Skip to main content

ವೊಡಾಫೋನ್-ನ ಯಡವಟ್ಟುತನ

ಬರೆದಿದ್ದುApril 5, 2009
3ಅನಿಸಿಕೆಗಳು

ತ್ತೀಚಿಗೆ ವೊಡಾಫೋನ್ ರವರ "ಟೆಲಿ ಮಾರ್ಕೆಟಿಂಗ್" ಕರೆಗಳು ತಮಿಳಿನಲ್ಲಿ ಬರ್ತಿವೆ.
ಇದನ್ನು ನನ್ನ ಗೆಳೆಯರಲ್ಲಿ ಮತ್ತು ಸಹೋದ್ಯೋಗಿಗಳಲ್ಲಿ ಕೇಳಿದಾಗ ಅವರಿಗೂ ಇದೇ ರೀತಿಯ ಕರೆಗಳು ಈಗಾಗಲೇ ಬಂದಿದ್ದು ತಿಳಿದು ಬಂತು.
ವೊಡಾಫೋನ್ ಗ್ರಾಹಕರು ಮಾತ್ರವಲ್ಲದೆ, ಇತರೆ ಕಂಪೆನಿಗಳ ಗ್ರಾಹಕರಿಗೆ ಕೂಡ ಈ ಕರೆಗಳು ಬರುತ್ತಿವೆ. ಅನೇಕ ಬಾರಿ ಇ೦ತಹ ಕರೆಯು ದೂರವಾಣಿ ಸಂಖ್ಯೆ 9886990208 ಇ೦ದ ಬರುತ್ತಿದ್ದು ಇದು ಕರ್ನಾಟಕದ್ದೇ ನಂಬರ್ ಎನ್ನುವುದು ಅಚ್ಚರಿಯ ಸಂಗತಿ.

ಇ೦ತಹ ಕರೆಗಳ ಕಿರಿಕಿರಿ ಈ ನಡುವೆ ಹೆಚ್ಚಾಗಿದೆ. ಈ ಕರೆಗಳಲ್ಲಿ ಯಾವುದಾದರೂ ಉಪಯುಕ್ತ ಮಾಹಿತಿ ಇದೆಯಾ ಅ೦ದರೆ ಅದೂ ತಿಳಿದುಕೊಳ್ಳಲು ಆಗುತ್ತಿಲ್ಲ.
ಕರ್ನಾಟಕಕ್ಕೆ ಹರಿದು ಬರುವ ಇ೦ತಹ ನೂರಾರು, ಸಾವಿರಾರು ಕರೆಗಳು ಕನ್ನಡದಲ್ಲಿರಬೇಕು ಅನ್ನೋ ತಿಳುವಳಿಕೆ ವೊಡಾಫೋನ್ ಗೆ ಇದ್ದ೦ತೆ ಕಾಣುತ್ತಿಲ್ಲ. ಕರ್ನಾಟಕದಲ್ಲಿ ವೋಡಾಫೋನ್ ರವರು ಅಳವಡಿಸಿಕೊ೦ಡಿರುವ ಈ ಹಮ್ಮುಗೆಯು (Strategy) ಕ೦ಪನಿಗೆ ಭಾರೀ ಪ್ರಮಾಣದ ನಷ್ಟ ಉ೦ಟುಮಾಡುವುದರಲ್ಲಿ ಸ೦ಶಯವಿಲ್ಲ.

ದಕ್ಷಿಣ ಭಾರತ ಎಂದರೆ ತಮಿಳು ಅಂತ ಮನಸ್ಸಿನಲ್ಲಿ ಇಟ್ಟುಕೊಂಡಿರುವ ವೊಡಾಫೋನ್, ಕನ್ನಡದ ಗ್ರಾಹಕನ ಹಕ್ಕನ್ನು ಕಡೆಗಣಿಸಿದೆ. ಒಟ್ಟಿನಲ್ಲಿ ಕನ್ನಡದ ಗ್ರಾಹಕನು ತನ್ನ ಹಣವನ್ನು ತಮಿಳಿನ ಜಾಹೀರಾತು ಕರೆಗಳಿಗೆ ಕೊಟ್ಟ೦ತಾಗಿದೆ.

’ಮಾರುಕಟ್ಟೆಯಲ್ಲಿ ಗ್ರಾಹಕನೇ ರಾಜ’ ಎ೦ಬ ಮಾತು ಬದಲಾಗಿಲ್ಲ ಮತ್ತದನ್ನು ಬದಲಾಯಿಸಲು ಹೋಗಬೇಡಿ ಎ೦ದು ಹೇಳಬೇಕಾಗಿದೆ. ಬನ್ನಿ, ಜಾಗೃತ ಗ್ರಾಹಕರಾಗಿ, ತಮಿಳು ಕರೆಗಳನ್ನು ನಿಲ್ಲಿಸಿ ಕನ್ನಡವನ್ನು ಬಳಸಿ ಎ೦ದು ತಿಳಿ ಹೇಳೋಣ. ಕರ್ನಾಟಕದ ಮಾರುಕಟ್ಟೆಯಲ್ಲಿ ವೋಡಾಫೋನ್ ಈಗಾಗಲೇ ಹಿ೦ದಿದೆ, ಮತ್ತು ಇದೇ ರೀತಿಯಲ್ಲಿ ತಮ್ಮ ತಮಿಳು ಕರೆಗಳನ್ನು ಮು೦ದುವರಿಸಿದರೆ ಕನ್ನಡದ ಗ್ರಾಹಕರು ಬೇರೆ ಕಂಪೆನಿಗಳ ಮೊಬೈಲು ಸೇವೆಗೆ ವಲಸೆ ಹೋಗುವುದು ಖಚಿತ.

ವೋಡಾಫೋನ್ ರವರಿಗೆ ಬದಲಾವಣೆಯ ಸಮಯ ಈಗ ಬ೦ದಿದೆ ಎ೦ಬ ಸ೦ದೇಶ ಕೊಡೋಣ.
ಇವರ ಮಿಂಚೆ: vodafonecare.kar@vodafone.com

ಲೇಖಕರು

ಪ್ರಿಯಾಂಕ್

ಸಮಯ ಸಿಕ್ಕಾಗ ತಿಳಿಸುತ್ತೇನೆ.
ಸದ್ಯಕ್ಕೆ ಕ್ಷಮೆ ಇರಲಿ.

ಅನಿಸಿಕೆಗಳು

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 04/06/2009 - 13:57

I have written a mail to vadafone. Thanks for highlighting!

konkubhatta ಮಂಗಳ, 04/07/2009 - 12:36

ಹೆಗಡ್ರೆ,

ಈ ಲೇಖನದ ಟೈಟಲ್ಲು ನೋಡಿದ ನನ್ನ ಮಿತ್ರನೊಬ್ಬ ವೊಡಫೋನ್ನವರ ಯಡವಟ್ಟನ್ನು "..........." ಅಂತ .........ಶಬ್ದದಲ್ಲಿ ಹೀಯಾಳಿಸುವದು .............. ಅಪರಾಧ ಅಂತ ಹೇಳಿದನಪ್ಪ.

ವಿಚಾರ ಮಾಡಿ ನೋಡಿ.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 04/07/2009 - 17:33

ಈ ವೊಡಾಫೋನ್ ಅನ್ನೋ ಹೆಸರೇ ಭಾರೀ ಯಡವಟ್ಟಿನದು. ಅದನ್ನು ಹೇಳಲು ನಮ್ಮಂಥ ಕನ್ನಡಿಗರಿಗೆ ನಾಲಿಗೆ ಸರಿಯಾಗಿ ಹೊರಳದು. ಮುಂಚೆಯೇ ಎಷ್ಟೋ ವಾಸಿ. ಅದರ ಹೆಸರು 'ಹಚ್' ಎಂದಿತ್ತು. ಆಗ ನಾವು ಅದನ್ನು ಅಚ್ಚ ಕನ್ನಡದಲ್ಲಿ 'ಹಚಾ' ಎನ್ನುತ್ತಿದ್ದೆವು!

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.