Skip to main content

ಟರ್ಮಿನೇಟರ್ ಸಾಲ್ವೇಶನ್!

ಬರೆದಿದ್ದುJune 26, 2009
8ಅನಿಸಿಕೆಗಳು

[img_assist|nid=4646|title=ಟರ್ಮಿನೇಟರ ಸಾಲ್ವೇಶನ್|desc=|link=none|align=left|width=168|height=250]

'ಟರ್ಮಿನೇಟರ್' ಚಲನಚಿತ್ರಗಳ ಸಾಲಿನಲ್ಲಿ ನಾಲ್ಕನೆಯ ಚಿತ್ರವಾಗಿ ಇವತ್ತು (26/ಜೂನ್/2009) ಭಾರತದಲ್ಲಿ ಬಿಡುಗಡೆಯಾಗಿರುವ ಇಂಗ್ಲೀಷ್ ಚಿತ್ರ - 'ಟರ್ಮಿನೇಟರ್ ಸಾಲ್ವೇಶನ್'.

'ಟರ್ಮಿನೇಟರ್' (1984) -ಮೊದಲನೇ ಭಾಗದಲ್ಲಿ ಮುಂದೆಲ್ಲೋ 2029ರ ಭವಿಷ್ಯದಲ್ಲಿ ನಡೆಯುವ ಮಷೀನು-ಮಾನವರ ನಡುವಿನ ಸಂಗ್ರಾಮದಲ್ಲಿ ಮಾನವರ ಕೈಮೇಲಾಗಿ ಮಷೀನುಗಳ ಮುಖ್ಯಪ್ರಾಣ 'ಸ್ಕೈ ನೆಟ್' ಅನ್ನೋ ಸೂಪರ್ ಕಂಪ್ಯೂಟರ್ ತನ್ನ ಒಂದು ಕೊಲೆಗಾರ ಮಷೀನ್ - 'ಟರ್ಮಿನೇಟರ್' ಅನ್ನು ಭೂತ ಕಾಲಕ್ಕೆ ಕಳುಹಿಸಿ ತನ್ಮೂಲಕ ಭವಿಷ್ಯವನ್ನು ತನಗೆ ಅನುಕೂಲವಾಗುವಂತೆ ಬದಲಿಸಿಕೊಳ್ಳುವ ಪ್ರಯತ್ನ ಮಾಡುತ್ತದೆ. ಹೀಗೆ ಭವಿಷ್ಯದಿಂದ ಕಳುಹಿಸಲ್ಪಟ್ಟ 'ಟರ್ಮಿನೇಟರ್'ನ ಕೆಲಸವೆಂದರೆ 1984ರ ಅಮೇರಿಕಾದಲ್ಲಿರುವ 'ಸಾರಾ ಕಾನರ್' ಎಂಬ ಹುಡುಗಿಯನ್ನು ಕೊಲ್ಲುವುದು. ಈ ಸಾರಾ ಕಾನರ್-ಗೆ ಹುಟ್ಟುವ ಮಗ ಮುಂದೆ ಬೆಳೆದು, ಮಷೀನು-ಮಾನವರ ಸಂಗ್ರಾಮದಲ್ಲಿ ಮಾನವರ ಮುಖ್ಯಸ್ಥನಾಗುತ್ತಾನೆ, ಮಷೀನುಗಳಿಗೆ ಮುಳುಗುನೀರು ತರುತ್ತಾನೆ. ಅದೇ ಟರ್ಮಿನೇಟರ್ ಜೊತೆಗೇ ಭವಿಷ್ಯದಿಂದ ಮಾನವರೂ ಕೂಡಾ ತಮ್ಮಲೊಬ್ಬನನ್ನು 'ಸಾರಾ'ಳ ರಕ್ಷಣೆಗೋಸ್ಕರ ಕಳುಹಿಸಿಕೊಡುತ್ತಾರೆ. 'ಕೈಲ್ ರೀಸ್' ಅನ್ನುವ ಈ ಹುಡುಗ 'ಸಾರಾ'ಳನ್ನು ರಕ್ಷಿಸುವ ಪ್ರಯತ್ನಮಾಡುತ್ತಾನೆ, ಅವರಿಬ್ಬರಲ್ಲಿ ಪ್ರೇಮಾಂಕುರವಾಗುತ್ತದೆ. 'ಸಾರಾ'ಳನ್ನು ರಕ್ಷಿಸಿ 'ಟರ್ಮಿನೇಟರ್'ನನ್ನು ನಾಶಗೊಳಿಸುವ ಪ್ರಯತ್ನದಲ್ಲಿ 'ಕೈಲ್' ಸಾಯುತ್ತಾನೆ. ಅವನ ಮಗುವಿನ ಗರ್ಭಿಣಿ 'ಸಾರಾ' ಮಾನಸಿಕ ಸ್ಥಿಮಿತ ತಪ್ಪಿದವಳಾಗುತ್ಟಾಳೆ.

ಟರ್ಮಿನೇಟರ್-ನ ಮುಂದಿನೆರಡು ಭಾಗಗಳಲ್ಲಿ (ಟರ್ಮಿನೇಟರ್ 2 - ಜಡ್ಜ್-ಮೆಂಟ್ ಡೇ (1991) 3 - ರೈಸ್ ಆಫ್ ಮಷೀನ್ಸ್ (2003)) 'ಸಾರಾ ಕಾನರ್' ನ ಮಗ 'ಜಾನ್ ಕಾನರ್' ಬೆಳೆದು ದೊಡ್ಡದಾಗುವುದು, ಅವನನ್ನು ಕೊಲ್ಲಲು ಮೇಲಿಂದ ಮೇಲೆ ಭವಿಷ್ಯದಿಂದ 'ಟರ್ಮಿನೇಟರ್'ಗಳು ಬರುವುದು, ಅವುಗಳ ಜಾಡು ಹಿಡಿದು ಮಾನವ ನಿರ್ಮಿತ ಜೀವರಕ್ಷಕ ಮಷೀನುಗಳು ಬರುವುದು ಇದೇ ಇದೆ.

ಈ ನಾಲ್ಕನೇ ಭಾಗ - 'ಟರ್ಮಿನೇಟರ್ ಸಾಲ್ವೇಶನ್' - ನಮ್ಮನ್ನು ನೇರವಾಗಿ 2018ರ ಮಷೀನು-ಮಾನವರ ಮಹಾಸಂಗ್ರಾಮದ ನಡುವಿಗೆ ಕೊಂಡೊಯ್ಯುತ್ತದೆ. ಇದರಲ್ಲಿ 'ಜಾನ್ ಕಾನರ್' ದೊಡ್ಡವನಾಗಿದ್ದಾನೆ, ಮನುಕುಲ ಅಣುವಿಸ್ಫೋಟದಿಂದಾಗಿ ಬಹುತೇಕ ನಿರ್ನಾಮವಾಗಿದೆ. ಅಳಿದುಳಿದವರು ಸಣ್ಣ ಸಣ್ಣ ಗುಂಪುಗಳಾಗಿ ರಹಸ್ಯವಾಗಿ ಮಷೀನುಗಳ ವಿರುದ್ದ ಬಂಡಾಯವೇಳುವ ಮತ್ತು 'ಸ್ಕೈ ನೆಟ್' ಅನ್ನು ನಾಶಪಡಿಸುವ ಸನ್ನಾಹದಲ್ಲಿದ್ದಾರೆ...

'ಟರ್ಮಿನೇಟರ್' - ಹಾಲಿವುಡ್ ಸೂಪರ್-ಸ್ಟಾರ್ ಅರ್ನಾಲ್ಡ್-ನ ಚಿತ್ರಸರಣಿಯಾಗಿದ್ದರೂ (ಸ್ಟ್ಯಾಲನ್-ಗೆ ರಾಂಬೋ-ರಾಕಿ | ವ್ಯಾನ್ ಡ್ಯಾಮ್-ಗೆ ಯೂನಿವರ್ಸಲ್ ಸೋಲ್ಜರ್ಸ್ ಮತ್ತು ಮೆಲ್ ಗಿಬ್ಸನ್-ಗೆ ಮ್ಯಾಡ್ ಮ್ಯಾಕ್ಸ್ ಇದ್ದ ಹಾಗೆ) ಇದರಲ್ಲಿ ಅವನಿಲ್ಲ. ಬದಲಾಗಿ 'ಬ್ಯಾಟ್-ಮ್ಯಾನ್' ಖ್ಯಾತಿಯ ಕ್ರಿಶ್ಟಿಯನ್ ಬೇಲ್ ಇದ್ದಾನೆ... ಅತ್ಯದ್ಭುತ ಎನಿಸುವಂತ ಕಂಪ್ಯೂಟರ್-ಗ್ರಾಫಿಕ್ಸ್ ಚಮತ್ಕಾರಗಳಿವೆ, ಮೈ ನವಿರೇಳಿಸುವ-ಹೃದಯ ತಲ್ಲಣಿಸುವಂತೆ ಮಾಡುವ ಆಕ್ಷನ್/ಚೇಸಿಂಗ್ ದೃಶ್ಯಗಳಿವೆ, ಎದೆ ಡವಡವಿಸುವಂತೆ ಮಾಡುವ ಹಿನ್ನಲೆ ಸಂಗೀತವಿದೆ...

ವಾರಾಂತ್ಯಕ್ಕೆ ಒಂದು ಮಸ್ತ್ ಸಿನೆಮಾ - 'ಟರ್ಮಿನೇಟರ್ - ಸಾಲ್ವೇಶನ್'

ನಾನು ಕೊಡೋದು * * * * (ನಾಲ್ಕು ನಕ್ಷತ್ರಗಳು)

ಲೇಖಕರು

ಶಿವಕುಮಾರ ಕೆ. ಎಸ್.

ನನ್ನ ತಲೆ'ಹರಟೆ'ಗಳು

ನಾನೊಬ್ಬ ಏಕಾಂಗಿ(ಇದೂವರೆಗೂ) ಸಂಚಾರಿ. ಸಮಯ, ಸಂದರ್ಭ, ವ್ಯಕ್ತಿಗಳೆಡೆಯಿಂದ ಪಯಣಿಸುತ್ತ, ಎಲ್ಲವನ್ನೂ ಅರ್ಥೈಸಿಕೊಳ್ಳುತ್ತ, ಕಲಿತುಕೊಳ್ಳುತ್ತ, ಯಾರನ್ನೂ ದೂರದೇ, ಪ್ರಜ್ಞಾಪೂರ್ವಕವಾಗಿ ಯಾವುದರ ಬಗೆಗೂ ಪೂರ್ವ-ನಿರ್ಧಾರಿತ ಆಲೋಚನೆಗಳನ್ನಿಟ್ಟುಕೊಳ್ಳದೇ ಸಾಗುತ್ತಿರುವೆ.

ಅನಿಸಿಕೆಗಳು

ಗಂಧ (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 06/27/2009 - 10:28

ಚಿತ್ರ ನೋಡದೆಯೇ ರಿವ್ಯೂ ಬರೆಯುವುದೆಂದರೆ ಇದೇನಾ ಶಿವೂ??
ನಾನು ಚಿತ್ರದ review ಬರೆದಿಲ್ಲ. terminator ಚಿತ್ರಗಳ re-view ಮಾಡಿದೆ ಅಷ್ಟೇ ಅನ್ನುತ್ತೀರಾದರೆ ಈ ನಾಲ್ಕು ನಕ್ಷತ್ರಗಳನ್ನು ಎಲ್ಲಿಂದ ಕೊಟ್ಟಿರಿ?
( ಸೂಃ ಸುಮ್ಮನೆ ನಿಮ್ಮನ್ನು ಕೆಣಕೋಣ ಅಂತಾ ಹೀಗೆ ಹೇಳಿದೆ. ಈ ನಿಮ್ಮ ಲೇಖನ ಕೂಡ ಚೆನ್ನಾಗಿದೆ. ನನಗೆ 'ವಿನಯ್ ಜಿ' ಯ ಭಯ. ಅವರೂ ಹೇಗೆ review ಬರೆಯಲು ಶುರು ಹಚ್ಚಿಕೊಂಡರೆ ವಿಸ್ಮಯದ....ಅಲ್ಲಲ್ಲ ಚಿತ್ರರಂಗದ ಗತಿಯೇನಪ್ಪಾ ಅಂತಾ!)

ಶಿವಕುಮಾರ ಕೆ. ಎಸ್. ಶನಿ, 06/27/2009 - 11:40

ಮೊದಲನೆಯದಾಗಿ "ಚಿತ್ರ ನೋಡದೆಯೇ ರಿವ್ಯೂ ಬರೆಯುವುದೆಂದರೆ ಇದೇನಾ ಶಿವೂ??" ಅನ್ನೋ ಸಾಲು ನೀವು ಸ್ನೇಹಪರರಾಗಿ ಕೆಣಕೋಕೆ ಶುರು ಹಚ್ಕೊಂಡ್ರಿ ಅಂತಾ ಹೇಳ್ತಾ ಇಲ್ಲ. :)
ಬೆಂಗಳೂರಿನಲ್ಲಿ ಶುಕ್ರವಾರ ಬಿಡುಗಡೆಯಾಗೋ ಚಿತ್ರಗಳನ್ನ ಗುರುವಾರ ರಾತ್ರಿಯೇ 'ಪೇಯ್ಡ್ ಪ್ರಿವ್ಯೂ' ಅಂತಾ ತೋರಿಸ್ತಾರೆ, ಅಲ್ಲದೇ ಶುಕ್ರವಾರ ಸಂಜೆ ಏಳೂವರೆ ಗಂಟೆಗೆಲ್ಲ 'ಟರ್ಮಿನೇಟರ್'ನ ಕನಿಷ್ಟ ಮೂರು ಪ್ರದರ್ಶನಗಳಾಗಿರುತ್ವೆ, ಅಂದ ಮೇಲೆ 'ನಾನು ಚಿತ್ರ ನೋಡದೇ ರಿವ್ಯೂ ಬರೆದಿರಬಹುದು ಮತ್ತು ಅದನ್ನು ತಾವು ಸ್ನೇಹಪರರಾಗಿಯೇ ಕೆಣಕಿ ಕೇಳಬಹುದು' ಅಂತಾ ಹೇಗೆ ಅಂದುಕೊಂಡಿರಿ?

ಎರಡನೆಯ ಸಾಲು ನಿಮ್ಮ ಸ್ನೇಹಪರತೆಯನ್ನು ಇನ್ನಷ್ಟು ಎತ್ತಿ ತೋರಿಸುತ್ತದೆ. ನಾನೇನಾದರೂ 'ಟರ್ಮಿನೇಟರ್ ಚಿತ್ರಗಳ ರಿವ್ಯೂ ಮಾಡಿದೆ' ಅಂತಾ ನುಣುಚಿಕೊಳ್ಳೋಕೆ ಪ್ರಯತ್ನ ಮಾಡಿದರೆ ಅಂತಾ ದೂ(ದು)ರಾಲೋಚನೆ ಮಾಡಿ ಇನ್ನೊಂದು 'ಸುಮ್ಮನೆ ಕೆಣಕುವ' ಬಾಂಬ್ ಇಟ್ಟಿದೀರ. (ಈ ನಾಲ್ಕು ನಕ್ಷತ್ರಗಳನ್ನು ಎಲ್ಲಿಂದ ಕೊಟ್ಟಿರಿ)

ಕೊನೆಗೆ 'ಯಾಕೋ ಇದೆಲ್ಲ ಕೆಣಕುವಿಕೆ ಹೆಚ್ಚಾಯಿತೇನೋ ಅಂದುಕೊಂಡು 'ಸುಮ್ಮನೆ ನಿಮ್ಮನ್ನು ಕೆಣಕೋಣ ಅಂತಾ ಹೀಗೆ ಹೇಳಿದೆ. ಈ ನಿಮ್ಮ ಲೇಖನ ಕೂಡ ಚೆನ್ನಾಗಿದೆ.' ಅನ್ನುವ ಸಹೃದಯೀ ಸಂತಾಪ!

ಮತ್ತೂ ಬಿಡದೇ ಇನ್ನೊಂದು ಸಾಲು ಹಾಕಿಯೇ ('ಚಿತ್ರರಂಗದದ ಗತಿಯೇನಪ್ಪಾ') ಕಾಮೆಂಟು ಮುಗಿಸಿದ್ದೀರಿ, ನಿಮ್ಮ ಸ್ನೇಹಪರತೆಗೆ ನಾನು ಚಿರಋಣಿ

ಹೊಡೆತದ ಬಿಸಿ ಕಮ್ಮಿ ಮಾಡಲು ಬೇರೆಯವರ ಹೆಸ್ರು ತಗೋಳ್ಳೊದು ಬೇಡ ಗಂಧ ಅವರೆ, ನಾನೂ ನೀವೂ ಸೇರಿಯೇ ಅವರಿವರಂತವರನ್ನು ಝಾಡಿಸಿದ್ದೀವಿ, ನಿಮ್ಮಿಂದ ಈ ಕಾಮೆಂಟ್ ಬೇಕಾಗಿರಲಿಲ್ಲ.

Thanks for making my weekend!

ಸಸ್ನೇಹಿ,

ಶಿವಕುಮಾರ

(ಸೂಃ ಇಷ್ಟೆಲ್ಲಾ (ಪಿಸುಮಾತಿಗಿಂತಲೂ ಉದ್ದದ ಕಾಮೆಂಟ್) ಬರೆದೂ ನಾನು ನಿಮ್ಮ ಸಂದೇಹಕ್ಕೆ ಸಮಝಾಯಿಶಿ (ಚಿತ್ರ ನೋಡದೇ ರಿವ್ಯೂ ಬರೆದಿದ್ದರ ಬಗ್ಗೆ ಇಲ್ಲಾ ನೋಡಿದ್ದರೆ ಯಾವ ಟಾಕೀಸು, ಎಷ್ಟು ಗಂಟೆಯ ಆಟ,ಟಿಕೇಟಿನ ಪ್ರತಿಯ ಜೆರಾಕ್ಸು) ಕೊಡಲಿಲ್ಲಾ ಅಲ್ವೆ? ಬೇಡ ಬಿಡಿ, ನಿಮ್ಮಂತವರಿಗೆ ಸಮಝಾಯಿಶಿ ಕೊಡುವ ಅಗತ್ಯ ನನಗಿಲ್ಲ)

ರಾಜೇಶ ಹೆಗಡೆ ಮಂಗಳ, 06/30/2009 - 23:08

ಹಾಯ್ ಶಿವಕುಮಾರ್ ಅವರೇ,

ಟರ್ಮಿನೇಟರ್ ನನ್ನ ಅಚ್ಚುಮೆಚ್ಚಿನ ಹಾಲಿವುಡ್ ಚಿತ್ರ ಸರಣಿಯಲ್ಲಿ ಒಂದು. :) ಇದರ ಹಿಂದಿನ ಭಾಗಗಳನ್ನು ನೋಡಿದ್ದೇನೆ. ಅದ್ಬುತ ಎನ್ನಿಸುವಂತಹ ಗ್ರಾಫಿಕ್ಸ , ಅರ್ನಾಲ್ಡ್ ಅವರ ನಟನೆ ಎಲ್ಲಾ ಇಷ್ಟ. ಈ ಭಾಗ ಕೂಡಾ ನೋಡಬೇಕು. :)

ವಿನಯ್_ಜಿ ಮಂಗಳ, 06/30/2009 - 12:07

ಭಲೆ ವಾ ಗಂಧರವರೆ,
ಮೆಚ್ಚಿದೆ ನಿಮ್ಮ commenti ಗೆ.. :) :dance: , "ಅದು ಬರಿತಾರೆ, ಇದು ಬರಿತಾರೆ..." ಅಂತ ಎಲ್ಲರನ್ನು ಹೆದರಿಸಿಬಿಟ್ಟರೆ ಹೇಗೆ ಸ್ವಾಮಿ...?. ಹೇಗಿದ್ದರೂ ಒಬ್ಬರು ಬರೆಯುತ್ತಿದ್ದಾರಲ್ಲಾ... ಅದನ್ನೇ ಓದಿ... ಅವರಿಗೆ comment ಹಾಕಿ... ಸುಮ್ಮನೆ "ಅವರಿವರನ್ನು ಝಾಡಿಸುವುದು" ದನ್ನ ಮಾಡಿಸಿಕೊಳ್ಳುವುದು ಏಕಲ್ಲವೇ ....!

ಗಂಧ (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 06/27/2009 - 13:15

ಸಣ್ಣಗೆ ಕೆಣಕಿದ್ದಕ್ಕೆ ಸರಿಯಾದ ಡೋಸೇ ಕೊಟ್ಟಿರಿ!!!! ಕೆಣಕಿದ ಉದ್ದೇಶ ಸಾರ್ಥಕವಾಯ್ತು.
( ಹೆಚ್ಚು ಬರೆಯಲು ಹೋಗುವುದಿಲ್ಲ...ಊದಿಕೊಂಡ ಕೆನ್ನೆ ಹಣೆಗೆ ಚಿಕಿತ್ಸೆಯ ತುರ್ತು ಇದೆ...)

ಮುಸ್ತಾಫ (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 06/29/2009 - 11:20

ಬಹಳ ಚೆನ್ನಾಗಿದೆ.

ಅಚ್ಚುಹೆಗಡೆ ಗುರು, 07/02/2009 - 16:06

ಈ ನಾಲ್ಕನೇ ಭಾಗದಲ್ಲೂ ಆರ್ನಾಲ್ಡ್ ಚಿಕ್ಕ ಪಾತ್ರ ಮಾಡುತ್ತಾನೆ ಎಂದಿದ್ದರು. ಇದ್ದಾನಾ?

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 07/10/2009 - 01:06

ಶಿವೂ, ನಿನ್ಗ್ಯಕಪ್ಪಾ ಊರಿನ ಉಸಾಬರೀ. ಒಳ್ಳೆ ಕಥೆ ಬರೆಯೋ ಹುಡುಗ.. ಇದನ್ನೆಲ್ಲಾ ಬರಕೊಂಡು ಸಮಯ ಹಾಳು ಮಾಡ್ತಿದ್ದಿಯ. ... ಸತ್ತ ಕಲ್ಪನನೊ, ಇದ್ದು ಅಳಿಸೊ ಲಕ್ಷ್ಮಿ ಬಗ್ಗೆನೊ ಪರ್ವಾಗಿಲ್ಲ.. ಆದರೆ.. ಈ ಸಾಲ್ವೇಷನ್ ತಗೊಂಡು ಏನ್ ಮಾಡೊದು?... ನೀಹಾರಿಕಾ ಏಲ್ಲಿದ್ದಾಳೆ? ಅವ್ಳ ಕಥೆ ಎನಾಯ್ತು?...

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.