ತಲ್ಕೆಟ್ಟವರ ತಗಾದೆಗಳು - 2
ಬೇವರ್ಸಿ ಬದುಕು ಒಂದೊಮ್ಮೆ ತಂದಿಲ್ಲಿ ನಿಲ್ಲಿಸದಿದ್ದರೆ.......#@$%#$%$ ?
ಒಮ್ಮೊಮ್ಮೆ ನನಗನಿಸುತ್ತೆ ತಾಜ್ ಮಹಲ್ನೆದುರು ನಿಂತು ಕೂಗಿ ಹೇಳ್ಬೇಕು ನಿನ್ನ ಎಷ್ಟು ಪ್ರೀತಿಸ್ತೀನಿ ಅಂತ ಆದ್ರೆ ನಂಗೊತ್ತು.... ಮಿಸ್ಟೇಕ್ ಮಾಡ್ಕೊಂಡು ಮಮ್ತಾಜ್ ಸಮಾಧಿಯಿಂದೆದ್ದು ಬರಬಹುದು ನೀ ಮಾತ್ರ ಬರಲಿಕ್ಕಿಲ್ಲ ... ಆದ್ರೂ.................
ಆವತ್ತು ರಾತ್ರಿ ಬೆಳದಿಂಗಳಿತ್ತು....
ಜನ ಚಂದ್ರನ್ನ ಹುಡುಕ್ತಿದ್ರು.....
ಜನಕ್ಕೆ ಹೇಳೋರ್ಯಾರು..... ನೀನು ನಗ್ತಿದ್ದೆ ಅಂತಾ.......!
ಆವತ್ತು ಭಾನುವಾರ ಬೆಳಿಗ್ಗೆ ಟಿಫನ್ ಮಾಡಲು ಹೋಟಲ್ ಗೆ ಹೊರಟಿದ್ದೆವು ಜೊತೆಯಲ್ಲಿ ನಾಗೇಶನೂ ಇದ್ದ . ಎದುರಿಗೆ ಥಾಮಸ್ ಚಂದಗೆ ಡ್ರಸ ಮಾಡ್ಕೊಂಡು ಬಂದ ನಂ ನಾಗೇಶ "ಏನ್ಲೇ ಥಾಮ್ಸ ನಮಾಜಿಗೆ ಹೊಂಟಿದಿಯಾ" ಅಂತಾ ಕೇಳಿದ ಅದಕ್ಕವನು ಇಲ್ಲ ಕಣ್ಲೆ ಇವತ್ತು ಚರ್ಚಿನಾಗೆ ಸತ್ಯ ನಾರಾಯಣ ಪೂಜೆ ಇಟ್ಕಂಡವರೆ ಅದಿಕ್ಕೆ ಹೊಂಟಿದೀನಿ ಅಂದು ಭರ್ರನೆ ಹೋದ ನಂ ನಾಗೇಸ ಸಖತ ಕನ್ಫ್ಯೂಸ ಆಗ್ಬುಟ್ಟ ಅಲ್ಲ ಸಾಬ್ರು ಸತ್ನಾರಾಯಣ ಪೂಜೆ ಮಾಡ್ತಾರಾ....?
ಸಾಲುಗಳು
- 320 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ