ಇರಾಕ್-ಬಾಗ್ದಾದಿನಲ್ಲಿ ಬಾಂಬ್ ಸ್ಫೋಟ
ಇರಾಕ್-ಬಾಗ್ದಾದಿನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಕನಿಷ್ಟಪಕ್ಶ 69 ಜನ ಸಾವಿಗೀಡಾಗಿದ್ದು ನೂರೈವತ್ತಕ್ಕೂ ಜನ ಗಾಯಗೊಂಡಿದ್ದಾರೆ. 24 ಜೂನ್-ರಂದು ಬಾಗ್ದಾದಿನ ಸದ್ರ್ ನಗರ ಪ್ರದೇಶದಲ್ಲಿರುವ ಮುರೈದಿ ಮಾರುಕಟ್ಟೆಯಲ್ಲಿ ಉಂಟಾದ ಈ ಸ್ಫೋಟ, ಯಾಂತ್ರೀಕೃತ ತರಕಾರಿ-ಗಾಡಿಯೊಳಗೆ ಬಚ್ಚಿಟ್ಟಿದ್ದ ಬಾಂಬಿನಿಂದ ಸಂಭವಿಸಿದೆಯೆಂದು ಬಿ.ಬಿ.ಸಿ. ಮತ್ತು ಸಿ.ಎನ್.ಎನ್. ವರದಿ ಮಾಡಿವೆ. ಸಿಡಿದ ಬಾಂಬಿನ ಹರಿತವಾದ ಚರ್ರೆಗಳು ಸ್ಫೋಟದಿಂದ 600ಮೀಟರ್ ದೂರದಲ್ಲಿದ್ದವರನ್ನೂ ಗಾಯಗೊಳಿಸಿವೆ.
ಸಾಲುಗಳು
- 412 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ