Skip to main content

ಜರ್ಮನಿಲಿ ಡೆರ್ ಬ್ಯುರೋ ಆದ್ರೆ, ಬೆಂಗಳೂರಲ್ಲಿ ಏನು?

ಬರೆದಿದ್ದುJune 8, 2009
8ಅನಿಸಿಕೆಗಳು

ಲವಾರು ದೇಶಗಳಲ್ಲಿ ಪೆನ್ನು ಪೆನ್ಸಿಲ್ಲು ಅಂಗಡಿಗಳನ್ನು ತೆರೆದಿರುವ ಸ್ಟೇಪಲ್ಸ್ ಎ೦ಬ ಕಂಪನಿ ನಮ್ಮ ಬೆಂಗಳೂರಿನಲ್ಲೂ ಮೂರು ಕಡೆ (https://www.staplesfuture.com/staplesstore.asp) ಮಳಿಗೆಗಳನ್ನು ಹೊಂದಿದೆ. ಇವರು ತಮ್ಮ ಜಾಹೀರಾತು ಫಲಕಗಳನ್ನು ಬೆಂಗಳೂರಿನ ಸುತ್ತ-ಮುತ್ತ ಹಾಕಿದ್ದಾರೆ ಮತ್ತು ಈ ಫಲಕ-ಗಳಲ್ಲಿ ಕನ್ನಡ ಹುಡುಕಿದರೂ ಸಿಗಲ್ಲ.
"ಸ್ಕೂಲ್ ಕೆ ಲಿಯೇ ಸಬ್ ಕುಚ್" ಎಂಬ ಹಿಂದಿ ಪಂಚ್-ಲೈನ್-ಅನ್ನು ರೋಮನ್ ಲಿಪಿಯಲ್ಲಿ ಬರೆದು ಕನ್ನಡದ ಮಕ್ಕಳನ್ನು ತಲುಪಲು ಇಚ್ಚಿಸುತ್ತಿದೆ ಈ ಕಂಪನಿ.

staples bengaluru ads

ಸ್ಟೇಪಲ್ಸ್ ಕಂಪನಿಯ ಮಳಿಗೆಗಳಲ್ಲಿ ಶಾಲೆಗೆ ಹೋಗುವ ಮಕ್ಕಳಿಗೆ ಅವಶ್ಯಕವಾದ ಪ್ರತಿಯೊಂದು ವಸ್ತುವನ್ನೂ ಮಾರಲಾಗುತ್ತದೆ. ಗುಂಡುಸೂಜಿ ಇ೦ದ ಹಿಡಿದು ಕಂಪ್ಯೂಟರ್ ವರೆಗೆ ಸಾಮಗ್ರಿಗಳನ್ನು ಇವರು ಮಾರುತ್ತಾರೆ.
ಇವರ ಜಾಹೀರಾತು ಫಲಕಗಳ ಗತಿ ಹೀಗಾದರೆ ಇನ್ನು ಇವರ ಮಳಿಗೆಯ ಒಳಗಡೆಯೂ ಸಹ ಒಂದೇ ಒಂದು ನಾಮಫಲಕವೂ ಕನ್ನಡದಲ್ಲಿಲ್ಲ. ಎಲ್ಲಾ ಕಡೆ ಕೇವಲ ಇಂಗ್ಲಿಷ್ ಬೋರ್ಡು-ಗಳೇ!!
ಜಾಹೀರಾತಿಗಾಗಿ ದಿನಪತ್ರಿಕೆಗಳ ಜೊತೆ ಹಂಚಿರುವ ಕೈಪಿಡಿಗಳಲ್ಲೂ ಅದೇ ಹಿಂದಿ ಡೈಲಾಗು.

ಜರ್ಮನಿ ದೇಶದಲ್ಲಿ ಜರ್ಮನ್ ಭಾಷೆಯಲ್ಲೇ ವ್ಯವಹರಿಸುವುದರಿಂದ ಲಾಭ ಹೆಚ್ಚು ಎಂದು ಕಂಡುಕೊಂಡಿರುವ ಕಂಪನಿ ಅಲ್ಲಿ ಜರ್ಮನ್ ಭಾಷೆಯನ್ನೇ ಬಳಸುತ್ತಿದೆ.
ಆದರೆ, ಬೆಂಗಳೂರಿನಲ್ಲಿ ಕನ್ನಡದಲ್ಲೇ ವ್ಯವಹರಿಸುವುದು ಲಾಭದಾಯಕ ಎಂದು ಈ ಕಂಪನಿ ತಿಳಿದುಕೊಂಡಿಲ್ಲ.

ಉತ್ತರ ಭಾರತದ ಕೆಲವು ಭಾಗಗಳಿಗೆ ಅಂತ ಮಾಡಿದ ಜಾಹೀರಾತನ್ನು ತಂದು ಬೆಂಗಳೂರಿನ ಗೋಡೆಗಳ ಮೇಲೆ ಅಂಟಿಸಿದರೆ, ಜನರನ್ನು ತಲುಪಕ್ಕೆ ಆಗಲ್ಲ ಅನ್ನೋದು ಇವರು ತಿಳಿದುಕೊಳ್ಳಬೇಕಾಗಿದೆ. ಕರ್ನಾಟಕದ ಜನರನ್ನು ತನ್ನ ಗ್ರಾಹಕರಾಗಿ ಮಾಡಿಕೊಳ್ಳಬೇಕು ಎ೦ಬ ಕನಸನ್ನೇನಾದರೂ ಇವರು ಕಾಣುತ್ತಿದ್ದರೆ, ಇವರ ಹಿ೦ದಿ ಜಾಹೀರಾತಿನಿ೦ದ ಅದು ಖ೦ಡಿತ ಸಾಧ್ಯವಿಲ್ಲ. ಬೆಂಗಳೂರಿನ ಜನತೆಯನ್ನು ಪರಿಣಾಮಕಾರಿಯಾಗಿ ತಲುಪಲು ಸಹಾಯಕವಾಗುವ ಭಾಷೆ ಕನ್ನಡ ಮಾತ್ರ, ಇಂಗ್ಲಿಷ್ ಅಥವಾ ಹಿಂದಿ ಅಲ್ಲ ಎಂಬುದು ಈ ಕಂಪನಿಗೆ ಮನವರಿಕೆಯಾಗಬೇಕು.

ಸ್ಟೇಪಲ್ಸ್ ರವರ ಈ ಧೋರಣೆ ಕನ್ನಡಿಗ ಗ್ರಾಹಕರನ್ನು ಬರಮಾಡಿಕೊಳ್ಳುತ್ತಿಲ್ಲ, ಬದಲಾಗಿ ಹೊರಗಟ್ಟುತ್ತಿರೋಹಾಗಿದೆ.
ಬನ್ನಿ, ಕನ್ನಡ ಬಳಸುವುದರಿಂದಲೇ ಸ್ಟೇಪಲ್ಸ್ ರವರು ಹೆಚ್ಚಲು ಬೆಳೆಯಲು ಸಾಧ್ಯ ಎಂಬ ಮಾತು ಅವರಿಗೆ ಹೇಳೋಣ.
ಸ್ಟೇಪಲ್ಸ್ ಕಂಪನಿ ಕನ್ನಡಿಗರನ್ನು ಕನ್ನಡದಲ್ಲೇ ಮಾತನಾಡಿಸುವಂತೆ ಬದಲಾಗಲು ಕಾರಣರಾಗೋಣ.

ಇವರ ಮಿಂಚೆ:
sales@staplesfuture.com

[img_assist|nid=4485|title=staples bengaluru jaahiraatu|desc=|link=none|align=center|width=640|height=566]

ಲೇಖಕರು

ಪ್ರಿಯಾಂಕ್

ಸಮಯ ಸಿಕ್ಕಾಗ ತಿಳಿಸುತ್ತೇನೆ.
ಸದ್ಯಕ್ಕೆ ಕ್ಷಮೆ ಇರಲಿ.

ಅನಿಸಿಕೆಗಳು

Manjesh (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 06/09/2009 - 22:36

ಹಿ0ದಿನಲ್ಲಿ ಇರಲಿ ಬಿಡಿ, ಏನು ತಪ್ಪು? ನಮ್ಮ ರಾಷ್ಟ್ರ ಭಾಷೆ ಅಲ್ವಾ. ದೇಶ ಎಲ್ಲಾ 1 ಆಗಕ್ಕೆ ಈತರ ಜಾಹೀರಾತು ಬೇಕು. ಮು0ದೆ ನ್ಯೂಡೆಲ್ಲಿ ಬದಲು ಇ0ಡಿಯಾನ ಕ್ಯಾಪಿಟಲ್ ಬೆ0ಗಳೂರೇ ಮಾಡಬಹುದು. ನಾವು ಹಿ0ದಿಗೆ ಗೊೌರವ ತೋರಬೇಕು ಯಾಕೇ0ದ್ರೆ ನಾವು ಹಿ0ದೂಗಳು.

ರಾಜು ಪು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 10/20/2009 - 15:15

ಮಂಜೇಶ್ ರವರೆ, ನೀವು ಕನ್ನಡತನದಿಂದ ಹಿಂದೂ ಆಗಲು ಸದ್ಯವಿಲವೇ? ಆ ರೀತಿ ಸದ್ಯವಿಲವೆಂದರೆ ಹಿಂದುತ್ವ ಯಾಕೆ? ನಾವು ಮೊದಲು ಕನ್ನಡಿಗರು... ಅನಂತರ ಹಿಂದೂಗಳು... ಇದು ಸದ್ಯವಿಲವೆಂದರೆ ನಮಗೆ ಆ ಹಿಂದುತ್ವ ಬೇಡ. ಮೊದಲು ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂಬುವ ಕೆಟ್ಟ ಅಬಿಪ್ರಾಯವನ್ನು ಬಿಡಿ. ಈ ನಿಮ್ಮ ದಡ್ಡತನದಿಂದ, ದಾಸ್ಯ ಮನೋಭಾವ ಇರುವವರಿಂದ ನಾವು ಕನ್ನಡಿಗರು ಉದ್ದರವಗುವುದಿಲ್ಲ. ಇದರಿಂದ ಅಲ್ಪ ಸ್ವಲ್ಪ ಕನ್ನಡದ ಅಭಿಮಾನ ಇರುವವರಿಗೂ ಕೆಟ್ಟ ಪರಿಣಾಮ ಆಗಲಿದೆ. ದೇಶ ಒಂದಗೋಕೆ ಹಿಂದಿ ಬಾಷೆ ಬೇಕ? ನಾಚಿಕೆ ಆಗೋದಿಲ್ಲವೇ ನಿಮಗೆ ಹಾಗೆ ಹೇಲೊದಕೆ? ಕರ್ನಾಟಕ ದಲ್ಲಿ ಕನ್ನಡಿಗನೇ ಸಾರ್ವಬೌಮ.

ಬಾಲ ಚಂದ್ರ ಧ, 06/10/2009 - 18:00

ಮಂಜೇಶ್ ಅವರೇ
ಭಾಷೆಯ ಬಗ್ಗೆ ಅಷ್ಟೂ ಅಭಿಮಾನ ತೋರಿಸದಿದ್ದರೆ ಹೇಗೆ,ಅವರ ಕಾಳಜಿಗೆ ಸಂತೋಷ ಪಡಿ,
ಹಿಂದೂಗಳಿಗಿಂತ ಮುಂಚೆ ನಾವು ಕನ್ನಡಿಗರಾಗೋಣ

ಸಸ್ನೇಹ
ಬಾಲ ಚಂದ್ರ

ಚಿತ್ರ ಪ್ರೇಮಿ (ಪ್ರಮಾಣಿಸಲ್ಪಟ್ಟಿಲ್ಲ.) ಧ, 06/10/2009 - 22:05

hindi rashtra bhashe anno murkhatana bidi,,
samvidhanadalli ellu helade irodu tamagashte rashtra bhashe hege aayitu manjesh ?

Manjesh (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 06/11/2009 - 17:10

[quote=ಚಿತ್ರ ಪ್ರೇಮಿ ]tamagashte rashtra bhashe hege aayitu manjesh ?[/quote]
ನೀವು ಸ0ವಿಧಾನ ಒದಿದ್ದೀರಾ?

Manjesh (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 06/11/2009 - 17:14

[quote=ಚಿತ್ರ ಪ್ರೇಮಿ ]hindi rashtra bhashe anno murkhatana bidi,,
[/quote]
ಮತ್ತೆ ದೇಶ ಎಲ್ಲಾ 1 ಮಾಡಕ್ಕೆ ನೀವ್ಯಾವ ಭಾಷೆ ಮಾತಾಡುತ್ತೀರ ಅದನ್ನು ಮೊದಲು ಹೇಳಿ.

ಬುಲೆಟ್ ಸೋಮ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 06/11/2009 - 17:25

ಮಂಜೇಶ ದೊರೆಗಳೇ, ನಿಮ್ಮ ಜನರಲ್ ನಾಲೆಜ್ ಹೆಚ್ಚಿಸಿ ಕೊಳ್ಳುವ ಅಗತ್ಯ ಇದೆ. ಹಿಂದಿ ರಾಷ್ಟ್ರ ಭಾಷೆ ಅಂತಾ ಸಂವಿಧಾನದಲ್ಲಿ ಹೇಳಿಲ್ಲ. ಅದನ್ನು ತಿಳಿದಿರಲು ಸಂವಿಧಾನ ಓದಬೇಕು ಎಂತೇನು ಇಲ್ಲ. ಅಂದಹಾಗೆ ಒಂದು ರಾಷ್ಟ್ರ ಒಟ್ಟಿಗೆ ಇರಲು ಒಂದೇ ಭಾಷೆಯ ಅಗತ್ಯ ಇಲ್ಲ ಎಂಬುದನ್ನೂ ತುಸು ಓದಿ ( ಜಗತ್ತಿನ ಇತರೆ ದೇಶಗಳ ಬಗ್ಗೆ) ತಿಳಿದುಕೊಂಡರೆ ಉತ್ತಮ. ಇಲ್ಲದಿದ್ದರೆ ನರೇಂದ್ರ ಮೋದಿ ಹೇಳಿದನೆಂದು ಗುಜರಾತಿ ಯನ್ನೂ ನಮ್ಮ ರಾಷ್ರ ಭಾಷೆ ಅಂತಾ ಒಪ್ಪಿಕೊಳ್ಳಬಹುದು ನೀವು. ಹಾಗೆ, ಕರ್ನಾಟಕ ಒಂದಾಗಿ ಇರಲು ಎಲ್ಲರೂ ಒಂದೇ ರೀತಿ ಕನ್ನಡ ( ಉದಾ. ಬೆಂಗಳೂರಿನ ತಮಿಳ್ಗನ್ನಡ) ಮಾತಾಡಬೇಕು ಅಂತಾ ಫಾರ್ಮಾನು ಹೊರಡಿಸ ಬಹುದು ತಾವು

santosh.inamdar (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 07/30/2009 - 15:54

ದಯವಿಟ್ಟು ಈ ಕೊಂಡಿಯಲ್ಲಿ ಚೆಕ್ ಮಾಡಿ.. ನಿಮಗೆ ಬೇಕಾಗಿದ್ದದು ಸಿಗಬಹುದು.

http: //en.wikipedia.org /wiki/ Languages_of_India

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.