ಯುಗಾದಿ
ಯುಗಾದಿ
ಒಳಿತು-ಕೆಡಕು ಎಲ್ಲವ,
ಬಿಟ್ಟು ತಿನ್ನುವ ಬೆಲ್ಲವ,
ಯುಗಾದಿ ಬಂದ ವರುಷಕೆ,
ನಮಗಾಗಿ ತಂದ ಹರುಷಕೆ!
ನಮ್ಮ-ನಿಮ್ಮ ಸ್ನೇಹಕೆ,
ಯುಗಾದಿ ಹಸಿರ ಕಾಣಿಕೆ,
ಬೇವು-ಬೆಲ್ಲ ಹಂಚುತ-
ಹೊಡೆಯದಂತೆ ಬಾಳ ಕುಡಿಕೆ!
ತೊರೆದು ಎಲ್ಲ ಅನಿಷ್ಟಗಳನ್ನು,
ಮರೆತು ಎಲ್ಲ ನೋವುಗಳನ್ನು,
ತಡೆದು ಬರುವ ಕಷ್ಟಗಳನ್ನು,
ಸ್ವಾಗತಿಸೋಣ ಯುಗಾದಿಯನ್ನು!
ನಗುವೆ ಹಸಿರ ತೋರಣ,
ಮನಸೆ ಅದರ ಸಿಂಚನ,
ಬರದಂತೆ ಯಾವ ಕಾರಣ,
ಹಂಚೋಣ ಯುಗಾದಿ ಹೂರಣ!
ಯುಗಾದಿ ಇದು ಎಲ್ಲರಿಗೆ,
ಬಾಂದವ್ಯ ಬೆಸೆವ ಘಳಿಗೆ,
ಒಟ್ಟು ಮಾಡಿ ಒದ್ದೆ-ಬಿಡುವ?
ನಮ್ಮೆಲ್ಲ ತಪ್ಪುಗಳಿಗೆ!!
ಕೊಳೆತು ನಾರುತಿರುವ,
ಹಳತು ದು:ಖವೆಲ್ಲ,
ತೊಳೆದು ಸಾರಿಸಿಬಿಡುವ,
ಕೂಡಿ-ಬಾಳಿ-ನಗುವ!
ಯುಗಾದಿ ನಮ್ಮ ಹಬ್ಬ!
ಹೊಸವರುಷ ತಂದ ಹಬ್ಬ!
ಕೂಡಿ ಆಚರಿಸೋಣ ಎಲ್ಲ-
ದಿನವು-ಹಬ್ಬ!-ಹಬ್ಬ!!
ಯುಗಾದಿ ಹಬ್ಬದ ಹಾರ್ಧಿಕ ಶುಭಾಷಯಗಳು!
ಸಾಲುಗಳು
- Add new comment
- 1231 views
ಅನಿಸಿಕೆಗಳು
ಉತ್ತಮ ಕವನ... ನಿಮಗೂ ಯುಗಾದಿ
ಉತ್ತಮ ಕವನ... ನಿಮಗೂ ಯುಗಾದಿ ಹಬ್ಬದ ಹಾರ್ಧಿಕ ಶುಭಾಷಯಗಳು...