ಕಾವೇರಿ ನಿಸರ್ಗ ಧಾಮ - ನಿಸರ್ಗದ ಮಡಿಲು - ಚಿತ್ರ ಸಮೇತ

ಬರೆದವರು: ರಾಜೇಶ ಹೆಗಡೆ - ಕಳುಹಿಸಿದ ದಿನ 16 July 2009

ಕೊಡಗಿನ ಕಾವೇರಿ ತೀರದಲ್ಲಿರುವ ಸುಂದರ ಪ್ರವಾಸಿ ತಾಣವೇ ಕಾವೇರಿ ನಿಸರ್ಗಧಾಮ. ಇಲ್ಲಿ ಆನೆ ಸವಾರಿ, ಬೋಟಿಂಗ್, ದೋಣಿ ವಿಹಾರ ಮತ್ತು ಜಿಂಕೆ ಎಲ್ಲ ಇದೆ. ಆನೆ ಸವಾರಿ, ಬೋಟಿಂಗ್ ಮಾಡುವ ಇಚ್ಚೆ ಇದ್ದರೆ ಪ್ರವೇಶ ಟಿಕೆಟ್ ತೆಗೆದುಕೊಳ್ಳುವಾಗಲೇ ಖರೀದಿಸಿದರೆ ಒಳ್ಳೆಯದು. ಇಲ್ಲದಿದ್ದರೆ ಮತ್ತೆ ವಾಪಸ್ ಬಂದು ಖರೀದಿಸಬೇಕಾಗುತ್ತದೆ.
ಟಿಕೆಟ್ ತೆಗೆದುಕೊಂಡು ದೊಡ್ಡ ಪ್ರವೇಶ ದ್ವಾರ ದಾಟಿದ ನಂತರ ನಮಗೆ ಸಿಕ್ಕಿದ್ದು ತೂಗು ಸೇತುವೆ. ತೂಗು ಸೇತುವೆ ದಾಟಿ ಬಲಕ್ಕೆ ತಿರುಗಿ ಕೆಳಕ್ಕಿಳಿದರೆ ಅಲ್ಲಿ ಬೋಟಿಂಗ್ , ದೋಣಿ ವಿಹಾರ ನಡೆಯುತ್ತಿತ್ತು. ನಮ್ಮ ಸರದಿ ಕಾದು ಪೆಡಲ್ ಬೋಟಿಂಗ್ ಸಿಕ್ಕಾಗ ಸ್ವರ್ಗಕ್ಕೆ ಮೂರೇ ಗೇಣು. ಯಾರೂ ನೀರಲ್ಲಿ ಕೈ ಹಾಕಬೇಡಿ ಮೊಸಳೆ ಇರಬಹುದು ಎಂದು ಪ್ರವಾಸಿಗರನ್ನು ದೋಣಿಯವರು ಎಚ್ಚರಿಸುತ್ತಿದ್ದರು.

ಒಂದು ಹದಿನೈದು ನಿಮಿಷ ಬೋಟಿಂಗ್ ಮಾಡಿ ಆನೆ, ಜಿಂಕೆ ಇರುವ ಕಡೆ ಹೊರಟೆವು. ಜಿಂಕೆಯನ್ನು ಇಲ್ಲಿ ಹತ್ತಿರದಿಂದ ಮುಟ್ಟಿ ನೋಡಬಹುದು. ಹೆಚ್ಚು ಕಡಿಮೆ ಆಕಳ ಕರು ಮುಟ್ಟಿದ ಅನುಭವ! ಜಿಂಕೆಗಳಿಗೆ ಎಲೆಕೋಸನ್ನು ಖರೀದಿಸಿ ತಿನ್ನಲು ಕೊಟ್ಟೆವು. ಅದನ್ನು ತಿನ್ನಲು ಜಿಂಕೆಗಳ ನಡುವೆಯೇ ಸ್ಪರ್ಧೆ ಏರ್ಪಟ್ಟಿತ್ತು.

ಆ ದಿನ ಆನೆ ಸವಾರಿಯ ಟಿಕೆಟ್ ನಾವು ತೆಗೆದುಕೊಳ್ಳಲಿಲ್ಲ. ದೂರದಿಂದಲೇ ಆನೆ ಸವಾರಿ ಮಾಡುತ್ತಿದ್ದ ಬೇರೆಯವರನ್ನು ವೀಕ್ಷಿಸಿ ವಾಪಸ್ ಹೊರಟೆವು. ನಿಸರ್ಗ ಧಾಮದ ಒಳಗೆ ಅಂಗಡಿಗಳಿದ್ದು ಕೂಲ್ ಡ್ರಿಂಕ್ಸ್, ಐಸ್ ಕ್ರೀಮ್ ಮೊದಲಾದವು ಸಿಗುತ್ತವೆ.
ಅಲಂಕಾರಿಕ ವಸ್ತುಗಳು ಸಿಗುತ್ತವೆ. ಆದರೆ ಬೆಲೆ ದುಬಾರಿ.

ನಿಸರ್ಗ ಧಾಮದ ಹೆಬ್ಬಾಗಿಲುನಿಸರ್ಗ ಧಾಮದ ಹೆಬ್ಬಾಗಿಲು

ನಿಸರ್ಗ ಧಾಮದ ತೂಗು ಸೇತುವೆನಿಸರ್ಗ ಧಾಮದ ತೂಗು ಸೇತುವೆ

ನಿಸರ್ಗಧಾಮ ದೋಣಿ ವಿಹಾರನಿಸರ್ಗಧಾಮ ದೋಣಿ ವಿಹಾರ

ಪೆಡಲ್ ಬೋಟಿಂಗ್ಪೆಡಲ್ ಬೋಟಿಂಗ್

ನಿಸರ್ಗ ಧಾಮ ಜಿಂಕೆಗಳುನಿಸರ್ಗ ಧಾಮ ಜಿಂಕೆಗಳು

ನಿಸರ್ಗ ಧಾಮ ಆನೆ ಸವಾರಿನಿಸರ್ಗ ಧಾಮ ಆನೆ ಸವಾರಿ

ನಿಮ್ಮ ರೇಟಿಂಗ್: None ಒಟ್ಟೂ ರೇಟಿಂಗ್: 3.3 (4 ಓಟುಗಳು)
ಪ್ರಸನ್ನ's picture
ಬುಧ, 19/08/2009 - 21:46 ರಂದು ಪ್ರಸನ್ನ (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
ನಿಸರ್ಗಧಾಮ ಸಕ್ಕತ್ತಾಗಿದೆ.

ನಿಸರ್ಗಧಾಮ ಸಕ್ಕತ್ತಾಗಿದೆ. ೯೫ರಲ್ಲಿ ನೋಡಿದ್ದು.

prabhu's picture
ಮಂಗಳ, 28/07/2009 - 22:04 ರಂದು prabhu ಅವರು ಹೇಳುತ್ತಾರೆ
ಕರ್ನಾಟಕ ರಾಜ್ಯ ಕಾರ್ಯನಿರತ

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತ 29ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಇದೆ ವರ್ಷ ಫೆಬ್ರುವರಿಯಲ್ಲಿ ಮಡಿಕೇರಿಯಲ್ಲಿ ನಡೆದಾಗ ಪಾಲ್ಗೊ0ಡಿದ್ದ ನಾನು,ನನ್ನ ಗೆಳೆಯರ ಜೊತೆ ನಿಸರ್ಗಧಾಮ,ದುಬಾರೆ ಇತರ ಕಡೆ ಸುತ್ತಾಡಿ ಖುಷಿ ಪಟ್ಟಿದ್ದೆ.ಈಗ ಮತ್ತೊಮ್ಮೆ ಲೇಖನ-ಚಿತ್ರಗಳನ್ನು ನೋಡಿ ಮತ್ತೆ ಮರುಕಳಿಸಿತು.ಧನ್ಯವಾದಗಳು ರಾಜೆಶ್.-ಡಾ.ಪ್ರಭು.ಗ0ಜಿಹಾಳ್.

Shrinidhi Hande's picture
ಮಂಗಳ, 21/07/2009 - 11:35 ರಂದು Shrinidhi Hande (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
ಬರಹ ಚೆನ್ನಾಗಿದೆ. ಫೋಟೊ ದಲ್ಲಿ

ಬರಹ ಚೆನ್ನಾಗಿದೆ. ಫೋಟೊ ದಲ್ಲಿ ಬ್ರಹ್ಮ ಪುತ್ರ ಸ್ಪೆಲ್ಲಿ0ಗ್ ತಪ್ಪಾಗಿದೆ.

shamala's picture
ಶುಕ್ರ, 17/07/2009 - 18:18 ರಂದು shamala ಅವರು ಹೇಳುತ್ತಾರೆ
ರಾಜೇಶ್...... ಚಿತ್ರಗಳು

ರಾಜೇಶ್...... ಚಿತ್ರಗಳು ಚೆನ್ನಾಗಿವೆ.

ಶ್ಯಾಮಲ

Bhuvan's picture
ಶುಕ್ರ, 17/07/2009 - 09:50 ರಂದು Bhuvan ಅವರು ಹೇಳುತ್ತಾರೆ
Nice pics.

Nice pics.

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
6 ಕೂಡಿಸು 8 ಉತ್ತರ
ಈ ಸುಲಭವಾದ ಗಣಿತ ಪ್ರಶ್ನೆಗೆ ಉತ್ತರ ಕೊಡಿ. ಉತ್ತರವನ್ನು ಅಂಕೆಗಳಲ್ಲಿ ಬರೆಯಿರಿ. ಉದಾ: 2 + 4 ಗೆ 6 ಎಂದು ಬರೆಯಿರಿ.
ಬರೆದವರು
ರಾಜೇಶ ಹೆಗಡೆ
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
ನನ್ನ ಬಗ್ಗೆ ಹೇಳುವದೇನು ಇಲ್ಲ.
ಇವರ ವಿಸ್ಮಯ ಪುಟ