Skip to main content

ಮೆಗಾ ಮಾರ್ಟ್-ನಲ್ಲಿ ಮೈಕ್ರೋ ಕನ್ನಡ

ಬರೆದಿದ್ದುAugust 10, 2009
noಅನಿಸಿಕೆ

ಅರವಿಂದ್ ಮಿಲ್ಸ್-ನವರ ಬಟ್ಟೆ ಬರೆ ಮಾರಾಟ ಮಳಿಗೆಯೇ "ಮೆಗಾಮಾರ್ಟ್". ಮೆಗಾಮಾರ್ಟ್ ಅಂಗಡಿಗಳು ಬೆಂಗಳೂರಿನಲ್ಲಿ ಹಲವೆಡೆ ನೀವು ನೋಡಿರಬಹುದು.
ಇವರ ಅತಿದೊಡ್ಡ ಮಳಿಗೆ ಇರುವುದು ಬನಶಂಕರಿಯಲ್ಲಿ. ಈ ನಾಲ್ಕಂತಸ್ತಿನ ಮೆಗಾ ಮಾರ್ಟ್ ಮಳಿಗೆಯಲ್ಲಿ ಕನ್ನಡಕ್ಕೆ ಮೈಕ್ರೋದಷ್ಟು ಜಾಗವೂ ನೀಡಿಲ್ಲ ಎನ್ನಬಹುದು.

ಮಳಿಗೆಯಲ್ಲಿ ಕನ್ನಡದ ಕೊರತೆಯ ದೊಡ್ಡ ಪಟ್ಟಿಯೇ ಮಾಡಬಹುದು.
* ಗಂಡಸರ ವಿಭಾಗ, ಹೆಂಗಸರ ವಿಭಾಗ, ಮಕ್ಕಳ ವಿಭಾಗ ಎಂಬ ಮಾಹಿತಿ ಬೋರ್ಡ್-ಗಳು ಇಂಗ್ಲಿಷ್-ನಲ್ಲಿ ಮಾತ್ರ ಇದೆ.
o ಇಂಗ್ಲಿಷ್ ಬಲ್ಲವರೊಡನೆ ಮಾತ್ರ ವ್ಯಾಪಾರವೇ?

* ಬ್ರಾಂಡ್-ನ ಹೆಸರು, ಅಳತೆ, ಎರಡು ಕೊಂಡರೆ ನಾಲ್ಕು ಉಚಿತ, ಒಂದಕ್ಕೆ ೨೯೯ ರೂ ಎರಡಕ್ಕೆ ೪೯೯ ರೂ, ಇತ್ಯಾದಿ ಉಪಯುಕ್ತ ಮಾಹಿತಿ ಕೇವಲ ಇಂಗ್ಲಿಷ್-ನಲ್ಲಿ ನಮೂದಿಸಲಾಗಿದೆ.
* ಮಳಿಗೆಯ ಒಳಗೆ "ಜಾಹೀರಾತು ಘೋಷಣೆಗಳು" ಆಗಾಗ ಕೇಳಿ ಬರುತ್ತವೆ. "ನಾಲ್ಕನೇ ಅಂತಸ್ತಿನಲ್ಲಿ ಮಕ್ಕಳ ಬಟ್ಟೆ ಮೇಲೆ ೬೦% ರಿಯಾಯಿತಿ" ಎಂಬಂತಹ ಘೋಷಣೆಗಳು ಇಂಗ್ಲಿಷ್-ನಲ್ಲಿ ಮಾತ್ರ.
o ರಿಯಾಯಿತಿ ಇರುವುದರ ಬಗ್ಗೆ ಗ್ರಾಹಕರಿಗೆ ಅರ್ಥವಾಗುವ ರೀತಿಯಲ್ಲಿ ಹೇಳದಿದ್ದರೆ, ಕೊಂಡುಕೊಳ್ಳುವ ಮನಸ್ಸಾದರೂ ಹೇಗೆ ಮಾಡುತ್ತಾರೆ?

* ಇಡೀ ಬೆಂಗಳೂರಿನ ಜನತೆ ಕನ್ನಡ ಹಾಡುಗಳನ್ನು ಪ್ರೀತಿಸುತ್ತಿರುವಾಗ, ಇವರ ಮಳಿಗೆಯಲ್ಲಿ ಹಿಂದಿ ಹಾಡುಗಳು ಮಾತ್ರ ಹಾಕಲಾಗುತ್ತದೆ.
* ಕೆಲವು ಪರಿಚಾರಕರೂ ಕನ್ನಡ ಅರಿಯದವರಾಗಿದ್ದಾರೆ. ಅವರು ಇಂಗ್ಲಿಷ್-ನಲ್ಲಿ ಮಾತ್ರ ಸಹಾಯ ನೀಡಬಲ್ಲರು.
o ಕನ್ನಡದವರಿಗೆ ಯಾವುದೇ ರೀತಿಯ ಸಹಾಯ ನೀಡಬಾರದು ಎಂಬ ಸಿದ್ಧಾಂತವೇನಾದರೂ ಪಾಲಿಸುತ್ತಿದ್ದಾರೋ?
ಒಟ್ಟಿನಲ್ಲಿ, ಕನ್ನಡದವರಿಗೆ ಇಲ್ಲಿ ಖರೀದಿ ಮಾಡುವುದು ಕಷ್ಟದ ಕೆಲಸವೇ.

"ಯಾಕ್ರಪ್ಪಾ ನೀವು ಕನ್ನಡ ಬಳಸಿಲ್ಲ??" ಎಂದು ನಾವು ವಿಚಾರಿಸಿದಾಗ, ಇವರಿಂದ ದೊರೆತ ಉತ್ತರ "ಇಂಗ್ಲಿಷ್ ಅಳವಡಿಸುವುದು ನಮಗೆ ಸುಲಭವಾಗಿತ್ತು. ನಮ್ಮ ಅನುಕೂಲ ನೋಡ್ಕೊಂಡು ಮಾಡಿದ್ದು ಈ ಕೆಲಸ".
"ಯಾವುದೇ ಉದ್ದಿಮೆಯನ್ನು ಭರ್ಜರಿಯಾಗಿ ನಡೆಸಬೇಕೆಂದರೆ ಗ್ರಾಹಕರಿಗೆ ಅನುಕೂಲಕರವಾಗಿರಬೇಕು" ಎಂಬುದು ಮಾರ್ಕೆಟಿಂಗ್-ನ ಮೊದಲ ಪಾಠ.
ಇದನ್ನೇ ತಿಳಿಯದೆ ಬಿಸಿನೆಸ್ ನಡೆಸಲು ಹೊರಟಂತಿದೆ ಮೆಗಾಮಾರ್ಟ್.

"ಇಷ್ಟೆಲ್ಲಾ ಖರ್ಚು ಮಾಡಿ, ದೊಡ್ಡ ಮಳಿಗೆ ತೆರೆದಿರುವ ನೀವು, ಭಾಷೆ ವಿಚಾರದಲ್ಲಿ ತಪ್ಪೆಸಗಿ ಗ್ರಾಹಕರನ್ನು ಕಳೆದುಕೊಳ್ಳಬೇಡಿ" ಎಂದು ಮೆಗಾಮಾರ್ಟ್-ನವರನ್ನು ಎಚ್ಚರಿಸೋಣ ಬನ್ನಿ.
ಇವರಿಗೆ ಮಿಂಚೆ ಬರೆದು, "ಕನ್ನಡಿಗ ಗ್ರಾಹಕರ ಅವಶ್ಯಕತೆ, ನಾಡಿಮಿಡಿತ ಅರಿತುಕೊಂಡು ಬಿಸಿನೆಸ್ ಮಾಡಿದರೆ ಮಾತ್ರ ನಿಮಗೆ ಫಲ ಸಿಗೋದು" ಎಂದು ತಿಳಿಸೋಣ.

ಇವರ ಮಿಂಚೆ: customercaremegamart@arvindbrands.com

jaagruta graahakaru/ಜಾಗೃತ ಗ್ರಾಹಕರು

ಲೇಖಕರು

ಪ್ರಿಯಾಂಕ್

ಸಮಯ ಸಿಕ್ಕಾಗ ತಿಳಿಸುತ್ತೇನೆ.
ಸದ್ಯಕ್ಕೆ ಕ್ಷಮೆ ಇರಲಿ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.