ಸಾಗರದೆಲ್ಲ ಅಲೆಗಳು ದಡವ ತಲುಪುವುದಿಲ್ಲ...
ಸಾಗರದೆಲ್ಲ ಅಲೆಗಳು ದಡವ ತಲುಪುವುದಿಲ್ಲ,
ಹೃದಯದೆಲ್ಲ ಮಿಡಿತಗಳು ಮನವ ತಾಕುವುದಿಲ್ಲ!
ಕಂಡ ಕಣ್ಣಿನೆಲ್ಲ ಬಿಂಬಗಳು ಎದೆಗಿಳಿಯುವುದಿಲ್ಲತಲುಪಿದ್ದಕ್ಕಿಂತ ತಲುಪದಿದ್ದಕ್ಕೇ ತಪನೆ
ತಾಕದಿದ್ದನ್ನೂ ಕಳೆದುಕೊಂಡ ಬೇನೆ
ಎದೆಗಿಳಿಯದುದಕೆ ಎದೆಯುರಿ-ಸೋನೆ
ದಡವ ತಲುಪದಲೆಯ ನುಂಗಿ ನೊಣೆದ
ಅದರ ಹಿಂದಿನಲೆಯದೇನೂ ಹೆಚ್ಚಲಿಲ್ಲ ಗಮನ -
ಸಣ್ಣಲೆಯ ನುಂಗಿದುದಕೆ ಶಾಪವದಕೆ-ದಡ ಮುಟ್ಟಿ
ಅಂದುಕೊಂಡಷ್ಟೂ ದೂರ ತಲುಪದೇ ಅದರ ಶಕ್ತಿ ಪತನ!
ಸಿಕ್ಕಿದ್ದನ್ನೂ ಸಿಗಲಾರದುದರ ನೋವಿನಲಿ ದೂರ ಸರಿಸಿ,
ದೊರೆಯದುದಕೆ ಈ ತಪವೆಂದು ಕುಳಿತು ಭ್ರಮಿಸಿ,
ಎಂದಾದರೂ ಸಿಕ್ಕಬಹುದೆಂದು ಕನಸಿ, ಸಂಭ್ರಮಿಸಿ
ಎಲ್ಲವೂ ಕಳೆದು, ಎಲ್ಲವೂ ಮಿಥ್ಯವೆನಿಸುವಾಗ
ನೆನಪಾಗುವುದು ಕವಿವಾಣಿ - 'ಇರುವುದೆಲ್ಲವ ಬಿಟ್ಟು...'
ಈಗ ನನಗೆ ನನ್ನದೇ ಸಾಂತ್ವನ -
ಇಲ್ಲ, ನಾನು ತಪ್ಪಾದುದನ್ನೇನೂ ಮಾಡಿಲ್ಲ!
ಸಾಲುಗಳು
- Add new comment
- 2001 views
ಅನಿಸಿಕೆಗಳು
ಅಧ್ಭುತ! "ತಲುಪಿದ್ದಕ್ಕಿಂತ
ಅಧ್ಭುತ!
"ತಲುಪಿದ್ದಕ್ಕಿಂತ ತಲುಪದಿದ್ದಕ್ಕೇ ತಪನೆ.....ತಾಕದಿದ್ದನ್ನೂ ಕಳೆದುಕೊಂಡ ಬೇನೆ..." ಸಾಲುಗಳನ್ನು
ಓದುತ್ತ, ಓದುತ್ತ...ಶಬ್ದಗಳ ಮೋಡಿಗೆ..ಒಳಾರ್ಥಗಳ ಗೂಡಲ್ಲಿ ಕಳೆದು, (ನಿಮ್ಮದೇ ಪದ್ಯದ) ನೊರೆಗಳಂತೆ ಕರಗುತ್ತಿರುವಂತೆ ಕೊನೆಯಲ್ಲಿ ಅನಿರೀಕ್ಷಿತ (ಅನಪೇಕ್ಷಿತ ಕೂಡ!) ತಿರಿವಿನೊಂದಿಗೆ ......ಓ ಇಷ್ಟೆಲ್ಲಾ ಹೇಳಿದ್ದು ಇದಕ್ಕೊ ಎಂಬ ಅಚ್ಚರಿ !
ತುಂಬಾ ಹೊತ್ತಿನವರೆಗೂ ಕಾಡೀತು ಈ ನಿಮ್ಮ ಪದ್ಯ!
ತಲೆ ಕೆಟ್ಟೋಯ್ತು!
ತಲೆ ಕೆಟ್ಟೋಯ್ತು!
ಶಬ್ದಗಳ ಜೊಡನೆ ಚನ್ನಾಗಿದೆ
ಶಬ್ದಗಳ ಜೊಡನೆ ಚನ್ನಾಗಿದೆ ಶಿವುಕುಮಾರ ರವರೆ.
ಚೆನ್ನಾಗಿದೆ ಶಿವಕುಮಾರ
ಚೆನ್ನಾಗಿದೆ ಶಿವಕುಮಾರ ಅವರೆ
ನಿಮ್ಮ ಪದ ಪ್ರಯೊಗ ತುಂಬಾನೆ ಚೆನ್ನಾಗಿದೆ.
(No subject)
:sick: :sleep:
excellent formation
excellent formation
Re: ಸಾಗರದೆಲ್ಲ ಅಲೆಗಳು ದಡವ ತಲುಪುವುದಿಲ್ಲ...
ತುಂಬಾ ಚೆನ್ನಾಗಿದೆ ನಿಮ್ಮ ಕವನ. ಸಾಲುಗಳು, ಪದಜೋಡಣೆ ಎಲ್ಲವೂ ಬಹು ಸುಂದರವಾಗಿದೆ. ಮೆಲುಕುಹಾಕುವಂತಿವೆ.
ತೇಜಸ್ವಿನಿ ಹೆಗಡೆ
ಪರವಾಗಿಲ್ಲ
ಪರವಾಗಿಲ್ಲ