗ್ಗಗಳಿರಬಹುದು ಇದು ವೇದಕ್ಕೆ ತುಂಬಾ ವಿರುದ್ಧವಾಗಿದೆ ಅನ್ಸಲ್ವೇ? ವೇದಕ್ಕಿಂತ ನಮ್ಮ ಜೀವನಕ್ಕೆ ಅವಶ್ಯವಾದ ಜ್ಞಾನ ಇದ್ರಲ್ಲಿ ಇಲ್ವಾ? ನಮ್ಮ ಶಿವರಾಂ ಕಾರಂತರಿರ್ಬೋದು (ಬಾಳ್ವೆಯೇ ಬೆಳಕು), ತೇಜಸ್ವಿ (ಅನೇಕ ಲೇಖನಗಳು), ಮೂರ್ತಿರಾಯರೆ(ದೇವರು) ಇರ್ಬೋದು ವೇದನ ಮತ್ತು ಮನುಸ್ಮೃತಿ ವಿರೋಧಿಸಿದ ಸಾಹಿತ್ಯಗಳಿವೆ ಅದನ್ನ ಒಪ್ಪಿದ ಜನತೆ ಇದೆ. ಹಾಗಾದ್ರೆ ಇದು ನಿರ್ವಿವಾದ ಅಲ್ಲದೇ ಏನು. ಈ ಸಾಹಿತಿಗಳ ಸಾಹಿತ್ಯನೆ ಗೋಜ್ಜು ಅಂತೀರಾ. ನಾನ್ ಯಾರೋ ಒಬ್ಬರ ಅಥವಾ ಅನೇಕರ ಸಾಹಿತ್ಯನ ನಂಬಿ ಇದೆಲ್ಲ ಹೇಳ್ತಾ ಇಲ್ಲ. ನನ್ನ ವಿವೇಚನೆ ಮಟ್ಟಿಗೆ ಹೇಳಿದ್ದು.. ಕುವೆಂಪು ಬಗ್ಗೆ ಬರೆದ ತೇಜಸ್ವಿ ಅವರ ಅಣ್ಣನ ನೆನಪು ಇದೆ ಅದ್ರಲ್ಲಿ ಎಷ್ಟೋ ಕಡೆ ಕುವೆಂಪು ಹಿಂದುತ್ವ ವೇದನ ತಿರುಚಿ ಬೆಳೆದ ಬಗ್ಗೆ ಸ್ವಲ್ಪ ವಿವರಿಸಿದರೆ. ಭಗತ್ ಸಿಂಗ್ ವಿಚಾರಗಳು ವೇದಕ್ಕೆ ವಿರುದ್ಧ ಅನ್ನೋದು ನಿಮಗೆ ತಿಳೀದೇ ಇದೆ (ನಾನೇಕೆ ನಾಸ್ತಿಕ ಭಗತ್ ಸಿಂಗ್ ಬರೆದ ಪುಸ್ತಕ).
( ಉಮಾಶಂಕರ್ ಅವರೇ ಇದು ನಿಮಗಲ್ಲ. ಮುಂದೆ ವಾದ ಮಾಡೋ ಮಹನೀಯರೇ ನಿಮ್ಮ ವಾದದಲ್ಲಿ ನಿಮ್ಮ ಕೋಪ ನನ್ನ ಮೇಲಿರಲಿ ಆದ್ರೆ ನಾನ್ ಹೇಳಿದ ಸಾಹಿತಿಗಳ ಮೇಲೆ ಬೇಡ ನಿಮ್ಮ ಅವಚ್ಯಾ ಮಾತುಗಳಿಂದ ಅವರಿಗೆ ನನ್ನಿಂದ ಅವಮಾನ ಆಗೋದು ಬೇಡ)

ಉಮಾಶಂಕರ ಬಿ.ಎಸ್ ಭಾನು, 11/22/2009 - 13:10

ಪ್ರವೀಣ್ ಸೂಡ ಅವರೆ,
ನೀವು ಉದಹರಿಸಿದ ಮೇಲಿನ ಮಹನೀಯರೆಲ್ಲರನ್ನು 'ನಿಮ್ಮಂತೆ ಅವರು' ಎಂದು ನೀವು ತಪ್ಪುಭಾವಿಸಿದ್ದೀರ ಎನ್ನುವುದು ನಿಮ್ಮ ಮೇಲಿನ ಅಭಿಪ್ರಾಯದಿಂದ ಯಾರಿಗಾದರೂ ಅರ್ಥವಾಗುತ್ತೆ. ನೀವು ಹೇಳಿದ ಸರ್ವಜ್ನನ ತ್ರಿಪದಿಗಳು, ಡಿ.ವಿ.ಜಿ ಯವರ ಮಂಕುತಿಮ್ಮನ ಕಗ್ಗ ಇವೆಲ್ಲವುಗಳ ಸಾರವನ್ನು ಸಾವಿರಾರು ವರ್ಷಗಳ ಹಿಂದೆ ವೇದಗಳಲ್ಲಿ ಮೊದಲೇ ಹೇಳಿಯಾಗಿದೆ. ಅಲ್ಲದೆ ಶಿವರಾಮ ಕಾರಂತರು, ಮೂರ್ತಿರಾಯರು, ತೇಜಸ್ವಿಗಳು ಅವರ ಲೇಖನಗಳನ್ನು ಬರೆಯುವ ಮುನ್ನ ವೀದಗಳನ್ನು ಚೆನ್ನಾಗಿ ತಿಳಿದು ವಾದಮಾಡಿದ್ದಾರೆ ಹಾಗು ವೇದಗಳಲ್ಲಿನ ಒಳ್ಳೆಯ ಸತ್ವಗಳನ್ನು ಉಲ್ಲೇಖಿಸಿ ಅವುಗಳನ್ನು ಮೆಚ್ಚಿದ್ದಾರೆ, ಕೆಟ್ಟದ್ದನ್ನು ತೆಗಳಿದ್ದಾರೆ. ಏನೂ ತಿಳಿಯದ ನೀವು ಈ ರೀತಿ ವಾದಮಾಡಿ ಅಲ್ಪಜ್ನರೆನಿಸಿಕೊಳ್ಳಬೇಡಿ..
ಪ್ಲೀಸ್

ಬಾಲ ಚಂದ್ರ ಸೋಮ, 11/16/2009 - 12:02

ಈಗಿರುವ ವೇದಾಧ್ಯಯನ ಕೇಂದ್ರಗಳು ( ಗುರುಕುಲಗಳು) ವೇದವನ್ನು ಕಲಿಸಲು ತೆಗೆದುಕೊಳ್ಳುವ ಸಮಯ 12-16 ವರ್ಷಗಳು. ಆದರೂ ವೇದವೆಂಬುದು ಸಮುದ್ರ ಅದರಲ್ಲಿ ನಾವು ಕಲಿತಿರುವುದು ಕೇವಲ ಸಾಸಿವೆ ಕಾಳಷ್ಟು ಮಾತ್ರ ಎಂದು ವಿನಯದಿಂದ ಹೇಳುತ್ತಾರೆ (ವಿದ್ಯಾ ದಧಾತಿ ವಿನಯಂ)

ಆದರೆ ಈ ಪ್ರವೀಣ್ ಸೂಡಾರವರು ನಾಲ್ಕು ವೇದಗಳನ್ನು ಅರಿದು ಕುಡಿದವರಂತೆ ಆದ್ರೆ ಈ ವೇಧಾ ಅನ್ನೋದು ಕಲಿಕೆಯಲ್ಲಿ ಅಂತ ಅತ್ಯಗತ್ಯ ಅಲ್ಲ ಅನ್ನೋದು ಎಷ್ಟೋ ಕಡೆ ನಿರ್ವಿವಾದ. ಅಂತ ತಮ್ಮ ದರಿದ್ರ ಕನ್ನಡದಲ್ಲಿ ಅಪ್ಪಣೆ ಕೊಡಿಸುತ್ತಾರೆ.
ಅಷ್ಟೇ ಅಲ್ಲದೇ ನೀವ್ ಸುಮ್ನೇ ಇಲ್ಲಿ ಮತ್ತೆ ವೇಧಗಳ ಅಗತ್ಯಾನ ಪ್ರಶ್ನಿಸಿದ್ರೆ ಮತ್ತೆ ವೇಧಾಜ್ಞಾನ ಪ್ರಿಯರು ನಿಮ್ಮ ದಾರಿ ತಪ್ಪಿಸೋ ಪ್ರಯತ್ನ ನೆಡಿಬೊದು ಅಂತ ಉದ್ಗರಿಸುವ ವೇದ ದ್ವೇಷಿಗಳಾದ ಇವರೂ ದಾರಿ ತಪ್ಪಿಸುವ ಕೆಲಸವನ್ನೇ ಮಾಡುವುದು ಕೇವಲ ಬ್ರಾಹ್ಮಣರ ಮೇಲಿನ ಪೂರ್ವಾಗ್ರಹದಿಂದ.
ಖಂಡಿತ ವಿದ್ಯೆ ಯಾರ ಸೊತ್ತೂ ಅಲ್ಲ (ವೇದ ಎಂದರೆ ಜ್ನಾನ ಎಂದರ್ಥ) ಹೊಳೆ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಏಕೆ?
ವೇದದ ವಾಸನೆಯೇ ಇಲ್ಲದ (ಕನಿಷ್ಟ ಕನ್ನಡ ಕಾಗುಣಿತ ತಿಳಿಯದ ) ಬೃಹಸ್ಪತಿಗಳು ನನ್ನದೂ ಒಂದು ಹೇಳಿಕೆ ಇರಲಿ ಅಂತ ಪ್ರತಿಕ್ರಿಯಿಸುವುದನ್ನು ದಯವಿಟ್ಟು ನಿಲ್ಲಿಸಲಿ.

ಸಸ್ನೇಹ
ಬಾಲ ಚಂದ್ರ

praveen sooda ಧ, 11/18/2009 - 20:32

ಬಾಲಚಂದ್ರ ಅವರೇ ಏನ್ರೀ ಹೇಳಿದ್ದು ವೇದ... ೧೦೦ ಜನರಲ್ಲಿ ೧೦ಜನಕ್ಕೆ ಮರ್ಯಾದೆ ಉಳಿದ ಜನಕ್ಕೆ ಅವಮಾನ ಜಾತಿಯಾಧಾರಿತ ಅವಮಾನ. ಕೆಲ ಜಾತಿಗೆ ಶಿಕ್ಷಣ ಇಲ್ಲ, ಸಾಮಾಜಿಕ ಸಮಾನತೆ ಇಲ್ಲ. ಬಸವಣ್ಣ ಬರೋ ತಂಕ ಸಮಾನತೆ ಪದ ಕೂಡ ಬರ್ಲಿಲ್ಲ. ಆಮೇಲೆ ಅಂಬೇಡ್ಕರ್ ಬರ್‍ದೇ ಇದ್ದಿದ್ರೆ ನಂ ದೇಶ ಇನ್ನೂ ೨೧ನೇ ಶತಮಾನಕ್ಕೆ ಕಾಲ್ ಇಡ್ತಾನೆ ಇರ್ಲಿಲ್ಲ. ಈಗ್ಲೂ ಪೂರ್ಣ ಪ್ರಮಾಣದ ಬದಲಾವಣೆ ಆಗಿಲ್ಲ ಬಿಡಿ. ಮನುಷ್ಯ ಸತ್ತ ಮೇಲೂ ಶಾಸ್ತ್ರ ಸಂಪ್ರದಾಯ ಅಂತ ತಲೆ ತಿನ್ತೀರಾ. ಮದುವೆ ಆಗೋಣ ಅಂದ್ರೆ ವರದಕ್ಷಿಣೆ ಅಂತ ಹೆಣ್ ಹೆತ್ತೋರನ್ನ ಸುಳಿದು ಹಿಪ್ಪೆ ಮಾಡ್ತಿರ. ಜೊತೆಗೆ ಅದು ಇದು ಅಂತ ಸಾವಿರ ಸಂಪ್ರದಾಯ ಬೇರೆ. ಇದಕ್ಕೆಲ್ಲ ವೇದ ಪುರಾಣ ಅಂತ ಬೊಗಳೆ ಬಿಡ್ತೀರಾ. ಪುರೋಹಿತ ಸೋಂಬೇರಿ ಜನಾಂಗಕ್ಕೆ ಬಿಟ್ಟಿ ಊಟ ಬೇರೆ ಕಾಣಿಕೆ ಹೆಸರಲ್ಲಿ ಸಂಪಾದನೆ ಬೇರೆ. ಅದಕ್ಕೆ ಕುವೆಂಪು ಅವರು ಪುರೋಹಿತಶಾಹೀನ ವಿರೋಧಿಸಿದ್ದು ಅನ್ಸತ್ತೆ. ತೇಜಸ್ವಿ ಹೇಳೋ ಹಾಗೆ ನಮ್ ಹಿಂದುತ್ವಕ್ಕೆ ಮತ್ತೆ ಶುದ್ಧಿಯಾಗೋ ಶಕ್ತಿ ಇಲ್ಲಾರೀ. ಒಂದು ಕೇಳಿ ನಿಮ್ಗೆ ಧರ್ಮಾಧಾರಿತ ಜಾತ್ಯಾಧಾರಿತ ಸಮಾಜ ಕಟ್ಟೋ ಆಸಕ್ತಿ ಇದಿಯೇ ಹೊರತು ಅದರಲ್ಲಿನ ಹುಳಕನ್ನ ಒಪ್‌ಕೊಳ್ಳೋ ಬದ್ಧತೆ ಇಲ್ಲ. ನಿಮ್ಗೆ ವ್ಯಾಕರಣ ತುಂಬಾ ಚನ್ನಾಗೆ ಬರತ್ತೆ ಆದ್ರೆ ಮನುಷ್ಯತ್ವನ ಹೀಗೆ ಧರ್ಮಾಧಾರಿತವಾಗಿ ನೋಡ್ಬಾರ್ದೂ ಆನೊ ವಿವೇಚನೆ ಇಲ್ಲ ನೋಡಿ. ನನ್ನ ವ್ಯಾಕರಣ ತಪ್ಪುಗಳು ಎಲ್ಲರಿಗೂ ಗೊತ್ತಾಗ್ತಾ ಇತ್ತು ಆದ್ರೆ ಯಾರು ಪ್ರಶ್ನಿಸಿರಲಿಲ್ಲ ಯಾಕಂದ್ರೆ ಅವರಿಗೆ ವಿಷ್ಯ ಮುಖ್ಯ ಆಗಿತ್ತು ನಿಮ್ಗೆ ನನ್ನ ವಿರೋದ್ಜಿಸೊಕೆ ಸಿಕ್ಕಿದ್ದು ನನ್ನ ವ್ಯಾಕರಣ ಈಗ ಅದನ್ನು ನಿಮ್ಗೊಸ್ಕರ ನನ್ನ ಸೋಂಬೇರಿತನನ ಬಿಟ್ಟು ತಿದ್ಕೊನ್ಡಿದಿನಿ. ಈಗ್ಲಾದ್ರೂ ಅರ್ಥ ಆದ್ರೆ ನನ್ನ ಸಾಹಸಾಮಯ (ವ್ಯಾಕರಣ ತಿದ್ದುಪಡಿ) ಕ್ಕೆ ಬೆಲೆ.

ಬಾಲ ಚಂದ್ರ ಗುರು, 11/19/2009 - 13:59

೧೦೦ ಜನರಲ್ಲಿ ೧೦ಜನಕ್ಕೆ ಮರ್ಯಾದೆ ಉಳಿದ ಜನಕ್ಕೆ ಅವಮಾನ ಜಾತಿಯಾಧಾರಿತ ಅವಮಾನ
ಇದು ಸ್ವಾತಂತ್ರ್ಯ ಪೂರ್ವ ಕಥೆ. ಈಗೇನಿದ್ದರೂ ಜಾತಿಯಾಧಾರಿತ ಮೀಸಲಾತಿ ಮಾತ್ರ ಜಾರಿಯಲ್ಲಿದೆ. ಆದರೆ ಇದಕ್ಕೂ ವೇದಾಧ್ಯಯನಕ್ಕೂ ಏನು ಸಂಭಂಧ ಅಂತ ಅರ್ಥವಾಗಲಿಲ್ಲ..
ಮನುಷ್ಯ ಸತ್ತ ಮೇಲೂ ಶಾಸ್ತ್ರ ಸಂಪ್ರದಾಯ ಅಂತ ತಲೆ ತಿನ್ತೀರಾ
ಪ್ರಪಂಚದಲ್ಲಿರುವ ಎಲ್ಲಾ ಜಾತಿಗಳಲ್ಲೂ ಮನುಷ್ಯ ಸತ್ತ ಮೇಲೆ ಸಂಸ್ಕಾರವಿಧಿಗಳು ಇದ್ದೇ ಇರುತ್ತದೆ. ಇದು ನಾಗರೀಕತೆ ಬೆಳೆದು ಬಂದಾಗಿನಿಂದ ನಡೆದು ಬಂದಿರುವ ಸಂಪ್ರದಾಯ. ಆದರೆ ಇದಕ್ಕೂ ವೇದಾಧ್ಯಯನಕ್ಕೂ ಇರುವ ಸಂಬಂಧ ಏನು?

ಮದುವೆ ಆಗೋಣ ಅಂದ್ರೆ ವರದಕ್ಷಿಣೆ ಅಂತ ಹೆಣ್ ಹೆತ್ತೋರನ್ನ ಸುಳಿದು ಹಿಪ್ಪೆ ಮಾಡ್ತಿರ.
ತಾವು ಧಾರಾಳವಾಗಿ ವರದಕ್ಷಿಣೆ ತೆಗೆದು ಕೊಳ್ಳದೆ ಮದುವೆ ಆಗಬಹುದು.ಅದಕ್ಕೆ ಬ್ರಾಹ್ಮಣರೆಂದೂ ಅಡ್ಡಿ ಪಡಿಸಲಾರರು. ಏಕೆಂದರೆ ಅವರಲ್ಲಿ ಈಗ ವಧೂದಕ್ಷಿಣೆ ಜಾರಿಗೆ ಬರುತ್ತಿದೆ. ವರದಕ್ಷಿಣೆ ಬ್ರಾಹ್ಮಣರನ್ನು ಹೊರತು ಪಡಿಸಿ ಇನ್ನೆಲ್ಲಾ ಜಾತಿಯಲ್ಲೂ ಇದೆ.
ಆದರೆ ಇದಕ್ಕೂ ವೇದಾಧ್ಯಯನಕ್ಕೂ ಏನು ಸಂಬಂಧ?
ಒಂದು ಕೇಳಿ ನಿಮ್ಗೆ ಧರ್ಮಾಧಾರಿತ ಜಾತ್ಯಾಧಾರಿತ ಸಮಾಜ ಕಟ್ಟೋ ಆಸಕ್ತಿ ಇದಿಯೇ ಹೊರತು ಅದರಲ್ಲಿನ ಹುಳಕನ್ನ ಒಪ್‌ಕೊಳ್ಳೋ ಬದ್ಧತೆ ಇಲ್ಲ.
ಖಂಡಿತವಾಗಿ ನಾವು ಧರ್ಮವಿಲ್ಲದ ಜಾತ್ಯಾತೀತ ಸಮಾಜ ಕಟ್ಟೋಣ. ಆದರೆ ಬ್ರಾಹ್ಮಣರಲ್ಲಿರುವ ಹುಳುಕು (?) ಎತ್ತಿ ಆಡುತ್ತಾ , ಬೇಕೆಂದು ಇನ್ನೂ ದಲಿತರು,ಶೋಷಿತರು ಎಂದು ತಮ್ಮನ್ನು ತಾವೇ ಕರೆದು ಕೊಳ್ಳುತ್ತಾ ನಾಲ್ಕು ತಲೆಮಾರುಗಳವರೆಗೂ ಮೀಸಲಾತಿ,ಮುಂತಾದ ಸವಲತ್ತುಗಳನ್ನು ಅನುಭವಿಸುವವರ ಹುಳುಕುಗಳನ್ನು ತಾವು ಯಾವಾಗ ತೆಗೆಯುತ್ತೀರಿ ಸ್ವಾಮಿ?
ನಿಮ್ಗೆ ನನ್ನ ವಿರೋದ್ಜಿಸೊಕೆ ಸಿಕ್ಕಿದ್ದು ನನ್ನ ವ್ಯಾಕರಣ ಈಗ ಅದನ್ನು ನಿಮ್ಗೊಸ್ಕರ ನನ್ನ ಸೋಂಬೇರಿತನನ ಬಿಟ್ಟು ತಿದ್ಕೊನ್ಡಿದಿನಿ. ಈಗ್ಲಾದ್ರೂ ಅರ್ಥ ಆದ್ರೆ ನನ್ನ ಸಾಹಸಾಮಯ (ವ್ಯಾಕರಣ ತಿದ್ದುಪಡಿ) ಕ್ಕೆ ಬೆಲೆ.
ನಿಮ್ಮ ವ್ಯಾಕರಣ ತಿದ್ದುಕೊಂಡರೆ ಅದರಿಂದ ನಿಮಗೇ ಉಪಯೋಗ, ಆದರೆ ಅದಕ್ಕೂ ಮುನ್ನ ತಿದ್ದಿಕೊಳ್ಳಬೇಕಾಗಿರುವುದು ತಮ್ಮ ಹೀನ ಬುದ್ದಿಯನ್ನು ಆ ಸಾಹಸಾಮಯ ಕೆಲಸವನ್ನು ಬೇಗ ಮಾಡಿ.

ಅಗ್ನಿ, ಲಂಕೇಶ ಮುಂತಾದ ಕಂತ್ರಿ ಟ್ಯಾಬ್ಲಾಯ್ಡಗಳನ್ನು ಓದಿ.ಯಾರೋ ಎಲ್ಲೋ ಹೇಳಿದ್ದನ್ನು ತಮಗೆ ಬೇಕಾದ ಹಾಗೆ ಅರ್ಥೈಸಿಕೊಂಡು ಬರೆದರೆ ಹೀಗೇ ಆಗುವುದು. ನಿಮಗೆ ಪುಸ್ತಕ ಜ್ನಾನ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಮಸ್ತಕ ಜ್ನಾನವಂತೂ ಖಂಡಿತಾ ಇಲ್ಲ.
ಜಾತ್ಯಾತೀತ ಸಮಾಜ ನಿರ್ಮಾಣಕ್ಕೆ ಹೊರಟಿರುವ ತಾವು -ಬ್ರಾಹ್ಮಣರೂ ಸೇರಿದಂತೆ ಎಲ್ಲಾ ಜಾತಿಯವರಿಗೂ ಸಮಾನವಾಗಿ ವಿದ್ಯೆ, ಉದ್ಯೋಗವಕಾಶ ಸಿಗಬೇಕೆಂದು ಹೇಳುವುದಿಲ್ಲ. ವರದಕ್ಷಿಣೆ, ಬುರುಖಾ, ಮರ್ಯಾದ ಹತ್ಯಾ ಮುಂತಾದ ಸಂಪ್ರದಾಯಗಳನ್ನು ಹೊಂದಿರುವ ಮುಸ್ಲಿಂ ಸಮಾಜದ ಬಗ್ಗೆ ಕೆಮ್ಮುವುದಿಲ್ಲ,
ಅಷ್ಟು ನರ ನಿಮಗೆಲ್ಲಿಂದ ಬರಬೇಕು ಹೇಳೀ?

ಇದು ಒಂದು ರೀತಿಯ identify crysis ನಿಂದ ತಾವು ನರಳುತ್ತಿದ್ದೀರಿ. ಎಲ್ಲರೂ ಬ್ರಾಹ್ಮಣರನ್ನು ಬೈದರೆ, ನಾನೂ ಅವರೊಡನೇ ಸೇರಿ ತನ್ನನ್ನು ಗುರುತಿಸಿಕೊಳ್ಳಬೇಕೆಂಬ ಹಂಬಲ.ಏಕೆಂದರೆ ಬಿಟ್ಟಿ ಸಿಗುವುದು ಅವರೇ ತಾನೇ? ಅಷ್ಟು ಮಾಡಿದರೆ ತಮಗೆ ಜಾತ್ಯತೀತನೆಂಬ ಪಟ್ಟ ಬೇರೆ.
ಇಂಥ ಹೀನ,ಡೋಂಗೀ,ಗೋಸುಂಬೆತನ ಬಿಟ್ಟು ಇನ್ನಾದರೂ ಸ್ವಂತಿಕೆ ಬೆಳೆಸಿಕೊಳ್ಳಿ
ದಯವಿಟ್ಟು

ಸತ್ಯ,ಪೋರ ಮುಂತಾದವರಿಗೆ
ಧನ್ಯವಾದಗಳು
ಬಾಲ ಚಂದ್ರ

ಉಮಾಶಂಕರ ಬಿ.ಎಸ್ ಗುರು, 11/19/2009 - 22:06

ಬಾಲಚಂದ್ರ ರವರೆ,
ನೀವು ಸರಿಯಾಗಿಯೇ ಹೇಳಿದ್ದೀರಿ, ಉತ್ತಮವಾದ ಚರ್ಚೆ.

manju sringeri (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 11/28/2009 - 21:58

balu.. murkana jote yake vada madteya? soda gowri lankesh (idakinta ketta pada nanna hatra ella )taradde...

praveen sooda ಗುರು, 11/12/2009 - 21:20

ಇಂಗ್ಲೀಶ್ ಅಲ್ಲಿ ಹೇಳೋದಾದ್ರೆ ಅನ್ನೋದು ಹೇಳಿರ್ಲಿಲ್ಲ.. be carefull

ಬಾಲ ಚಂದ್ರ ಸೋಮ, 11/16/2009 - 12:03

ಮೊದಲು ಕನ್ನಡದಲ್ಲಿ ನೆಟ್ಟಗೆ ಬರೀರಿ. ಆಮೇಲೆ ಇಂಗ್ಲೀಷ್ ಹಾಳು ಮಾಡುವಿರಂತೆ

satish.mb ಶುಕ್ರ, 11/13/2009 - 13:26

ಈ ವಿಷಯದಲ್ಲಿ hariharapurasridhar ಅವರು ಸರಿಯಾಗೇ ಹೇಳಿದ್ದಾರೆ. ನನಗೆ ತಿಳಿದಿರೋದೇ ಸರಿ ಅಂದುಕೊಂಡು ವಾದ ಮಾಡೋದಕ್ಕಿಂತ ತಿಳಿದವರ ಅಭಿಪ್ರಾಯ ಏನಿದೆ ಅಂಥ ಒಮ್ಮೆ ವಿಚಾರ ಮಾಡಿ ನಂತರ ಮುಂದುವರೆಯುವುದು ಸೂಕ್ತ...

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 11/13/2009 - 14:59

ವೇದಾಧ್ಯಯನ ದ್ವಿಜರಿಗೆ ಮಾತ್ರ ಅಂತ ಮನುಸ್ಮೃತಿಯಲ್ಲಿ ಹೇಳಿದ್ದಾರೆ. ಅದರಲ್ಲೇ ಸ್ವಲ್ಪ ಮುಂದೆ ಹೋಗಿ ಅದನ್ನು ದ್ವಿಜರಲ್ಲದವರು ಓದಿದರೆ ಹೇಗೆ ಹೇಗೆ ಅವರನ್ನು ಶಿಕ್ಷಿಸಿ ಪುಣ್ಯಸಂಪ್ರಾಪ್ತಿ ಮಾಡಿಕೊಳ್ಳತಕ್ಕದ್ದು ಅಂತಲೂ ವರ್ಣಿಸಿದ್ದಾರೆ. ನೀವು ವೇದಗಳು ಮಹತ್ವ ಇರುವ ಗ್ರಂಥಗಳು ಒಪ್ಪಿದರೆ ಮನುಸ್ಮೃತಿಯನ್ನೂ ತಿರಸ್ಕರಿಸಲು ಆಗುವದಿಲ್ಲ.

ದ್ವಿಜರಲ್ಲದವರಿಂದ ವೇದಗಳನ್ನು ದೂರವಿಟ್ಟಿದ್ದೇ ರಾಜಕೀಯ ಅಂತ ವಾದವಿದೆ. ಅದನ್ನು ಬಿಟ್ಟು ಈ ವಿಷಯದಲ್ಲಿ ಬುದ್ಧ, ಮಹಾವೀರ, ಭೀಮರಾವಂಬೇಡ್ಕರ, ಬಹುಜನರು, ಅವರ ಬೊಮ್ಮನ್ ಗಳು, ದೇವನೂರರ ಬಂಡಾಯ, ಅಹಿಂದದ ಸಿದ್ದರಾಮಯ್ಯ ಇತ್ಯಾದಿ ಇತ್ಯಾದಿ ಜನ ತಮ್ಮ ರಾಜಕೀಯ ಲಾಘವ ಕಾಣಿಸಿದ್ದಾರೆ.

ನೀವು ಕಷ್ಟ ಬಂದಾಗ ಅಯ್ಯೋ ರಾಮಾ ಅಂತ ಕೂಗುವದನ್ನು ನಿಲ್ಲಿಸುವ ತನಕ ಈ ಮನಸ್ಥಿತಿಯ ಅಗತ್ಯ ಇದೆ.

ಬಾಲ ಚಂದ್ರ ಗುರು, 11/19/2009 - 14:11

ವೇದಾಧ್ಯಯನ ದ್ವಿಜರಿಗೆ ಮಾತ್ರ ಅಂತ ಮನುಸ್ಮೃತಿಯಲ್ಲಿ ಹೇಳಿದ್ದಾರೆ. ಅದರಲ್ಲೇ ಸ್ವಲ್ಪ ಮುಂದೆ ಹೋಗಿ ಅದನ್ನು ದ್ವಿಜರಲ್ಲದವರು ಓದಿದರೆ ಹೇಗೆ ಹೇಗೆ ಅವರನ್ನು ಶಿಕ್ಷಿಸಿ ಪುಣ್ಯಸಂಪ್ರಾಪ್ತಿ ಮಾಡಿಕೊಳ್ಳತಕ್ಕದ್ದು ಅಂತಲೂ ವರ್ಣಿಸಿದ್ದಾರೆ.
ಇದು ಖಂಡಿತಾ ತಪ್ಪು ತಿಳುವಳಿಕೆ. ಹಾಗೆಂದು ಮನುಸ್ಮ್ರತಿಯಲ್ಲಿ ಎಲ್ಲಿದೆ ಎಂದು ದಯವಿಟ್ಟು ತಿಳಿಸುವಿರಾ?

ಯಾರೋ ಒಬ್ಬ ಮುಸ್ಲಿಂ ಮತಾಂಧ ಮುಸ್ಲಿಮರಲ್ಲದವರನ್ನು ತಲೆ ಕಡಿದು ಸಾಯಿಸಿ ಎಂದು ಅಪ್ಪಣೆ ಕೊಟ್ಟ ರೀತಿಯಲ್ಲೇ ಮನು ಕೂಡ ಆಗಿನ ಕಾಲದ ಒಬ್ಬ ಹಿಂದೂ ಮತಾಂಧ. ನೀವಂದು ಕೊಂಡಂತೆ ಖಂಡಿತವಾಗಿಯೂ ವೇದಗಳಿಗೂ ಮನುಸ್ಮೃತಿಗೂ ಯಾವುದೇ ನೇರಾನೇರ ಸಂಭಂಧವಿಲ್ಲ.
ವೇದಗಳ ಹಿರಿಮೆಯ ಬಗ್ಗೆ ಯಾರೂ ಮಾತನಾಡುವುದಿಲ್ಲ. ಏಕೆಂದರೆ ವೇದಗಳು ಜ್ನಾನದ ಸಮುದ್ರ.
ಕೊನೆಗೆ ಹುಳುಕು ಹುಡುಕುತ್ತಾ ಹೋಗಿ ಎಲ್ಲರೂ ಮನುಸ್ಮೃತಿಯ ಬಗ್ಗೆ ಮಾತನಾಡುತ್ತಾರೆ.

ಸಸ್ನೇಹ
ಬಾಲ ಚಂದ್ರ

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 11/20/2009 - 10:55

ಪ್ರಿಯ ಬಾಲಚಂದ್ರ,
ಮನುಸ್ಮೃತಿಯಲ್ಲಿ ವೇದಾಧ್ಯಯನ ದ್ವಿಜರಿಗೆ ಮಾತ್ರ ಅಂತ ಎಲ್ಲಿ ಹೇಳಿದ್ದಾರೆ, ಅದನ್ನು ದ್ವಿಜರಲ್ಲದವರು ಓದಿದರೆ ಹೇಗೆ ಹೇಗೆ ಅವರನ್ನು ಶಿಕ್ಷಿಸಿ ಪುಣ್ಯಸಂಪ್ರಾಪ್ತಿ ಮಾಡಿಕೊಳ್ಳತಕ್ಕದ್ದು ಅಂತಲೂ ವರ್ಣಿಸಿದ್ದಾರೆ ಅಂತ ನಿಮಗೆ ಒದಗಿಸಿದರೆ ನೀವು ಸನಾತನ ಧರ್ಮದ ಅಂಗಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವದನ್ನು ಬಿಡುತ್ತೀರಿ ಅಂದಾದರೆ ಆ ಪುಟವನ್ನು ಸ್ಕ್ಯಾನ್ ಮಾಡಿ ಇಲ್ಲಿ ಹಾಕುತ್ತೇನೆ. (ನಾನು ಅಷ್ಟು ಕಷ್ಟ ಪಡುವದಕ್ಕೆ ತಯಾರಿರುವಾಗ ನೀವು ಸ್ವಲ್ಪಕ್ಕಾದರೂ ತಯಾರಿರಬೇಕು.) ನಿಮ್ಮ ಹತ್ತಿರ ಇದೆ ಅಂದಾದರೆ ಹನ್ನೆರಡನೇ ಅಧ್ಯಾಯದ ನಾಲ್ಕನೇ ಉಕ್ತಿಯನ್ನು ನೋಡಿ . ಅಲ್ಲದೇ ದಯಮಾಡಿ ನೀವೇ ಒಬ್ಬರು ಮನುಸ್ಮೃತಿಯನ್ನು ಓದಿದವರು ಎನ್ನುವ ಹಾಗೆ ಆಡಬೇಡಿ. ವಿಸ್ಮಯನಗರಿಗೆ ಬರುವ ಎಲ್ಲರೂ ಸ್ರವೀಣ ಪೂಡಾನೇ ಆಗಿರುವದಿಲ್ಲ.

ಇನ್ನು ನೀವು ಹೇಳುವ ಹಾಗೆ ಯಾವುದೋ ಒಬ್ಬ ಮುಸ್ಲಿಮ ಮತಾಂಧ ಮುಸ್ಲಿಮರಲ್ಲದವರನ್ನು ತಲೆ ಕಡಿದು ಸಾಯಿಸಿ ಎಂದು ಹೇಳಿದ್ದಲ್ಲ. ಅದು ಅವರ ಧರ್ಮದ ಅವಿಭಾಜ್ಯ ಅಂಗ.

ಇನ್ನು ಮನುವೂ ಧರ್ಮಾಂಧನಲ್ಲ. ಆತನ ಕಾಲದಲ್ಲಿ ಸನಾತನ ಧರ್ಮವನ್ನುಳಿದು ಇತರ ಧರ್ಮಗಳು ಇರಲೇ ಇಲ್ಲ. ಮನು ಹೆಚ್ಚೆಂದರೆ ವರ್ಣಾಂಧ.

ಆದರೆ ಮನುಸ್ಮೃತಿ ಋಗ್ವೇದದ ಪುರುಷಸೂಕ್ತವನ್ನು ನೇರವಾಗಿ ಅವಲಂಬಿಸಿದೆ. ಮನು ಮನುಸ್ಮೃತಿಯಲ್ಲಿ ಪುರುಷಸೂಕ್ತದ ವರ್ಣ ವಿಭಜನೆಯನ್ನು , ಪುರುಷ ಪ್ರಧಾನ ಸಮಾಜವನ್ನು ಹೇಗೆ ಕಾಪಾಡಬೇಕು ಅಂತ ಬರೆದಿದ್ದಾನೆ.

ವೇದಗಳು ಜ್ನಾನದ ಸಾಗರ ಎಂಬುದು ಅವನ್ನು ಒಪ್ಪಿಕೊಳ್ಳಬೇಕು ಎನ್ನುವದಕ್ಕೆ ಸಮೀಕರಣವಲ್ಲ. ವೇದಗಳಲ್ಲಿ ಬೇಕಾದ್ದಲಕ್ಕಿಂತ ಬೇಡವಾಗಿದ್ದು ಹೆಚ್ಚಾಗಿತ್ತು ಅಂತಲೇ ಆದಿಶಂಕರರಿಂದೊಳಗೊಂಡು ವಿವೇಕಾನಂದರವರೆಗಿನ ದಾರ್ಶನಿಕರೆಲ್ಲ ವೇದಗಳ ಸಾರವಾದ ಉಪನಿಷತ್ತುಗಳನ್ನು ಅವಲಂಬಿಸಿದರು ಅಂತ ನಿಮ್ಮರಿವಿಗಿದೆ ಅಂತ ಅಂದುಕೊಂಡಿದ್ದೇನೆ.

ಇಂದಿನ ದಿನಗಳಲ್ಲಿ ವೇದಾಧ್ಯಯನಕ್ಕೆ ಹೋಗುವವನು ವೇದಗಳನ್ನು, ಸ್ಮೃತಿಗಳನ್ನು, ಅರಣ್ಯಕಗಳನ್ನು, ವೇದಾಂಗಗಳನ್ನು ಎಲ್ಲವನ್ನೂ ಕಲಿಯಬೇಕು. ಅಷ್ಟೇ ಅಲ್ಲ. ಸನಾತನ ಧರ್ಮದ ಕಲಿಕೆ ಮಾಡುವದಿದ್ದರೆ ನಂಬಿ ಕಲಿಯಬೇಕು. ಅದರಲ್ಲಿ ಹಂಸಕ್ಷೀರ ನ್ಯಾಯ ಸಾಧ್ಯವಿಲ್ಲ.

ಬಾಲ ಚಂದ್ರ ಶುಕ್ರ, 11/20/2009 - 11:35

ಪ್ರೀತಿಯ ಅನಾಮಿಕರೇ,
ಖಂಡಿತ ನಾನು ಮನುಸ್ಮೃತಿಯನ್ನು ಓದಿಲ್ಲ. ಆದರೆ ಮನು ವೈದಿಕ ಧರ್ಮಾನುಯಾಯಿ ಹಾಗೆಲ್ಲಾ ಬರಿದಿರಲಾರ ಎಂಬ ಸದ್ಭಾವನೆಯಲ್ಲಿ ನಾನು ಹಾಗೆ ಹೇಳಿದೆ ಅಷ್ಟೇ? ಕ್ಷಮೆ ಇರಲಿ
ಇನ್ನು ಪುರುಷ ಸೂಕ್ತದ ವಿಚಾರಕ್ಕೆ ಬಂದರೆ
ಬ್ರಾಹ್ಮಣೋಸ್ಯ ಮುಖಮಾಸೀತ್
ಬಾಹೂ ರಾಜನ್ಯಸ ಕೃತಃ
ಊರೂ ತದಸ್ಯ ಯದ್ವೈಶ್ಯಃ
ಪದ್ಭಾಗಂ ಶೂದ್ರೋ ಅಜಾಯತ

ಇದು ಪುರುಶ ಸೂಕ್ತದಲ್ಲಿರುವ ವರ್ಣಗಳ ವರ್ಣನೆ, ಅರ್ಥಾತ್
ಪುರುಶನ ಮುಖದಿಂದ ಬ್ರಾಹ್ಮಣನೂ, ತೋಳುಗಳಿಂದ ಕ್ಷತ್ರಿಯರೂ, ತೊಡೆಯಿಂದ ವೈಶ್ಯರೂ ಮತ್ತು ಪಾದಗಳಿಂದ ಶೂದ್ರರೂ ಜನ್ಮ ತಾಳಿದರು
ಅಂದರೆ ಮೂರೂ ವರ್ಣಗಳ ಪಾಲನೆಯ ಹೊಣೆ ಶೂದ್ರನದಾಗಿದೆ. ವೇದಗಳಲ್ಲಿ ಶೂದ್ರನ ಮಹಿಮೆಗೆ ಇಷ್ಟು ಉದಾಹರಣೆ ಸಾಕು ಎಂದು ಕೊಂಡಿದ್ದೇನೆ.

ಇನ್ನು ವೇದಾಧ್ಯಯನ ದ್ವಿಜರಿಗೆ ಮಾತ್ರ ಎಂದು ಹೇಳಿದ್ದೀರಿ. ನಿಮ್ಮ ಪ್ರಕಾರ ದ್ವಿಜ ಎಂದರೇನು?
ಜನ್ಮಾತೋ ಜಾಯತೇ ಶೂದ್ರ
ಸಂಸ್ಕಾರಾತ್ ದ್ವಿಜಯುಚ್ಯತೇ
( ಹುಟ್ಟಿನಿಂದ ಎಲ್ಲರೂ ಶೂದ್ರರೇ, ಸಂಸ್ಕಾರ ಪಡೆದವನು ಮಾತ್ರ ದ್ವಿಜನಾಗುತ್ತಾನೆ) ಎಂದು ನಮ್ಮ ವೇದಗಳಲ್ಲೇ ಹೇಳಲ್ಪಟ್ಟಿದೆ. ಇಲ್ಲಿ ಸಂಸ್ಕಾರ ಎಂಬ ಪದ ಮನುಷ್ಯನ ಸಂಸ್ಕೃತಿಗೆ, ನಡವಳಿಕೆಗೆ ಸಂಬಂಧ ಪಟ್ಟ ವಿಚಾರ ಎಂದು ಮತ್ತೆ ಹೇಳುವ ಅಗತ್ಯವಿಲ್ಲ ತಾನೇ?
ನಮ್ಮ ಋಷಿಗಳಾದ ವಿಶ್ವಾಮಿತ್ರ, ವಾಲ್ಮೀಕಿ, ವ್ಯಾಸ, ಇನ್ನೂ ಎಷ್ಟೋ ಮಹನೀಯರು ಹುಟ್ಟಿನಿಂದ ಬ್ರಾಹ್ಮಣರಲ್ಲ ಹಾಗೆಂದು ಅವರು ದ್ವಿಜರಲ್ಲವೇ?

ಪುರುಷ ಸೂಕ್ತವೆಂದರೆ ಪುರುಷ ಪ್ರಧಾನ ಸಮಾಜದ ವರ್ಣನೆಯಲ್ಲ ಪ್ರಕೃತಿಯ ಮೂಲ ಪುರುಷ( ಇದನ್ನು ಯಾವ ದೇವರಿಗೆ ಬೇಕಾದರೂ ಅನ್ವಯಿಸಿಕೊಳ್ಳಬಹುದು)ನ ವರ್ಣನೆ ಅಷ್ಟೇ.

ಇನ್ನು ವೇದಾಂಗಗಳ ವಿಚಾರಕ್ಕೆ ಬಂದರೆ ಆಯುರ್ವೇದ, ಸಂಗೀತ, ತಂತ್ರ, ಯೋಗಗಳ ವರ್ಣನೆ ಅಷ್ಟೆ. ಇದೆಲ್ಲಾ ಮನುಷ್ಯನ ಜೀವನಕ್ಕೆ ಉಪಯುಕ್ತವಲ್ಲವೇ?

ಸನಾತನ ಧರ್ಮದ ಕಲಿಕೆ ಮಾಡುವದಿದ್ದರೆ ನಂಬಿ ಕಲಿಯಬೇಕು. ಅದರಲ್ಲಿ ಹಂಸಕ್ಷೀರ ನ್ಯಾಯ ಸಾಧ್ಯವಿಲ್ಲ.
ಎಂದು ಹೇಳಿದ್ದೀರಿ. ಇದು ತಪ್ಪು ಕಲ್ಪನೆ
ಕುರಾನ್,ಬೈಬಲ್ ಸಮೇತ ಹಲವಾರು ಗ್ರಂಥಗಳೂ ಕಾಲ ಕಾಲಕ್ಕೆ ತಕ್ಕಂತೆ ಮಿದ್ರೆಶ್ ಗಳಿಗೊಳಗಾಗಿದೆ (ವೈಯುಕ್ತಿಕ ಹಸ್ತಕ್ಷೇಪ) ನಮ್ಮ ಸನಾತನ ಧರ್ಮವೂ ಹಾಗದರೆ ಏನು ತಪ್ಪು?
ಒಳ್ಳೆಯದನ್ನು ಎಲ್ಲಿಂದ ಬೇಕಾದರೂ ತೆಗೆದು ಕೊಳ್ಳಬಹುದಲ್ಲವೇ?

ಸಸ್ನೇಹ
ಬಾಲ ಚಂದ್ರ

Ullas Hindustani ಶುಕ್ರ, 11/20/2009 - 12:20

ವ್ಹಾ..ವ್ಹಾ.. ಬಾಲುರವರೆ ನಿಮ್ಮನ್ನು ಚರ್ಚೆಯಲ್ಲಿ ಸೋಲಿಸುವುದು ಸ್ವಲ್ಪ ಕಷ್ಟಾನೆ ಅಂತ ಅನಿಸುತ್ತೆ. ನೀವು ಕೆಲವೊಂದು ವಿಚಾರಗಳನ್ನು ಉದಾಹರಣೆ ಸಹಿತ ವಿವರಿಸುವ ರೀತಿ ಬಹಳ ಇಷ್ಟವಾಗುತ್ತೆ.
ನನಗೆ ವೇದ ಉಪನಿಷತ್ತುಗಳ ಬಗ್ಗೆ ಅಪಾರವಾದ ಭಕ್ತಿ , ಗೌರವ , ಹೆಮ್ಮೆ ಇದೆ. ಅವುಗಳು ಅನೇಕ ಶ್ರೇಷ್ಠ ಹಾಗು ನೈಜ ವಿಚಾರಗಳ ಆಗರ ಎಂಬ ಬಗ್ಗೆ ವಿಶ್ವಾಸವಿದೆ. ಆದರೆ ಅವುಗಳಲ್ಲಡಗಿರುವ ವಿಚಾರಗಳ ಬಗ್ಗೆ ಅಷ್ಟಾಗಿ ತಿಳಿದಿಲ್ಲ. ಆದ್ದರಿಂದ ಈ ಚರ್ಚಾಕೂಟದಲ್ಲಿ ಭಾಗವಹಿಸುತ್ತಿಲ್ಲ. ನಿಮ್ಮ ವಾದಕ್ಕೆ ನನ್ನ ನೈತಿಕ ಬೆಂಬಲ ಮಾತ್ರ ನೀಡ ಬಲ್ಲೆ.
ಗುಡ್ ಲಕ್....

ಬಾಲ ಚಂದ್ರ ಶುಕ್ರ, 11/20/2009 - 12:25

ತುಂಬಾ ಧನ್ಯವಾದಗಳು ಉಲ್ಲಾಸ

ಸಸ್ನೇಹ
ಬಾಲ ಚಂದ್ರ

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 11/20/2009 - 12:41

ಪ್ರಿಯ ಬಾಲಚಂದ್ರ,

ನೀವು ಮನುಸ್ಮೃತಿ ಓದಿಲ್ಲ. ಆದರೂ ಮನುಸ್ಮೃತಿಯಲ್ಲಿ ಶೂದ್ರರು ವೇದಾಧ್ಯಯನ ಮಾಡಬಾರದು ಅಂತ ಬರೆದಿಲ್ಲ. ಎಲ್ಲಿ ಹಾಗೆ ಬರೆದಿದ್ದಾರೆ ಅಂತ ತೋರಿಸಿ ಎಂಬ ಭಂಡ ವಾದ ಮಾಡಿ ನನ್ನ ಮುಖಕ್ಕೆ ಮಂಗಳಾರತಿ ಎತ್ತುವ ಪ್ರಯತ್ನ ಮಾಡುವದನ್ನು ಬಿಡುವದಿಲ್ಲ.

ಪುರುಷಸೂಕ್ತ ಏನು ಎಂಬುದೂ ನನಗೆ ಗೊತ್ತು. ಆದ್ದರಿಂದ ಪಾದದಿಂದ ಹುಟ್ಟಿದವನು ಉಳಿದ ಮೂರು ವರ್ಣಗಳನ್ನು ಪಾಲಿಸಬೇಕು ಎನ್ನುವ ನಿಮ್ಮ ಅರ್ಥ ಕಲ್ಪನೆ ನಾನು ಕಲಿತ ಸಂಸ್ಕೃತಕ್ಕೆ, ಋಗ್ವೇದದಲ್ಲಿ ಓದಿದ ಪುರುಷಸೂಕ್ತದ ವಿವರಣೆಗೆ ಹೊರತಾಗಿದ್ದು.ಕಾಲಿಂದ ಹುಟ್ಟಿದವನು ಪಾಲಿಸುವವನಾದರೆ ಕಾಲಿಗೆ ಹಾಕಿದ ಚಪ್ಪಲಿಯನ್ನು ಯಾರಾದರೂ ತಲೆಯ ಮೇಲೆ ಇಟ್ಟುಕೊಳ್ಳುತ್ತಾರೋ? ಜಗತ್ತಿನ ಕಲ್ಯಾಣಕ್ಕಾಗಿ ಪುರುಷನ ವಿವಿಧ ಭಾಗಗಳಿಂದ ಹುಟ್ಟಲ್ಪಟ್ಟ ವರ್ಣಗಳಲ್ಲಿ ಶೂದ್ರನು ಇತರ ಮೂರು ವರ್ಣಗಳ ಚಾಕರಿ ನಂಬಿಕೆಯಿಂದ ಗೊಣಗದೇ ಮಾಡಬೇಕು ಎಂದು ಋಗ್ವೇದ ಹಾಗೂ ಮನುಸ್ಮೃತಿ ಎರಡೂ ಹೇಳುತ್ತವೆ. ನೂರು ವರುಷದ ಕ್ಷತ್ರಿಯನು ಹತ್ತರ ಬ್ರಾಹ್ಮಣನನ್ನು ತನ್ನ ತಂದೆಯಂತೆ ನೋಡಬೇಕು ಎಂದೂ ಎನ್ನುತ್ತದೆ. ಪಾಲಿಸುವವನು ತಂದೆಯೋ ಚಾರಕನೋ? ಈ ದಾರಿ ತಪ್ಪಿಸುವ ವಾದಗಳನ್ನು ತೇಲಿಬಿಡಲು ಸರಿಯಾದ ಜನಗಳನ್ನು ನೀವು ಮೊದಲು ಹುಡುಕಬೇಕು.

ಇನ್ನು ನನ್ನ ದ್ವಿಜ ನಿಮ್ಮ ದ್ವಿಜ ಇಬ್ಬರೂ ಹೊಂದುತ್ತಾರೆ. ನಿಮಗೆ ಶೋಡಷ ಸಂಸ್ಕಾರಗಳು ಅದರಲ್ಲೂ ಉಪನಯನ ಮನುಷ್ಯನನ್ನು ದ್ವಿಜನನ್ನಾಗಿಸುತ್ತವೆ ಎಂಬುದು ಗೊತ್ತಿದೆ ಎನಿಸುತ್ತದೆ. ಆದರೆ ಶೂದ್ರರಿಗೆ ಪುರುಷಸೂಕ್ತದ ಪ್ರಕಾರ ಈ ಸಂಸ್ಕಾರಗಳು ಲಭ್ಯವಲ್ಲ ಎಂಬುದನ್ನು ಉದ್ದೇಶಪೂರ್ವಕವಾಗೇ ಮರೆಮಾಚುತ್ತೀರಿ ಎಂದೂ ಅನಿಸುತ್ತದೆ. ವಿಶ್ವಾಮಿತ್ರ ಕ್ಷತ್ರಿಯನಾದ್ದರಿಂದ ದಿಜನಾಗುವ ಅರ್ಹತೆ ಇದ್ದವ ಎನ್ನುವದು ನನಗೆ ಗೊತ್ತು. ಬೇಡರವನಾದ ವಾಲ್ಮೀಕಿ, ಬ್ರಾಹ್ಮಣ ಗಂಡಸು ಅಂಬಿಗ ಹೆಣ್ಣಿನ ಅನುಲೋಮ ಸಂಬಂಧದ ಫಲವಾದ ವ್ಯಾಸ ಹೇಗೆ ದ್ವಿಜರಾದರು ಅಂತ ನನಗೆ ಗೊತ್ತಾಗುವದಿಲ್ಲ. ನೀವು ಸತ್ಯವಾಗಲೂ ಅವರಿಬ್ಬರು ದ್ವಿಜರು ಅಂತ ಯಾವುದಾದರೂ ಗ್ರಂಥಗಳಲ್ಲಿ ಹೇಳಿದ್ದು ಓದಿದ್ದೀರಾ? ಅಥವಾ ಇದು ಇನ್ನೊಂದು ಭಂಡ ವಾದವೋ?

ಪುರುಷ ಸೂಕ್ತಕ್ಕೆ ಪುರುಷ ಪ್ರಧಾನ ಸಮಾಜಕ್ಕೆ ನಾನು ಸೇತುವೆ ಕಲ್ಪಿಸಿದ್ದೇನೆ ಎನ್ನುವ ರೀತಿಯಲ್ಲಿ ಮಾತನಾಡಿದ್ದೀರಿ. ಅರ್ಥವಾಗಲಿಲ್ಲ. ಬಿಡಿ.

ಇನ್ನು ನೀವು ವೇದಾಂಗಗಳ ಬಗ್ಗೆ ಹೇಳಿದ್ದರಲ್ಲಿ ತಕರಾರಿಲ್ಲ. ಆದರೆ ಸನಾತನ ಧರ್ಮದಲ್ಲಿ ಹಂಸ ಕ್ಷೀರ ನ್ಯಾಯಕ್ಕೆ ಸ್ಥಾನವಿಲ್ಲ. ಬೇಕಾದಷ್ಟು ತೆಗೆದುಕೊಳ್ಳುವದು ಉಳಿದನ್ನು ಬಿಡುವದು ಸಾಧ್ಯವಿಲ್ಲ. "ಸಂಶಯಾತ್ಮಾ ವಿನಷ್ಯತಿ" ಎನ್ನುವದನ್ನು ಕೇಳಿದ್ದೀರಿ ಎಂದುಕೊಂಡಿದ್ದೇನೆ.ಋಗ್ವೇದದ ಪ್ರಾಥಮಿಕ ಖಂಡಗಳೇ ಇದಕ್ಕೆ ಮೀಸಲಾಗಿವೆ.

ವೇದಾಧ್ಯಯನ ಯಾರಿಗಾದರೂ ಬೇಕೆನಿಸಿದರೆ ಅವಶ್ಯ ಮಾಡಬಹುದು. ಆದರೆ ಮಾಡುವವರು ನಂಬಿ ಮಾಡಿ ಎಂದಶ್ಟೇ ಹೇಳಬಯಸುತ್ತೇನೆ. ನಾಲ್ಕು ಸಹಸ್ರ ವರುಷಗಳ ಇತಿಹಾಸವಿರುವ ಧರ್ಮಸಾರವನ್ನು ನಿನ್ನೆ ಮೊನ್ನೆಯ ಬೈಬಲ್ಲು,ಕುರಾನುಗಳ ಮಾದರಿಯಲ್ಲಿ ಬೇಕಷ್ಟು ತೆಗೆದುಕೊಂಡು ಉಳಿದದ್ದನ್ನು ವರ್ಜಿಸಲು ಸಾಧ್ಯವಿಲ್ಲ.

ಚರ್ಚೆಯಾದ್ದರಿಂದ ಉದ್ದ ಉತ್ತರ ಬರೆದಿದ್ದೇನೆ. ಕ್ಷಮೆ ಇರಲಿ.

ಬಾಲ ಚಂದ್ರ ಶುಕ್ರ, 11/20/2009 - 13:26

ಪ್ರೀತಿಯ ಅನಾಮಿಕರೇ
ನಿಮ್ಮ ಉದ್ದವಾದ ಲೇಖನ ಖಂಡಿತಾ ಕ್ಷಮೆ ಕೇಳುವಂತಹ ಅಪರಾಧವೇನೂ ಮಾಡಿಲ್ಲ, ಬದಲಿಗೆ ಚಿಂತನೆಗೊಳಗಾಗುವಂತೆ ಮಾಡಿತು.
ದೇಹದ ವಿವಿಧ ಭಾಗಗಳಂತೆ ವರ್ಣಾಶ್ರಮ ಪದ್ದತಿ ಕೂಡ
ತಲೆ - ಬ್ರಾಹ್ಮಣ ( ಬ್ರಹ್ಮ ಜ್ಣ್ಯಾನ)
ತೋಳುಗಳು -ಕ್ಷತ್ರಿಯ ( ರಕ್ಷಣೆ )
ತೊಡೆಗಳು - ವೈಶ್ಯ ( ವ್ಯವಹಾರ )
ಕಾಲುಗಳು- ಶೂದ್ರ ( ಇದಿಷ್ಟನ್ನೂ ಹೊತ್ತು ನಿಂತಿರುವ ಅಂಗ)
ಅಂದರೆ ಶೂದ್ರರಿಲ್ಲದ ಸಮಾಜಕ್ಕೆ ಗೌರವವೇ ಇಲ್ಲ. ಶೂದ್ರ ಇವರೆಲ್ಲರಿಗೂ ಅನ್ನಧಾತ. ಅನ್ನಧಾತಾ ಸುಖೀಭವ ಎಂದು ಹೇಳಿದ್ದು ಕೂಡಾ ಇಂತಹಾ ಉದಾತ್ತ ಮನೋಭಾವದಿಂದಲೇ.
ಖಂಡಿತಾ ಇದು ದಾರಿ ತಪ್ಪಿಸುವ ಪ್ರಯತ್ನವಲ್ಲ. ಒಂದು ವಿಭಿನ್ನ ದೃಷ್ಟಿಕೋನವಷ್ಟೇ.
ಸಂಸ್ಕಾರಗಳೆಂದರೆ ಉಪನಯನ ಮುಂತಾದ ಶೋಡಷ ಸಂಸ್ಕಾರ ಎಂದು ಬರೆದಿದ್ದೀರಿ. ಉಪನಯನ ಎಂದರೆ ಅರ್ಥ ತಮಗೆ ಖಂಡಿತಾ ತಿಳಿದಿರುತ್ತದೆ.
(ಗುರುಗಳ) ಹತ್ತಿರಕ್ಕೆ ಕರೆದುಕೊಂಡು ಹೋಗುವುದು ಎಂದರ್ಥ. ಗುರುಗಳ ಹತ್ತಿರ ಹೋದವನು ವಿದ್ಯಾವಂತನಾಗುತ್ತಾನೆ.ವಿದ್ಯೆ ಕಲಿತವನು ಸಂಸ್ಕಾರವಂತನಾಗುತ್ತಾನೆ.
(ವಿದ್ಯಾ ದಧಾತಿ ವಿನಯಂ
ವಿನಯಾದ್ದಾತಿ ಪಾತ್ರತಾಂ
ಪಾತ್ರತ್ವಾದ್ದನ ಮಾಪ್ನೋತಿ
ಧನಾದ್ದರ್ಮಂ ತಥ ಸುಖಂ )
ಆ ವಿದ್ಯೆಯ ಮೂಲವೇ ವೇದಗಳು. ಶೂದ್ರರಿಗೆ ವಿದ್ಯಾಸಂಸ್ಕಾರವಿಲ್ಲ ಎಂದು ನೀವು ವಾದಿಸಬಹುದು. ಪುರಾಣದ ಜಾಬಾಲಿ ಸತ್ಯಕಾಮನ ಕಥೆ ನೀವು ಕೇಳಿಲ್ಲವೇ. ತೀರ ಇತ್ತೀಚೆಗೆ ಮಡಿವಂತರ, ಕರ್ಮಠರ ಸಂಪ್ರದಾಯಗಳು ಇದರ ಅರ್ಥ ತಿರುಚಿ ಶೂದ್ರರನ್ನು ವಿದ್ಯೆಯಿಂದ ದೂರಮಾಡಿತ್ತು. ಅದರ ಬಗ್ಗೆ ಖಂಡಿತಾ ನನಗೂ ವಿಷಾದವಿದೆ. ಆದರೆ ಒಂದು ಸಮಾಜದಲ್ಲಿ ಕೊಳೆ ಕಾಣಿಸಿದಾಗ ಅದನ್ನು ತೊಳೆಯುವ ಕೆಲಸ ಪ್ರಜ್ನಾವಂತರಾದವರಿಂದ ಆಗಬೇಕು. ಅದುಬಿಟ್ಟು ಕೊಳೆಯನ್ನು ದೂಷಿಸುವ ಕೆಲಸವೇ ನಮ್ಮ ಕರ್ತವ್ಯವೆಂದು ತಿಳಿದರೆ ಹೇಗೆ? ಪ್ರಪಂಚದ ಯಾವ ಧರ್ಮವೂ ಈ ಕೊಳೆಯಿಂದ ಮುಕ್ತವಾಗಿಲ್ಲ.

ದ್ವಿಜರು ಎಂದರೆ ಎರಡನೇ ಬಾರಿ ಹುಟ್ಟಿದವರು ಎಂದರ್ಥ. ಮೊದಲು ತಾಯಿ ಹೊಟ್ಟೆಯಿಂದ ನಂತರ ಸಂಸ್ಕಾರದಿಂದ. ವ್ಯಾಸ, ವಾಲ್ಮೀಕಿ, ವಿಶ್ವಾಮಿತ್ರರೂ ಸಂಸ್ಕಾರವಂತರಾಗಿದ್ದರಿಂದಲೇ (ಜ್ನಾನವಂತರಾಗಿದ್ದರಿಂದ) ಅವರಿಗೆ ನಮ್ಮ ಧರ್ಮದ ಸ್ತಂಭಗಳನ್ನು ರಚಿಸಲು ಸಾಧ್ಯವಾಯಿತು
ಉದಾಃ- ಗಾಯಿತ್ರೀ ಮಂತ್ರ, ಭಗವದ್ಗೀತೆ, ಮಹಾ ಭಾರತ, ರಾಮಾಯಣ ಇತ್ಯಾದಿ
ಇಂದಿಗೂ ವೈದಿಕ ಧರ್ಮ ಇವುಗಳ ತಳಹದಿಯ ಮೇಲೇ ಅಲ್ಲವೇ ನಿಂತಿರುವುದು.
ಸನಾತನ ಧರ್ಮದಲ್ಲಿ ಹಂಸ ಕ್ಷೀರ ನ್ಯಾಯಕ್ಕೆ ಸ್ಥಾನವಿಲ್ಲ. ಬೇಕಾದಷ್ಟು ತೆಗೆದುಕೊಳ್ಳುವದು ಉಳಿದನ್ನು ಬಿಡುವದು ಸಾಧ್ಯವಿಲ್ಲ ಎಂದು ಹೇಳಿದ್ದೀರಿ.
ಇಲ್ಲಿಗೆ ನಮ್ಮ ಚಿಂತನಾಲಹರಿಗೊಂದು ಪ್ರಬುದ್ದತೆ ತಂದುಕೊಳ್ಳುವುದು ಅವಶ್ಯ. ಅಂಧರಂತೆ ಇದ್ದುದ್ದೆಲ್ಲಾ ನಂಬಬಹುದು ಅಥವಾ ನಮಗೆ ಬೇಕಾದ್ದನ್ನು ಮಾತ್ರ ನಂಬಬಹುದು. ಇರುವುದೆಲ್ಲಾ ಬಿಟ್ಟು ಸಾಂಸ್ಕೃತಿಕ ಕ್ರಿಯಾಹೀನರೆಂದು ಕರೆದು ಕೊಳ್ಳುವುದಕ್ಕಿಂತಾ ಇದು ಉತ್ತಮವಲ್ಲವೇ.
ಮನು ಸ್ಮೃತಿಯಲ್ಲಿದ್ದ ಬಾಲ್ಯವಿವಾಹ, ಸತೀ, ಕೇಶಮುಂಡನ, ಬಹಿಷ್ಕಾರ ಮುಂತಾದ ಹೀನ ಆಚರಣೆಗಳೆಲ್ಲಾ ಎಂದೋ ಅಳಿಸಿ ಹೋದರು ವೈದಿಕ ಧರ್ಮ ಇನ್ನೂ ಜೀವಂತವಾಗಿರುವುದು ಇದಕ್ಕೆ ಸಾಕ್ಷಿ ಅಲ್ಲವೇ?

ಕೊನೆಯದಾಗಿ ಒಂದು ಮಾತು
ಒಂದು ಶ್ಲೋಕ ಈ ಅರ್ಥವನ್ನು ಹೇಳುತ್ತದೆ
ಹದಿನೆಂಟು ಪುರಾಣಗಳು, ನಾಲ್ಕುವೇದಗಳು ಮತ್ತು ಎಲ್ಲಾ ಉಪನಿಷತ್ತಿನ ಸಾರ ಇಷ್ಟೇ,
ಪರೋಪಕಾರಯ ಪುಣ್ಯಾಯ ಪಾಪಯ ಪರಪೀಡನಂ

ಜಗತ್ತಿನ ಎಲ್ಲಾ ಧರ್ಮದ ಸಾರವೂ ಇಷ್ಟೇ. ಇಂತಹ ಧರ್ಮವುಳ್ಳ ಸಮಾಜಕ್ಕೆ ನಾವ್ಯಾಕೆ ಪ್ರಯತ್ನಿಸಬಾರದು, ವೇದಗಳನ್ನು ಮರೆಯದೇ ಪ್ರಯತ್ನಿಸುವುದು ಸಾಧ್ಯವಿಲ್ಲವೇ

ಸಸ್ನೇಹ
ಬಾಲ ಚಂದ್ರ

ಯಾರಾದರೇನು? (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 11/16/2009 - 05:39

ವೇದಗಳನ್ನು ಓದಬೇಕು ಎಂದು ಅಪೇಕ್ಷೆ ಪಡುವವರು ಸಮಿತ್ಪಾಣಿಯಾಗಿ, ಯೋಗ್ಯ ಗುರುಗಳ ಹತ್ತಿರ ಹೋಗಲು ತಯಾರಿದ್ದಾರಾ? ಈ ಹಿಂದೆಯೇ ಸತ್ಯಕಾಮ ಜಾಬಾಲಿಯ ಕಥೆಯನ್ನು ಯಾರೋ ಒಬ್ಬರ ಪ್ರತಿಕ್ರಿಯೆಯಲ್ಲಿ ಓದಿದ ನೆನಪಿದೆ. ನೈಜ ಆಸಕ್ತಿಯನ್ನು ತೋರಿಸಿದರೆ ವೇದಗಳನ್ನು ಕಲಿಸುವ ಗುರುಗಳಿಗೆ ಬರವಿಲ್ಲ.

ಸತ್ಯ (ಪ್ರಮಾಣಿಸಲ್ಪಟ್ಟಿಲ್ಲ.) ಧ, 11/18/2009 - 20:32

ಪ್ರವೀಣ್ ಸೂಡರವರು ತಮ್ಮ ಭಯಂಕರ ವಿಚಾರಗಳನ್ನ ದರಿದ್ರ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ... ಇಷ್ಟು ದಿನಗಳ ನಿನ್ನ ವಾದ ಗಮನಿಸಿ ನಿನಗೆ ಏಕವಚನವೇ ಸರಿ ಅಂತ ತೀರ್ಮಾನ ಮಾಡಿದ್ದೀನಿ... ಏನಪ್ಪಾ ಸೂಡ, ವೇದಗಳನ್ನ ಓದಿದಿಯೋ?? ಹೋಗಲಿ , ವೇದಗಳ ಬಗ್ಗೆ ಏನು ಗೊತ್ತು ನಿಂಗೆ?" ನಮ್ಮ ಬಸವಣ್ಣನವರ ವಚಗಳಿರಬಹುದು ಅಥವಾ ಸರ್ವಜ್ಞನ ತ್ರಿಪದಿ ಇರ್ಬೋದು, ಡಿ ವಿ ಜಿ ಕಗ್ಗಗಳಿರಬಹುದು ಇದು ವೇದಕ್ಕೆ ತುಂಬಾ ವಿರುದ್ಧವಾಗಿದೆ ಅನ್ಸಲ್ವೇ? ವೇದಕ್ಕಿಂತ ನಮ್ಮ ಜೀವನಕ್ಕೆ ಅವಶ್ಯವಾದ ಜ್ಞಾನ ಇದ್ರಲ್ಲಿ ಇಲ್ವಾ? " ಅಂತ ಬೊಗಳೆ ಬಿಡ್ತೀಯಲ್ಲ, ಯಾವತ್ತಾದ್ರು ವೇದಗಳ ಒಳಗೇನಿದೆ ಅಂತ ತಿಳ್ಕೊಳೋ ಪ್ರಯತ್ನಾ ಆದ್ರು ಮಾಡಿದೀಯ? ಬಸವಣ್ಣ, ಸರ್ವಜ್ಞ ಇವರೆಲ್ಲ ಹೇಳಿರೋದನ್ನ ಎಷ್ಟೋ ವರ್ಷಗಳ ಮೊದಲೇ ವೇದಗಳು ತಿಳಿಸಿಕೊಟ್ಟಿವೆ.. ಕೂಪ ಮಂಡೂಕದ ಥರ ಯಾಕೆ ಆಡ್ತಿಯೋ ಸೂಡ? ನಿನ್ನದೇ ವಿಚಾರಗಳನ್ನ ಹಿಡ್ಕೊಂಡು ಇದೇ ಸರಿ, ಇದೇ ಸರಿ ಅಂತ ಬಡ್ಕೊಬೇಡ.... ಥೂ ನಿನ್ನ ಅಲ್ಪಜ್ಞಾನಕ್ಕೆ...

praveen sooda ಧ, 11/18/2009 - 21:23

ಸತ್ಯ ಅವರೇ ನಿಮ್ಮ ವೇದಾಜ್ನಾನನ ಪುಷ್ಟೀಕರಿಸೋ ಒಂದು ಬಸವಣ್ಣನವರ ವಚನ ಕಳಿಸಿ ನೋಡನ ನಿಮ್ಮ ವೇದಾಜ್ನಾನ ಜಗ್ಗಜಾಹೀರಗಲಿ...

praveen sooda ಧ, 11/18/2009 - 20:56

ಸತ್ಯ ಅವ್ರೆ ನಿಮ್ಗೆಲ್ಲ ನಂ ತೇಜಸ್ವಿ ಆಂಥೋರೆ ಸರಿ ಕಣ್ರೀ. ಇದುವರೆಗೂ ನಂ ದೇಶ ಹೆಗ್ ಬಂತು ಅನ್ನೋದು ತಿಳಿದು ತಿಳಿದು ಹೇಳಾತ ಇದಿರೋ ಅಥವಾ ಪ್ರವೀಣ್ ಸೂಡನ ವಿರೋಧೀಸ್ ಬೇಕು ಅಂತ ಹೇಳ್ತಾ ಇದಿರೋ ಗೊತ್ತಿಲ್ಲ. ಆದ್ರೂ ಒಂದಂತೂ ನಿಜ ನಮ್ಗೆ ಕುವೆಂಪು ತೇಜಸ್ವಿ, ಮೂರ್ತಿರಾಯರು ಕಾರಂತರು ಎಕವಚನನ ಎಲ್ಲಿ ಅಂದ್ರೆ ಅಲ್ಲಿ ಬಳಸ್ಬೊದು ಅಂತ ಹೇಳ್ಕೊಟ್ಟಿಲ್ಲ. ಆದ್ರೆ ನಿಮ್ ವೇದ ಗ್ರಂಥಗಳಲ್ಲಿ ಇಷ್ಟೆಲ್ಲಾ ಇದೆ ಅಂತ ತಿಳಿದು ನಾನು ಧಾನ್ಯನಾದೆ... . ನೀವು ಅದನ್ನೇ ನಂಬಿ ನಾನು ಇವರೇನೆಲ್ಲ ನಂಬ್ತೀನಿ. ಕೀಪ್ ಇಟ್ ಅಪ್ ಸತ್ಯ ಅವರೇ ನಿಮ್ಮ ವೇದ ಜ್ಞಾನ ಹೀಗೆ ಮುಂದುವರೆಯಲಿ. ಜನ ಅಂತೂ ಹೀಗೆ ಇರಲ್ಲರಿ ಮತ್ತೆ ತಿರುಗಿ ಬಿಲ್ತಾರೆ ಆಗ ಏನಪ್ಪಾ(ಏಕವಚನ ಅದೇ ನಿಮ್ ವೇದ ಹೇಳಿದ್ದು) ಅಂದ್ರೆ ತಗೊಳಪ್ಪಾ ಅಂತಾರೆ.. ಸ್ವಲ್ಪ ಜಾಗಾರುತರಾಗಿರಿ.. ನಿಮ್ಮ ಆಸ್ತಿಕತೆಗೆ ಉದಾಹರಣೆ ಭಗತ್ ಸಿಂಗ್ ಬರೆದ ನಾನೇಕೆ ನಾಸ್ತಿಕ ಒಮ್ಮೆ ಓದಿ. ಆದ್ರೆ ಆಮೇಲೆ ನಮ್ಮ ಭಗತ್ ಸಿಂಗ್ ಅವರನ್ನು ಲೊ ಲೇ ಅಂತ ಸಂಬೋದಿಸೋ ವೇದಾಜ್ನಾನ ಬಳಸಬೇಡಿ. ದಯವಿಟ್ಟು.

ullas (ಪ್ರಮಾಣಿಸಲ್ಪಟ್ಟಿಲ್ಲ.) ಧ, 11/18/2009 - 22:55

ಲೋ ಸೂಡಾ.. ನೀನೊಬ್ಬ ಅಧ್ಹೇಗೆ ಹಿಂದೂ ಧರ್ಮದಲ್ಲಿ ತಪ್ಪಿ ಹುಟ್ಟಿದಿಯೋ ಗೊತ್ತಾಗ್ತಾ ಇಲ್ಲ. ಎಲ್ಲಾ ಧರ್ಮಗಳಲ್ಲಿರುವಂತೆ ಹಿಂದೂ ಧರ್ಮದಲ್ಲಿಯೂ ಕೆಲವೊಂದು ಅನಿಷ್ಟ ಪದ್ದತಿಗಳಿವೆ ಅದನ್ನು ಕಂಡಿಸುವ ನೀನು ವೇದಗಳನ್ನು ಆಧಾರವಾಗಿಟ್ಟು ಕೊಂಡು ವಾದಿಸಿದರೆ ನಿನ್ನ ವಾದಕ್ಕೆ ಆನೆ ಬಲ ಬರುತ್ತಿತ್ತು. ಅಂತಹುದರಲ್ಲಿ ನೀನು ಆ ವೇದಗಳ ವಿರುದ್ದವಾಗಿಯೇ ಮಾತನಾಡುತ್ತಿದ್ದೀಯ. ನೀನೆಂಥಾ 'ತಿಕ್ಕಲ' ಇದ್ದಿರಬಹುದು ಅಂತ ತಿಳಿಯಲು ಇದಕ್ಕಿಂತ ಸಾಕ್ಷಿ ಬೇಕಾ...?

ಪೋರ (ಪ್ರಮಾಣಿಸಲ್ಪಟ್ಟಿಲ್ಲ.) ಧ, 11/18/2009 - 23:44

ಇದುವರೆಗೆ ಕೆಲವು ಚರ್ಚೆಗಳಲ್ಲಿ ಭಾಗವಹಿಸಿದ ಶ್ರೀ ಪ್ರವೀಣ ಸೂಡ ಅವರ 'ಭಯಂಕರ' ವಾದಮಂಡನೆಯನ್ನು ನೋಡಿ ನಿಬ್ಬೆರಗಾಗಿದ್ದೇನೆ. ಶ್ರೀ ಸೂಡ ಅವರೆ, ಸತ್ಯ ಅವರ 'ವೇದಾಜ್ನಾನ' ನ ಪುಷ್ಟೀಕರಿಸುವ ಬಸವಣ್ಣನ ವಚನ ಒಂದನ್ನು ಉದಾಹರಿಸಕ್ಕೆ ಕೇಳಿದ್ದೀರಲ್ಲ, ಹಾಗೆಂದರೆ ಅರ್ಥವೇನು? ಸತ್ಯ ಅವರ 'ವೇದಾಜ್ನಾನ'ವೋ ಅಥವಾ ಒಟ್ಟು ವೇದಗಳು ಕೊಡು ತಿಳಿವೋ? ಇರಲಿ, ಕೆಲವು ಉದಾಹರಣೆಗಳನ್ನು ಗಮನಿಸಿ
ಮೂಲಃ ಯಜುರ್ವೇದ
ಸತ್ಯಂ ವದ, ಧರ್ಮಂ ಚರ, ಸ್ವಾಧ್ಯಾಯಾತ್ ಮಾ ಪ್ರಮದ..
ಮೂಲಃ ಈಶಾವಾಸ್ಯ ಉಪನಿಷತ್ತು
ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್
ತೇನ ತ್ಯಕ್ತೇನ ಭುಂಜೀಥಾಃ ಮಾ ಗೃಧಃ ಕಸ್ಯಸ್ವಿದ್ಧನಂ
ಬಸವಣ್ಣನವರ ವಚನವೊಂದನ್ನು ಗಮನಿಸಿಃ
ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ ..
ತನ್ನ ಬಣ್ಣಿಸಬೇಡ ಇದಿರೆ ಹಳಿಯಲು ಬೇಡ...ನೀವು ಕೇಳಿದ್ದು ಇದನ್ನೇ ಎಂದುಕೊಂಡಿದ್ದೇನೆ. ವಚನಗಳನ್ನು ಕ್ಲಿಷ್ಟ ಸಂಸ್ಕೃತದಲ್ಲಿರುವ ಅರಿವನ್ನು ಎಲ್ಲರಿಗೂ ಅರ್ಥವಾಗುವ ಆಡುಭಾಷೆಯಲ್ಲಿ ಹೇಳುವ ಪ್ರಯತ್ನ ಎನ್ನುವುದನ್ನು ಮರೆಯಬೇಡಿ.

ನಿಮ್ಮ ವಿತಂಡವಾದಕ್ಕೆ 'ಇರಿಟೇಟ್' ಆದ ಕೆಲವರು ನಿಮಗೆ ಏಕವಚನ ಪ್ರಯೋಗಿಸಿದರೆಂದು 'ಅದನ್ನು ವೇದಗಳು ಹೇಳಿವೆ' ಎನ್ನುವ ಅಸಾಧಾರಣ ಬುದ್ಧಿವಂತಿಕೆ ತೋರಿಸಬೇಡಿ. ಒಬ್ಬ ಪ್ರವೀಣ್ ಸೂಡ ಅವರಿಗೆ ಆಗುವ ಮಾನಾಪಮಾನಗಳು ಒಂದು ಚರ್ಚೆಯ ಗಹನತೆಯನ್ನು ಗೌಣ ಮಾಡುವುದು ಬೇಡ. ನೀವು ಕೈಗೆತ್ತಿಕೊಂಡು ಕೊಂಡಾಡುವ 'ಮಂಕುತಿಮ್ಮನ ಕಗ್ಗ' ಬರೆದ ಡಿ ವಿ ಜಿ ಒಬ್ಬ ವೇದ ವಿದ ಬ್ರಾಹ್ಮಣ ಎಂಬುದನ್ನು ಮರೆಯಬೇಡಿ. ಬ್ರಾಹ್ಮಣ ಪಾರಮ್ಯವನ್ನು ಖಂಡಿಸಿದ ಕುವೆಂಪು ಅಧ್ಯಾತ್ಮಿಕ ಆಸರೆಗೆ ವೈದಿಕ ಪಂಥವೇ ಆದ ಶ್ರೀ ರಾಮಕೃಷ್ಣಾಶ್ರಮಕ್ಕೆ ಏಕೆ ಒಲಿದರು ಎನ್ನುವುದು ನಿಮಗೆ ಅರ್ಥವಾಗಿದೆಯೆ? ದೈವಭಕ್ತಿಯನ್ನೂ ಅದರ ಹೆಸರಿನಲ್ಲಿ ನಡೆಯುವ ಢಂಭಾಚಾರವನ್ನೂ ಖಂಡಿಸಿದ ಕಾರಂತರು ಯಕ್ಷಗಾನದ ಪ್ರಯೋಗಗಳನ್ನು ನಡೆಸುವಾಗ ಅದರಲ್ಲಿ ಪುರಾಣದ ಕಥೆಗಳನ್ನು ಅವು ಕೊಡುವ ಒಳ್ಳೆಯ ಸಂದೇಶಗಳಿಗಾಗಿ ಬಳಸಲು ಹಿಂಜರಿಯಲಿಲ್ಲ ಎನ್ನುವುದನ್ನು ನೆನಪಿಡಿ.

ಕಡೆಯದಾಗಿ, ನಿಮ್ಮ ವಿಚಾರವನ್ನು ಒಳ್ಳೆಯ ವ್ಯಾಕರಣಬದ್ಧ ಕನ್ನಡ ಬರೆದರೆ ಇಂತಹ ಸಮೂಹದಲ್ಲಿ ನಿಮ್ಮ ಮರ್ಯಾದೆ ಹೆಚ್ಚುತ್ತದೆ ಎನ್ನುವುದನ್ನು ನೆನಪಿಡಿ, ಬರೆಯುವುದು ಕುಲಗೆಟ್ಟ ಭಾಷೆಯಲ್ಲಿ, ಅಭಿವ್ಯಕ್ತಿ ಅರೆಬೆಂದ ವಿಷಯಗಳಲ್ಲಿ, ಹೀಗಿರುವಾಗ,' ನನಗೆ ಗೊತ್ತಿರುವುದೇ ಸತ್ಯ , ಗೊತ್ತಿರುವಷ್ಟೆ ಸತ್ಯ, ಅದನ್ನು ಮೀರಿದ ವಿಷಯವಿಲ್ಲ ' ಎನ್ನುವ ಅಹಂಕಾರವೇಕೆ?

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 11/19/2009 - 07:24

yaaradu dvg avaranna brahmana andiddu. huttiddu brahmanaraage huttiddu nija aadre endigu jaatiyatena brahmana neetina oppirlilla, veda dalli irodella pollu annodu tappu. aadare avaru helida haage varadakshine mattu jati huttige veda kaarana e varnashrana irodu vedadalle alva? ramakrishna mata veda panditya iro jaga sari. aadare avaru vedana tiruchiddu kaDame. basavannanora vachanagalu saha intha aneka anishta paddatina kandisidare.. haage kelavu jana illi vaada maaDo taalme agli athava itarara opinion na sahiskolo shakti agli illa. amele praveen avare nimma bhagath singh udaharane mattu tejasvi udaharanegalu oppo anthaddu..amele karantharu purana kathegalanna yakshnaganakke alavaDisida maatrakke avaru vedapriyaru, athava avaranna brahmanaru annodu tappu. ದೈವಭಕ್ತಿಯನ್ನೂ ಅದರ ಹೆಸರಿನಲ್ಲಿ ನಡೆಯುವ ಢಂಭಾಚಾರವನ್ನೂ ಖಂಡಿಸಿದ ಕಾರಂತರು brahmana virodhugalagiddaru. vaadadalli tamma tamma talmena kaledukollodu tumba tappu..

ಬಾಲ ಚಂದ್ರ ಗುರು, 11/19/2009 - 13:56

ಭೇಷ್
ಸರಿಯಾಗಿ ಹೇಳಿದ್ದೀರಿ ಪೋರ

ಸಸ್ನೇಹ
ಬಾಲಚಂದ್ರ

ಉಮಾಶಂಕರ ಬಿ.ಎಸ್ ಗುರು, 11/19/2009 - 08:28

ಪ್ರಿಯ ಸೊಡ ಮತ್ತು ಇತರ ವಿಸ್ಮಯ ನಗರಿಗರೇ,
ದಯವಿಟ್ಟು ನಿಮ್ಮ ಚರ್ಚೆ ವಿಷಯ ಬಿಟ್ಟು ಹಳಿತಪ್ಪದಿರಲಿ, ವಿಷಯದ ಬಗ್ಗೆ ತಿಳಿದಷ್ಟ್ಅನ್ನು ಮಾತ್ರ ಚರ್ಚೆ ಮಾಡಿ ಪುಣ್ಯ ಕಟ್ಟಿಕೊಳ್ಳಿ. ಜಾತಿಗಳ ಬಗ್ಗೆ ಚರ್ಚಿಸಿ ಬೇರೆಯವರಿಗೆ ನೋವುಂಟುಮಾಡಬೇಡಿ. ಪ್ಲೀಸ್ ...........

  • 7504 views