Skip to main content

ವಿಸ್ಮಯ ಪಿಸುಮಾತು ಹೊಸ ವಿನ್ಯಾಸಗಳ ಆಯ್ಕೆ

ಬರೆದಿದ್ದುFebruary 23, 2007
2ಅನಿಸಿಕೆಗಳು

ವಿಸ್ಮಯನಗರಿಯಲ್ಲಿ ಬ್ಲಾಗ್ ಮಾಡುವವರಿಗೆ ಒಂದು ಸಂತೋಷದ ಸುದ್ದಿ. ಇನ್ನು ಮುಂದೆ ನಿಮ್ಮ ಬ್ಲಾಗ್‌ನ ವಿನ್ಯಾಸವನ್ನು ನೀವೇ ಆರಿಸಿಕೊಳ್ಳಬಹುದು.! ನಿಮಗಾಗಿ ೧೨ ವಿನ್ಯಾಸಗಳು ಸದ್ಯಕ್ಕೆ ಲಭ್ಯವಿದೆ.
ಮಜಾ ಮಾಡಿ.
-ವಿಸ್ಮಯಾ ಸಾಫ್ಟ್‌ವೇರ್

ಲೇಖಕರು

ಅನಿಸಿಕೆಗಳು

veeresh ಶುಕ್ರ, 02/23/2007 - 16:12

ನಮಸ್ತೆ ಅಡ್ ಮಿನ್..... ನಾನು ಈ ಚಿತ್ರನ ನೋಡಿದಾಗ ಯಾರೋ ವಿಸಿಟಿಂಗ್ ಕಾರ್ಡ್ ಗಳನ್ನ ಹಾಕಿದಾರೆ ಅಂದುಕೊಂಡೆ... ಆದರೆ ಬ್ಲಾಗ್ ನ ವಿನ್ಯಾಸಗಳೆಂದು ತಿಳಿದು ತುಂಬಾ ಸಂತೋಷವಾಯಿತು.....

ವಿಸ್ಮಯದಲ್ಲಿ ಚಿತ್ರಗಳನ್ನು ಹಾಕೋದು ಹೇಗೆ... ಉದಾ:
... link ....

ಮೇಲಧಿಕಾರಿ ಶನಿ, 02/24/2007 - 11:27

ಹಾಯ್ ವೀರೇಶ್,

ವಿಸ್ಮಯನಗರಿಯಲ್ಲಿ ಲೇಖನಗಳಲ್ಲಿ ಚಿತ್ರ ಇನ್ನು ಮುಂದೆ ವಿಸ್ಮಯನಗರಿಯ ಪ್ರಜೆಗಳು ಹಾಕಬಹುದು.

೧. ಮೊದಲು ಚಿತ್ರ ಶಾಲೆ ವಿಭಾಗದಲ್ಲಿ ನಿಮಗೆ ಬೇಕಾದ ಫೋಟೋ ಅಪ್‌ಲೋಡ್ ಮಾಡಿ.

೨. ಚಿತ್ರಶಾಲೆಯಲ್ಲಿರುವ ನಿಮ್ಮ ಚಿತ್ರ ಓಪನ್ ಮಾಡಿ ಮತ್ತು ರೈಟ್ ಕ್ಲಿಕ್ ಮಾಡಿ ಪ್ರೊಪರ್ಟೀಸ್ (properties)
Address (URL) : ಎಂಬ ಪ್ರಾಪರ್ಟಿ ಕಾಪಿ ಮಾಡಿ. ಉದಾ ಚಿತ್ರ ಒಂದರ ಯು.ಆರ್.ಎಲ್ ಹೀಗಿದೆ. http://www.vismayanagari.com/v5/files/images/santasa_0.JPG

೩. ಆ ಚಿತ್ರ ಹಾಕಲು ಈ ಮುಂದೆ ಕಾಣಿಸಿರುವ ಟ್ಯಾಗ್ ನಿಮ್ಮ ಲೇಖನದಲ್ಲಿ ಹಾಕಿ. ಬರಿ ಚಿತ್ರಶಾಲೆಯಷ್ಟೇ ಅಲ್ಲ ಇಂಟರ್‍‌ನೆಟ್‌ನಲ್ಲಿರುವ ಯಾವುದೇ ಚಿತ್ರ ಹಾಕಬಹುದು. ಆದರೂ ಚಿತ್ರಶಾಲೆಗೆ ಅಪ್‌ಲೋಡ್ ಮಾಡಿಯೇ ಲಿಂಕ್ ಹಾಕಿ. ಕಾರಣ ಇಷ್ಟೆ ನೀವು ಬೇರೆ ಸೈಟ್‌ನ ಲಿಂಕ್ ಹಾಕಿದರೆ ಅವರ ಸರ್ವರ್ ಬ್ಯಾಂಡ್‌ವಿಡ್ತ್ ವಿಸ್ಮಯ ಬಳಸಿದಂತಾಗುತ್ತದೆ. ಕೆಲವು ಸೈಟ್‌ಗಳು ಹಾಗೆ ಲಿಂಕ್ ಹಾಕಲು ಒಪ್ಪಿಗೆ ನೀಡುತ್ತವೆ. ಅಂತಹ ಸೈಟ್ ಆದರೆ ಪರವಾಗಿಲ್ಲ. ಇಲ್ಲದಿದ್ದರೆ ಚಿತ್ರವನ್ನು ಚಿತ್ರಶಾಲೆಗೆ ಮೊದಲು ಹಾಕಿ ನಂತರ ನಿಮ್ಮ ಲೇಖನದಲ್ಲಿ ಹಾಕಿ.
ಈ ಮುಂದಿನ ಟ್ಯಾಗ್ ನಿಮ್ಮ ಲೇಖನದಲ್ಲಿ ಹಾಕಬೇಕು.

<img src="files/images/santasa_0.JPG" height="200" width="150" title="ಟೊಮ್ಯಾಟೋ ಹಣ್ಣುಗಳ ಮೇಲೆ ನಲಿಯುತ್ತಿರುವ ಮಗು!"/>

ಗಮನಿಸಿ ಲಿಂಕ್ ನಲ್ಲಿ ಚಿತ್ರಶಾಲೆಯ ಪೂರ್ತಿ ಯು. ಆರ್. ಎಲ್ ಕೊಡಬೇಡಿ. ಬರಿ ಫೋಲ್ಡರ್ ಹೆಸರು ಕೊಡಿ.

ಆಗ ಚಿತ್ರ ಕೆಳಗಿರುವಂತೆ ಕಾಣಿಸುತ್ತದೆ. height, width ಅನ್ನು ಎಚ್ಚರಿಕೆಯಿಂದ ಚಿತ್ರದ ರೇಶಿಯೋ ಕೆಡದಂತೆ ಆರಿಸಿ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.