Skip to main content

ರಾಜ್, ಲೀಲಾವತಿ ಮತ್ತು ರವಿಬೆಳಗೆರೆ.

ಬರೆದಿದ್ದುMarch 9, 2009
59ಅನಿಸಿಕೆಗಳು

[img_assist|nid=3743|title=ಲೀಲಾವತಿ|desc=ಲೀಲಾವತಿ|link=none|align=left|width=150|height=126]
ತ್ತೀಚೆಗೆ ಕುವೆಂಪು ಕಲಾಕ್ಷೇತ್ರದಲ್ಲಿ ಒಂದು ಕಾರ್ಯಕ್ರಮ ನಡೆಯಿತು. ಅದರ ಸಾರಥಿ ರವಿಬೆಳಗೆರೆ, ಪ್ರಾಯೋಜಕರು ಈಟಿವಿ ವಾಹಿನಿ. ಮುಖ್ಯ ಅತಿಥಿಗಳು, ಸಿನಿತಾರೆ ಲೀಲಾವತಿಯವರು, ವಿನೋದ್ ರಾಜ್ ಹಾಗೂ ಸುಧಾರಾಣಿ ಮತ್ತು ಹಿರಿಯ ನಿರ್ದೇಶಕರಾದ ಶಿವಶಂಕರಪ್ಪನವರು. ಕಾರ್ಯಕ್ರಮದ ಹೆಸರು: ಎಂದೂ ಮರೆಯದ ಹಾಡು.

ಈ ಕಾರ್ಯಕ್ರಮವನ್ನು ರವಿಬೆಳಗೆರೆ ತುಂಬಾ ಸೊಗಸಾಗಿ ನಿರೂಪಿಸುತ್ತಾರೆ ಎಂಬ ಗಾಳಿಮಾತಿಗೆ, ಧ್ವನಿಯಾಗಿ ಈ ಕಾರ್ಯಕ್ರಮಕ್ಕೇ ನಾನೂ ಹೋಗಿದ್ದೆ. ರವಿಬೆಳಗೆರೆ ಎಂದಿನಂತೆ ದೇವೇಗೌಡರ ಮೇಲೆ ಜೋಕುಗಳನ್ನು ಸಿಡಿಸುತ್ತಾ, ಸಭಿಕರನ್ನು ನಗಿಸುತ್ತಾ, ಚಿತ್ರರಂಗದ ಪರಿಶ್ರಮದಲ್ಲಿ ಮಿಂಚಿಮರೆಯಾದ ನಾಯಕಿನಟಿಯರ ಬಗ್ಗೆ ಮಾತನಾಡುತ್ತಿದ್ದರು. ಹರಿಪ್ರಿಯಾ, ಹರಿಣಿ, ಬಿ.ಸರೋಜಾ ದೇವಿ, ಪಂಡರಿಬಾಯಿ, ಮಂಜುಳ, ಪ್ರೇಮ, ಕಲ್ಪನಾ, ಜಯಮಾಲ, ಮಾಲಾಶ್ರೀ ಹಾಗೂ ಲೀಲಾವತಿಯಂತಹ ಮರೆಯಲಾಗದ ನಟಿಯರ ಬಗ್ಗೆ , ಮನಮುಟ್ಟುವಂತೆ ಸಭಿಕರಿಗೆ ರಸವತ್ತಾಗಿ ವಿವರಿಸಿ, ಅವರುಗಳನು ನಟಿಸಿದ ಚಿತ್ರಗಳಿಂದ ಒಂದು ಅಮರಗೀತೆಯನ್ನು ಖ್ಯಾತ ಗಾಯಕ/ಕಿ ರಿಂದ ಹಾಡಿಸುತ್ತಿದ್ದರು.

ಈ ಮದ್ಯೆ ಲೀಲಾವತಿಯವರ ಬಗ್ಗೆ ಮಾತನಾಡುವ ಮುಂಚೆ , ಅವರಿಬ್ಬರನ್ನೂ (ಲೀಲಾವತಿ & ವಿನೋದ್ ರಾಜ್) ರವಿ ವೇದಿಕೆಗೆ ಆಹ್ವಾನಿಸಿದರು. ಅವರಿಬ್ಬರನ್ನು ತನ್ನ ಎಡ-ಬಲದಲ್ಲಿ ನಿಲ್ಲಿಸಿಕೊಂಡು ಒಂದೊಂದೇ ಮಾತುಗಳನ್ನು ಆಗ ತಾನೇ ತೆಗೆದ ಜೇನಿನಿಂದ ತುಪ್ಪ ಒಂದೊಂದೇ ಹನಿ ಜಿನುಗುವಂತೆ , ಜಿನುಗಿಸತೊಡಗಿದರು. ನಮ್ಮ ನಾಡಿನಲ್ಲಿ ಯಾರ್ಯಾರೋ ನಾನು ಮಣ್ಣಿನ ಮಗ, ಮಣ್ಣಿನ ಮೊಮ್ಮಗ, ಅಂದ್ಕೊಂಡು ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ, ಆದರೆ ಅವರ್ಯಾರು, ಒಂದು ದಿವಸಾನೂ ನೇಗಿಲು ಕಟ್ಟಿದ್ದಿಲ್ಲ, ಹೊಲ ಉತ್ತಿದ್ದಿಲ್ಲ, ಬೀಜ ಬಿತ್ತಿದ್ದಿಲ್ಲ, "ಆದರೆ ನಿಜವಾದ ಮಣ್ಣಿನ ಮಗಳು ನಮ್ಮ ಲೀಲಮ್ಮ. ರೈತನಿಗಿಂತ ಸೊಗಸಾಗಿ ತರಕಾರಿ ಬೆಳೀತಾರೆ ಇವರು. ನನ್ನ ಪುಣ್ಯ ಇವರು ಬೆಳೆದ ತರಕಾರಿಯನ್ನು ತಿನ್ನುವ ಸೌಭಾಗ್ಯ ನನಗೆ ಸಿಕ್ಕಿತ್ತು. ಅವರ ಪ್ರಶಸ್ತಿಗಳ ಬಗ್ಗೆ ಮಾತನಾಡುತ್ತಾ , ಸುಮಾರು 500 ಸಿನಿಮಾಗಳಲ್ಲಿ ನಟಿಸಿರುವ ಇವರು( ನಾವು ಅಷ್ಟು ಸಂಖ್ಯೆಯ ಸಿನಿಮಾಗಳನ್ನು ನೋಡಿದ್ದೀವೆಯೋ ಇಲ್ಲವೋ ..!! ) ನಾಲ್ಕು ರಾಜ್ಯ ಪ್ರಶಸ್ತಿಗಳನ್ನು, ಡಾ.ರಾಜ್ ಪ್ರಶಸ್ತಿಯನ್ನು, ಜೀವಿತಾವಧಿ ಸಾಧನೆಗೆ ಫಿಲ್ಮಫೇರ್ ಪ್ರಶಸ್ತಿಯನ್ನು, ಹಾಗೂ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಇವರು ತಮ್ಮದಾಗಿಸಿಕೊಂಡಿದ್ದಾರೆ.

ನಂಬಿದವರು ಕೈಬಿಟ್ಟರೂ , ನಂಬಿದವರೇ ಇಂಚಿಂಚಾಗಿ ಅವಮಾನಿಸಿದರೂ ಅದನ್ನೆಲ್ಲ ಮೀರಿ ಇಷ್ಟೆಲ್ಲಾ ಸಾಧನೆ ಮಾಡಿದ ಈ ತಾಯಿಯ ದೈರ್ಯ ನನಗೆ ಆದರ್ಶ. "ಈ ಪ್ರಶಸ್ತಿ ನನ್ನದು, ಈ ಚಿತ್ರ ನನ್ನದು, ಈ ಖ್ಯಾತಿ ನನ್ನದು ಎಂದುಕೊಳ್ಳುತ್ತಿದ್ದ ಆ ವ್ಯಕ್ತಿ, ಈ ಒಂದೇ ಒಂದು ಜೀವವನ್ನು ಈ ಜೀವ ನನ್ನದು ಅಂತ ಸ್ವೀಕರಿಸಿದಿದ್ದರೆ, ಆ ವ್ಯಕ್ತಿ ಇನ್ನೂ ದೊಡ್ಡ ವ್ಯಕ್ತಿಯಾಗಿ ಬಿಡುತ್ತಿದ್ದರು" ಅಂದಾಗ ವಿನೋದ್ ಮತ್ತು ಲೀಲಮ್ಮ ಇಬ್ಬರೂ ವೇದಿಕೆ ಮೇಲೆಯೇ ಅತ್ತುಬಿಟ್ಟರು. ವಿನೋದ್ ರಾಜ್ ಅಂತೂ ಪಕ್ಕ ತಿರುಗಿ ಕಣ್ಣೊರೆಸಿಕೊಂಡಾಗ ಸಭಿಕರ ಕಣ್ಣಂಚಲಿ ಕಂಬನಿ ಹೆಪ್ಪುಗಟ್ಟಿಬಿಟ್ಟಿತ್ತು. ಈ ಸಂದರ್ಭ ಎಂತಹ ಕಟುಕನ ಮನಸ್ಸೂ ಕಲುಕುವಂತಿತ್ತು.

ಮುಂದುವರೆದ ರವಿ , ನಾವು ಜೀವನದಲ್ಲಿ ಎರಡು ವಿಷಯಗಳನ್ನು ತಪ್ಪದೇ ಪಾಲಿಸುತ್ತೇವೆ. 1. ಮನೆಯಿಂದ ಹೊರಡುವಾಗಲೇ, ಈ ದಿನ ನಾವು ಯಾರೊಬ್ಬರ ಬಗ್ಗೆಯೂ ಒಳ್ಳೆ ಮಾತನ್ನಾಡೋಲ್ಲ. 2. ನಮಗೆ ಗೊತ್ತಿರೋ ಸತ್ಯವನ್ನು , ಯಾರಿಗೆ ಎಷ್ಟೇ ಅನ್ಯಾಯವಾದರೂ ನಾವು ಯಾರಿಗೂ ಹೇಳೋಲ್ಲ. ಅಂತ. ಆದರೆ " ಇವತ್ತು ನಾನು ಒಂದು ಸತ್ಯವನ್ನು ಹೇಳಿದ್ದೇನೆ. ಈ ವೇದಿಕೆಯಿಂದ ಆ ಕೆಲಸ ಆಗಿದೆ ಅಂತ ಭಾವಿಸುತ್ತೇನೆ ಎಂದಾಗ ಸದಾಶಿವನಗರದ ಬಂಗ್ಲೆಗೆ ಕೇಳಿಸುವ ಹಾಗೆ ಕರತಾಡನ ಮೊಳಗಿತು.

ಈ ಕಾರ್ಯಕ್ರಮ ನೋಡಿದ ಮೇಲೆ ನನಗನ್ನಿಸಿದ್ದು ಚಿತ್ರಜೀವನದಲ್ಲಿ ಅಭಿಮಾನಿಗಳ ಮನಗೆದ್ದ ನಟಿಯರೆಲ್ಲ ಜೀವನವನ್ನು ಯಾಕೆ ಗೆಲ್ಲಲಿಲ್ಲ...? ತೆರೆಮೇಲೆ ಅವರು ನಮಗೆ ಅವರು ಹೇಗೇಗೋ ಕಂಡರೂ ಸಹ ತೆರೆಹಿಂದೆ ಅವರು ತೀರಾ ಸಾಮಾನ್ಯರಾಗಿದ್ದುದು ಹೇಗೆ..? ಸಿಕ್ಕಾಪಟ್ಟೆ ಪ್ರತಿಭೆ, ಯಶಸ್ಸು, ಹಣ ಇದ್ದರೂ ಕೂಡ ಮಂಜುಳಾ, ಕಲ್ಪನಾ ರಂತಹ ಮಿನುಗುತಾರೆಗಳು, ಆತ್ಮಹತ್ಯೆಗೆ ಮೊರೆಹೋದುದು ಯಾಕೆ...? ಖ್ಯಾತಿ, ಯಶಸ್ಸು, ಹಣ ಅವಕಾಶ ಇವೆಲ್ಲವುಗಳನ್ನು ಮೀರಿಸುವಷ್ಟು ಕೆಟ್ಟದಿತ್ತೇ ಅವರ ಜೀವನ..?

ಮನದಲ್ಲಿ ಉಳಿದವು ಎಷ್ಟೋ ಪ್ರಶ್ನೆಗಳು , ಉತ್ತರ ನೀಡುವಾರಾರೋ..? ಎಂಬ ನೋವಿನಲಿ , ಕಾರ್ಯಕ್ರಮದಿಂದ ಆಚೆ ಬಂದಾಗ , ಈಗಿನ ಉದಯನ್ಮೋಖ ನಟಿಯೊಬ್ಬರು ಕಂಡರು. ಅವರನ್ನು ನೋಡಿ ನಾನು ಮನಸ್ಸಲ್ಲೇ ಅಂದುಕೊಂಡೆ "ಆಗಿನವರ ಇತಿಹಾಸ, ಈಗಿನವರಿಗೆ ಪಾಠವಾಗದಿದ್ದರೆ ಇತಿಹಾಸ ಇಂತಹವರನ್ನು ಎಂದೂ ಕ್ಷಮಿಸೋಲ್ಲ. ಎಲ್ಲಿವರೆಗೆ ವಂಚನೆಗೊಳಗಾಗುವವರು ಇರುತ್ತಾರೋ, ಅಲ್ಲಿವರೆಗೆ ವಂಚಿಸುವವರು ಇದ್ದೇ ಇರುತ್ತಾರೆ.

ಲೇಖಕರು

ವಿ.ಎಂ.ಶ್ರೀನಿವಾಸ

ಭಾವ ಲಹರಿ

ನನ್ನ ಹೆಸರು ವೀರಕಪುತ್ರ ಶ್ರೀನಿವಾಸ,

ಅನಿಸಿಕೆಗಳು

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 03/09/2009 - 18:22

ಇದನ್ನು ಓದಿದ ಮೇಲೆ ನನಗನ್ನಿಸಿದ್ದು, ಈ ಬೆಳಗೆರೆ ಸಾಹೇಬರು ಏನೆಲ್ಲಾ ಹೇಳಿದ್ದಾರೋ, ಅದನ್ನೆಲ್ಲಾ ತಮ್ಮ ಜೀವನದಲ್ಲಿಯೂ ಅಳವಡಿಸಿಕೊಂಡರೆ ಉತ್ತಮ,ಆಗ ಇವರೂ ಸಹಾ ಮಾದರಿಯಾಗಿರಬಲ್ಲರು, 'ಗತಿಸಿದ ವ್ಯಕ್ತಿಯ ಬಗ್ಗೆ ಯಾರು ತೇಜೋವಧೆ ಮಾಡಬಾರದು' ಎಂದು ತಮ್ಮದೇ ಪೇಪರ್ ನಲ್ಲಿ ಬರೆಯುವ ಇವರು, ಈಗ ಮಾಡಿದ್ದೇನು.

ಯಾವ ಮನುಷ್ಯನೂ ಪರಿಪೂರ್ಣ ಅಲ್ಲ(ಕಂಪ್ಲೀಟ್ ಮ್ಯಾನ್ ಆಲ್) ಅನ್ನುವ ರೀತಿಯ ಒಂದು ಬರಹವನ್ನು ಬರೆದಿದ್ದರು, ಮತ್ತು ಬರೆಯುತ್ತಿರುತ್ತಾರೆ ಸಹಾ,
ಇನ್ನು ಇಂತಿಪ್ಪ ನಮ್ಮ ಬೆಳಗೆರೆ ಸಾಹೇಬರು ಅಣ್ಣಾವ್ರ ಅಂತಿಮ ದರ್ಶನ ಪಡೆಯಲು, ಬಂದಾಗ, ದೃಶ್ಯ ಮಾಧ್ಯಮದವರೊಬ್ಬರು, ಸಾರ್ ಅಣ್ಣಾವ್ರ ಬಗ್ಗೆ ಸ್ವಲ್ಪ ಹೇಳಿ ಎಂದಾಗ, ಇವರು ' ಅಣ್ಣಾವ್ರು ಒಬ್ಬ ಪರಿಪೂರ್ಣ ಮನುಷ್ಯ' ಹಾಗೆ ಹೀಗೆ ಅಂತೆಲ್ಲ ಹೇಳಿ, ನಂತರ ಕೆಲ ದಿನಗಳ ಬಳಿಕ, ಅಣ್ಣಾವ್ರನ್ನೇ ತೆಗಳಲು, ಶುರು ಮಾಡಿದರು.
ಇದರ ಬಗ್ಗೆ ಸಂಶಯವಿದ್ದರೆ, ಅವರದೇ ಹಾಯ್ ಬೆಂಗಳೂರಿನ ಕೆಲ ವರ್ಷಗಳ ಹಿಂದಿನ ಪತ್ರಿಕೆ ಓದಿ.
ಇನ್ನು ನಾವು ಯಾರನ್ನು ಹೀಯಾಳಿಸಲು, ಅಥವಾ ಹೊಗಳಲು, ಯಾವ ಹಕ್ಕನ್ನು ಹೊಂದಿಲ್ಲ, ಒಬ್ಬರ ಖಾಸಗಿ ಬದುಕನ್ನ ಹೀಗೆ ಸಾರ್ವಜನಿಕವಾಗಿ ತೆರೆದಿಡುವ ಮೂಲಕ ಅವರು ಯಾವ ಒಳ್ಳೆ ಕೆಲಸವನ್ನು ಮಾಡಿಲ್ಲ, ಆದರೆ ಲೀಲಾವತಿ ಅಮ್ಮ, ಮತ್ತು ವಿನೋದ್ ಗೆ ಕಣ್ಣೇರು ಹಾಕುವಂತೆ ಮಾಡಿದ್ದಾರಸ್ತೆ.

ಇನ್ನು ಲೀಲವತಮ್ಮ, ಅಣ್ಣಾವ್ರ ಮಧ್ಯೆ ಸಂಬಂಧ ಇತ್ತೋ ಇಲ್ಲವೋ ಅಂತ ಯಾರಿಗೂ ಗೊತ್ತಿಲ್ಲ, ಗೊತ್ತಾಗುವುದು ಬೇಕಿಲ್ಲ,
ವಿನೋದ್ ರಾಜ್ ಅಂತ ಇದ್ದ ಮಾತ್ರಕ್ಕೆ, ಅವರು ರಾಜಕುಮಾರ್ ಸಂಬಂದಿಕರೆ ಆಗಿರಬೇಕಿಲ್ಲ.
ಇನ್ನು ಬೆಳಗೆರೆ ಸಾಹೇಬರ ಬಗ್ಗೆ ನನಗೂ ಗೌರವವಿದೆ, ಹಾಗೆ ,ಅಣ್ಣಾವ್ರ ಬಗ್ಗೆ, ಲೀಲವತಮ್ಮ, ವಿನೋದ್ ಬಗ್ಗೆ ಸಹಾ, ಇನ್ನು ನಮ್ಮ ಬೆಳಗೆರೆ ಸಾಹೇಬರು, ಅಣ್ಣಾವ್ರು ತೀರಿಕೊಳ್ಳುವ ಮುಂಚೆ ತಮ್ಮದೇ ಹಾಯ್ ಬೆಂಗಳೂರಲ್ಲಿ,

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಧ, 03/11/2009 - 08:20

'ಒಬ್ಬರ ಖಾಸಗಿ ಬದುಕನ್ನ ಹೀಗೆ ಸಾರ್ವಜನಿಕವಾಗಿ ತೆರೆದಿಡುವ ಮೂಲಕ ಅವರು ಯಾವ ಒಳ್ಳೆ ಕೆಲಸವನ್ನು ಮಾಡಿಲ್ಲ' ಇದು ಸರಿಯಾದ ಮಾತು . ನಾಲ್ಕು ಗೊಡೆಗಳ ಮದ್ಯೆ ಅಗುವುದು ಅವರವರ ಸಂಸಾರದ ಖಾಸಗಿ ವಿಶಯ. ಆಣ್ಣಾರವರು ಯಾವತ್ತು ತಮ್ಮ ಖಾಸಗಿ ವಿಶಯಗಳ್ಳನ್ನು ಸಾರ್ವಜನಿಕವಾಗಿ ಉಪಯೋಗಿಸಿಕೊಂಡಿಲ್ಲ. ತಮ್ಮ ಬಿರುದುಗಳ ಬಗ್ಗೆ ಎಂದೂ ಹೇಳಿ ಕೋಂಡಿಲ್ಲಾ .

ಉದಯ್ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 03/10/2009 - 00:12

ಏನಪ್ಪ !. ನಿನಗೆ ರವಿಯವರ ಬಗ್ಗೆ ಕೋಪವಿರಬಹುದು ಆದರೆ ಲಿಲಾವತಿ ಹಾಗೂ ವಿನೋದರವರ ಬಗ್ಗೆ ಈ ರೀತಿ ಬರೆಯುವುದು ಅಸಹ್ಯವೆನಿಸುತ್ತಿದೆ, ಯಾರಾದರು ನಿನ್ನನ್ನೆ ಈ ಪ್ರಶ್ನೆ ಕೆಳಿದರೆ ನಿನಗೆನಿಸುತ್ತದೆ, ಇಡಿ ಜಗತ್ತಿಗೆ ಗೊತ್ತಿರುವ ಸಹಜವಾದ ಸಾಮಾನ್ಯವಾದ ವಿಷಯ. ಅದೆಷ್ಟೊ ಬಾರಿ ರಾಜಣ್ಣನೆ ಇದನ್ನು ಒಪ್ಪಿಕೊಂಡಿದ್ದಾರೆ.

ಇನ್ನು ರವಿಯವರು ರಾಜಣ್ಣನನ್ನು ಅಪಹಾಸ್ಯ ಮಾಡಲಿಲ್ಲ ಬದಲಿಗೆ ಅವರು ಲೀಲಾವರನ್ನು ಒಪ್ಪಿಕೊಂಡಿದ್ದರೆ ಆ ವ್ಯೆಕ್ತಿಯ ವ್ಯೆಕ್ತಿತ್ವಕ್ಕೆ ಶಿಖರಪ್ರಾಯವಾಗುತ್ತಿದ್ದರು ಎಂಬುದು ರವಿಯವರ ಆಂತರಿಕ ಮಾತು.
ಹಾಗೆಯೆ ಸತ್ತ ವ್ಯೆಕ್ತಿಯ ಮುಂದೆ ಯಾರದರು ಅವರು ಹಿಗೆ ಹಾಗೆ ಅಂತ ಹೆಳುತ್ತಾರಾ ,,,,,?
ನೀನೆ ಹೆಳಿದಂತೆ ರವಿಯವರು ರಾಜ ರ ಅಂತಿಮ ದರ್ಶನಕ್ಕೆ ಬಂದಾಗ ಒಬ್ಬ ಕಲಾವಿದನ ಬಗ್ಗೆ ಇರಬೆಕಾದ ಅಬಿಮಾನದಿಂದ ಹೊಗಳಿದ್ದಾರೆ. ಅದು ನಿಮ್ಮಂತಹ ಅಲ್ಪ ಜೀವಿಗಳಿಗೆ ಅರ್ಟವಾಗುವುದಿಲ್ಲ ಬಿಡಿ ಸಾರ್
ಲೀಲಾ ಹಾಗು ವಿನೊದ ಇವತ್ತೆ ಹೊಸದಾಗಿ ಅಳುತ್ತಿಲ್ಲ ಎಂದು ಅ ಮನುಷ್ಯ ಮೊಸ ಮಾಡಿದನೊ ಎಂದಿನಿಂದ ನಿನ್ನಂತಹ ಅವಿವೆಕಿಗಳಿದ್ದರೊ ಅಂದೆ ಅವರು ಕಣ್ಣುಗಳು ತೇವಗೊಂಡಿದ್ದವು.

ಸಿ.ಕೆ.ರೆಡ್ಡಿ ಮಂಗಳ, 03/10/2009 - 07:26

ನನಗೂ ಈ ಕಾರ್ಯಕ್ರಮದ ಬಗ್ಗೆ ನನ್ನ ಸ್ನೇಹಿತ ಹೇಳಿದಾಗ ಸ್ವಲ್ಪ ಹಿತವೆನಿಸಿತಾದರು ಅನುಮಾನ ಹಾಗು ರವಿಯವರ ಮೇಲೆ ಕೋಪಾನು ಬಂದಿತ್ತು.ಕಾರಣ ರವಿಯವರು ಸಹಜವಾಗಿ ಮಾತನಾಡಿದರು ಅದು ಗೊಂದಲಕ್ಕೆ ಸಿಲುಕುತ್ತಾರೆ . ಇಲ್ಲಿ ನಿಮ್ಮ ಅಭಿಪ್ರಾಯ ಓದಿದ ಮೇಲೆ ಆ ಕಾರ್ಯಕ್ರಮದ ವೇದಿಕೆಗೆ ಒಂದು ಸತ್ಯದ ರೂಪ ಕೊಟ್ಟಿದ್ದಾರೆಂದು ತಿಳಿದು ತುಂಬಾ ಖುಷಿಯಾಯಿತು . ನಿಜಕ್ಕೂ ರವಿಯವರ ಅ ಮಾತುಗಳು ಸಾವಿರ ಕಾಲಕ್ಕೂ ಒಪ್ಪುವಂತಹುದು, ಅಲ್ಲದೆ ಲಿಲಾವತಿ ಹಾಗು ವಿನೋದರಿಗೆ ನ್ಯಾಯ ಕೊಡಿಸುವ ಪ್ರಯತ್ನ , ಆದರೆ ಇಂತಹ ವೇದಿಕೆ ಗಳು ಅ ದೊಡ್ಡ ಮನುಷ್ಯ ಇದ್ದಾಗಲೆ ಮಾತನಾಡಿದ್ದ್ರೆ ಈ ನೊಂದ ಜೀವಗಳಿಗೆ ಪರಿಪೂರ್ಣ ಅರ್ಥ ಸಿಗುತಿತ್ತು, ಆ ಪ್ರಾಣಿಗೆ ತನ್ನ ತಪ್ಪಿನ ಅರಿವಾದರೂ ಆಗುತ್ತಿತ್ತು. ಪರೋಕ್ಷವಾಗಿ ಇನ್ನೆಷ್ಟು ಕಲಾವಿದರನ್ನು ತುಳಿದಿಲ್ಲ? ಇದು ಇಡಿ ಪ್ರಪಂಚಕ್ಕೆ ಗೊತ್ತಿದೆ ಆದ್ರೆ ಮೇಲಿನ ರಾಜರ ಅಂಧಾಭಿಮಾನಿಗೆ ಗೊತ್ತಿಲ್ಲ ಅಂತನಿಸುತ್ತಿದೆ .ಇನ್ನೊಮ್ಮೆ ರಾಜರ ಆವತಾರ ಅವಾಂತರ ಅಹಂಕಾರಗಳ ಒಳ ಪುಟಗಳನ್ನು ತಿರುಚಿ ನೊಡಿ ನೀವೆ ದ್ವೇಷಿಸಲು ಪ್ರಾರಂಬಿಸುತ್ತಿರಾ. ನಾನು ರಾಜರ ಅಭಿಮಾನಿಯೇ ಕೇವಲ ಕಲೆಗಷ್ಟೆ ವೈಯಕ್ತಿಕವಾಗಿ ಅಲ್ಲ

konkubhatta ಮಂಗಳ, 03/10/2009 - 09:26

ಪ್ರಿಯ ಶ್ರೀನಿವಾಸ್ ,

ನಡೆದ ಘಟನೆಯನ್ನು ಹುಬೇಹೂಬು ಕಣ್ಮುಂದೆ ಬರುವಂತೆ ಹೇಳಿದ್ದೀರ. ನಿಮ್ಮ ಬರೆಹ ಓದುತ್ತಿದ್ದರೆ ರವಿ ಬೆಳಗೆರೆ, ಲೀಲಾವತಿ, ವಿನೋದ್ ರಾಜ್ , ಪ್ರೇಕ್ಷಕ ವೃಂದ ಎಲ್ಲ ಕಣ್ಮುಂದೆ ಬಂದು ಹೋದರು.

ಆದರೆ ನಿಮಗೆ ರವಿ ಬೆಳಗೆರೆ ಉದ್ದೇಶಪೂರ್ವಕವಾಗಿಯೇ ಇಂತಹ ನಾಟಕಗಳನ್ನು ಮಾಡುತ್ತಾನೆ ಎಂದು ಎಂದೂ ಅನ್ನಿಸಿಲ್ಲವೇ? ಕನ್ನಡ ಪತ್ರಿಕಾರಂಗದಲ್ಲಿ ಆಗಾಗ ಸಣ್ಣ ಸಣ್ಣ ಇಂತಹ show ಕೊಡುತ್ತಿದ್ದರೆ ಮಾತ್ರ "ರವಿ ಬೆಳಗೆರೆ" ಬದುಕಿರುತ್ತಾನೆ ಎಂಬುದು ರವಿ ಬೆಳಗೆರೆಗೆ ಗೊತ್ತು. ಡಾ.ರಾಜ್ ಕಂಡರೆ ರವಿ ಬೆಳಗೆರೆಗೆ ಯಾವಾಗಲೂ ಆಗಿ ಬರಲಿಲ್ಲ. ಪಾರ್ವತಮ್ಮನವರನ್ನು ಕಂಡರಂತೂ ಆಜನ್ಮ ವೈರಿಯಂತಾಡುತ್ತಾನೆ. ಅದು ನಿಮಗೂ ಗೊತ್ತು, ನನಗೂ ಗೊತ್ತು. ಜನರಿಗೂ ಗೊತ್ತು. ಯಾವ್ಯಾವಾಗ ಯಾರ್ಯಾರ ಪಾದ ಒತ್ತಿದರೆ ಯಾರ್ಯಾರ ಮುಖಕ್ಕೆ ಮಂಗಳಾರತಿ ಆಗುತ್ತದೆ ಎಂಬುದೂ ರವಿ ಬೆಳಗೆರೆಗೆ ಗೊತ್ತು. ಅದಕ್ಕಾಗಿ ಲೀಲಾವತಿಯವರ ಭುಜದ ಮೇಲೆ ಕೋವಿಯಿಟ್ಟು ಪಾರ್ವತಮ್ಮನವರೆಡೆಗೆ ಗುಂಡು ಹಾರಿಸುತ್ತಾನೆ.

ಡಾ.ರಾಜ್ ಪೂಜೆಗೆ ಅರ್ಹ ದೇವರಲ್ಲ ಎಂದೇ ಅಂದುಕೊಳ್ಳೋಣ. ಆದರೆ ಮದುವೆಯಾಗಿದ್ದ ಡಾ.ರಾಜ್ ಜೊತೆಗೆ ಗೊತ್ತಿದ್ದೂ ಗೊತ್ತಿದ್ದೂ ಸಂಬಂಧ ಬೆಳೆಸಿದ ಲೀಲಾವತಿಯವರು ಡಾ.ರಾಜ್ ಅಷ್ಟೇ ಅಥವಾ ಅದಕ್ಕಿಂತ ಹೆಚ್ಚು ತಪ್ಪಿತಸ್ಥರಲ್ಲವೇ? ಲೀಲಾವತಿಯವರಿಗೆ ಮದ್ರಾಸಿನಲ್ಲಿ ಎರಡು ಮನೆ, ಬೆಂಗಳೂರಿನಲ್ಲಿ, ಮಂಗಳೂರಿನಲ್ಲಿ ಎಲ್ಲ ಮನೆಗಳಿದ್ದವು. ಆಸ್ತಿಯಿತ್ತು. ಅದನ್ನೇನು ಅವರು ಆ ಕಾಲದಲ್ಲಿ ಡಾ.ರಾಜ್ ಸಹಾಯವಿಲ್ಲದೇ ಖರೀದಿಸಿದರು ಎನ್ನೋಣವೇ? ಅವರ ಜೊತೆಯಲ್ಲೇ ಅವರಿಗಿಂತ ಹೆಚ್ಚು ಚಿತ್ರ ಮಾಡಿದ್ದ ಫಂಡರೀಬಾಯಿಯವರಿಗೆ ಹೋಲಿಸಿದರೆ ಲೀಲಾವತಿ ಆರ್ಥಿಕವಾಗಿ ಹೇಗೆ ಅಶ್ಟು ಸಬಲರಾದರು? ಅವರ ಈ ರೈತಾಭಿ ದಂಧೆ ಬರೇ ಇಪ್ಪತ್ತು ವರ್ಷಗಳ ಇತ್ತೀಚಿನ ಪ್ರದರ್ಶನ.

ಇನ್ನು ಲೀಲಾವತಿಯವರನ್ನು ಏನೆಂದು ಡಾ.ರಾಜ್ ಒಪ್ಪಿಕೊಳ್ಳಬೇಕಿತ್ತು ಎಂದೇ ಅರ್ಥವಾಗುವದಿಲ್ಲ. ರವಿ ಬೆಳಗೆರೆ ಎಂದಾದರೂ ತಾನು ಮಾಡಿರುವ ಎಲ್ಲ ಪಾಪಗಳನ್ನು ಒಪ್ಪಿಕೊಂಡು ತನ್ನ ವ್ಯಕ್ತಿತ್ವವನ್ನು ಮೇಲಕ್ಕೆತ್ತುವ ವಿಚಾರ ಮಾಡಿಯಾನೇ?

Nothing is impossible for the person, who doesn't have to do it himself.

-ಕೊಂಕುಭಟ್ಟ

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 03/13/2009 - 10:59

:dance: Konku Batta I liked your comments
But some people blindly follow whatever he
says

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 03/10/2009 - 11:10

ಕೊಂಕು ಭಟ್ಟರೇ ಸರಿಯಾಗಿ ತಿವಿದಿದೀರ .
ಅವರು ಅವರನ್ನ ಸಮರ್ತಿಸಿಕೊಂಡರೆ, ನಾವು ನಮ್ಮನ್ನೇ ಸಮರ್ತಿಸಿಕೊಳ್ಳುತ್ತೇವೆ,
ರವಿ ಬೆಳಗೆರೆಗೆ ಎರಡು ಮೊರಲ್ಲ, ನೋರ್ರರು ಮುಖ ಇದೆ, ಅವರ ಬಗ್ಗೆ ನನಗೇ ವಿಯುಕ್ತಿಕ ದ್ವೇಷವಿಲ್ಲ, ಆದರೆ, ಆ ಮನುಷ್ಯನೇ 'ನಂಬಿಕೆಗೆ' ಅರ್ಹನಲ್ಲ. ಇನ್ನು ಬೇರೆಯವರ ಬಗ್ಗೆ ಮಾತನಾಡಲು ಇವರಿಗೇನು ಹಕ್ಕಿದೆ? ಮೊದಲು 'ತನ್ನ ಮನೆಯ ಪ್ಲೇಟ್ ನಲ್ಲಿ ಸತ್ತು ಬಿದ್ದಿರುವ ಆನೆ ನೋಡಿಕೊಂಡು, ನಂತರ ಇನ್ನೊಬ್ಬರ ಮನೆಯ ತಟ್ಟೆಯಲ್ಲಿರುವ ಇರುವೆಯತ್ತ ನೋಡಲಿ' ಶೋ ಕೊಟ್ತೊರ್ನೆಲ್ಲ, 'ಶೋ ಮ್ಯಾನ್ ' ಅನ್ನಲ್ಲ, ಈ ತರಹದ 'ಬಿಲ್ಡ್ ಅಪ್ ' ಬಿಟ್ಟು ಬದುಕಿದರೆ, ಅದೇ ಸಾಕು..

ವಿ.ಎಂ.ಶ್ರೀನಿವಾಸ ಮಂಗಳ, 03/10/2009 - 11:42

ಹಾಯ್ ಭಟ್ರೇ..!!
ಯಾಕೋ ನಿಮ್ಮ ಅಭಿಪ್ರಾಯ ಓದಿ ನಿಮಗೆ ಉತ್ತರಿಸಲಾಗದೇ ಇರಲು ನನ್ನಿಂದಾಗುತ್ತಿಲ್ಲ.
ಮೊದಲಿಗೆ " ಈ ಸಮಾಜದಲ್ಲಿ ಯಾವುದೇ ವ್ಯಕ್ತಿ ಎಲ್ಲರಿಗೂ ಒಳ್ಳೇಯವನಾಗಿರೋಕೆ ಸಾಧ್ಯವಿಲ್ಲ. ಹೇಗೆ ರವಿಬೆಳಗೆರೆಗೆ ರಾಜ್ ಕುಟುಂಬ ಇಷ್ಟವಾಗುವುದಿಲ್ಲವೋ(ನಿಮ್ಮ ಪ್ರಕಾರ), ಹಾಗೇ ನಿಮಗೆ ರವಿಬೆಳಗೆರೆ ಇಷ್ಟವಾಗದೇ ಇರಬಹುದು. ಹೀಗಿದ್ದಾಗ ಸಹಜವಾಗಿ ಅಭಿಪ್ರಾಯಗಳು ಅವರವರ ಮೂಗಿನ ನೇರಕ್ಕೆ ಹೊರಟುಬಿಡುತ್ತವೆ. ಇದನ್ನು ಖಂಡಿತ ತಪ್ಪು ಅಂತ ನಾನು ಹೇಳಲಾರೆ. ಆದರೆ ನೀವು ಲೀಲಾವತಿಯವರ , ಪಾವಿತ್ರ್ಯಕ್ಕೆ, ಜೀವನಕ್ಕೆ ಅವರ ಸಂಪತ್ತಿನ ಉದಾಹರಣೆ ಕೊಟ್ಟಿರಿ ನೋಡಿ ಅದು ಖಂಡಿತ ತಪ್ಪು ಕಣ್ರೀ. ಇರಲಿ ರಾಜ್ ಕುಮಾರ್ ನೆರವಿನಿಂದಲೇ ಆಕೆ ಅಷ್ಟೆಲ್ಲಾ ಸಂಪಾದಿಸಿರಬಹುದು, ರಾಜ್ ಏನು ಸುಮ್ಮನೇ ಕೊಟ್ಟರಾ ..? ಅನ್ನೊಂತಹ ನೀಚ ಪ್ರಶ್ನೆ ಯಾರಾದರೂ ಕೇಳಿದರೆ ಹೇಗೆ ಉತ್ತರಿಸೋದು..? ನಮ್ಮ ಮನೆಯ ಹೆಣ್ಣುಮಗಳಿಗೆ ಈ ತರದ ವಂಚನೆಯಾದರೆ ನಾವು ಆಗಲೂ ಕೂಡ, ಬಿಡು ಅವನಿಂದ ಇಷ್ಟೆಲ್ಲಾ ಸಂಪತ್ತು ಬಂದಿದೆ ಅನ್ನೊಂತಹ ನಿರ್ಧಾರಕ್ಕೆ ಬರ್ತೀವಾ..? ಶೀಲದ ವಿಷಯದಲ್ಲಿ ಬರೀ ಕೊಟ್ಟು ಪಡೆಯುವಿಕೆಯೇ ಪ್ರಧಾನವಾದರೆ ಅದನ್ನು ವ್ಯೇಶ್ಯಾವಾಟಿಕೆ ಎನ್ನಬಹುದಲ್ಲವಾ..? ಅನ್ನಬಹುದು ಅನ್ನೋದಾದರೆ, ರಾಜ್ ಈ ದಂಧೆಯಲ್ಲಿ ಭಾಗಿಯಾಗಿದ್ದರು ಎನ್ನಲಡ್ಡಿಯಿಲ್ಲವಲ್ಲ..? ಹೇಳಿ, ಇಂತಹ ಅಯೋಗ್ಯ ಪ್ರಶ್ನೆಗಳ ಮಟ್ಟಕ್ಕೆ ಆ ಎರಡು ಮಹಾನ್ ಕಲಾವಿದರನ್ನು ನಾವು ಇಳಿಸೋದು ಸರಿನಾ..?

ರಾಜ್ ಮತ್ತೆ ಲೀಲಮ್ಮ ಮದ್ಯೆ ಏನು ನಡೆಯಿತೋ ಅದು ಪ್ರಕೃತಿಸಹಜ ಗುಣ. ಇಂತಹ ಘಟನೆಗೆ ಇವರಿಬ್ಬರು ಮೊದಲನೆಯವರಲ್ಲ, ಕೊನೆಯವರಂತೂ ಅಲ್ಲವೇ ಅಲ್ಲ..! ವ್ಯಾಮೋಹಕ್ಕೆ ಒಳಗಾದಾಗ ಇಲ್ಲದ ಅಂಜಿಕೆ ಅದನ್ನು ಅದನ್ನು ಒಪ್ಪಿಕೊಂಡು ನಡೆಯೋವಾಗ ಅಡ್ಡ ಬಂದರೆ ಏನೆನ್ನಬೇಕು ಈ ಸ್ವಭಾವವನ್ನು..?

ಸುಮ್ನೇ ಒಂದು ಮಾತು. ನನಗ್ಗೊತ್ತು ಈ ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ ಹಾಗೇ ರವಿ, ರಾಜ್, ಲೀಲಮ್ಮ ಕೂಡ. ಆದರೆ ನೀವು ರವಿ ಮೇಲಿನ ಕೋಪಕ್ಕೆ ಲೀಲಮ್ಮನಿಗಾದ ಅನ್ಯಾಯವನ್ನು ಅನ್ಯಾಯವೇ ಅಲ್ಲ ಅನ್ನೋದಾದರೆ ಕ್ಷಮಿಸಿ ಸಾರ್ ನಾನು ನಿಮ್ಮ ಎತ್ತರಕ್ಕೆ ಏರಲಾರದಂತಹವನು. ನೀವು ನನ್ನ ಬಿಟ್ಟು ಮುನ್ನಡೆಯಬಹುದು.

ಕೊನೆಯಲ್ಲಿ ಯಾವ್ಯಾವುದೋ ದಂಧೆ ಬಗ್ಗೆ ಕೇಳಿದ್ದೆ. ಆದರೆ ನನ್ನ ಜೀವನದಲ್ಲಿ ಮೊದಲಬಾರಿ ನಿಮ್ಮಿಂದ ರೈತದಂಧೆ ಬಗ್ಗೆ ಕೇಳಿದೆ ."ರೈತಾಪಿ ದಂಧೆ" ಅನ್ನೋ ಒಳ್ಳೇ ಪದ ನಿಮ್ಮಿಂದ ಕೇಳುವಂತಾಗಿದ್ದು ದೊಡ್ಡ ನೋವಿನ ಸಂಗತಿ ಸಾರ್. ಆದ್ರೆ ಭಟ್ರೇ ಒಂದು ವಿಷಯ ನಿಮ್ಮ ಗಮನಕ್ಕೆ ತರೋಕೆ ಇಚ್ಚಿಸುತ್ತೇನೆ. ರೈತರ ಹೆಸರು ಹೇಳಿಕೊಂಡು ಲೀಲಮ್ಮ ಚುನಾವಣೆಗೆ ನಿಲ್ಲೋಕೆ ಹೋಗ್ತಿಲ್ಲ. ನಾನು ರೈತೆ ಅಂತ ಹೇಳಿಕೊಂಡು, ಸರ್ಕಾರದಿಂದ ಉಚಿತ ಕೃಷಿ ಜಮೀನು ಕೇಳೋಕೆ ಹೋಗಿಲ್ಲ. ರೈತ ನಾಯಕಿ ಆಗಬೇಕು ಅಂತ ಹೋಗಿಲ್ಲ. ರೈತರ ಹೆಸರು ಹೇಳಿಕೊಂಡು ಸರ್ಕಾರದಿಂದ ಉಚಿತ ವಿದೇಶ ಪ್ರವಾಸ ಹೋಗಿಲ್ಲ. ಹಾಗಾದರೆ ದಯವಿಟ್ಟು ಇದು ಯಾವ ರೀತಿ ದಂಧೆ ಅನ್ನೋದನ್ನು ದಯವಿಟ್ಟು ತಿಳಿಸಿ ಸಾರ್.
ವಿಮರ್ಶೆ ಮಾಡಲೇಬೇಕು ಅನ್ನೋ ಕಾರಣಕ್ಕೆ ವಿಮರ್ಶೆ ಮಾಡೋಕೆ ಹೊರಟರೆ, ತಾಯಿ ಪ್ರೀತಿ ಕೂಡ ಸುಳ್ಳು ಅನ್ನಬಹುದು. ನಾನು ಒಬ್ಬ ಸ್ನೇಹಿತನಾಗಿ ನಿಮ್ಮಿಂದ ಆ ಕೆಲಸ ಆಗದಿರಲಿ ಅಂತ ಆಶಿಸುತ್ತೇನೆ.
ತಪ್ಪನ್ನು ಒಪ್ಪಿಕೊಳ್ಳೋನು, ಎಲ್ಲರಿಗಿಂತ ದೊಡ್ಡವನಂತೆ.
ಎಲ್ಲೋ ಕೇಳಿದ ನೆನಪು.

konkubhatta ಮಂಗಳ, 03/10/2009 - 12:22

ಪ್ರಿಯ ಶ್ರೀನಿವಾಸ್,
ನನ್ನ ಹೆಸರು ನೋಡಿ. ಕೆಲವೊಮ್ಮೆ ನಿಮ್ಮಂತವರಿಗೆ ನಾನು ಹೇಳಿರದ ಕೊಂಕು ಕಂಡು ಬಿಡುತ್ತದೆ. :D

ರವಿ ಬೆಳಗೆರೆ, ರಾಜ್ಕುಮಾರ್ ಇಬ್ಬರೂ ನನಗೆ ಹತ್ತಿರ ಹತ್ತಿರ ಅಷ್ಟಶ್ಟೇ ಇಷ್ಟ. ಆದರೆ ರಾಜ್ಕುಮಾರ್, ಲೀಲಾವತಿ ಇಬ್ಬರೂ with open eyes ಕೂಡಿ ಮಾಡಿದ ಒಂದು ಕಾರ್ಯಕ್ಕೆ ರಾಜ್ಕುಮಾರ್ ಮೊಹರು ಹಾಕದೇ ಹೋದ್ದರಿಂದ ಅವರ ವ್ಯಕ್ತಿತ್ವ ಕೆಳಗೆ ಹೋಯಿತು ಅಥವಾ ಮೇಲಕ್ಕೆ ಹೋಗಲಿಲ್ಲ ಎನ್ನುವದನ್ನು ಒಪ್ಪಲಾಗದು. ನೀವು ಹೇಳುವ "ಲೀಲಾವತಿಯವರಿಗಾದ ವಂಚನೆ" ಏಕೋ ಇದೇ with open eyes theoryಯ ಸಲುವಾಗಿ ವಂಚನೆಯಾಗಿ ಕಾಣುತ್ತಿಲ್ಲ. ನಾನು ಲೀಲಾವತಿಯವರ ಸಂಪತ್ತಿನ ಬಗ್ಗೆ ಹೇಳಿದ್ದು ರಾಜ್ ತೀರ ನಡುನೀರಿನಲ್ಲಿ ಲೀಲಾವತಿಯವರ ಕೈ ಬಿಟ್ಟಿಲ್ಲ ಎಂಬ ಕಾರಣಕ್ಕಶ್ಟೇ. ತಾನು ಮಾಡಿದ ತಪ್ಪಿಗೆ ರಾಜ್ ತಮ್ಮ ಕೈಲಾದಷ್ಟು ಪ್ರಾಯಸ್ಚಿತ್ತ ಮಾಡಿಕೊಂಡಂತೆ ಕಾಣುತ್ತದೆ. ಅವರು ಸತ್ತು ವರುಷಗಳೇ ಉರುಳಿದರೂ ಈ ತರಹ ತಮ್ಮ ಮಾನ ಹರಾಜು ಹಾಕುತ್ತ ಇರುತ್ತಾರೆ ಎಂದು ಗೊತ್ತಿದ್ದರೆ ರಾಜ್ ಈ ಕೆಲಸಕ್ಕೆ ಕೈ ಹಾಕುತ್ತಿದ್ದರೇ ಎಂಬುದು ಯಕ್ಷಪ್ರಶ್ನೆ. (ತನ್ನ ಮಗನ ತಾಯಿಯಾದ ಹೆಂಗಸನ್ನು ನಡುನೀರಿನಲ್ಲಿ ಕೈಬಿಡುವದು ಅಂದರೆ ಏನು ಎಂಬ ಬಗ್ಗೆ ಒಂದು classic ಉದಾಹರಣೆ ಕೊಟ್ಟರೆ ನೀವು ನನ್ನ ಪೂರ್ವಾಗ್ರಹ ಎಂದು ದೂರುತ್ತೀರಿ ಎಂಬ ವಿಶ್ವಾಸದೊಂದಿಗೆ ಅದನ್ನು ಮಾಡುತ್ತಿಲ್ಲ.)

ಇನ್ನು ಗುರುಗಳೇ, ನೀವು ಲೀಲಾವತಿಯವರನ್ನು ಶೀಲ,ಪಾವಿತ್ರ್ಯ ಎಂಬೆಲ್ಲ ಶಬ್ದಗಳ ಮೂಸೆಯಲ್ಲಿ ನೈತಿಕ ನೆಲಗಟ್ಟಿನಲ್ಲಿ ಮೇಲೆರಿಸುವ ಪ್ರಯತ್ನ ಮಾಡುತ್ತಿದ್ದಿರಿ. ಹೆಂಡತಿ ಇದ್ದಾಗಲೂ ಪರಸ್ತ್ರೀ ಸಂಗ ಮಾಡಿದ ರಾಜ್, ಹೆಂಡತಿ ಇದ್ದವನನ್ನು ಮೋಹಿಸಿದ ಲೀಲಾವತಿಯವರು ಇಬ್ಬರೂ ಶೀಲ, ಪಾವಿತ್ರ್ಯ ಎರಡರ ಬಗ್ಗೂ ಯೋಚಿಸದ ನಮ್ಮೆಲ್ಲರಂತ ಮಾನವರಾಗೇ ಕಾಣುತ್ತಾರೆ. ಆದ್ದರಿಂದ ಅವರಿಗೆ ತಪ್ಪೆಸಗುವ ಹಕ್ಕು ಇದ್ದೇ ಇದೆ. ಆದರೆ ಇದು ಇಬ್ಬರ ತಪ್ಪೂ ಆಗಿರುವದರಿಂದ ತುಂಬಿದ ಸಭೆಯಲ್ಲಿ ರವಿ ಬೆಳಗೆರೆ ಅಕ್ಕಪಕ್ಕದಲ್ಲಿ ತಾಯಿ ಮಗನನ್ನು ನಿಲ್ಲಿಸಿಕೊಂಡು ರಾಜ್ಕುಮಾರ್ರನ್ನೊಬ್ಬರನ್ನೇ ತಪ್ಪಿತಸ್ಥರನ್ನಾಗಿ ಮಾಡುವ ಪಂಚಾತಿಕೆ ನನಗೆ ಸಹ್ಯವಾಗುವದಿಲ್ಲ.

ಇನ್ನು ನನ್ನ ಕೆಟ್ಟ ಕನ್ನಡ ನೋಡಿ. ಕೆಲವೊಮ್ಮೆ ಯಾವ್ಯಾವದೊ ಶಬ್ದ ಬಳಕೆ ಆಗಿ ಹೊಗುತ್ತದೆ. ಅದಕ್ಕಾಗಿ ರೈತಾಭಿ ಶಬ್ದದ ಜೊತೆ "ದಂಧೆ" ಬಳಸಿದ್ದರಿಂದ ನಿಮಗೆ ಕೊಂಚ ಇರಿಸು ಮುರಿಸು ಆದ ಹಾಗಿದೆ. ನಾನೂ ಆ ಶಬ್ದವನ್ನು ಕೇ.ವಿ.ಪುಟ್ಟಪ್ಪನವರ ಕಾನೂರು ಸುಬ್ಬಮ್ಮ ಹೆಗ್ಗಡತಿಯಿಂದ ಕದ್ದದ್ದೇ. ಅಲ್ಲದೇ ನಮ್ಮ ಕಡೆ ಇನ್ನೂ "ದಂಧೆ" ಎನ್ನುವ ಶಬ್ದ ಗೌರವಪೂರ್ವಕವಾಗೇ ಬಳಸಲ್ಪಡುತ್ತದೆ. "ನೌಕರಿ", "ಉದ್ಯೋಗ" ಇತ್ಯಾದಿಗಳಿಗೆ ಪರ್ಯಾಯವಾಗಿರುವ ಶಬ್ದಕ್ಕೆ ಕಳೆದ ಕೆಲ ದಶಕಗಳಲ್ಲಿ ಇಶ್ಟು ಕೆಟ್ಟ ಅರ್ಥ ಬರಲಿಕ್ಕೆ ಯಾರು ಕಾರಣ ಎಂದು ಮಾತ್ರ ತಲೆ ಕೆರೆಯಬೇಕು.

-ಕೊಂಕುಭಟ್ಟ

ವಿ.ಎಂ.ಶ್ರೀನಿವಾಸ ಮಂಗಳ, 03/10/2009 - 12:47

ಗೆಳೆಯ ಭಟ್ ರವರಿಗೆ.
ಅವರವರ ಭಾವಕ್ಕೆ , ಅವರವರ ಭಕುತಿಗೆ ಅನ್ನುವುದು ಬಿಟ್ಟರೆ ನನ್ನಲ್ಲಿ ಹೇಳಲು ಏನೂ ಉಳಿದಿಲ್ಲ. ಈ ಹಿಂದಿನ ಅಭಿಪ್ರಾಯದಲ್ಲಿ ಹೇಳಿದ್ದನ್ನು ಮತ್ತೊಮ್ಮೆ ಹೇಳುವುದಾದರೆ " ನಾನು ನಿಮ್ಮ ಎತ್ತರಕ್ಕೆ ಏರಲಾರದವನು, ನೀವು ನನ್ನ ಬಿಟ್ಟು ಮುನ್ನಡೆಯಬಹುದು.

ಆಮೇಲೆ ಖಂಡಿತ ನಿಮ್ಮ ಹೆಸರನ್ನು ನೋಡಿ, ನೀವು ಕೊಂಕುಬುದ್ದಿಯವರು ಅಂತ ನಾನು ಭಾವಿಸಿಲ್ಲ. ನಿಮ್ಮ ಬಗ್ಗೆ ಗೌರವವಿದೆ.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 03/10/2009 - 11:42

ರೀ ಕೊಂಕುಭಟ್ಟರೆ
ನಿಮ್ಮನ್ನು ನೀವು ಸಮರ್ಥಿಸಿಕೊಳ್ಳಿ, ರಾಜರನ್ನು ದೆವರೆಂದೆ ಕರೆಯಿರಿ,ಆದರೆ ಲಿಲಾವತಿಯ ಬಗ್ಗೆ ಕೆಟ್ಟದಾಗಿ ಬರೆಯಬೆಡಿ .
ದೆವರೆಂದು ಆರಾದಿಸಲ್ಪಡುವ ಅ ಆಯೊಗ್ಯನಿಗೆ ಗೊತ್ತಿರಲ್ಲವ ಅವನಿಗೆ ಮದುವೆಯಾಗಿದೆಯೆಂದು, ಹೆಣ್ಣಿಗೆ ಮೊಸ ಮಾಡುವುದೊಂದೆ ಉದ್ದೆಶ . ಅಂತಹ ವ್ಯೆಕ್ತಿಯನ್ನು ಒಪ್ಪುತ್ತಿದ್ದಿರಲ್ಲ ನಿಮ್ಮನ್ನು ಯಾವುದರಲ್ಲಿ ಹೊಡೆಯಬೆಕು ................

ವಿ.ಎಂ.ಶ್ರೀನಿವಾಸ ಮಂಗಳ, 03/10/2009 - 11:50

ಡಿಯರ್ ಪ್ರೆಂಡ್ಸ್.

ಪ್ಲೀಸ್ ಇದೊಂದು ಲೇಖನದ ವಿಷಯದಲ್ಲಿ ಯಾರೂ ಕೆಟ್ಟ ಭಾಷೆ ಬಳಸಬೇಡಿ. ಯಾಕೆಂದರೆ ನಾವು ಮಾತನಾಡುತ್ತಿರುವುದು ಇಬ್ಬರು ಮಹಾನ್ ಕಲಾವಿದರ ಬಗ್ಗೆ. ಅವರ ಭಾಂದವ್ಯದ ಬಗ್ಗೆ. ಅವರ ಖಾಸಗೀ ಜೀವನದ ಬಗ್ಗೆ. ಇಂತಹ ಭಾಂದವ್ಯಕ್ಕೆ, ನೋವಿಗೆ ಇವರೇ ಮೊದಲನೆಯವರಲ್ಲ ಕೊನೆಯವರಂತೂ ಅಲ್ಲವೇ ಅಲ್ಲ. ಬೇಕಾದರೆ ಬೇಕಾದಷ್ಟು ಚರ್ಚೆಯಾಗಲಿ ಭಟ್ಟರು ಅವರ ಅಭಿಪ್ರಾಯವನ್ನು ತಿಳಿಸಿದ್ದಾರೆ ನೀವು ನಿಮ್ಮ ಅಭಿಪ್ರಾಯವನ್ನು ತಿಳಿಸಿ. ಅದುಬಿಟ್ಟು ಕೆಟ್ಟ ಭಾಷೆ ಪ್ಲೀಸ್ ಬೇಡ.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 03/10/2009 - 12:40

ಅಲ್ಲ ರಿ ಒಂದು ಹೆಣ್ಣಿನ ಬಗ್ಗೆ ಅಷ್ಟೊಂದು ಕೆಟ್ಟದಾಗಿ ಮಾತನಾಡಬಾರದು, ಜನ ಸಿತೆಯನ್ನು ಅವಮಾನಿಸಿದ್ದರೆ ಅಥವಾ ಅನುಮಾನಿಸಿದ್ದರೆ ರಾಮಾಯಣವೆ ಇರುತ್ತಿರಲಿಲ್ಲ ಕೆಟ್ಟ ಪದ ಬಳಸಬೆಕೆಂದು ಬಳಸಲಿಲ್ಲ, ಅದಕ್ಕೆ ನನ್ನ ಕ್ಷಮೆ ಇರಲಿ

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 03/13/2009 - 13:12

ಎರಡು ಕೈ ಸೇರದೆ ಯಾವತ್ತು ಚಪ್ಪಾಳೆ ಹೊಡಿಯುವುದಿಲ್ಲ?

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 03/10/2009 - 16:14

ವಿಸ್ಮಯ ನಗರೆಯ ಇನ್ನುಲಿದ ಒದುಗರ ಅಭಿಪ್ರಾಯ ಓದಿ ನನಗು ರವಿ ಬಳಗೆರೆಯವರ ಬಗ್ಗೆ ಬರೆಯಬೆಕನಿಸಿತು. ಕಳೆದ ಹತ್ತು ವರ್ಷಗಳಿ0ದ ನಾನು ರವಿ ಬಳಗೆರೆಯವರನ್ನು ಗಮನಿಸುತ್ತ ಬ0ದ್ದಿದ್ದೆನ್ನೆ. ನನ್ನ ಪ್ರಕಾರ He is an opportunist. If one wants know about any person’s character then should talk to that person friends. If you ask any of Mr. Ravi Balegere friends or colleagues or fellow journalist, no one talk good about him. IMHO he does not deserve to talk about personality like Mr. Raj Kumar. If you look at the history of Mr. Ravi Balegere, he is accused of rape when he was working as professor in Raichur, removed from Samyukatta Karnataka by Mr. Shyam Rao because Mr. Ravi Balegere wanted to turn a good Kannada daily news paper to crime paper and you will find such kind of pitfall in his own personality. More over Ravi Balegere is such person who says nothing against to strong and popular people when they are alive, after their death he will start decimating the personality of those.

It’s not only for Mr. Raj Kumar even it’s true in case late Mr. Shyama Rao and many more. I don’t know why people won’t understand all these gimmicks. It is very cheap way of earning living.

If you look at his tabloid, is a big junk and full of lies. He uses his tabloid as an instrument to attach on popular personalities. Instead of using it for social or political or what ever meaning causes.

ರಾಜೇಶ ಹೆಗಡೆ ಧ, 03/11/2009 - 10:48

ರವಿಬೆಳಗೆರೆಯರವರು ನಡೆಸಿಕೊಟ್ಟ ಕೆಲವು ಕಾರ್ಯಕ್ರಮಗಳನ್ನು ಟಿವಿಯಲ್ಲಿ ನೋಡಿದ್ದೆ. ನಿಮ್ಮ ಲೇಖನ ಓದುತ್ತಿದ್ದಾಗ ಅಲ್ಲಿನ ಪರಿಸರದಲ್ಲೇ ಕೂತಿದ್ದಂತೆ ಘಟನೆಗಳು ಕಣ್ಮುಂದೆ ನಡೆಯುತ್ತಿದ್ದಂತೆ ಅನಿಸಿತು. 8) ಈ ಸುಂದರ ಲೇಖನಕ್ಕೆ ಧನ್ಯವಾದಗಳು :)

ನಿಜವಾಗಲು ಲೀಲಾವತಿಯವರ "ಸ್ವಾಭಿಮಾನಿಯೆ"..
ಅವರು ಎಂತಹಾ ಪರಿಸ್ಥಿತಿಯಲ್ಲು ಬಾಯಿಬಿಡಲಿಲ್ಲ. ಅವರಿಗೆ ರಾಜ್ ಅವರ ಮೇಲಿದ್ದ ಗೌರವ ಅಂತಹದು..
ರವಿ ಬೆಳಗೆರೆಯವರ ಬಗ್ಗೆ ನನ್ನದೇನು ಆರೋಪವಿಲ್ಲ.
ಪತ್ರಕರ್ತರು ಎಂದರೆ ನಾಲ್ಕು ಜನರು ಇಸ್ಟ ಪಡುತ್ತಾರೆ, ಹಾಗೆ ನಾಲ್ಕು ಜನರು ಇಸ್ಟ ಪಡುವುದಿಲ್ಲ.
ಶ್ರೀನಿವಾಸ್ ಅವರಿಗೆ ಧನ್ಯಾವದಗಳು...

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಧ, 03/11/2009 - 13:54

if i remember correctly once lankesh wrote in his paper that ravi belagere calls himself Bichi's son. he also holds hand of every 60year old and ask whether they are his father. may be ravi belagere has that pain. so he express his pain in dr.raj name.

but if lilavati really loved dr.raj then she should not allow all tom,dick and harry to say like this about dr.raj in a function. but i think both lilavati and vinod both has lost their mind. they recently complain that somebody tried to shooting them. what a joke.

ಆಶಾ, ಮಂಗಳೂರು (ಪ್ರಮಾಣಿಸಲ್ಪಟ್ಟಿಲ್ಲ.) ಧ, 03/11/2009 - 15:28

ಪ್ರಿಯ ಶ್ರೀನಿವಾಸನ ಅವರ ಅಭಿಪ್ರಾಯ ನೂರಕ್ಕೆ ನೂರು ಸರಿಯಾಗಿದೆ, ಲೀಲಾವತಿಯವರ0ತೆ ವಿವಾಹಿತ ಪುರುಶರನ್ನು ಬಲೆಗೆ ಹಾಕುವ ಹೆಣ್ಣುಗಳ ಕೊನೆ ಇದೇ ರೀತಿಯ್ಯಾಗುತ್ತದೆ. ರವಿ ಬೆಳೆಗೆರೆಯ ಮಾತಿಗೆ ಯಾವುದೇ ಕಿಮ್ಮತ್ತು ಇಲ್ಲ.

:( ಮುಗಿದ ಕಥೆಗೆ ಪುನಹ ಮುನ್ನುದಿ ಬರೆಯೊದು ಯಾಕೆ?

ಬೆಳ್ಮಣ್ಣು ಸುಧಿ… (ಪ್ರಮಾಣಿಸಲ್ಪಟ್ಟಿಲ್ಲ.) ಧ, 03/11/2009 - 17:27

this article is in very bad taste. the author's further justifications also insult dr.rajkumar.

This man ravi belagere himself has no moral codes and ethics but comments on everybody else in a loose manner. this need not be reported in this website as gospel truth.

moreover what is lilavati's moral position in this as a woman who has fallen for a married man? did she want to break his home? now what does she want after all these years? her son looks like an imbecile running arround his mother like that. this shows that both belong to a drama background.

ABHIMANI DEVARU, (ಪ್ರಮಾಣಿಸಲ್ಪಟ್ಟಿಲ್ಲ.) ಧ, 03/11/2009 - 17:52

ಅಭಿಮಾನಿ ದೇವ್ರು ಅಂತ ಕರೆದ ಆ ವರನಟನಿಗೆ ಯಾವುದೇ ಹೇಳಿಕೆಯಿಂದ ಕುಂದುಂಟಾಗದು ಯಾಕಂದ್ರೆ ನಾಯಿ ಬೊಗಳಿದರೆ ಸ್ವರ್ಗಲೋಕ (ಅಣ್ಣಾವರು) ಹಾಳಾಗೊಲ್ಲ.........

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಧ, 03/11/2009 - 18:19

ಈ ಬೆಳಗೆರೆ ಬಿಡ್ರಿ, ಬರಿ ಸುಳ್ಳ, ತನ್ನ ಕುಟುಂಬದವರ ಕಥೆ ಹೇಳಕ್ಕೆ ಪತ್ರಿಕೆ ಮಾಡ್ತಿದ್ದಾನೆ. ಅವನ ಭಾವಿ ಅಳಿಯ ಕಿಟ್ಟಿಯ ಸಿನಿಮಾ ಬಂದಾಗ ಪತ್ರಿಕೆಯಲ್ಲಿ ಸ್ಟಾರ ಬಾರ್ನ ಅಂಥಾ ಬರೆದಿದ್ದ. ಆದರೆ ತೋಪೆದ್ದು ಹೋಯಿತು. ನಾನು ಹಾಗೆ, ನನ್ನ ಮಕ್ಕಳು ಹಾಗೆ ಎಂದು ಬರೆದಿರುತ್ತಾನೆ. ಬೇರೆ ಹೆಣ್ಣು ಮಕ್ಕಳ ಬಗ್ಗೆ ಬರೀತಾನೆ, ಅವನು ಬ್ರಾಹ್ಮಣನಾಗಿ ಅವನ ಹೆಣ್ಣು ಮಕ್ಕಳಲ್ಲಿ ಒಬ್ಬಳು ರೆಡ್ಡಿಯನ್ನು ಇನ್ನೊಬ್ಬಳು ಗೌಡನನ್ನು ಮದುವೆಯಾಗಿದ್ದಾಳೆ. ಇವನ ಮಗ ಫಾರಿನನಲ್ಲಿ ಕ್ರಿಶ್ಚಿಯನ ಹುಡುಗಿಯನ್ನು ಲವ ಮಾಡ್ತಿದ್ದಾನೆ. ಊರಿಗೆಲ್ಲಾ ಬುದ್ದಿ ಹೇಳೋ ಇವನಿಗೆ ತನ್ನ ಮನೆಯ ಬಗ್ಗೆ ಕಾಳಜಿ ಇಲ್ಲ.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಧ, 03/11/2009 - 23:09

ನಿಜ ಅಭಿಮಾನಿ ದೆವರು ನಾಯಿ ಬೊಗಳಿದರೆ ದೇವಲೊಕ ಹಾಳಾಗುವುದಿಲ್ಲ, ನೂರಕ್ಕೆ ನೂರು ಸತ್ಯ , ಆದರೆ ಇಲ್ಲಿ ಯಾರು ಅಣ್ಣಾವರನ್ನು ದ್ವೆಷಿಸುತ್ತಿಲ್ಲ, ಬದಲಿಗೆ ಮಾಡಿದ ತಪ್ಪನ್ನು ಅರಿತುಕೊಂಡಿದ್ದರೆ ಅವರ ಮೆಲಿನ ಅಭಿಮಾನ ಶಿಖರಕ್ಕೇರುತಿತ್ತು ಎಂಬುವುದು ಎಲ್ಲರ ಅಭಿಪ್ರಾಯ.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಧ, 03/11/2009 - 23:19

ಮೆಲೊಬ್ಬ ಅನಾಮಿಕರು ತಪ್ಪಾಗಿ ತಿಳಿದುಕೊಂಡಿದ್ದಾರೆ ರೀ ಸ್ವಾಮಿ, ಜಾತಿ ಬಗ್ಗೆ ಮಾತಾಡುತಿದ್ದಿರಲ್ಲ ನೀವೆನು ಜಾತಿಯವಾದಿನಾ...? ಅಲ್ರಿ.......... ಅವರು ನಾಸ್ತಿಕರು ರೀ ಅದಕ್ಕೆ ಅಂರ್ತಜಾತಿಯ ವಿವಾಹಕ್ಕೆ ತಮ್ಮ ಕುಟುಂಬದಿಂದಲೆ ಶಂಕುಸ್ಥಾಪನೆ ಮಾಡಿದ್ದಾರೆ ಇದರಲ್ಲಿ ಆಡಿಕೊಳ್ಳುವುದೆನಿದೆ.
ಅದನ್ನ ಬಿಟ್ಟು ವಿಷಯಕ್ಕೆ ಬನ್ರಿ . ರೀ ..........

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 03/12/2009 - 12:03

raj badukiruvaga ee vishya estu dyryavagi helidre mechhabahudittu

ಸಮಾಜ ಸೇವಕ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 03/12/2009 - 22:54

ಅಲ್ಲ.....! ಗೊತ್ತಿಲ್ಲದೆ ಕೆಳುತ್ತಿರುವೆ ಇಲ್ಲಿನ ಚರ್ಚೆ ಕೆವಲ ಅಭಿಮಾನಿ ದೆವರು ರಾಜ್ , ಲೀಲಾವತಿ ಹಾಗು ರವಿ ಯವರ ಬಗ್ಗೆ . ಆದರೆ ಮದ್ಯದಲ್ಲಿ ಅಂದಿನಿಂದ ಇಂದಿನ ತನಕ ಸಿಂಹದ ತರಹ ಬದುಕುತ್ತಿರುವ ಡಾ. ವಿಷ್ಣುವಿನ ಬಗ್ಗೆ ಯಾಕ್ರಿ ಮಾತಾಡುತ್ತೀರ ಕೊಂಕಣ ಸುತ್ತಿ ಮ್ಫೆಲಾರಕ್ಕೆ ಬಂದಂತೆ , ಎಲ್ಲೊದ್ರು ವಿಷ್ಣುವಿನ ಹತ್ತಿರ ಬರುತ್ತಿರ ಅಂದರೆ ಇದರರ್ಥ ಆ ಅಭಿಮಾನಿ ದೆವರು ಲೀಲಕ್ಕನನ್ನು ತುಳಿಯುವುದರ ಜೊತೆಗೆ ವಿಷ್ಣುವನ್ನು ತುಳಿದಿದ್ದಾರೆ ಎನ್ನಿ .......................!

ಗಿರಿಜ ಸ (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 03/13/2009 - 14:54

:O ನಾನು ಕಳೆದ ಬಾನುವಾರ ಎಂದೂ ಮರೆಯದ ಹಾಡು ರವಿಬೆಳಗೆರೆ ನಡೆಸಿದ ಕಾರ್ಯಕ್ರಮಕ್ಕೆ ಹೊಗಿದ್ದೆ. ಅವರಿಬ್ಬರನ್ನೂ ರವಿ ವೇದಿಕೆಗೆ ಆಹ್ವಾನಿಸಿ ಗೌರವವಿಸಿ ನಂತರ ಅಳಿಸಬಾರದಿತ್ತು. ಅವರು ಎರಡು ಮಹಾನ್ ಕಲಾವಿದರನ್ನು ಅವಮಾನಿಸಬಾರದಿತ್ತು.ಕಲಾವಿದರೆಲ ಒನ್ಧೆ.
ಯಾರನ್ನು ಜರಿಯೆಬೆೀಡಿ
ಕಲಾವಿದರ ಸ್ವಂತ ನಿಮಗೆಕೆ ? ಕಲೆಗೆ ಬೆಲೆ ಕೊಡಿ. ಕಲಾವಿದರನ್ನು ಬೆಳೆಯಲು ಬಿಡಿ.
ಯಾವ ಕಲಾವಿದರನ್ನು ನೊಯಿಸಬೆಡಿ. ಗೌರವವಿಸಿ, ಕಲೆಗೆ ಬೆಲೆ ಕಟ್ಟಲು ಸಾದ್ಯವಿಲ್ಲ. ಒಳ್ಳೇಯ ಬದುಕು ಕೊಡಿ.
ಅವಮನಿಸಬೆಡಿ

ಗಿರಿಜ

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 03/13/2009 - 15:39

ಇಷ್ಟೆಲ್ಲಾ ಚರ್ಚೆಯಲ್ಲಿ ಎಲ್ಲಿಯೂ ಲೀಲಾವತಿಯವರ ಪತಿಯ ಬಗ್ಗೆ ಬರೆದಿಲ್ಲ. ಅವರಿಗೆ ಕಿರಣ ಎಂಬ ಪತಿ ಇದ್ದರು ಎಂದು ಕೇಳಿದುಂಟು. ಹಾಗಿದ್ದರೆ ಇವರು ಪತಿಗೆ ಮಾದಿದ್ದು ದ್ರೋಹವಲ್ಲವೇ?

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 03/13/2009 - 16:00

ಇಷ್ಟೆಲ್ಲಾ ಚರ್ಚೆಯಲ್ಲಿ ಎಲ್ಲಿಯೂ ಲೀಲಾವತಿಯವರ ಪತಿಯ ಬಗ್ಗೆ ಬರೆದಿಲ್ಲ.

ಎಲ್ಲಿಂದ ಬರೆಯುವದು? ಲೀಲಾವತಿ ಯಾವಾಗಲಾದರೂ ಬಾಯಿ ಬಿಟ್ಟಿದ್ದರೆ ತಾನೆ, ನಮಗೆಲ್ಲ ಗೊತ್ತಾಗುವದಕ್ಕೆ. ನಮ್ಮ ಕೊಂಡವೀಟಿ ದೊಂಗ ಬೆಳಗೆರೆಯೂ ಹೇಳಲಿಲ್ಲ.

"ಅವರಿಗೆ ಕಿರಣ ಎಂಬ ಪತಿ ಇದ್ದರು ಎಂದು ಕೇಳಿದುಂಟು"
ಹೌದಾ? ನಿಮಗೆ ಗೊತ್ತಾಗಿದ್ದು ಲೀಲಾವತಿಗೆ ಗೊತ್ತಾ? ಇಲ್ಲದಿದ್ದರೆ ಮೊದಲು ಹೋಗಿ ಲೀಲಾವತಿಗೆ ಹೇಳಬೇಕು. ಸುಮ್ಮನೆ ರಾಜಣ್ಣನವರ ಮುಖಕ್ಕೆ ಬಳಿಯುತ್ತಿರುತ್ತಾರೆ. ನನಗೇಕೋ ಇದು ಕೋತಿ ಬೆಣ್ಣೆ ತಿಂದು ಆಡಿನ ಮುಖಕ್ಕೆ ಒರೆಸಿದ ಹಾಗೆ ಎನ್ನಿಸುತ್ತದೆ.

ಹಾಗಿದ್ದರೆ ಇವರು ಪತಿಗೆ ಮಾದಿದ್ದು ದ್ರೋಹವಲ್ಲವೇ?
ಅಲ್ಲಲ್ಲ ಅದಕ್ಕೆ ದ್ರೋಹ ಎನ್ನಲ್ಲ. buy one get one free ಅನ್ನುತ್ತಾರೆ.

Madhuri (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 03/13/2009 - 17:07

Ravi Belegere has nothing better to do. I don't think he knows who his father is. He himself is a illegitimate son. His mother had run away from her husband's house (as per his article in Hi bangalore). After so many years, Ravi B was born? Who is his father? Whom did she have relationship with and with how many people? Wouldn't Ravi B be upset if we talked about his mother? Why is he raking up this issue after so many years? Did Dr. Raj rape Leelavathi? Leelavathi on her own had relationship with Raj and I am sure she enjoyed it too. What is she complaining about? She could have aborted when she found out she was pregnant like many women do. This is nothing but character assassination on Dr. Raj. Leave him alone. There are many many stars like Amitabh bacchan and others who have so many relationships with hundreds of women. Lucky for them, they did not produce any children. Ravi B who had eloped with a girl when he was a teen and had been beaten up by people of Bellary, has series of bad habits - women, smoking, drinking and many vices. He is talking about Dr. Raj? What a shame.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 03/13/2009 - 19:55

HERE'S RAVI BELAGERE'S FACE OFF, READ IT...

http://www.vismayanagari.com/node/2683

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 03/14/2009 - 20:53

ರವಿ is a great writer. no body follows what he preaches but reader can take good things from anybody. so take good things forget bad things enjoy the life man

Jaga (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 03/17/2009 - 10:03

I really do not understand why we are so much worried about who is Vinod raj's Father, who would have been Ravi Belegere's father.
Every person In this universe will come to know about their father through his mother. All human beings are believing their mother , and accept her words.

All of us know, no body is perfect in this world , whether it is Dr.Raj or Ravi belegere.

Even if you see the stories of god's , The god Chandra (moon) had relationship with his Mother in law (If this is wrong please excuse me) and Lord Indra had cheated Ahalya.

If this is the state of gods , Raj and Ravi are after all human beings.

Let us think of good qualities with Raj and Ravi.

If you start appreciate about Dr.Raj there will be no end, you can find. The appreciators will be from a common man to great people

I can quoute 2 people

Kuvempu" Vishva manava sandeshavannu samarthavaagi karnatakakke helaballa vyakthi endare adu Dr,Rajakumar"

Anantha Nag" Kannada cinamada naayakarige 1 ,2 ,3 and sthana galannu kottare Modala 5-6 sthanagalalli Dr.Raj irtare namma sthanagalella nanthara shuru aagutte "

Shiva sharanaru ondu maatannu heltare

"sharanara saavannu maranadalli kaanu "

The amount of people who gathererd when Dr.Raj expired will never gather for any other great person karnataka dies this it self shows what kind of respect Dr. Raj have in karnataka.

Let us ignore the mistakes if at all something done by Raj, If possible let us take anything good we can take from his movies . And any how we are not people who have rights to comments
on their personal life.

And Ravi belegere of course he is not agreat personolity like Dr.Raj . We hear so many stories about him, like black mailing, cheating etc if at all if we have any proof let us provide this to police
so that let them take action against him. And let us not behave like Ravi ." Chappali kaalannu kachhutte antha naavu chappali kachtiva?

But there are very good qualities in him , he can see life very practically , the way he looks life in his writings are great and he is a good talker , he can talk hours together so that listeners are not get bored.

If possible let us take the good things from his writings and enjoy his speeches otherwise just ignore him.

I feel whatever he has done in the function is not acceptable , If Leelavathi and Vinod are feeling Betryed and feel that they should come out publicaly
they are welcome to do it but along with a proof. They should not have allowed a third person like Ravi to take over and allow him to carry out character assasination of a person who is not alive to justify himself.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 04/04/2009 - 19:02

Well thought provoking answer
Certainly we know hat position This Belagere holds in Karnataka. To earn his food by any effort he has done blackmailing, glorified underworld and he is glorifying a non-existent issue now though Leelamma and her son Vinod Raj. Leelamma should never have allowed this idiot to talk for her. In Karnataka we can listen to any truth (like those who listened to Belagere), so she should speak herself. Belagere is snatching a provocating issue to rake things up in view of the upcoming elections. Since his mentors(???) or who order him to write their fantasies have probably ran out of any real issue to take for the elections, this stupid is made to talk this shit. Let us ignore him (chappali kaalannu kachchutte antha naave chappaliyannu eke kachchabeku?)

Suguna Sagar ಮಂಗಳ, 03/17/2009 - 13:41

Super ಗುರು !!!! 8) :dance:

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 03/17/2009 - 14:27
ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 03/17/2009 - 18:40

Mr. Ravi Belegere sattavaru devara samaana. idu nimage gottu. Dayavittu sattavarabagge kettadaagi bareyabedi.
Nimma Vishwasi.

jay (ಪ್ರಮಾಣಿಸಲ್ಪಟ್ಟಿಲ್ಲ.) ಧ, 03/18/2009 - 09:09

As somebody already stated, both hands are required to produce a clap. Fully knowing that Raj was married, if a woman still wanted a relation with him, whose fault would that be? I feel bad for Raj since such a great actor, person, Kannada fighter is being maligned this way after his death.
Lastly, I have read some issues of Ravi Belgere's paper reports which are full of vulgarity and sexiest orientations. Should we attach any importance at all to such a person's comments?

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಧ, 03/18/2009 - 16:46

ಕೆಲವರು ಬದುಕುವದೆ ಇನ್ನೊಬ್ಬರ ಜಿವನ ವಿಮರ್ಶೆ ಮಾದಿ ಅದರ ಸತ್ವ ಸಾಯಿಸಿ ಬರೆದವನು ಬದುಕುವ ಬಾಟಮ ಐಟಮ ಈ ರವಿ ಬೆಳೆಗೆರೆ

ಜಾಣ್ಣ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 03/19/2009 - 15:01

ಮೇಲಿನ ಎಲ್ಲಾ ಅಬಿಪ್ರಾಯಗಳ ಬಗ್ಗೆ , ಈ ದಿನ ರಾಜಕುಮಾರ ಅತ್ವ ಮಕ್ಕಳ ಮತ್ತು ವಿನೋದುರಾಜಕುಮಾರ DNA Test ಮಾಡಿಸಿದರೆ ಸರಿಯಾದ ಪರಿಹಾರ, ಯಾರ ಮಕ್ಕಳು ಎoಬುದು ತಿಳಿಬಹುದು ?

ಆನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 03/20/2009 - 16:26

Don't be stupid , Think if your father is not alive, and if some tom dick & haary comes and ask you for your DNA test to check whether your father is his father or not ? will you agree?

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 03/20/2009 - 15:08

ravi

Shivaraja Ke En (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 03/21/2009 - 22:44

ರವಿ ಬೆಲಗೆರೆ ಸರಿಯಗಿ ಹೆಲಿದ್ದರೆ. ಲೆೀಲವತಿಯವರನ್ನು ರಅಜ ಅವರು ಪತ್ನಿ ಎನ್ದು ಒಪ್ಪಿಕೊಲ್ಲಬೆಕಿತ್ತು. ವಿನೊದಗೆ ತನ್ನ ಮಗನ ಸ್ತಾನ ಕೊದಬೆಕಿತ್ತು. ಎನೌಉ ನಸ್ತ ಆಗುತ್ತಿರಲಿಲ್ಲ.

ravichandrapooja (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 06/24/2010 - 12:07

raj chitr rangakke baruva modale maduve aagittu. Edella gottiddu Amele bandavaru avara jothe hege nadidukollabeku antha gottirabeku. Yare agali tanna gandanige 2nd wife bartaley andre oppikollalla.

raj the showman (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 03/24/2009 - 20:24

ಈ ಕನ್ನಡ ನಾಡಿನಲ್ಲಿ ಹುಟ್ಟಿದ ಅಹ ನಾನೇ ಧನ್ಯ.(ಅಣ್ಣಾವ್ರು)

ಈ ಮಾತನ್ನ ಅವರು ಅದೆಸ್ತು ಸಾರಿ ಸಾರ್ವಜನಿಕವಾಗಿ ಹೇಳಿದ್ದರೋ ಲೆಕ್ಕಕ್ಕ್ಕಿಲ್ಲ,

ಇಂತಿಪ್ಪ ಅ ಮಹಾನ್ ಕಲಾವಿದನನ್ನು ಇಲ್ಲಿ(ಈ website) ಕೆಲ ಧೂರ್ಥರು ವೃಥಾ ಏನೇನೋ ಬರೆಯುತ್ತಾ, ಮಾನ ಹರಣ ಮಾಡಲು ನೋಡುತ್ತಿದ್ದಾರೆ, ಆದರೆ ತುಂಬಾ ಜನರ ಅಣ್ಣಾವ್ರ ಬಗೆಗಿನ ಪ್ರೀತಿ ಅಭಿಮಾನದಿಂದಾಗಿ ಹಲವಾರು ಬಾರಿ 'ಮುಖಭಂಗವಾಗಿದೆ.'

ಅಣ್ಣಾವ್ರು ಎಲ್ಲ ಮನುಷ್ಯರ ಹಾಗೆ 'ಕೆಲವು' ತಪ್ಪು ಮಾಡಿದ್ದರೆ, ಆದರೆ ಅದನ್ನೇ ಮುಂದಿಟ್ಟುಕೊಂಡು ಅವರು ಈ ನಾಡಿಗೆ ಮಾಡಿದ ಉಪಕಾರವನ್ನು (ಅವರನ್ನು ಟೀಕಿಸುವವರು ಮರೆತು ಮಾತಾಡಬಹುದು) ನಾವು ಮರೆಯಲು ಸಾಧ್ಯವೇ?
ಹಾಗೆ ಮಾಡಿದರೆ ಆ ದೇವರು ನಮ್ಮನ್ನು ಮೆಚ್ಚುವನೆ?

ಹೆಸಾರಾಂತ ತಾರೆಗಳಾದ, ಅಮಿತಾಬ್, ಜಯಪ್ರದ, ಜಯ ಬಚ್ಚನ್, ಹೇಮಾ ಮಾಲಿನಿ, ಜಯಲಲಿತಾ, ರಜನಿ, ವಿಜಯಕಾಂತ್, ಶರತ್ ಕುಮಾರ್, ಅಂಬರೀಶ್, ರಾಜಶೇಖರ್, ಚಿರಂಜೀವಿ, ಹೀಗೆ ಎಲ್ಲ ಮಹಾನ್ ನಟರೂ ರಾಜಕೀಯ ಸೇರಿ ಹೆಸರು ಹಾಲು ಮಾಡಿಕೊಳ್ಳುತ್ತಿರುವುದು ಸರಿಯಸ್ತೆ, ಆದರೆ 'ಅಣ್ಣಾವ್ರು' ಇದೆಲ್ಲದರಿಂದ ದೂರ ಉಳಿದು, ಅಭಿಮಾನಿಗಳ 'ಹೃದಯ ಸಿಂಹಾಸನದಲ್ಲಿ' ಅಮರರಾಗಿದ್ದಾರೆ.
ಇದಕ್ಕಿಂತ ಭಾಗ್ಯ ಬೇಕೇ.

ಅವರನ್ನು ಹೆತ್ತು, ಹೊತ್ತು, ಸಾಕಿದ ಕನ್ನಡಾಂಬೆ ಪೂಜೆಗೆ ಅರ್ಹಳು..
ಇನ್ನೊದು ವಿಷಯ ಈಗಲೂ , ಮುಂದೆಯೂ, ಕನ್ನಡ= ಅಣ್ಣಾವ್ರು

ಜೈ ಕನ್ನಡಾಂಬೆ...

kalpana ಶುಕ್ರ, 03/27/2009 - 22:47

ee vichaaradalli satya yaarigoo gottilla. hAgAgi charche summane kAlaharaNa. summane haagaMte heegaMte annuva aMte kaMtegaLige soppu hAkade iddare oLLeyadu eMdenisuttade allavE?

praveen sooda ಭಾನು, 09/20/2009 - 14:21

ಕೆಲವರಿಗೆ ಹೇಗೂ ಈ ಕಲೆ ಅನ್ನೋದು ಒಲಿದು ಬಿಡತ್ತೆ ಅದನ್ನ ಹೇಗಂಡ್ರೆ ಹಾಗೆ ಉಪಯೋಗಿಸ್ತಾರೆ... ದುಡ್ಡು ಹೆಸರು ಎಲ್ಲ ಮಾಡ್ತರೆ. ಆಂಥೋರಲ್ಲಿ ನಮ್ ರವಿ ಬೆಳೆಗೆರೆ, ಆ ಪ್ರತಾಪ್ ಸಿಂಹಾನು ಓರ್ಬು. ಇರ್‍ಲಿ ಈಗ ಬೆಳೆಗೆರೆ ಅಣ್ಣಾವ್ರ ಬಗ್ಗೆ ಆಡಿರೊ ಎ ಮಾತಿಂದ ನಂಗ್ ಆಗಿರೋ ಬೇಜಾರು ಮಾತ್ರ ಕಮ್ಮಿ ಅಲ್ಲ. ಕೋಪನು ಇದೆ. ಅಣ್ಣಾವ್ರು ಯಾವತ್ತೂ ಯಾವ್ ಪ್ರಶಸ್ತಿನೂ ನಂದು ಅಂತ ಹೇಳ್‌ಡೋರಲ್ಲ ಇದನ್ನ ಅದೆಷ್ಟೋ ಸರಿ ಇದೆ ರವಿ ಬೆಳೆಗೆರೆ ಹೇಳಿ ಹೋಗಳಿದ್ದು ನಂಗೆ ನೆನಪಿದೆ. ಆದ್ರೆ ಈಗ ಹೀಗ್ಯಾಕ್ ಅಂದ್ರೋ ನಗೊತ್ತಿಲ್ಲ. ಇದನ್ನ ನಾವು ಸಮಯ ಸಾಧಕತೆ ಅಂತೀವಿ.... ನೊಡಿ ಒಂದಂತೂ ನಿಜ ನಂಗೆ ಲೀಲಾಮ್ಮನ ಮೇಲೆ ಬೆಳೆಗೆರೆಗಿನ್ತ ಹೆಚ್ಕು ಅಭಿಮಾನ ಪ್ರೀತಿ ಇದೆ. ಆಕೆ ತುಂಬಾ ಒಳ್ಳೇ ನಟಿ. ರೈತೆ ಕೂಡ ಪ್ರಾಮಾಣಿಕ ವ್ಯಕ್ತಿತ್ವ ಇರೋ ಹೆಣ್ಣು. ಆದರೆ ಇಷ್ಟು ದಿನ ಸುಮ್ಮನಿದ್ದ ಬೆಳೆಗೆರೆ ಆವ್ರು ಈಗ ಇದ್ದಕ್ಕಿದ್ದ ಹಾಗೆ ಇಂಥ ಹೆಳಿಕೆ ಕೊಡೋ ಅಗತ್ಯ ಏನಿತ್ತು. ಮುಂದೆ ಇರೋ ಜನನ ಒಳುಸ್‌ಕೊಳ್ಳೋ ಪ್ರಯತ್ನ ಅಷ್ಟೇ ಅನ್ಸತ್ತೆ. ಈ ಮನುಷ್ಯ ದೆವೆಗೌಡರನ್ನ ಹೀಯಲ್ಸೋದು ಆತ ಕೆಟ್ಟ ರಾಜಕಾರಣಿ ಅಂತ ಅಲ್ಲ ನನ್ನ ವಿರೋಧಿ ಅಂತ. ದೇವರು ಸಂಪ್ರದಾಯದ ಮೇಲೆ ನಂಬಿಕೆ ಇಲ್ಲದ ಮನುಷ್ಯ ತನ್ನ ಮಗಳ ಮದುವೆನ ಕೋಟಿ ಕರ್ಚು ಮಾಡಿ ಮಾಡ್ತನೆ ಅಂದ್ರೆ ಆತ ತನ್ನ ಸ್ವಂತ ಸಿಧಾಂತಕ್ಕೆ ಎಷ್ಟು ಅಪ್ರಮಾಣಿಕ ಅಂತ ತೋರಿಸತ್ತೆ. ಅಣ್ಣಾವ್ರು ಒಂದು ಮಗು ಕಣ್ರೀ. ತಾಯಿ ತರ ಅದಕ್ಕೆ ಪ್ರೀತಿ ಗೊತ್ತೇ ಹೊರತು ವೈಚಾರಿಕತೆ ಗೊತ್ತಿಲ್ಲ. ಇಂತೋರ ಬಗ್ಗೆ ಹೀಗೆಲ್ಲ ಮಾತಡೊದು ಒಳ್ಳೇ ಮನಸ್ಸಿನ ಲಕ್ಷಣ ಅಲ್ಲ. ನೀವು ಪತ್ರಕರ್ತರು ವಿದ್ಯಾವಂತರು ನನ್ ಅಂತ ಹುಡ್ಗನ ಹತ್ರ ಇಷ್ಟೆಲ್ಲಾ ಹೆಳುಸ್ಕೊಬೆಕ.

praveen sooda ಭಾನು, 09/20/2009 - 15:00

ದಿಗ್ರೀ ಮಾಡಿರೊ ವಿದ್ಯಾವಂತರೆ ತಪ್ಪು ಮಾಡೊವಾಗ ೩ನೇ ಕ್ಲಾಸ್ ಓದಿ ಬಾರಿ ನಟನ ಸಾಮರ್ತ್ಯದಿಂದ ಒಂದು ರಾಜ್ಯ ಮತ್ತು ಭಾಷೆಯ ಪ್ರತಿನಿಧಿಯಾಗಿ ಬೆಳೆದ ಅಣ್ಣಾವ್ರು ಮಾಡಿರೊ ಯಾವ್ದೋ ತಪ್ಪನ್ನ ಹಿಡ್ಕೊನ್ಡು ಹೀಗೆ ಮಾತಡೊದು ಮನುಷ್ಯನ ಸಣ್ಣತನ ಅಷ್ಟೇ ...

praveen sooda ಭಾನು, 09/20/2009 - 15:03

belegere avre nimge ella gottu aadru intha tappu maaDboda.... nange nim bagge dwesha nijavaaglu illa... aadre neev iga maaDirodu nijavaaglu tappe

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.