Skip to main content

ಕಾಗದದ ದೋಣಿ ಮತ್ತು ಮಳೆ

ಬರೆದಿದ್ದುJune 10, 2009
9ಅನಿಸಿಕೆಗಳು

[img_assist|nid=4505|title=ಮಳೆ|desc=|link=none|align=left|width=182|height=260]ಮುಜೆ ವಾಪಸ್ ಲೇಲೋ ಏ ಸಾರೇ ದೌಲತ್
ಯೇ ದೌಲತ ಭೀ ಲೇಲೊ, ಯೇ ಷಹರತ ಭೀ ಲೇಲೊ
ಭಲೇ ಛೀನಲೊ ಮುಜ್ ಸೆ ಮೇರೀ ಜವಾನೀ
ಮಗರ ಮುಜ್ ಕೊ ಲೌಟಾದೊ ಬಚ ಪನ ಕಾ ಸಾವನ್
ವೊ ಕಾಗಜ ಕೀ ಕಶ್ತೀ ವೊ ಬಾರಿಷ ಕಾ ಪಾನೀ

( ಓ ಬದುಕೇ, ನನ್ನ ಈ ಆಸ್ತಿಯೆಲ್ಲಾ ತೆಗೆದುಕೋ, ನನ್ನ ಈ ಯೌವ್ವನವನ್ನೂ ಕಿತ್ತುಕೊಂಡು ಬಿಡು ಆದರೆ ನನಗೆ ಆ ಬಾಲ್ಯದ ಕಾಗದದ ದೋಣಿ ಹಾಗು ಮಳೆ ನೀರನ್ನು ಹಿಂದಿರುಗಿಸು)

ಮಳೆ ಬಂದಾಗಲೆಲ್ಲಾ ಏನೇನೋ ಹುಚ್ಚುಚ್ಹು ನೆನಪುಗಳು " ಮತ್ತೆ ಮಳೆ ಹುಯ್ಯುತಿದೆ ಎಲ್ಲಾ ನೆನಪಾಗುತಿದೆ " ಈ ಮಳೆ ಎಂಬುದೇ ಹೀಗೆ ಒಮ್ಮೆ ಸಾಂತ್ವನ ಹೇಳುವ ಗೆಳೆಯನಂತಾದರೆ ಮತ್ತೊಮ್ಮೆ ಉರಿಯುವ ಗಾಯಕ್ಕೆ ಉಪ್ಪು ಹಚ್ಚುತ್ತದೆ.

ಈ ಬಾರಿ ಮಾತ್ರ ಬೆಂಗಳೂರಿನ ಆಕಾಶದಲ್ಲಿ ಬೆಂಬಡದೆ ಸುರಿದ ಮಳೆ ಹೊತ್ತು ತಂದದ್ದು ಬಾಲ್ಯದ ನೆನಪುಗಳನ್ನು.
ಮಳೆಗೂ ಬಾಲ್ಯಕ್ಕೂ ಬಿಡಿಸಲಾರದ ನಂಟು.ನನ್ನ ಬಾಲ್ಯದ ಕೆಲವು ಮಳೆಹನಿಗಳನ್ನು ನಿಮ್ಮ ಮೇಲೆ ಹನಿಸುತ್ತೇನೆ

ನೆನಪು :- ಒಂದು
ನಾವು ಆಗ ಬನ್ನೇರುಘಟ್ಟರಸ್ತೆಯ ಗೊಟ್ಟಿಗೆರೆಯ ಒಂದು ಮನೆಯಲ್ಲಿದ್ದೆವು, ಸುಮಾರು 1989 ಅಥವಾ 1990ನೆ ಇಸ್ವಿ ಇರಬಹುದು, ನಾವಿದ್ದ ಮನೆ ನಮ್ಮ ನಾಲ್ಕು ಜನರ ಕುಟುಂಬಕ್ಕೆ ಸ್ವಲ್ಪ ದೊಡ್ಡದಾದರೂ, ಅದು ಷೀಟಿನ ಮನೆಯಾಗಿತ್ತು, ಒಮ್ಮೆ ಹೀಗೆ ಜೋರಾಗಿ ಮಳೆ ಶುರುವಾಯಿತು, ನಾನು,ನಮ್ಮಣ್ಣ ಮಳೆಯಲ್ಲಿ ದೋಣಿ ಮಾಡಿ ಬಿಡಲು ಓಡಿ ಹೋದೆವು, ಸ್ವಲ್ಪ ಹೊತ್ತಿನಲ್ಲೇ ಮಳೆ ಜೋರಾಗಿ ಆಲಿಕಲ್ಲು ಬೀಳಲಾರಂಭಿಸಿತು
ನಮ್ಮ ಕೋತಿ ಆಟಕ್ಕೆ ಪ್ರೋತ್ಸಾಹ ಕೊಡಲು ನಮ್ಮ ಅಪ್ಪನೂ ನಮ್ಮ ಜೊತೆ ಸೇರಿಬಿಟ್ಟರು, ನಮ್ಮಮ್ಮ ಬಾಗಿಲಲ್ಲಿ ನಿಂತು ಈ ಬಾಲ ಲೀಲೆಗಳನ್ನೆಲ್ಲಾ ನೋಡಿ ನಗುತ್ತಾ ನಿಂತಿದ್ದರು. ಎಲ್ಲರೂ ಆಟ ಮುಗಿಸಿ ಬೇಜಾರಾಗಿ
ಮನೆಯೊಳಗೆ ಬಂದವರೇ ದಿಘ್ಮೂಢರಾಗಿ ನಿಂತು ಬಿಟ್ಟರು. ಏಕೆಂದರೆ ಆಲಿಕಲ್ಲಿನ ಮಳೆಯಿಂದ ಮನೆಯ ಷೀಟಿನಲ್ಲಿ ತೂತುಗಳಾಗಿ ಮನೆಯೆಲ್ಲಾ ಕೆರೆಯಂತಾಗಿತ್ತು

ನೆನಪು :- ಎರಡು
ಇನ್ನೊಮ್ಮೆ ಸಣ್ಣ ಹುಡುಗನಿದ್ದಾಗ ಪಾರ್ಕಿನಲ್ಲಿ ಸುತ್ತಾಡುತ್ತಿದ್ದೆ,ಸಣ್ಣದಾಗಿ ಶುರುವಾದ ಮಳೆ ಒಮ್ಮೆಲೇ ಜೋರಾಯಿತು ನಾನು ಓಡಿಹೋಗಿ ಒಂದು ಮರದಡಿಯಲ್ಲಿ ನಿಂತುಕೊಂಡೆ. ಪಕ್ಕದಲ್ಲೇ ಏನೋ ಬಿದ್ದ ಸದ್ದಾಯಿತು
ನೋಡಿದಾಗ ಎರಡು ಅಳಿಲು ಮರಿಗಳು ಮರದಿಂದ ಕೆಳಗೆ ಬಿದ್ದು ಒದ್ದಾಡುತ್ತಿತ್ತು. ಹತ್ತಿರ ಹೋಗಿ ಕೈಗೆತ್ತಿಕೊಂಡೆ. ಮಳೆಯಲ್ಲಿ ಒದ್ದೆ ಮುದ್ದೆಯಾಗಿದ್ದ ಅವುಗಳಲ್ಲಿ ಒಂದು ನನ್ನ ಕೈಯಲ್ಲೇ ಅಸುನೀಗಿತು.( ಇನ್ನೊಂದನ್ನು
ಮನೆಗೆ ತೆಗೆದುಕೊಂಡು ಹೋಗಿ, ಸುಮಾರು ದಿನ ಸಾಕಿಕೊಂಡಿದ್ದೆ) ಯಾಕೋ ಅಂದು ನನ್ನ ಕಣ್ಣು ತುಂಬಿ ಬಂದಿತ್ತು

ನೆನಪು :- ಮೂರು
ನಾನು ಮೊದಲನೇ ಪಿಯುಸಿಯಲ್ಲಿ ಓದುತ್ತಿದ್ದಾಗ ಮು--- ಎಂಬ ಹುಡುಗಿಯೊಬ್ಬಳು ಸ್ನೇಹಿತಳಾಗಿದ್ದಳು. ನಮ್ಮಿಬ್ಬರ ಮಧ್ಯೆ ಸ್ನೇಹಕ್ಕಿಂತ ಹೆಚ್ಚಾಗಿ ಸಮಾನ ಅಭಿರುಚಿಗಳಿದ್ದವು. ಒಮ್ಮೆ ಕಾಲೇಜು ಬಿಟ್ಟ ಸಮಯದಲ್ಲಿ
ಸಣ್ಣಗೆ ಮಳೆ ಹನಿಯುತ್ತಿತ್ತು. ಉಪಾದ್ಯಾಯರಾದಿಯಾಗಿ ಎಲ್ಲರೂ ನಿಂತಿದ್ದರು ( ಅರಸಿಕರು ) ನಾನು ಮಾತ್ರ ಮಳೆಯನ್ನು ಲೆಕ್ಕಿಸದೇ ನಡೆಯುತ್ತಾ ಹೊರಟೆ. ಹಿಂದಿನಿಂದ ಯಾರೋ ಕರೆದಂತಾಯಿತು, ತಿರುಗಿ ನೋಡಿದರೆ ಮು--- ಓಡುತ್ತಾ ನನ್ನೆಡೆಗೆ ಬಂದಳು. ಸುಮಾರು ಮೂರು ಕಿಲೊ ಮೀಟರ್ ಇಬ್ಬರೂ ಮಳೆಯಲ್ಲೇ ನೆನೆಯುತ್ತಾ ನಡೆದುಕೊಂಡು ಹೋದೆವು
ಏಳು ಹೆಜ್ಜೆ ಯಾರು ಒಟ್ಟಿಗೆ ನಡೆಯುವರೋ,ಅವರು ಏಳೇಳು ಜನ್ಮದವರೆಗೂ ಸ್ನೇಹಿತರಾಗಿರುತ್ತಾರೆಂದು ಭಾರತೀಯ ತತ್ವಶಾಸ್ತ್ರ ಹೇಳುತ್ತದೆ.ಬಹುಶಃ ಅದು ಸುಳ್ಳಿರಬಹುದು
ಯಾಕೆಂದರೆ ಈಗಲೂ ಮಳೆ ಹುಯ್ಯುತಿದೆ,ಮತ್ತು ನನ್ನ ಕಣ್ಣು ತುಂಬಿ ಬಂದಂತಾಗುತ್ತಿದೆ

ಇನ್ನಷ್ಟು ನೆನಪುಗಳೊಡನೆ ಮುಂದಿನ ಮಳೆಯಲ್ಲಿ ಬರುತ್ತೇನೆ
ಚಂದ್ರು

ಲೇಖಕರು

ಬಾಲ ಚಂದ್ರ

ಹೊಳೆ ದಂಡೆ

ನನ್ನ ಲೇಖನಗಳನ್ನು ಓದಿ
ನನ್ನ ಬಗ್ಗೆ ನಿಮಗೇ ತಿಳಿಯುತ್ತೆ.

ಅನಿಸಿಕೆಗಳು

ರಾಜೇಶ ಹೆಗಡೆ ಶುಕ್ರ, 06/12/2009 - 10:35

ಹಾಯ್ ಬಾಲ ಚಂದ್ರ ಅವರೇ ಚೆನ್ನಾಗಿದೆ ನಿಮ್ಮ ಮಳೆಯ ನೆನಪು. :)
ಲೇಖನದ ಶೀರ್ಷಿಕೆಯನ್ನು ಇನ್ನೂ ಆಕರ್ಷಕವಾಗಿಸ ಬಹುದಾಗಿತ್ತಾ? ಇದು ಹೇಗಿದೆ "ಸುರಿವ ಮಳೆಯ ನಡುವೆ ಜಾರಿದ ಕಣ್ಣೀರಿನ ಹನಿಗಳು" ;)

[quote]ಏಕೆಂದರೆ ಆಲಿಕಲ್ಲಿನ ಮಳೆಯಿಂದ ಮನೆಯ ಷೀಟಿನಲ್ಲಿ ತೂತುಗಳಾಗಿ ಮನೆಯೆಲ್ಲಾ ಕೆರೆಯಂತಾಗಿತ್ತು[/quote]

ಇನ್ನೊಂದು ಪ್ರಶ್ನೆ ಆಲಿಕಲ್ಲಿನ ಮಳೆಗೆ ತೂತಾಗುವಷ್ಟು ಷೀಟಿನ ಮನೆ ದುರ್ಬಲವಾಗಿರುತ್ತಾ? ಅಥವಾ ಅಷ್ಟು ದೊಡ್ಡ ಆಲಿಕಲ್ಲು ಬಿದ್ದಿತ್ತಾ? ನನಗೆ ಗೊತ್ತಿರುವ ಹಾಗೆ ಎಸಿ ಷೀಟು ಅಷ್ಟು ದುರ್ಬಲವಾಗಿರುವದಿಲ್ಲ?

ಬಾಲ ಚಂದ್ರ ಶುಕ್ರ, 06/12/2009 - 17:43

ಪ್ರೀತಿಯ ರಾಜೇಶ್,
ಪ್ರತಿಕ್ರಿಯೆಗಾಗಿ ಧನ್ಯವಾದ
ಲೇಖನದ ಶೀರ್ಷಿಕೆಯನ್ನು ಖಂಡಿತ ಇನ್ನಷ್ಟು ಆಕರ್ಷಕವಾಗಿಸಬಹುದಿತ್ತು,ಆದರೆ ಲೇಖನದ ಮೊದಲು ಉದ್ದರಿಸಿರುವ ಹಿಂದಿ ಕವನವೊಂದರ ಸಾಲಿಗೆ ಈ ಶೀರ್ಷಿಕೆ ಹೊಂದಿಕೊಳ್ಳುವುದರಿಂದ ಹಾಗೆ ಹೆಸರಿಟ್ಟೆ. ನೀವು ಸೂಚಿಸಿದ ಹೆಸರೂ ಚೆನ್ನಾಗಿದೆ.
ಎರಡನೆಯದಾಗಿ,ಆಲಿಕಲ್ಲಿನ ಮಳೆಗೆ ತೂತಾಗುವಷ್ಟು ಷೀಟಿನ ಮನೆ ದುರ್ಬಲವಾಗಿರುತ್ತಾ? ಎಂದು ಪ್ರಶ್ನಿಸಿದ್ದೀರಿ. ನಿಜವಾಗಿಯೂ ನಿಮ್ಮ ಸೂಕ್ಷ್ಮವಾದ ಪರೀಕ್ಷಣಾ ಬುದ್ದಿ ಅಮೋಘವಾದದ್ದು. ಆದರೆ ನನಗಾಗ ಸುಮಾರು ನಾಲ್ಕು ವರ್ಷ ವಯಸ್ಸು. ಅದರ ಬಗ್ಗೆ ನನ್ನ ನೆನಪಿನ ಬುತ್ತಿ ಬಹಳ ತೀಕ್ಷ್ಣವಾಗಿದ್ದರೂ, ಅಲ್ಲಿನ ಸನ್ನಿವೇಶನ್ನು ಪರಾಮರ್ಶಿಸುವ ಬುದ್ದಿ ನನಗಾಗ ಇರಲಿಲ್ಲ. ಷೀಟು ಮನೆಗಳು ಮಳೆಗಾಲದಲ್ಲಿ ಸೋರುವುದು ತೀರಾ ಸಾಮಾನ್ಯ. ಬಹುಶಃ ಷೀಟು ಮೊದಲೇ ದುರ್ಬಲವಾಗಿದ್ದು, ಆಲಿ ಕಲ್ಲಿನ ಮಳೆಯ ನಂತರ ಸೋರಿರಬಹುದು. ಹೇಗೇ ಇರಲಿ ನನ್ನ ಗಮನಕ್ಕೆ ಬಾರದ ನನ್ನ ಲೇಖನ ನ್ಯೂನತೆಯನ್ನು ತೋರಿಸಿದ್ದಕ್ಕೆ ಧನ್ಯವಾದಗಳು
ಸಸ್ನೇಹ
ಬಾಲ ಚಂದ್ರ

ಚಂದ್ರ ಶನಿ, 06/13/2009 - 15:36

thumbha channagide sir

Narasipur ಶುಕ್ರ, 06/12/2009 - 17:56

ಮಾನ್ಯ ಬಾಲಚಂದ್ರ ಅವರಿಗೆ ವಂದನೆಗಳು,

ನಿಮ್ಮ 'ಮಳೆಯ ಮೂರು ನೆನಪುಗಳ'ನ್ನು ಓದಿದೆ. ಚೆನ್ನಾಗಿದೆ. ಆದರೆ ಹಿಂದಿಯ ಕವನವನ್ನು (ಜಗಜೀತ ಸಿಂಹರ ಧ್ವನಿಯಲ್ಲಿ ಕೇಳಿದ್ದು) ಅದರ ಸರಿಯಾದ ರೂಪದಲ್ಲಿ ಕೆಳಗೆ ಇದ್ದಂತೆ ಕೇಳಿದ ನೆನಪುಃ

ಯೇ ದೌಲತ ಭೀ ಲೇಲೊ, ಯೇ ಷಹರತ ಭೀ ಲೇಲೊ
ಭಲೇ ಛೀನಲೊ ಮುಜ್ ಸೆ ಮೇರೀ ಜವಾನೀ
ಮಗರ ಮುಜ್ ಕೊ ಲೌಟಾದೊ ಬಚ ಪನ ಕಾ ಸಾವನ್
ವೊ ಕಾಗಜ ಕೀ ಕಶ್ತೀ ವೊ ಬಾರಿಷ ಕಾ ಪಾನೀ

(ವಿಸ್ಮಯ ನಗರಿ ಯ interface ಕನ್ನಡದ ಅರ್ಧಾಕ್ಷರಗಳನ್ನು ಟೈಪ ಮಾಡಲು ಬಿಡುತ್ತಿಲ್ಲ, ಮೇಲಧಿಕಾರಿಗಳು ಇತ್ತ ಗಮನ ಹರಿಸಬೇಕು)

ಮೇಲಧಿಕಾರಿ ಸೋಮ, 06/15/2009 - 20:38

ನರಸೀಪುರ ಅವರೇ,

ಶೀಘ್ರದಲ್ಲಿ ವಿಸ್ಮಯ ಕೀಲಿಮಣೆ ವಿನ್ಯಾಸದಲ್ಲಿ ಸಣ್ಣಪುಟ್ಟ ಬದಲಾವಣೆ ಆಗಲಿದ್ದು ನಿಮ್ಮ ಸಮಸ್ಯೆ ಪರಿಹಾರವಾಗಲಿದೆ. :)

ವಂದನೆಗಳು
--ಮೇಲಧಿಕಾರಿ

ಬಾಲ ಚಂದ್ರ ಶುಕ್ರ, 06/12/2009 - 18:25

ತುಂಬಾ ಧನ್ಯವಾದಗಳು ನರಸೀಪುರ್,
ನೀವು ಉಲ್ಲೇಖಿಸಿರುವ ರೂಪ ಸರಿಯಾದದು, ನಾನೂ ಕೇಳಿದ್ದೇನೆ, ನನ್ನ ಗೆಳತಿಯೊಬ್ಬಳು ಬರೆದ ಮಿಂಚಂಚೆಯಲ್ಲಿ ಹೀಗೆ ಬರೆದಿದ್ದಳು, ನಾನು ಬರೆಯುವಾಗ ತಲೆಯಲ್ಲಿ ಅದೇ ಕೆಲಸ ಮಾಡಿದೆ ಅಷ್ಟೇ.
( ಅರ್ಧಾಕ್ಷರ ಬರೆಯಲು ಟೈಪಿಸಿದ ನಂತರ ಷಿಫ್ಟ್ ಮತ್ತು ( ಚಿನ್ಹೆಯನ್ನು ಒಟ್ಟಿಗೇ ಕುಟ್ಟಿಬೇಕು )
ಸಸ್ನೇಹ
ಬಾಲ ಚಂದ್ರ

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 06/15/2009 - 16:27

ಬಾಲಚಂದ್ರ ಅವರೇ ನಿಮ್ಮ ಲೇಖನ ನನಗೂ ನನ್ನ ಹಳೆಯ ದಿನಗಳನ್ನು ನೆನಪಿಸಿತು....
ನಾನು ಶೃಂಗೇರಿ ಯವನೆ... ನೀವು ಓದಿದ ಕಾಲೇಜ್ನಲ್ಲೆ ಓದಿದ್ದು................
ಶೃಂಗೇರಿಯ ಮಳೆ ನಿಜವಾಗಿಯೂ ಮರೆಯಲಸಾದ್ಯ......
ಮಲೆನಾಡಿನ ಮಳೆಗಾಲವೇ ಅದ್ಭುತ ..
ನನ್ನಿಂದ ನಿಮಗೊಂದು ಕೋರಿಕೆ...
ದಯವಿಟ್ಟು ...ಶೃಂಗೇರಿಯ ಮಳೆಗಾಲವನ್ನು ಕುರಿತು ಒಂದು ಲೇಖನ ಬರೆಯಿರಿ...
ಕಾದಿರುವೆ...

ಬಾಲ ಚಂದ್ರ ಮಂಗಳ, 06/16/2009 - 09:55

ಪ್ರೀತಿಯ ಅನಾಮಿಕ,
ನಿಮ್ಮ ಪ್ರತಿಕ್ರಿಯೆಯಿಂದ ಖುಷಿಯಾಯಿತು,
ನೀವು ನಮ್ಮ ಊರಿನವರು,ನನ್ನ ಕಾಲೇಜಿನವರೇ ಎಂದು ತಿಳಿಸಿದ್ದೀರಿ.ದಯಮಾಡಿ ತಮ್ಮ ಪರಿಚಯ ತಿಳಿಸಿ

ಸಸ್ನೇಹ
ಬಾಲ ಚಂದ್ರ

shiva@kumar ಧ, 06/24/2009 - 19:50

ನಮಸ್ಕಾರ Balachandra,
ನಿಮ್ಮ ಮಳೆಯ ನೆನಪುಗಳು ಬಲು ಸೊಗಸಾಗಿದೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.