Skip to main content

ಹೆಸರಿಲ್ಲದೆಯೇ ನೀನು ಚೆಂದ

ಬರೆದಿದ್ದುApril 3, 2009
2ಅನಿಸಿಕೆಗಳು

ನನ್ನೊಲವಿನ ಪ್ರೇಯಸಿಗೆ
ನಾನೊಂದು ಹೆಸರಿಡಲು ಬೇಕು
ಆ ಹೆಸರ ಕೂಗಿ ಕರೆಯಲು
ಓ ಎನುತ ಅವಳು ಬರಬೇಕು

ಕಾರ್ತೀಕ ದೀಪದ ಸಾಲು ಬೆಳಕನು ಕಂಡೆ
ನನ್ನವಳ ಕಣ್ಣಿನಲ್ಲಿ
ಉರಿದ ಬತ್ತಿಯ ನೆನೆದೆ,ಮುಗಿದ ಎಣ್ಣೆಯ ನೆನೆದೆ
ಹೆಸರು ಮರೆಯಾಯಿತಲ್ಲೆ!

ಶ್ರಾವಣ ವರ್ಷವ ನೆನೆದೆ, ಹರ್ಷ ವರ್ಷದಿ ನೆಂದೆ
ವರ್ಷಾ ನಾಮವು ಬಲು ಚೆಂದ
ಮಳೆಗಾಲ ಮುಗಿಯುವುದು ಬಿರುಗಾಲ ಮೂಡುವುದು
ಮಳೆಯನಿನ್ನು ನೆನೆವುದೆಂತು!

ಭುವನದಾಯಿನಿ ಸ್ಪೂರ್ತಿ, ಕಷ್ಟ ತಾರಣ ಮೂರ್ತಿ
ಪರಮ ಪಾವನಿ ಗಂಗೆ,ತುಂಗೆ, ಬೃಂದಾ
ಅಕಳಂಕ ಜಾತೆ, ಸಗುಣ ಸಂಜಾತೆ
ಹೆಸರಿಲ್ಲದೆಯೇ ನೀನು ಚೆಂದ.

ಲೇಖಕರು

ಬಾಲ ಚಂದ್ರ

ಹೊಳೆ ದಂಡೆ

ನನ್ನ ಲೇಖನಗಳನ್ನು ಓದಿ
ನನ್ನ ಬಗ್ಗೆ ನಿಮಗೇ ತಿಳಿಯುತ್ತೆ.

ಅನಿಸಿಕೆಗಳು

venkatesha (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 04/07/2009 - 17:21

very cool yaer

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 04/07/2009 - 17:41

ವೆಂಕಟೇಶ ರವರೆ...

ಇಂತಹ ಅಪರೂಪದ ಕನ್ನಡ ತಾಣದಲ್ಲಿ ಆಂಗ್ಲದಲ್ಲಿ ಬರೆಯುತ್ತಿರುವ ನಿಮಗೆ ಏನು ಹೇಳಬೇಕೋ ಗೊತ್ತಾಗ್ತಾಯಿಲ್ಲ. ನಾನು ಹೇಳುವುದಿಷ್ಟುಃ
ನಮೋ ವೆಂಕಟೇಶಾ...

ಆ ತಿರುಮಲೇಶನೇ ನಿಮಗೆ 'ಕನ್ನಡ ಬುದ್ಧಿ' ಯನ್ನು ಕರುಣಿಸಲೆಂದು ಪ್ರಾರ್ಥಿಸುತ್ತೇನೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.