ದಾರಿಹೋಕ!
ಹಾದಿಯಲಿ ಒಂದಿಷ್ಟು ಸಿಗುತ್ತದೆ
ಸಾಕಷ್ಟು ಹೋಗುತ್ತದೆ
ತುಲನೆ ಮಾಡಿ ನೋಡಿದರೆ
ಹೋದಷ್ಟೇ ನೋವು,
ಸಿಕ್ಕಷ್ಟೂ ಸಂಭ್ರಮ...
ಜನರು ಹೇಳುವರು
ತಲುಪಲಾಗದು
ಗುರಿಯೆಂಬುದು ಬಹಳ ದೂರ...
ಅರಿವಿದೆಯೆನಗೆ
ಯಾರೂ ಹೋಗರು ಸೋತು
ಕೇಳಿದರೆ ಎದೆಯ ಮಾತು..
ಡೇರೆ ಹಾಕಿ ಮಲಗಿದವರು
ಹೊಟ್ಟೆಕಿಚ್ಚಿನಿಂದ ಸುಡುವವರು
ಸಾಗಲಾರೆ ಎಂದು ಹಂಗಿಸುವವರು
ದಾರಿ ತುಂಬಾ ಸಿಗುವರು
ಪ್ರೀತಿಯಿಂದ ನೇವರಿಸುವೆನು,
ಕಾರುವ ಕಣ್ಣುಗಳೂ ತಣ್ಣಗಾಗಬಹುದು
ನೋಡುವ ಆಸೆಯಿದ್ದರೆ
ನಿಲುಕಿದಷ್ಟೂ ನೋಟವಿದೆ,
ಸಾಗುವ ಇಚ್ಚೆಯಿದ್ದರೆ
ನಡೆದಷ್ಟೂ ದಾರಿಯಿದೆ
ಬದುಕಿನ ಸವಿ ಹೊತ್ತು
ಹೊಡೆಸಬೇಕಿದೆ
ರಸ್ತೆಗೇ ಸುಸ್ತು!
ಸಾಲುಗಳು
- 736 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ