Skip to main content

ಇವರ ಫನ್ ಕನ್ನಡಿಗರಿಗೆ ನಿಜವಾಗಿಯೂ ಫನ್ನೇ ಅಲ್ಲ!

ಬರೆದಿದ್ದುMay 19, 2009
8ಅನಿಸಿಕೆಗಳು

[img_assist|nid=4343|title=ಫನ್ ಸಿನೆಮಾಸ್|desc=|link=none|align=left|width=150|height=100]ಬೆಂಗಳೂರಿನ ಕನ್ನಿಂಗ್-ಹ್ಯಾಮ್ ರಸ್ತೆಯಲ್ಲಿರುವ "ಫನ್ ಸಿನೆಮಾಸ್" ಎಂಬ ಮಲ್ಟಿಪ್ಲೆಕ್ಸ್, ಶುರುವಾದ ಒಂದೂವರೆ-ಎರಡು ವರ್ಷಗಳಿಂದ ಇದುವರೆಗೆ ಬೆರಳೆಣಿಕೆಯಷ್ಟು ಕನ್ನಡ ಚಿತ್ರಗಳನ್ನು ಪ್ರಸಾರ ಮಾಡಿರಬಹುದು. ಇದೇ ಮಲ್ಟಿಪ್ಲೆಕ್ಸ್ ನಲ್ಲಿ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮಲಯಾಳಂ ಚಲನಚಿತ್ರಗಳು ಪ್ರದರ್ಶನಗೊಳ್ಳುವುದರ ಜೊತೆಗೆ ಅದಕ್ಕೆ ಪ್ರಚಾರ ನೀಡುವ ಕೆಲಸವನ್ನೂ ಫನ್ ಸಿನೆಮಾಸ್ ಮಾಡುತ್ತಿದೆ. "Paid Review", "Watch with the stars" ಎಂಬಂತಹ "promotional campaign" ಗಳನ್ನು ಪರಭಾಷಾ ಚಿತ್ರಗಳಿಗೆ ಮಾತ್ರ ಮಾಡುತ್ತಿರುವುದು ದುರಾದೃಷ್ಟಕರ.

ಕಳೆದ 18 ವಾರಗಳಲ್ಲಿ 50 ಕನ್ನಡ ಚಿತ್ರಗಳು ಬಿಡುಗಡೆಯಾಗಿವೆ, ಯಾವುದೇ ಚಿತ್ರೋದ್ಯಮಕ್ಕೆ ಹೋಲಿಸಿದರೂ ಇದೊಂದು "ದಾಖಲೆ". 75 ವರ್ಷಗಳ ಕನ್ನಡ ಚಿತ್ರರ೦ಗದ ಇತಿಹಾಸದಲ್ಲೇ ಅತಿ ಹೆಚ್ಚು ಪ್ರಮಾಣದಲ್ಲಿ ಅ೦ದರೆ 118 ಕನ್ನಡ ಚಿತ್ರಗಳು ಕಳೆದ ವರ್ಷ ಬಿಡುಗಡೆಯಾಗಿವೆ. ಈ ಮಟ್ಟದ ವಿತರಣೆ, ಬೇಡಿಕೆ ಇಲ್ಲದೇ ಬರುವುದಿಲ್ಲ ಎಂಬುದು "simple economics".

ಇಷ್ಟೊಂದು ಚಿತ್ರಗಳು ಇದ್ದರೂ ಸಹ, ಕನ್ನಡ ಚಿತ್ರರ೦ಗ ಹಿಟ್ ಚಿತ್ರಗಳನ್ನು ಕೊಡುತ್ತಿಲ್ಲ ಎ೦ದೇನಾದರೂ ಇವರ ವಾದ ಇದ್ದರೆ ಅದು ನಿಜವಾಗಲೂ ಸುಳ್ಳು. ಏಕ೦ದ್ರೆ, ಚಿತ್ರರ೦ಗದ ಯಾವ ಸಿನೆಮಾ ಹಿಟ್ ಅನ್ನೋದು ಜನರು ನಿರ್ಧರಿಸಬೇಕೇ ಹೊರತು ತೆರೆಯ ಮೇಲೆ ಬೆಳಕು ಚೆಲ್ಲುವವರಲ್ಲ ಮತ್ತು ಚಿತ್ರಗಳು ಪ್ರದರ್ಶನವಾದ ಮೇಲೇನೇ ಅದರ ಗುಣಮಟ್ಟ ಅಳೆಯಲು ಸಾಧ್ಯ. ಚಿತ್ರಮ೦ದಿರಗಳು ಇರೋದು ಜನರಿಗೆ ಇಷ್ಟ ಆಗೋ ಚಿತ್ರಗಳ ಪ್ರದರ್ಶನ ಮಾಡಕ್ಕೇ ಹೊರತು ತಮ್ಮ ಅನಿಸಿಕೆಯಲ್ಲಿ ಹಿಟ್ ಆಗಬಹುದಾದ ಯಾವುದೋ ಭಾಷೆ ಚಿತ್ರಗಳನ್ನು ನೋಡಕ್ಕೆ ಅಲ್ಲ ಅನ್ನೋದು ಚಿತ್ರಮ೦ದಿರಗಳು ತಿಳಿದುಕೊಳ್ಳಬೇಕಾಗಿದೆ. ಕೆಲವು ವರ್ಷಗಳ ಹಿ೦ದೆ ಎಫ್.ಎ೦ ವಾಹಿನಿಗಳು ಇದೇ ರೀತಿ ಹಿ೦ದಿ ಹಾಡುಗಳನ್ನು ಹಾಕಿ ಜನರ ಮನವೊಲಿಸುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಅವರೆಲ್ಲಾ ಕನ್ನಡದ ಹಾಡುಗಳನ್ನು ಹಾಕಲು ಪ್ರಾರ೦ಭ ಮಾಡಿದಮೇಲೆಯೇ ಈಗ ಮಾರುಕಟ್ಟೆಯಲ್ಲಿ ನ೦.1 ಆಗಿರುವುದು.

ಪರಭಾಷಾ ಚಿತ್ರಗಳ ಪ್ರಚಾರ ಮಾಡಿ, ಆ ಭಾಷಿಕರ ಕೆಲವರನ್ನು ಆಕರ್ಷಿಸುವ ಬದಲು, ಕನ್ನಡ ಚಿತ್ರಗಳ ಪ್ರದರ್ಶನ ಮಾಡಿಯೇ ಬೆಂಗಳೂರಿನ ಬಹುತೇಕ ಜನರನ್ನು ಆಕರ್ಷಿಸಲು ಸಾಧ್ಯ. ಹೇಗ೦ತೀರಾ? ಬೆ೦ಗಳೂರಿನ ಅತಿಹೆಚ್ಚು ಮ೦ದಿ ಈಗಾಗಲೇ ಕನ್ನಡವನ್ನು ಬಲ್ಲವರಾಗಿದ್ದಾರೆ. ಪರಭಾಷಿಕರು ಕೂಡಾ ಒ೦ದಲ್ಲಾ ಒ೦ದು ರೀತಿಯಲ್ಲಿ ಮುಖ್ಯವಾಹಿನಿಯಲ್ಲಿ ಬೆರೆತುಹೋಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ನೂರಾರು ಕ೦ಪನಿಗಳಲ್ಲಿ ನಡೆಯುತ್ತಿರುವ ಕನ್ನಡ ಕಲಿ ಕಾರ್ಯಕ್ರಮದಿ೦ದ ಪ್ರತೀ ವರ್ಷ ಸಾವಿರಾರು ಜನರು ಕನ್ನಡ ಕಲಿತು ಹೊರಬರ್ತಿದ್ದಾರೆ. ಇ೦ತಹ ನಾಗರೀಕರಿಗೆ ಕನ್ನಡ ಚಿತ್ರಗಳನ್ನು ನೋಡಲು ಅವಕಾಶ ಮಾಡಿಕೊಡುವುದರಿ೦ದ ಅವರ ಮನಸ್ಸಿಗೆ ಮುದನೀಡುವ ಕೆಲಸವನ್ನು ಮಾಡಿದಹಾಗಾಗುತ್ತದೆ.

ಯಾವುದೇ ಚಿತ್ರಮ೦ದಿರಗಳಲ್ಲಿ ಕನ್ನಡ ಚಿತ್ರಗಳ ಪ್ರದರ್ಶನ ಮಾಡಿಯೇ ಹೆಚ್ಚು ಆದಾಯ ಗಳಿಸಲು ಸಾಧ್ಯ. ಪರಭಾಷಿಕರೂ ಕೂಡ ಸ್ವಪ್ರೇರಣೆಯಿ೦ದ ಕನ್ನಡ ಕಲಿತು ಕನ್ನಡ ಸಿನೆಮಾ ನೋಡುತ್ತಿರುವ ಈ ಸ೦ಧರ್ಭದಲ್ಲಿ ಹೆಚ್ಚಿನ ಕನ್ನಡ ಚಿತ್ರಗಳನ್ನು ಪ್ರದರ್ಶನ ಮಾಡುವುದೇ ಸೂಕ್ತ. ಹೇಗೆ ಎಫ್.ಎ೦. ವಾಹಿನಿಯಲ್ಲಿ ಪ್ರಸಾರವಾಗುವ ಕನ್ನಡದ ಸ೦ಗೀತದಿ೦ದ ಇಡೀ ಊರನ್ನೇ ಒಗ್ಗೂಡಿಸುವ ಕೆಲಸ ಸಾಧ್ಯವಾಯಿತೋ ಅದೇ ರೀತಿ, ಸಿನೆಮಾ ಕ್ಷೇತ್ರದಲ್ಲಿಯೂ ಇದನ್ನು ಮಾಡಿದರೆ ಅದರ ರುಚಿಯೇ ಬೇರೆ.

ಬನ್ನಿ, ಇವರಿಗೆ ನಮ್ಮ ಅನಿಸಿಕೆ ತಿಳಿಸಿ ಮಾರುಕಟ್ಟೆ ಹೇಗಿದೆ ಅನ್ನೋದನ್ನು ಅರ್ಥಮಾಡಿಸೋಣ. ಹೆಚ್ಚಿನ ಕನ್ನಡ ಚಿತ್ರಗಳನ್ನು ಪ್ರದರ್ಶನ ಮಾಡುವುದರಲ್ಲೇ ಲಾಭ ಅಡಗಿದೆ ಅನ್ನೋದನ್ನು ತಿಳಿಸಿಹೇಳೋಣ.

ಇವರಿಗೆ ನಿಮ್ಮ ಅನಿಸಿಕೆ ತಿಳಿಸಲು ಇಲ್ಲಿ ಕ್ಲಿಕ್ಕಿಸಿ:
https://www.funcinemas.com/GetInTouch.aspx?cc=13

[img_assist|nid=4343|title=ಫನ್ ಸಿನೆಮಾಸ್|desc=|link=none|align=center|width=640|height=427]

ಲೇಖಕರು

ಪ್ರಿಯಾಂಕ್

ಸಮಯ ಸಿಕ್ಕಾಗ ತಿಳಿಸುತ್ತೇನೆ.
ಸದ್ಯಕ್ಕೆ ಕ್ಷಮೆ ಇರಲಿ.

ಅನಿಸಿಕೆಗಳು

ಕೆಎಲ್ಕೆ ಧ, 05/20/2009 - 16:10

ಪ್ರಿಯ ಪ್ರಿಯಾಂಕ್,
ನಿಮ್ಮ ಈ ಹಿಂದಿನ ಎಲ್ಲ ಲೇಖನಗಳಿಗೂ ನನ್ನ ತಾತ್ವಿಕ ಹಾಗೂ ಭಾವನಾತ್ಮಕ ಒಪ್ಪಿಗೆ ಇತ್ತು. ಆ ಕಾರಣದಿಂದಲೇ ನೀವು ಸೂಚಿಸಿದ ಎಲ್ಲ ವಿಳಾಸಗಳಿಗೂ ಇ-ಮೇಲ್ ಕಳಿಸಿದ್ದೆ. ( ಒಂದು ಕಡೆಯಿಂದ ಉತ್ತರ ಕೂಡ ಬಂದಿತ್ತು). ಆದರೆ ಈ ವಿಷಯದಲ್ಲಿ ಭಾವನಾತ್ಮಕವಾಗಿ ನಾನು ನಿಮ್ಮೊಂದಿಗಿದ್ದರೂ ತಾತ್ವಿಕವಾಗಿ ನಿಮ್ಮ ಮಾತು ಒಪ್ಪಲಾರೆ.

FM ಗಳಲ್ಲಿ ಕನ್ನಡ ಹಾಡಿಗೆ ಮಾರುಕಟ್ಟೆ ಇರುವದಕ್ಕೂ ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಸಿನಿಮಾಕ್ಕೆ ಮಾರುಕಟ್ಟೆ ಇರುವದಕ್ಕೂ ವ್ಯತ್ಯಾಸವಿದೆ. FM ನಲ್ಲಿ ಹಾಡು ಕೇಳುವವರಲ್ಲಿ ಹೆಚ್ಚಿನವರು ಟ್ಯಾಕ್ಸಿ, ಆಟೋ ಹಾಗೂ ಇತರೆ ವಾಹನ ಚಾಲಕರು. ಅವರೆಲ್ಲ ಕನ್ನಡ ಕೇಳ ಬಯಸುತ್ತಾರೆ. ಆದರೆ ಅವರು ರೂ.೧೫೦ ಕೊಟ್ಟು ಮಲ್ಟಿಪ್ಲೆಕ್ಸ್ ಗೆ ಹೋಗಿ ಸಿನೆಮಾ ನೋಡುವುದಿಲ್ಲ. ಪಕ್ಕಾ business man ಒಬ್ಬನಿಗೆ- ಭಾಷೆಯ ಬೇಧ ಅಷ್ಟಿರಲಾರದು ಎನ್ನುವದು ನನ್ನ ಅಭಿಪ್ರಾಯ. ದುಡ್ಡು ಬರುತ್ತೆ ಅಂದಾದರೆ ಮಲ್ಟಿಪ್ಲೆಕ್ಸ್ ನವರು ಕನ್ನಡ ಯಾಕೆ -ತುಳು, ಕೊಂಕಣಿ ಚಿತ್ರಗಳನ್ನೂ ಪ್ರದರ್ಶಿಸಿಯಾರು!

ಮೆಜೆಸ್ಟಿಕ್ ನಲ್ಲಿಯೇ ಕನ್ನಡ ಚಿತ್ರಗಳು ಮಕಾಡೆ ಮಲಗುತ್ತಿರುವಾಗ ಮಲ್ಟಿಪ್ಲೆಕ್ಸ್ಗಳಲ್ಲಿ ಚಿತ್ರ ಓಡುವುದಾದರೂ ಹೇಗೆ? ( ಮುಂಗಾರು ಮಳೆ, ಮಿಲನ ಇತ್ಯಾದಿ ಮಲ್ಟಿಪ್ಲೆಕ್ಸ್ ನಲ್ಲಿ ದಾಖಲೆ ಮಾಡಿದ್ದು ಬಿಡಿ, ಅದು ಹಳೆ ಕಥೆ ) ಈ ವಿಷಯದಲ್ಲಿ ಮಲ್ಟಿಪ್ಲೆಕ್ಸ್ ಗಳನ್ನು ದೂರಿ ಉಪಯೋಗವಿಲ್ಲ. ಕನ್ನಡದಲ್ಲಿ ಒಳ್ಳೆಯ ಚಿತ್ರಗಳು ಬರಬೇಕು ( ಸಂಖ್ಯೆ ಹೆಚ್ಚಾಗಬೇಕಂತಿಲ್ಲ) ಆಗ ಮಾರುಕಟ್ಟೆ ತಂತಾನೇ ಕುದುರುತ್ತದೆ. ಅದಾಗಲು ಕನ್ನಡ ಜನ ಒಳ್ಳೆಯ ಚಿತ್ರಗಳನ್ನು ಪ್ರೋತ್ಸಾಹಿಸಬೇಕು.
ಏನಂತೀರಿ?

ಮನೀಷ್ (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 05/22/2009 - 07:34

ಕನ್ನಡ ಚಿತ್ರಗಳು ಪ್ರದರ್ಶನನೇ ಆಗ್ದಿದ್ರೆ ಒಳ್ಳೇ ಚಿತ್ರಗಳ್ನ ಪ್ರೋತ್ಸಾಹಿಸೋದು ಹೇಗ್ ಗುರು???

FM ನಲ್ಲಿ ಬರೋ ಕನ್ನಡ ಹಾಡುಗಳನ್ನ ಬರೀ ಟ್ಯಾಕ್ಸಿ ಡ್ರೈವರ್ ಮಾತ್ರ ಕೇಳ್ತರಾ? ನಾನು ಸಾಫ್ಟ್ ವೇರ್ ಉದ್ಯೋಗದಲ್ಲಿದ್ದೀನಿ ಕಣ್ರೀ, ನಿಮ್ಮ ಮಾತು ಕೇಳಿ ಈಗ ನಾನು ರಾಜೀನಾಮೆ ಕೊಟ್ಟು ಆಟೋ ಓಡಿಸ್ಬೇಕ್ ಅಷ್ಟೇ.........:-) ದಯವಿಟ್ಟು ನಿಮ್ಮಲ್ಲಿರೋ ಕೀಳರಿಮೆ ಬೇರೆಯವರಿಗೆ ಹ೦ಚಬೇಡಿ.

"ಇವರು ಭಾಷಾ ಭೇದ ಮಾಡ್ತಾವ್ರೆ" ಅ೦ತ ಪ್ರಿಯಾ೦ಕ್ ಯೋಳೇ ಇಲ್ಲ. ಫನ್ ಸಿನೆಮಾಸ್ ರವರಲ್ಲಿ ಮಾರುಕಟ್ಟೆ ಅರಿವು ಪಾತಾಳಕ್ಕಿಳಿದೈತಿ.... ಅವರಿಗ್ ಒಸಿ ಬರೆದ್ ಕೇಳ್ಮ ಬನ್ನಿ ಅ೦ತ ಮಾತ್ರ ಹೇಳ್ತಿದಾರೆ ಅನ್ನೋದ್ ನನ್ ತಿಳುವಳಿಕೆ....

ಚಿತ್ರ ಪ್ರೇಮಿ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 05/21/2009 - 08:24

ನಮಸ್ಕಾರ ಸರ್,
ಫನ ಸಿನೆಮಾದಲ್ಲಿ ತಮಿಳು ಸಂಗೀತಗಾರರನ್ನು ಕರೆಸಿ ವಿಶೇಷವಾದ ಕಾರ್ಯಕ್ರಮ ಹಮ್ಮಿಕೊಳ್ಳೊದು.ಕಾನಸರ್ಟ್ಸ ನಡೆಸೋದು ನಡೆದುಕೊಂಡು ಬಂದಿದೆ. ಈ ತರಹದ ಕಾರ್ಯಕ್ರಮ ಕನ್ನಡದ ಭಾವಗೀತೆ, ಜಾನಪದ, ಕನ್ನಡ ರಾಕ್ ಸಂಗೀತಗಾರರನ್ನು ಸೇರಿಸಿಕೊಂಡು ಒಮ್ಮೆಯೂ ಮಾಡಿಲ್ಲ. ಅದಕ್ಕೆ ಬೇಡಿಕೆ ಇಲ್ಲ ಅನ್ನಬೇಡಿ.. ದೊಡ್ಡ ಮಟ್ಟದ ಬೇಡಿಕೆ ಇದೆ, ಇವರು ಒಮ್ಮೆ ಪ್ರಯತ್ನಿಸಿ ನೋಡಬೇಕಷ್ಟೆ.

ಇನ್ನೂ ನೀವು ಹೇಳಿದ ಹಾಗೆ ಮೆಜೆಸ್ಟಿಕ ನಲ್ಲೇ ಕನ್ನಡ ಸಿನೆಮಾ ಮಕಾಡೆ ಮಲಗುತ್ತಿರುವ ಬಗ್ಗೆ. ಆದರೆ ಇವತ್ತು ಪಿ.ವಿ.ಆರ ಮಲ್ಟಿಪ್ಲೆಕ್ಸ ಅನ್ನು ಉಳಿಸಿರುವುದೇ ಕನ್ನಡ ಸಿನೆಮಾಗಳು ಅನ್ನೋ ಪಿ.ವಿ.ಆರ ಅವರ ಮಾತು ಪತ್ರಿಕೆಗಳಲ್ಲಿ ನೀವು ನೋಡಿಲ್ಲ ಅನ್ಸುತ್ತೆ. ಸವಾರಿ, ಜೋಶ್ ತರಹದ ಚಿತ್ರಗಳು ಅಲ್ಲಿ ಭರ್ಜರಿಯಾಗಿ ಓಡ್ತಾ ಇದೆ. ಕಳ್ಳಂಗೊಂದು ಪಿಳ್ಳೆ ನೆಪ ಅನ್ನೋ ಹಾಗೆ, ಕನ್ನಡ ಸಿನೆಮಾ ಓಡಲ್ಲ, ಅದಕ್ಕೆ ಹಾಕಲ್ಲ ಅನ್ನೋ ಇವರ(ಫನ್) ಮಾತುಗಳು ನಿಜಕ್ಕೂ ನಗು ತರುತ್ತೆ.

ಕೆಎಲ್ಕೆ ಗುರು, 05/21/2009 - 10:36

ಚಿತ್ರ ಪ್ರೇಮಿಗಳೇ,
ಕನ್ನಡ ಸಿನಿಮಾಗಳ ಕಟ್ಟಾ ಅಭಿಮಾನಿ ಹಾಗೂ ಸಮರ್ಥಕ ನಾನು. ಕನ್ನಡ ಸಿನಿಮಾಗಳಿಂದಲೇ ಪಿವಿಆರ್ ನಡೆಯುತ್ತಿದೆ ಎಂಬುದು ನಿಜವಾಗಿದ್ದರೆ ಅದಕ್ಕಿಂತ ಸಂತೋಷ ಬೇರೆ ಇಲ್ಲ. ಆದರೆ ಇದರ ಸತ್ಯಾಸತ್ಯತೆಯ ಬಗ್ಗೆಯೂ ಗಮನ ಕೊಡುವುದು ಅಗತ್ಯ. ಜನವರಿಯಿಂದ ಹಿಡಿದು ಇದುವರಗೆ ಬಂದ ಚಿತ್ರಗಳಲ್ಲಿ 'ಚೆನ್ನಾಗಿದೆ' ಅನ್ನಬಹುದಾದ ಚಿತ್ರಗಳು ಕೆಲವು ಮಾತ್ರ. ಅವುಗಳಲ್ಲಿ ಸವಾರಿ, ಜೋಶ್ ಕೂಡ ಸೇರಿವೆ. ಅವು ಪಿವಿಆರ್ನಲ್ಲಿ ಓಡುತ್ತಿರಬಹುದು. ಆದರೆ ಆರು ತಿಂಗಳಿಗೆ ಎರಡು ಚಿತ್ರಗಳನ್ನು ಓಡಿಸಿ ಪಿವಿಆರ್ ನಡೆಸಲು ಸಾಧ್ಯವೇ? ಹಾಗೆ ಉಡ, ಮಚ್ಚಾ, ಮಿಂಚು ಗಳನ್ನು ಆರು ತಿಂಗಳು ಓಡಿಸಲು ಸಾಧ್ಯವೇ?

ಕಿಶೋರ್ (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 05/22/2009 - 06:53

ನಮಸ್ಕಾರ ಕೆ ಎಲ್ಕೆ ರವರೇ,

ಇಲ್ಲಿ ನೀವು ಫನ್ ಸಿನೆಮಾಸ್ ರೀತಿಯಲ್ಲೇ ಎಡವುತ್ತಿರುವುದು ಕಾಣುತ್ತಿದೆ. ಯಾವುದೋ ಒ೦ದು ಸಿನೆಮಾ ಓಡತ್ತೆ, ಅಥ್ವಾ ಓಡಲ್ಲ ಅನ್ನೋದು ಜನ ನಿರ್ಧರಿಸಬೇಕಾದ ವಿಷಯ ಅಲ್ವಾ? ಯಾರೋ ಕೆಲವರ ಪ್ರಕಾರ ಒ೦ದು ಸಿನೆಮಾ ಚೆನ್ನಾಗಿಲ್ಲ ಅ೦ದ್ರೆ ಅದನ್ನು ಜನರಿಗೆ ನೋಡಲು ಅವಕಾಶನೇ ಮಾಡಿಕೊಡಲ್ಲ ಅನ್ನೋದು ಸರಿಯಲ್ಲ.

ಅಷ್ಟಕ್ಕೂ ಈ ಫನ್ ಸಿನೆಮಾಸ್ ರವರಿಗೆ ಬೇರೆ ಭಾಷೆಯ ಚಿತ್ರಗಳಲ್ಲೇ ಹಿಟ್ ಸಿನೆಮಾಗಳಿರೋದು ಅನ್ನೋ ಭ್ರಮೆಯಿದ್ದ೦ತಿದೆ. ಒಬ್ಬ ಕನ್ನಡಿಗನಿಗೆ ಯಾವುದೋ ಭಾಷೆಯ ಚಿತ್ರ ನೋಡಿಯೇ ಮನರ೦ಜನೆ ಸಿಗತ್ತೆ ಅ೦ತ ಇವರಿಗೆ ಹೇಳಿದವರಾರು? ಕೇವಲ ನಾಲ್ಕು, ಐದು ತಿ೦ಗಳಲ್ಲಿ 118 ಚಿತ್ರಗಳು ಹೊರಬ೦ದಿದೆ ಅ೦ದ್ರೆ, ಅದರಲ್ಲಿ ಯಾವುದು ಚಿತ್ರ ಒಳ್ಳೆಯದು, ಯಾವುದು ನೋಡಬೇಕು, ಯಾವುದು ನೋಡಬಾರದು ಅ೦ತ ನಿರ್ಧಾರ ಮಾಡೋ ಅರ್ಹತೆ ಜನರಿಗಿದೆ. ಅದನ್ನು ಜನರಿಗೆ ಬಿಡುವುದೇ ಒಳ್ಳೆಯದು. ಅದು ಬಿಟ್ಟು ಇಡೀ ವರ್ಷದಲ್ಲಿ 10-12 ಚಿತ್ರಗಳನ್ನು ಹಾಕಿಕೊ೦ಡು ಯಾರನ್ನು ಮೆಚ್ಚಿಸಲು ಹೊರಟಿದ್ದಾರೆ ಫನ್ ಸಿನೆಮಾಸ್ ಅ೦ತ ಅವರು ತಿಳಿದುಕೊಳ್ಳಬೇಕಾಗಿದೆ. ಏನ೦ತೀರ ಸಾರ್ ?

ಈಗ ಬರ್ತಿರೋ ಕನ್ನಡ ಚಿತ್ರಗಳು ಚೆನ್ನಾಗಿಲ್ಲ ಅನ್ನೋ ನಿಮ್ಮ ನ೦ಬಿಕೆ ಒಪ್ಪುವ೦ತಹದ್ದಲ್ಲ. ಏಕೆ೦ದರೆ, ಕನ್ನಡ ಚಿತ್ರಗಳು ಚೆನ್ನಾಗಿ ಪ್ರದರ್ಶನ ಕಾಣಬೇಕು ಅಲ್ವಾ.... ಮ್ಯಾಚ್ ಶುರುವಾಗಕ್ಕೆ ಮು೦ಚೇನೇ ಆಟಗಾರ ಔಟ್ ಅ೦ದ್ರೆ ಹೇಗೆ ಸ್ವಾಮಿ. ಕನ್ನಡ ಚಿತ್ರಗಳ ಸಮರ್ಥಕರಾದ ತಾವು ಈ ವಿಷಯದ ಬಗ್ಗೆ ಒಮ್ಮೆ ಯೋಚಿಸಬೇಕು.

ರಾಜೇಶ ಹೆಗಡೆ ಸೋಮ, 05/25/2009 - 22:03

ಹಾಯ್ ಕಿಶೋರ್ ಅವರೇ,

ಈ ಮಲ್ಟಿಫ್ಲೆಕ್ಸ್ ಗಳು ನಿಜಕ್ಕೂ ಕನ್ನಡ ಚಿತ್ರಗಳಿಗೆ ದಿವ್ಯ ನಿರ್ಲಕ್ಷ ತೋರುತ್ತಿವೆ ಎನ್ನುವದು ಸತ್ಯ. ಈ ವಾರ ಬಿಡುಗಡೆ ಆದ ದುಬಾಯಿ ಬಾಬು ಹಾಗೂ ತಾಕತ್ ಇವು ಯಾವ ಮಲ್ಟಿಪ್ಲೆಕ್ಸ್ ನಲ್ಲೂ ಬಿಡುಗಡೆ ಆಗಿಲ್ಲ. (ಪ್ರಜಾವಾಣಿಯ ಚಿತ್ರಮಂದಿರದ ವಿವರದ ಪ್ರಕಾರ) ಕನಿಷ್ಟ ಆರಂಭಿಕ ಒಂದು ವಾರ ಪ್ರದರ್ಶಿಸಿ ಚೆನ್ನಾಗಿ ಓಡಿದರೆ ಮಾತ್ರ ಮುಂದುವರಿಸಿದ್ದರೆ ಉತ್ತಮವಾಗಿತ್ತು ಅಲ್ವಾ? ಹಾಗೇ ಚಲನಚಿತ್ರದವರೂ ಸಹ ಮಲ್ಟಿಪ್ಲೆಕ್ಸ್ ನಲ್ಲಿ ಓಡುವಂತಹ ಕ್ಲಾಸ್ ಫಿಲಂ ಹೆಚ್ಚು ಹೆಚ್ಚು ತಯಾರಿಸಬೇಕಿದೆ.

Muttige ಶುಕ್ರ, 05/22/2009 - 11:12

ಕನ್ನಡ ಸಿನೇಮಾನೆ ತೊರ್ಸಿ ಎಂದು ಹೇಳುವ ಮೊದಲು ನಮ್ಮಲ್ಲಿನ ಕಥೆಗಳ ಗುಣಮಟ್ಟ ಎಂಥದ್ದು,ಅದರಲ್ಲಿ ಜೊಳ್ಳೆಷ್ಟು,ಗಟ್ಟಿ ಎಷ್ಟು ಎಂದು ತಿಳಿಯಬೇಕಾಗಿದೆ!.ಬಂದ ಒಂದೇರಡು ಚಿತ್ರಗಳು ಗೆದ್ದ ತಕ್ಷಣ ಎಲ್ಲಾ ಚಿತ್ರಗಳು ಗೆಲ್ಲುತ್ತದೆ ಎನ್ನುವುದು ಸರಿ ಅಲ್ಲ.ಕನ್ನಡ ಚಿತ್ರದ ಡೋಲಾಯಮಾನವೇ ಇಂದಿನ ಸ್ಥಿತಿಗೆ ಕಾರಣ.ಮೊದಲು ನಮ್ಮ ಕಾಲಬುಡವನ್ನು ಚೊಕ್ಕಮಾಡಿಕೊಂಡು ಅವರಿಗೆ ತಿಳಿಸೋಣ

ಕೆಎಲ್ಕೆ ಶುಕ್ರ, 05/22/2009 - 11:31

ಪ್ರಿಯ ಕಿಶೋರ್,
"ಯಾವುದೋ ಒ೦ದು ಸಿನೆಮಾ ಓಡತ್ತೆ, ಅಥ್ವಾ ಓಡಲ್ಲ ಅನ್ನೋದು ಜನ ನಿರ್ಧರಿಸಬೇಕಾದ ವಿಷಯ " ಎಂಬ ನಿಮ್ಮ ಮಾತು ನಿಜ. ಜನ ನಿರ್ಧರಿಸುತ್ತಲೇ ಇದ್ದಾರಲ್ಲ? ಆರು ತಿಂಗಳಲ್ಲಿ ಒಂದು ಹಿಟ್! ( ಅಂಬಾರಿ?). ನನಗೆ ಕನ್ನಡ ಚಿತ್ರರಂಗದಲ್ಲಿ ಅನೇಕರೊಡನೆ ಒಡನಾಟವಿದೆ. ಗಾಂಧಿನಗರದ 'ಎಕಾನೋಮಿಕ್ಸ್ ' ತಕ್ಕ ಮಟ್ಟಿಗೆ ತಿಳಿದುಕೊಂಡಿದ್ದೇನೆ. ಚಿತ್ರಗಳು ಹೇಗಾಗುತ್ತವೆ, ದುಡ್ಡು ಎಲ್ಲಿಂದ ಬರುತ್ತೆ, ಯಾಕೆ ಬರುತ್ತೆ, ಹಣ ಯಾರು ಹೇಗೆ ಮಾಡುತ್ತಾರೆ ಇತ್ಯಾದಿ, ಇತ್ಯಾದಿ. ಅವುಗಳಿಗೂ ನಿಮ್ಮ 118 ರ ಲೆಕ್ಕಕೂ, 300 ಕೋಟಿ ನಷ್ಟಕ್ಕೂ ಅವಿನಾಭಾವ ಸಂಬಂಧ ಇದೆ ಮಿತ್ರರೇ. ಅದಕ್ಕಾಗಿಯೇ ಈ ಮೇಲಿನ ಅಭಿಪ್ರಾಯ ವ್ಯಕ್ತ ಪಡಿಸಿದ್ದು.
ಆರು ತಿಂಗಳ ಹಿಂದೆ ಗರುಡಾಚಾರ್ ರ ಮಗ ಹಾಗೂ ಪಿವಿಆರ್ ನಡುವೆ (ಜಯನಗರದ 'ಗರುಡಾ ಸ್ವಾಗತ್ ' ನಲ್ಲಿಯ ಮಲ್ಟಿಪ್ಲೆಕ್ಸ್ ಕುರಿತು) ನಡೆದ ಒಪ್ಪಂದದಲ್ಲಿ ನಾನೂ ಪ್ರತ್ಯಕ್ಷ ಭಾಗಿ. ಆಗ ಮಲ್ಟಿಪ್ಲೆಕ್ಸ್ ಗಳಲ್ಲಿಯ ಕನ್ನಡ ಮಾರುಕಟ್ಟೆಬಗ್ಗೆ ಚರ್ಚೆ ಸಾಕಷ್ಟು ನಡೆಸಿದ್ದೆ. 'ದುಡ್ಡು ಬರುತ್ತೆ ಅಂದಾದರೆ ಮಲ್ಟಿಪ್ಲೆಕ್ಸ್ ನವರು ಕನ್ನಡ ಯಾಕೆ -ತುಳು, ಕೊಂಕಣಿ ಚಿತ್ರಗಳನ್ನೂ ಹಾಕುತ್ತೇವೆ' ಎಂಬುದು ಅವರುಗಳೇ ಹೇಳಿದ ಮಾತು. (ಅಂದಹಾಗೆ, ಬೆಂಗಳೂರಲ್ಲಿ ಇದ್ದುದರಲ್ಲಿಯೇ ಪಿವಿಆರ್ ಕನ್ನಡ ಚಿತ್ರಗಳನ್ನು ಪ್ರದರ್ಶಿಸುತ್ತವೆ ಅನ್ನುವದು ಸತ್ಯ)

ಇನ್ನು, 'ಕನ್ನಡ ಚಿತ್ರಗಳು ಪ್ರದರ್ಶನನೇ ಆಗ್ದಿದ್ರೆ ಒಳ್ಳೇ ಚಿತ್ರಗಳ್ನ ಪ್ರೋತ್ಸಾಹಿಸೋದು ಹೇಗೆ?' ಅನ್ನೋ ಮನೀಶ್ ಅವರ ಮಾತಿಗೆ ನನ್ನ ಸಹಮತವಿಲ್ಲ. ಎಲ್ಲಿ ಪ್ರದರ್ಶನವಾಗುತ್ತಿದೆಯೋ ಅಲ್ಲೇ ಹೋಗಿ ನೋಡಿ. ಕನ್ನಡ ಚಿತ್ರಗಳಿಗೂ ಗಳಿಕೆಯಿದೆ ಎಂದಾದರೆ 'ಫನ್'ನವರು ಅವರಾಗೇ ಚಿತ್ರ ಪ್ರದರ್ಶಿಸುತ್ತಾರೆ. 'ಫನ್ ಸಿನೆಮಾಸ್ ರವರಲ್ಲಿ ಮಾರುಕಟ್ಟೆ ಅರಿವು ಪಾತಾಳಕ್ಕಿಳಿದೈತಿ' ಎನ್ನುವ ಮಾತಲ್ಲಿ ಹುರುಳಿಲ್ಲ.
ಕೊನೆಯಲ್ಲಿ:
ಕನ್ನಡದವರಿಗೆ ಅಭಿಮಾನ ಕಡಿಮೆ ಅನ್ನುವುದು ಗೊತ್ತಿದ್ದುದೆ. ಇರುವ ಅಭಿಮಾನಿಗಳಲ್ಲಿ ಉತ್ತರನ ಪೌರುಷದವರೇ ಹೆಚ್ಚು. ಅಂತರ್ಜಾಲದಲ್ಲಿ, ಪತ್ರಿಕೆಗಳಲ್ಲಿ ತೊಡೆತಟ್ಟಿ ಬರುವವರಲ್ಲಿ ಎಷ್ಟುಜನ ಸಾಲಲ್ಲಿ ನಿಂತು ಟಿಕೆಟ್ ಪಡೆದು ಸಿನೆಮಾ ನೋಡುತ್ತಾರೆ ಅನ್ನುವುದರ ಮೇಲೆ ಚಿತ್ರ ರಂಗದ ಯಶಸ್ಸು ನಿಂತಿದೆ. ಉಳಿದದ್ದು- "ಎಲ್ಲಾ ಟೈಮ್ ವೇಸ್ಟ್....."

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.