Skip to main content

ಅಭಯ್ ಒಂದು ರಣಭಯಂಕರ ಕನ್ನಡ ಚಿತ್ರವು

ಬರೆದಿದ್ದುOctober 13, 2009
3ಅನಿಸಿಕೆಗಳು

ಕನ್ನಡ ಸಿನಿಮಾಗಳು ಇತ್ತೀಚಿಗೆ ನೆಲ ಕಚುತ್ತಿರುವುದ್ಯಾಕೆ
ವೀಕ್ಷಿಸಿ ಅಭಯ್

ಕಥೆಯೇ ಇಲ್ಲದೆ ಸಿನಿಮಾ ಮಾಡಬಹುದೇ?
ವೀಕ್ಷಿಸಿ ಅಭಯ್

ನಿಜಕ್ಕೂ ಇಷ್ಟೊಂದು ವೈಭವೋಪೇತವಾದ ಕಳಪೆ ಚಿತ್ರ ತೆಗೆಯಲು ಸಾಧ್ಯವೇ?
ವೀಕ್ಷಿಸಿ ಅಭಯ್

ಒಂದು ಕನ್ನಡ ಚಿತ್ರದಲ್ಲಿ ಕನಿಷ್ಟ ಎಷ್ಟು ಪರಭಾಷಾ ಚಿತ್ರಗಳ ಛಾಯೆಯನ್ನು ಮೂಡಿಸಬಹುದು?
ವೀಕ್ಷಿಸಿ ಅಭಯ್

ಹೀಗೇ ಅಭಯ್ ಎಂಬ ಅತಿ ಭಯಂಕರ ಚಿತ್ರವು ನಿಮ್ಮ ಮನಸ್ಸಿನಲ್ಲಿ ನೂರೆಂಟು ಸದ್ಭಾವನೆಗಳನ್ನು ಹುಟ್ಟು ಹಾಕುತ್ತದೆ. ಚಿತ್ರ ನೋಡಿ ಹೊರಬರುವಾಗ ನೀವು ಹೊಸ ವ್ಯಕ್ತಿಯಾಗಿರುತ್ತೀರ. ಏಕೆಂದರೆ ಮೆದುಳಿಗೆ ಆಘಾತವಾದಾಗ ಹಿಂದಿನದೆಲ್ಲ ಮರೆತು ಹೋಗುವುದು ಕನ್ನಡ ಚಲನ ಚಿತ್ರಗಳಲ್ಲಿ ತೀರ ಸಾಮಾನ್ಯವಾದ ದೃಶ್ಯ. ಅಷ್ಟೇ ಅಲ್ಲ ವೇದಾಂತಿ ಕೂಡಾ ಆಗಿರುತ್ತೀರಿ, ನಾನ್ಯಾರು? ನಮಗೆ ಮನರಂಜನೇ ತೀರ ಅವಶ್ಯಕವೇ?
ಮನರಂಜನೆ ಇಲ್ಲದೆ ನಾವು ವಿರಕ್ತರಂತೆ ಬಾಳಲು ಸಾಧ್ಯವಿಲ್ಲವೇ? ಅಥವಾ ಇದಕ್ಕಿಂತ ಸಮಯ ಹಾಳು ಮಾಡುವ ಮಾರ್ಗವಿದೆಯೆ? ಎಂಬ ಪಾರಮಾರ್ಥಿಕ ಚಿಂತನೆಗಳು ನಿಮ್ಮ ಮನಸ್ಸಿನಲ್ಲಿ ಮೂಡಿದರೆ ಆಶ್ಚರ್ಯವೇನಿಲ್ಲ

ಇಷ್ಟಕ್ಕೂ ಅಭಯ್ ನ ಕಥೆ ಏನು?
ಇದ್ದರೆ ತಾನೇ ಬರೆಯುವುದಕ್ಕೆ. ನಾವು ಸೂಕ್ಷ್ಮವಾಗಿ ವೀಕ್ಷಿಸಿ ಅದರ ಬಗ್ಗೆ ಆಳವಾಗಿ ನಿರಂತರವಾಗಿ ಯೋಚಿಸಿದಾಗ ಹೊಳೆದ್ದಿದ್ದಿಷ್ಟು
ನಾಯಕಿಯೊಬ್ಬಳನ್ನು ಖಳನಾಯಕನೊಬ್ಬ ಪ್ರೇಮಿಸಿ ಮದುವೆಯಾಗಲು ಪೀಡಿಸುತ್ತಾನೆ. ಅವನಿಂದ ತಪ್ಪಿಸಿಕೊಳ್ಳಲು ನಾಯಕಿ ವಿದೇಶಕ್ಕೆ ಹಾರಿದರೆ, ಅವಳಪ್ಪ ಅಮ್ಮ ಪೂಣೆಗೆ ಓಡಿ ಹೋಗುತ್ತಾರೆ. ನಾಯಕಿಯ ಇರುವಿಕೆಯ ಸುಳಿವನ್ನು ಖಳನಾಯಕರಿಗೆ ಸಾಕ್ಷಾತ್ ನಾಯಕನೇ ಕೊಟ್ಟು ಕೃತಾರ್ಥನಾಗುತ್ತಾನೆ

ವೀಕ್ಷಕರ ಪೂರ್ವ ಜನ್ಮದ ಪುಣ್ಯ ವಿಶೇಷದಿಂದ ಇಲ್ಲಿಗೆ ಇಂಟರ್ವೆಲ್ ಬರುತ್ತದೆ

(ಸುಮಾರು ಜನ ಪ್ರೇಕ್ಷಕರು ಗಟ್ಟಿ ಮನಸು ಮಾಡಿ ಮುಂದೆ ನೋಡಲು ನಿರ್ಧರಿಸುತ್ತಾರೆ)

ನಾಯಕ ಮತ್ತೆ ನಾಯಕಿ ಇದ್ದಲ್ಲಿಗೇ ಬಂದು ಖಳನಾಯಕರನ್ನು ಅವರ ಊರಿನಲ್ಲೇ ಬಡಿದರೆ ಚೆಂದ, ಅದಕ್ಕೇ ನಾನು ಹೀಗೆ ಮಾಡಿದ್ದಾಗಿ ಹೇಳಿ.ಸ್ವಲ್ಪ ಹೊತ್ತು ಖಳ ನಾಯಕರೊಂದಿಗೆ ಕಣ್ಣಾ ಮುಚ್ಚಾಲೆ ಆಡಿ ಆಮೇಲೆ
ನಾಯಕಿಯನ್ನು ವರಿಸುತ್ತಾನೆ
ಇಲ್ಲಿಗೀ ಕಥೇ ಮುಗಿಯಿತು

ಆದರೆ ಇಷ್ಟರ ಮಧ್ಯೆ ನಿಮ್ಮ ಕಣ್ಣ ಮುಂದೆ ಬ್ಯಾಂಕಾಕ್, ಸ್ವಿಟ್ಜರ್ ಲಾಂಡ್, ಆಮ್ಸ್ಟ್ರರ್ ಡ್ಯಾಮು ಎಲ್ಲಾ ಬಂದು ಹೋಗುತ್ತದೆ. (ಯಾಕೆ ಎಂದು ಕೇಳಬೇಡಿ, ನನಗೂ ಗೊತ್ತಿಲ್ಲ )
ಓಂ ಪ್ರಕಾಶ ರವರ ಹಾಸ್ಯ ದೃಶ್ಯಗಳನ್ನು ನೋಡುವಾಗ ಪ್ರೇಕ್ಷಕರು ಹೃದಯವಿದ್ರಾವಕವಾಗಿ ಬಿಕ್ಕಿ ಬಿಕ್ಕಿ ನಗುತ್ತಾರೆ ( ನಮ್ಮ ಕನ್ನಡ ಚಿತ್ರಗಳ ಪರಿಸ್ಥಿತಿ ಕಂಡು )

ಇನ್ನು ಹಾಡುಗಳ ಬಗ್ಗೆ ಹೇಳದಿದ್ದರೆ ಈ ಲೇಖನ ಅಪೂರ್ಣ
ನೀವು ಸಿಗರೇಟು ಪ್ರಿಯರಾಗಿದ್ದರೆ ಸಿನಿಮಾ ನೋಡುವಾಗ ಸಿಗರೇಟು ಸೇದಲು ಹೊರಹೋಗಲಿಕ್ಕೆ ಏಳು ಸದವಕಾಶಕಗಳಿವೆ
ಸಿಗರೇಟು ಸೇದದವರು ಸುಮ್ಮನೆಯಾದರೂ ಹೊರ ಹೋಗಬಹುದು, ಆದರೆ ಚಿತ್ರಮಂದಿರದಲ್ಲೇ ಕುಳಿತಿರುವುದು ನಿಮ್ಮ ಆರೋಗ್ಯಕ್ಕೆ ಹಾನಿಕರ (ಸಿಗರೇಟಿಗಿಂತ )

ಕಂಬನಿಗಳೊಂದಿಗೆ ನಿಮ್ಮವ

ಬಾಲ ಚಂದ್ರ

ಲೇಖಕರು

ಬಾಲ ಚಂದ್ರ

ಹೊಳೆ ದಂಡೆ

ನನ್ನ ಲೇಖನಗಳನ್ನು ಓದಿ
ನನ್ನ ಬಗ್ಗೆ ನಿಮಗೇ ತಿಳಿಯುತ್ತೆ.

ಅನಿಸಿಕೆಗಳು

ವಿನಯ್_ಜಿ ಮಂಗಳ, 10/13/2009 - 13:51

ಬಾಲ ಚಂದ್ರರವರೆ,

ಲೇಖನ ಸೊಗಸಾಗಿದೆ... :)

ಕನ್ನಡ ಎಂದರೆ "ಎನ್ನಡ" ಅನ್ನುವ ಈ ಕಾಲದಲ್ಲಿ ಬರಿ "ಕದ್ದ" ಸರಕುಗಳನ್ನೇ ಉಪಯೋಗಿಸಿ ( "ಈ ಚಿತ್ರದಲ್ಲಿ ಕನ್ನಡದ ಸೊಗಡಿದೆ" ಅಂತ ಆ ಚಿತ್ರ ತಯಾರಿಸುವವರ ಷರಾ ದೊಂದಿಗೆ..!) ಚಿತ್ರಗಳನ್ನು "ಸುತ್ತಿ ಬಿಸಾಡುವ" ನಮ್ಮ ಕನ್ನಡ ಚಿತ್ರರಂಗದ "ಕುಲಚಿಂತಕ" ರ ಈ ಕಾರ್ಯ ನಮ್ಮ ಕನ್ನಡ ಚಿತ್ರಗಳನ್ನು ಮಣ್ಣು ಮುಕ್ಕಿಸುವುದೇ ಹೊರತು ಇನ್ನೇನು ಮಾಡಲು ಸಾಧ್ಯವಿಲ್ಲ... ಇದರಲ್ಲಿ ಕೊನೆಗೆ ಗ್ರಹಚಾರ ಕೆಡುವುದು ನಮ್ಮ ಕನ್ನಡಿಗರದ್ದೇ ಅಷ್ಟೇ ಹೊರತು ಇನ್ನಾರದ್ದು ಅಲ್ಲಾ...!

Ullas Hindustani ಸೋಮ, 11/09/2009 - 23:16

ರಿಯಲಿ ಹಾಟ್ಸ್ ಆಫ್ ಟು ಯುವರ್ ರೈಟಿಂಗ್ ಸ್ಟೈಲ್. ಪ್ರತೀ ಸಾಲಿನಲ್ಲೂ ಅದ್ಭುತ ಹಾಸ್ಯದ ಲೇಪನ ತುಂಬಿತುಳುಕುತ್ತಿದೆ.ಒಂದು ಸಿನಿಮಾದ ವಿಮರ್ಶೆಯನ್ನು ಒಬ್ಬ ವೃತ್ತಿನಿರತ ವಿಮರ್ಶಕ ಕೂಡ ಇಷ್ಟು ರಸವತ್ತಾಗಿ ಬರೆಯಲಾರ ಅಂತ ಅನಿಸುತ್ತೆ..!! ಸಧ್ಯ..!!. ನಾನು ಇದುವರೆಗು ಅಭಯ್ ಸಿನಿಮಾವನ್ನು ನೋಡಿಲ್ಲ ಇನ್ನಂತು ಅದನ್ನು ನೋಡುವ ಪ್ರಶ್ನೆಯೇ ಇಲ್ಲ ಬಿಡಿ. ಥಾಂಕ್ಸ್ ಫಾರ್ ಸೇವಿಂಗ್ ಮೈ ಮನಿ & ಟೈಮ್.

mahadesh ಧ, 05/12/2010 - 18:47

ನೀವು ಇಧನ್ನು ಚನ್ನಾಗಿ baredhidheera nanage kannada baruvudhilla andhakke hege baredhidhini sari na nanage nimma kavana thumba eshta agidhe ,,,,,,,,,,,,,,,,,,,,,,,,,,,,,,,,,,,
mahadesh.v@gmail.com

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.