Skip to main content

ಗರ್ಲ್ ಫ್ರೆಂಡ್ ಯಾಕೆ ಬೇಕು…?

ಇಂದ lokesh
ಬರೆದಿದ್ದುSeptember 14, 2009
1ಅನಿಸಿಕೆ

ಸದ್ಯದ ಪರಿಸ್ಥಿತಿಯಲ್ಲಿ ‘ಗರ್ಲ್ ಫ್ರೆಂಡ್ ‘ ಪದದ ವ್ಯುತ್ಪತ್ತಿ ನಮಗೆ ಅವಶ್ಯವಿಲ್ಲ. ಈ ಪದ ಹೊಮ್ಮಿಸುವ ಅರ್ಥವನ್ನು ತಿಳಿದುಕೊಳ್ಳುವುದು ಅತ್ಯವಶ್ಯ. ಗರ್ಲ್ ಫ್ರೆಂಡ್ ಎಂಬುದರ ಅರ್ಥ ಸ್ನೇಹಿತೆ, ಗೆಳತಿ, ಸಖಿ ಎಂದೆಲ್ಲ ಆಗುತ್ತದಾದರೂ ಇತ್ತೀಚಗೆ ಈ ಪದ ಅರ್ಥ ತುಸು ಅಪಭ್ರಂಶವಾಗುತ್ತಿದೆ. ಗರ್ಲ್ ಫ್ರೆಂಡ್ ಎಂದರೆ ಗೆಳತಿಗಿಂತ ಹೆಚ್ಚು, ಪ್ರೇಯಸಿಗಿಂತ ಕಡಮೆ ಎನ್ನುವ ಭಾವದಲ್ಲಿ ಈ ಪದವನ್ನು ಬಳಸಲಾಗುತ್ತಿದೆ. ಈ ಮೊದಲು ಇಂಗ್ಲಿಷಿನಲ್ಲಿಇ ಪದ ಬಳಕೆಯಲ್ಲಿರಲಿಲ್ವೇನೋ..! ಫ್ರೆಂಡ್ ಅಂಬ ಪದವನ್ನಷ್ಟೇ ಗೆಳೆಯ ಅಥವಾ ಗೆಳತಿಯನ್ನು ಸೂಚಿಸುವುದಕ್ಕಾಗಿ ಬಳಸಲಾಗುತ್ತಿದ್ದಿರಬೇಕು. ಆದರೆ ತೀರಾ ಇತ್ತೀಚಗೆ ಗರ್ಲ್ ಫ್ರೆಂಡ್ ಮತ್ತು ಬಾಯ್ ಫ್ರೆಂಡ್ ಪದಗಳನ್ನು ಬಳಸಲಾಗುತ್ತಿದೆ. ಆದರೆ ನೆನಪಿರಲಿ, ಈ ಪದಗಳ ಬಳಕೆಗೆ ಕೆಲವು ಅಪವಾದಗಳಿವೆ. ನೀವು ಪುರುಷರಾಗಿದ್ದಲ್ಲಿ ನೀವು ನಿಮ್ಮ ಗೆಳೆಯನನ್ನು ಬಾಯ್ ಫ್ರೆಂಡ್ ಎಂದು ಕರೆಯುವಂತಿಲ್ಲ..ಆದರೆ ನಿಮ್ಮ ಗೆಳತಿಯನ್ನು ಗರ್ಲ್ ಫ್ರೆಂಡ್ ಎಂದು ಕರೆಯಬಹುದು. ಒಮದು ವೇಳೆ ನೀವು ಮಹಿಳೆಯಾಗಿದ್ದಲ್ಲಿ ನೀವು ನಿಮ್ಮ ಗೆಳೆತಿಯನ್ನು ಗರ್ಲ್ ಪ್ರೆಂಡ್ ಎಂದು ಕರೆಯುವಂತಿಲ್ಲ..ಆದರೆ ನೀವು ನಿಮ್ಮಗೆಳೆಯನನ್ನು ಬಾಯ್ ಫ್ರೆಂಡ್ ಎಂದು ಕರೆಯಬಹುದು. ಈಗ ವಿಷಯಕ್ಕೆ ಬರೋಣ..
ಹುಡುಗರದು ಹುಡುಗು ಬುದ್ದಿ:
ಎಲ್ಲ ಹುಡುಗರದ್ದು ಒಮದು ವೀಕ್ ನೆಸ್ ಏನೆಂದರೆ, ಕೌಮಾರ್ಯ ದಾಟುತ್ತಿದ್ದಂತೆಯೆ ಅವರು ಕೆಲವು ವಿಷಯಗಳಿಗೆ ಆಕರ್ಷಿತರಾಗುವುದು. ಇದನ್ನು ನಾವು Infatuation ಅಂತ ಕರೆಯುತ್ತೇವೆ. ಹೊಸ ಹೊಸ ವಸ್ತುಗಳನ್ನು ಕೊಳ್ಳಬಯಸುವುದು, ತಾವು ನೋಡಿದಸಿನಿಮಾ ನಾಯಕನ ಬಟ್ಟೆ ಧರಿಸುವುದು, ಪ್ರಾಥಮಿಕ ಶಾಲೆಯಲ್ಲಿ ಅಥವಾ ಪ್ರೌಢ ಶಾಲೆಯಲ್ಲಿ ಶಿಕಕ್ಷಕರನ್ನು ಕಂಡುಭಯ ಭಕ್ತಿಯಿಂದಿರುತ್ತಿದ್ದವರು ನಾವಿನ್ನು ಪ್ರೌಢರು, ಏಟುಗಳಿಗೆ ,ಶಿಕ್ಷೆಗಳಿಗೆ ಇನ್ನು ಹೆದರಬಾರದು ಎಂಬ ನಿಲುವು, ತಮ್ಮದೆ ವಯಸ್ಸಿನ ಹುಡುಗಿಯರನ್ನು ಕಂಡಾಗ ಉಂಟಾಗುವ ಸಂಚಲನ, ಇವೆಲ್ಲ ಸಹಜ ನಡೆವಳಿಗಳು. ನಮಗೆಲ್ಲ ತಿಳಿದಿರುವಂತೆ ಹಾರ್ಮೋನುಗಳ ಕಾರ್ಯ ಚಟುವಟಿಕೆಯಿಂದಾಗಿ ಜೈವಿಕ ಬದಲಾವಣೆಗೊಲಪಟ್ಟಾಗ ಹುಡುಗರು ತುಸು ಭಿನ್ನವಾಗಿಯೇ ವರ್ತಿಸತೊಡಗುತ್ತಾರೆ. ಅನುಕರಣೀಯರಾಗುತ್ತಾರೆ. ಇದೆಲ್ಲದರ ನಡುವೆ ತಮ್ಮ ಗೆಳೆಯರೊಮದಿಗೆ ತಮ್ಮ ಭಾವನೆಗಳನ್ನು , ತಮಗೆ ಇಷ್ಟವಾದ ವಸ್ತು, ಮೊದಲ ಿಷ್ಟವಾದ ಹುಡುಗಿ, ತನ್ನೆಲ್ಲ ಸಾಹಸಗಳು ಹೀಗೆ ಪ್ರತಿಯೊಂದನ್ನು ಗೆಳೆಯರೊಂದಿಗೆ ಚರ್ಚೆಗೊಳಪಡಿಸುತ್ತಾರೆ.
ಮಾಧ್ಯಮಾಸುರರು:
ಮುಗ್ಧ ಭಾವದ ಹುಡುಗರ ಮನಸ್ಸಿನಲ್ಲಿ ಸಲ್ಲದ ಆಲೋಚನೆಗಳನ್ನು, ಅಶ್ಲೀಲ ವಿಚಾರಗಳನ್ನು ಸಂಪೂರಣ ಮಾಡುವುದರಲ್ಲಿ ಮಾದ್ಯಮಗಳದ್ದೇ ಅಗ್ರಪಾಲು. ಬೆಳಗಿನಿಂದ ಬೆಳಗಿನವರೆಗೂ ಅರೆ ಬತ್ತಲೆಯ ಮೈಯಲ್ಲಿ ಉದ್ರೇಕಿಸುವ ಭಂಗಿಯಲ್ಲಿ ನೃತ್ಯವೆಸಗುವ ದೃಶ್ಯಗಳು, ಸನ್ನಿವೇಶಗಳು, ಅಂತರ್ಜಾಲದಲ್ಲಿನ ಅಶ್ಲೀಲ ತಾಣಗಳು(porn sites) ಹೆಂಗಸರನ್ನು ತುಚ್ಛವಾಗಿ ಬಿಂಬಿಸುವ ಸನ್ನಿವೇಶಗಳು ಇವೆಲ್ಲವೂ ಹುಡುಗರ ಮನಸ್ಸಿನಲ್ಲಿ ಹುಡುಗಿಯರ ಬಗ್ಗೆ ತೀರಾ ತುಚ್ಛವಾದಭಾವನೆಗಳನ್ನು ಒಡಮೂಡಿಸುತ್ತವೆ. ಹೆಣ್ಣೆಂದರೆ ಒಂದು ದಂತದ ಬೊಂಬೆ, ಅವಳಿರುವುದೇ ಅನುಭವಿಸಲ, ಅವಳಲ್ಲಿ ಮೈಮಾಟದ ಹೊರತು ಬೇರೇನಿಲ್ಲ – ಹೀಗೆ ಸಾವಿರಾರು ರೀತಿಯಲ್ಲಿ ಹುಡುಗರು ಯೋಚಿಸತೊಡಗುತ್ತಾರೆ. ಇದರ ಫಲವೇ ಅತ್ಆಚಾರ, ಲೈಂಗಿಕ ಕಿರುಕುಳ ಮುಂತಾದ ಅನಾಚಾರಗಳು ತಲೆ ಎತ್ತುತ್ತವೆ. ಮಾಧ್ಯಮಗಳಿರುವುದು ಜ್ಞಾನ ಪ್ರಸಾರಕ್ಕಾಗಿ, ಮನರಂಜನೆಗಾಗಿ ನಿಜ. ಆದರೆ ಒಳಿತನ್ನು ಮಾತ್ರ ಸ್ವೀಕರಿಸುವ ಹುಡುಗರ ಸಂಖ್ಯೆ ಕಡಮೆಯೆ..
ಗರ್ಲ್ ಫ್ರೆಂಡ್ ಯಾಕೆ ಬೇಕು…?
ಇದು ಹುಡುಗರು ತಿಳಿದುಕೊಳ್ಲಲೇ ಬೇಕಾದ ಸಂಗತಿ. ನಾವು ಹುಡುಗು ಹುಡುಗರೊಡನೆ ಸುಲಭವಾಗಿ ಬೆರೆಯುತ್ತೇವೆ. ನಮ್ಮ ಹವ್ಯಾಸಗಳು, ಆದರ್ಶಗಳು, ದುಃಖ ದುಮ್ಮಾನಗಳು, ಸಂತೋಷಗಳನ್ನು ಹೀಗೆ ಎಲ್ಲದರಲ್ಲಿಯೂ ಭಾಗಿಯಾಗುತ್ತೇವೆ. ಒಬ್ಬರನ್ನೊಬ್ಬರು ಚೆನ್ನಾಗಿ ಅರಿತಿರುತ್ತೇವೆ. ನಾವೂ ನಮ್ಮ ಗೆಳೆಯರೂ ಗಂಡಾಗಿರುವುದರಿಂದ ಒಬ್ಬರಿಗೊಬ್ಬರು ತುಂಬಾ ಹತ್ತಿರವಾಗುತ್ತೇವೆ. ಆದರೆ ಹುಡುಗಿಯರು ತುಸು ಭಿನ್ನ..
ನಮ್ಮ ಜೀವನದ ಯಾವುದೋ ಮಜಲಲ್ಲಿ ನಮಗೊಬ್ಬಳು ಗೆಳತಿ ಸಿಕ್ಕುತ್ತಾಳೆ ಎಂದುಕೊಳ್ಳೋಣ. ಅವಳೊಂದಿಗೆ ಸೇರಿ ಅವಳ ನೋವು, ಭಾವನೆಗಳು, ಆಸೆ ಆಕಾಂಕ್ಷೆ , ಸಿಟ್ಟು, ನಾಚಿಕೆ ಎಲ್ಲವನ್ನು ನಾವು ಅರಿತುಕೊಳ್ಲಲು ಸಹಾಯಕವಗುತ್ತದೆ.ಲಿಂಗಭೆದವಿಲ್ಲದೆ ನಾವು ಚಿರಂತನ ಸ್ನೇಹದಲ್ಲಿ ಮುಂದುವರೆದು ಎಲ್ಲವನ್ನೂ ಹಂಚಿಕೊಳ್ಳಬಹುದು. ಆಗ ಅವಳಿಗೊಂದು ಮನಸ್ಸಿದೆ, ಅವಳ ಆಲೋಚನೆಗಳು ನಮ್ಮ ಆಲೋಚನೆಗಳಿಗಿಂತ ಹೇಗೆ ಭಿನ್ನವಾಗಿವೆ? ಅವಳು ಸ್ನೇಹವನ್ನು ಅನುಭವಿಸುವ ರೀತಿ, ಅವಳು ನಮ್ಮನ್ನು ಹುಡುಗಿಯರಂತೆಯೇ ಭಾವಿಸುತ್ತಾಳೆಯೇ? ಮತ್ತು ಅವಳ(ಹೆಣ್ಣಿನ) ಮನಸಿನ ಆಯಾಮವನ್ನು ಸಂಪೂರ್ಣವಾಗಿ ಅಲ್ಲದಿದ್ದರೂ ಒಂದಿಷ್ಟಾದರೂ ಅರಿತುಕೊಳ್ಳಬಹುದು. ಅವಳ ನೋವುಗಳಿಗೆ ಸ್ಪಂದಿಸುವುದನ್ನು ಕಲಿಯಬಹುದು, ಇದರಿಂದ ಸಮಾಜದಲ್ಲಿ ಹೆಣ್ಣಿಗೆ ನೀಡಿರುವ ಸ್ಥಾನಮಾನಗಳನ್ನು ಇನ್ನಷ್ಟು ನವೀಕರಿಸುವ ರೀತಿಯನ್ನು ಜೊತೆಗೆ ನಮ್ಮ ಮನಸ್ಸಿನ ವೈಕಲ್ಯಗಳನ್ನು ಸರಿಪಡಿಸಿಕೊಳ್ಳಬಹುದು. ಸ್ನೇಹದ ಅನುಭೂತಿಯನ್ನು ಇನ್ನಷ್ಟು ವೃದ್ಧಿಸಿಕೊಳ್ಳಬಹುದು. ಒಟ್ಟಿನಲ್ಲಿ ಹೇಳುವುದಾದರೆ ನಮ್ಮ ಆತ್ಮಾವಲೋಕನದ ಒಂದು ಭಾಗವಾಗಿ ನಾವು ಗರ್ಲ್ ಫ್ರೆಂಡ್ ಹೊಂದುವುದು ಅತ್ಯವಶ್ಯವಾಗಿದೆ.

ಎಚ್ಚರವಿರಲಿ…

ಇಂಥದೊಂದು ಸ್ನೇಹ ನಮ್ಮ ಸಂಪ್ರದಾಯವನ್ನು ತುಸು ಅಲ್ಲಾಡಿಸಬಹುದು. ಏಕೆಂದರೆ ಉತ್ತಮ ಸಂಬಂಧಗಳನ್ನು ಹಳಸದಂತೆ ಕಾಪಾಡಿಕೊಂಡು ಬರುವ ಈ ಸ್ನೇಹ, ನಾವು ಎಡವಿದಲ್ಲಿ ನುಚ್ಚು ನೂರಾಗುವುದು ಶತಸಿದ್ಧ. ಈ ಸ್ನೇಹದುದ್ದಕ್ಕೂ ನಾವು ಒಳ್ಳೆಯ ಪ್ರೇಮ ಮತ್ತು ಋಜುತ್ವವನ್ನು ಕಾಪಾಡಿಕೊಂಡು ಹೋಗಬೇಕೆ ವಿನಃ ತಪ್ಪು ದಾರಿ ಹಿಡಿಯಬಾರದು. ನಮ್ಮ ಬಗ್ಗೆ ಅವರಲ್ಲಿ secure ಭಾವನೆ ಮೂಡದೇ ಹೋದರೆ ಎಲ್ಲವೂ ಶೂನ್ಯ..
ಕೊನೆಯ ಹನಿ..
ದೇವರು ಸೃಷ್ಟಿಯಲ್ಲಿ ಹೆಣ್ಣು ಅಪ್ರತಿಮವಾದವಳು..ಅವಳೊಂದಿಗಿನ ಸಂಬಂಧಗಳು ಹೂವಿನಷ್ಟೇ ಮೃದುಲ. ಅವು ಎಲ್ಲಿಯೂ ಬಾಡದಂತೆ ರಕ್ಷಿಸಿಕೊಂಡು ಬರುವುದು ಮುಖ್ಯ.

ನೀನಿಲ್ಲದ ಬದುಕು ಬದುಕಲ್ಲ
ನೀನಿಲ್ಲದ ಸಾವು ಸಾವಲ್ಲ.
ನನ್ನ ಬದುಕು-ಸಾವು ನೀನೆಲ್ಲ,
ನೀನಲ್ಲದೇ ನನ್ನಲಿ ನಾನಿಲ್ಲ
“ಕನಸು”ಗಳಿಗೆ ಇನ್ನು ಜೋತೆಯಿಲ್ಲ.

ಲೋಕೇಶನ್ನೂ ಪ್ರೀತ್ರೊ ಹೃದಯ ಇರುತ್ತಾ

ಲೇಖಕರು

lokesh

ಮರೆಯೋಲ್ಲ ನಿನ್ನ! ಮರೆತರೂ ನನ್ನ

ನನ್ನ ಬಗ್ಗೆ ನಾನೇ ಹೇಳಬೇಕ ......

ಅಲ್ವೇ ಮತ್ತೆ ನನ್ನ ಬಗ್ಗೆ ನೀವೇ ಹೇಳೋಕೆ ನಾನೇನು ಗಾಂಧಿ ಪೀಸಾ... ಇಲ್ಲಾ ಕ್ರೇಜಿ ಸ್ಟಾರ್ ರವಿಚಂದ್ರನ್ ?
ಹ್ಹಾ ಹ್ಹಾ ಹ್ಹಾ .....!!!! ಅರೇ ನಿಲ್ಲಿ ಸ್ವಲ್ಪ ನನ್ನ ಪ್ರೊಫೈಲ್ ಇನ್ನು ಮುಗಿದಿಲ್ಲ ಆಗಲೇ ಬೇಜಾರ. ಅಲ್ಲಾ.... ನೀವು ಬೇಜಾರಾದ್ರೆ ನಾನೇನು ಮಾಡೋಕಾಗಲ್ಲ,,,,,,ಈಗ್ಲೂ ಬೇಜಾರಾದ್ರೆ ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳ್ಳಿ,,, ಏಕೆಂದರೆ ನೀವು ನನ್ನ ಫ್ರೆಂಡ್ಸ್ ಅಲ್ಲ್ವಾ. ನೋಡಿ ಇದು ನನ್ನ ಪ್ರೊಫೈಲ್ ಆಗಿರೋದ್ರಿಂದ ನಾನು ನನ್ನ ಸ್ಟೈಲ್ ನಲ್ಲಿ ಹೇಳ್ತೀನಿ ಕಿವಿ (!) ಇದ್ರೆ ಕೇಳಿ......
ಕ್ಷಮಿಸಿ ಅದು ಕೇಳೋಕೆ ಬರಲ್ಲ ಓದಿ ತಿಳಿಕೊಳ್ಳಿ.

Hello ನನ್ನ ಬಗ್ಗೆ ಜಾಸ್ತಿ ಕೇಳಬೇಡಿ ನಿಮ್ಮ ಕಿವಿಗೆ ಒಳ್ಳೇದಲ್ಲ.........
ನಾನು ♥ಸ್ವಲ್ಪ ತರ್ಲೆ♥ಸ್ನೇಹ ಪೂರ್ವ ♥ಬುದ್ದಿವಂತ ♥ಆಶ್ಚರ್ಯ ♥ಜವಬ್ದಾರಿ ♥ಕಳ್ಳ ♥ಮಳ್ಳ ♥ಸುಂದರ ♥ತುಂಟ ♥ಮನಪೂರ್ವಕ ♥ಮಿಂಚುವ ♥ತಲೆ ಕೆಡಿಸುವ ♥ಒಳ್ಳೆ ಮನಸಿನ ♥ಸ್ವಲ್ಪ ಗಲಾಟೆ ♥ಕಣ್ಣ ಸಂಚಲ್ಲಿ ಮಿಂಚುವ ಮಿಂಚು ♥
ನನಗೆ ಕನಸಿದೆ♥ನಗುವಿದೆ♥ಜೊತೆಗೆ ಹೇಳಲಾಗದ ದುಃಖ ಇದೆ♥ಮರೆಯಲಾಗದ ಸಂತೋಷವಿದೆ♥ಕಾಣಿಸದ ಕಣ್ಣೀರಿದೆ♥
ಹಂಚಲಾಗದ ಆಘಾತವಿದೆ♥ದುಃಖ ಮರೆಸೋ ಮನಸುಗಳಿವೆ♥ಕಣ್ಣಿರುಒರೆಸೋ ಕೈಗಳಿವೆ♥ಸುಖ ದುಃಖ ಹಂಚಿಕೊಳ್ಳಲು ನಿಮ್ಮೆಲ್ಲರ ಸ್ನೇಹವಿದೆ♥ಈ ಸ್ನೇಹ ಹೀಗೆ ಚಿರವಾಗಿರಲಿ ಎಂದು ಆಶಿಸೋ ನನ್ನ ಮನಸಿದೆ ♥ಆ ಮನಸಿಗೆ ನಿಮ್ಮ ಸ್ನೇಹದ ಅವಶ್ಯಕತೆ ಇದೆ ♥
my facebook id: llokesh023@gmail.com
97310 31333

ಅನಿಸಿಕೆಗಳು

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.