ವಾಲ್ಮೀಕಿ ರಾಮಾಯಣ

ಬರೆದವರು: ರಾಜೇಶ ಹೆಗಡೆ - ಕಳುಹಿಸಿದ ದಿನ 08 June 2009

ರಾಮಾಯಣರಾಮಾಯಣ ವಾಲ್ಮೀಕಿ ಮುನಿ ಬರೆದ ರಾಮನ ಚರಿತ್ರೆಯೇ ರಾಮಾಯಣ. ಇದು ಭಾರತದ ಮಹಾಕಾವ್ಯಗಳಲ್ಲಿ ಒಂದು. ರಾಮಾಯಣ ಎಂದರೆ ರಾಮನ ಆಯನ. ರಾಮನ ಜೀವನ ಪಯಣ.ರಾಮನೇ ಇದರ ನಾಯಕ.

ಇದರಿಂದಾಗಿ ವಾಲ್ಮೀಕಿಗೆ ಆದಿಕವಿ ಎಂಬ ಹೆಸರು ಬಂತು. ರಾಮಾಯಣ ಬರೆದು ಶತಮಾನಗಳೇ ಕಳೆದಿವೆ. ಆದರೂ ಭಾರತದಲ್ಲಿ ಈ ಕಥೆ ಜನಪ್ರಿಯ. ಅದಕ್ಕೆ ಕಾರಣ ಈ ಕಥೆಯಲ್ಲಿರುವ ಮೌಲ್ಯಗಳು, ನೀತಿ ಇತ್ಯಾದಿ. ಪೀಳಿಗೆಯಿಂದ ಪೀಳಿಗೆಗೆ ಹೊಸರೂಪ ಪಡೆಯುತ್ತಾ ಮಾನವೀಯ ಮೌಲ್ಯ, ನೀತಿ ಬೋಧಿಸುತ್ತಾ, ಮನರಂಜಿಸುತ್ತಾ ಬಂದಿದೆ. ನಾಟಕ, ಯಕ್ಷಗಾನ, ಕಾವ್ಯ, ಟಿವಿ ಧಾರಾವಾಹಿ ಮತ್ತು ಸಿನಿಮಾ ಹೀಗೆ ವಿವಿಧ ರೂಪ ಪಡೆದಿದೆ.

ಮೂಲ ರಾಮಾಯಣ ಸಂಸ್ಕೃತ ಭಾಷೆಯಲ್ಲಿದೆ. ರಾಮಾಯಣದಲ್ಲಿ ಆರು ಕಾಂಡಗಳಿದ್ದು ಪ್ರತಿ ಕಾಂಡದಲ್ಲಿ ಅನೇಕ ಸರ್ಗಗಳನ್ನು ಹೊಂದಿವೆ. ಪ್ರತಿಸರ್ಗ ಹಲವು ಶ್ಲೋಕಗಳಿಂದ ಕೂಡಿದೆ. ಈ ಶ್ಲೋಕಗಳೆಲ್ಲವೂ ಅನುಸ್ತುಪ ಛಂದಸ್ಸಿನಲ್ಲಿ ಬರೆಯಲ್ಪಟ್ಟಿವೆ. ರಾಮಾಯಣದಲ್ಲಿ ಒಟ್ಟೂ 24000 ಶ್ಲೋಕಗಳಿವೆ.

ರಾಮಾಯಣದ ಆರು ಕಾಂಡಗಳು ಹೀಗಿವೆ

  • ಬಾಲ ಕಾಂಡ
  • ಅಯೋಧ್ಯಾ ಕಾಂಡ
  • ಅರಣ್ಯ ಕಾಂಡ
  • ಕಿಷ್ಕಿಂಧಾ ಕಾಂಡ
  • ಸುಂದರ ಕಾಂಡ
  • ಯುದ್ಧ ಕಾಂಡ

ಬಾಲ ಕಾಂಡದಲ್ಲಿರುವ ಕೆಲವು ಕಥೆಗಳು ವಾಲ್ಮೀಕಿ ಬರೆದಿದ್ದು ಹೌದೋ ಅಲ್ಲವೋ ಎಂಬುದರ ಬಗ್ಗೆ ವಾದ ವಿವಾದವಿದೆ.
ಉತ್ತರ ಕಾಂಡ ಎಂಬ ಭಾಗವೂ ಇದ್ದು ಇದರ ಶೈಲಿ ರಾಮಾಯಣದ ಇತರ ಕಾಂಡಗಳ ಜೊತೆ ಹೋಲುತ್ತಿಲ್ಲವಾದ್ದರಿಂದ ಇದು ವಾಲ್ಮೀಕಿ ರಚನೆ ಅಲ್ಲ ಎಂಬುದು ತಜ್ಞರ ಅಭಿಪ್ರಾಯ.

ಈ ವಾದ ವಿವಾದ ಏನೆ ಇರಲಿ ನಿಸ್ಸಂಶಯವಾಗಿ ರಾಮಾಯಣ ಒಂದು ಮಹಾನ್ ಕೃತಿ. ಇದು ಯಾವಾಗ ಬರೆಯಲ್ಪಟ್ಟದ್ದು ಎಂಬ ನಿಖರ ಮಾಹಿತಿ ಇಲ್ಲದಿದ್ದರೂ ಮಹಾಭಾರತಕ್ಕಿಂತ ಮುಂಚೆ ಬರೆಯಲ್ಪಟ್ಟದ್ದು ಎಂಬುದಕ್ಕೆ ಪುರಾವೆಗಳಿವೆ.

ಈ ಮಹಾಕಾವ್ಯ ಆಧಾರಿತ ಯಶಸ್ಸುಗಳಿಸಿದ
ರಾಮಾಯಣ ಟಿವಿ ಧಾರಾವಾಹಿ:
ನಾವು ಚಿಕ್ಕವರಿದ್ದಾಗ ರಾಮಾಯಣದ ಕಥೆಯನ್ನು ಮನಮುಟ್ಟುವಂತೆ ನಿಜಕ್ಕೂ ನಡೆಯುತ್ತಿದೆ ಎಂಬಂತೆ ಹೇಳಿದ್ದು ರಮಾನಂದ ಸಾಗರರ ಟಿವಿ ರಾಮಾಯಣ. 1987 ರ ಸುಮಾರಿಗೆ ದೂರದರ್ಶನದಲ್ಲಿ ಪ್ರಸಾರವಾದ ಈ ಧಾರಾವಾಹಿ ಅದ್ಭುತ ಯಶಸ್ಸು ಗಳಿಸಿತು. ಅರುಣ ಗೋಯಲ್ ರಾಮನಾಗಿ, ದೀಪಿಕಾ ಸೀತೆಯಾಗ ಮತ್ತು ಧಾರಾಸಿಂಗ್ ಅವರು ಹನುಮಂತನಾಗಿ ನಟಿಸಿದ್ದರು. ರಾಮಾಯಣ ಹೀಗೆ ನಡೆದಿರ ಬೇಕೆನೋ ಎಂದು ಭ್ರಮಿಸುವಷ್ಟು ಪರಿಣಾಮಕಾರಿಯಾಗಿ ಈ ಧಾರಾವಾಹಿ ತೋರಿಸಿತು.

ಕುವೆಂಪುಕುವೆಂಪುಕುವೆಂಪುರವರ ರಾಮಾಯಣ ದರ್ಶನಂ:
ಕನ್ನಡದಲ್ಲಿ ಕುವೆಂಪುರವರು ಬರೆದ ರಾಮಾಯಣ ದರ್ಶನಂ 1967ರಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆಯಿತು.

ತುಲಸಿದಾಸರ ರಾಮಚರಿತಮಾನಸ
16 ನೇ ಶತಮಾನದಲ್ಲಿ ಅವಧಿ ಎಂಬ ಹಿಂದಿ ಭಾಷೆಯ ವಿಧದಲ್ಲಿ ಕವಿ ಗೋಸ್ವಾಮಿ ತುಲಸಿದಾಸರು ಈ ಮಹಾಕಾವ್ಯದ ಆಧಾರದ ಮೇಲೆ ಬರೆದರು.

ರಾಮಾಯಣದಲ್ಲಿರುವ ಮೌಲ್ಯಗಳು ಒಂದೇ ಎರಡೇ? ಆದರ್ಶ ಪತಿ, ಅಣ್ಣ, ಏಕಪತ್ನೀವೃತಸ್ಥ ರಾಮ. ಆದರ್ಶ ಪತ್ನಿ ಪತೀವೃತ ಸೀತಾ. ಅಣ್ಣನ ಜೊತೆ ಕಾಡಿಗೆ ಹೊರಟ ಲಕ್ಷ್ಮಣ. ಅಣ್ಣನ ಪಾದುಕೆ ಇಟ್ಟು ರಾಜ್ಯಭಾರ ನಡೆಸಿದ ಭರತ. ಹೆಂಡತಿಗೆ ಕೊಟ್ಟ ಮಾತನ್ನು ಉಳಿಸಲು ಮಗನನ್ನು ಕಾಡಿಗೆ ಕಳುಹಿಸಿ ಕೊರಗುವ ದಶರಥ. ಮಂಥರಾಳ ಚಾಡಿ ಮಾತಿಗೆ ಮರುಳಾಗಿ ರಾಮನ ವನವಾಸಕ್ಕೆ ಕಳುಹಿಸುವ ಕೈಕೇಯಿ.

ರಾಮಾಯಣದ ಕೆಲವು ಶ್ಲೋಕಗಳು ಎಷ್ಟು ಅರ್ಥಪೂರ್ಣ ಎಂದರೆ ಬದಲಾದ ಈಗಿನ ಕಾಲಮಾನಕ್ಕೂ ಅದು ಅನ್ವಯವಾಗುತ್ತದೆ. ಬಹುಶಃ ರಾಮಾಯಣ ಇಷ್ಟೊಂದು ವರ್ಷ ಗತಿಸಿದರೂ ಜನಪ್ರಿಯವಾಗಿರುವದಕ್ಕೆ ಇದುವೂ ಒಂದು ಕಾರಣವಿರಬಹುದು.

ಒಂದೆರಡು ಶ್ಲೋಕಗಳನ್ನು ಗಮನಿಸೋಣ

ಸರ್ವೇ ಕ್ಷಯಾಂತಾ ನಿಚಯಾಃ ಪತನಾಂತಾಃ ಸಮುಛ್ಚಯಾಃ |
ಸಂಯೋಗಾ ವಿಪ್ರಯೋಗಾಂತಾ ಮರಣಾಂತ ಹಿ ಜೀವಿತಂ || 2-105-16

ಎಲ್ಲವೂ ನಶಿಸುವದು ನಿಶ್ಚಯವಾದದ್ದು. ಮೇಲಕ್ಕೇರಿದ್ದು ಕೆಳಕ್ಕೆ ಇಳಿಯಬೇಕು.
ಸೇರಿರುವದೆಲ್ಲಾ ಕೊನೆಯಲ್ಲಿ ಬೇರ್ಪಡಲೇ ಬೇಕು. ಜೀವನವು ಮರಣದಲ್ಲಿ ಕೊನೆಯಾಗುತ್ತದೆ.

ಸ ಭಾರ ಸ್ಸೌಮ್ಯ ಭರ್ತವ್ಯೋ ಯೋ ನರಂ ನಾವ ಸಾಧಯೇತ್ |
ತದನ್ನಮಪಿ ಭೋಕವ್ಯಂ ಜೀರ್ಯತೆ ಯದನಾಮಯಂ || 3-50-18

ನಮ್ಮ ಬಳಿ ಎಷ್ಟು ಆಗುತ್ತೋ ಅಷ್ಟು ಭಾರ ಎತ್ತಿಕೊಳ್ಳ ಬೇಕು.
ಎಷ್ಟು ಜೀರ್ಣಿಸಲು ಸಾಧ್ಯವೋ ಅಷ್ಟು ಅನ್ನು ಉಣ್ಣಬೇಕು.

ಅವಶ್ಯಂ ಕ್ರಿಯಮಾಣಸ್ಯ ದೃಶ್ಯತೆ ಕರ್ಮಣಃ ಫಲಂ | 4-49-8

ಕೆಲಸ ಮಾಡುವವರಿಗೆ ಖಂಡಿತ ಫಲ ಸಿಕ್ಕೇ ಸಿಗುತ್ತದೆ.

ಅಂತರ್ಜಾಲದಲ್ಲಿ ವಾಲ್ಮೀಕಿ ರಾಮಾಯಣದ ಎಲ್ಲ ಶ್ಲೋಕಗಳು ಆಂಗ್ಲ ಭಾಷೆಯಲ್ಲಿ ಅರ್ಥ ಸಹಿತ ಈ ಮುಂದಿನ ಕೊಂಡಿಯಲ್ಲಿ ಲಭ್ಯವಿದೆ.
http://www.valmikiramayan.net/

ನಿಮ್ಮ ರೇಟಿಂಗ್: None ಒಟ್ಟೂ ರೇಟಿಂಗ್: 4.5 (2 ಓಟುಗಳು)
praneeth's picture
ಗುರು, 24/06/2010 - 12:00 ರಂದು praneeth (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: ವಾಲ್ಮೀಕಿ ರಾಮಾಯಣ

Am very interesting in ramayana story.Daily i reading ramayana story,Its very nice story.very thanks.

shwetha's picture
ಗುರು, 11/03/2010 - 11:57 ರಂದು shwetha (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: ವಾಲ್ಮೀಕಿ ರಾಮಾಯಣ

ನನಗೆ ವಲ್ಮಿಕಿ ರಾಮಾಯಣ ಪುರ್ ಕಥ್ಯಯನು ಕಳಿಸೀ

JAYAKESARI M N's picture
ಶನಿ, 14/11/2009 - 06:37 ರಂದು JAYAKESARI M N (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
(No subject)

Smile

JAYAKESARI M N's picture
ಶನಿ, 14/11/2009 - 06:36 ರಂದು JAYAKESARI M N (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
ಮಾಹಿತಿಗಳು ತುಂಬ

ಮಾಹಿತಿಗಳು ತುಂಬ ಉಪಯುಕ್ತವಾಗಿರಿತ್ತವೆ. ದನ್ಯವಾದಗಳು.

ಅನಾಮಿಕನು's picture
ಮಂಗಳ, 16/06/2009 - 10:28 ರಂದು ಅನಾಮಿಕನು (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
oh olle information

oh olle information kottideeri, naanu blorenalliddarinda nimma blog odalagalilla.

ಕೆಎಲ್ಕೆ 's picture
ಬುಧ, 10/06/2009 - 10:38 ರಂದು ಕೆಎಲ್ಕೆ ಅವರು ಹೇಳುತ್ತಾರೆ
ರಾಮಾಯಣ ಓದದೆ 'ರಾಮಾಯಣ ದರ್ಶನ'

ರಾಮಾಯಣ ಓದದೆ 'ರಾಮಾಯಣ ದರ್ಶನ' ಮಾಡಿಸಿದ ಪುಟ್ಟಪ್ಪನವರು ಸರ್ವ ಶ್ರೇಷ್ಠರು ಎಂದಾಗಲಿಲ್ಲವೆ?
(ಅವರು ರಾಮಾಯಣ ಓದಿ 'ರಾಮಾಯಣ ದರ್ಶನಂ' ಬರೆದರು ಎಂದಾಗಿದ್ದರೆ ಕೃತಿ ಚೌರ್ಯ ಮಾಡಿದ್ದಾರೆ ಎಂಬ ಆಪಾದನೆ ಮಾಡಬಹುದಿತ್ತಲ್ಲ...........ಛೆ !)

ಅನಾಮಿಕನು's picture
ಮಂಗಳ, 09/06/2009 - 10:30 ರಂದು ಅನಾಮಿಕನು (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
"ಕುವೆಂಪುರವರ ರಾಮಾಯಣ

"ಕುವೆಂಪುರವರ ರಾಮಾಯಣ ದರ್ಶನಂ:
ಕನ್ನಡದಲ್ಲಿ ಕುವೆಂಪುರವರು ಬರೆದ ರಾಮಾಯಣ ದರ್ಶನಂ 1967ರಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆಯಿತು."

ಆದರೆ ಪ್ರವಚನಕಾರ ನಾರಾಯಣಾಚಾರ್ಯರಿಗೆ ಕುವೆಂಪು ರಾಮಾಯಣ ಓದಿಯೇ ಇರದ ಬಗ್ಗೆ . ಅದಕ್ಕಾಗಿ ಖಚಿತ ಮಾಹಿತಿಯಿದೆರಾಮಾಯಣ ಓದಬೇಕೆನ್ನುವವರು ನಾರಾಯಣಾಚಾರ್ಯರ ರಾಮಾಯಣ ಓದಿ.

ರಾಜೇಶ ಹೆಗಡೆ's picture
ಮಂಗಳ, 09/06/2009 - 12:13 ರಂದು ರಾಜೇಶ ಹೆಗಡೆ ಅವರು ಹೇಳುತ್ತಾರೆ
ಕುವೆಂಪು ಅವರು ರಾಮಾಯಣ ಓದಿಯೇ

ಕುವೆಂಪು ಅವರು ರಾಮಾಯಣ ಓದಿಯೇ ಇಲ್ಲ ಎಂಬ ಪ್ರವಚನಕಾರ ನಾರಾಯಣಾಚಾರ್ಯರ ಹೇಳಿಕೆ ನಂಬಲಸಾಧ್ಯ. ಅದನ್ನು ಓದದೇ ಹೇಗೆ ರಾಮಾಯಣ ದರ್ಶನಂ ಕೃತಿ ರಚಿಸಿದರು? Shock ಇದು ಅಪೃಬುದ್ಧ ಹೇಳಿಕೆ ಅಲ್ಲವೇ?

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
6 ಕೂಡಿಸು 8 ಉತ್ತರ
ಈ ಸುಲಭವಾದ ಗಣಿತ ಪ್ರಶ್ನೆಗೆ ಉತ್ತರ ಕೊಡಿ. ಉತ್ತರವನ್ನು ಅಂಕೆಗಳಲ್ಲಿ ಬರೆಯಿರಿ. ಉದಾ: 2 + 4 ಗೆ 6 ಎಂದು ಬರೆಯಿರಿ.
ಬರೆದವರು
ರಾಜೇಶ ಹೆಗಡೆ
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
ನನ್ನ ಬಗ್ಗೆ ಹೇಳುವದೇನು ಇಲ್ಲ.
ಇವರ ವಿಸ್ಮಯ ಪುಟ