Skip to main content

ಕೆಂಪು ಗುಲಾಬಿ

ಬರೆದಿದ್ದುApril 8, 2009
5ಅನಿಸಿಕೆಗಳು

Hi every one, my name is “RED ROSE” ಕೆಂಪು ಗುಲಾಬಿ ಈಗಿನ fashion life ನಲ್ಲಿ ನಾನೂ..ಕೂಡ modern ಆಗಿದ್ದೀನಿ. ಅದಕ್ಕೆ ಸ್ವಲ್ಪ ಇಂಗ್ಲೀಷು-ಗಿಂಗ್ಲೀಷು ಎಲ್ಲಾ..! ಹುಡುಗಿಯಿಂದ-ಆಂಟಿವರೆಗು, ಹುಡುಗರಿಂದ ಅಂಕಲ್ ವರೆಗು, ಇವರೆಲ್ಲ ಇಷ್ಟಪಡೊ ನನ್ನ, ಅವರಿಗೆಲ್ಲ ಒಂದು ಥ್ಯಾಂಕ್ಸ್ ಹೇಳ್ತಾ... Lets start my story!?!

ಮುಳ್ಳಿನ ಒಡಲಲ್ಲಿ ಹುಟ್ಟಿದ್ರೂನು, ತಲೆಮೇಲೆ ಹೊತ್ಕೊಂಡು ತಿರುಗಾಡೊ ನನ್ನ.. ಕೊನೆಯ ಘಳಿಗೆಯಲ್ಲಿ... ನನ್ನ ಸಾವೇ... ವಿಚಿತ್ರಾನ್ನ..!!..... Yes.. Corporation ತೊಟ್ಟಿ ಆಗಿರಬಹುದು, ಕಸದ ಬುಟ್ಟಿ ಆಗಿರಬಹುದು, ಅಥವ ಒಬ್ಬರ ಸಾವಿನ ಎದೆಯ ಮೇಲೆ ಮಲಗಿ ಹಾಗೆ ಸಮಾಧಿಯಾಗಬಹುದು...... (ಕಣ್ಣೀರು)....

Sorry Guys. ನಂಗು ಒಂದ್ ಮನಸ್ಸು ಅಂತ ಇದೆ ಅಲ್ವ...?! ಅದಕ್ಕೆ overfeeling ನಲ್ಲಿ-ನಲ್ಲಿ ತಿರುಗಿಸಿಬಿಟ್ಟೆ, ಕಣ್ಣಲ್ಲಿ ನೀರು ಬಂತು...! ಮೊಗ್ಗಿನ ಮಗುವಾಗಿದ್ದ ನಾನು, ಯೌವ್ವನದ ಕಾರಂಜಿ ಚಿಮ್ಮುತ್ತಿದ್ದಂತೆ... ರವಿ ಕೂಡ ಬೆಳಗ್ಗೆ ಬೇಗ ಎದ್ದು... ಕಿರಣ ಚುಂಬನದ ಬಿಸು ಅಪ್ಪುಗೆಯಲ್ಲಿ... I love you ಅಂಥ ಉಸುರುತ್ತಿದ್ದ..! ಮೇಘಗಳ ರಾಜ.. ದಿನ ನನಗೊಂದು.. ಇಬ್ಬನಿಗಳ ಸರಮಾಲೆ ಕೊರಳಿಗೆ.. ಪೇರಿಸುತ್ತಿದ್ದ..! ತಂಗಾಳಿ ಕೂಡ..... ತುಸು ಜೋರಾಗೆ ನನ್ನ ಸ್ಪರ್ಷದಿಂದ ದೂರ ಹೋಗಿ ಹುಚ್ಚಂತಾಗಿ ಬಿರುಗಾಳಿಯಾಗಿದ್ದು ಉಂಟು..!! Wow! What a Beautiful my day’s Guys!? ಈ ಸುಂದರ ಪ್ರಪಂಚದಲ್ಲಿ ನಾನು ಇಷ್ಟೊಂದು ಸಂತೋಷವಾಗಿ ಇದ್ದೀನಲ್ಲ ಅಂತ So I Thank to god..!
But ಇದೇ life ನಲ್ಲಿ ನನ್ನ ಪರಿಸ್ಥಿತಿ?.... Sorry!?..
ಇದ್ದಷ್ಠು ದಿನ ಸಂತೋಷವಾಗಿದ್ದು.. ನೆಮ್ಮದಿಯ ನಿಟ್ಟುಸಿರು ಬಿಟ್ಟು.. ಕಾಲದಲ್ಲಿ, ಕಾಲವಾಗುವ ನಮ್ಮಂತ ಎಷ್ಠೊಂದು ಹೂವುಗಳಿದ್ದರೂ... ನಾನು ಏನೂ.. ಅಲ್ಲ ಅಂತ ಅನಿಸಿಬಿಟ್ಟಿತು! ಬಂದ ದಿನ-ಬಂದಷ್ಟೇ.. ವೇಗದಲ್ಲಿ.. ಕಳೆದು ಹೋಗುವ ನಾನು ಬೀಗಿದ್ದೆಷ್ಟು..?? ನನ್ನ ಬಿಂಕ, ವಯ್ಯಾರಗಳಿಗೆಲ್ಲ ಸುಂಕವಿಲ್ಲದೆ.. ಕೊನೆಗೆ-ಕೊನೆ!!

Oh My God, Sorry ಏನ್ ಮಾತಾಡ್ಬೇಕು ಅಂದ್ಕೋತೀನೊ.. ಅದು ಮರೆತುಹೋಗಿ ಮತ್ತೆ-ಮತ್ತೆ ನನ್ನ ದು:ಖವನ್ನು ಮರು ನೆನಪಿಸಿಕೊಳ್ತೀನಿ! ನಿಮಗೆಲ್ಲ ಒಂದು good news ಹೇಳ್ಬೇಕು.? ಇವತ್ತು ನನ್ನ ಬದುಕಿನ ಮಹತ್ತರವಾದ ಕ್ಷಣಗಳು. ಅದೇನೆಂದರೆ... ಒಬ್ಬ ಯುವ ಪ್ರೇಮಿ ತನ್ನ 'ಪ್ರಿಯ'ತಮೆಗೆ ಒಲವ ಕಾಣಿಕೆಯಾಗಿ ನನ್ನ ಅವಳ ಕೈ ಗಿತ್ತು propose ಮಾಡಿ ಅವಳು ಕೂಡ ಹೂಂ ಗುಟ್ಟಿ... ಅವನಿಗೊಂದು (ನನಗೊಂದು?) ಏನ್ guess ಮಾಡಿ?..... ಹ್ಹ..ಹ್ಹ..ಹ್ಹಾ! ಅದೇ ರೀ ಮುತ್ತು! ಕೊಟ್ಟು, ನನ್ನ ಬಹಳ ದಿನ ಕಾಪಾಡಿಕೊಂಡು ಬಂದ ಅವಳ ಹೆಸರು 'ಪ್ರಿಯ' ಅಂತ..!

R – U Interested? Then ok lets start this story…!!??

ನಾನು village ಇಂದ city ಗೆ ಬಂದ ತಕ್ಷಣ.. ಒಬ್ಬ 'ಹೂ'ಮಾರುವಾತ ನನ್ನ ಒಂದು cover ನಲ್ಲಿ pack ಮಾಡಿ ಇಟ್ಟಿದ್ದ..! ಏನ್ ಬಿಸಿಲು ಅಂತೀರ?! ನನ್ ಜೀವ ಇಲ್ಲೆ ಹೋಯ್ತು ಅಂದ್ಕೊಂಡಿದ್ದೆ. ತಿರುಗಿ ನೋಡ್ತೀನಿ.. ಪುಶ್-ಪುಶ್ ಅಂತ ನೀರನ್ನ ಚುಮುಕಿಸಿದ! ಬಾಯಾರಿದ್ದ ನನಗೆ ಜೀವ ಮರುಕಳಿಸಿ ಬಂದಂತಾಗಿ.. ನಿಟ್ಟುಸಿರು ಬಿಟ್ಟು ಕುಳಿತೆ.. ನಂಗೊತ್ತಿತ್ತು.. ಇವ ನನ್ನ ಸಂಪಾದನೆಗೋಸ್ಕರ ಯಾರಿಗಾದರು ಮಾರಲು ಇಟ್ಟಿದ್ದಾನೆ ಅಂತ!. ಇಲ್ದಿದ್ರೆ.. ಸಾಯಂಕಾಲ.. ಅಧೋಗತಿ ಅಂತ!! ಅಂತೂ... ಇಂತೂ... ಒಬ್ಬಾತ ಬಂದು 20Rs.. ಗೆ ನನ್ನ ಅವನ ಕೈಗಿತ್ತ!... ಡಬ್ಬಾ ನನ್ ಮಗ... ತೋಟದಲ್ಲಿ ನನ್ನ ಬೆಳೆಸಿದವರಿಗೆ.. ಪ್ರತಿ ಗುಲಾಬಿಗೆ 50 ಪೈಸೆ ಕೊಟ್ಟು ಇಲ್ಲಿಗೆ ತಗೊಂಡು ಬಂದು 20Rs.. ಗೆ ಮಾರುತ್ತಾ ಇದ್ದಾನಲ್ಲ! ಎಷ್ಠು ವಿಚಿತ್ರ! ಸರಿ ಬಿಡಿ. ಮಾಡ್ದೋರ್ ಪಾಪ, ಆಡ್ದೋರ್ ಬಾಯಲ್ಲಿ ಅಂತ ನನ್ ಬಾಯಿಂದಾನೂ.. ಅದು ಬಂದ್ ಬಿಡ್ತು! Anyway ಇದ್ರಲ್ ನಂಗೇನ್ ಪಾಲು ಬಂತು? ನಂದ್ ಬರಿ problems ತಾನೆ? ಅಂದಹಾಗೆ... ನನ್ನ purchase ಮಾಡಿದ ವ್ಯಕ್ತೀನೆ ಆ 'ಪ್ರಿಯ'ಳ ಲವ್ವರ್! 'ಸುರೇಶ್'ಅಂತ. nice boy! smart ಆಗಿ ನನ್ ಜೇಬಲ್ ಇಟ್ಕೊಂಡು two wheeler ಅವನ pulsar ನಲ್ಲಿ ನನ್ನ ಸುಮಾರು 20 ನಿಮಿಷ ಕರೆದುಕೊಂಡು ಹೋದ...?!

ಅಲ್ಲಿ ಒಂದ್ಕಡೆ ಗಾಡಿ ಪಾರ್ಕ್ ಮಾಡಿ ಅಲ್ಲೆ ಗೊಣಗಿಕೊಳ್ಳುತ್ತಿದ್ದ 'ಪ್ರಿಯ'. 5:30 ಆಯ್ತಾ ಬಂತು. ಬರ್ತಾಳೊ ಇಲ್ವೊ? ಈ ಸಂಜೆ ಟೈಮಲ್ಲಿ..?? ಛೇ...!! ನಾನೆಂತಾ ಮೂಢ! ಆದ್ರು... ಅವಳು ಬರ್ತೀನಿ ಅಂತ ಹೇಳಿದ್ದಾಳಲ್ಲ.! ಫೋನ್ ಮಾಡಿದ್ರೆ ಬೇಜಾರ್ ಮಾಡ್ಕೊ ಬಹುದು. ನೋಡೋಣ ಇಲ್ಲೆ ಕಾದು. ಬರಲಿಲ್ಲ ಅಂದ್ರೆ ನಾಳೆ ಟ್ರೈ ಮಾಡಿದ್ರಾಯ್ತು.
'ಪ್ರಿಯ' ಐ ಲವ್ ಯು.. ಪ್ರಿಯ ನೀನು ಬರ್ತಿಯಾ ಅಂತ ನನ್ನ ಹೃದಯ Message ಮಾಡ್ತಾ ಇದೆ. ನನ್ನ ಎದೆ
ಬಡಿತ ಕ್ಷಣ-ಕ್ಷಣಕ್ಕು ಜಾಸ್ತಿ ಆಗ್ತಾ ಇದೆ. ಇದರ ಅರ್ಥ ನೀನು ಇಲ್ಲೆ ಎಲ್ಲೊ ಹತ್ರದಲ್ಲೆ ಇದೀಯ ಅಂತ ಅನ್ಸುತ್ತೆ. ನನ್ನನ್ನು ಜೇಬಿನಿಂದ ಹೊರ ತೆಗೆದು, ಕೈಯ ಬೆರಳಿನಲ್ಲಿ ನನ್ನ ಹಾಗೆ ಹಿಂದೆ-ಮುಂದೆ ತಿರುಗಿಸುತ್ತ ಗಡಿ-ಬಿಡಿಯಲ್ಲಿರುವಂತೆ ಅತ್ತಿಂದಿತ್ತ ತಿರುಗಾಡುತ್ತ, ತಿರುಗಿ ಮತ್ತೆ-ಮತ್ತೆ, ಅವಳ ಎದುರು ನೋಡುತ್ತಲಿದ್ದವನಿಗೆ ಸರಿಯಾಗಿ 5:45 ರ ಆಸು-ಪಾಸಿನ ವೇಳೆಯಲ್ಲಿ ಪಿಂಕ್ ಚೂಡಿದಾರ್ ಹಾಕಿಕೊಂಡಿದ್ದ, ತೆಳ್ಳನೆ-ಬೆಳ್ಳನೆಯ ಹುಡುಗಿ ಇವನೆಡೆಗೆ ಸರ-ಸರನೆ ಬರುತ್ತಿದ್ದಂತೆ ಇವನ ಉತ್ಸಾಹಕ್ಕೆ ಪಾರವೇ ಇಲ್ಲದಂತಾಗಿ, ನನ್ನನ್ನೊಮ್ಮೆ ಮೆಲ್ಲನೆ ಅದುಮುತ್ತ., ಮತ್ತೆ ನನ್ನನ್ನು ಅವನ ಬೆನ್ನ ಹಿಂದೆ ಸರಿಸಿ, ಅವಳ ಬರುವಿಕೆಗೆ ಕಾದು ನಿಂತ..!

ಬಂದವಳೆ "Hi Suresh, How r u? Sorry I am late!"

“Its fine, Anyway thanks for coming, and HAPPY BIRTHDAY; I wish you all the happiness in your life, and This ROSE is for you! ಅಂತ ನನ್ನನ್ನು ಅವಳ ಮುಂದಿರಿಸಿ.. ಸಂಕೋಚದಿಂದ, ಧೈರ್ಯ ಮಾಡಿ "I LOVE YOU" ಅಂತ ಹೇಳಿ ಬಿಟ್ಟ..

ಅದಕ್ಕವಳು "ಸುರೇಶ್ ??"

ಇವನು "ಹೌದು, ಹೇಳು-ನನ್ನ ಪ್ರೀತಿಸ್ತೀಯ-ಪ್ರೀತಿಸ್ತಿದ್ದೀಯ ಅಲ್ವ??"

ನನ್ನನ್ನು ಆಕೆ ಕೈಯಲ್ಲಿ ಹಿಡಿದುಕೊಂಡು ನನ್ನ ಒಂದ್ಸಾರಿ ನೋಡಿ... ಕೆಲ ಸೆಕೆಂಡುಗಳ ಕಾಲ ಅವನನ್ನೆ ನೋಡ್ತಾ... ಹತ್ತಿರ ಹೋಗಿ ಅವನ ಕಣ್ಣುಗಳನ್ನೆ ದಿಟ್ಟಿಸುತ್ತ.. ಅದುರುತ್ತಿದ್ದ ಜೀವಗಳೆರೆಡು.. ಅಧರದ ಸ್ಪರ್ಶ ಚುಂಬನದಿಂದ....ಒಂದಾಗಿ... ಮತ್ತೆ... ಹಿಂದೆ ಸರಿದು...ಮತ್ತೆ... ತೋಳ ಬಂದನದಿಂದ ಬಿಗಿದಪ್ಪಿ ಎರಡು ದೇಹಗಳು ಒಂದಾಗುತ್ತಿದ್ದಂತೆ, ಮಿಡಿವ ಹೃದಯಗಳ ಸದ್ದು ಒಂದೇ ತೆರೆನಾಗಿ ಡವ..ಡವ..ಡವ..ಡವಾ.... ಎನ್ನುತ್ತಿದ್ದವು..!!

ಮೌನದಲ್ಲೆ ಕುಳಿತ ಇಬ್ಬರು.. ಅವನ ತೆಕ್ಕೆಯಲ್ಲಿ ಬಲೆಗೆ ಬಿದ್ದ ಮೀನಂತಾಗಿದ್ದಳು! ವಿಲ-ವಿಲನೆ.. ನಲಿವಿನ ಸುಖದಲ್ಲಿ ಒದ್ದಾಡುತ್ತಿದ್ದಳು. ಅವನು ಕೂಡ, ಗೆಲುವಿನ ನಗೆಯೊಂದಿಗೆ, ಬೀಗುತ್ತಲ್ಲಿದ್ದ.. ಕಣ್ಮುಚ್ಚಿಕೊಂಡು ಮೌನರಾಗ ಸಾಗುತ್ತಲಿತ್ತು.. ಬಡಪಾಯಿ ನಾನು ನೋಡುತ್ತಲಿದ್ದೆ..!

ಸುರೇಶ್

ಏನು?

ಸಮಯ 6:30 ಆಯ್ತಾ.. ಬಂತು ನಾನು ಹೊರಡಬೇಕು.

ಸರಿ, ನಾಳೆ ಸಿಗ್ತೀಯ ಅಲ್ವ?

"ಖಂಡಿತ"

ಬೇರೆ ಯಾವ ಮಾತು ಆಡದೆ, ನನ್ನನ್ನು ಆಕೆ ತಲೆ-ಮೇಲೆ ಹೇರ್ಪಿನ್ಗೆ ಸಿಗಿಸಿ, ಹೊರಟು ನಿಂತವಳಿಗೆ, ಸುರೇಶನೇ ತನ್ನ ಗಾಡಿಯಲ್ಲಿ ಅವಳ ಮನೆಯ ಹಿಂದಿನ ಗಲ್ಲಿಯವರೆಗೂ ಡ್ರಾಪ್ ಮಾಡಿ, ಮುಗುಳುನಗುತ್ತ, ಬಲಕಣ್ಣನೊಮ್ಮೆ ಮಿಟುಕಿಸಿ, ಸನ್ನೆಮಾತುಗಳಲ್ಲೆ ಬೀಳ್ಕೊಡುತ್ತ, ಅವಳು ಗಲ್ಲಿಯಿಂದ ಮರೆಯಾಗುವವರೆಗು.. ಇವಳನ್ನೆ ನೋಡುತ್ತ, ಕೈಬೀಸಿ ಟಾಟಾ ಮಾಡುತ್ತ, ಭಾರವಾದ ಅವನ ಮನಸ್ಸು.. ನಾಳೆವರೆಗೂ ಕಾಯುವ ತವಕದೊಂದಿಗೆ... ಮರೆಯಾಗಿಹೋದ..!!!

ಇನ್ನು ಈಕೆಯ ಸರದಿ..!!??

ಬಂದವಳೇ... ಸರ-ಸರನೆ ರೂಮಿನೊಳಗೆ ಬಂದು ಕನ್ನಡಿಯ ಮುಂದೆ ನಿಂತುಕೊಂಡವಳು.. ರಾತ್ರಿಯ ಹುಣ್ಣಿಮೆಯ ಚಂದ್ರನಂತೆ ಕಂಗೊಳಿಸುತ್ತಿದ್ದಳು. ತನ್ನನ್ನೇ ನೋಡುತ್ತಿದ್ದವಳಿಗೆ ನಾಚಿಕೆಯಾಗಿರಬೇಕು ಹಾಗೆ, ತುಟಿಯರಳಿಸಿ ಒಮ್ಮೆ ನಕ್ಕಳು... ತುಟಿಗಳೆರಡನ್ನು ತನ್ನ ನಾಲಿಗೆಯಿಂದ ಒಮ್ಮೆ ಸವರುತ್ತ.. ಪಿಳ-ಪಿಳನೆ ಕಣ್ಗಳ ರೆಪ್ಪೆಗಳನ್ನು ಬಡಿಯುತ್ತ.. ಮೆಲ್ಲನೆ ತನ್ನ ಕೈಗಳಿಂದ ನನ್ನನ್ನು ಮುಡಿಯಿಂದ ಕೆಳಗಿಳಿಸಿ, ನನ್ನನ್ನೆ ನೋಡುತ್ತಿದ್ದಳು, ಹಾಗೆ ಮೆಲ್ಲನೆ ನಡೆದುಕೊಂಡು ಹೋಗಿ ಒಂದು ಗ್ಲಾಸಿನಲ್ಲಿ, ನೀರನ್ನು ತಂದು ಅದರಲ್ಲಿ ನನ್ನನ್ನು ಇಳಿ-ಬಿಟ್ಟಳು.! ನಾನು ಬದುಕಿದೆಯ ಬಡಜೀವವೆ, ಅಂತ ಆಯಾಸವಾಗಿದ್ದ ನನಗೆ, ಸ್ವಲ್ಪ ಹಾಯೆನಿಸಿತು..

ಇವಳಾಗಲೆ ಊಟ ತಿಂಡಿ ಎಲ್ಲಾ ಮರೆತವಳಂತೆ ಅಲ್ಲೆ ಹಾಸಿಗೆ ಮೇಲೆ, ತಾನು ಸುರೇಶನನ್ನು ಮೀಟ್ ಮಾಡಲು ಬಂದಾಗ ತಂದಿದ್ದ ಪರ್ಸನ್ನು ಒಮ್ಮೆ ಇಣುಕಿ ನೋಡುತ್ತ, ತೆರೆದಿಡಬೇಕಾದ ವಸ್ತುಗಳಿಗೆ ಕೈಯಾಡಿಸುತ್ತಿದ್ದಾಗ, ಮಡಚಿ ಇಟ್ಟಿದ್ದ ಒಂದು ಪೇಪರ್ ಅನ್ನು ತೆಗೆದು ಆಶ್ಚರ್ಯವಾಗಿ ನೋಡುತ್ತ, ಸುರೇಶನದು ಎಂದು ತಿಳಿದು. ಓಡಿ ಬಂದು ಕದವನ್ನು ಮುಚ್ಚಿ, ಮತ್ತದೆ ಪೇಪರ್ ತೆಗೆದುಕೊಂಡು ಓದತೊಡಗಿದಳು...

'ಪ್ರಿಯ' ನಿನ್ನ ಪ್ರೀತಿಯ ಸುರೇಶ್,
ನನ್ನ ಪ್ರೀತಿಯನ್ನು ನೀನು ಒಪ್ಪುತ್ತೀಯ ಎಂದು ಬಲವಾದ ನಂಬಿಕೆಯೊಂದಿಗೆ, ಈ ಪತ್ರ ನಿನಗೆ ತಿಳಿಯದಂತೆ
ನಿನ್ನ ಪರ್ಸ್ ನಲ್ಲಿಟ್ಟೆ, ಇಲ್ಲ ಅಂತ ಹೇಳಿದ್ದಿದ್ರೆ, ನಿನ್ನ ಕೈಗೆ ನನ್ನ ಇನ್ನೊಂದು ಪತ್ರ ನಿನಗೆ ನೀಡುತ್ತಿದ್ದೆ.?! ಬೇಡ ಬಿಡು ಎಲ್ಲಾ ಒಳ್ಳೆಯದೆ ಆಯ್ತು! ನೀನು ಈ ಪತ್ರ ಓದ್ತಾ.. ಆಶ್ಚರ್ಯದ ಜೊತೆಗೆ, ಖುಷಿಯು ಕೂಡ ಆಗ್ತಿದೆ ಅಂದ್ಕೊಂಡಿದ್ದೀನಿ, ನಾಳೆ ಸಿಗ್ತೀಯಲ್ಲ ಎಲ್ಲಾ ಹೇಳು!? ಕೆಲವು ಅಭಿಪ್ರಾಯಗಳನ್ನು ಮನಸ್ಸಿನಿಂದ, ನಾಲಿಗೆಗೆ ತರಲಾಗದೆ ಮನಸ್ಸಿನಲ್ಲೆ ಹುಟ್ಟಿ-ಸಾಯುವ ಎಷ್ಟೊ ಭಾವನೆಗಳಿಗೆ, ಬರವಣಿಗೆಯಾಗಿ ಆದಷ್ಟು ಹೆಕ್ಕಿ ಇಡುವ ನಾನು, ಮಾತಿನಲ್ಲಿ ಹೇಳಲಾಗದ ಕೆಲವು ಅಭಿಪ್ರಾಯಗಳನ್ನು ಪತ್ರದಲ್ಲಿ ಬಿತ್ತರಿಸಿದ್ದೀನಿ.

-ಜೋರಾಗೇ ಎತ್ತರದ ದನಿಯಲ್ಲಿ ಓದುತ್ತಿದ್ದ ಇವಳು, ಮೆಲ್ಲನೆ ಸುಮ್ಮನಾಗಿ ಬಾಗಿಲ ಕಡೆ ನಡೆದು ಕದ ಸರಿಸಿ ಅಮ್ಮಾ., ನಂಗೆ ಊಟ ಬೇಡ, ನಿದ್ದೆ ಬರ್ತಾ ಇದೆ, Good Night ಅಂತ ಎತ್ತರದ ದನಿಯಲ್ಲಿ ಕೂಗಿ ಅಮ್ಮನ ಪ್ರತಿ ಮಾತಿಗೆ ಉತ್ತರ ನೀಡದೆ, ಬಾಗಿಲನ್ನು ಭದ್ರ ಪಡಿಸಿ, ಮತ್ತೆ ಪತ್ರವನ್ನು ಕೈಯಲ್ಲಿ ಹಿಡಿದು ಮುಂದಿನದನ್ನು ಓದತೊಡಗಿದಳು...

'ಪ್ರಿಯ' ಇಬ್ಬರಲ್ಲೂ ಮೊದಲ ನೋಟದಿಂದಾನೆ ಅಲ್ವ? ಮೌನ, ಕಿರುನಗೆಯೊಂದಿಗೆ ಕಾಲೇಜಿನ ಆ ದಿನಗಳಲ್ಲಿ, ಪರಿಚಯದ ಗರಿಕೆ ಚಿಗುರಿ, ಸ್ನೇಹದ ಮೊಗ್ಗರಳಿ(ಅದಾಗಲೆ ನನ್ನಲ್ಲಿ ಪ್ರೀತಿ ಕೂಡ ಮನೆಮಾಡಿ) ಇಬ್ಬರು.. ಒಂದಾಗಿ.. Good and Bad share ನಲ್ಲಿ ನನ್ನ-ನೀನು, ನಿನ್ನ-ನಾನು ಸಂತೈಸಿದ್ದು, ಸತಾಯಿಸಿದ್ದು, ಜಗಳ-ರಗಳೆ, ಕೋಪ, ಮೌನ, ಅನುಮಾನ, ಅನುಕಂಪ, ಹೊಗಳಿಕೆ, ವಾವ್! .. ಎಷ್ಠೆಲ್ಲಾ...???

ಇವಳು.. ಹಾಗೆ ಪೇಪರನ್ನು ತನ್ನ ಎದೆಯಮೇಲೆ ಇಟ್ಟುಕೊಂಡು ಕೆಲ-ಕ್ಷಣ ಮೌನದಿಂದ ತನ್ನ ನೆನಪುಗಳ ಬುತ್ತಿಗಳನ್ನು ಬಿಚ್ಚಿ, ನೆನಪಿಗೆ ತಂದುಕೊಂಡ ಆ ಎಲ್ಲಾ ಒತ್ತಡಗಳನ್ನು ಹುಡುಕುತ್ತಿರುವಂತೆ... ನಗುತ್ತ... ಮತ್ತೆ ಮೌನ ವಹಿಸಿ, ಮತ್ತೆ ಉಸ್ಸೆಂದು ಗ್ಲಾಸಿನಲ್ಲಿದ್ದ ನೀರನ್ನು ಕುಡಿದು, ಮತ್ತೆ ಓದತೊಡಗಿದಳು..

ನಿನ್ನ ಮನದ ನಿರೀಕ್ಷೆ ನನಗೆ ಹೇಗೆ ತಾನೆ ತಿಳಿಯಲು ಸಾಧ್ಯ? ಹಾಗೆ ನಿನgU ಕೂಡ!? ಆದರೆ ನನ್ನಲ್ಲಿ ಆಗುತ್ತಿದ್ದ ಬದಲಾವಣೆಗಳು ನೂರಷ್ಟಿದ್ದವು. ನಿನ್ನ ನೋಡುವ ತವಕ, ಮಾತಾಡುವ ತವಕ, ಎಲ್ಲಾ ಮಾತುಗಳನ್ನು ಹೇಳಿ ಬಿಡುವ ತವಕ, ಆದರೆ ಅದು ಸಾಧ್ಯವಾಗಿರಲಿಲ್ಲ. ಅಂಜುತ್ತಿದ್ದೆ-ಹೆದರುತ್ತಿದ್ದೆ-ನೀ ನನ್ನಿಂದ ದೂರವಾಗಿಬಿಡುತ್ತೀಯ ಎಂದು,
ಆದರು ಕಾಯುವ ಆ ಪ್ರತಿ ಕ್ಷಣದಲ್ಲು.. ಒಲವ ನೋವು ಬಹಳ ಹಿತವೆನಿಸುತ್ತಿತ್ತು! ನಿನ್ನ-ನಗು, ನಿನ್ನ-ಮಾತು, ನಿನ್ನ-ನಡೆ, ನಿನ್ನ-ಬಿಚ್ಚು ಮನದ ಮಾತುಗಳ ಎಲ್ಲಾ.. ಒತ್ತುಗಳಿಗು, ನಾನು ಪೂರ್ಣವಿರಾಮ ಆಗಿಬಿಡುತ್ತಿದ್ದೆ.!

ಹೀಗೊಂದು ಜಯ ನನ್ನ ಪಾಲಿಗೆ ಒಲಿದು ಬಂದಿದೆ. ಅದು ನೀನು ನನ್ನ ಬಾಳಿಗೆ, ಬಾಳಿನ ಸಂಗಾತಿಯಾಗಿ ಒಪ್ಪಿದ್ದಕ್ಕೆ. ನಾನೆಂದೂ.. ನಿನಗೆ ಚಿರಋಣಿ. ಒಲವು ನೀ ಒಪ್ಪಿದ ಮರುಕ್ಷಣವೆ ಒಡಲು ತುಂಬಿ ಇವತ್ತಿನ ರಾತ್ರಿ ಊಟ ಬೇಡವಾಗಿ, ತಂಗಾಳಿಯ ಮಧುರ ಸ್ಪರ್ಶದ ಹಿತವಾದ ಬಾವದಿಂದ ಬೆಳದಿಂಗಳ ತಂಪಿನಲ್ಲಿ, ನಿನ್ನ ಪ್ರೀತಿಯ ಪುಟ್ಟಕಾಣಿಕೆ ಸಲ್ಲಿಸಿ, ಮನದ ಖುಷಿಯೆಲ್ಲ.. ನನ್ನವರಿಗೆ ತಿಳಿಸಿ, ಆನಂದದಿಂದ, ಸಡಗರದಿಂದ, ಸಂಭ್ರಮೊಲ್ಲಾಸದಿಂದ, ನಾಳೆಯ ಎರಡನೆ ಒಲವ ಭೇಟಿಗೆ ಕಾಯುತ್ತಿರುವೆ.. ಅಲ್ಲಿವರೆಗೂ ನನ್ನ ಪ್ರೀತಿಯ ಆಪ್ತತೆಯ ತೆಕ್ಕೆಯೊಳಗೆ ನೀ ಬೆಚ್ಚಗೆ ಮಲಗಿರು..! ನಿನ್ನ ಪ್ರೀತಿಯ.. ಸುರೇಶ್.

ಶುರು ಆಯ್ತು..!? ನಿದ್ದೆ ಬರ್ತಾ ಇಲ್ಲ, ಒದ್ದಾಡ್ತಾ ಇದ್ದಾಳೆ! ಆ ಪೇಪರ್ ಮಡಚಿ ಅದಕ್ಕೊಂದು ಮುತ್ತಿಟ್ಟು, ತನ್ನ ಬೀರುವಿನ ಒಂದು ಕಡೆ ಬಚ್ಚಿಟ್ಟು, ರಾತ್ರಿಯೆಲ್ಲ ಐದಾರು ಸಲ ಎದ್ದು, ನಿದ್ದೆಯಲ್ಲೂ.. ಕೂಡ ಸುರೇಶ್-ಸುರೇಶ್ ಅಂತ ರೊಮ್ಯಾಂಟಿಕಾಗಿ ಮತ್ತೆ.. ಮೌನವಾಗಿ.. ಅಯ್ಯೋ.. ಬೇಡಪ್ಪ! ಬೆಳಿಗ್ಗೆ 6:00 ಗಂಟೆಗೆ ಹೋದವಳು ರಾತ್ರಿ 9:00ಕ್ಕೆ ಬಂದಳು!. ಹೊರಡೊ ಮುಂಚೆ ನನ್ನನ್ನು ಅಮ್ಮನ permission ನ ಮೇರೆಗೆ, fridge ನಲ್ಲಿ ಇಟ್ಟು (ಇಲ್ಲಾಂದ್ರೆ ಒಣಗಿಬಿಡುತ್ತೆ ಅಂತ) ಅಮ್ಮನಿಗೆ ಮತ್ತೆ ಹೇಳಿ, ಎಲ್ಲೂ ಎಸೆಯ ಬೇಡ ಅಂತ ಮತ್ತೆ ಅಡಿಗೆ ಮನೆಯಲ್ಲಿದ್ದ ಅಮ್ಮನಿಗೆ ಕೂಗಿ ಹೇಳಿ, ಮತ್ತೆ ಬಂದು fridgeನಿಂದ ತೆಗೆದು ನನ್ನ ನೋಡಿ, ಎರಡು ಕಣ್ಗಳಿಂದ ಕಣ್ಣು ಮಿಟುಕಿಸಿ, ಕಿರು ನಗೆಯೊಂದಿಗೆ ಹೊರಟು ಹೋದಳು..!!

ಬಹಳ ದಿನಗಳ ನಂತರ, ಕೊನೆಯ ಆ ದಿನ fridge ನಿಂದ ಹೊರತೆಗೆದು, ಇಷ್ಠುದಿನ ನನ್ನ fridge ನಲ್ಲೆ ನಾನು ಬಾಡಿಹೋಗದಂತೆ ಕಾಪಾಡಿ ಕೊಂಡು ಬಂದ ಅವಳಿಗೆ ನಾನು ಮನಸ್ಸಿನಲ್ಲೆ ಧನ್ಯವಾದಗಳನ್ನು ಅರ್ಪಿಸಿ, ಅದಾಗಲೆ ನನ್ನ ಜೀವ-ನಿರ್ಜೀವವಾದ ಪರಿಸ್ಥಿತಿಗೆ ಬಂದು ತಲುಪಿದ್ದರಿಂದ, ಅವಳ ಕಣ್ಗಳಲ್ಲು ನನ್ನ ತೊರೆಯುವ ಮನಸ್ಸಾಗದೆ, ಕೊನೆಯ ಮುತ್ತೊಂದು ಕೊಟ್ಟು! Red Rose ನನ್ನ ಪ್ರೀತಿ ಇವತ್ತಿಗೆ ನಿಶ್ಚಿತಾರ್ಥದೊಂದಿಗೆ ಹೊಸ ಅಧ್ಯಾಯ ಆರಂಭವಾಗಿದೆ (ನನ್ನ ಅಧ್ಯಾಯ ಮುಕ್ತಾಯವಾಗಿದೆ) ಅವನ-ನನ್ನ ಪ್ರೀತಿಗೆ ಸಂಕೇತವಾಗಿ ಇಷ್ಟುದಿನ ನನ್ನ ಜೊತೆ ಇದ್ದುದಕ್ಕೆ thanks ಅಂತ ಹೇಳಿ ಅವಳ ಮನೆಯ ಹಿತ್ತಲಿನಲ್ಲಿ ಪುಟ್ಟದಾದ ಹೂ-ಗಿಡಗಳ ತೋಟದಲ್ಲಿ, ನೆಲದ ಸ್ವಲ್ಪ ಮಣ್ಣುತೆಗೆದು ನನ್ನನ್ನು ಅಲ್ಲಿ ಇಟ್ಟು, ಕೊನೆಯ ಕಿರುನಗೆಯೊಂದಿಗೆ ಮಣ್ಣು ಮುಚ್ಚಿದಳು.. (ಕಣ್ಣೀರು).....

(ಆತ್ಮ) ನನ್ನ ಪ್ರೀತಿಯ ಓದುಗರೆ, ಈ ಗುಲಾಬಿಯನ್ನು ನೀವೆಲ್ಲರೂ ಪ್ರೀತಿಸ್ತೀರಾ ಅಂತ ತಿಳಿದು, ಕೆಲ-ಕಾಲದವರೆಗೂ ನನ್ನನ್ನು ನಿಮ್ಮ ನೆನಪಿನಲ್ಲಿ ಮರೆಯದೆ, ಕರುಣೆಯಿಂದ ನನ್ನ ಆತ್ಮಕ್ಕೆ ಶಾಂತಿ ಕೋರುವಿರೆಂದು ಭಾವಿಸುತ್ತ, ನಿಮ್ಮ ಪ್ರೀತಿಗೂ ಜಯವಿರಲಿ ಎಂದು ಆಶಿಸುತ್ತ, ನಿಮ್ಮ 'ಪ್ರಿಯ'ತಮಳಿಗೆ ನನ್ನನ್ನೆ ಉಡುಗೊರೆಯಾಗಿ ಕೊಡಿ.! ಮತ್ತೆ ನಿಮ್ಮ ಕಥೆಗಳನ್ನು ಬಿಚ್ಚಿಡುತ್ತ ನನ್ನ ಪ್ರತಿ ಸಂತಾನವು ನಿಮ್ಮಗಳ ಒಲವಿಗೆ-ಗೆಲುವಾಗಿರುತ್ತೇವೆ ಎಂಬ ಭರವಸೆಯೊಂದಿಗೆ... ನಿಮ್ಮ ಕೆಂಪುಗುಲಾಬಿ.

ಲೇಖಕರು

ಯೋಗೇಶ್

ನಿನಗೇಳದ ಮಾತೊಂದು ಮನದ(ನ)ಲ್ಲೆ ಉಳಿದಿದೆ.

ಅನಿಸಿಕೆಗಳು

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಧ, 04/08/2009 - 14:57

ಚೆನ್ನಗಿದೆ..

ರಾಜೇಶ ಹೆಗಡೆ ಶುಕ್ರ, 04/10/2009 - 07:02

ಹಾಯ್ ಯೋಗೇಶ್ ಅವರೇ,

ಒಂದು ಗುಲಾಬಿಯ ದೃಷ್ಟಿಕೋನದಲ್ಲಿ ಪ್ರೀತಿಸುವವರ ಕಥೆ ಹೇಳಿರುವ ಈ ಪ್ರಯತ್ನ ಚೆನ್ನಾಗಿದೆ. :)

ಅಳಗಂಚಿ ಮಹೇಶ (ಪ್ರಮಾಣಿಸಲ್ಪಟ್ಟಿಲ್ಲ.) ಧ, 04/15/2009 - 10:04

:) ಯೋಗೀಶ್ ನಿಜವಾಗ್ಲೂ ನಿನ್ನೊಳಗೊಬ್ಬ ಒಳ್ಳೆಯ ಕವಿ, ಕಥೆಗಾರ ಇದ್ದಾನೆ, ಆದರೆ ನೀನು ನಿನ್ನ ಸುತ್ತಲೂ ಗೆರೆ ಎಳೆದುಕೊಂಡು ಕುಳಿತಿದ್ದೀಯಾ, ಕೂಪಮಂಡೂಕದಂತಿದ್ದೀಯಾ (ದಯವಿಟ್ಟು ಬೈದುಕೊಳ್ಳಬೇಡ) ಅಲ್ಲೇ ಕುಳಿತು ಇಷ್ಟೆಲ್ಲಾ ಸಾಧನೆ ಮಾಡುವ ನೀನು ಹೊರಗೆ ಬಂದರೆ ಖಂಡಿಯಾ ಜಯ ಕಾಣುತ್ತೀಯಾ. ನಿನ್ನ ಮುಂದಿನ ಬದುಕಿನ ಯಶಸ್ಸಿಗೆ ಹಾರೈಕೆಯಿದೆ.

ಪ್ರೀತಿಯಿಂದ, ಅಳಗಂಚಿ ಮಹೇಶ 8)

MAHESHA.A.M ಧ, 04/15/2009 - 10:14

ಯೋಗೀಶ್ ನಿಜವಾಗ್ಲೂ ನಿನ್ನೊಳಗೊಬ್ಬ ಒಳ್ಳೆಯ ಕವಿ, ಕಥೆಗಾರ ಇದ್ದಾನೆ, ಆದರೆ ನೀನು ನಿನ್ನ ಸುತ್ತಲೂ ಗೆರೆ ಎಳೆದುಕೊಂಡು ಕುಳಿತಿದ್ದೀಯಾ, ಕೂಪಮಂಡೂಕದಂತಿದ್ದೀಯಾ (ದಯವಿಟ್ಟು ಬೈದುಕೊಳ್ಳಬೇಡ) ಅಲ್ಲೇ ಕುಳಿತು ಇಷ್ಟೆಲ್ಲಾ ಸಾಧನೆ ಮಾಡುವ ನೀನು ಹೊರಗೆ ಬಂದರೆ ಖಂಡಿಯಾ ಜಯ ಕಾಣುತ್ತೀಯಾ. ನಿನ್ನ ಮುಂದಿನ ಬದುಕಿನ ಯಶಸ್ಸಿಗೆ ಹಾರೈಕೆಯಿದೆ.

ಪ್ರೀತಿಯಿಂದ, ಅಳಗಂಚಿ ಮಹೇಶ 8)

januuuuuuu (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 12/18/2009 - 18:05

chennagi nivu tunba chennagi kavitena baritira nanagantu nima kavite oduvudedara inshano insha.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.