Skip to main content

ಅಧಿಕೃತ ಭಾಷೆಗೂ, ರಾಷ್ಟ್ರ ಭಾಷೆಗೂ ಇರುವ ವ್ಯತ್ಯಾಸ ಏನು?

ಬರೆದಿದ್ದುSeptember 6, 2009
5ಅನಿಸಿಕೆಗಳು

ಹಳಷ್ಟು ದಿನಗಳಿಂದ ಕನ್ನಡಿಗರನ್ನು ಹತ್ತಿರದಿಂದ ನೋಡಿದಾಗ ನನಗಾದ ಅನುಭವ ಇದು.
ಕನ್ನಡಿಗರಿಗೆ, ನಿಜವಾಗಿಯೂ ಅಧಿಕೃತ ಭಾಷೆ ಮತ್ತು ರಾಷ್ಟ್ರ ಭಾಷೆಯ ಮಧ್ಯ ಇರುವ ವ್ಯತ್ಯಾಸದ ಬಗ್ಗೆ ಸರಿಯಾದ ಅರಿವು ಇದ್ದಂತಿಲ್ಲ.
ಈ ಲೇಖನ, ಆ ಭಾಷಾ ಗೊಂದಲವನ್ನು ಸ್ವಲ್ಪ ಮಟ್ಟಿಗೆ ಹೋಗಲಾಡಿಸುವ ಪ್ರಯತ್ನವಾಗಿದೆ.

ರಾಷ್ಟ್ರ ಭಾಷೆ ಎಂಬುದು ಇಡೀ ದೇಶದ ಜನರನ್ನು, ಸಂಸ್ಕೃತಿಯನ್ನು, ಇತಿಹಾಸವನ್ನೂ ಬಿಂಬಿಸುತ್ತದೆ.
ಅಧಿಕೃತ ಭಾಷೆಯನ್ನು ಆ ದೇಶದ ಸರ್ಕಾರ(ಗಳು), ತಮ್ಮ ದಿನನಿತ್ಯದ ಚಟುವಟಿಕೆಯಲ್ಲಿ ಬಳಸುತ್ತವೆ.

ಇನ್ನು, ಭಾರತದ ವಿಷಯಕ್ಕೆ ಬಂದಾಗ, ಈ ದೇಶದ ಜನರನ್ನು, ಸಂಸ್ಕೃತಿಯನ್ನು, ಇತಿಹಾಸವನ್ನು ಪೂರ್ತಿಯಾಗಿ ಬಿಂಬಿಸುವ ಯಾವ ಭಾಷೆಯೂ ಇಲ್ಲ ಹಾಗೂ ಇರಲಿಲ್ಲ.
ಹಾಗಾಗಿ, ಭಾರತಕ್ಕೆ ಒಂದೇ ರಾಷ್ಟ್ರ ಭಾಷೆ ಎಂಬುದಿಲ್ಲ. ನೀವು, ಭಾರತಕ್ಕೊಂದು ರಾಷ್ಟ್ರ ಭಾಷೆಯಿದೆ ಎಂದು ನಂಬಿದ್ದರೆ, ಅದು ತಪ್ಪರಿವು.
ಅಧಿಕೃತ ಭಾಷೆಯಾಗಿ ಕೇಂದ್ರ ಸರ್ಕಾರ ಇಂಗ್ಲಿಷ್ ಮತ್ತು ಹಿಂದಿ ಎರಡನ್ನೂ ಬಳಸುತ್ತದೆ.
ಹಾಗೂ ರಾಜ್ಯ ಸರ್ಕಾರಗಳು, ತಮ್ಮ ತಮ್ಮ ಭಾಷೆಗಳನ್ನು ಆಯಾ ರಾಜ್ಯಗಳಲ್ಲಿ ಅಧಿಕೃತ ಭಾಷೆಗಳಾಗಿ ಬಳಸುತ್ತಿವೆ.
ಹೀಗಿರುವಾಗ, ಕರ್ನಾಟಕದಲ್ಲಿ ಕನ್ನಡವೇ ರಾಷ್ಟ್ರ ಭಾಷೆಯ ಸ್ಥಾನ ತುಂಬುತ್ತದೆ ಎನ್ನಬಹುದು.

ತಮ್ಮದೇ ಸತ್ಯಾನ್ವೇಷಣೆ ಮಾಡಿರುವ ಇಬ್ಬರು ಉತ್ತರ ಭಾರತೀಯರು ಈ ವಿಷಯವಾಗಿ ಬರೆದಿರುವ ಬ್ಲಾಗ್ ಒಂದು ಇಲ್ಲಿದೆ: http://india.targetgenx.com/2007/10/14/you-think-you-know-what-indias-national-language-is/
ಒಂದೇ ರಾಷ್ಟ್ರ ಭಾಷೆ ಎಂಬ ತಪ್ಪು ಕಲ್ಪನೆಯಿಂದಾಗುವ ತೊಂದರೆಗಳನ್ನೂ ಇವರು ಚೆನ್ನಾಗಿ ವಿವರಿಸಿದ್ದಾರೆ.
ಹಿಂದಿ ಭಾಷಿಕರೇ ಸತ್ಯವನ್ನರಿಯುತ್ತಿರುವಾಗ, ಕನ್ನಡಿಗರು ಮಾತ್ರ ಸುಳ್ಳನ್ನು ನಂಬಿಕೊಂಡೇ ಬದುಕುತ್ತಿರಬೇಕಾ?

ಲೇಖಕರು

ಪ್ರಿಯಾಂಕ್

ಸಮಯ ಸಿಕ್ಕಾಗ ತಿಳಿಸುತ್ತೇನೆ.
ಸದ್ಯಕ್ಕೆ ಕ್ಷಮೆ ಇರಲಿ.

ಅನಿಸಿಕೆಗಳು

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 09/07/2009 - 09:43

ನಮಸ್ಕಾರ ಗುರು ತುಂಬಾ ಚೆನ್ನಾಗಿ ಬಂದಿದೆ ನಿಮ್ಮ ಬರಹ.

ಪೂನಾವಾಲ (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 09/07/2009 - 13:52

ಪ್ರಿಯಾಂಕ್ ರವರೆ,

ನಿಮ್ಮ ಈ ಬರಹದ ಉದ್ದೇಶವೇ ನನಗೆ ಅರ್ಥವಾಗಲಿಲ್ಲ. ಹಾಗೇ ನೀವು ಮಂಡಿಸಿರುವ ತರ್ಕವೂ ಕೂಡ. ಹಿಂದಿ ಭಾಷೆಯು ರಾಷ್ಟ್ರಭಾಷೆ ಅಲ್ಲ ಎಂದು ನಿಮಗೆ ತಿಳಿಸಿದವರು ಯಾರು. ನಮಗೆಲ್ಲಾ ತಿಳಿದಂತೆ ಭಾರತ ದೇಶವು ಹಿಂದಿಯನ್ನು ರಾಷ್ಟ್ರಭಾಷೆಯಾಗಿ ಸ್ವೀಕರಿಸಿದೆ. ಹಾಗೆಯೇ ಅದು 'ಅಧಿಕೃತ ಭಾಷೆ' ಮತ್ತು' ಇತರೆ ರಾಜ್ಯಗಳಲ್ಲಿರುವಂತೆ ವ್ಯಾವಹಾರಿಕ ಭಾಷೆಯೂ ಹೌದು.

ನೀವು ತಿಳಿಸಿರುವಂತೆ ಹಿಂದಿ ಇಡೀ ದೇಶದ ಜನರನ್ನು, ಸಂಸ್ಕೃತಿಯನ್ನು, ಇತಿಹಾಸವನ್ನು ಪೂರ್ತಿಯಾಗಿ ಬಿಂಬಿಸುವ ಭಾಷೆಯಾಗಿಲ್ಲದಿರಬಹುದು. ಆದರೆ ಅದು ಭಾರತದ ರಾಷ್ಟ್ರಭಾಷೆ ಎಂಬುದನ್ನು ನಾವು-ನೀವೆಲ್ಲರೂ ನಮ್ಮ ಶಾಲಾ ಪಠ್ಯ ಪುಸ್ತಕಗಳಲ್ಲಿ ಓದಿದ್ದು ಸುಳ್ಳೇ.

ಪ್ರಿಯಾಂಕ್ ಸೋಮ, 09/07/2009 - 14:05

ಪೂನಾವಾಲಾ ಅವರೇ,
ನಾವು ನೀವೆಲ್ಲರೂ ಶಾಲೆಯಲ್ಲಿ ಓದಿದ್ದು ಸುಳ್ಳು.
ನಮ್ಮ ದೇಶಕ್ಕೆ ರಾಷ್ಟ್ರ ಭಾಷೆ ಎಂಬುದಿಲ್ಲ ಅಂತ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಭಾರತೀಯ ಭಾಷಾ ಇಲಾಖೆಯೇ ಸ್ಪಷ್ಟಪಡಿಸಿದ್ದಾರೆ.
ಹೆಚ್ಚಿನ ವಿವರಿಗಳಿಗಾಗಿ, ಇಲ್ಲಿ ನೋಡಿ.
http://kalyana-raman.blogspot.com/2009/08/blog-post_31.html

ಭಾರತವು ಯಾವುದೇ ಭಾಷೆಯನ್ನು ರಾಷ್ಟ್ರಭಾಷೆಯಾಗಿ ಸ್ವೀಕರಿಸಿಲ್ಲ. ಇಲ್ಲಿ ೨೩ ಭಾಷೆಗಳನ್ನು ಅಧಿಕೃತ ಭಾಷೆಯಾಗಿ ಘೋಷಿಸಿದ್ದಾರೆ.
ಇದೇ ವಿಚಾರವಾಗಿ ಮುಂಚೆಯೂ ನಡೆದ ಕೆಲವು ಘಟನೆಗಳನ್ನು ಇಲ್ಲಿ ಚೆನ್ನಾಗಿ ವಿವರಿಸಿದ್ದಾರೆ. ಖಂಡಿತ ನೋಡಿ. http://karnatique.blogspot.com/2009/09/december-10-1946-in-indian-parliament.html

ಪೂನಾವಾಲ (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 09/07/2009 - 14:15

ಪ್ರಿಯಾಂಕ್ ರವರೇ...

ನನ್ನ ಅಜ್ನಾನಕ್ಕೆ ಕ್ಷಮೆಯಿರಲಿ. ನನಗೆ ಇದರ ಬಗ್ಗೆ ಅರಿವಿರಲಿಲ್ಲ. ಈಗಷ್ಟೇ ಅನೇಕ ಜಾಲತಾಣಗಳನ್ನು ಈ ಕುರಿತಾಗಿ ನೋಡಿದೆ. ನೀವು ಹೇಳಿದ್ದು ಸರಿ. ಭಾರತಕ್ಕೆ ಯಾವುದೇ 'ರಾಷ್ಟ್ರ ಭಾಷೆ' ಇಲ್ಲ. ನನ್ನ ಈ ಮೊದಲಿನ ಅಭಿಪ್ರಾಯವನ್ನು ಕಡೆಗಣಿಸಿ ಹಾಗೂ ಕ್ಷಮಿಸಿ.

ಪ್ರಿಯಾಂಕ್ ಸೋಮ, 09/07/2009 - 15:12

ಪೂನವಾಲ ಅವರೇ,
ನೀವು ಜ್ನ್ಯಾನ ಹೆಚ್ಚಿಸಿಕೊಳ್ಳಲು ಕೈಗೊಂಡ ಕೆಲಸ ನೋಡಿ, ಖುಷಿ ಆಯ್ತು.

ಇದು ನಿಮ್ಮೊಬ್ಬರ ಅಜ್ನ್ಯಾನ ಅಲ್ಲ. ನಮ್ಮಲ್ಲಿ ಬಹುತೇಕ ಜನರಿಗೆ ಈ ತಪ್ಪಭಿಪ್ರಾಯವಿದೆ.
ಇದು ಒಂದು ರೀತಿಯಲ್ಲಿ ನಮಗೆ ಮಾರಕ ಕೂಡ. ಅದನ್ನು ಹೋಗಲಾಡಿಸಲು ಒಂದು ಚಿಕ್ಕ ಪ್ರಯತ್ನ ನನ್ನದು.
ನೀವು ನಿಮ್ಮ ಗೆಳೆಯರಿಗೂ ಈ ಬಗ್ಗೆ ಹೇಳಿ. ಸತ್ಯವು ಎಲ್ಲೆಡೆ ಹಬ್ಬಲಿ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.