Skip to main content

ಬಿಎಂಟಿಸಿ: ಹಿಂದಿಯೋರಿಗೆ ಕೊಂಬು, ಕನ್ನಡದೋರಿಗೆ ಚೊಂಬು

ಬರೆದಿದ್ದುJuly 20, 2009
4ಅನಿಸಿಕೆಗಳು

ಬೆಂಗಳೂರಿನ ಜೀವನಾಡಿ ಬಿ.ಎಂ.ಟಿ.ಸಿ. ಬಸ್-ಗಳಲ್ಲಿ ಇನ್ಮುಂದೆ ಮುಂಬರುವ ಸ್ಟಾಪ್-ಗಳ ಹೆಸರನ್ನು ಕಂಪ್ಯೂಟರ್ ಮೂಲಕ ಘೋಷಣೆ ಮಾಡಲಾಗುತ್ತದಂತೆ. ಈ ಘೋಷಣೆ, ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಇರುತ್ತೆ ಅಂತ ಬಿ.ಎಂ.ಟಿ.ಸಿ ಅಧಿಕಾರಿಗಳು ಹೇಳಿರೋದು ಕನ್ನಡ ಪ್ರಭದಲ್ಲಿ ವರದಿಯಾಗಿದೆ.

ನಗರದಲ್ಲಿರೋ ಉತ್ತರ ಭಾರತದ ಜನರಿಗೆ ಅನುಕೂಲ ಆಗಲಿ ಅಂತ ಈ ವ್ಯವಸ್ಥೆ ಎಂಬುದು ಬಿ.ಎಂ.ಟಿ.ಸಿ ಅಧಿಕಾರಿಗಳ ಅಂಬೋಣ. ಮೂರ್ನಾಲ್ಕು ಭಾಷೆಗಳಲ್ಲಿ "ಎಂ.ಜಿ ರೋಡ್ ಬಂತು" ಅಂತ ಘೋಷಣೆ ಮಾಡೋ ಹೊತ್ತಿಗೆ ಬಸ್ಸು ಎಂ.ಜಿ ರೋಡ್ ದಾಟಿ ಕೋರಮಂಗಲ ತಲುಪಿರುತ್ತೆ. ಇದರಿಂದ ಯಾರಿಗೆ ಏನು ಉಪಯೋಗ ಆಯ್ತು ಮಣ್ಣು.

ಅವಶ್ಯವೇ ಅಲ್ಲದ ಹಿಂದಿ ಭಾಷೆಗೆ ಮಣೆ ಹಾಕಿ, ಅದರ ಬಳಕೆ ಮಾಡೋದರ ಮೂಲಕ ತಾನೇ ಕನ್ನಡಿಗರ ಮೇಲೆ ಹಿಂದಿ ಹೇರಲು ಹೊರಟಿದೆ ಬಿ.ಎಂ.ಟಿ.ಸಿ.
ವೋಲ್ವೋ-ಗಳಲ್ಲಿ ನಡೆಯುತ್ತಿರುವ ಹಿಂದಿ ಹೇರಿಕೆಯನ್ನು ಮುಂಚೆಯೂ ಒಬ್ಬರು ತಮ್ಮ ಲೇಖನದಲ್ಲಿ ಪ್ರಶ್ನಿಸಿದ್ದಾರೆ. ವೋಲ್ವೋ ಬಸ್-ಗಳಿಗೆ ಮಾತ್ರ ಸೀಮಿತವಾಗಿದ್ದ ಹಿಂದಿಯನ್ನು, ಈಗ ಸುಮಾರು 700 ರೂಟ್-ಗಳಲ್ಲಿ ಬೆಂಗಳೂರಿನ ಮೂಲೆ ಮೂಲೆಗೂ ಓಡಾಡುವ 5300 ಬಸ್-ಗಳಲ್ಲಿ ತುರುಕಿಸಿ ಬೆಂಗಳೂರನ್ನು ಉತ್ತರ ಭಾರತದ ಊರುಗಳಂತೆ ಮಾಡ ಹೊರಟಿದೆ ಬಿ.ಎಂ.ಟಿ.ಸಿ. ಕನ್ನಡಿಗರ ಸ್ವಂತಿಕೆಯನ್ನೇ ಪ್ರಶ್ನಿಸಿಕೊಂಡು ಈ ಬಸ್-ಗಳು ನಮ್ಮೂರೆಲ್ಲಾ ಓಡಾಡುವಂತಾಗುತ್ತದೆ.

ಬಿ.ಎಂ.ಟಿ.ಸಿ-ಯಲ್ಲೂ ಹಿಂದಿ ತಂದು, "ಕನ್ನಡ ಕಲಿಯದಿದ್ದರೂ ನಡೆಯುತ್ತದೆ" ಎಂದೆನಿಸಿಬಿಟ್ಟರೆ, ಯಾರು ತಾನೇ ಕನ್ನಡ ಕಲಿಯಲು ಪ್ರಯತ್ನ ಪಟ್ಟಾರು?
"ನಾವಂತೂ ಕನ್ನಡ ಕಲಿಯಲ್ಲ, ನಿಮಗೇ ಬೇಕಾದ್ರೆ ಹಿಂದಿ ಕಲೀರಿ" ಅಂತ ವಲಸಿಗರೆಲ್ಲಾ ಹೇಳುವ ದಿನ ಬಂದೇಬಿಡಬಹುದು. "ನಿಮಗೆ ಬರುವ ಫೈಲುಗಳು ಕನ್ನಡದಲ್ಲಿಲ್ಲದಿದ್ದರೆ ತಿರಸ್ಕರಿಸಿ" ಎಂದು ಮುಖ್ಯಮಂತ್ರಿಯವರು ಸರ್ಕಾರಿ ಅಧಿಕಾರಿಗಳಿಗೆ ನಿರ್ದೇಶಿಸಿದ ಕೆಲವೇ ದಿನಗಳಲ್ಲಿ, ಈ ರೀತಿಯ ನಿರ್ಣಯ ಕೈಗೊಂಡ ಬಿ.ಎಂ.ಟಿ.ಸಿ ಅಧಿಕಾರಿಗಳು ಮುಖ್ಯಮಂತ್ರಿಯವರನ್ನೇ ನಿರ್ಲಕ್ಷಿಸುವಂತಿದೆ.
ಕನ್ನಡ ಅನುಷ್ಠಾನ ವರ್ಷ-ದಲ್ಲಿ ಕನ್ನಡಿಗರಿಗೆ ಎಂಥಾ ಉಡುಗೊರೆ ಕೊಡುತ್ತಿದೆ ನೋಡಿ ನಮ್ಮ ಬಿ.ಎಂ.ಟಿ.ಸಿ.

ನಮ್ಮೂರ ಪರಿಸರವನ್ನು ಹದಗೆಡಿಸಲು ಹೊರಟಿರುವ ಬಿ.ಎಂ.ಟಿ.ಸಿ ಅಧಿಕಾರಿಗಳನ್ನು ವಿರೋಧಿಸೋಣ. ಬಸ್-ಗಳಲ್ಲಿ ಘೋಷಣೆಗಳು ಕನ್ನಡದಲ್ಲಿರಲಿ, ಕನ್ನಡೇತರ ಪ್ರಯಾಣಿಕರಿಗೆ ಅನುಕೂಲವಾಗಬೇಕೆಂದರೆ ಇಂಗ್ಲಿಷ್-ನಲ್ಲೂ ಇರಲಿ ಸಾಕು ಎಂದು ಬಿ.ಎಂ.ಟಿ.ಸಿ ಅಧಿಕಾರಿಗಳಿಗೆ ಹೇಳೋಣ. ಒಟ್ಟು ಪ್ರಯಾಣಿಕರ ಒಂದು ಚಿಕ್ಕ ಭಾಗವಾದ ಉತ್ತರ ಭಾರತದ ಜನರಿಗೆ ಅನುಕೂಲ ಮಾಡುವ ನೆಪದಲ್ಲಿ, ಕನ್ನಡಿಗರ ಮೇಲೆ ಹಿಂದಿ ಹೇರುವ ಕೆಲಸ ಯಾಕೆ ಮಾಡ್ತೀರಿ ಎಂದು ಪ್ರಶ್ನಿಸಬೇಕಾಗಿದೆ. ಬನ್ನಿ, ಇವರಿಗೆ ಮಿಂಚೆ ಬರೆದು, ನಮ್ಮ ಒಗ್ಗಟ್ಟು ಪ್ರದರ್ಶಿಸಿ, ನಮ್ಮೂರ ಭಾಷೆ ಬದಲಾಗದಂತೆ ಕಾಪಾಡೋಣ.
ಕನ್ನಡ ಅನುಷ್ಠಾನ ವರ್ಷದಲ್ಲಿ ಕನ್ನಡದ ಅನುಷ್ಠಾನ ಸರಿಯಾಗಿ ಮಾಡುವುದನ್ನು ಬಿಟ್ಟು ಹಿಂದಿಗೆ ಬೇಡದ ಮಣೆ ಹಾಕುವುದನ್ನು ನಿಲ್ಲಿಸಲು ಬಿ.ಎಂ.ಟಿ.ಸಿ ಗೆ ಹೇಳಬೇಕು. ಅಲ್ಲದೆ, ಬಿ.ಎಂ.ಟಿ.ಸಿ-ಯನ್ನು ಪಾಲಿಸಿ ಪೋಷಿಸಿದ ಕನ್ನಡಿಗ ಗ್ರಾಹಕರಿಗೆ ಸ್ವಲ್ಪವೂ ಅನಾನುಕೂಲವಾಗದಂತೆ ನೋಡಿಕೊಳ್ಳುವುದು ಬಿ.ಎಂ.ಟಿ.ಸಿ-ಯ ಕರ್ತವ್ಯ ಎಂದು ನೆನಪಿಸೋಣ.

ಇವರ ಮಿಂಚೆ: ctmobmtc@gmail.com
--
ಜಾಗೃತ ಗ್ರಾಹಕರು / jaagruta graahakaru

[img_assist|nid=4832|title=BMTC|desc=|link=none|align=center|width=640|height=491]

ಲೇಖಕರು

ಪ್ರಿಯಾಂಕ್

ಸಮಯ ಸಿಕ್ಕಾಗ ತಿಳಿಸುತ್ತೇನೆ.
ಸದ್ಯಕ್ಕೆ ಕ್ಷಮೆ ಇರಲಿ.

ಅನಿಸಿಕೆಗಳು

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 07/21/2009 - 16:41

ಮಿಂಚೆ ಕಳಿಸಿಯಾಗಿದೆ. ಅದು BMTC ಗೆ ತಲುಪೀತೇ ಎಂಬುದರ ಮೇಲೆ ಎಲ್ಲ ಅವಲಂಬಿತವಾಗಿದೆ!

kichcha (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 07/25/2009 - 10:17

ನಿಮಗೆ ಉತ್ತರ ಬರಲಿ ಬರದೆ ಇರಲಿ, ಮಿ0ಚೆ ಕಳಿಸುವುದು ಮುಖ್ಯ. ಇದನ್ನು ನೀವು ಮಾಡಿರುವುದು ಸ0ತೋಷದ ವಿಷಯ. ಇನ್ನು BMTC ರವರು ತಾವು ಮಾಡುತ್ತಿರುವುದು ತಪ್ಪು ಎ0ದು ಮೊದಲು ಅರಿತುಕೊಳ್ಳುವ0ತಾಗುತ್ತದೆ. ನ0ತರ ಪತ್ರಿಕೆಗಳಲ್ಲೂ ಈ ಸುದ್ದಿ ಬ0ದರೆ, BMTC ತನ್ನ ಹಿ0ದಿ ಘೋಷಣೆಗೆ ಖ0ಡಿತ ಕಡಿವಾ ಹಾಕಿತ್ತಾರೆ.

santosh.inamdar (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 07/27/2009 - 20:49

ಎಲ್ಲಾ ಸರಿ, ಆದ್ರೆ ನಮ್ಮದು ಒಂದೇ ದೇಶ ತಾನೇ? ನಾವು ಹೀಗೇ ನೀವು ಬೇರೆ ನಾವು ಬೇರೆ ಅಂತ ಗಲಾಟೆ ಮಾಡ್ಕೊಂಡು ಇದ್ದರೆ ನಮ್ಮ ಒಗ್ಗಟ್ಟು ಏನಾಗುತ್ತೆ? ಅದಿಕ್ಕೆ ಬೇರೆ ಅವ್ರು ನಮ್ಮನ್ನ ಕಪ್ಪೆಗಳು ಅಂತ ಕರೀತಾರೆ..

ಪ್ರಿಯಾಂಕ್ ಮಂಗಳ, 08/04/2009 - 21:26

ಸಂತೋಷ್ ಅವರೇ, ನಮ್ಮ ದೇಶ ಮಾಡಿರೋದು ಯಾಕೆ ಅಂತ ಒಮ್ಮೆ ಯೋಚಿಸಿ ನೋಡಿ.
ನಮ್ಮಲ್ಲಿರುವ ಇಷ್ಟೊಂದು ಭಾಷೆಗಳು, ವಿಭಿನ್ನ ರೀತಿಯ ಜನರು, ತಮ್ಮ ಪೂರ್ವಿಕರ ಜಾಗದಲ್ಲೇ ಇದ್ದು ಬಾಳಲಿ ಎಂದು.
ಎಂದಿಗೂ, ಒಂದು ಭಾಗದ ಜನರು ತಮ್ಮತನವನ್ನ ಬಿಡಬೇಕಾದ ಪರಿಸ್ಥಿತಿ ಬರದೇ ಇರಲಿ ಎಂದು.
ಅದನ್ನೇ, ಸ್ವಾತಂತ್ರ ಎಂದು ಕರೆದಿದ್ದು.
ಆದರೆ, ಈಗಿನ ವ್ಯವಸ್ಥೆ ಹೇಗಿದೆ ನೋಡಿ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.