Skip to main content

ನಿನ್ನ ನೆನಪು

ಬರೆದಿದ್ದುApril 9, 2009
1ಅನಿಸಿಕೆ

ಕಾರ್ಮುಗಿಲ ಇರುಳಿನ ಒಂಟಿ ತಾರೆಯ ಹಾಗೆ
ಮೊದಲ ಮಳೆಯ ಜೊತೆ ಸುರಿವ ಮಣ್ಣ ವಾಸನೆ ಹಾಗೆ
ಪುಸ್ತಕದಲ್ಲಿ ಮುಚ್ಚಿಟ್ಟ ನವಿಲ ಗರಿಯ ಹಾಗೆ
ನೀ ನನಗೆ ನೆನೆಪಾಗುವುದೇ ಹಾಗೆ

ಹಗಲೂ ಅಲ್ಲದ ಇರುಳೂ ಅಲ್ಲದ ವಿಭಿನ್ನ ಕಾಲವೊಂದರ ಹಾಗೆ
ವಸಂತ ಮಾಸದ ನೀರಸ ಸಂಜೆಯೊಂದರ ಹಾಗೆ
ಕಾಡ ನಡುವೆ ಹರಿವ ಅನಾಮಿಕ ತೊರೆಯೊಂದರ ಹಾಗೆ
ನೀ ನನಗೆ ನೆನೆಪಾಗುವುದೇ ಹಾಗೆ

ಕಲ್ಹಾರ ವನದ ಸ್ಪಟಿ ಕೊಳವೊಂದರ ಹಾಗೆ
ಧರೆಯೆಲ್ಲ ತನಿಚೆಲ್ಲೋ ಕಾಡ ಬೆಳದಿಂಗಳ ಹಾಗೆ
ಅಗಮ್ಯ ಮಾರ್ಗದಲಿ ನೀ ಎನ್ನ ಕೈ ಹಿಡಿದು ನಡೆಸಿದ ಹಾಗೇ
ನೀ ನನಗೆ ನೆನೆಪಾಗುವುದೇ ಹಾಗೆ

ಲೇಖಕರು

ಬಾಲ ಚಂದ್ರ

ಹೊಳೆ ದಂಡೆ

ನನ್ನ ಲೇಖನಗಳನ್ನು ಓದಿ
ನನ್ನ ಬಗ್ಗೆ ನಿಮಗೇ ತಿಳಿಯುತ್ತೆ.

ಅನಿಸಿಕೆಗಳು

ವಿಕ್ರಂ ಸೋಮ, 04/20/2009 - 14:17

ಚೆನ್ನಾಗಿದೆ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.