ದಾರಿ ತಪ್ಪಿ ಬೆಂಗಳೂರಿಗೆ ಬಂದಂಗಿದೆ ರಿಲೈಯನ್ಸ್
ಬೆ೦ಗಳೂರಿನ ಹಲವೆಡೆ ರಿಲೈಯನ್ಸ್ ಹಣಕಾಸು ಸ೦ಸ್ಥೆಯ (reliance capital) ಕನ್ಸೂಮರ್ ಫೈನಾನ್ಸ್ ವಿಭಾಗವು ತಮ್ಮ ಹಿ೦ದಿ ಜಾಹೀರಾತುಗಳನ್ನು ಹಾಕಿದ್ದಾರೆ. ಜೊತೆಗೆ ಎಫ್.ಎ೦. ರೇಡಿಯೋಗಳಲ್ಲಿ ಇ೦ಗ್ಲೀಷ್ ನಲ್ಲಿ ಜಾಹೀರಾತುಗಳನ್ನು ನೀಡುತ್ತಿದ್ದಾರೆ. ಈ ಸಂಸ್ಥೆಯು ಯಾವುದೇ ಜಾಹೀರಾತುಗಳಲ್ಲೂ ಕನ್ನಡ ಬಳಸುವ ಪ್ರಯತ್ನ ಮಾಡೇ ಇಲ್ಲ.ಬೆ೦ಗಳೂರಿನ ಗುಟ್ಟಳ್ಳಿ ಸರ್ಕಲ್ ನಲ್ಲಿ ರಿಲೈಯನ್ಸ್-ನ ಹಿ೦ದಿ ಜಾಹೀರಾತು ಫಲಕದ ಫೋಟೋ ಲಗತ್ತಿಸಲಾಗಿದೆ.
ರಸ್ತೆಯಲ್ಲಿ ಹೋಗುತ್ತಿರುವ ವ್ಯಕ್ತಿಯು ಐದು ನಿಮಿಷ ಕಣ್ಣು ಮಿಟುಕಿಸದೆ ನಿಂತು ಈ ಜಾಹೀರಾತು ಫಲಕವನ್ನು ನೋಡಿದರೂ ಏನೂ ತಿಳಿಯದ ಹಾಗೆ ಬರೆಯಲಾಗಿದೆ. ರಿಲೈಯನ್ಸ್ ಕ೦ಪನಿಯ ಜಾಹೀರಾತುಗಳನ್ನು ನೋಡಿದ ಮೇಲೆ "ಇವರಿಗೆ ಮಾರುಕಟ್ಟೆಯ ಅರಿವೇ ಇಲ್ಲವೇನೋ?!" ಎಂಬ ಶ೦ಕೆ ಮೂಡಿಬರೋದು ಸಹಜ. ಇವರು ಗ್ರಾಹಕನ ಮನಸ್ಸಿನ ಭಾಷೆಯನ್ನೇ ಬಳಸದೆ ಗ್ರಾಹಕನನ್ನು ಆಕರ್ಷಿಸುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ ಎ೦ಬುದು ಗಮನಕ್ಕೆ ಬರುತ್ತಿದೆ.
ಹೊಸದಾಗಿ ಬಂದ ರಿಲೈಯನ್ಸ್ ಕನ್ಸೂಮರ್ ಫೈನಾನ್ಸ್ ಕ೦ಪನಿಯು ಜನರಲ್ಲಿ ತನ್ನ ಇಮೇಜ್ ಬೆಳೆಸಲು ಪ್ರಯತ್ನಿಸುತ್ತಿದೆ. ಗ್ರಾಹಕರನ್ನು ಸೆಳೆಯಲು ಮಾರ್ಕೆಟ್-ನ ಭಾಷೆ ಮಾತನಾಡಬೇಕು ಎಂದು ಇವರು ತಿಳಿದುಕೊಂಡಂತೆ ಕಾಣುತ್ತಿಲ್ಲ. ಗ್ರಾಹಕರಿಗೆ ಸೂಕ್ತ ಮಾಹಿತಿ ಸರಿಯಾದ ರೀತಿಯಲ್ಲಿ ನೀಡುವುದು ಇವರ ಗುರಿಯಾಗಬೇಕು.
ಬನ್ನಿ, ರಿಲೈಯನ್ಸ್ ಕ೦ಪನಿಯವರಿಗೆ ಮಿಂಚೆ ಬರೆದು, ಬೆ೦ಗಳೂರಿನ ಜನತೆಯನ್ನು ಮುಟ್ಟಲು ಜಾಹೀರಾತಿನಲ್ಲಿ ಕನ್ನಡದ ಬಳಕೆಯೇ ಉತ್ತಮವಾದ ದಾರಿ ಎ೦ದು ತಿಳಿಸೋಣ. "ಗ್ರಾಹಕರೊಂದಿಗೆ ಇತರೆ ವ್ಯವಹಾರಗಳಲ್ಲೂ ಕನ್ನಡ ಬಳಸೋದರಿಂದ, ಪಾರದರ್ಶಿಕತೆ ಹೆಚ್ಚಿ, ಗ್ರಾಹಕರಿಗೆ ಕಂಪನಿಯ ಮೇಲೆ ನಂಬಿಕೆ ಮೂಡುತ್ತದೆ" ಎಂದೂ ಹೇಳೋಣ. ಆರ್ಥಿಕ ಹಿಂಜರಿಕೆಗೆ ಒಳಗಾಗಿ ಕಷ್ಟಕರವಾಗಿರುವ ಮಾರುಕಟ್ಟೆಯಲ್ಲಿ, ಶುರುವಿನಲ್ಲೇ ಈ ರೀತಿ ಎಡವಿದರೆ ನಿಮ್ಮಿಂದ ಹೆಚ್ಚಿನದು ಸಾಧಿಸುವುದು ಸಾಧ್ಯವಾಗದೇ ಹೋದೀತು ಎಂದು ಎಚ್ಚರಿಸೋಣ.
ಇವರ ಮಿ೦ಚೆ: customercare@relianceconsumerfinance.com
query@relianceconsumerfinance.com
--
ಜಾಗೃತ ಗ್ರಾಹಕರು/jaagruta graahakaru
ಸಾಲುಗಳು
- Add new comment
- 705 views
ಅನಿಸಿಕೆಗಳು
ರಿಲೆಯನ್ಸ ಬೆ೦ಗಳೂರಿಗೆ ದಾರಿ
ರಿಲೆಯನ್ಸ ಬೆ೦ಗಳೂರಿಗೆ ದಾರಿ ತಪ್ಪಿ ಬನ್ದಿಲ್ಲ.ಇಲ್ಲಿನ ಜನರು ನಿರಭಿಮಾನಿಗಲು ಅನ್ತಾ ಆವರಿಗೆ ಚನ್ನಾಗಿ ಗೊತ್ತಿದೆ.
ಇವರನ್ನು ಸುಮ್ಮನೆ ಬಿದಬಾರದು. ಇಲ್ಲಿನ್ದ ಒದ್ದು ಹಾಕಿರಿ.