Skip to main content

ಸರಿಯಾಗಿ ಗಡ್ಡ ಕೆರೆಯಲೂ ಕನ್ನಡ ಗೊತ್ತಿದ್ರೆ ಸಾಲ್ದಂತೆ!

ಬರೆದಿದ್ದುMay 11, 2009
5ಅನಿಸಿಕೆಗಳು

ಪ್ರಾಕ್ಟರ್ & ಗ್ಯಾಂಬೆಲ್ ಕಂಪನಿ-ಯ "ಜಿಲೆಟ್" ಎಂಬ ಬ್ರಾಂಡ್-ನಡಿ ಮಾರಾಟವಾಗುವ ಕ್ಷೌರ ಸಾಮಗ್ರಿಗಳ ಪ್ಯಾಕೇಜ್-ನಲ್ಲಿ, ಮಾಹಿತಿ ಕನ್ನಡದಲ್ಲಿಲ್ಲದೇ ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿದೆ. ಜಿಲೆಟ್ ಬ್ಲೇಡ್-ನಿಂದ ಅನಾಯಾಸವಾಗಿ ಕ್ಷೌರ ಮಾಡಿಕೊಳ್ಳುವ ಬಗೆ, ಸುರಕ್ಷಿತವಾದ ಉಪಯೋಗ, ಮುಂತಾದ ಮಾಹಿತಿಗಳು ಗ್ರಾಹಕರ ಭಾಷೆಯಲ್ಲಿಲ್ಲ. ಕ್ಷೌರಕ್ಕೆ ಬಳಸುವ ಕ್ರೀಂ-ನ "expiry date" ಮತ್ತು ಅವಧಿ ಮೀರಿದ ಬಳಕೆಯಿಂದಾಗುವ ತೊಂದರೆಯ ವಿವರಣೆ ಕನ್ನಡದಲ್ಲಿಲ್ಲ. ಶೇವಿಂಗ್ ಜೆಲ್ ಅಕಸ್ಮಾತ್ ಕಣ್ಣಿಗೆ ತಾಕಿದರೆ ಯಾವ ರೀತಿ ಪ್ರಥಮ ಚಿಕಿತ್ಸೆ ಮಾಡಬೇಕು ಅನ್ನೋ ಮುಖ್ಯವಾದ ಮಾಹಿತಿ ಇಂಗ್ಲಿಷ್ ಮತ್ತು ಹಿ೦ದಿಯಲ್ಲಿ ಮಾತ್ರ ಇದೆ.

ಇ೦ಗ್ಲೀಷಿನಲ್ಲಿ ಅರ್ಥ ಅಗುತ್ತಿರಬೇಕಾದ್ರೆ ನಿಮಗೆ ಕನ್ನಡದಲ್ಲಿ ಏಕೆ ಇರಬೇಕು ಅನ್ನೋ ಪ್ರಶ್ನೆ ನಿಮ್ಮಲ್ಲಿ ಕಾಡುತ್ತಿದ್ದರೆ, ನಾವು ತಿಳಿದುಕೊಳ್ಳಬೇಕಾದ ಅ೦ಶವೇನ೦ದ್ರೆ ಕರ್ನಾಟಕದಲ್ಲಿ ಮಾರಾಟವಾಗುವ ಸಾಮಗ್ರಿಗಳ ಮೇಲೆ ಬೇರೆ ಭಾಷೆಯಲ್ಲಿ ಮಾಹಿತಿ ಇರುವುದಕ್ಕೆ ಯಾವ ಅಡ್ಡಿಯೂ ಇಲ್ಲ. ಆದ್ರೆ ಕೋಟ್ಯಾಂತರ ಕನ್ನಡಿಗರನ್ನು ತಲುಪಬೇಕಾದರೆ ಕನ್ನಡದಲ್ಲಿ ಮಾಹಿತಿ ಇರುವುದೇ ಸೂಕ್ತ ಎಂಬುದು ಉದ್ದಿಮೆದಾರರು ತಿಳಿದುಕೊ೦ಡ೦ತಿಲ್ಲ.
ಯಾವುದೇ ಸಾಮಗ್ರಿಗೆ ಸಂಬಂಧಪಟ್ಟ ಮಾಹಿತಿಯನ್ನು ತನ್ನ ಭಾಷೆಯಲ್ಲಿ ಪಡೆದುಕೊಳ್ಳುವ ಹಕ್ಕು ಗ್ರಾಹಕನಿಗಿದೆ. ಆದರೆ ಜಿಲೆಟ್-ನ ಪ್ಯಾಕೇಜ್-ನಲ್ಲಿ ಕನ್ನಡವನ್ನು ಬಳಸದೇ ಇರುವುದು ಗ್ರಾಹಕನಿಗೆ ಸಿಗುವ ಸೌಲಭ್ಯಕ್ಕೆ ತಡೆ ಹಾಕಿದ೦ತಾಗಿದೆ.

ಕನ್ನಡದ ಗ್ರಾಹಕನು ತೂಕ, ಅಳತೆ, ಗುಣಮಟ್ಟ ಮತ್ತು ಮೌಲ್ಯಗಳನ್ನು ಲೆಕ್ಕ ಹಾಕೋ ಹಾಗೆ, ಪದಾರ್ಥಗಳ ಮಾಹಿತಿಗೆ ಸ೦ಭ೦ದ ಪಟ್ಟ೦ತೆ ಭಾಷಾ ಆಯಾಮದಲ್ಲೂ ತನ್ನ ಹಕ್ಕನ್ನು ಅರಿತುಕೊಳ್ಳಬೇಕಾಗಿದೆ.
ಜಿಲೆಟ್-ನವರಿಗೆ ಮಿಂಚೆ ಕಳುಹಿಸಿ ಕನ್ನಡದ ಗ್ರಾಹಕರ ಮನಸ್ಸನ್ನು ಗೆಲ್ಲಲು ನಿಮ್ಮ ಪದಾರ್ಥಗಳ ಮೇಲೆ ಕನ್ನಡವನ್ನು ಬಳಸಬೇಕು ಎ೦ಬುದನ್ನು ಹೇಳೋಣ. ಜಿಲೆಟ್ ಉತ್ಪಾದಕರಿಗೆ ಈ ಕೆಳಗಿನ ವಿಳಾಸದಲ್ಲಿ ಮಿ೦ಚೆ ಬರೆಯಬಹುದು.
ಇವರ ಮಿಂಚೆ: gillette@in.pgconsumers.com

[img_assist|nid=4269|title=ಜಿಲೆಟ್ ಉತ್ಪನ್ನಗಳು|desc=|link=none|align=center|width=600|height=350]

ಲೇಖಕರು

ಪ್ರಿಯಾಂಕ್

ಸಮಯ ಸಿಕ್ಕಾಗ ತಿಳಿಸುತ್ತೇನೆ.
ಸದ್ಯಕ್ಕೆ ಕ್ಷಮೆ ಇರಲಿ.

ಅನಿಸಿಕೆಗಳು

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಧ, 05/13/2009 - 10:47

tum sabka dimaag kharaab hai, koi company kaam karna chati hai aur tum uska kaam apni bhasha se rokna chate ho. safety is important and everybody knows tht,agar tumhe jaada problem hai to logon ko batao ki shaving cream aankh main nahi lagate hain,aur agar chote bachon ki baat karte ho to unhe koi bhasha main instructions de do wo fir bhi galti karenge.

Speakers Percentage :

Hindi 41.03%,Bengali 8.11%, Telugu 7.37%4 Marathi 6.99% , Tamil 5.91%, Urdu 5.01%, Gujarati 4.48%, Kannada 3.69%

4% bhi nahi hai total population for this language and u need everybody to change for you when urself cannot comply with world.

Tum sab jo bahsha ke nam pe desh ko baatna chahte ho.

ಪ್ರಿಯಾಂಕ್ ಭಾನು, 05/17/2009 - 22:04

ನಿಮಗೆ ಕನ್ನಡ ಓದಲು ಬರುತ್ತದೆ ಅಂತ ನಿಮ್ಮ ಉತ್ತರ-ದಿಂದನೆ ತಿಳಿಯುತ್ತದೆ.
ಕನ್ನಡದಲ್ಲಿ ಮಾಹಿತಿ ಕೊಡುವುದರಿಂದ ದೇಶ ಹೇಗೆ ಒಡೆಯುತ್ತೋ ನಾ ಕಾಣೆ.
ಪ್ರತಿಯೊಂದು ರಾಜ್ಯದಲ್ಲಿ ಮಾರಾಟ ಮಾಡುವಾಗ, ಅಲ್ಲಿನ ಭಾಷೆಯಲ್ಲಿ ಮಾಹಿತಿ ನೀಡುವುದು ಎಲ್ರಿಗೂ ಉತ್ತಮ.
ಜನರ ಸುರಕ್ಷತೆ ದೃಷ್ಟಿಯಿಂದ ಇದು ಬಹಳ ಮುಖ್ಯ.
ವ್ಯಾಪಾರ ಮಾಡಿ ದುಡ್ಡು ಮಾಡುವ ದೃಷ್ಟಿಯಿಂದ ಇಲ್ಲಿ ಬಂದಿರುವ ಉದ್ದಿಮೆಗಳು, ಜನರ ಸುರಕ್ಷತೆ ಬಗ್ಗೆ ಕಾಳಜಿ ವಹಿಸಿ ಅಂತ ಕೇಳುವುದರಿಂದ ಏನ್ ಆಕಾಶ ಕೆಳಗೆ ಬೀಳೋಲ್ಲ.

ಜನಸಂಖ್ಯೆ ವಿಚಾರವಾಗಿ ನೀವು ಹೇಳಿದ ಮಾತು ಹಾಸ್ಯಾಸ್ಪದವಾಗಿದೆ.
ನಿಮ್ಮ ಜನಸಂಖ್ಯೆ ಕಡಿಮೆ ಅದಿಕ್ಕೆ ನಿಮ್ಮ ಭಾಷೆಯಲ್ಲಿ ಮಾಹಿತಿ ನೀಡಲ್ಲ, ಬೇಕಾದ್ರೆ ಬೇರೆ ಭಾಷೆ ಕಲೀರಿ ಅನ್ನೋದು ಯಾವನ್ ಒಪ್ತಾನೆ?

ಕನ್ನಡಿಗನು (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 05/18/2009 - 14:25

ವಿಸ್ಮಯದಲ್ಲಿ ಮೊದಲಬಾರಿಗೆ ಇಂಥಾ 'ಅನಾಮಿಕ'ನ ಪ್ರವೇಶವಾಗಿದೆ! ಈತ ಕನ್ನಡ ಬಲ್ಲ ಹಿಂದಿ ಭಾಷಿಗನೋ ಅಥವಾ ಸುಮ್ಮನೆ ಕಾಲೆಳೆದು ಜಗಳ ಕಾಯಬೇಕೆಂಬ ಉದ್ದೇಶ ಉಳ್ಳವನೋ ತಿಳಿಯುತ್ತಿಲ್ಲ. ಭಾರತದ ಗಣತಂತ್ರ ವ್ಯವಸ್ಥೆಯ ಬಗ್ಗೆ ಅರಿವಿಲ್ಲದ, ಸ್ಥಳೀಯ ಕಾನೂನು ಏನೆನ್ನುತ್ತದೆ ಎನ್ನುವ ಜ್ಞಾನವಿಲ್ಲದ ಈ 'ಅನಾಮಿಕ'ವ್ಯಕ್ತಿ ನನಗೆ ರೈಲಿನಲ್ಲಿ ಚೀಟಿ ಪಡೆಯದೆ ಓಡಾಡುವ, ಕೇಳಿದರೆ ಜಗಳಕ್ಕಿಳಿಯುವ ಬಿಹಾರಿ ಕೂಲಿಯವನಂತೆ ತೋರುತ್ತಾನೆ. ಭಾಷಾ % ಬಗ್ಗೆ ಮಾತನಾಡುವ ಈತನಿಗೆ ಪ್ರತಿಶತ 95 ಕನ್ನಡ ಮಾತನಾಡುವ ಕರ್ನಾಟಕದಲ್ಲಿ 'ಕನ್ನಡ' ಬಳಕೆಯ ಅಗತ್ಯ ತಿಳಿಯದೆ?ಅದರಲ್ಲು, ಶೆಕಡಾ 99.99% ಕನ್ನಡಮಯವಾಗಿರುವ ವಿಸ್ಮಯದಲ್ಲಿ ಕನ್ನಡ ಬಳಕೆ ಖಡ್ಡಾಯ ಎನ್ನುವ ವಿವೇಕ ಇಲ್ಲವೇ?
ಪ್ರಿಯ ಪ್ರಿಯಾಂಕ್,
ನಿಮ್ಮ ಈ ಮೇಲಿನ ಲೇಖನಕ್ಕೆ ನಮ್ಮೆಲ್ಲರ ಸಹಮತ ಇದೆ. ಈ ಹಿನ್ದಿ ಹುಳುವಿನ ಪ್ರತಿಕ್ರಿಯೆಗೆ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ!

ರಾಜೇಶ ಹೆಗಡೆ ಸೋಮ, 05/18/2009 - 17:07

ಹಾಯ್ ಕನ್ನಡಿನು ಅವರೇ,

ಈ ಹಿಂದಿ ಪ್ರತಿಕ್ರಿಯೆ ನೋಡಿದ ತಕ್ಷಣ ಅದರ ಐಪಿ ಅಡ್ರೆಸ್ ವಿಶ್ಲೇಷಣೆ ಮಾಡಿದಾಗ ತಿಳಿದು ಬಂದದ್ದೇನೆಂದರೆ ಅದು ಬಂದಿರುವದು ಫಿಲಿಫೈನ್ಸ್ ನಿಂದ. ಬಹುಷಃ ಯಾರೋ ವಿಸ್ಮಯದ ಈ ಲೇಖನದ ಕೊಂಡಿಯನ್ನು ಇಂಗ್ಲೀಷ್ ಈಮೇಲ್ ಜೊತೆಗೆ ಅವನಿಗೆ ಕಳುಹಿಸಿರಬೇಕು. ಆ ಪತ್ರಕ್ಕೆ ಬರೆಯುವ ಉತ್ತರವನ್ನು ಇಲ್ಲಿ ಬರೆದಿದ್ದಾನೆ. ಅವನಿಗೆ ಕನ್ನಡ ಬರುತ್ತೆ ಅಂತಾ ನನಗೆ ಅನಿಸುತ್ತಿಲ್ಲ. ಬಹುಶಃ ಮೇಲೆ ಪ್ರಿಯಾಂಕ್ ಅವರು ಕೊಟ್ಟ ಈಮೇಲ್ ವಿಳಾಸಕ್ಕೆ ಸಂಬಂದಪಟ್ಟವನು ಎಂಬುದು ನನ್ನ ಅನಿಸಿಕೆ. ಆ ಅಭಿಪ್ರಾಯದಲ್ಲಿ ಹೊಲಸು ಶಬ್ದಗಳಿತ್ತು. ಅವನ್ನು ಕಿತ್ತು ಹಾಕಿದ್ದೇನೆ.
ಫಿಲಿಫೈನ್ಸ್ ಅಲ್ಲಿ ಜಿಲ್ಲೇಟ್ ಅವರ ಕಾಲ್ ಸೆಂಟರ್ ಇದೆಯಾ?

ಕನ್ನಡಿಗನು (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 05/18/2009 - 17:30

ಹಾಯ್ ರಾಜೇಶ್,
ಈ ಪ್ರತಿಕ್ರಿಯೆ ಅನಪೇಕ್ಷಿತವೂ, ಅಸಂಭದ್ದವೂ ಆದುದರಿನ್ದ ಓದಿ ಕಸಿವಿಸಿ ಆಯಿತು. ಯವುದೂ ಇನ್ತದ್ದೆಲ್ಲ ಇದ್ದುದೇ ಬಿಡಿ. ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ. ನಿಮ್ಮ ಪೂರಕ ಪ್ರಯತ್ನಕ್ಕೆ ಧನ್ಯವಾದ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.