Skip to main content
Forums

ಹಾಯ್,

ನೀವು ಯಾವ ಟಿವಿಯಲ್ಲಿ ನೋಡಲು ತುಂಬಾ ಇಷ್ಟ ಪಡುವ ದಾರಾವಾಹಿ ಯಾವುದು? (ಯಾವುದೇ ಭಾಷೆ ಆಗಿರಬಹುದು)

ಹಾಗೇ ಕನ್ನಡದಲ್ಲಿ ಯಾವ ದಾರಾವಾಹಿ ಅಂದ್ರೆ ನಿಮಗೆ ತುಂಬಾ ಇಷ್ಟ ಆಂತಾನೂ ತಿಳಿಸಿ. ಅಕಸ್ಮಾತ್ ಯಾವುದೇ ಕನ್ನಡ ದಾರಾವಾಹಿ ನೋಡುತ್ತಿಲ್ಲವಾದರೆ ಅದಕ್ಕೆ ಕಾರಣ ತಿಳಿಸಿ.

ನನಗೆ ಕನ್ನಡದಲ್ಲಿ ಸಿಲ್ಲಿ ಲಲ್ಲಿ, ಎದೆ ತುಂಬಿ ಹಾಡುವೆನು ದಾರಾವಾಹಿಗಳು ಅಂದ್ರೆ ಪ್ರಾಣ.
ನನಗೆ ಹಿಂದಿಯಲ್ಲಿ ಜೀ ಟಿವಿ ಸರಿಗಮಪ, ಸ್ಟಾರ್ ಒನ್‌ನ ಗ್ರೇಟ್ ಇಂಡಿಯನ್ ಕಾಮಿಡಿ ಶೋ ಮತ್ತು ಲಾಫ್ಟರ್ ಚಾಲೆಂಜ್ ಅಂದ್ರೆ ಇಷ್ಟ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

chetanbs ಮಂಗಳ, 02/13/2007 - 09:25

ನನಗೆ ಬಹಳ ಇಷ್ಟವಾಗುವ ಟಿವಿ ಧಾರಾವಾಹಿ ಅಂದರೆ "ಪ್ರೀತಿ ಇಲ್ಲದ ಮೇಲೆ" ಯಾಕೆ ಅಂದರೆ ಇದರಲ್ಲಿ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ನಡೆಯುವ ಘಟನೆಗಳು ಹಾಗು ಸನ್ನಿವೇಶಗಳನ್ನು ಬಿಂಬಿಸಿದ್ದಾರೆ. ನೋಡಲಿಕ್ಕೆ ದೊಡ್ಡ ಮನೆತನದ ಕಥೆ ಅನ್ನಿಸಿದರೂ ಕೂಡ ನಾವು ನಮ್ಮನ್ನು ಕೆಲವು ಪಾತ್ರಗಳ ಜೊತೆ ಹೊಂದಿಸಿಕೊಂಡು ನೋಡಬಹುದಾಗಿದೆ. ಹಾಗೆಯೇ ನಮ್ಮ ಚಿಂತನೆಯನ್ನೂ ಕೂಡ ಕೆರಳಿಸುವ ಹಾಗೆ ನಿರ್ದೇಶಕರು ಚಿಕ್ಕ ಪರದೆಯ ಮೇಲೆ ತೋರಿಸಿದ್ದಾರೆ. ವಿನು ಬಳಂಜ ಅವರಿಗೆ ನನ್ನ ಶುಭಾಶಯಗಳು. ಹಾಗೆಯೇ ಎಲ್ಲಾ ಕೆಲಸ ಕಾರ್ಯಗಳನ್ನು ಮುಗಿಸಿ ಮನೆಗೆ ಬಂದಾಗ ನಮ್ಮ ಮನಸ್ಸಿಗೆ ಮುದ ನೀಡಲು ತಯಾರಾಗಿ ನಿಂತಿರುತ್ತದೆ ಸಿಲ್ಲಿ ಲಲ್ಲಿ.

kanasugaara ಮಂಗಳ, 02/13/2007 - 17:31

satya
ನನಗೆ "ಪ್ರೀತಿ ಇಲ್ಲದ ಮೇಲೆ" ಎಂಬ ಕನ್ನಡ ಧಾರಾವಾಹಿ ತುಂಬಾನೇ ಇಷ್ಟ.

mahanvismaya ಧ, 10/03/2007 - 15:29

ನನಗಂತೂ ಈಗ 'ಈ ಟಿವಿ'ಯಲ್ಲಿ ಬರುತ್ತಿರುವ 'ಮಂಥನ' ಧಾರಾವಾಹಿ ಅಂದರೆ ತುಂಬಾನೆ ಇಷ್ಟ.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 10/11/2007 - 16:50

ನನguu ಈಗ 'ಈ ಟಿವಿ'ಯಲ್ಲಿ ಬರುತ್ತಿರುವ 'ಮಂಥನ' ಧಾರಾವಾಹಿ ಅಂದರೆ ತುಂಬಾನೆ ಇಷ್ಟ.

shobha (ಪ್ರಮಾಣಿಸಲ್ಪಟ್ಟಿಲ್ಲ.) ಧ, 10/17/2007 - 14:41

ನನಗೆ "ಪ್ರೀತಿ ಇಲ್ಲದ ಮೇಲೆ" ಎಂಬ ಕನ್ನಡ ಧಾರಾವಾಹಿ ತುಂಬಾನೇ ಇಷ್ಟ.

ಯೋಗೇಶ್ ಸೋಮ, 11/05/2007 - 16:27

ಯೋಗೇಶ್

ನಿಜ ಹೇಳಲೆ...? ಟಿವಿ ನೋಡಲು ನನಗೆ ಬಹಳ ಅನುಕೂಲವಿಲ್ಲ.. ಆದರು ಸಮಯ ಸಿಕ್ಕಾಗ, ರಾಜೇಶ್ ಹೆಗಡೆ ಅವರ ಅಭಿರುಚಿಯಂತೆಯೇ ನನಗೆ ಕನ್ನಡದಲ್ಲಿ ಸಿಲ್ಲಿ ಲಲ್ಲಿ, ಎದೆ ತುಂಬಿ ಹಾಡುವೆನು ದಾರಾವಾಹಿಗಳು ಅಂದ್ರೆ ಪ್ರಾಣ.

ನನಗೆ ಹಿಂದಿಯಲ್ಲಿ ಜೀ ಟಿವಿ ಸರಿಗಮಪ, ಸ್ಟಾರ್ ಒನ್‌ನ ಗ್ರೇಟ್ ಇಂಡಿಯನ್ ಕಾಮಿಡಿ ಶೋ ಮತ್ತು ಲಾಫ್ಟರ್ ಚಾಲೆಂಜ್ ಅಂದ್ರೆ ಇಷ್ಟ.

ಈಗ ಬಹಳ ಕಡಿಮೆ. .ಟಿವಿ ನೋಡುವುದು.....!!

raghavendra.s ಮಂಗಳ, 11/06/2007 - 21:09

ನನಗೆ ಚಂದನದಲ್ಲಿ ಬರುವ "ಕಥಾ ಸರಿತ" ಅಂದ್ರೆ ಪಂಚ ಪ್ರಾಣ

Prakasha (ಪ್ರಮಾಣಿಸಲ್ಪಟ್ಟಿಲ್ಲ.) ಧ, 11/14/2007 - 18:17
ಪಾರ್ವತಿ.ಜಿ.ಆರ್ ಗುರು, 11/15/2007 - 13:13

ನನಗೆ ಈಗ 'ಈ ಟಿವಿ'ಯಲ್ಲಿ ಬರುತ್ತಿರುವ 'ಮಂಥನ' ಧಾರಾವಾಹಿ ಅಂದರೆ ತುಂಬಾನೆ ಇಷ್ಟ, ಈ ಧಾರಾವಾಹಿಯಲ್ಲಿ ಪಾತ್ರಗಳು ಸಹಜತೆಯಿಂದ ಕೂಡಿದೆ,

Manju.v (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 11/12/2009 - 10:44

namge s s l c nan maklu, andre tumba ista mathhe kateyalla jeevana, rangoli saguta doora doora, parijata tv9

Nanjunda Raju Raju ಶುಕ್ರ, 08/10/2012 - 16:35

ಮಾನ್ಯ ರಾಜೇಶ್ ಹೆಗಡೆಯವರೇ, ಮೊದಲಿನಿಂದಲೂ ದಾರಾವಾಹಿ ನೋಡಲು ಇಷ್ಟ ಇಲ್ಲ. ಕಾರಣ, ಕತೆಗಳು ಸಾಮಾನ್ಯವಾಗಿ ಸತ್ಯಕ್ಕೆ ಹತ್ತಿರವಾಗುವುದಿಲ್ಲ. ವಿನಾಕಾರಣ ಎಳೆಯುವುದು. ಕಲ್ಪನೆಗೂ ಮೀರಿದ ಕತೆಗಳಾಗಿರುತ್ತವೆ. ಬೋರು ಎಂದರೂ ಸರಿ. ಕುಟುಂಬಗಳನ್ನು ಹೊಡೆಯುವ ಐಡಿಯಾಗಳು ತುಂಬಾ ಇರುತ್ತವೆ. ಗಂಡನಿಗೆ ಹೆಂಡತಿ ಮೋಸ ಮಾಡುವುದು. ಹೆಂಡತಿಗೆ ಗಂಡ ಮೋಸ ಮಾಡುವುದು. ಅದರಲ್ಲೂ ಮುಖ್ಯವಾಗಿ ಅತ್ತೆ ಸೊಸೆಯರ ಜಗಳ ಇದರಿಂದ ವರದಕ್ಷಿಣೆ ಕೇಸು. ವಿಚ್ಚೇದನ ಪಡೆಯುವುದು, ಇದರಿಂದಾಗಿ ಸಂಸಾರಗಳ ನೆಮ್ಮದಿ ಹಾಳಾಗುತ್ತಿದೆ. ಹಾಸ್ಯಭರಿತ ದಾರವಾಹಿ ಎಂದರೆ ಸ್ವಲ್ಪ ನೋಡಬಹುದು. ಈ ತಕ್ಷಣಕ್ಕೆ ಪಂಚರಂಗಿ ಪೋಂ ಪೋಂ ನೋಡಬಹುದು. ಅಲ್ಲವೆ?


 

  • 3839 views