
ಮನಮೋಹಕ ತಾಣ ಸ್ವಿಟ್ಜರ್ ಲ್ಯಾಂಡ್ : ಯುರೋಪ್ ಪ್ರವಾಸ - ಭಾಗ 2
ಮೌಂಟ್ ಟಿಟಲಿಸ್ ಯೂರೋಪಿನ ಸ್ವಿಟ್ಸರ್.ಲ್ಯಾಂಡ್ ದೇಶದ ಆಲ್ಪೈನ್ ಪರ್ವತ ಶ್ರೇಣಿಯ ಉನ್ನತ ಶಿಖರಗಳಲ್ಲಿ ಒಂದು. ಈ ಶಿಖರವು ಸ್ವಿಟ್ಸರ್.ಲ್ಯಾಂಡಿನ ಮಧ್ಯ ಭಾಗದಲ್ಲಿ ಇದೆ. ಇಲ್ಲಿ ವರ್ಷವಿಡೀ ಹಿಮವನ್ನು ನೋಡಬಹುದಾಗಿದೆ. ಪ್ರಪಂಚದ ಮೊಟ್ಟ ಮೊದಲ ತಿರುಗುವ ಸರಪಳಿ ಕಾರು ಇಲ್ಲಿನ ವೈಶಿಷ್ಟ್ಯ. ಮೂರು ಹಂತಗಳಲ್ಲಿ ಇರುವ ಈ ಕಾರು ಕೆಳಗೆ ಎನ್ಗಲ್.ಬೆರ್ಗ್ ಇಂದ ಟಿಟಲಿಸ್ ಶಿಖರದ ಮೇಲೆ ಕರೆದೊಯ್ಯುತ್ತದೆ. ಒಟ್ಟು ಮೂರು ಸಾವಿರ ಮೀಟರಿನ ಎತ್ತರಕ್ಕೆ ಕರೆದೊಯ್ಯುವ ಈ ಯಂತ್ರ ಅಧುನಿಕ ತಂತ್ರಜ್ಞಾನದ ಒಂದು ಅದ್ಭುತವೇ ಸರಿ!! ಬಹಳ ದೃಢವಾಗಿ ಹಾಗು ಬಂದೋಬಸ್ತಾಗಿದಿರುವುದನ್ನು ನೋಡಿ ಅತೀ ವಿಸ್ಮಯಪಟ್ಟೆವು!! ಇದು 360 ಡಿಗ್ರಿ ತಿರುಗುವ ಕಾರಣ ಸುತ್ತಲೂ ಬಹಳ ರಮಣೀಯ ದೃಶ್ಯಗಳು ನೊಡಬಹುದು. ಪರ್ವತದ ಕೆಳಭಾಗ ಅತೀ ಹಸಿರಾಗಿದ್ದು ಮೇಲೆ ಹೋದಂತೆ ಹಿಮವು ಕಾಣುತ್ತದೆ. ಮೇಲೆ ಒಂದು ಸುಂದರವಾದ ನೀರ್ಗಲ್ಲಿನ ಗುಹೆ ಇದೆ . ಒಳಗೆ ಹೋದರೆ ತಾಪಮಾನವು ಒಂದು ಡಿಗ್ರಿ ಗಿಂತನೂ ಕಮ್ಮಿ !! ನಾವೆಲ್ಲ ಬೆಚ್ಚಗಿನ ಬಟ್ಟೆಗಳನ್ನು ಧರಿಸಿದ್ದು ಜಾಣತನದ ಕೆಲಸವಾಗಿತ್ತು!! :) ಇಲ್ಲಿಗೆ ಹೋಗಿ ಬರಲು, ಪ್ರತಿ ದಿನ ಝುರಿಚ್ ನಿಂದ ಪ್ರವಾಸದ ವ್ಯವಸ್ಥೆ ಇದೆ. ಝುರಿಚ್ ನಿಂದ ಒಂದು ಗಂಟೆಯ ಕಾಲದ ಪ್ರಯಾಣವಾದುದರಿಂದ , ಇದು ಒಂದು ದಿನದ ಪ್ರವಾಸವಾಗಿದೆ. ಝುರಿಚ್ ನ ಮುಖ್ಯ ರೈಲು ನಿಲ್ದಾಣದಲ್ಲಿ "ಇನ್ಫೊರ್ಮೆಶನ್ " ಅಲ್ಲಿ ಹೋದರೆ ಅಲ್ಲಿ ಪ್ರವಾಸದ ವಿವರಗಳನ್ನು ತಿಳಿಸುತ್ತಾರೆ. ಒಟ್ಟಿನಲ್ಲಿ ಇದೊಂದು ಅದ್ಭುತವಾದ ಮರೆಯಲಾಗದ ಅನುಭವ! :) ಕೆಲವು ಚಿತ್ರಗಳನ್ನು ನೋಡಿ ಆನಂದಿಸಿ :)
ಸಾಲುಗಳು
- Add new comment
- 911 views
ಅನಿಸಿಕೆಗಳು
ತುಂಬಾ ರಮಣೀಯ ಚಿತ್ರಗಳು.
ತುಂಬಾ ರಮಣೀಯ ಚಿತ್ರಗಳು.