Skip to main content

ಇಲ್ಲಿ ಯಾರ ಆರೋಗ್ಯ ತಪಾಸಣೆ ಆಗ್ಬೇಕೋ, ನೀವೇ ಹೇಳಿ

ಬರೆದಿದ್ದುMarch 22, 2009
1ಅನಿಸಿಕೆ

ಸಾಮಾನ್ಯ ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಹೆಚ್ಚುತ್ತಿರೋದು ಕ೦ಡು ಎಲ್ಲೆಡೆ ಆರೋಗ್ಯ ತಪಾಸಾಣಾ ಕೇ೦ದ್ರಗಳು ಪ್ರಾರ೦ಭಗೊಳ್ಳುತ್ತಿವೆ.
ಅವುಗಳಲ್ಲಿ RELIGARE SRL Diagnostics ಅ೦ತ ಒ೦ದು ಕಂಪನಿ, ಬೆ೦ಗಳೂರಲ್ಲಿ ಆಗಲೇ ಹದಿನೈದು ಕೇ೦ದ್ರಗಳನ್ನು ತೆಗೆದಿದ್ದಾರೆ.
ರಕ್ತದ ಪರೀಕ್ಷೆ, ಮಧುಮೇಹ, ಕಿಡ್ನಿ ಪರೀಕ್ಷೆ ಈ ರೀತಿ ಹಲವಾರು ಪರೀಕ್ಷೆಗಳನ್ನು ನಡೆಸುತ್ತಾರೆ.
ದಿನಪತ್ರಿಕೆ ಜೊತೆ ಬ೦ದ ಇವರ ಜಾಹೀರಾತಿನ ಪ್ರತಿ ಲಗತ್ತಿಸಿದ್ದೇನೆ.. ನೋಡಿ!

ಇವರು ಪ್ರಸ್ತುತ ಪಡಿಸುತ್ತಿದ್ದಾರೆ "ಹೆಲ್ತ್ ದಾದಾ" ಪ್ಯಾಕೇಜ್. ಅರೆ, ಇದೇನಿರಬಹುದು.....?
ನನ್ನ ಪ್ರಕಾರ ಹೇಳೋದಾದ್ರೆ ಇದು ಊರಲ್ಲಿರೋ ದಾದಾ/ ರೌಡಿಗಳಿಗೆ ತ೦ದಿರುವ ರಿಯಾಯಿತಿ ಪ್ಯಾಕೇಜ್ ಇರಬಹುದು.

ಅಥವಾ ಈ ಕೈಪಿಡಿ ದೆಹಲಿ, ಯು.ಪಿ, ಬಿಹಾರ್ ಈ ಕಡೆಯದ್ದಾ? ಇದೇನು ಗೊ೦ದಲ? ಅಲ್ಲಿ ಹ೦ಚುವ ಕೈಪಿಡಿ ಏನಾದ್ರೂ ಇಲ್ಲಿ ತ೦ದು ಹ೦ಚುತ್ತಿದ್ದಾರಾ?

ಈ ಕ೦ಪನಿಯವರು ಊರಲ್ಲೆಲ್ಲಾ ತಮ್ಮ ಹಿ೦ದಿಯಲ್ಲಿ ಜಾಹೀರಾತಿನ ಕೈಪಿಡಿ ಹ೦ಚುತ್ತಿದ್ದಾರೆ. ಭಾರತದಲ್ಲೇ 7% ಜನಕ್ಕೆ ಮಾತ್ರ ಇ೦ಗ್ಲೀಷ್ ಭಾಷೆ ಮೇಲೆ ಪ್ರಾವೀಣ್ಯತೆ ಇದೆಯ೦ತೆ, ಕರ್ನಾಟಕ ಅದರಲ್ಲಿ 1/20 ನೇ ಭಾಗ ಅ೦ದುಕೊಳ್ಳಬಹುದೇನೋ, ಇನ್ನು ಹಿ೦ದಿ ಗೊತ್ತಿರುವವರು ಅದೆಷ್ಟು ಜನ ಇದ್ದಾರೆ ಇಲ್ಲಿ?

ಈ ಪರಿಸ್ಥಿತೀಲಿ, ಯಾರ ಆರೋಗ್ಯ ಕೆಟ್ಟಿದೆ? ಯಾರ ಆರೋಗ್ಯ ತಪಾಸಣೆ ನಡೆಯಬೇಕಿದೆ? ಮಾರುಕಟ್ಟೆಯನ್ನ ತಪ್ಪಾಗಿ ತಿಳಿದಿರುವ ಈ ಸಂಸ್ಥೆ ಇವರ ಕೈಪಿಡಿಯನ್ನು ಚುರುಮುರಿಯವನಿಗೆ ಮಾರಿಯೇ ಹೆಚ್ಚು ಸಂಪಾದನೆ ಮಾಡ್ಬೋದೇನೊ, ಅಲ್ವ?
ಬನ್ನಿ, ಇವರಿಗೆ ಬುದ್ದಿ ಹೇಳಿ ಇವರನ್ನು ಬದಲಾಯಿಸಲು ಕಾರಣರಾಗೋಣ..
[img_assist|nid=3859|title=ರೆಲಿಗೇರ್ ಕಡತ|desc=|link=none|align=center|width=465|height=640]

ದೂರು ಕಳಿಸಲು ಎಲ್ಲಾ ಮಾಹಿತಿ:
jayanagar8@lifeken.com, customercare@srl.in, vedavathi.karri@srl.in

ಲೇಖಕರು

ಪ್ರಿಯಾಂಕ್

ಸಮಯ ಸಿಕ್ಕಾಗ ತಿಳಿಸುತ್ತೇನೆ.
ಸದ್ಯಕ್ಕೆ ಕ್ಷಮೆ ಇರಲಿ.

ಅನಿಸಿಕೆಗಳು

ಅಶ್ರಫ್ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 03/31/2009 - 13:52

ಈ RELIGARE ನವರ share broking company ಕೂಡಾ ಇದೆ. ತಗಡು ನನ್ಮಕ್ಲಳು!!

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.