Skip to main content

ನಿನ್ನ ಬಂಧದೊಳಿಹುದೇ ಇಂಥ ವಿಶ್ವರೂಪ ?

ಇಂದ Bhavanilokesh
ಬರೆದಿದ್ದುSeptember 15, 2009
noಅನಿಸಿಕೆ

ನಿನ್ನನ್ನೇ ನೆನೆಯುತ್ತಾ ಒಲವೇ,
ನಿನ್ನ ಬಂಧದ ಪರಿಯ ಬರೆಯಲು ಕುಳಿತೆ
ಸ್ಫರ್ಧೆಗಿಳಿದಂತೆ ಬಂದವದೋ ಪದಗಳು
ಲೇಖನಿ ಹಿಡಿದದ್ದಷ್ಟೇ ಗೊತ್ತು,
ಮುಗಿಯಲೊಲ್ಲದು ಕವಿತೆ
ಮೂಡಿದ ಸಾಲುಗಳು ಅನನ್ಯ, ಅನಂತ ಅಮೋಘವಾಗಿ,
ಅರಿವಿಲ್ಲದ ಹಾಗೆ ಹರಿದು ಬಂದವು !
ಅತಿಶಯೋಕ್ತಿಯಲ್ಲ ಒಲವೇ,
ಅನುಬಂಧವೋ, ಋಣವೋ! ಅಸದೃಶ ಒಲವ ರೂಪವೋ!
ಅಸಂಖ್ಯ ತಾರೆಗಳ ಅಪರೂಪದ ಹೊಳಪೋ !
ಅರಿವಿನ ಮನೆಗಾದ ಅಸಾಮಾನ್ಯ ಹುರುಪೋ !
ಅಸೀಮ ವಾತ್ಸಲ್ಯದ ಅಕ್ಕರೆಯ ಸೊಗವೋ !
ಅಖಿಲ ವಿಶ್ವದೊಳಿರದ ಅಚಿಂತ್ಯದನುಭವವೋ !
ಅಶರೀರ ಮನಸುಗಳ ಅನಿತ್ಯ ಅನುಸಂಧಾನವೋ !
ತಿಳಿಯದಾದೆನು ಒಲವೇ,
ನಿನ್ನ ಬಂಧದೊಳಿಹುದೇ ಇಂಥ ವಿಶ್ವರೂಪ ?

ಲೇಖಕರು

Bhavanilokesh

naano bhavuka jeevi

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.