Skip to main content

ಟಾಟಾ ಸ್ಟಾರ್ ಬಜಾರ್: ಕನ್ನಡಕ್ಕೇ ಹೆಚ್ಚು ಮಾರುಕಟ್ಟೆ

ಬರೆದಿದ್ದುApril 28, 2009
7ಅನಿಸಿಕೆಗಳು

ಬೆಂಗಳೂರಲ್ಲಿ ಎಲ್ಲಾ ಕಡೆ ಕಾಣೋ ಸೂಪರ್ ಮಾರ್ಕೆಟ್-ಗಳಲ್ಲಿ, ದಾಲ್, ಚಾವಲ್, ಅವಲ್ ಅಂತ ಹೆಸರಿಟ್ಟು ಬೇಳೆ, ಅಕ್ಕಿ, ಅವಲಕ್ಕಿಗಳನ್ನ ಮಾರಕ್ಕೆ ಶುರು ಮಾಡಿರೋದು ಏನು ಹೊಸಾ ವಿಷಯ ಅಲ್ಲ. ಆದರೆ ಇ೦ತಹ ತೂರ್ದಾಲ್, ಮೂಂಗ್-ದಾಲ್, ಉರದ್-ದಾಲ್ ಇವುಗಳ್ನ ನೋಡಿ ನಾವೂ ಹಲವಾರು ಬಾರಿ ಗೊಂದಲಕ್ಕೀಡಾಗಿರೋದು೦ಟು. "ಸಾರಿಗೆ ಹಾಕೋ ಬೇಳೆ ಇದೇನಾ??" ಅಂತ ಕೇಳ್ತಿರೋರು ಒಂದು ಕಡೆ ಆದ್ರೆ, ಕನ್ನಡದಲ್ಲಿ ಇದರ ಸಮಾನ ಪದ ಇರೋ ಒಂದು ಚಿಕ್ಕ ಪಟ್ಟಿ ಹಿಡ್ಕೊಂಡೇ ಶಾಪಿಂಗ್ ಮಾಡ್ತಿರೋರು ಇನ್ನೊಂದು ಕಡೆ.

ಬೆಂಗಳೂರಿನ ಕೋರಮಂಗಲದಲ್ಲಿರುವ ಟಾಟಾರವರ "ಸ್ಟಾರ್ ಬಜಾರ್" ಸೂಪರ್ ಮಾರ್ಕೆಟ್-ನವರಿಗೆ ನಾವು (ನಾನು ಮತ್ತು ನನ್ನ ಸ್ನೇಹಿತರು) ಕನ್ನಡದಲ್ಲಿ ಏಕೆ ಪದಾರ್ಥಗಳ ಹೆಸರು ಇಟ್ಟಿಲ್ಲ ಎ೦ದು ಪ್ರಶ್ನೆ ಮಾಡಿದ್ವಿ.

ಅವರಿಗೆ ನಮ್ಮ ಮಾತು ಬೇಗ ಅರಿವಾಯಿತು ಮತ್ತು ಈಗ ಅವರಲ್ಲಿ ಒಂದು ಒಳ್ಳೆಯ ಬದಲಾವಣೆ ಕಾಣುತ್ತಿದೆ. ಯಾವಾಗಲೂ ಇಂಗ್ಲಿಷ್-ನಲ್ಲೆ ಜಾಹಿರಾತು ನೀಡುತ್ತಿದ್ದ ಸ್ಟಾರ್ ಬಜಾರ್, ಈಗ ಕನ್ನಡದಲ್ಲೂ ಜಾಹಿರಾತು ನೀಡುತ್ತಿದ್ದಾರೆ (ಲಗತ್ತಿಸಿರುವ ಫೋಟೋ ನೋಡಿ).

ಈಗ ಪ್ಯಾಕೇಜ್ ಮೇಲೆ ಕನ್ನಡದ ಹೆಸರುಗಳನ್ನೇ ಮುದ್ರಿಸುತ್ತಿದ್ದಾರೆ ಮತ್ತು ಕನ್ನಡದಲ್ಲೇ "ಅಕ್ಕಿ ಮತ್ತು ಬೇಳೆಗಳು" ಅ೦ತ ಬೋರ್ಡುಗಳಿವೆ. ಇದರಿ೦ದ ಕನ್ನಡದ ವಾತಾವರಣ ಹುಟ್ಟುವುದಲ್ಲದೆ, ಕನ್ನಡದ ಗ್ರಾಹಕನ ಮನವೊಲಿಸುವುದರಲ್ಲೇ ನಮ್ಮ ಮುನ್ನಡೆ ಇದೆ ಎ೦ಬುದು ಸ್ಟಾರ್ ಬಜಾರ್-ರವರಲ್ಲಿ ತಿಳುವಳಿಕೆ ಮೂಡುತ್ತಿದೆ.

ಉದ್ದಿಮೆದಾರರಲ್ಲಿ ಇದೇ ರೀತಿ ಜಾಗೃತಿ ಮೂಡಿಸಬೇಕಾಗಿರುವುದು ಕನ್ನಡದ ಗ್ರಾಹಕನ ಕರ್ತವ್ಯವಾಗಿದೆ. ನಾವು ಭೇಟಿ ನೀಡುವ ಯಾವುದೇ ಸೂಪರ್ ಮಾರ್ಕೆಟ್ ಗಳಲ್ಲಿ ಕನ್ನಡದ ಬಳಕೆಯನ್ನು ಸುಲಭವಾಗಿ ಹೆಚ್ಚಿಸಬಹುದು ಮತ್ತು ಇದಕ್ಕೆ ಸ್ಟಾರ್ ಬಜಾರ್ ನ ಈ ಪ್ರಕರಣವೇ ಸಾಕ್ಷಿ.

ಕನ್ನಡದ ನೆಲದಲ್ಲಿ ಕನ್ನಡದಲ್ಲಿ ವ್ಯವಹರಿಸುವ ಮೂಲಕ ಕನ್ನಡಿಗರಿಗೆ ಇನ್ನಷ್ಟು ಹತ್ತಿರವಾದ ಇವರು ಬರಿ ಸ್ಟಾರ್ ಅಲ್ಲ, ಸೂಪರ್ ಸ್ಟಾರ್ ಬಜಾರ್.
ಬನ್ನಿ ಇ೦ತಹ ಒ೦ದು ಬದಲಾವಣೆಯನ್ನು ತ೦ದಿರುವ ಸ್ಟಾರ್ ಬಜಾರ್ ನವರಿಗೆ ಅಭಿನ೦ದನೆಯ ಒ೦ದೆರಡು ಸಾಲು ಬರೆದು ಕಳಿಸೋಣ.

ಇವರ ಮಿಂಚೆ: starhelp@trent-tata.com
[img_assist|nid=4182|title=ಸ್ಟಾರ್ ಬಜಾರ್ ಜಾಹೀರಾತು|desc=|link=none|align=center|width=640|height=480]

ಲೇಖಕರು

ಪ್ರಿಯಾಂಕ್

ಸಮಯ ಸಿಕ್ಕಾಗ ತಿಳಿಸುತ್ತೇನೆ.
ಸದ್ಯಕ್ಕೆ ಕ್ಷಮೆ ಇರಲಿ.

ಅನಿಸಿಕೆಗಳು

ರಾಜೇಶ ಹೆಗಡೆ ಧ, 04/29/2009 - 12:00

ಬಹುಶಃ ಅವರು "ಸಮ್ಮರ್ ಸ್ಪೆಶಲ್" ಎಂದು ಬರೆಯುವ ಬದಲು "ಬೇಸಿಗೆ ವಿಶೇಷ" ಅಂತಾ ಬರೆದಿದ್ದರೆ ಚೆನ್ನಾಗಿತ್ತೇನೋ. ಇರಲಿ ಬಿಡಿ ಅಷ್ಟಾದರೂ ಮಾಡಿದ್ದಾರಲ್ಲ!
ನಿಜ ನಾನು ಸ್ಟಾರ್ ಬಜಾರ್ ಗೆ ಹೋಗಿದ್ದೆ ಅವರ ಕನ್ನಡ ಬಳಕೆ ನೋಡಿ ಖುಷಿಯಾಯ್ತು. ಇವರದ್ದು ಯಶಸ್ವಿಯಾದರೆ ಉಳಿದ ಸೂಪರ್ ಮಾರ್ಕೆಟ್ ಅವರೂ ಇವರನ್ನು ಹಿಂಬಾಲಿಸಬಹುದು. :) ತುಂಬಾ ಒಳ್ಳೇ ಕೆಲಸ ಮಾಡಿದ್ದೀರ. 8)

ಪ್ರಿಯಾಂಕ್ ಧ, 04/29/2009 - 21:34

ರಾಜೇಶ್,
ಸ್ಟಾರ್ ಬಜಾರ್ ಅವರನ್ನು ಅಭಿನಂದಿಸೋಣ.
ಇದರಿಂದ, ಅವರ ಹುಮ್ಮಸ್ಸು ಹೆಚ್ಚಾಗಿ "ಸಮ್ಮರ್ ಸ್ಪೆಷಲ್" ಹೊರಗೋಡಿಸಿ "ಬೇಸಿಗೆ ಬಿಸಿ ಬಿಸಿ ಸೇಲ್" ತರ್ತಾರೆ.
ನೀವು ಸ್ಟಾರ್ ಬಜಾರ್-ಗೆ ಅಭಿನಂದನಾ ಪತ್ರ ಕಳಿಸಿದ್ದೀರ ಅಲ್ವಾ?

ರಾಜೇಶ ಹೆಗಡೆ ಮಂಗಳ, 05/05/2009 - 08:03

ಹಾಯ್ ಪ್ರಿಯಾಂಕ್,
ಹೌದು ಅವರಿಗೆ ಅಭಿನಂದನಾ ಪತ್ರ ಕಳಿಸಿದ್ದೇನೆ. :)

ಕೆಎಲ್ಕೆ ಧ, 04/29/2009 - 13:03

ರಾಜೇಶ್, ಇದು ಬ್ಯಾಂಗಲೋರ್. ಇಲ್ಲಿರುವದು ಸಮ್ಮರೇ!! ಬೆಸಿಗೆಯೆಲ್ಲ ನಿಮ್ಮ ಉ.ಕ, ದ. ಕ, ಶಿವಮೊಗ್ಗೆ, ಧಾರವಾಡದಲ್ಲಿ ಮಾತ್ರ ಕಣ್ರೀ.

Muttige ಧ, 04/29/2009 - 16:59

ಪ್ರೀಯಾಂಕ ಅವರೇ ಇದು ಉತ್ತಮ ಬೆಳವಣಿಗೆ.
ನೀವು ಈ-ಮೇಲ್ ಗೆ ಕನ್ನದದಲ್ಲಿ ಮಿಂಚೆ ಅಂಥ ಬರೆದಿದ್ದಿರಾ.. ಅದು ಮಿಂಚಂಚೆ ಅಂಥ ಆಗ ಬೇಕು..

ಸುಹೃತ (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 05/01/2009 - 10:09

ಇದು ಒಳ್ಳೆ ಸುದ್ದಿ. ಕರ್ನಾಟಕದಲ್ಲಿ ಕನ್ನಡಕ್ಕೆ ಮಾತ್ರ ಮಾರುಕಟ್ಟೆ ಇದೆ ಎಂಬುದು ಇವರಿಗೆ ಈಗ ಅರಿವಾಗಿದೆ. ಇವರಿಗೆ ಒಂದು ಅಭಿನಂದನೆ ಪತ್ರ ಕಳೆಸುವ.

ಮನಸು (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 05/03/2009 - 13:14

ಪ್ರಿಯಾಂಕ ಇದು ಬಹಳ ಒಳ್ಳೆಯ ಕೆಲಸ... ಹೀಗೆ ಹತ್ತು ಹಲವು ಬದಲಾವಣೆಗಳು ಬರಬೇಕು ಎಲ್ಲಾ ಕಡೆ.. ಅರಿವು ಮೊಡಿಸುವ ನಿಟ್ಟು ನಮ್ಮೆಲ್ಲರಿಗು (ಕನ್ನಡಿಗರಿಗೆಲ್ಲ) ಸೇರಿದ್ದು..
ಧನ್ಯವಾದಗಳು
ಮನಸು
ಕುವೈತ್.....

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.