Skip to main content

ಮನಸಾರೆ- ಜಾಣತನದಿಂದ ಕದ್ದ ಮಾಲು

ಬರೆದಿದ್ದುOctober 15, 2009
23ಅನಿಸಿಕೆಗಳು

ತೀರ ಇತ್ತೀಚೆಗೆ ಮನಸಾರೆ ಎಂಬ ಕನ್ನಡ ಸಿನಿಮಾ ಬಿಡುಗಡೆಯಾಗಿ
ಅದರ ಬಗ್ಗೆ ವಿಮರ್ಶೆ ಕೂಡ ವಿಸ್ಮಯದಲ್ಲಿ ಬಂದಿತ್ತು. ಆದರೆ ಅದರ ಬಗ್ಗೆ ಹೇಳಲು ಇನ್ನೂ ಒಂದೆರೆಡು ಮಾತುಗಳಿವೆ

ಮನಸಾರೆ ಚಿತ್ರ ಶುರುವಾಗುವ ಮೊದಲು ಪರದೆಯ ಮೇಲೆ ಹೀಗೊಂದು ಬರಹ ಮಿಂಚುತ್ತದೆ.
ಈ ಚಿತ್ರದಲ್ಲಿ ಬರುವ ಎಲ್ಲಾ ಪಾತ್ರಗಳು ಕಾಲ್ಪನಿಕ.ಯಾವುದೇ ಸತ್ಯ ಘಟನೆ ಹಾಗೂ ವ್ಯಕ್ತಿಗೆ ಸಂಬದ್ದಿಸಿದ್ದಲ್ಲ
ಕನ್ನಡದ ವೀಕ್ಷಕರು ಯೋಗರಾಜ್ ಭಟ್ ಅವರು ಅಂದುಕೊಂಡಷ್ಟು ಮೂರ್ಖರಲ್ಲ,

ಏಕೆಂದರೆ
ಅವರ ಚಿತ್ರದ ಬಹಳಷ್ಟು ಅಂಶಗಳು ಪಾಲೋ ಕೊಹೆಲ್ಲೋರವರ veronica desids to die ಎಂಬ ಕೃತಿಯನ್ನಾಧರಿಸಿದೆ. ಅಷ್ಟೇ ಅಲ್ಲ ಈ ಕೃತಿ ಕನ್ನಡದಲ್ಲಿ ವೆರೂನಿಕಾ ಎಂಬ ಹೆಸರಿನಲ್ಲಿ ಆಲೂರು ಚಂದ್ರಶೇಖರ್ ಅವರಿಂದ ಸೊಗಸಾಗಿ ಅನುವಾದಿಸಲ್ಪಟ್ಟಿದೆ.

ಇಷ್ಟೇ ಅಲ್ಲ ಈ ಚಿತ್ರದಲ್ಲಿ ಆಂಟೆನ್ ಚೆಕಾಫ್ ನ "ವಾರ್ಡ್ ನಂಬರ್ 6 " ಹಾಗೂ 1994 ರಲ್ಲಿ ಬಿಡುಗಡೆಯಾದ ಇಂಗ್ಲೀಷ್ ಚಲನಚಿತ್ರ ಶ್ವಶಾಂಕ್ ರಿಡಂಪ್ಷನ್ನ ಬಿಂಬ ಕೂಡ ಎದ್ದು ಕಾಣುತ್ತದೆ
ಆದರೆ ಚಿತ್ರದುದ್ದಕ್ಕೂ ವೆರೂನಿಕಾದ ಪ್ರಭಾವವೇ ಹೆಚ್ಚು.

ಚಿತ್ರದಲ್ಲಿ ಬಹಳ ಜಾಣತನದಿಂದ ವೆರೂನಿಕಾದ ಛಾಯೆ ಬರದಂತೆ ಶ್ರೀ ಯೋಗರಾಜ್ ಭಟ್ ರವರು ಕಾಳಜಿ ವಹಿಸಿದ್ದರೂ, ವೆರೂನಿಕಾದ ಪ್ರಭಾವದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ
ಕೃತಿಯ ಬಹಳಷ್ಟು ಅಂಶಗಳು ಸಿನಿಮಾದಲ್ಲಿ ಕೂಡ ಕಾಣಿಸಿಕೊಳ್ಳುವುದು ಕೇವಲ ಕಾಕತಾಳೀಯವಾಗಿರುವುದು ಸರ್ವಥಾ ಅಸಾಧ್ಯ.

ಕನ್ನಡದ ಕೆಲವೇ ಸೃಜನಶೀಲ ನಿರ್ದೇಶಕರಲ್ಲಿ ಯೋಗರಾಜ್ ಭಟ್ ಕೂಡ ಒಬ್ಬರು.( ಮಿಕ್ಕವರೆಲ್ಲಾ ನಾಲ್ಕೈದು ತೆಲಗು, ತಮಿಳು ಸಿನಿಮಾಗಳ ಎಂಜಲನ್ನು ತೆಗೆದು ಹೊಚ್ಚ ಹೊಸ ಕನ್ನಡ ಸಿನಿಮಾ ಮಾಡಿ ಕನ್ನಡಿಗರಿಗೆ ಮೃಷ್ಟಾನ್ನದಂತೆ ಉಣಬಡಿಸುತ್ತಿರುವುದು ಗೊತ್ತಿರುವ ವಿಷಯವೇ) ಕನಿಷ್ಟ ಪಕ್ಷ ಇಂತಹ ಕೃತಿಯಿಂದ ಸ್ಪೂರ್ತಿ ತೆಗೆದುಕೊಂಡಿದ್ದೇನೆ ಎಂದು ಹೇಳುವ ಔದಾರ್ಯವನ್ನಾದರೂ ತೋರಬಹುದಿತ್ತು. ಆದರೆ ಕಂಡವರ ಕೃತಿ ಕದ್ದು -ಕಥೆ-ಚಿತ್ರಕಥೆ-ಸಂಭಾಷಣೆ ------ಯೋಗರಾಜ್ ಭಟ್ ಎಂದು ಹೇಳಿಕೊಳ್ಳುವವರಿಗೆ ಏನೆನ್ನ ಬೇಕು

ಸಂವೇದನಾ ದಾರಿದ್ರ್ಯವೇ?
ಅಥವಾ
ಕಳ್ಳ ನಿರ್ದೇಶಕ/ಕಥೆಗಾರರ ಪಟ್ಟಿಗೆ ಇವರೂ ಸೇರಿ ಬಿಟ್ಟರೆ?

ತೀರ್ಮಾನ ನಿಮ್ಮದು

ಸಸ್ನೇಹ
ಬಾಲ ಚಂದ್ರ

ಲೇಖಕರು

ಬಾಲ ಚಂದ್ರ

ಹೊಳೆ ದಂಡೆ

ನನ್ನ ಲೇಖನಗಳನ್ನು ಓದಿ
ನನ್ನ ಬಗ್ಗೆ ನಿಮಗೇ ತಿಳಿಯುತ್ತೆ.

ಅನಿಸಿಕೆಗಳು

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 10/17/2009 - 14:09

ಮೊನ್ನೆ ಇಂದ್ರಜಿತ್ ಮಹಾಶಯರು ಹೀಗೆ ಮನಸಾರೇ ಅಲ್ಲಿ ಏನು ಇಲ್ಲ ಬಾರಿ ಡೈಲಾಗ್ ಅಷ್ಟೇ ಅಂತ ಬರ್ದಿದ್ರೂ... ಆದ್ರೆ ಆಟ ಏನು ಅಂತ ಎಲ್ಲರಿಗೂ ಗೊತ್ತಿರೋದೇ.. ತುಂಟಾಟ ನಾನ್‌ಸೆನ್ಸ್ ಗಳು ಮಾಡೋ ಸಿಮ್‌ನೆಮಾ, ಇನ್ನೂ ಮೊನಲಿಸ ಅದು ಆದ್ಧೂರಿ ಸೆಕ್ಸ್ ಸಿನಿಮಾ ಆನ್ಬೋದು... ಇನ್ನೂ ಐಶ್ವರ್ಯ ಓ ಪರ್ವಾಗೀಲ್ವೇ ಅನ್ಕೊನ್ಡಿದ್ದೆ ಆಮೇಲೆ ಗೊತ್ತಾಯ್ತು ಸೇಮ್ ತೋ ಸೇಮ್ ಗಜಿನಿ ಇಂದ ಇಳಿಸಿದ ಹಾಗಿದೆ.. ಇಂಥ ದೊಡ್ಡ ಮನುಷ್ಯ ಯೋಗ್ರಜ್ ಭಟ್ ಬಗ್ಗೆ ಬರೀತಾನೆ... ಇರ್‍ಲಿ ಈಗ ಇಲ್ಲಿರೋ ವಿಷ್ಯಕ್ಕೆ ಬರೋಣ. ನಂಗೆ ನೀವ್ ಹೇಳಿದ್ರಲ್ಲಿ ಸುಳ್ಳು ಅಥವಾ ತಪ್ಪು ಅನ್ಸಿಲ್ಲ. ಆದ್ರೆ ಕಾಲ್ಪನಿಕ ಅಂದಿದ್ದು ನಿಜ ಅವರ್ದೇ ಕಲ್ಪನೆ ಅಂತ ಹೇಳಿಲ್ಲ.. ಕಥೆಯಲ್ಲಿ ನೀವ್ ಹೇಳಿರೋ ಹಾಗೆ ಆ ಕೃತಿಯ ಅಂಶ ಇದ್ದ ಮಾತ್ರಕ್ಕೆ ಕಡ್ದಾರು ಅನ್ನೋ ಹಾಗಿಲ್ಲ ಅಲ್ವಾ? ಏನೇ ಇರ್‍ಲಿ ಒಂದು ಕಾದಂಬರಿ ಇಂದ ಸಿನಿಮಾ ಮಾಡೊದು ರೀಮೇಕ್ ಮಾಡೊದು ಬೇರೆ ಬೇರೆ ಅಲ್ವಾ? ಅದಕ್ಕೂ ಮುಂಚೆ ಒಂದು ಸರಿ ಸಿನಿಮಾ ನೊಡಿ ಏನಾದ್ರೂ ಅತಿ ಅನ್ನೋ ಹಾಗೆ ಅಥವಾ ಅಸಹ್ಯ ಅನ್ನೋ ಹಾಗೆ ಏನಾದ್ರೂ ಇತ್ತ? ಕಥೆ ಚಿತ್ರಕಥೆ ಎಲ್ಲಾದ್ರಲ್ಲೂ ಕನ್ನಡದಲ್ಲಿ ಇದುವರೆಗೂ ಕಾನ್ದೆ ಇರೋ ತಾಜತನ ಇದೆ. ಏನೋ ಕಥೆ ಇಂದ ಪ್ರಭಾವಿತರಾಗಿರ್ಬೋದು ಅನ್ಸತ್ತೆ ಅದನ್ನೇ ದೊಡ್ಡ ಕಳ್ಳತನ ಅಂದ್ರೆ ಹೇಗೆ. ಒಂದು ಮಾತು ಕೇಳಿ ಎ ಕಥೆ ಕಾದಂಬರಿ ಕವಿತೆ ಎಲ್ಲ ಒಬ್ಬರ ಜೋಬಿಂದ ಒಬ್ಬ ಕದ್ದೆ ಇರ್ತನಂತೆ. ಎಲ್ಲ ಭಾರತೀಯ ಲೆಕಾಕರು ಬಳಸ್ತ ಇರೋದು ವ್ಯಾಸ ವಾಲ್ಮೀಕಿ ಎಂಜಲನ್ನೇ ಅನ್ನೋ ಮಾತು ಕೂಡ ಕೇಳಿದೀನಿ

ಬಾಲ ಚಂದ್ರ ಮಂಗಳ, 10/20/2009 - 09:48

ಪ್ರೀತಿಯ ಅನಾಮಿಕರೇ,
ನಿಜ ನಿಜ ,ಇಂದ್ರಜಿತ್ ಲಂಕೇಶ್ ರಂಥವರಿಗೆ ಇದರ ಮಾತಾಡುವ ಹಕ್ಕು ಕೊಂಚವೂ ಇಲ್ಲ. ಅವರ ಐಶ್ವರ್ಯ ಚಿತ್ರವಂತೂ ಘಜನಿ ಒಂದೇ ಅಲ್ಲ ಮೂರ್ನಾಲ್ಕು ಚಿತ್ರಗಳಿಂದ ಕದ್ದ ಎಂಜಲು ಮೃಷ್ಟಾನ್ನ.
ಆದರೆ ನನಗೆ ಬೇಸರವಿರುವುದು ಯೋಗರಾಜ್ ಭಟ್ ರಂತಹ ಸೃಜನಶೀಲ,ಸೂಕ್ಷ್ಮ ಸಂವೇದನೆಯುಳ್ಳ ನಿರ್ದೇಶಕ ಕೂಡ ಬಹಿರಂಗ ಕಳ್ಳತನಕ್ಕಿಳಿದಿರುವುದು.
ನೀವ್ ಹೇಳಿರೋ ಹಾಗೆ ಆ ಕೃತಿಯ ಅಂಶ ಇದ್ದ ಮಾತ್ರಕ್ಕೆ ಕಡ್ದಾರು ಅನ್ನೋ ಹಾಗಿಲ್ಲ ಅಲ್ವಾ? ಏನೇ ಇರಲಿ ಒಂದು ಕಾದಂಬರಿ ಇಂದ ಸಿನಿಮಾ ಮಾಡೋದು ರೀಮೇಕ್ ಮಾಡೊದು ಬೇರೆ ಬೇರೆ ಅಲ್ವಾ?
ಎಂದು ಪ್ರಶ್ನಿಸಿದ್ದೀರಿ. ನಿಜವೇ -- ಇಂದ್ರಜಿತ್ ಲಂಕೇಶ್ ಬಹಿರಂಗವಾಗಿ ಮಾಡಿದ್ದನ್ನ ಇಲ್ಲಿ ಭಟ್ಟರು ಮುಚ್ಚುಮರೆಯಿಂದ ಮಾಡಿದ್ದಾರೆ. ಎರಡೂ ಕಳ್ಳತನವೇ
ಆದರೆ ನನ್ನ ತಕರಾರಿರುವುದು ಕೃತಿಯನ್ನು ಬಳಸಿಕೊಳ್ಳುವಾಗ ಕನಿಷ್ಟ ಕೃತಿಕಾರರ ಹೆಸರನ್ನು ಉಲ್ಲೇಖಿಸುವ ಸೌಜನ್ಯ ತೋರಿಸವಹುದ್ದಿತ್ತು.
ಸಿನಿಮಾದಲ್ಲಿ ಅತಿ ಅನ್ನೋ ಹಾಗೆ ಅಥವಾ ಅಸಹ್ಯ ಅನ್ನೋ ಹಾಗೆ ಇರದಿದ್ದ ಮಾತ್ರಕ್ಕೆ ಕಳ್ಳಮಾಲು ಸ್ವಂತ ಮಾಲಾಗುವುದು ಹೇಗೆ ?

ಇಂತಿ
ಸಸ್ನೇಹ
ಬಾಲ ಚಂದ್ರ

atmagange (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 10/20/2009 - 07:31

My dear friends,

In fact we criticise many films/directors and it’s common in field,
But we should not forget that even directors are also human and they need motivation and cheer-ups. Many feel happy by pointing hidden mistakes, but your one de motivating statement may make director to shut his skills once for all… we have enough examples and we have lost many of them.

To direct concept based films they need moral backup from kannadigas more than financial backup.

Let’s cheer-up our own guys….

ಅತ್ಮಾನಂದ ಮಲ್ಲಪ್ಪ
Melbourne

praveen sooda ಧ, 10/21/2009 - 07:08

ಇಂದ್ರಜಿತ್ ಕಳ್ಳತನ ಮಾಡಿದ್ದು ಕದ್ದು ಮುಚ್ಚಿ ನೇ ಮಾಡಿರೊದು ಅನ್ನೋದು ನೆನಪಿರಲಿ ಯಾಕೆ ಅಂತೀರಾ ಅವರದು ಯಾವ್ದೂ ರೀಮೇಕ್ ಅಂತ ಗೋಶಣೆ ಆಗಿಲ್ಲ. ಇರ್‍ಲಿ...ನಿಮ್ ಮಾತಲ್ಲಿ ಒಂದು ಒಪ್ತೀನಿ ಯೋಗರಾಜ್ ಅವರು ಕೃಟಿನ ಬಳಸಿದೆ ಆದರೆ ಅವರ ಹೆಸರನ್ನ ಹೆಳ್ಬೊಡಿತ್ತು.. ಕ್ಷಮಿಸಿ ಹೇಳ್ಬೇಕಿತ್ತು. ಆದ್ರೆ ಒಬ್ಬ ನಿರ್ಧೇಷಕನಾಗಿ, ಚಿತ್ರಕತೆಗಾರನಾಗಿ ಭಟ್ಟರು ಗೆದ್ಡಿದಾರೆ ಒಪ್ಟೀರ. ಕನ್ನಡಕ್ಕೆ ಅವರ ಚಿತ್ರಕಥೆ ಹೊಸತನ ಅನ್ನೋದು ಆವೋ ಅಂಥದ್ದೇ ಅಲ್ವಾ... ನೀವ್ ಇದರ ಬಗ್ಗೆ ಎಲ್ಲೂ ಹೆಳಿಲ್ಲ.. ಅಂದ್ರೆ ಇಲ್ಲಿ ಮೊಸರಲ್ಲಿ ಕಳ್ಳನ್ನ ಹುಡ್ಕೊ ಹಾಗಾಯ್ತು.. ತಪ್ಪು ಹೇಳ್ತಾ ಇದ್ದಾಗ ಸರಿಯನ್ನು ಹೇಳ್ಬೇಕಾಗತ್ಟೆ. ಇಲ್ಲಿ ನನ್ ಅಭಿಪ್ರಾಯದಲ್ಲಿ ತಪ್ಪಾಗಿರೋದು ಕೃತೀಕಾರಣ ಹೆಸರೆಳದೇ ಇದ್ದದ್ದು ಒಂದೇ ಅನ್ಸತ್ತೆ... ಅದಕ್ಕೆ ನಂಗೂ ಬೇಜಾರಿದೆ.

ಗಂಧ (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 10/23/2009 - 10:31

ಬಾಲ ಚಂದ್ರ,
ನಿಮ್ಮ ಲೇಖನಕ್ಕೆ ಇನ್ನೂ ಕೆಲವು ಸಮರ್ಥನೆಗಳು ಬೇಕಿತ್ತು;
ಚಿತ್ರದ ನಾಯಕಿ ಹುಚ್ಚಿ, ಅದರಲ್ಲಿ ಹುಚ್ಚಾಸ್ಪತ್ರೆ ಇದೆ ಕಾರಣ ಅದು ಶರಪಂಜರ ಚಿತ್ರ ಹೋಲುತ್ತದೆ
ಚಿತ್ರದ ನಾಯಕ ಹುಚ್ಚನಲ್ಲದಿದ್ದರೂ ಹುಚ್ಚಾಸ್ಪತ್ರೆ ಸೇರುತ್ತಾನೆ- ಇದು ವಿಷ್ಣು ವರ್ಧನ್ (ಯುಗ ಯುಗಗಳೇ ಸಾಗಲಿ ಹಾಡಿರುವ) ಚಿತ್ರವೊಂದರ ಥೀಂ!
ಇತ್ಯಾದಿ.....
ಇತ್ಯಾದಿ.......
ಸ್ವಾಮಿ ನಿಮ್ಮಂತ ಕನ್ನಡಿಗರಿಂದಲೇ ಕನ್ನಡ ಚಿತ್ರ ರಂಗ ಈ ಸ್ಥಿತಿ ತಲುಪಿರುವದು. ಒಂದು ಒಳ್ಳೆಯ, ಎಲ್ಲೂ ಬೇಸರ ತರಿಸದ, ಸುಂದರ , ನವಿರಾದ ಚಿತ್ರದಲ್ಲಿ ಕೊಂಕು ಹುಡುಕುವದನ್ನು 'ಬುಧ್ದಿವಂತಿಕೆ' ಅಂದುಕೊಂಡಿದ್ದೀರೋ?? ರಾಯರು ಹಿಂದಿಯ 'ಘಜನಿ' ಚಿತ್ರವನ್ನು ಅದೆಷ್ಟು ಬಾರಿ ನೋಡಿದ್ದಾರೋ??
ಈ 'ಹೊಳೆ ದಂಡೆ' ಎನ್ನುವ ಶಬ್ದ ಕೂಡ ಕದ್ದ ಮಾಲು ಎನ್ನುವದು ನಿಮಗೆ ಗೊತ್ತಿರಬೇಕಲ್ಲ?? ( ಕನಿಷ್ಠ ಅದು ಯಾರ ಕವನ ಸಂಕಲನ ಎಂಬ ಮಟ್ಟಿಗಾದರೂ!)

ಬಾಲ ಚಂದ್ರ ಸೋಮ, 10/26/2009 - 11:07

ಪ್ರೀತಿಯ ದುರ್ಗಂಧ,

ಯೋಗರಾಜ ಭಟ್ ಮೇಲೆ ನೀವಿಟ್ಟಿರುವ ಪ್ರೀತಿ ನೋಡಿ ಎದೆ ತುಂಬಿ ಬಂದಿದೆ.ಮನಸಾರೆ ಒಂದು ಸುಂದರ ನವಿರಾದ ಚಿತ್ರ ಅಲ್ಲ ಎಂದು ನಾನೆಲ್ಲೂ ಹೇಳಿಲ್ಲ,ಕೃತಿಯನ್ನು ಬಳಸಿಕೊಳ್ಳುವಾಗ ಕನಿಷ್ಟ ಕೃತಿಕಾರರ ಹೆಸರನ್ನು ಉಲ್ಲೇಖಿಸುವ ಸೌಜನ್ಯ ತೋರಿಸವಹುದ್ದಿತ್ತು ಎಂದು ಹೇಳಿದ್ದೇನೆ ಅಷ್ಟೆ. ಇದಕ್ಕೂ ಘಜನಿ ಸಿನಿಮಾಕ್ಕೋ ಏನು ಸಂಬಂಧ ಎಂದು ನನಗೆ ಅರ್ಥವಾಗಲಿಲ್ಲ.
ಈ 'ಹೊಳೆ ದಂಡೆ' ಎನ್ನುವ ಶಬ್ದ ಕೂಡ ಕದ್ದ ಮಾಲು ಎಂದು ಹೇಳಿದ್ದೀರಿ, ಸಂತೋಷ. ಹಾಗಾದರೆ ನಿಮ್ಮ ಹೆಸರು ಡಾ. ರಾಜಕುಮಾರ್ ಅವರ ಗಂಧದ ಗುಡಿ ಶೀರ್ಷಿಕೆಯಿಂದ ಕದ್ದದ್ದಿರಬಹುದು. ಇರಲಿ ಕಳ್ಳರನ್ನು ಕಳ್ಳ ಎಂದಾಗ ಅವರನ್ನು ಸಮರ್ಥಿಸುವವರೂ ಕೂಡ.........?

ಸಸ್ನೇಹ
ಬಾಲ ಚಂದ್ರ

ಗಂಧ (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 10/26/2009 - 12:53

ತೋಳಿಲ್ಲದ ಬನಿಯನ್ ಬಾಲ ಚಂದ್ರ,
ಯಾರೋ ಎಲ್ಲೋ ಹೇಳಿದ್ದನ್ನು ಕೇಳಿ 'ಮನಸಾರೆ' ಚಿತ್ರ Veronika Decides to Die ಕೃತಿ ಆಧರಿಸಿದ್ದು ಎಂದು ವಿಸ್ಮಯದಲ್ಲಿ ಬಂದು ವಾಂತಿ ಮಾಡಿಕೊಂಡಾಗಲೇ, ನೀವು Veronika Decides to Die ಕಾದಂಬರಿ ಓದಿಲ್ಲ ಎಂದು ನನಗೆ ತಿಳಿದಿತ್ತು. ಕನಿಷ್ಠ ಪಕ್ಷ ಅದು ಹೇಗೆ ಮನಸಾರೆ ಚಿತ್ರ ಆ ಕಾದಂಬರಿಯನ್ನು ಹೋಲುತ್ತದೆ ಎಂಬುದನ್ನು ತಿಳಿಸುತ್ತೀರಿ ಅಂದುಕೊಂಡಿದ್ದೆ. ಅದನ್ನು ಬಿಟ್ಟು ನನ್ನ ವ್ಯಯಕ್ತಿಕ ನಿಂದನೆ ಪ್ರಾರಂಭಿಸಿದ್ದು ಪಲಾಯನ ವಾದದ ಸೂಚನೆ.
Paulo Coelho ನ ಅಪ್ಪಟ ಅಭಿಮಾನಿಯಾದ ನಾನು ಆತನ The Alchemist ನಿಂದ ಹಿಡಿದು Winner Stands Alone ವರೆಗಿನ ಎಲ್ಲ ಕಾದಂಬರಿ ಯನ್ನೂ ಓದಿದ್ದೇನೆ. Veronika Decides to ಡೈ ನಲ್ಲಿ ಹುಚ್ಚಾಸ್ಪತ್ರೆ ಇದೆ ಅಂದಾಕ್ಷಣ ಮನಸಾರೆ ಅಲ್ಲಿಂದಲೇ ಕದ್ದಿದ್ದು ಅಂತ ಅರ್ಥಾನಾ? ಹಾಗಾದರೆ ಶರಪಂಜರ? ಇದಕ್ಕೆ ಉತ್ತರಿಸಿ ಬಾಲ ಷಂಡ್ರ.
(ಅಂದ ಹಾಗೆ ಗಂಧ ಅನ್ನುವದನ್ನು ಗಂಧದ ಗುಡಿಯಿಂದಲೇ ಕದ್ದದ್ದು. ತಮ್ಮ ಹೊಳೆ ದಂಡೆಯ ಮೇಲೆ ಬಿದ್ದ ಉಂಡೆಗಳ ಮೂಲ .......????)

ಬಾಲ ಚಂದ್ರ ಮಂಗಳ, 10/27/2009 - 11:57

ಹೊಳೆ ದಂಡೆಯ ಮೇಲೆ ಬಿದ್ದ ಉಂಡೆಗಳ ಗಂಧ ವೇ,
ವೆರುನಿಕಾ ಕೃತಿ ನೀವು ಓದಿಲ್ಲ ಎಂದು ಏಕ ಪಕ್ಷೀಯವಾಗಿ ನೀವು ನೀಡಿದ ತೀರ್ಮಾನ ನನಗೆ ಸಂತಸ ತಂದಿದೆ. ನನ್ನ ಉತ್ತರದಿಂದ ನಿಮಗೆ ವೈಯುಕ್ತಿಕ ನಿಂದನೆ ಎಂದೆನಿಸಿದ್ದರೆ ಸ್ಸಾರಿ ಗಂಧ,
ಖಂಡಿತ ಇದು ಪಲಾಯನ ವಾದವಲ್ಲ
ಮನಸಾರೆ ಮತ್ತು ವೆರೂನಿಕ ನಡುವೆ ಇರುವ ಹೋಲಿಕೆಗಳನ್ನು ಕೇಳಿದ್ದು ಮಾತ್ರ ಸಮಯೋಚಿತವಾಗಿದೆ
1) ಒಂದು ಸೆರೆಮನೆ ನಂತರ ಆಸ್ಪತ್ರೆಯಾಗಿ ಮಾರ್ಪಡುವುದು (ವೆರೂನಿಕಾದಲ್ಲಿ ವಿಲೆಟ್ ,ಮನಸಾರೆಯಲ್ಲಿ ಕಾಮನ ಬಿಲ್ಲು )
2) ಕಥಾ ನಾಯಕ ಮೊದಲು ಸಿಕ್ಕಾಪಟ್ಟೆ ಸೃಜನ ಶೀಲನಾಗಿದ್ದು, ಆ ಗುಣವೇ ಅವನನ್ನು ಅಸಹಜ ವ್ಯಕ್ತಿಗಳ ಪಟ್ಟಿಗೆ ಸೇರಿಸಿ ನಂತರ ಹುಚ್ಚ ಎನ್ನುವುದು.( ವೆರೂನಿಕಾದಲ್ಲಿ ಎಡ್ಯುರಾಡ್ ಒಬ್ಬ ಓದು ಬಿಟ್ಟ ಚಿತ್ರಕಾರ, ಮನಸಾರೆಯ ನಾಯಕ ಒಬ್ಬ ಅರ್ಧ ಬಿಎಸ್ಸಿ ಮುಗಿಸಿರುವ ವಿಜ್ನ್ಯಾನಿ )
3) ಹುಚ್ಚಾಸ್ಪತ್ರೆಯಲ್ಲಿ ಇರುವ ಸರಿಯಾದ ಮನುಷ್ಯರು, ಹೊರಗಿನ ಪ್ರಪಂಚಕ್ಕೆ ಬೇಸತ್ತು ಅಲ್ಲೇ ಇರಲು ಇಷ್ಟ ಪಡುವುದು (ಇದು ಕೃತಿಯಲ್ಲಿ ಜೆಡ್ಕಾ,ಮಾರಿ ಮುಂತಾದ ಸ್ತ್ರೀ ಪಾತ್ರಗಳಾಗಿದ್ದರೆ, ಮನಸಾರೆ ಯಲ್ಲಿ ಡಾಲರ್ , ಶಂಕರಪ್ಪನಂತಹ ಪುರುಷ ಪಾತ್ರಗಳಾಗಿವೆ)
4)ವೆರೂನಿಕಾ ಕೃತಿಯಲ್ಲಿ ಮಾರಿ ಎಂಬ ಮಹಿಳೆಗೆ ಅವಳ ಗಂಡ ವಿಚ್ಛೇಧನ ನೀಡಿದರೆ,ಮನಸಾರೆಯಲ್ಲಿ ಶಂಕರಪ್ಪ ಕೂಡ ಹೆಂಡತಿಯಿಂದ ವೀಚ್ಛೇಧನ ಪಡೆಯತ್ತಾನೆ-ಎರಡರಲ್ಲೂ ಮಾನಸಿಕ ಅಸ್ವಸ್ಥರು ಎಂಬ ಕಾರಣ )
5)ಪಾಲೋ ಕೊಹೆಲೋ ನ ಕೃತಿಯಲ್ಲಿ ಬರುವ ಮಾತು ಮತ್ತು ಮನಸಾರೆಯಲ್ಲಿ ಶಂಕರಪ್ಪ ಹೇಳುವುದು ಒಳಗಿರುವವರೆಲ್ಲ ತಾತ್ಕಾಲಿಕ ಹುಚ್ಚರು ,ಹೊರಗಿರುವವರೆಲ್ಲ ಪರ್ಮನೆಂಟ ಹುಚ್ಚರು
6)ಕಥೆಯ ಅಂತ್ಯ ಅಥವಾ ಫಿಲಾಸಫಿ ಹಾಗೂ ಮನಸಾರೆ ಚಿತ್ರದ ಸಂದೇಶ ಒಂದೇ ಇಡೀ ಜಗತ್ತೇ ಹುಚ್ಚರ ಸಂತ ಅಲ್ಲಿ ಸರಿಯಾಗಿರುವವರಿಗೆ ಕಷ್ಟ ತಪ್ಪಿದ್ದಲ್ಲ
7) ಮಾನಸಿಕ ಅಸ್ವಸ್ಥರಿಗೆ ವಿದ್ಯುತ್ ಶಾಕ್ ನೀಡುವುದು ಪುರಾತನ ಅಮಾನವೀಯ ಪದ್ದತಿ.ವೆರೂನಿಕಾದಲ್ಲಿ ಇದನ್ನು ಆ ಕಾಲಮಾನಕ್ಕೆ ತಕ್ಕಂತೆ ಬಳಸಿಕೊಂಡಿದ್ದರೆ ಮನಸಾರೆಯಲ್ಲಿ ಹಾಸ್ಯಾಸ್ಪದವಾಗಿ ಬಳಸಿಕೊಳ್ಲಲಾಗಿದೆ

ಆಂಟೆನ್ ಚೆಕಾಫ್ ನ "ವಾರ್ಡ್ ನಂಬರ್ 6 " ಹಾಗೂ 1994 ರಲ್ಲಿ ಬಿಡುಗಡೆಯಾದ ಇಂಗ್ಲೀಷ್ ಚಲನಚಿತ್ರ ಶ್ವಶಾಂಕ್ ರಿಡಂಪ್ಷನ್ನ ಒಮ್ಮೆ ನೋಡಿ

ಸಾಕಾ ಗಾಂಡ
ಈಗ ನಾನು ಯೋಚಿಸಬೇಕು ಇವರು ನಿಜವಾಗಿ ವೆರೂನಿಕಾ ಓದಿದ್ದಾರ ಹಾಗೂ ಮನಸಾರೆ ನೋಡಿದ್ದಾರಾ ಇಲ್ಲವೇ ಸುಮ್ಮನೆ ಯಾರೋ ಎಲ್ಲೋ ಹೇಳಿದ್ದನ್ನು ಕೇಳಿ ನಾನು ಅದು ಓದಿದ್ದೇನೆ ಇದು ಓದಿದ್ದೇನೆ ಎಂದು ಕಮೆಂಟು ಮಾಡುವ ಶೂರರಾ ಅಂತ

ಇಂತಿ ಸಸ್ನೇಹಗಳೊಂದಿಗೆ
ತೋಳಿಲ್ಲದ ಬನಿಯನ್ ಬಾಲಚಂದ್ರ

praveen sooda ಸೋಮ, 10/26/2009 - 23:27

ಗಂಧ avare tumba thanks.. naanu manasaarena tumba ishta patte... adanna ello kadiddu andaga opkoloke manasaagilla. nim inda tumba upakara aytu...

ಗಂಧ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 10/27/2009 - 11:05

ಪ್ರಿಯ ಪ್ರವೀಣ್,
ಕೆಲವರು ಹಾಗೆ! ಕೆಲ ಪದಗಳ ಕಥೆಗಳು ಎಂದೋ, ಮರೆಯಲಾಗದ ಹಾಡುಗಳು ಎಂದೋ , ಹಳಸಿದ ಚಿತ್ರಾನ್ನ ತಂದು ವಿಸ್ಮಯದಲ್ಲಿ ರಾಡಿ ಎಬ್ಬಿಸಿ ಇಕ್ಕಿಸಿಕೊಂಡವರು ತಮ್ಮನ್ನು ತಾವು ಮಾಹಾನ್ "ಸೃಜನ ಶೀಲ"ರು ಎಂದು ತಿಳಿದುಕೊಂಡಿರುತ್ತಾರೆ. ತಮ್ಮಂತ 'ತೋಳಿಲ್ಲದ' ಕನ್ನಡಿಗರಿಂದಲೇ ಕನ್ನಡ ಚಿತ್ರ ರಂಗ ಈ ಗತಿಗೆ ಬಂದಿದೆ ಎಂಬ ಅರಿವಿಲ್ಲದೆ, ಕನ್ನಡ ಚಿತ್ರ ರಂಗದ ಈ ಗತಿಗೆ ಕಾರಣ ಏನು ಎಂದು ರಣಭಯಂಕರ ವಿಮರ್ಶೆಗಳನ್ನು ಬರೆಯುತ್ತಾರೆ. ಇವರೆಲ್ಲ "ಗಾಂಧಿ ದೇಶಕ್ಕೆ ಏನು ಮಾಡಿದ? " ಎಂಬ ಪ್ರಶ್ನೆ ಕೇಳಿ ಬೆನ್ನು ಚಪ್ಪರಿಸಿ ಕೊಳ್ಳುವ ಜಾತಿಯವರು. ಗೀತೆಯ ಒಂದು ಸಂಧರ್ಭದಲ್ಲಿ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ- 'ಕೆಲವರನ್ನು ಕಡೆಗಣಿಸಿ ನಾವು ಮುಂದೆ ಹೋಗುತ್ತಿರಬೇಕು'
ಶ್ರೀ ಶ್ರೀ ಶ್ರೀ ಹೊಳೆದಂಡೆ ಬಾಲ(?) ಚಂದ್ರ ಮಹಾ ಸ್ವಾಮಿಗಳೇ;
ಹುಚ್ಚಾಸ್ಪತ್ರೆ ಕುರಿತ ಕಥೆ, ಕಾದಂಬರಿ, ಸಿನಿಮಾ ನೂರಾರು ಬಂದು ಹೋಗಿದೆ. ಸೂಕ್ಷಮವಾಗಿ ಗಮನಿಸಿದರೆ, ಕದ್ದ ಮಾಲೇ ಎಂದು ಪ್ರೂವ್ ಮಾಡುವ ಅನಿವಾರ್ಯಕ್ಕೆ ಬಿದ್ದರೆ 'ಶರ ಪಂಜರ' ಕೂಡ ಕದ್ದ ಮಾಲೇ. ಇನ್ನು 'ಒಳಗಿರುವವರೆಲ್ಲ ತಾತ್ಕಾಲಿಕ ಹುಚ್ಚರು ,ಹೊರಗಿರುವವರೆಲ್ಲ ಪರ್ಮನೆಂಟ ಹುಚ್ಚರು' ಎನ್ನುವ ಡೈಲಾಗ್ ( ತುಸು ಬದಲಾವಣೆಯೊಂದಿಗೆ) ಧಾರವಾಡದಲ್ಲಿ ಹುಟ್ಟಿ ಬೆಳೆದ ಹೆಚ್ಚು ಕಮ್ಮಿ ಎಲ್ಲರಿಗೂ ಗೊತ್ತಿರುವ ಮಾತೇ. ಪಾಪ ಅವರೆಲ್ಲ ಅಂಕಲಿಪಿಯ ಬದಲು ಪಾಲೋ ಕೊಹೆಲೋ ಓದಿರಬೇಕು. ಮೈಯ್ಯೆಲ್ಲ ಪರಚಿಕೊಳ್ಳುವಷ್ಟು ಬೇಸರ ತರಿಸುವ ( ಕೆಲವರ ಮಟ್ಟಿಗೆ ಇದೊಂದು ಅತ್ಯಧ್ಭುತ ಚಿತ್ರ!!!)ಶ್ವಶಾಂಕ್ ರಿಡಂಪ್ಷನ್ನ ಎಂಬ ಚಿತ್ರ ನಾನೂ ನೋಡಿದ್ದೇನೆ. ಅದರಲ್ಲಿಯ ಹೋಲಿಕೆಗಳನ್ನು ಮನಸಾರೆಯಲ್ಲಿ ಕಾಣುವುದು ಮೇಲೆ ತಿಳಿಸಿದಂತೆ ಕೇವಲ "ಅತಿ ಭುಧ್ಧಿವಂತ ಪ್ರಾಣಿ" ಗಳಿಗೆ ಮಾತ್ರ ಸಾಧ್ಯ. ಅದು ತಾವಾಗಿರುವುದಕ್ಕೆ ಸಂತೋಷವಾಗಿದೆ. ಆ ಇನ್ನೊದು ಬಿಳಿ ಜಿರಲೆಗಳ ಚಿತ್ರ 'ವಾರ್ಡ್ ನಂಬರ್ ೬' ನಾನು ನೋಡಿಲ್ಲ. ಅಷ್ಟರ ಮಟ್ಟಿಗೆ ನೀವು ಬಚಾವ್!

ಬಾಲ ಚಂದ್ರ ಗುರು, 12/24/2009 - 11:10

'ವಾರ್ಡ್ ನಂಬರ್ ೬' ನಾನು ಓದಿಲ್ಲ. ಅಷ್ಟರ ಮಟ್ಟಿಗೆ ನೀವು ಬಚಾವ್!
ಎಂದು ಹೇಳಿ ಬಚಾವಾಗಲು ಪ್ರಯತ್ನಿಸುತ್ತಿರುವ ದುರ್ಗಂಧವೇ ನನ್ನ ಅನಂತ ಕೋಟಿ ಪ್ರಣಾಮಗಳು.
ವಾರ್ಡ ನಂ 6 ನೀವಂದುಕೊಂಡತೆ ಚಿತ್ರವಲ್ಲ, ಅದು ಆಂಟನ್ ಚೆಕಾಫ್ ಬರೆದ ಕಿರುಗಥೆ.ಗೀತೆಯ ಒಂದು ಸಂಧರ್ಭದಲ್ಲಿ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ- 'ಕೆಲವರನ್ನು ಕಡೆಗಣಿಸಿ ನಾವು ಮುಂದೆ ಹೋಗುತ್ತಿರಬೇಕು'
ಎಂದು ಇಡೀ ಗೀತಾಸಾರವನ್ನೇ ಅರೆದು ಕುಡಿದವರ ಹಾಗೇ ಹೇಳುತ್ತಿದ್ದೀರಿ. ದುರಂತವೆಂದರೆ ಗೀತೆಯಲ್ಲೆಲ್ಲೂ ಅಂತಹಾ ವಾಕ್ಯವೇ ಇಲ್ಲ. ಇದು ನಿಮ್ಮ ಜ್ಞಾನಕ್ಕೆ ಉದಾಹರಣೆ
ಮೊದಲನೆಯದಾಗಿ ನನ್ನನ್ನು ನಾನು ಸೃಜನಶೀಲ ಎಂದು ಎಲ್ಲೂ ಹೇಳಿಕೊಂಡಿಲ್ಲ. ವಿಸ್ಮಯದಲ್ಲಿ ನಾನು ಇಕ್ಕಿಸಿಕೊಳ್ಳುವುದು ಹಾಗಿರಲಿ ಹೀಗೆ ಸುಮ್ಮನೆ ಕಂಡ ಕಂಡವರ ಮೇಲೆ ಕಮೆಂಟು ಮಾಡಿ ವಿನಯ್, ಅಚ್ಚು ಹೆಗೆಡೆ, ಮತ್ತು ಶಿವಕುಮಾರ್ ಅವರಿಂದ ದವಡೆಗಿಕ್ಕಿಸಿಕೊಂಡಿದ್ದನ್ನು ನಾನು ಹೇಗೆ ತಾನೆ ಮರೆಯಲಿ
ಶಿವಕುಮಾರ್ ಕೊಟ್ಟಾಗಲಂತೂ ಕೆಣಕಿದ ಉದ್ದೇಶ ಸಾರ್ಥಕವಾಯಿತು, ಈಗ ಕೊಟ್ಟ ಹೊಡೆತಕ್ಕೆ ಚಿಕಿತ್ಸೆಯ ಅಗತ್ಯವಿದೆ ಎಂದು ತಿಪ್ಪೆ ಸಾರಿಸಿಕೊಂಡಿದ್ದಂತೂ ನಿಮ್ಮ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ.
ಇರಲಿ ಈಗ ವಿಷಯಕ್ಕೆ ಬರೋಣ
ನಾನು ಕೊಟ್ಟಿರುವ ಹೋಲಿಕೆಗಳಿಗೆ ಯಾವುದೇ ಸಮಜಾಯಷಿ ಕೊಡಲು ಸಾಧ್ಯವಿಲ್ಲದೇ ಪರನಿಂದೆ ಮಾಡಿ ಮೈ ಪರಚಿಕೊಳ್ಳುತ್ತಿರುವ ನಿಮ್ಮ ಸ್ಥಿತಿ ನೆನೆಸಿಕೊಂಡು ಮಹದಾನಂದವಾಗುತ್ತಿದೆ.
ನಾನೂ ಕೂಡ "ಮೂರ್ಖರೊಂದಿಗೆ ವಾದಕ್ಕಿಳಿದರೆ ಹೆಚ್ಚಾಗುವುದು ನಮ್ಮ ಅಜ್ನ್ಯಾನ" ನಾಣ್ಣುಡಿಗೆ ಕಟ್ಟು ಬಿದ್ದು ಇಂತಹ ವಿಂತಂಡವಾದವನ್ನು ಕಡೆಗಣಿಸುತ್ತಿದ್ದೇನೆ.
ನೀವೆಂದಂತೆ "ಶರ ಪಂಜರ" ಕದ್ದ ಮಾಲಲ್ಲ ಅದು ತ್ರಿವೇಣಿಯವರ ಕಾದಂಬರಿ ಆಧಾರಿತ ಚಿತ್ರ. ಚಿತ್ರದ ನಿರ್ದೇಶಕರು ಅದನ್ನು ಕಾದಂಬರಿ ಆಧಾರಿತ ಚಿತ್ರವೆಂದೇ ಹೇಳಿದ್ದಾರೆ. ನಿಮ್ಮ ಆರಾಧ್ಯ ದೈವ ಯೋಗರಾಜ್ ಭಟ್ ರಂತೆ ಗುಮ್ಮನ ಗುಸುಕನ ಹಾಗೆ ಕಣ್ಣು ಮುಚ್ಚಿಕೊಂಡು ಹಾಲು ಕುಡಿಯುವ ಬೆಕ್ಕಿನಂತೆ ನಟಿಸಿರಲಿಲ್ಲ.
ಕೊನೆಯದಾಗಿ ನೀವು ಗಾಂಧಿ, ಕೃಷ್ಣ ಎಂದೇನೇನೋ ಬಡಬಡಸಿರುವದನ್ನು ನೋಡಿದರೆ ನಿಜಕ್ಕೂ ನಿಮ್ಮ ಮೇಲೆ ಸಹಾನುಭೂತಿ ಉಂಟಾಗುತ್ತಿದೆ

ಸಸ್ನೇಹ
ಬಾಲ ಚಂದ್ರ

ಬೆಣ್ಣೆ ಗೋವಿಂದ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 10/27/2009 - 12:33

ಬಾಲಚಂದ್ರರವರೆ, ಗಂಧ ರವರು ಇತ್ತೀಚಿಗಿನ "ಹಾಯ್ ಬೆಂಗಳೂರು" ಪತ್ರಿಕೆಯನ್ನು mostly ಓದಿಲ್ಲವೇನೋ! ಆಲೂರರು ಬರೆದ ಆ Article ಓದಿದರೆ ಅವರ ಸಂಶಯ ದೂರವಾಗಬಹುದು....! ಒಮ್ಮೆ ಅದನ್ನ ಓದಿ ಗಂಧ...

( ಅದರಲ್ಲಿ ಅವರೇ ತಮ್ಮ ಕೃತಿ Veronika Decides to Die ಅಧಾರಿತ ಎಂದು ಬರೆದಿದ್ದಾರೆ ಹಾಗೇ ಚಿತ್ರದ ಕೆಲವು ಪಾತ್ರಗಳು ಕಥೆಯೊಂದಿಗೆ ಹೇಗೆ ಹೋಲುತ್ತವೆ ಎಂದು ಬರೆದಿದ್ದಾರೆ)

praveen sooda ಮಂಗಳ, 10/27/2009 - 22:38

haay bengaloorina bagge nambke illa... irli kelvu paatra holatte antha alva nim maatu.. aga adu influence agatte horatru remake agalla..

ಬಾಲ ಚಂದ್ರ ಗುರು, 10/29/2009 - 12:24

ಪ್ರವೀಣ್
ನಿಮ್ಮ ಮಾತಿಗೆ ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ
ನಿಮಗೆ ಹಾಯ್ ಬೆಂಗಳೂರ್ ಬಗ್ಗೆ ನಂಬಿಕೆ ಇಲ್ಲ ಅಂದರೆ ಅದರಲ್ಲಿ ಬರದಿರುವುದೆಲ್ಲ ಸುಳ್ಳು ಎಂದರ್ಥವೇ?
ಅದರಲ್ಲಿ ಚಿತ್ರದ ಬಗ್ಗೆ ಬರೆದಿರುವುದು ಬೇರಾರೂ ಅಲ್ಲ ಪಾಲೋ ಕೊಹೆಲೋ ನ ಕೃತಿಯನ್ನು ಕನ್ನಡಕ್ಕೆ ಅನುವಾದ ಮಾಡಿರುವ ಚಂದ್ರಶೇಖರ ಆಲೂರು, ಅದನ್ನೇ ನಿಮ್ಮ ಯೋಗರಾಜ್ ಭಟ್ ಕದ್ದಿರುವುದು.
ಇನ್ನು ಕೆಲವು ಪಾತ್ರ ಹೋಲತ್ತೆ ಅಂದ ಮಾತ್ರಕ್ಕೆ ಅದು
influence ಆಗುತ್ತೆ ,ರೀಮೇಕ್ ಆಗಲ್ಲ ಎಂದು ಹೇಳಿದ್ದೀರಿ. ಇದನ್ನು ರಿಮೇಕ್ ಎಂದು ನಾನೆಲ್ಲೂ ಹೇಳಿಲ್ಲ.
ಮೊದಲು ರಿಮೇಕ್ ಪದದ ಅರ್ಥ ತಿಳಿದು ಕೊಳ್ಳಿ.

ವೆರೂನಿಕಾ -ಮನಸಾರೆಗೆ ಹೇಗೆ ಹೋಲುತ್ತದೆ ಎಂದು ಮೇಲೆ ತಿಳಿಸಿದ್ದೇನೆ, ನೋಡಿ.ಕೆಲವು ಪಾತ್ರಗಳಲ್ಲ ಸುಮಾರು ಹೋಲುತ್ತದೆ
ಕೊನೆಯದಾಗೆ -ಇಷ್ಟೋಂದು ಹೋಲಿಕೆಗಳಿರುವುದು ಕೇವಲ ಕಾಕತಾಳೀಯವಾಗಿರಲಾರದು.
ಅದನ್ನು ನೀವು influence ಎಂಬ ಹೆಸರಿನಿಂದ ಕರೆದರೂ, ಕಳ್ಳತನ ಕಳ್ಳತನವೇ,

ಸಸ್ನೇಹ
ಬಾಲ ಚಂದ್ರ

Shreekant (ಪ್ರಮಾಣಿಸಲ್ಪಟ್ಟಿಲ್ಲ.) ಧ, 10/28/2009 - 09:06

ನೆರಮನೆಯ ವಸ್ತುವಿಗೆ ಹೆಗ್ಗಣ ಗುದ್ದಾವಡಿತು " ಎಂಬಂತೆ ಹೋಯ್ ಬಾಲ-ಗಂಧ ರೇ ನೀವ್ಯಾಕೆ " ಸಂಸ್ಕಾರವೇ ಇಲ್ಲ ದ ಸಿನಿಮಾ ಮಂದಿ ಕುರಿತು ಗುದ್ದಾಡುವಿರಿ ?

praveen sooda ಧ, 10/28/2009 - 19:01

ಸಿನಿಮಾ ಮಂದಿ ಎಲ್ಲ ಸಂಸ್ಕಾರ ಬಿಟ್ಟಿಲ್ಲ ಸ್ವಾಮಿ ದಯವಿಟ್ಟು ಆ ಮಾತು ವಾಪಸ್ ತಗೊಳ್ಳಿ...

praveen sooda ಧ, 10/28/2009 - 19:01

ಸಿನಿಮಾ ಮಂದಿ ಎಲ್ಲ ಸಂಸ್ಕಾರ ಬಿಟ್ಟಿಲ್ಲ ಸ್ವಾಮಿ ದಯವಿಟ್ಟು ಆ ಮಾತು ವಾಪಸ್ ತಗೊಳ್ಳಿ...

ಬಾಲ ಚಂದ್ರ ಧ, 10/28/2009 - 21:13

ಆತ್ಮೀಯರಾದ
ಪ್ರವೀಣ್ ,ಶ್ರೀಕಾಂತ್, ಗಂಧ
ಒಂದು ಪಿಸುಮಾತು, ಚರ್ಚೆಯ ಹಾದಿ ಹಿಡಿದು ಪರಸ್ಪರ ಗುದ್ದಾಡಿಕೊಂಡಿದ್ದಾಯಿತು. ನನ್ನ ವಾದ ಎಲ್ಲೂ ಪೊಳ್ಳಲ್ಲ. ಸರಿಯಾದ ಆಧಾರ, ಸಾಕ್ಷಿಗಳನ್ನಿಟ್ಟುಕೊಂಡೇ ಇದನ್ನು ನಾನು ಬರೆದದ್ದು. ಇದು ಕೆಲವು ಯೋಗರಾಜ್ ಭಟ್ ರವರ ಅಭಿಮಾನಿಗಳಿಗೆ ಬೇಸರ ತಂದಿಬಹುದು.
ಅಂತಹವರು ದಯವಿಟ್ಟು ನನ್ನ ಲೇಖನದಲ್ಲಿರುವ
ಕನ್ನಡದ ಕೆಲವೇ ಸೃಜನಶೀಲ ನಿರ್ದೇಶಕರಲ್ಲಿ ಯೋಗರಾಜ್ ಭಟ್ ಕೂಡ ಒಬ್ಬರು.( ಮಿಕ್ಕವರೆಲ್ಲಾ ನಾಲ್ಕೈದು ತೆಲಗು, ತಮಿಳು ಸಿನಿಮಾಗಳ ಎಂಜಲನ್ನು ತೆಗೆದು ಹೊಚ್ಚ ಹೊಸ ಕನ್ನಡ ಸಿನಿಮಾ ಮಾಡಿ ಕನ್ನಡಿಗರಿಗೆ ಮೃಷ್ಟಾನ್ನದಂತೆ ಉಣಬಡಿಸುತ್ತಿರುವುದು ಗೊತ್ತಿರುವ ವಿಷಯವೇ) ಕನಿಷ್ಟ ಪಕ್ಷ ಇಂತಹ ಕೃತಿಯಿಂದ ಸ್ಪೂರ್ತಿ ತೆಗೆದುಕೊಂಡಿದ್ದೇನೆ ಎಂದು ಹೇಳುವ ಔದಾರ್ಯವನ್ನಾದರೂ ತೋರಬಹುದಿತ್ತು. ಎಂಬಂತಹ ಸಾಲುಗಳನ್ನು ಗಮನಿಸಿ
so ನಾನು ಈ ನನ್ನ ವಾದವನ್ನು ಇಲ್ಲಿಗೇ ನಿಲ್ಲಿಸುತ್ತಿದ್ದೇನೆ
ಆದರೂ ಯಾರಾದರೂ ಸರಿಯಾದ ಪ್ರಶ್ನೆಗಳನ್ನು ಕೇಳಿ ಮತ್ತೆ ಚರ್ಚೆಗಿಳಿದರೆ ನಾನು ಸರ್ವಥಾ ಸಿದ್ದ
ಈ ಚರ್ಚೆಯಿಂದ ಯಾರಿಗಾದರೂ ಮನಸಿಗೆ ನೋವುಂಟಾಗಿದ್ದರು ದಯವಿಟ್ಟು ನನ್ನನ್ನು ನಿಮ್ಮ ಗೆಳೆಯನಂತೆ ಕಂಡು ಕ್ಷಮಿಸಿ

ನಿಮ್ಮವನು
ಬಾಲ ಚಂದ್ರ

ಸೌಮ್ಯ (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 10/30/2009 - 09:05

ಈ ಸಾರಿ ಕೊಟ್ಟಿರುವ ಒದೆಗೆ ಪ್ರತಿಕ್ರಿಯಾ ವೀರ ಗಂಧ ICU
ನಲ್ಲಿ ಇದಾರೆ ಅನ್ತುತ್ತೆ. ಬರಹಕ್ಕಿಂತ ನಿಮ್ಮ ಚರ್ಚೆ ಚೆನ್ನಾಗಿತ್ತು

ಸೌಮ್ಯ

ಕಿಟ್ಟಿ (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 10/30/2009 - 11:37

ಸೌಮ್ಯ , ಸಲ್ಪ ಹೊತ್ತು ನಿರೀಕ್ಷಿಸಿ, ಒಂದ್ಡೆರಡು ಬಾಟ್ಲ್ ಗ್ಲುಕೋಸ್ ಹಾಕೊಂಡ್, Fit ಆಗಿ ಮತ್ತೆ ಸ್ಟಾರ್ಟ ಮಾಡ್ತಾರ್ ನೋಡಿ ಗಂಧ ...! :jawdrop: :dance: :)

praveen sooda ಶುಕ್ರ, 10/30/2009 - 17:03

ನಂಬಿಕೆ ಇಲ್ಲ ಅಂದ್ರೆ ಬರೋದೆಲ್ಲ ಸುಳ್ಳು ಅಂತ ಅಲ್ಲ ಸತ್ಯ ಇದ್ರು ನಂಬೋದು ಕಷ್ಟ ಅಂತ... ಇರ್‍ಲಿ ಹೋಲಿಕೆ ಇದ್ದ ಮಾತ್ರಕ್ಕೆ ಕಡ್ಡಿದ್ದು ಅಂತ ಆಗಲ್ಲ.. ಎಲ್ಲೋ ನೊಡಿದ್ದೊ ಅಥವಾ ತುಂಬಾ ಇಷ್ಟ ಪಟ್ಟದ್ದೋ ಗೊತ್ತಿಲ್ಲದೇ ಸೇರೋ ಸಾಧ್ಯತೆ ಇದೆ. ಅದು ಅಲ್ಲದೇ ನಾನು ನೀವ್ ಹೇಳಿರೋ ಯಾವ ಕಾದಂಬರಿನೂ ಓದಿಲ್ಲ. ಹೇಳಿದ್ದು ಕೇಳಿದ್ದು ನಂಬೋಕು ಆಗಲ್ಲ.. ಅದು ಅಲ್ಲದೇ ಕಾಲ್ ಎಳಿಲೆ ಬೇಕು ಅಂತ ನಿರ್ಧಾರ ಮಾಡಿದ್ ಮೇಲೆ ಸಾಕ್ಷಾಧಾರಗಳಿಗೆ ಕಮ್ಮಿ ಇರಲ್ಲ. ಏಣಿ ಇರ್‍ಲಿ ನಂಗೆ ಮನಸಾರೇ ತುಂಬಾ ಇಷ್ಟ ಆಯ್ತು. ಈಗ ೩ಸಾರಿ ನೊಡಿ ಆಗಿದೆ ಮುಂದೆ ನೊಡೊ ಸಾಧ್ಯತೇನು ಇದೆ.. ಹೇಳಿದ್ದು ಕೇಳಿ ರಾಮಚಂದ್ರ ಹೆಂಡತಿನ ಕಲ್ಕೊನ್ಡ.. ನಾನ್ ಯಾಕ್ ಹಾಗ್ ಆಗ್ಲೀ.

praveen sooda ಶುಕ್ರ, 10/30/2009 - 23:27

ಅಷ್ಟಕ್ಕೂ ಮಿಸ್ಟರ್. ಬಾಲಚಂದ್ರ ಅವರೇ ನೀವ್ ಅಲ್ಲಿ ನಾಥೂರಾಮ್ ಗೋಡ್ಸೆ ಅಂಡ್ ಕಂಪನೀ ನ ಪ್ರೀತಿ ಇಂದ ಆದರಿಸಿದೋರು ನಿಮ್ ಮಾತಿಗೆ ಬೆಲೆ ಕೊಟ್ಟು ಅಥವಾ ನಂಬಿ ನಂ ನಾವ್ ನಂ ದಾರಿ ಬದಲಾಯ್ಸೋಕೆ ಆಗಾತ್ತಾ?

praveen sooda ಭಾನು, 11/01/2009 - 00:26

ಯಾರ್ರೀ ಅದು ಸೌಮ್ಯ ಅವರು.. ಇನ್ನೊಬ್ಬರ ಕಾಲ್ ಎಳಿಯೊದು ಬಿಡಿ .. ಐ ಸಿ ಯೂ ಅಂದ್ರೆ ಧೈಹಿಕ ಕೊರತೆ.. ತೀರಾ ಹುಚ್ಚಾಸ್ಪತ್ರೆಗೆ ಸೇರೋ ಹಾಗೆ ಆದ್ರೆ ಕಷ್ಟ ಹುಷಾರು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.