Skip to main content

ಕನ್ನಡ ಚಿತ್ರರಂಗ ಎಂದರೆ..!!

ಬರೆದಿದ್ದುMarch 20, 2009
10ಅನಿಸಿಕೆಗಳು

1)." ಕನ್ನಡ ಹೀರೋಗಳೆಲ್ಲ, ತೆಲುಗು ಚಿತ್ರಗಳ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿರುವುದರಿಂದ, ಕನ್ನಡ ನಿರ್ಮಾಪಕರು ಇತ್ತೀಚೆಗೆ ಹೊಸ ಕಥೆಗಳನ್ನು ಹುಡುಕುವ ಬದಲು, ಪ್ರತಿ ಶುಕ್ರವಾರ ಹೈದರಾಬಾದಿಗೆ ಬಂದು, ಹೊಸ ತೆಲುಗು ಸಿನಿಮಾಗಳನ್ನು ನೋಡ್ತಾ ಕಾಲ ಕಳೆಯುತ್ತಿದ್ದಾರೆ."
http://telugu.andhracafe.com/index.php?m=show&id=26372#top_page

2.) ಜಯಂ ಖ್ಯಾತಿಯ ಸದಾ ಇಂಡಿಯಾ ಪೂರ್ತಿ ಸುತ್ತಾಡಿದರೂ ಯಾವ ಚಿತ್ರರಂಗದಲ್ಲೂ ನೆಲೆಗೊಳ್ಳೋಕೆ ಆಗಲಿಲ್ಲ. ಅದಕ್ಕೆ "ಫೈವಸ್ಟಾರ್ ಸಿಗದೇ ಹೋದಾಗ ಪೆಪ್ಪರ್ ಮೆಂಟ್ ಚಪ್ಪರಿಸುತ್ತಾ ಕಾಲ ತಳ್ಳಬೇಕು"ಎಂಬ ಉದ್ದೇಶದಿಂದ ಕನ್ನಡ ಚಿತ್ರರಂಗಕ್ಕೆ ಮರುಪ್ರವೇಶ ಕೊಡುತ್ತಿದ್ದಾಳೆ. http://telugu.andhracafe.com/index.php?m=show&id=26346

ಕನ್ನಡಚಿತ್ರರಂಗ ಕ್ರಿಯಾಶೀಲತೆಯನ್ನು ಕಳೆದುಕೊಂಡಿದೆ..!! ಕನ್ನಡ ಚಿತ್ರರಂಗ ಎಂಬುದು ಪೆಪ್ಪರ್ ಮೆಂಟ್ ಆದರೆ, ತೆಲುಗು ಮತ್ತು ಇತರ ಚಿತ್ರರಂಗ ಫೈವಸ್ಟಾರ್ ಚಾಕೋಲೇಟ್..!! ಎಂಬರ್ಥದ ಮಾತುಗಳನ್ನು ನಾನು ಹೇಳಿದ್ದಲ್ಲ " telug.andhracafe.com ನವರು ಹೇಳಿದ್ದು. ಬರೀ ಇವೆರಡಲ್ಲ ಇಂತಹ ಅದೆಷ್ಟೋ ಲೇಖನಗಳಲ್ಲಿ ಕನ್ನಡವನ್ನು ಅವಹೇಳನ ಮಾಡಿ ಈ ವೆಬ್ ಸೈಟಿನಲ್ಲಿ ಪ್ರಕಟಿಸಲಾಗಿದೆ. ಇವುಗಳನ್ನು ನೋಡಿದಾಗಲೆಲ್ಲ, ಕಿಬ್ಬೊಟ್ಟೆಯಲ್ಲಿ ಬೆಂಕಿಕೆಂಡ ಇಟ್ಟಂತಾಗುತ್ತದೆ. ಇದಕ್ಕೆ ಪರಿಹಾರವೇನು ಅಂತ ತಿಳಿಯದೇ, ನನ್ನ ಸ್ನೇಹಿತರನ್ನು ಈ ಬಗ್ಗೆ ಕೇಳಿದಾಗ ಅವರು ಕೂಡ ಈ ವಿಷಯದಲ್ಲಿ ಅಂತಹ ಆಸಕ್ತಿಯನ್ನು ತೋರಲಿಲ್ಲ. ಆಗ ನೆನಪಾದುದೇ ನಮ್ಮ ವಿಸ್ಮಯನಗರಿ ಇಲ್ಲಾದರೆ ಸಾವಿರಾರು ಜನ ಇದ್ದಾರೆ ಅವರಲ್ಲಿ ಯಾರಿಗಾದರೊಬ್ಬರಿಗೆ ಇದನ್ನು ಪ್ರತಿಭಟಿಸುವ ದಾರಿ ತಿಳಿದಿರುತ್ತದೆ ಅಂತ ಈ ಪಿಸುಮಾತನ್ನು ಬರೆದಿದ್ದೇನೆ. ಇದರ ಹೊರತಾಗಿ ನಾನು ಇಲ್ಲಿ ಬೇರೆ ಎನನ್ನೂ ಹೇಳಬೇಕೆಂದಿಲ್ಲ.!!

ತಮ್ಮ ನೆರೆಚಿತ್ರರಂಗದವರ ಬಗ್ಗೆ ಇಷ್ಟೊಂದು ಕೇವಲವಾಗಿ ಬರಿಯೋ ಇವರ ನೈತಿಕತೆಯನ್ನು ನಾವು ಪ್ರಶ್ನಿಸಲೇಬೇಕಾಗಿದೆ.

ನಾವು ರಿಮೇಕ್ ಅನ್ನೋ ಹೆಸರಲ್ಲಿ ಹಕ್ಕುಗಳನ್ನು ಪಡೆದು ಚಿತ್ರ ನಿರ್ಮಿಸಿದರೆ, ಇವರು ಹಿಂದಿಯಿಂದ, ತಮಿಳಿನಿಂದ ಹಾಗೂ ಇಂಗ್ಲೀಷಿನಿಂದ ಕಥೆಗಳನ್ನು ಕದ್ದು , ಸ್ವಮೇಕ್ ಅಂತ ಬುರುಡೆ ಬಿಡ್ತಾರೆ. ಇವರಿಗೆ ನಮ್ಮ ಬಗ್ಗೆ ಮಾತನಾಡೋ ನೈತಿಕತೆ ಇದೆಯಾ..?

ನಾಯಕನನ್ನು ತುಂಬಾ ಗ್ರೇಟ್ ಅಂತ ತೋರಿಸೋಕೆ, ಚಿತ್ರಗಳಲ್ಲಿ ಸಾವಿರ ರೌಡಿಗಳನ್ನು ಒಬ್ಬ ಹೀರೋ ಎದುರಿಸುವಂತಹ ಕಾಗಕ್ಕ ಗುಬ್ಬಕ್ಕ ಕಥೆಗಳನ್ನು ತಯಾರಿಸಿ, (ಸ್ಟಾಲಿನ್ ಎಂಬ ಚಿತ್ರ) ಪ್ರೇಕ್ಷಕರಿಗೆ ಉಣಬಡಿಸೋ ಇವರಿಗೆ ನಮ್ಮ ಚಿತ್ರರಂಗದ ಬಗ್ಗೆ ಮಾತನಾಡೋ ನೈತಿಕತೆ ಇದೆಯಾ.?

ರಾಯಲಸೀಮೆ ಎನ್ನುವ ಪದವೊಂದನ್ನು ಇಟ್ಟುಕೊಂಡು, ಮಾತೆತ್ತಿದರೆ, ತಲೆ ಕತ್ತರಿಸು, ಕೈ ಕತ್ತರಿಸು, ಜೀಪ್ ಜಂಪ್ ಮಾಡಿಸು, ಹಸಿರಕ್ತಕುಡಿ, ಎನ್ನುವಂತಹ ಹಿನ್ನಲೆಯಲ್ಲಿ ಚಿತ್ರಗಳನ್ನು ತಯಾರಿಸಿ, ನಾಯಕನನ್ನು ದೇವರು ತರ ತೋರಿಸಿ, ವಾಸ್ತವವನ್ನು ಮರೆಮಾಚಿ, ಪ್ರೇಕ್ಷಕರನ್ನು ಮರಳು ಮಾಡಿ, ಅವರಿಂದ ಓಟು ಪಡೆದು, ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುವಂತಹ Fantasy ಚಿತ್ರರಂಗಕ್ಕೆ ನಮ್ಮ ಚಿತ್ರರಂಗದ ಬಗ್ಗೆ ಮಾತನಾಡೋ ನೈತಿಕತೆ ಇದೆಯಾ..?

ಎಷ್ಟು ಚಿತ್ರಗಳನ್ನು ಇವರು ನಮ್ಮಿಂದ ಪಡೆದು ರಿಮೇಕ್ ಮಾಡಿಲ್ಲ. ಇತ್ತೀಚಿನ ಉದಾಹರಣೆಗಳನ್ನು ತೆಗೆದುಕೊಳ್ಳೋದಾದರೆ, ನಮ್ಮ ರಾಜನರಸಿಂಹ ಅಲ್ಲಿ ಪಲನಾಟಿ ಬ್ರಹ್ಮಾನಾಯಡು ಆಗಿದ್ದನ್ನು ಮರೆತುಬಿಟ್ಟರಾ..? ಇಲ್ಲಿನ ಮುಂಗಾರು ಮಳೆ ಅಲ್ಲಿ ವಾನ ಆಗಿದ್ದನ್ನು ಇವರು ಮರೆತುಬಿಟ್ಟರಾ..? ಇಂತಹವು ಅದೆಷ್ಟೋ ನನ್ನಂತಹವರ ಅರಿವಿಗೆ ಬಾರದೇ ಹೋದವುಗಳು.

ಇಂತಹವುಗಳನ್ನೆಲ್ಲ ಮರೆತು, ತಾವೇ "ಗೊಪ್ಪ" ಎಂದುಕೊಳ್ಳೋ ಈ ಜನಕ್ಕೆ ಯಾವ ರೀತಿ ಉತ್ತರಿಸೋದು..? ಇವರನ್ನು ವಿರೋಧಿಸೋ ಪರಿಯೆಂತು..? "ವಿಸ್ಮಯ ತಸ್ಮೈಯ್ ನಮಾ:

ಲೇಖಕರು

ವಿ.ಎಂ.ಶ್ರೀನಿವಾಸ

ಭಾವ ಲಹರಿ

ನನ್ನ ಹೆಸರು ವೀರಕಪುತ್ರ ಶ್ರೀನಿವಾಸ,

ಅನಿಸಿಕೆಗಳು

shankar852 (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 03/21/2009 - 21:24

ಸತ್ಯ ರೀ....ಅವರಿಗೆ ಭಾಷೆಯ ಅವರ ಅಭಿಮಾನ ಜಾಸ್ತಿ, ಬರಿತಾರೆ 'ಕಳ್ಳ ಯಾವತ್ತು ಕಳ್ಳತನ ಮಾಡಿದ್ದೆನೆ ಅನ್ತ ಒಪ್ತಾನ???' ತಮ್ಮವರು ಎನ ಮಾಡಿದರು ಸರಿ ಅನ್ತ ಅವರು ವಾದಿಸ್ತಾರೆ 'ತಮ್ಮ ತಟ್ಟೆಯಲ್ಲಿರೊ ಕತ್ತೆನಾ ಅವರು ತೊರಸೊಲ್ಲ'.ಒಂದ್ಕಡೆ ಕನ್ನಡ ಚಿತ್ರ ರಂಗಕ್ಕೆ ತುಂಬ ನಿಂದಕರು ಇದ್ದಾರೆ ಅಂಥ ಖುಶಿ ಯಾಗುತ್ತೆ(ತಪ್ಪು ಹುಡ್ಕೊರು ಹಂದಿಗಳ ಹಾಗೆ ಇರಬೆೀಕಂತೆ), ಸರಿ ಇನ್ನು ತಪ್ಪು ಸರಿ ಮಾಡಕೊಳ್ಳೊರ ವಿಚಾರಕ್ಕೆ ಬನ್ನಿ, 'ನಮ್ಮಣ್ಣ' ಸುದೀಪ ಹುಚ್ಚ ಚಿತ್ರ ಯಶಸ್ವಿ ಆಯಿತು ಅಂತ ಬಹಳ ರೀಮೆಕ ಚಿತ್ರಗಳನ್ನೆ ಮಾಡ್ತಾರೆ ಅವರಿಗೆ ರೀಮಕೆ ಚಿತ್ರಗಳಿನ್ದಲೆ ಯಶಸ್ಸು ಸಿಗುತ್ತೆ ಅಂಥ ಅವರ ನಮ್ಬಿಕೆ (ಎಲ್ಲೊ ಒದಿದ್ದ ನೆನಪು, ನಿನ್ನ ಹತ್ತಿರ ಬನ್ದು ಹಾಗೆ ಅವನೆನಾದರು ಹೆೀಳಿದ್ದನೆನೊ ಅನ್ತ ಯಾರು ಕೆಳಬೆೀಡಿ). ಇನ್ನು ನಮ್ಮ ಇನ್ನೊಬ್ಬ ಅಣ್ಣ ಉಪೆೀಂದ್ರ ಇವರ ಹತ್ತಿರ ಇದ್ದದ್ದೆ 2 ಅಥವ 3 ಕಥೆಗಳು ಅನ್ಸುತ್ತೆ ಅದೊ ಖಾಲಿಯಾಗಿದೆ ಇತ್ತಿಚಿಗೆ ಅವರ ನಿರ್ದೆೀಶನದ ಯಾವ ಚಿತ್ರಗಳು ಬರುತ್ತಿಲ್ಲ ಅದು ಬೆೀಜಾರು ಅಲ್ಲದೆ ತೆಲುಗು ಚಿತ್ರ ರನ್ಗದಲ್ಲಿ ತಮ್ಮನ್ನ ತಾವು ಗಟ್ಟಿ ಮಾಡಿಕೊಳ್ತಾ ಇದ್ದಾರೆ, (ಇದು ನನಗೆ ಅನ್ನಿಸಿದ್ದು) .'ಸತ್ಯ ಮಾಡಿ ಹೆೀಳ್ತೆನೆ' ಇವರು ರೀಮೆಕ ಚಿತ್ರಗಳ ಮೆೀಲೆ ಎಲ್ಲಿಯವರೆಗು ಸಬ್ಸಿಡಿ ತೆಗೆಯಲ್ಲವೊ ಅಲ್ಲಿಯ ವರೆಗೊ ಕನ್ನಡ ಚಿತ್ರರಂಗ ಉದ್ದಾರ ಆಗಲ್ಲ.... ಆಗಲ್ಲ....ಆಗಲ್ಲ...ಇವರ ಚಿತ್ರಗಳು ಗಡಿನಾಡ ಪ್ರದೆೀಶಗಳಲ್ಲಿ ಸರಿಯಾಗಿ ಒಡೊಲ್ಲ ಇನ್ನು ಪೈರಸಿ ಹಾವಳಿ ಬಗ್ಗೆ ತಲೆಕೆಡಿಸಿಕೊಳ್ತಾರೆ. ಕನ್ನಡ ಚಿತ್ರರಂಗವನ್ನ ಉಳಿಸೊಕೆ ಅಂಥ ನಮ್ಮ ಪುಟ್ಟಣ್ಣ, ಶಂಕರ್ನಾಗ ಇತ್ಯಾದಿ ನಿರ್ದೆೀಶಕರುಗಳು ಮತ್ತೆ ಹುಟ್ಟಿ ಬರಬೇಕು.
ನಿಜ ಹೇಳ್ತಿನಿ ರವಿಚಂದ್ರನ್,ಗಿರೀಶ ಕಾಸರವಳ್ಳಿ,ಪ್ರೆೀಮ್ , ಉಪೆೀಂದ್ರ (ನಿರ್ದೆೀಶನ),ನಾಗಭರಣ, ಯೋಗರಾಜ ಭಟ್ ಇತ್ಯಾದಿ....ಇವರೆಲ್ಲ ಸರಿಯಾಗಿ ಕೆಲಸ ಮಾಡಿದರೆ ರಂಗ ಉಳಿಯುತ್ತೆ ಇಲ್ಲ ಅನ್ದರೆ ಸ್ಟುಡಿಯೊ ಮುಂದೆ ರಂಗೊಲಿ ಹಾಕಲು ಸಹ ಯಾರು ಇರಲ್ಲ.

ಅಂದ ಹಾಗೆ ಇದು ನನ್ನ ಮೊದಲ ಪ್ರತಿ ಕ್ರಿಯೆ ಎಲ್ಲಾದರು ತಪ್ಪು ಆಗಿದ್ದರೆ ದಯವಿಟ್ಟು ಈ ಪುಟ್ಟ ಮನಸನ್ನು ಮನ್ನಿಸಿ :D

ನಮನ ಬಜಗೋಳಿ (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 03/22/2009 - 10:31

ಆತ್ಮೀಯ ಶಂಕರಗೆ,ಸುದೀಪ್ ನಿರ್ದೇಶನದ ಎರಡು ಚಿತ್ರ ನೋಡಿದಿರಿ ಅಂದುಕೊಂಡಿದ್ದೇನೆ, (ಮೈ ಅಟೋಗ್ರಾಫ್,no73 ಶಾಂತಿ ನಿವಾಸ) ಹುಚ್ಹ ಚಿತ್ರ Om ಪ್ರಕಾಶ್ ನಿರ್ದೇಶನದ ಚಿತ್ರ,ಸುದೀಪ್ ಕನ್ನಡದ ಶಾರುಕ್ ಅಂತಾರೆ,ಅವರ ಬಗ್ಗೆ ತಿಳಿಯದೆ ಬರೆಯಬಾರದು ಅನಿಸುತ್ತೆ,ಏನಂತಿರ?

namana bajagoli ಭಾನು, 03/22/2009 - 10:34

ನಮನ ಬಜಗೋಳಿ (ಇವರು ವಿಸ್ಮಯ ಪ್ರಜೆ ಅಲ್ಲ) - ಭಾನುವಾರ, 03/22/2009 - 10:31 *ಹೊಸತು!
ಆತ್ಮೀಯ ಶಂಕರಗೆ,ಸುದೀಪ್

ಆತ್ಮೀಯ ಶಂಕರಗೆ,ಸುದೀಪ್ ನಿರ್ದೇಶನದ ಎರಡು ಚಿತ್ರ ನೋಡಿದಿರಿ ಅಂದುಕೊಂಡಿದ್ದೇನೆ, (ಮೈ ಅಟೋಗ್ರಾಫ್,no73 ಶಾಂತಿ ನಿವಾಸ) ಹುಚ್ಹ ಚಿತ್ರ Om ಪ್ರಕಾಶ್ ನಿರ್ದೇಶನದ ಚಿತ್ರ,ಸುದೀಪ್ ಕನ್ನಡದ ಶಾರುಕ್ ಅಂತಾರೆ,ಅವರ ಬಗ್ಗೆ ತಿಳಿಯದೆ ಬರೆಯಬಾರದು ಅನಿಸುತ್ತೆ,ಏನಂತಿರ?

shankar852 (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 03/23/2009 - 07:36

ನಮನರವರೆ, ನಿಮ್ಮ ಮಾತು 100ಕ್ಕೆ 100 ಸತ್ಯ ಸುದೀಪ ನಾನು ಇಷ್ಟ ಪಡುವ ನಟ ಅವರ ನಟನೆ ಅಪ್ರತಿಮ ಮತ್ತು ಅಮೊಘ. ಈಗ ನೀವೆ ಹೇಳಿ ನೀವು ಇಷ್ಟ ಪಡುವ ಒಬ್ಬ ನಟ ಯಾವಗಲು ಬರೀ ರೀಮೆಕಿ ಸಿನೆಮಾಗೆ ಅಂಟಿ ಕೊಂಡಿದ್ದರೆ ನಿಮಗೆ ಇಷ್ಟ ಆಗುತ್ತ????. ಹಾಗಂತ ಅವರು ಸ್ವಮೆೀಕ ಚಿತ್ರಗಳನ್ನ ಮಾಡಿಲ್ಲ ಅಂತ ಅಲ್ಲ,ಮಾಡಿದ ಬಹಳಷ್ಟು ಚಿತ್ರಗಳು ಚೆನ್ನಾಗಿ ಮೂಡಿ ಬಂದಿಲ್ಲ. ಅಲ್ಲಿ ಅವರು ಕತೆಯ ಆಯಿಕೆ ಮಾಡುವಲ್ಲಿ ಯಡವಿದ್ಡಾರೆ.

ರಾಜೇಶ ಹೆಗಡೆ ಭಾನು, 03/22/2009 - 15:38

ಹಾಯ್ ಶ್ರೀನಿವಾಸ್,

ಕನ್ನಡ ಸಿನಿಮಾ ಬಗ್ಗೆ ಅವಹೇಳನ ಮಾಡಿ ಬರೆಯುವ ಈ ತಾಣಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿಲ್ಲ ಅನ್ನುವದು ನ್ನ ಭಾವನೆ. ನಾಯಿ ಬೊಗಳಿದರೆ ದೇವಲೋಕ ಹಾಳಾಗುವದೇ?? :D

ತೆಲಗು ಚಿತ್ರರಂಗ ಫೈವ್ ಸ್ಟಾರ್ ಗೂ ಕನ್ನಡ ಚಿತ್ರರಂಗವನ್ನು ಪೆಪ್ಪರಮಿಂಟ್ ಗೆ ಹೋಲಿಸಿರುವದು ಆ ಲೇಖಕನ ಅಜ್ಞಾನವಷ್ಟೇ. ಏನಂತೀರಾ?

ರಾಜೇಶ ಹೆಗಡೆ ಭಾನು, 03/22/2009 - 15:38

ಹಾಯ್ ಶ್ರೀನಿವಾಸ್,

ಕನ್ನಡ ಸಿನಿಮಾ ಬಗ್ಗೆ ಅವಹೇಳನ ಮಾಡಿ ಬರೆಯುವ ಈ ತಾಣಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿಲ್ಲ ಅನ್ನುವದು ನ್ನ ಭಾವನೆ. ನಾಯಿ ಬೊಗಳಿದರೆ ದೇವಲೋಕ ಹಾಳಾಗುವದೇ?? :D

ತೆಲಗು ಚಿತ್ರರಂಗ ಫೈವ್ ಸ್ಟಾರ್ ಗೂ ಕನ್ನಡ ಚಿತ್ರರಂಗವನ್ನು ಪೆಪ್ಪರಮಿಂಟ್ ಗೆ ಹೋಲಿಸಿರುವದು ಆ ಲೇಖಕನ ಅಜ್ಞಾನವಷ್ಟೇ. ಏನಂತೀರಾ?

Suguna Sagar ಮಂಗಳ, 03/24/2009 - 13:09

Sir
ಕನ್ನಡ ಚಿತ್ರರಂಗ ಯಾವ ಸ್ಥಿತಿಲಿ ಇಧೆ ಅನ್ನೊಕೆ....
ಉದಯ ಟಿ.ವಿ ಲಿ ರಾತ್ರಿ 11 ಕ್ಕೆ ಬರೊ Bioscope ಅನ್ನೋ ಪ್ರೊಗ್ರಾಮ್ ನೋಡಿ , ನಿಜವಾಗ್ಲೂ ನಿಮಗೆ ಭಯ ಆಗೇ ಆಗುತ್ತೆ :? .....

raj the showman (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 03/24/2009 - 20:29

kannadigare unite and fight..

united we stand devided we fall..

so v all kannadiga's hav to b united to fight such 3rd class websites..

as v fight each other , otherr's starting such foolish works..

we hav to protect our culture...

ದಿನಕರ್ ಗೌಡ (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 09/18/2011 - 18:50

ಸಾರ್,ಒಂದು ವಿಷಯ ಗಮನದಲ್ಲಿಡಿ! ನಮ್ಮ ಮನೆ ಚೆನ್ನಾಗಿದ್ದರೆ ನಮ್ಮನ್ನು ಯಾರೂ ಬೆಳ್ಲೆತ್ತಿ ತೋರ್ಸೋದಿಲ್ಲ. ಸುಮ್ನೆ ಯಾರೋ ಏನೋ ಅಂದ್ರು ಅಂತ ನೀವೇಕೆ ಟೆನ್ಷನ್ ಮಾಡ್ಕೊಳ್ತೀರಿ! ಎಲ್ಲೋದ್ರು ಕಾಗೆಗಳು, ಗೂಬೆಗಳು ಇದ್ದೇ ಇರ್ತಾರೆ. ಅಂತವರು ನಮ್ಮಲ್ಲೂ ಇದ್ದಾರೆ. ಕರ್ನಾಟಕದಲ್ಲಿ ಒಂದು ಮಾಮೂಲಿ ತೆಲುಗು ಚಿತ್ರ ಗಳಿಸುವ ಹಣವನ್ನು ಕನ್ನಡದಲ್ಲಿ ಸ್ಟಾರ್ ಎನಿಸಿಕೊಂಡವರ ಚಿತ್ರಗಳು ಗಳಿಸುತ್ತಿಲ್ಲವೆಂದರೆ ನೀವು ನಂಬುತ್ತೀರಾ? ಅದಕ್ಕೆ ಕಾರಣ ನಮ್ಮ ಕಾರಣ ಚಿತ್ರಗಳ ಗುಣಮಟ್ಟ! ನಮ್ಮಲ್ಲಿ ಪ್ರತಿಭಾವಂತ ಕಲಾವಿದರಿದ್ದಾರೆ. ಆದರೆ ಅವರನು ಗುರುತಿಸಿ,ಪ್ರೋತ್ಸಹಿಸುವ ಗುಣವಂತ ನಿರ್ಮಾಪಕರಿಲ್ಲ. ಆದ್ದರಿಂದಲೇ ಒಳ್ಲೇ ಸಿನಿಮಾಗಳು ಬರುತ್ತಿಲ್ಲ.ತೆಲುಗು ಚಿತ್ರರಂಗದವರಿಗೆ ನಮ್ಮ ಮೇಲೆ ಅಷ್ಟು ತಾತ್ಸಾರ ಭಾವನೆಗಳಿದ್ದಿದ್ದರೆ, ಕನ್ನಡದ ಮುತ್ತುಗಳು ಸೌಂದರ್ಯ, ಪ್ರಕಾಷ್ ರಾಜ್, ವಿನೋದ್ ಆಳ್ವಾ, ಚರಣ್ ರಾಜ್, ದೇವರಾಜ್ ಇಂತಹ ಪ್ರತಿಭೆಗಳು ಹುಟ್ಟುತ್ತಿರಲಿಲ್ಲ. ಇಂತಹ ಕಲಾವಿದರನ್ನು ನಾವೇಕೆ ಗುರುತಿಸಿ ಬೆಳೆಸಲಿಲ್ಲ ಎನ್ನುವುದಕ್ಕೆ ಮೊದಲು ಕಾರಣ ನೀಡಿ!ನೀವು ಯಾವುದೋ ಮೂಲೆಯಲ್ಲಿ ಕುಳಿತು ಆ ಲೇಖನ ಬರೆದಿದ್ದೀರಿ ಅಂತ ನನಗೆನಿಸುತ್ತಿದೆ. ದಯವಿಟ್ಟು ಹೊರಬನ್ನಿ. ಮೊದಲು ನಮ್ಮನ್ನು ನಾವು ಸರಿಪಡಿಸುಕೊಳ್ಲೋಣ! 

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 02/14/2012 - 18:46

ಸಹಾಯ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.