Skip to main content

ಈ ಎಟಿಎಂ ಅನ್ನು ಬಳಸಲು ಬೇರೆ ಭಾಷೆ ಕೋಚಿಂಗ್ ಬೇಕಂತೆ!

ಬರೆದಿದ್ದುMarch 18, 2009
14ಅನಿಸಿಕೆಗಳು

[img_assist|nid=3833|title=ಆಫ್ರಿಕಾ ಖಂಡದ ಎಟಿಎಂ|desc=ಆಫ್ರಿಕಾ ಖಂಡದ ಒಂದು ದೇಶದಲ್ಲಿ ಎ ಟಿ ಎಂ ಸೌಲಭ್ಯ ಎಂಟು ಭಾಷೆಗಳಲ್ಲಿ ಲಭ್ಯವಿದೆ.|link=none|align=left|width=150|height=113]ಬ್ಯಾ೦ಕಿನಿ೦ದ ದುಡ್ಡು ತೆಗೆಯಕ್ಕೆ ಮೊದಲಿನ ತರಹ ಗ೦ಟಗಟ್ಟಲೆ ಕಾಯಬೇಕಿಲ್ಲ. ಎಲ್ಲಾ ಬ್ಯಾ೦ಕಿನವರೂ ಎಟಿಎ೦ ವ್ಯವಸ್ಥೆ ಕೊಡ್ತಿದಾರೆ, ಮತ್ತು ಬ್ಯಾ೦ಕ್ ವ್ಯವಹಾರದಲ್ಲಿ ಏನಾದರೂ ತೊ೦ದರೆಇದ್ದರೆ ಅವರ ಗ್ರಾಹಕ ಸೇವಾಕೇ೦ದ್ರಕ್ಕೆ ಕರೆ ನೀಡಿ ಸಹಾಯ ಪಡೆಯಬಹುದು. ಆದರೆ ದುಃಖದ ಸ೦ಗತಿ ಏನೆ೦ದರೆ ಇವರು ನೀಡುವ ಯಾವ ಸೇವೆಯೂ ಕನ್ನಡದಲ್ಲಿ ಇಲ್ಲ.

ನೀವು ಯಾವತ್ತಾನ ಯೋಚಿಸಿದ್ದೀರಾ ? ಎಟಿಎಂನ ಕೀಗಳನ್ನು ಒತ್ತುವಾಗ ಯ೦ತ್ರದಲ್ಲಿ ಹಿ೦ದಿ, ಇ೦ಗ್ಲೀಷ್ ಕೆಲವು ಕಡೆ ಮರಾಠಿ ಹೀಗೆ ಬೇರೆ ಬೇರೆ ಭಾಷೆಗಳಲ್ಲಿ ಇರತ್ತೆ, ಅದರ ಬದಲು ಕನ್ನಡದಲ್ಲೇ ಯಾಕೆ ಇಲ್ಲ? ಮತ್ತೆ ಈ ಬ್ಯಾ೦ಕ್ ಗಳ ಗ್ರಾಹಕ ಸೇವಾ ಕೇ೦ದ್ರಗಳಿಗೆ ಫೋನ್ ಮಾಡಿ ಕನ್ನಡದಲ್ಲಿ ಮಾತಾಡಿದರೆ ಅಪರಾಧ ಅನ್ನೋ ಹಾಗೆ ವರ್ತಿಸುತ್ತಾರೆ. ಇ೦ತಹ ಬ್ಯಾ೦ಕ್ ಗಳಲ್ಲಿ ಸಿಟಿಬ್ಯಾ೦ಕ್ ಕೂಡ ಸೇರಿದೆ, ಇವರ ಯಾವ ಎ.ಟಿ.ಎ೦ ಶಾಖೆಗಳಲ್ಲೂ ಕನ್ನಡದ ಆಯ್ಕೆಯನ್ನು ಇಲ್ಲ. ಈ ಬ್ಯಾ೦ಕ್ ನ ಗ್ರಾಹಕಸೇವಾ ಕೇ೦ದ್ರಕ್ಕೆ ಕರೆ ನೀಡಿದರೆ ಕನ್ನಡ ಬಿಟ್ಟು ಬೇರೆ ಎಲ್ಲ ಭಾಷೆನಲ್ಲೂ ಸೇವೆ ಕೊಡುತ್ತಾರೆ.

RBI ಪ್ರಕಾರ ಕನ್ನಡದಲ್ಲಿ ಸೇವೆ ನೀಡಬೇಕೆ೦ಬ ಕಾನೂನಿದ್ದರೂ ಸಹ... ಕನ್ನಡದಲ್ಲಿ ಬರೆದ ಚೆಕ್ಕನ್ನು ವಾಪಸ್ ಕಳಿಸಿ ಫೈನ್ ಹಾಕ್ತರೆ. ಇದೆ೦ತಹ ಗ್ರಾಹಕ ಸೇವೆ? ಬ್ಯಾ೦ಕ್ ಗಳ ಈ ನೀತಿಯನ್ನು ಕನ್ನಡಿಗರು ಪ್ರಶ್ನಿಸದೇ ಬಿಟ್ಟಿರೋದ್ರಿ೦ದ, ಒಂದೆಡೆ ಕನ್ನಡದಲ್ಲಿ ಸೇವೆ ಸಿಗುತ್ತಿಲ್ಲ, ಮತ್ತೊ೦ದೆಡೆ ಕನ್ನಡಿಗರಿಗೆ ಸಿಗೋ ಉದ್ಯೋಗಾವಕಾಶಾನೂ ಕೈತಪ್ಪಿಹೋಗ್ತಿದೆ.

ಇನ್ನು ಕಾಯುವುದು ಬೇಡ, ಬ್ಯಾ೦ಕ್ ನ ಕರೆಗಳನ್ನು ಸ್ವೀಕರಿಸುವಾಗ, ಎ.ಟಿ.ಎ೦ ಯ೦ತ್ರದ ಬಟನ್ ಒತ್ತುವಾಗ, ಅಥವಾ ಬ್ಯಾ೦ಕ್ ನ ಜೊತೆ ಪತ್ರ ವ್ಯವಹಾರ ಮಾಡುವಾಗ ಎಲ್ಲಕ್ಕೂ ಕನ್ನಡವನ್ನೇ ಬಳಸಿ. ನಿಮಗೆ ಕನ್ನಡದಲ್ಲಿ ಸೇವೆ ಸಿಗದಿದ್ದ್ರೆ ಬ್ಯಾ೦ಕಿನವರಿಗೆ ತಪ್ಪದೇ ಬರೆದು ತಿಳಿಸಿ. ಈ ಬರೆಯುವ ಪ್ರಕ್ರಿಯೆಯಿ೦ದಲೇ ಬದಲಾವಣೆ ತರಲು ಸಾಧ್ಯ. ನಮ್ಮ ಭಾಷೆಯನ್ನು ಉಳಿಸುವುದಲ್ಲದೇ ಕನ್ನಡವನ್ನು ಒ೦ದು ಅನ್ನ ಕೊಡುವ ಭಾಷೆಯಾಗಿ ಮಾಡುವ ಶಕ್ತಿ ಈಗ ನಿಮ್ಮ ಕೈಯಲ್ಲಿದೆ ಎ೦ಬುದನ್ನು ಮರೆಯಬೇಡಿ.

ಸಿಟಿ ಬ್ಯಾ೦ಕ್ ಗೆ ಬರೆಯಲು ಈ ವಿಳಾಸವನ್ನು ಬಳಸಿ - indiaservice@citi.com
ಎಚ್.ಡಿ.ಎಫ್.ಸಿ ಬ್ಯಾ೦ಕ್ - support@hdfcbank.com
ಐಸಿಐಸಿಐ ಬ್ಯಾ೦ಕ್ - customer.care@icicibank.com
ಎ.ಬಿ.ಎನ್ ಆಮ್ರೋ - in.service@in.abnamro.com
ಕಾರ್ಪೊರೇಷನ್ ಬ್ಯಾ೦ಕ್ - cb8803@corpbank.co.in
ಆಕ್ಸಿಸ್ ಬ್ಯಾ೦ಕ್ - szh@axisbank.com

ಲೇಖಕರು

ಪ್ರಿಯಾಂಕ್

ಸಮಯ ಸಿಕ್ಕಾಗ ತಿಳಿಸುತ್ತೇನೆ.
ಸದ್ಯಕ್ಕೆ ಕ್ಷಮೆ ಇರಲಿ.

ಅನಿಸಿಕೆಗಳು

ಆದಿತ್ಯ (ಪ್ರಮಾಣಿಸಲ್ಪಟ್ಟಿಲ್ಲ.) ಧ, 03/18/2009 - 22:56

ಯಾಕೆ ಅನ್ದರೆ ಇಲ್ಲಿ ಯಾರಿಗೊ ಕನ್ನಡ ಬರೊದಿಲ್ಲ!!

rajani (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 03/19/2009 - 09:48

ನಿಮ್ಮ ಲೇಖನಿ ಬಹಳ ಚೆನ್ನಾಗಿದೆ.

ವಿ.ಎಂ.ಶ್ರೀನಿವಾಸ ಗುರು, 03/19/2009 - 14:44

ಕರ್ನಾಟಕ ಬ್ಯಾಂಕ್ , ಸ್ಟೇಟ್ ಬ್ಯಾಂಕ್ ಆಪ್ ಮೈಸೂರು. ಕೆನರಾ ಬ್ಯಾಂಕ್. ಮುಂತಾದ ಬ್ಯಾಂಕುಗಳಲ್ಲಿ ಕನ್ನಡದ ATM ಸೌಲಭ್ಯವಿದೆ. ಕನ್ನಡಿಗರು ಯಾವ ಬ್ಯಾಂಕುಗಳಲ್ಲಿ ಕನ್ನಡವನ್ನು ನಿರ್ಲಕ್ಷ್ಯಮಾಡಲಾಗುತ್ತಿದೆಯೋ, ಅಂತಹ ಕಡೆ ತಮ್ಮ ವ್ಯವಹಾರಗಳನ್ನು ಸ್ಥಗಿತಗೊಳಿಸಬೇಕು. ಕನ್ನಡೀಕರಣವಾಗದಿದ್ದರೆ, ಕರ್ನಾಟಕದಲ್ಲಿ ವ್ಯವಹಾರ ನಡೆಸಲು ಸಾಧ್ಯವಿಲ್ಲ ಎನ್ನುವಂತಹ ವಾತಾವರಣ ಸೃಷ್ಠಿಯಾಗಬೇಕು. ಆಗ ಮಾತ್ರ ಬದಲಾವಣೆ ಸಾಧ್ಯ.

ನಾವು ನಮ್ಮ ಅನುಕೂಲಕ್ಕೆ ತಕ್ಕಂತೆ ಯಾವುದೇ ಬ್ಯಾಂಕಾದರೂ ಪರ್ವಾಗಿಲ್ಲ ಅಂತ ಖಾತೆ ತೆರೆಯುತ್ತೇವೆ. ಅವರು ಅವರ ಅನುಕೂಲಕ್ಕೆ ತಕ್ಕಂತೆ ಅವರಿಗಿಷ್ಟವಾದ ಭಾಷೆಯನ್ನು ಅಳವಡಿಸಿಕೊಳ್ಳುತ್ತಾರೆ.

ರಾಮ ಪ್ರಸಾದ್ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 03/19/2009 - 15:07

[quote=ವಿ.ಎಂ.ಶ್ರೀನಿವಾಸ]ಕರ್ನಾಟಕ ಬ್ಯಾಂಕ್ , ಸ್ಟೇಟ್ ಬ್ಯಾಂಕ್ ಆಪ್ ಮೈಸೂರು. ಕೆನರಾ ಬ್ಯಾಂಕ್. ಮುಂತಾದ ಬ್ಯಾಂಕುಗಳಲ್ಲಿ ಕನ್ನಡದ ATM ಸೌಲಭ್ಯವಿದೆ. ಕನ್ನಡಿಗರು ಯಾವ ಬ್ಯಾಂಕುಗಳಲ್ಲಿ ಕನ್ನಡವನ್ನು ನಿರ್ಲಕ್ಷ್ಯಮಾಡಲಾಗುತ್ತಿದೆಯೋ, ಅಂತಹ ಕಡೆ ತಮ್ಮ ವ್ಯವಹಾರಗಳನ್ನು ಸ್ಥಗಿತಗೊಳಿಸಬೇಕು. ಕನ್ನಡೀಕರಣವಾಗದಿದ್ದರೆ, ಕರ್ನಾಟಕದಲ್ಲಿ ವ್ಯವಹಾರ ನಡೆಸಲು ಸಾಧ್ಯವಿಲ್ಲ ಎನ್ನುವಂತಹ ವಾತಾವರಣ ಸೃಷ್ಠಿಯಾಗಬೇಕು. ಆಗ ಮಾತ್ರ ಬದಲಾವಣೆ ಸಾಧ್ಯ.

ನಾವು ನಮ್ಮ ಅನುಕೂಲಕ್ಕೆ ತಕ್ಕಂತೆ ಯಾವುದೇ ಬ್ಯಾಂಕಾದರೂ ಪರ್ವಾಗಿಲ್ಲ ಅಂತ ಖಾತೆ ತೆರೆಯುತ್ತೇವೆ. ಅವರು ಅವರ ಅನುಕೂಲಕ್ಕೆ ತಕ್ಕಂತೆ ಅವರಿಗಿಷ್ಟವಾದ ಭಾಷೆಯನ್ನು ಅಳವಡಿಸಿಕೊಳ್ಳುತ್ತಾರೆ. [/quote] I agree with you

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 03/19/2009 - 15:05

ತಾವು ಕೆನಾರ ಬ್ಯಾಂಕಿನ ಎ.ಟಿ.ಎಂ ನೋಡುವುದು ಓಳಿತು

ರಾಜೇಶ ಹೆಗಡೆ ಗುರು, 03/19/2009 - 15:59

ನಾನು ಕಳೆದ ನಾಲ್ಕು ವರ್ಷಗಳಿಂದ ಐಸಿಐಸಿಐ ಬ್ಯಾಂಕಿನ ಏಟಿಎಂ ಬಳಸುತ್ತಲಿದ್ದೇನೆ. ಅದಲ್ಲಿ ಇಂಗ್ಲೀಷ್, ಹಿಂದಿ ಮತ್ತು ಕನ್ನಡ ಭಾಷೆ ಆಯ್ಕೆಗಳಿವೆ. ನಾನು ಹೆಚ್ಚಿನ ಬಾರಿ ಬಳಸುವದು ಕನ್ನಡವನ್ನೇ. ಆದರೆ ಅಲ್ಲಿನ ಕನ್ನಡ ಕೆಲವೊಮ್ಮೆ ಅರ್ಥವಾಗದಷ್ಟು ಕೆಟ್ಟ ಅನುವಾದ ಹೊಂದಿದೆ. :(
ಕೆನರಾ ಬ್ಯಾಂಕಿನದ್ದೂ ಸಹ ಬಳಸಿದ್ದು ನನಗೆ ಅದು ತುಂಬಾ ಇಷ್ಟವಾಯ್ತು. ಕೆನರಾ ಬ್ಯಾಂಕಿನ ಎಟಿಎಂ ಅತ್ಯುತ್ತಮ ಕನ್ನಡ ಇಂಟರ್ ಫೇಸ್ ಹೊಂದಿದೆ ಅನ್ನುವದು ನನ್ನ ಅಭಿಪ್ರಾಯ. :)

ಬರೀ ಏಟಿಎಂ ಕನ್ನಡದಲ್ಲಿ ಬಂದರೆ ಸಾಲದು. ಒಬ್ಬ ಕನ್ನಡಿಗ ಹೆಮ್ಮೆಯಿಂದ ಕನ್ನಡದಲ್ಲೇ ಅರ್ಜಿ ಬರೆದು ಅಕೌಂಟ್ ತೆಗೆದು ಕನ್ನಡದಲ್ಲೇ ಚೆಕ್ ಬರೆದು ಸಹಿ ಹಾಕಿ ಹಣ ಪಡೆಯುವಂತಾಗಬೇಕು. ಆದರೆ ಕನ್ನಡದಲ್ಲಿ ಇವನ್ನೆಲ್ಲಾ ಮಾಡೋದು ಅನಕ್ಷರಸ್ಥರು ಎಂಬ ತಿಳುವಳಿಕೆ ಹೊಂದಿದ ಜನರ ಮಧ್ಯೆ ಇದು ಸಾಧ್ಯವೇ ಎನ್ನುವದು ಯಕ್ಷ ಪ್ರಶ್ನೆ. :(

ಕೆಎಲ್ಕೆ ಗುರು, 03/19/2009 - 16:43

ನಾನು ಹೆಚ್ಚಾಗಿ ಕನ್ನಡದಲ್ಲಿಯೇ ಚೆಕ್ ಬರೆಯುವದು. ಅದು ಎಂದೂ ತಿರಸ್ಕೃತವಾದ ಉದಾಹರಣೆಯಿಲ್ಲ.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 03/19/2009 - 17:18

ನೆಗಟಿವ ಇಮೇಜ ಕೇ.ಎಲ್ಕೇ. ಸಾರ್,

ಒಳ್ಳೇ ಐಡಿಯ ಕೊಟ್ಟಿರಿ. ನಾನು ಪ್ರತೀ ಸಲ ಇಂಗ್ಲೀಶಿನಲ್ಲೇ ಚೆಕ್ ಬರೆಯುತ್ತೇನೆ. ಆದರೂ " not honoured due to lack of funds" ಅಂತ ಬರೆದು ತಿರಸ್ಕರಿಸುತ್ತಾರೆ. ಇನ್ನುಮೇಲೆ ಕನ್ನಡದಲ್ಲಿ try ಮಾಡಿ ನೋಡುತ್ತೇನೆ.

ಇಲ್ಲಾ ಅಂದ್ರೆ ನನಗೊಂದು ಕನ್ನಡದಲ್ಲಿ ಬರೆದ ಚೆಕ್ ಕೊಡುತ್ತೀರಾ? ಜಸ್ಟ ಫಾರ ಟೆಸ್ಟಿಂಗ ಪರ್ಪಸ್. ಬ್ಯಾಂಕಿನವ್ರು ಕೊಡುತ್ತಾರಾ, ಇಲ್ವಾ ಅಂತಾ ನೋಡಲು. ಅಥವಾ ಸ್ವಲ್ಪ ನಿಮ್ಮ ಕ್ರೆಡಿಟ್ ಕಾರ್ಡ್ ನಂಬರ್ ಕೊಟ್ಟರೂ ಆಯಿತು.

ರೋಹಿತ್ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 03/19/2009 - 21:32

ರಾಜೇಶ್ ಹೆಗಡೆ ಅವ್ರೆ,
ಸುತ್ತಲಿನ ಜನರು ಕನ್ನಡದಲ್ಲಿ ಸೇವೆ ಪಡೆಯುವರನ್ನು ಅನಕ್ಷರಸ್ತರು ಅಂತ ಭಾವಿಸ್ತಾರೆ ಅಂತ ನೀವೇಕೆ ಭಾವಿಸ್ತೀರಿ? ಈ ಭಾವನೆಯನ್ನ ತೊರೆದು ಹಾಕುವುದೇ ಪ್ರತಿಯೊಬ್ಬ ಕನ್ನಡಿಗನ ಗುರಿಯಾಗಬೇಕು.

ಜಪಾನಿನಲ್ಲಿ ಜಾಪಾನಿ ಭಾಷೇಲಿ, ಜರ್ಮನಿಯಲ್ಲಿ ಜರ್ಮನ್ ಭಾಷೇಲಿ ಸೇವೆ ಕೇಳೋದು ಹೇಗೆ ಅನಕ್ಷರಸ್ತತನ ಅನಿಸಿಕೊಳ್ಳಲ್ವೋ, ಹಾಗೇ ಕರ್ನಾಟಕದಲ್ಲಿ ಕನ್ನಡದಲ್ಲಿ ಸೇವೆ ಕೇಳೋದು/ಅಪೇಕ್ಷಿಸೋದು ಅನಕ್ಷರಸ್ತತನ ಅಲ್ವೇ ಅಲ್ಲ ಅನ್ನುವ ಸ್ವಾಭಿಮಾನ ತುಂಬಿದ ನಂಬಿಕೆ ನಮ್ಮಲ್ಲಿರಲಿ.

ಅದಲ್ಲದೆ ನಾವು ಅನಕ್ಷರಸ್ತರು ಅಂತ ಭಾವಿಸಿದರು ಅಂತ್ಲೇ ನಂಬೋಣ. ಆಗ ನಾವು ಹಾಗಲ್ಲ ಅಂತ ತೋರಿಸಲು ನಾವು ಕನ್ನಡದಿಂದಲೇ ಮಾಡಬಹುದಾದ ಸಾಧನೆಗಳನ್ನ ಮಾಡಿ ತೋರಿಸೋಣ. ಇದು ನಾವು ಕೆಲಸ ಮಾಡುತ್ತಿರುವ ಕ್ಷೇತ್ರದಲ್ಲೇ ಇರ್ಬೋದು, ಅಥವಾ ಹೀಗೆ ಕರ್ನಾಟಕದಲ್ಲಿ ವ್ಯಾಪಾರ ಸಂಸ್ಥೆಗಳು ಕನ್ನಡದಲ್ಲಿ ಕೆಲಸ ಮಾಡಿಯೇ ಲಾಭ ಮಾಡಲು ಸಾಧ್ಯ ಅಂತ ತೋರಿಸಿ ಕೊಡೋದ್ರಲ್ಲಿರಬಹುದು.

Kaccho ಸುಬ್ಬ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 03/19/2009 - 22:50

ವಿ.ಎಂ.ಶ್ರೀನಿವಾಸ ರವರೇ,
ಬ್ಯಾ0ಕಿನವರು ಅವರ ಅನಕೂಲ ನೋಡಿಕೊ0ಡು ನಾಳೆ ತಮಿಳು, ತೆಲುಗು ಮರಾಠಿ ಭಾಷೆಗಳಲ್ಲಿ ಮಾತ್ರ ಗ್ರಾಹಕ ಸೇವೆ ಕೊಡಲಾಗುತ್ತದೆ ಅ0ತ ಕಾನೂನು ತ0ದುಬಿಟ್ಟಾರು. ಯಾಕೆ ನ0ಬಿಕೆ ಬರುತ್ತಿಲ್ಲವಾ? ಇವತ್ತಿನ ನಿಜಾ0ಶ ಅದೇ ಆದರೆ ಕಾನೂನು ಮಾತ್ರ ಇಲ್ಲ. ಒ0ದಷ್ಟು ಜನ ತಮಿಳು, ತೆಲುಗು ಭಾಷೆಯ ಜನರು ಚುನಾವಣೆಯಲ್ಲಿ ಗೆದ್ದರೆ ಆಯಿತು. ಕಾನೂನು ಬ0ದೇ ಬಿಡುತ್ತದೆ.
ಆಗ ಬೆ0ಗಳೂರನ್ನು ಯೂನಿಯನ ಟೆರಿಟರಿ ಮಾಡಿಬಿಟ್ಟಾರು ಹುಷಾರ್! ಮತ್ತೆ ಕನ್ನಡಿಗರು ಎಷ್ಟು ಬಡಕೊ0ಡ್ರೂ ಹಿ0ದಿ, ತಮಿಳು, ತೆಲುಗಿನವರೇ ಜಾಸ್ತಿ ಇರೋದ್ರಿ0ದ ಯಾರೂ ಕನ್ನಡದಲ್ಲಿ ಮಾತಾಡೋದೇ ಇಲ್ಲ.

Muttige ಶುಕ್ರ, 03/20/2009 - 13:50

ನಾನು ಎಸ್.ಬಿ.ಐ.ದಲ್ಲಿ ಕನ್ನಡ ದಲ್ಲಿ ಆಪರೇಟ್ ಮಾಡಿದರೆ ಹೇಗಿರುತ್ತದೆ ಎಂದು ಟ್ರೈ ಮಾಡಿದೆ. ಆದರೆ ಇನ್ನುವರೆಗೂ ಅಲ್ಲಿ ಕನ್ನಡ ಭಾಷೆ ಮುಖಪುಟದಲ್ಲಿ "ಕನ್ನಡ" ಎಂದು ಬಂದಿತ್ತೆ ವಿನ: ನಂತರ "This Page Is Not Available" ಎಂದು ಇಂಗ್ಲೀಷ್ ನಲ್ಲೇ ತೋರಿಸಿ ಜೀವನ ಪಾವನ ಗೊಳಿಸಿತು.

ಮತ್ತೆ,ನಮ್ಮ ಕರ್ನಾಟಕದಲ್ಲಿನ ಬ್ಯಾಂಕ ಗಳು, ನ್ಯಾಶ್ನಲೈಸ್ಡ್ ಎಂದು ಎಲ್ಲದಕ್ಕೂ ಆಂಗ್ಲ ಭಾಷೆಯನ್ನೇ ಉಪಯೋಗಿಸುವುದು.ನಾವು ಸಾಲ ತೆಗೆದುಕೊಳ್ಳ ಬೇಕಾದರೆ ಇಂಗ್ಲೀಷ್ ಬರದಿದ್ದರೂ ಅವರು ಹೆಳಿದಲ್ಲಿ ಸಹಿ ಹಾಕಿ ಬರುತ್ತೆವೆ!.ನಮ್ಮೂರಿನಲ್ಲಿರುವ ಸೋಸೈಟಿಗಳಲ್ಲಿ ಮಾತ್ರ ಕನ್ನಡ ಕಾಣಲು ಸಾಧ್ಯ!.

ಪ್ರಿಯಾಂಕ್ ಶನಿ, 03/21/2009 - 18:04

ನೀವು ಎಸ್ ಬಿ ಐ ನವರಿಗೆ ಈ ಬಗ್ಗೆ ದೂರು ಸಲ್ಲಿಸಿ.
ಸರ್ಕಾರದ ಬ್ಯಾಂಕುಗಳು, ಸ್ವಲ್ಪ ನಿಧಾನವಾದರೂ ಬದಲಾವಣೆ ತರಬಹುದು.

Muttige ಶುಕ್ರ, 03/20/2009 - 13:55

ಇನ್ನೋಂದು ವಿಷಯ.ನಾನು ಯಾವಗಲೂ bsnl customer care ಗೆ ಕರೆ ಮಾಡಿದರೆ ಇಂಗ್ಲಿಷ ನಲ್ಲೇ ಮಾತನಾಡುತ್ತಾರೆ ಬಹುತೇಕ ಮಂದಿ.ನನ್ನ ಭಾಷೆ ಕನ್ನಡ ಆಯ್ಕೆ ಮಾಡಿದರು ಅವರು ಇಂಗ್ಲಿಷ ನಲ್ಲೇ ಆರಂಭಿಸುವುದು. ಆದರೆ ಸುಸ್ತಾಗಿದ್ದ ಒಂದು ದಿನ ಹಾಳಾದ ಬ್ರಾಡ ಬಾಂಡ 3 ದಿನ ಆದರೂ ಸರಿ ಆಗಿಲ್ಲ ಎಂಬ ಸಿಟ್ಟು ಇನ್ನೋಂದು ಕಡೆ. ಕರೆ ಮಾಡಿದರೆ ಆಂಗ್ಲ ಭಾಷೆಯಲ್ಲಿ ಮಾತನಾಡಿತು ಅತ್ತ ದ್ವನಿ.ನಿಮಗೆನು ಕನ್ನಡ ಬರಲ್ವ?ಮುಂತಾಗಿ ಬೈದ ಮೇಲೆ ಇವಾಗ ನಾನು ಯಾವಗ್ಲೇ ಕಾಲ ಮಾಡಲಿ, ಅವರು ಕನ್ನಡದಲ್ಲೇ ಮಾತನಾಡಲು ಆರಂಭಿಸಿದ್ದಾರೆ!!

ಪ್ರಿಯಾಂಕ್ ಶನಿ, 03/21/2009 - 18:06

ನಿಜ.
ಕೋರಿಕೆ ಒಂದೇ ಸಾಕಾಗಲ್ಲ.
ಬೆದರಿಕೆ ಕೂಡ ಬೇಕಾಗುತ್ತೆ ಒಮ್ಮೊಮ್ಮೆ.
;)

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.