ಮನಸಾರೇ ನನ್ನ ಅನುಭವ

ಬರೆದವರು: praveen sooda - ಕಳುಹಿಸಿದ ದಿನ 27 September 2009

ಗಾಳಿಪಟ ಹಾರೀಸ್ದ ಮೇಲೆ ನಂ ಭಟ್ಟರು (ಯೋಗರಾಜ್ ಭಟ್ಟರು) ಲಗೋರಿ ಆಡುಸ್ತೀನಿ ಅಂದ್ರೂ ಕಾದು ಕಾದು ಕೊನೆಗೂ ಮನಸಾರೇ ನಂ ಮುಂದೆ ಇಟ್ರೂ. ಕಾದಿದ್ದಕ್ಕು ಮೋಸ ಇಲ್ಲಾರೀ ಒಳ್ಳೇ ಸಿನಿಮಾ ನೇ ಮಾಡಿದಾರೆ. ಹಿಂದಿನ ೨ ಚಿತ್ರಗಳ ಎಲ್ಲ ಸಹಜತೆ (ಮಳೆ, ಗಣೇಶ್, ಅನಂತ್ ನಾಗ್) ಇಂದ ಹೊರಗ್ ಬಂದು ತುಂಬಾ ಒಳ್ಳೇ ಕಥೆ ಆಯ್ಕೆ ಮಾಡಿ ತಾಜಾತನ ಇರೋ ಚಿತ್ರಕತೆಗೆ ತುಂಬಾ ತುಂಬಾ ನಗ್ಸೋ ಸಂಭಾಷಣೆ ಬರ್ದಿದರೆ. ಅಷ್ಟೇ ಅಲ್ಲ ನಿರ್ದೇಶಕನಾಗಿನು ಗೆದ್ಡಿದಾರೆ. ಇನ್ನೂ ಸಂಗೀತ ಹಿಂದಿನಷ್ಟು ಇಲ್ದೇ ಇದ್ರು ಮೋಸ ಅಂತೂ ಇಲ್ಲ. ಸಾಹಿತ್ಯ ಅಂತೂ ಅದ್ಭುತ.

ಮನಸಿನ ಭಾವನೆಗೆ ಪದ ಕೊಡೋ ಇಬ್ಬರು ಮಹನೀಯರು ಇಲ್ಲಿದ್ದಾರೆ. ಕಾಯ್ಕಿಣಿ ಮತ್ತೆ ಭಟ್ಟರು. ಆದ್ರೆ ಇಲ್ಲಿ ಎಲ್ಲ ಸರಿ ಇದೆ ಅಂದ್ರೆ ತಪ್ಪಾಗ್ಬೊಡೇನೋ. ಮೊದಲಾರ್ಧಕ್ಕೆ ಇರೋ ವೇಗ ದ್ವೀತಿಯಾರ್ಡಕ್ಕೆ ಇಲ್ಲ ಅನ್ಸುತ್ತೆ. ಹಾಗೆ ಕೊನೇ ಕೊನೆಗೆ ಎಲ್ಲೋ ಬೇಗ ಮೂಗಿಸ್‌ಬೇಕು ಅನ್ನೋ ಹಾಗಿತ್ತು. ಆದ್ರೆ ಅಂತ್ಯ ಅಂತೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಆದ್ರೆ ಯೋಗರಾಜ್ ಭಟ್ ಲೆವೆಲ್‌ಗೆ ಇಲ್ಲ ಅನ್ಸತ್ತೆ ಅಷ್ಟೇ. ಇನ್ನೂ ಪ್ರಯತ್ನ ಪಟ್ಟಿದ್ರೆ ಅಂತ್ಯ ಪರಿಣಾಮಕಾರಿಯಾಗಿ ಬರ್ಬೋದಿತ್ತು. ಪೂರ್ತಿ ಚಿತ್ರ ನೊಡಿದ್ರೆ ನಿಜವಾಗ್ಲೂ ಎಲ್ಲೂ ಯಾರಿಗೂ ಬೋರ್ ಆಗಲ್ಲ. ಇದು ಯೋಗರಾಜ್ ಭಟ್ ಮಾತ್ರ ಮಾಡೋಕೆ ಆಗುವ ಸಿನಿಮಾ ಅನ್ನೋ ಹಾಗಿದೆ. ಇನ್ನೂ ದಿಗಂತ್ . ಮೊದಲ ಚಿತ್ರ ಅನ್ಸತ್ತೆ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿರೋದು. ಗೆದ್ದಿದಾರೆ ಕಣ್ರೀ. ಒಳ್ಳೇ ನಟನೆ ಬಂದಿದೆ. ಡೈಲಾಗ್ ಡೆಲಿವರೀ ಅಂತೂ ಸುಪರ್ಬ್.

ಆದ್ರೆ ಎಲ್ಲೋ ಬಾಡೀ ಲ್ಯಾಂಗ್ವೇಜ್ ಮಿಸ್ ಆಗಿದೆ ಅನ್ಸತ್ತೆ ಕೆಲವು ಕಡೆ. ಅದು ಬಿಟ್ರೆ ದಿಗಂತ್ ಗುಡ್. ಇನ್ನೂ ಅಂದ್ರಿತಾ ರೇ. ಕೇಳ್ಳೆಬೇಡಿ ಕೆಲವು ಕಡೆ ಅದ್ಭುತ ಅನ್ನೋ ಅಷ್ಟು ಚೆನ್ನಾಗಿದಳೆ. ನಟನೆ ಕೂಡ. ಎಲ್ಲೂ ಈಕೆ ಸೋತೆ ಇಲ್ಲ ಅನ್ಬೋದು. ಅದು ಬಿಟ್ರೆ ಗಮನ ಸೆಳೆಯೊ ಪಾತ್ರ ಅಂದ್ರೆ ಶಂಕರಪ್ಪ(ಇವರ ನಿಜವಾದ ನಾಮಧೇಯ ಗೊತ್ತಿಲ್ಲ). ಸಿಕ್ಕ ಅವಕಾಶಾನ ಎಷ್ಟು ಚೆನ್ನಾಗಿ ಉಪಯೋಗಿಸ್ಕೊನ್ಡಿದಾರೆ ಅಂದ್ರೆ ನೋಡಿ ಅನುಭವಿಸ್ ಬೇಕು ರಿ. ತುಂಬಾ ಚನ್ನಾಗಿ ನಿಬಾಯ್ಸಿದಾರೆ. ಅದು ಬಿಟ್ರೆ ಒಂದು ಹಾಡಲ್ಲಿ ಬರೋ ನೀತು ಗುಡ್. ಇನ್ನೂ ನಾಯಕನ ಚಿಕ್ಕಪ್ಪನ ಪಾತ್ರ ಕೂಡ ಅಷ್ಟೇ. ಇದೆಲ್ಲಕ್ಕಿಂತ ಭಟ್ಟರ ಸಂಭಾಷಣೇನೆ ಒಂದು ಪಾತ್ರ. ಅದು ನಿಜವಾದ ನಾಯಕನ ಪಾತ್ರ ಆನ್ಬೋದು. ಇನ್ನೂ ಚಿತ್ರದ ಕಣ್ಣು (ಕ್ಯಾಮರಮನ್) ಸತ್ಯ ಹೆಗಡೆ ಬಗ್ಗೆ ಹೇಳ್ದೆ ಇದ್ರೆ ಮೋಸ ಆಗತ್ತೆ. ತುಂಬಾ ಚೆನ್ನಾಗಿ ನಿಬಾಯ್ಸಿದಾರೆ. ಅದ್ರಲ್ಲೂ ಹಾಡಿನ ಚಿತ್ರೀಕರಣದಲ್ಲಿ ಅದ್ಭುತ. ಮನೋಮೂರ್ತಿ ಅವರ ಸಂಗೀತ ಗೊತ್ತಲ್ಲ. ತುಂಬಾ ಚೆನ್ನಾಗಿದೆ ಆದ್ರೆ ಎಲ್ಲೋ ಕೇಳಿದ ನೆನಪು ಆಗ್ಬೋದು.

ನಿಮ್ಮ ರೇಟಿಂಗ್: None ಒಟ್ಟೂ ರೇಟಿಂಗ್: 4 (1 vote)
arpitha's picture
ಶುಕ್ರ, 09/10/2009 - 12:01 ರಂದು arpitha (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
ello maleyagide endu

ello maleyagide endu tangaliyu helutide...... :: ille olavagide endu kanasondu beelutide............ee hadu tumba cennagide alva...

praveen sooda's picture
ರವಿ, 04/10/2009 - 10:22 ರಂದು praveen sooda ಅವರು ಹೇಳುತ್ತಾರೆ
oh varige nanna

oh varige nanna shubhashayagalu haage dhanyavaadagalu

ಬಾಲ ಚಂದ್ರ's picture
ಶನಿ, 03/10/2009 - 14:39 ರಂದು ಬಾಲ ಚಂದ್ರ ಅವರು ಹೇಳುತ್ತಾರೆ
ಶಂಕರಪ್ಪನ ಪಾತ್ರ ಮಾಡಿರುವ

ಶಂಕರಪ್ಪನ ಪಾತ್ರ ಮಾಡಿರುವ ವ್ಯಕ್ತಿಯ ಹೆಸರು
ರಾಜು ತಾಳೀಕೋಟೆ

ಸಸ್ನೇಹ
ಬಾಲ ಚಂದ್ರ

ತೇಜಸ್ವಿನಿ ಹೆಗಡೆ's picture
ಸೋಮ, 28/09/2009 - 16:14 ರಂದು ತೇಜಸ್ವಿನಿ ಹೆಗಡೆ ಅವರು ಹೇಳುತ್ತಾರೆ
ಈ ಚಿತ್ರವನ್ನು ಇನ್ನೂ ನಾನು

ಈ ಚಿತ್ರವನ್ನು ಇನ್ನೂ ನಾನು ನೋಡಿಲ್ಲ.. ಆದರೆ ಹಾಡುಗಳನ್ನು ಕೇಳಿದ್ದೇನೆ. "ನಾ ನಗುವ ಮೊದಲೇನೇ.." ಹಾಡು ತುಂಬಾ ಇಷ್ಟವಾಯಿತು. ಇಂಪಾಗಿದೆ. ಸಾಹಿತ್ಯ ತುಂಬಾ ಚೆನ್ನಾಗಿದೆ.

praveen sooda's picture
ಸೋಮ, 28/09/2009 - 18:56 ರಂದು praveen sooda ಅವರು ಹೇಳುತ್ತಾರೆ
ಆ ಹಾಡಿನ ಚಿತ್ರೀಕರಣ ನೋಡಿ ಇನ್ನೂ

ಆ ಹಾಡಿನ ಚಿತ್ರೀಕರಣ ನೋಡಿ ಇನ್ನೂ ಅದ್ಭುತ..

nanaro...........'s picture
ಸೋಮ, 28/09/2009 - 14:54 ರಂದು nanaro........... (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
yavudadru kannada patrikege

yavudadru kannada patrikege chitra vimarshe bariri chennagirutte...olle sinima modalu chennagide amele bore ansutte..nija helalikku baralwa nimage...

praveen sooda's picture
ಸೋಮ, 28/09/2009 - 19:02 ರಂದು praveen sooda ಅವರು ಹೇಳುತ್ತಾರೆ
modalu kannada artha

modalu kannada artha maaDkolli amele nija sullu vimarshe maDivrante

praveen sooda's picture
ಸೋಮ, 28/09/2009 - 18:51 ರಂದು praveen sooda ಅವರು ಹೇಳುತ್ತಾರೆ
karma kanri... modalu

karma kanri... modalu manushya en helta idane artha maaDkolri... olle cinema andre ella channgide antha alla... jaasti olled iro cinema olle cinema ella olledidru adu tumba olle cinema.. iro sanna putta tappanna opkolde idre adu kurudaabhimaana agatte.. nange kurudaabhimaani agoke ishta illa... nanna hetta amma aadru iro tappanna hele heltini... aadre priti maatra ade iratte.

praveen sooda's picture
ಸೋಮ, 28/09/2009 - 10:20 ರಂದು praveen sooda ಅವರು ಹೇಳುತ್ತಾರೆ
ಖಂಡಿತ ಸರ್.. ನಾನೇ ಹೇಳಿದ್ನ್‌ಲ್ಲ

ಖಂಡಿತ ಸರ್.. ನಾನೇ ಹೇಳಿದ್ನ್‌ಲ್ಲ ಅಂತ್ಯ ಚನ್ಣಾಗಿತ್ತು ಅಂತ... ಆದ್ರೆ ಅಂತ್ಯಕ್ಕೆ ಹೋಗ್ ಬೇಕಾದ್ರೆ ಸ್ವಲ್ಪ ಅರ್ಜೆನ್ಸೀ ತೋರ್ಸೀದ್ರು ಅನ್ಸತ್ತೆ.

ಹರಿಪ್ರಸಾದ್'s picture
ರವಿ, 27/09/2009 - 23:50 ರಂದು ಹರಿಪ್ರಸಾದ್ ಅವರು ಹೇಳುತ್ತಾರೆ
ಚಿತ್ರದ ಅಂತ್ಯ ತುಂಬ

ಚಿತ್ರದ ಅಂತ್ಯ ತುಂಬ ಚೆನ್ನಾಗಿತ್ತು .

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
ಕೂಡಿಸು 1 ಉತ್ತರ 2
ಈ ಸುಲಭವಾದ ಗಣಿತ ಪ್ರಶ್ನೆಗೆ ಉತ್ತರ ಕೊಡಿ. ಉತ್ತರವನ್ನು ಅಂಕೆಗಳಲ್ಲಿ ಬರೆಯಿರಿ. ಉದಾ: 2 + 4 ಗೆ 6 ಎಂದು ಬರೆಯಿರಿ.
ಬರೆದವರು
praveen sooda
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
ನನ್ನ ಹೆಸರು ಪ್ರವೀಣ್ ಸೂಡ. ಊರು ಉಡುಪಿ ಜಿಲ್ಲೆ. ಹುಟ್ಟಿದ್ದು ಶಿವಮೊಗ್ಗ ಬೆಳದದ್ದು ಬೆಂಗಳೂರು. ಅಯುತಲ್ಲ ಕರಾವಳಿ ಮಲೆನಾಡು ಬಯಲು ಸೀಮೆಯ ಸಂಗಮ. ನಾನು ಕನ್ನಡದೊನು ಅಂತ ಹೇಳ್ಕೊಳ್ಳೋಕೆ ಹೆಮ್ಮೆ ಪಡ್ತೀನಿ. ಜಾತಿ, ಧರ್ಮ, ದೇವರರಲ್ಲಿ ಬೇಧಾ ಇಲ್ಲ. ನಂಬಿಕೆನು ಇಲ್ಲ ಅನ್ನಿ. ಹಾಗಂತ ಎಲ್ಲ ಬಿಟ್ಟಿರೋ ಅಬ್ಬೇಪಾರಿ ಅಲ್ಲ. ದೇವರು ಅನ್ನೋ ಪದಕ್ಕೆ ಬೇರೆ ಅರ್ಥ ಕೊಡೋ ಪ್ರಯತ್ನ...
ಇವರ ವಿಸ್ಮಯ ಪುಟ