Skip to main content

ಹಿಂದಿನ ಬಾಗಿಲಿನಿಂದ ಹಿಂದಿ ಹೇರಿಕೆ: ಗ್ರಾಹಕ ಸೇವೆ

ಬರೆದಿದ್ದುSeptember 9, 2009
2ಅನಿಸಿಕೆಗಳು

ರಾಷ್ಟ್ರ ಭಾಷೆ ಎಂಬ ಕಿರೀಟ ಕೂರಿಸಿ ಹಿಂದಿ ಭಾಷೆನ ಕನ್ನಡಿಗರ ಮೇಲೆ ಹೇರಕ್ಕೆ ಏನೆಲ್ಲಾ ಕಸರತ್ತು ಮಾಡ್ತಿದೆ ನಮ್ಮ ಕೇಂದ್ರ ಸರ್ಕಾರ.
ಶಿಕ್ಷಣ, ಉದ್ಯೋಗ ಇಲ್ಲೆಲ್ಲಾ ಹಿಂದಿ ತರುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಗೇಲಿ ಮಾಡುತ್ತಿರುವಂತಿದೆ.

ಈಗಾಗಲೇ ಓದು ಬರಹ ಮುಗಿಸಿರುವ, ಸರ್ಕಾರೇತರ ಉದ್ಯೋಗ ಮಾಡುತ್ತಿರುವ ಜನರಿಗೆ ಹಿಂದಿ ಹೇರಿಕೆ ಹೇಗೆ ಮಾಡಬಹುದು?
ಅದಕ್ಕೂ ಒಂದು ಪ್ಲಾನ್ ಕಂಡ್ಕೊಂಡಿದಾರೆ ನಮ್ಮ ಸರ್ಕಾರದವರು - ಗ್ರಾಹಕ ಸೇವೆಯಲ್ಲಿ ಹಿಂದಿ ಬಳಕೆ ತರಿಸಿ, ಬೇರೆ ಭಾಷಿಕರಿಗೆ ಹಿಂದಿ ಕಲಿಯದೆ ದಾರಿಯಿಲ್ಲ ಎಂಬಂತಹ ವಾತಾವರಣ ನಿರ್ಮಿಸುವುದು.

ಕೆಲವು ಉದಾಹರಣೆಗಳನ್ನು ನೋಡುವದಾದರೆ,
೧. ಮನೆಗೆ ತರಿಸುವ ಅಡುಗೆ ಅನಿಲದ ಸಿಲಿಂಡರ್-ನಲ್ಲಿ ಸುರಕ್ಷತಾ ಸೂಚನೆ ಹಿಂದಿಯಲ್ಲಿರುತ್ತವೆ.
[img_assist|nid=5146|title=ಗ್ಯಾಸ್|desc=|link=none|align=center|width=640|height=480]

೨. ಎಲ್ಲರೂ ಪ್ರಯಾಣಿಸುವ ರೈಲುಗಳಲ್ಲಿ ಊರಿನ ಹೆಸರು ಮತ್ತು ಸುರಕ್ಷತೆ ಮಾಹಿತಿ ಹಿಂದಿಯಲ್ಲಿ ಬರೆಯಲಾಗಿರುತ್ತದೆ.
[img_assist|nid=5147|title=ರೈಲ್ವೇ|desc=|link=none|align=center|width=640|height=472]

೩. ಬ್ಯಾಂಕು-ಗಳಲ್ಲಿ ನೀಡುವ ಚಲನ್-ಗಳು, ಮಾಹಿತಿ ಪತ್ರಗಳು ಇಂಗ್ಲಿಷ್ ಮತ್ತು ಹಿಂದಿಯಲ್ಲಿರುತ್ತವೆ. ಆದರೆ, ಬ್ಯಾಂಕು ಇರುವ ಪ್ರದೇಶದ ಭಾಷೆ ಇರುವುದಿಲ್ಲ.
೪. ಎಲ್.ಐ.ಸಿ ಯವರ ಹೆಚ್ಚಿನ ಪಾಲಿಸಿಗಳ ಹೆಸರು ಮತ್ತು ಜಾಹೀರಾತುಗಳು ಹಿಂದಿಯಲ್ಲಿರುತ್ತವೆ.
೫. ದೂರದರ್ಶನ್-ನಲ್ಲಿ ಪ್ರಸಾರವಾಗುವ ಕ್ರಿಕೆಟ್ ಮ್ಯಾಚ್-ಗಳ ಕಾಮೆಂಟರಿ ಹೆಚ್ಚಾಗಿ ಹಿಂದಿಯಲ್ಲಿರುತ್ತವೆ.

ದೇಶದ ವೈವಿಧ್ಯತೆಯನ್ನು ಸರ್ವನಾಶ ಮಾಡಕ್ಕೆ ಮುಂದಾಗಿರೋ ಈ ಹಿಂದಿ ಹೇರಿಕೆಯನ್ನು ವಿರೋಧಿಸಬೇಕು. ಈ ಹಿಂಬಾಗಿಲ ಹೇರಿಕೆಯನ್ನು ಕೊನೆ ಮಾಡಕ್ಕೆ ಹಿಂದಿ ಭಾಷಿಕರು, ಕನ್ನಡಿಗರು, ಬೆಂಗಾಲಿಗಳು, ತಮಿಳರು, ತೆಲುಗರು, ಮರಾಠಿಗಳು, ಗುಜರಾಥಿಗಳು, ಸಿಂಧಿಗಳು, ರಾಜಾಸ್ಥಾನಿಗಳು, ಪಂಜಾಬಿಗಳು, ಅಸ್ಸಾಮಿಗಳು, ಕಾಶ್ಮೀರಿಗಳು ಎಲ್ರೂ ಒಂದಾಗಬೇಕು, ಮುಂದಾಗಬೇಕು.

ಲೇಖಕರು

ಪ್ರಿಯಾಂಕ್

ಸಮಯ ಸಿಕ್ಕಾಗ ತಿಳಿಸುತ್ತೇನೆ.
ಸದ್ಯಕ್ಕೆ ಕ್ಷಮೆ ಇರಲಿ.

ಅನಿಸಿಕೆಗಳು

ಗಂಧ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 09/10/2009 - 11:00

ಹಿಂದಿ ಒಂದುಕಡೆ ಯಾದರೆ , ನಮ್ಮ ಚಿನ್ನ ತಂಬಿ ಯಡಿಯೂರಿ ತಮಿಳನ್ನೂ ಒಂದು ಭಾಷೆಯಾಗಿ ಕಲಿಯುವುದನ್ನು ಖಡ್ಡಾಯ ಮಾಡುವ ದಿನ ದೂರವಿಲ್ಲ. ಒಟ್ಟಿನಲ್ಲಿ,ಕರ್ನಾಟಕದಲ್ಲಿ ಕನ್ನಡಮ್ಮ ಕತ್ತೆ ಮರಿ......!!!!

sanjaykattimani ಶನಿ, 09/12/2009 - 04:24

ತಮಿಳು ನಾಡಿನಲ್ಲಿ ಈ ಮೆಲಿನ 2 ಚಿತ್ರಗಳು ತಮಿಳಿನಲ್ಲಿವೆಯೆ? ಬೆರೆ ರಾಜ್ಯಗಳಲ್ಲಿ ಹೆಗಿದೆ?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.