Skip to main content

ಪೈಪೋಟಿಗೆ ಮಾಸಿದ ಟೈಟನ್-ನ ಹೊಳಪು

ಬರೆದಿದ್ದುJuly 13, 2009
noಅನಿಸಿಕೆ

ಟಾಟಾರವರ ವಾಚ್ ಮತ್ತು ಆಭರಣ ಕಂಪನಿ ಟೈಟನ್ ಸುಮಾರು ೧೫ - ೨೦ ವರ್ಷಗಳಿಂದ ಕರ್ನಾಟಕದ ಮಾರುಕಟ್ಟೆಯಲ್ಲಿದ್ದಾರೆ.
ಟೈಟನ್ ಕಂಪನಿಯು ತನ್ನ ಬ್ರಾಂಡ್-ಗಳ ಪೋಷಣೆಗಾಗಿ ಜನರ ಭಾಷೆ ಬಳಸಲು ಎಂದಿಗೂ ಹಿಂಜರಿಕೆ ತೋರಿಸುತ್ತಿದೆ.
ಗ್ರಾಹಕರನ್ನು ಅವರದಲ್ಲದ ಭಾಷೆಯಲ್ಲಿ ಮಾತನಾಡಿಸುವ ಟೈಟನ್, ಗ್ರಾಹಕರಿಗೆ ಹತ್ತಿರವಾದಂತಿಲ್ಲ, ಗ್ರಾಹಕರ ನಾಡಿ ಮಿಡಿತ ಅರ್ಥ ಮಾಡಿಕೊಂಡಂತಿಲ್ಲ, ಎಂದು ನಾವು ಮುಂಚಿನ ಈ ಲೇಖನದಲ್ಲೂ ಹೇಳಿದ್ದೆವು. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಕುಸಿಯುತ್ತಿರುವ ಟೈಟನ್-ನ ಪಾಲು ನೋಡಿದರೆ, ೨೦ ವರ್ಷಗಳ ಕಾಲ ಜನರ ನಡುವೆಯೇ ಇದ್ದು, ನಿಜಕ್ಕೂ ಟೈಟನ್ ಬ್ರಾಂಡ್ ಗ್ರಾಹಕರಿಂದ ಎಷ್ಟು ದೂರವಿತ್ತು ಎಂಬುದು ಮನದಟ್ಟಾಗುತ್ತದೆ.

ವರದಿಯಲ್ಲಿ ವಿವರಿಸಿರುವಂತೆ, ಟೈಟನ್ ಕಳೆದ ವರ್ಷಗಳಲ್ಲಿದ್ದ ಲಾಭವನ್ನು ಕಾಣುತ್ತಿಲ್ಲ ಮತ್ತು ತನ್ನ ಮುಂಚೂಣಿಯ ಸ್ಥಾನ ಕ್ರಮೇಣ ಕಳೆದುಕೊಳ್ಳುತ್ತಿದೆ. ೨೦ ವರ್ಷಗಳು ಮುಂಚೂಣಿಯಲ್ಲಿದ್ದು, ಮಾರುಕಟ್ಟೆಯಲ್ಲಿ ಸ್ವಲ್ಪ ಸ್ಪರ್ಧೆ ಮೂಡಿದ ತಕ್ಷಣ ಈ ಮಟ್ಟಿನ ಹಿನ್ನೆಡೆ ಪಡೆದಿದೆ ಎಂದರೆ ಇವರು ಗ್ರಾಹಕರ ಮನಸಿನಲ್ಲಿ ಅಚ್ಚಾಗಿ ಕೂತಿರಲಿಲ್ಲ ಎಂದು ಅರಿವಾಗುತ್ತದೆ. ಗೀತಾಂಜಲಿ, ಡಿ ದಮಾಸ್, ಮಲಬಾರ್, ಕಿಯಾ ಮುಂತಾದ ಆಭರಣ ಕಂಪನಿಗಳು ತನಿಶ್ಕ್-ನ ಮಾರುಕಟ್ಟೆ ಕಸಿದಿವೆ.
ಕಳೆದೆರಡು ವರ್ಷಗಳಿಂದ ಬಂದಿರುವ ಸುಮಾರು ೫೫ ವಿದೇಶೀ ಕೈ-ಗಡಿಯಾರ ಕಂಪನಿಗಳು ಟೈಟನ್-ನ ವಾಚ್ ವ್ಯಾಪಾರಕ್ಕೆ ಹೊಡೆತ ಕೊಟ್ಟಿವೆ.

ಟೈಟನ್, ಮಾರುಕಟ್ಟೆಯಲ್ಲಿ ಮುಂಚಿಂದ ತಮಗಿದ್ದ ಸ್ಥಾನವನ್ನು ಉಪಯೋಗಿಸಿಕೊಂಡು ಜನರಿಗೆ ಹತ್ತಿರವಾಗಿ ಬೆಳೆದಿದ್ದರೆ, ಹೊಸ ಸ್ಪರ್ಧೆಯನ್ನು ಸಲೀಸಾಗಿ ಎದುರಿಸಬಹುದಿತ್ತು. ಬ್ರಾಂಡ್ ಬಿಲ್ಡಿಂಗ್ ಕೆಲಸದಲ್ಲಿ ಭಾಷೆಯ ಮಹತ್ವ ಅರ್ಥ ಮಾಡಿಕೊಂಡಿದ್ದಲ್ಲಿ ಜನರ ಮನೆಮಾತಾಗಿ ಬೆಳೆಯಬಹುದಾಗಿತ್ತು. ಹಾಗೆ ಮಾಡಿದ್ದಲ್ಲಿ, ಇವತ್ತು ನಿನ್ನೆ ಬಂದೋರು ಟೈಟನ್-ಗೆ ಇಷ್ಟೊಂದು ಪೈಪೋಟಿ ನೀಡೋದು ಬಹುಷಃ ಸಾಧ್ಯವಾಗ್ತಿರಲಿಲ್ಲ.

ಪೈಪೋಟಿ ಹೆಚ್ಚಿದಾಗ, ನಿಜವಾದ ಮಾರುಕಟ್ಟೆಯು ಹೊರಬರುತ್ತದೆ. ಬೆಂಗಳೂರಿನ ಎಫ್.ಎಂ ಚಾನಲ್ಗಳಲ್ಲೂ ನಾವು ನೋಡಿದ್ದು ಇದನ್ನೇ.
ಪೈಪೋಟಿ ಹೆಚ್ಚಿದಂತೆ, ಕನ್ನಡಕ್ಕಿರುವ ನಿಜವಾದ ಮಾರುಕಟ್ಟೆ ಹೊರಬಂತು.

ಟೈಟನ್-ರವರಿಗೆ ಇನ್ನೂ ಕಾಲ ಮಿಂಚಿಲ್ಲ. ವ್ಯಾಪಾರದಲ್ಲಿ ಭಾಷಾ ಆಯಾಮದ ಬಗ್ಗೆ ತಮ್ಮ ನಿಲುವು ಬದಲಾಯಿಸಿಕೊಂಡು ಮುಂದುವರಿದರೆ, ಮಾರುಕಟ್ಟೆಯಲ್ಲಿ ಮುಂಚೂಣಿಯಾಗಬಹುದು. "ಉತ್ಪನ್ನಗಳ ಪೋಷಣೆಗೆ ಕನ್ನಡ ಬಳಸಿದರೆ ಜನರ ಮನದಲ್ಲಿ ಗಟ್ಟಿಯಾಗಿ ಉಳಿಯುವಿರಿ, ಇಲ್ಲವಾದಲ್ಲಿ ಕೈಯಲ್ಲಿನ ಮರಳಿನಂತೆ ಜಾರಿ ಹೋಗುವಿರಿ" ಎಂದು ಟೈಟನ್-ರವರಿಗೆ ಹೇಳೋಣ ಬನ್ನಿ.
ಇವರ ಮಿಂಚೆ: info@titan.co.in
anuttara@titan.co.in

-
ಜಾಗೃತ ಗ್ರಾಹಕರು

[img_assist|nid=4757|title=ಟೈಟನ್ ಐ|desc=|link=none|align=center|width=640|height=480]

ಲೇಖಕರು

ಪ್ರಿಯಾಂಕ್

ಸಮಯ ಸಿಕ್ಕಾಗ ತಿಳಿಸುತ್ತೇನೆ.
ಸದ್ಯಕ್ಕೆ ಕ್ಷಮೆ ಇರಲಿ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.