Skip to main content

ಪ್ಲಾಸ್ಟಿಕ ಒಂದು ವಿಷಕಾರಿ ವಸ್ತು ಎಂಬುದು ನಮಗೆಲ್ಲ ತಿಳಿದ ವಿಷಯ.ಆದರೂ ನಾವು ಅದರ ಬಳಕೆಗೇ ಯಾಕೆ ಜೋತು ಬಿದ್ದಿದ್ದೇವೆ? ಅದು ನಮಗೆ ಅಷ್ಟೊಂದು ಅಗತ್ಯವೆ?ಿ ಇದು ಭೂಮಿಯಲ್ಲಿ ಬೇಗನೆ ಕೊಳೆಯುವುದಿಲ್ಲ ಸಹಸ್ರಾರು ವರ್ಷಗಳವರೆಗೆ,ಪ್ಲಾಸ್ಟಿಕ ಅನ್ನು ಸುಟ್ಟರೆ ಅಲ್ಲಿ ಬಹು ಕಾಲದವರೆಗೆ ಏನನ್ನೂ ಬೆಳೆಯಲಾಗುವುದಿಲ್ಲ. ಆದರೂ ನಾವು ಅದರ ಬಳಕೆಗೆ ಆದ್ಯತೆ ನೀಡುತ್ತೇವೆ.ನಾವಿಂದು ಪ್ಲಾಸ್ಟಿಕ ಅನ್ನು ಬಳಸುತ್ತಾ ಹೋದರೆ ನಮ್ಮ ಮುಂದಿನ ಪೀಳಿಗೆಗೆ ಭೂಮಿಯ ತುಂಬಾ ಬರಿ ಪ್ಲಾಸ್ಟಿಕ ಅನ್ನೇ ಕೊಡುಗೆಯಾಗಿ ನೀಡಬೇಕಾಗುತ್ತದೆ.ಅದು ಅಗತ್ಯವೆ?ಅನಿವಾರ್ಯವೆ? ಅಥವಾ ನಮ್ಮೆಲ್ಲರ ಅಸಹಾಯಕತೆಯೆ?
-----ಮ.ನಾ.ಕೃ(Ma.Naa.Krishna murthy)

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

chetanbs ಧ, 09/16/2009 - 16:26

ಕರ್ನಾಟಕ ಮಾತ್ರವೇನು... ಎಲ್ಲಾ ಕಡೆಯಲ್ಲೂ ಕೂಡ ಪ್ಲಾಸ್ಟಿಕ ಬಳಕೆ ಆದಷ್ಟು ಕಡಿಮೆ ಮಾಡಬೇಕು...

ಮ.ನಾ.ಕೃ ಶನಿ, 09/19/2009 - 14:50

ಆದರೆ ಪ್ಲಾಸ್ಟಿಕ ಬಳಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವೇ ಆಗುತ್ತಿಲ್ಲವಲ್ಲ

praveen sooda ಭಾನು, 09/20/2009 - 13:49

ನಾನು ಪ್ಲಾಸ್ಟಿಕ್ ನ ದ್ವೇಷಿ ಕರ್ನಾಟಕ ಅಂತ ಅಲ್ಲ ಎಲ್ಲ ಕಡೆ ಇದನ್ನ ಬಳಸದೇ ಇರೋ ಹಾಗೆ ಆಗ್ಬೇಕು ಆಗ್ಲೇ ಎ ಪ್ರಕೃತಿ ಮಾತೆ ಇನ್ನೂ ಅಂದವಾಗಿ ನಾಗೊಕೆ ಸಾಧ್ಯ

ಮ.ನಾ.ಕೃ ಗುರು, 10/01/2009 - 17:15

ಎಲ್ಲ ಕಡೆಯು ಜಾಗೃತಿ ಮೂಡಿದಾಗಲಷ್ಟೇ ಇದನ್ನು ನಿಯಂತ್ರಿಸಲು ಸಾಧ್ಯ, ಥ್ಯಾಂಕ್ಯು ಫಾರ್ ದಿ ಕಾಂಮೆಂಟ್

meghariya ಭಾನು, 10/25/2009 - 17:25

ಪ್ಲಾಸ್ಟಿಕ್ ಪೆಟ್ರೋಲಿಯಮ್ ಕಚ್ಹಾ ತೈಲದ ಶುದ್ದೀಕರಣದ ಒಂದು ಉಪ ಉತ್ಪನ್ನ, ಇಂದು ಪ್ಲಾಸ್ಟಿಕ್ ನ ಬಳಕೆ ಎಲ್ಲಿವರೆಗೆ ತಲುಪಿದೆ ಎಂದರೆ ನಮ್ಮ ಹೆಂಗಸರು ಬಳಸುವ ಹಣೆಬಿಂದಿಯಿಂದ ವಿಮಾನದ ಸಣ್ಣ ಸಣ್ಣ ಬಿಡಿಭಾಗಗಳ ತಯಾರಿಕೆವರೆಗೆ ಬೇಕಾಗಿದೆ ವಿಷಯ ಹೀಗಿರುವಾಗ ಪ್ಲಾಸ್ಟಿಕ್ ಅನ್ನು ಸಾರಾಸಗಟಾಗಿ ತಿರಸ್ಕರಿಸಲಾಗದು, ಪ್ಲಾಸ್ಟಿಕ್ ಉಪಯೋಗದಿಂದ ಭಾರ ಮತ್ತು ವೆಚ್ಹವನ್ನು ಕಮ್ಮಿ ಮಾಡಬಹುದು. ಹಣೆಗೆ ಹೇಗೆ ಕುಂಕುಮ ಹಚ್ಹಬಹುದೋ ಹಾಗೆ ಎಲ್ಲಿ ಅದರ ಅಗತ್ಯ ಇಲ್ಲವೋ ಅಲ್ಲಿ ಬಳಕೆ ಕಮ್ಮಿ ಮಾಡಲು ಪ್ರಯತ್ನಿಸೋಣ ಮತ್ತು ಜನರಲ್ಲಿ ತಿಳುವಳಿಕೆ ತರೋಣ.

ಮ.ನಾ.ಕೃ ಧ, 01/13/2010 - 16:15

ನಿಮ್ಮ ಅಭಿಪ್ರಾಯ ಸರಿ ಎನಿಸಿದರೂ ಇರುವ ಒಂದೇ ಭೂಮಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟೂ ಕಡಿಮೆ ಮಾಡಬಹುದಲ್ಲವೆ?

ಉಮಾಶಂಕರ ಬಿ.ಎಸ್ ಭಾನು, 11/15/2009 - 21:34

ಪ್ಲಾಸ್ಟಿಕ್ ಕೊಳೆಯುವುದಕ್ಕೆ 300ಕ್ಕೂ ಹೆಚ್ಚು ವರ್ಷಗಳು ಬೇಕು, ಆದ್ದರಿಂದ ಅದು ಮನುಕುಲಕ್ಕೆ ಮಾರಕ. ಈ ವಿಷಯವನ್ನು ಮರೆಯದೆ ಯಾವಾಗಲು, ಎಲ್ಲರು, ಎಲ್ಲಾ ಜಾಗದಲ್ಲೂ ಪ್ರಸ್ತಾಪಿಸಿದರೆ, ಎಚ್ಚರಿಕೆವಹಿಸಿದರೆ ಪ್ಲಾಸ್ಟಿಕ್ ಬಳಕೆಯನ್ನು ನಿಷೇದಿಸಬಹುದು ಅಷ್ಟೆ ಅಲ್ಲ, ಅದು ಇಲ್ಲದಂತೆ ಮಾಡಬಹುದು.

ಮ.ನಾ.ಕೃ ಧ, 01/13/2010 - 16:17

ಥ್ಯಾಂಕ್ಯೂ, ಎಲ್ಲರೂ ಈ ಬಗ್ಗೆ ಯೋಚಿಸುವಂತಾಗಬೇಕು,ಪ್ಲಾಸ್ಟಿಕ್ ಬಳಕೆಯ ವಿರುದ್ದ ಜನಾಂದೋಲನ ರೂಪುಗೊಳ್ಳಬೇಕು

  • 2794 views