Skip to main content

ಕಾನೂನಿಲ್ಲ! ಅದಿಕ್ಕೆ, ಎಲ್ಲರಿಗೂ ಒಂದೇ ರೀತಿ ದ್ರೋಹ ಮಾಡ್ತೀವಿ: P&G

ಬರೆದಿದ್ದುSeptember 21, 2009
1ಅನಿಸಿಕೆ

ಪ್ರಾಕ್ಟರ್ ಅಂಡ್ ಗ್ಯಾಮ್ಬೇಲ್ ಕಂಪೆನಿಯವರ "ಹೆಡ್ ಅಂಡ್ ಶೋಲ್ದರ್ಸ್" ಶಾಂಪೂವಿನ ಚಿಕ್ಕ ಪೊಟ್ಟಣದ ಮೇಲೆ ಇಂಗ್ಲಿಷ್, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಮಾಹಿತಿ ಇರುವುದರ ಬಗ್ಗೆ ನಾವು ಬರೆದಿದ್ದೆವು.
ಕರ್ನಾಟಕದೆಲ್ಲೆಡೆ ಮಾರಾಟವಾಗುವ ಈ ಪೊಟ್ಟಣದ ಮೇಲೆ, ಕನ್ನಡದಲ್ಲಿ ಮಾಹಿತಿ ಇರುವುದೇ ಸರಿ, "ಯಾಕಿಲ್ಲ??" ಎಂದು ಅವರನ್ನು ಪ್ರಶ್ನಿಸಿದಾಗ ದೊರೆತ ಉತ್ತರ ಹೀಗಿದೆ:

Under the packaging law of India, it is not mandatory to stipulate the instructions on the sachets in any regional language. We meant no disrespect to Kannada since the instructions in many other Indian languages like Marathi, Gujarati, Malayalam and Bengali are also not on the sachets.

ಕಾನೂನು ಕಟ್ಟಳೆಗಳಿಲ್ಲ ಎಂದು ಮಾತನಾಡುವ ಈ ಕಂಪೆನಿಯವರು, ಗ್ರಾಹಕನಿಗೆ ನೀಡಬೇಕಾದ ಮಾಹಿತಿಯ ಬಗ್ಗೆ, ಗ್ರಾಹಕನ ಸುರಕ್ಷತೆಯ ಬಗ್ಗೆ ಯೋಚಿಸಿದಂತಿಲ್ಲ. ಕಾನೂನೊಂದನ್ನೇ ಮನಸಲ್ಲಿಟ್ಟುಕೊಂಡು ಈ ಕಂಪೆನಿಯವರು ಎಷ್ಟು ಬೇಜವಾಬ್ದಾರಿತನದ ಕೆಲಸ ಮಾಡಿದ್ದಾರೆ ಎಂದೊಮ್ಮೆ ಮೆಲುಕು ಹಾಕೋಣ:
ವಿಕ್ಸ್ ವೆಪೋರಬ್-ನ ಮೇಲೆ "ಎರಡು ವರ್ಷಕ್ಕಿಂತ ಚಿಕ್ಕ ಮಕ್ಕಳಿಗೆ ಇದು ಅಪಾಯಕಾರಿ" ಎಂಬ ಮಾಹಿತಿ ಕೇವಲ ಇಂಗ್ಲಿಷ್-ನಲ್ಲಿ ಮುದ್ರಿಸಿದ್ದಾರೆ. ವಿಕ್ಸ್-ಅನ್ನು ಕರ್ನಾಟಕದೆಲ್ಲೆಡೆ ಮಾರಲಾಗುತ್ತದೆ ಎಂಬುದು ಗೊತ್ತಿರುವ ವಿಷಯವೇ.

ಕಾನೂನಿಲ್ಲದ ಕಾರಣ ತಮ್ಮ ಸಾಮಾಜಿಕ ಜವಾಬ್ದಾರಿಯನ್ನೇ ಮರೆತು ಅಮಾಯಕ ಗ್ರಾಹಕರನ್ನು ಅಪಾಯಕ್ಕೆ ನೂಕುವ ಇಂತಹ ಕಂಪನಿಗಳನ್ನು ಪ್ರತಿಯೊಬ್ಬ ಗ್ರಾಹಕನ ಒತ್ತಾಯವೇ ಬಗ್ಗಿಸಬಲ್ಲುದು.

ಅಷ್ಟೇ ಅಲ್ಲದೇ, ಗುಜರಾತಿ, ಮರಾಠಿ ಇತರ ಭಾಷೆಗಳೂ ಇಲ್ಲ ಅಂತ ಹೇಳ್ತಿರೋದು ನೋಡಿದರೆ, ಹಿಂದಿ, ತಮಿಳು, ತೆಲುಗು ಬಳಸ್ತಿರೋದು ನೋಡಿದರೆ, ಇವರು ನಮ್ಮನ್ನು ಗ್ರಾಹಕರನ್ನಾಗಿ ಪರಿಗಣಿಸಿದಂತೆಯೇ ಕಾಣುತ್ತಿಲ್ಲ. "ಕನ್ನಡದಲ್ಲಿ ಮಾಹಿತಿ ಮುದ್ರಿಸಕ್ಕಾಗಲ್ಲ" ಎಂಬುದನ್ನ ಬೇರೆ ಪದಗಳಲ್ಲಿ ಹೇಳುತ್ತಿದ್ದಾರೆ ಅಷ್ಟೇ. "ನಮಗೆ ಬೇಕಾಗಿರುವುದು ಕನ್ನಡದಲ್ಲಿ ಮಾಹಿತಿ, ಅದನ್ನ ಕೊಡಿ ಸಾಕು" ಅಂತ ನಾವು ಇವರಿಗೆ ಹೇಳಬೇಕಾಗಿದೆ.

ಕನ್ನಡಿಗ ಗ್ರಾಹಕರು ಒಕ್ಕೊರಲಿನಿಂದ ಕನ್ನಡದಲ್ಲಿ ಮಾಹಿತಿಗಾಗಿ ಒತ್ತಾಯಿಸಿದಲ್ಲಿ, ಕನ್ನಡವನ್ನು ತಮ್ಮ ಪ್ಯಾಕೇಜುಗಳಲ್ಲಿ ಕಡೆಗಣಿಸಿರುವ ಎಂ.ಟಿ.ಆರ್, ಜಿಲೆಟ್ ಮುಂತಾದ ಕಂಪನಿಗಳೂ ಬದಲಾಗುತ್ತವೆ. ಕನ್ನಡಿಗರಿಗೆ ತಾವು ಬಳಸುವ ಉತ್ಪನ್ನಗಳ ಬಗೆಗಿನ ಪ್ರತಿಯೊಂದು ಮಾಹಿತಿಯೂ ತಮ್ಮ ಭಾಷೆಯಲ್ಲಿಯೇ ದೊರಕುವಂತಾಗುತ್ತದೆ.
ಮುಂದೊಂದು ದಿನ ಐ-ಪಾಡ್-ನಲ್ಲಿಯೂ ಚೈನೀಸ್ ಭಾಷೆ ಜಾಗದಲ್ಲಿ ಕನ್ನಡದಲ್ಲಿ ಮಾಹಿತಿ ಇರುವಂತಾಗುತ್ತದೆ. ಅಂತಹ ಕನಸು ನನಸಾಗಬೇಕಾದರೆ, ಪ್ರತಿಯೊಂದು ಚಿಕ್ಕ ವಸ್ತುಗಳ ಪ್ಯಾಕೇಜ್ ಮೇಲೂ ಕನ್ನಡದಲ್ಲಿ ಮಾಹಿತಿಗಾಗಿ ಜಾಗೃತ ಗ್ರಾಹಕರು ಒತ್ತಾಯಿಸಬೇಕು.
ನಾವೆಲ್ಲರೂ P&G ಕಂಪೆನಿಗೆ ಮಿಂಚೆ ಬರೆದು, ತಮ್ಮೆಲ್ಲಾ ಉತ್ಪನ್ನಗಳಲ್ಲೂ ಕನ್ನಡದಲ್ಲಿ ಮಾಹಿತಿ ಮುದ್ರಿಸುವಂತೆ ಒತ್ತಾಯಿಸೋಣ.

P&G ಮಿಂಚೆ ವಿಳಾಸ: pg_aai@mailnj.custhelp.com

--
ಜಾಗೃತ ಗ್ರಾಹಕರು/jaagruta graahakaru

ಲೇಖಕರು

ಪ್ರಿಯಾಂಕ್

ಸಮಯ ಸಿಕ್ಕಾಗ ತಿಳಿಸುತ್ತೇನೆ.
ಸದ್ಯಕ್ಕೆ ಕ್ಷಮೆ ಇರಲಿ.

ಅನಿಸಿಕೆಗಳು

Sunil Kumar DP ಶನಿ, 09/26/2009 - 23:44

Superb sir........... keep it up and update us with Related issue

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.