ಡಾನಮ್ಮ ಶ್ರೀಮಂತ ಇಂಡಿಯಾ ಹಾಗು ಬಡ ಭಾರತದಲ್ಲಿ ಜಾತ್ಯತೀತರೆನ್ನಿಸಿಕೊಳ್ಳಲು ಅಫ್ಜಲ್ ಗುರುವನ್ನು ಗಲ್ಲಿಗೆರಿಸುವದನ್ನು ವಿರೋಧಿಸಿ, ಮುಂಬೈ ದಾಳಿಯನ್ನು ಮಾಮೂಲಿ ವಿಷಯವೆಂದು ತಳ್ಳಿ ಹಾಕಿದರಾಯಿತು. ಅದೇರೀತಿ, ರೆಡ್ಡಿಗಳ ಶ್ರೀಮಂತ ಹಾಗೂ ಕನ್ನಡಿಗರ ಬಡ ಕರ್ನಾಟಕದಲ್ಲಿ ನಿಮಗೆ 'ಬುಧ್ಧಿಜೀವಿ' ಎನ್ನಿಸಿಕೊಳ್ಳಬೇಕೆ -ಹಾಗಾದರೆ ನೀವು ಭೈರಪ್ಪನವರನ್ನು ಬೈದರೆ ಸಾಕು.
ಯಾರೋ ಕೇಳಿದ್ದರು, " ಸ್ವಾಮಿ, ಭೈರಪ್ಪನವರನ್ನೇಕೆ ಬಯ್ಯುತ್ತೀರಿ, ಅವರ ಕೃತಿಯಲ್ಲಿಯ ವಿಷಯಗಳನ್ನು ಖಂಡಿಸಿ, ಅವುಗಳೆಲ್ಲ ತಪ್ಪೆಂದು ಸಾಬೀತು ಪಡಿಸಿ". ನಮ್ಮ ಬುಧ್ಧಿ ಜೀವಿ ಮಿತ್ರರೊಬ್ಬರು ಬುಧ್ಧಿವಂತಿಕೆಯ ಉತ್ತರ ನೀಡಿದರು,- " ಇಲ್ಲ, ಭೈರಪ್ಪನವರನ್ನೇ ಬಯ್ಯುತ್ತೇವೆ. ಏಕೆಂದರೆ ಅವರ ಕೃತಿಯಲ್ಲಿರುವ ವಿಚಾರಧಾರೆಗಳೆಲ್ಲ ಅವರವೇ, ಅವರು ಪ್ರತಿಯೊಂದನ್ನೂ ಲೆಕ್ಕಾಚಾರ ಹಾಕಿಯೇ ಬರೆಯುತ್ತಾರೆ. ಅವರ ಕಾದಂಬರಿಯಲ್ಲಿಯ ಪಾತ್ರಗಳು ಭೈರಪ್ಪ ಏನು ಹೇಳಬೇಕೆಂದಿರುವರೋ ಅದನ್ನೇ ಹೇಳುತ್ತವೆ. ಅವರ ಕೃತಿಯನ್ನೂ ಅವರನ್ನೂ ಬೇರೆ ಬೇರೆ ಇಟ್ಟು ನೋಡಲು ಸಾಧ್ಯವಿಲ್ಲ" . ಹಿಂದೊಮ್ಮೆ, 'ಪೀಠಾ'ಸೀನರಾದ ಲೇಖಕರೊಬ್ಬರ ಮದಿರೆ ಹಾಗೂ ಮಾನಿನಿ ಪ್ರೇಮದ ಬಗ್ಗೆ ಕೇಳಿದಾಗ ಇದೇ ಬುಧ್ಧಿಜೀವಿ ಮಿತ್ರರು " ಲೇಖಕನೊಬ್ಬನ ಬರಹ ಹಾಗೂ ಬದುಕು ಒಂದೇ ಇರಬೇಕೆಂದಿಲ್ಲ" ಎನ್ನುವ ಉತ್ತರ ನೀಡಿದ್ದರು.
ಅದು ಹೋಗಲಿ ಬಿಡಿ. ಈ ಲೇಖನದ ಉದ್ದೇಶ ಭೈರಪ್ಪನವರನ್ನು ತೆಗಳುವದಾಗಲೀ, ಹೊಗಳುವದಾಗಲೀ ಅಲ್ಲ. ತೆಗಳಿದರೆ ಅಗ್ಗದ ಪ್ರಚಾರಾಭಿಲಾಷಿ ಎಂದೂ , ಹೊಗಳಿದರೆ ಮನುವಾದಿ ಎಂದೂ ಹಣೆ ಪಟ್ಟಿ ಸಿಗುವ ಸಾಧ್ಯತೆಗಳಿವೆ. ಈ ವಿಷಯದ ಬಗ್ಗೆ ಎಲ್ಲ ಮಾಧ್ಯಮಗಳಲ್ಲಿ ಮತ್ತೆ ಮತ್ತೆ ಲೇಖನ/ಚರ್ಚೆಗಳನ್ನು ಓದಿದ ಕೇಳಿದ ವಿಸ್ಮಯದ ಪ್ರಜೆಗಳಿಗೆ ಅದೇ ಚರ್ವಿತ ಚರ್ವಣದಲ್ಲಿ ಆಸಕ್ತಿ ಇರಲಿಕ್ಕೆ ಸಾಧ್ಯವಿಲ್ಲ. ನಾನಿಲ್ಲಿ ಕೇಳಬೇಕೆಂದಿರುವ ಪ್ರಶ್ನೆ : ' ಭೈರಪ್ಪನವರ ಯಾವ್ಯಾವ ಕಾದಂಬರಿಗಳನ್ನು ನೀವು ಓದಿದ್ದೀರಿ?'
*********************
ಸುರಿಯುವ ಮಳೆಯಲ್ಲೇ ಹಿಂಡುಗಟ್ಟಲೆ ಹೆಂಗಸರು ಸಭಾಭವನದೊಳಕ್ಕೆ ನುಗ್ಗುತ್ತಾರೆ, "ಯಾರಿವರು?" ಧರ್ಮಜನ ಪ್ರಶ್ನೆಗೆ ಒಬ್ಬ ಮುದುಕಿ ಕೂಗಿ ಹೇಳುತ್ತಾಳೆ: "ಸೈನಿಕರ ರಂಜನೆಗೆಂದು ಯುಧ್ಧಕ್ಕೆ ಎಳೆದೊಯ್ದಿದ್ದ ಹಳ್ಳಿಯ ಹೆಂಗಸರು. ಯುಧ್ಧದಲ್ಲಿ ಇವರೆಲ್ಲ ಬಸುರಾಗಿದ್ದಾರೆ. ಗಂಡಂದಿರು ಮನೆಗೆ ಸೇರಿಸುತ್ತಿಲ್ಲ, ಇವರ ದಿಕ್ಕೇನು? " ಧರ್ಮಜ ಮೂಕನಾಗಿ ನೋಡುತ್ತಾನೆ. ಹಿಂಡು ಹಿಂಡುಗಟ್ಟಲೆ ಮಳೆಯಲ್ಲಿ ನಡುಗುತ್ತಾ ಒಳಗೆ ಜಾಗ ಸಾಲದೇ ಹೊರಗೇ ನಿಂತಿರುವ ಓ ಲೆಕ್ಕ ಸಿಗದಷ್ಟು ಜನ..." ಮಹಾರಾಜಾ, ನಿಮ್ಮ ವಂಶದ ಯುಧ್ಧದಲ್ಲಿ ನಾವೆಲ್ಲಾ ಹಿಂಸೆಯ ಬಸುರಾಗಿದ್ದೇವೆ, ಹುಟ್ಟುವ ಮಕ್ಕಳಿಗೆ ತಂದೆ ಎಂದು ಯಾರ ಹೆಸರು ಹೇಳಬೇಕು?" ಒಬ್ಬ ಹೆಂಗಸು ತಗಾದೆ ಮಾಡುವ ಗಟ್ಟಿ ದನಿಯಲ್ಲಿ ಕೂಗುತ್ತಾಳೆ.
**********************
ಮೇಲಿನದು "ಪರ್ವ"ದ ಕೊನೆ ಅಧ್ಯಾಯದ ಕೆಲ ಸಾಲುಗಳು.
ಸತ್ಯವತಿಯ ಎದುರು ನಿಂತು ಪ್ರತಿಜ್ನೆಗೈದ ಭೀಷ್ಮ ಎನ್ನುವ ಹುಡುಗ ಶಿಖಂಡಿಯ ಎದುರಲ್ಲಿ ಬಿಲ್ಲು ಬಾಣ ಹಿಡಿದು ಯುಧ್ಧಕ್ಕೆ ನಿಲ್ಲುವ ಸಮಯದಲ್ಲಿ ಎಷ್ಟು ಸಂವತ್ಸರಗಳನ್ನು ಕಳೆದಿದ್ದಿರಬಹುದು ಎಂಬುದನ್ನು ನೀವೆಂದಾದರೂ ಕಲ್ಪಿಸಿಕೊಂದಿದ್ದೀರಾ? ಊಹೂಂ ........ಎಂದೋ ನೋಡಿದ ಯಕ್ಷಗಾನ, ಎಲ್ಲೋ ನೋಡಿದ ಚಿತ್ರಪಟ , ಕೊನೆಯಲ್ಲಿ ಬಿ.ಆರ್.ಚೋಪ್ರಾನ ಟಿವಿ ಮಹಾಭಾರತದಲ್ಲಿನ ಭೀಷ್ಮನ ವೇಷದ ಅಳತೆಯನ್ನು ಮೀರಲಾರದಲ್ಲವೇ ನಮ್ಮ ಕಲ್ಪನೆ ? ಬುಡದಿಂದ ಲೆಕ್ಕ ಹಾಕಿ ನೋಡಿ, ಭೀಷ್ಮನಿಗೆ ಸಾಯುವಾಗ 300 ರಿಂದ 350 ವರ್ಷಗಳಾದರೂ ಆಗಿದ್ದಿರಬೇಕಲ್ಲ? ಆ ಮುದಿ ಜೀವ ರಣರಂಗದ ಹತ್ತಿರವೆಲ್ಲೋ ಬಾಣಗಳ ಮಂಚದ ಮೇಲೆ ಅಸಹಾಯಕನಾಗಿ ಮಲಗಿದ್ದರೆ, ರಣಹದ್ದು ಗಿಡುಗಗಳು ತೊಂದರೆ ಕೊಟ್ಟಿರಲಾರವೇ?
ಪಾಂಡು ಸತ್ತದ್ದು ಹೇಗೆ.....ಪಾಂಡವರು ಹುಟ್ಟಿದ್ದು ಹೀಗೆ........ಧೃತರಾಷ್ಟ್ರನಿಗೆ ನೂರು ಮಕ್ಕಳು, ಕೃಷ್ಣನಿಗೆ ಹದಿನಾರು ಸಾವಿರ ಹೆಂಡಂದಿರು...ಅವರು ಅವರೆಲ್ಲರ ಹೆಸರು ನೆನಪಿಟ್ಟಿದ್ದಾದರೂ ಹೇಗೆ......ಹಿಡಂಬಿಗೂ, ದ್ರೌಪತಿಗೂ ಭೀಮನಮೇಲೇಕೆ ಪ್ರೀತಿ....ಬಲರಾಮನಿಗೇಕೆ ಆತನ ಹಲ್ಲು ನೋವಿನ ಭೀತಿ...... ಗಾಂಧಾರಿಯ ಕಣ್ಣು ಪಟ್ಟಿಯ ಕಥೆ......ಕುಂತಿ ಕರ್ಣರ ವ್ಯಥೆ.......
'ಪರ್ವ'ವೆಂಬ ಮಹೋನ್ನತ ಕೃತಿ ಒಂದು ಮಹಾ ತಪಸ್ಸಿನ ಫಲವಾಗಿರಲು ಮಾತ್ರ ಸಾಧ್ಯ. ಆ ತಪಸ್ಸಾಧನೆಗೆ ಭೈರಪ್ಪನವರು ತೆಗೆದುಕೊಂಡಿದ್ದು ಬರೋಬ್ಬರಿ ಒಂದು ವರ್ಷ ಎರಡು ತಿಂಗಳು.
ಪರ್ವವನ್ನು ವರ್ಣಿಸಲು ಶಬ್ದಗಳ ಕೊರತೆ. ಮೊದಲನೇ ಬಾರಿ ಓದಿದಾಗ ದಿಗ್ಮೂಢನನ್ನಾಗಿಸುವ, ಎರಡನೇ ಬಾರಿ ಓದಿದಾಗ ಚಿಂತನೆಗೆ ನೂಕಿಬಿಡುವ , ಮೂರನೇ ಬಾರಿ ಓದಿದಾಗ ಹೊಸ ಭಾವ ನೀಡುವ ...ಅದನ್ನು ಓದಿಯೇ ಅನುಭವಿಸಬೇಕು. ಅನಂತ ಮೂರ್ತಿಯವರು ಹೇಳಿದ್ದರು- " ಪರ್ವದಲ್ಲಿ ಪುರಾಣ ಇತಿಹಾಸವಾಗಿದೆ !"
ಹೌದಲ್ಲ!!
ನೀವಿನ್ನೂ ಓದಿರದಿದ್ದರೆ ಅದು ನೀವು ಕಲಿತ ಅಕ್ಷರಕ್ಕೇ ಅವಮಾನ. ಭೈರಪ್ಪನವರನ್ನು ಬಿಡಿ, ಅವರ ಹೆಸರೇ ......

ಎನ್ತದು ಮಾರಾಯ್ರೆ ಮೂಕಜ್ಜಿ ಕನಸು
ಎನ್ತದು ಮಾರಾಯ್ರೆ ಮೂಕಜ್ಜಿ ಕನಸು ಬರೆದದ್ದು ನಮ್ಮ ಗೋವಿಂದ್ ಪೈ. ಅದಕ್ಕೆ ಭೈರಪ್ಪನವರಿಗೇಕೆ ಜ್ನಾನಪೀಠ ಕೊಡಬೇಕು?? ನಿಮಗೆ ಮರ್ಲಾ?
ಹ್ವಾಯ್ , ನಿಮಗೇನು ಗೊತ್ತು?
ಹ್ವಾಯ್ , ನಿಮಗೇನು ಗೊತ್ತು? ನಿಮಗೆ ನಮ್ಮ ಸಮಿತಿಗಿಂತ ಜಾಸ್ತಿ ಸಾಹಿತ್ಯ ಗೊತ್ತುಂಟಾ? ಇಲ್ಲಿ ಯಾವ ಪುಸ್ತಕ ಯಾರು ಬರೆದಿದ್ದು ಎಂದು ಗೊತ್ತಾಗದಿರಲು ನಮಗೇನು ಮರ್ಲಾ? ನೀವು ಗೋವಿಂದ್ ಪೈ ಬರೆದಿದ್ದು ಬಿಟ್ಟು ಬೇರೆ ಓದಿದ್ದುಂಟಾ? ಈ ಮೂಕಜ್ಜಿಯ ಕನಸು ಪುಸ್ತಕ ಉಂಟಲ್ಲ, ಅದನ್ನು ಎಲ್ಲರೂ ನನ್ನದು ನನ್ನದು ಅನ್ನುವವರೇ. ಹೋಗಿ ಕೇಳಿದರೆ ಉಡುಪಿಯ ವಿನಯ್ ಡಿ. ಕೂಡ ಹಾಗೇ ಅನ್ನುತ್ತಾರೆ. ಆದರೆ ಅದನ್ನು ಭೈರಪ್ಪ ಬರೆದಿದ್ದು ಆಯಿತಾ?
ನಮ್ಮವರೊಬ್ಬರಿದ್ದಾರೆ ಶಿವರಾಮ ಕಾರಂತ ಅಂತ. ಕೋಟದ ಕಡೆಯವರು. ಅವರಿಗೆಲ್ಲ ಗೊತ್ತು. "ನಾಕು ತಂತಿ" ಅಂತ ಪುಸ್ತಕ ಬೇರೆ ಬರೆದಿದ್ದಾರೆ. ಬೇಕಿದ್ದರೆ ನೀವು ಅವರ ಹತ್ತಿರ ಕೇಳಿ.
ತುಂಬ "ಬೊಂಡ್" ಹಾಗೆ ಮಾಡಬೇಡಿ. ಆಯಿತಾ?
ಭೈರಪ್ಪನ ವರಿಗೆ ಯವತೊ ಜ್ನಾನ ಪಿಟ
ಆಯ್ತು ಸಾರ್. ನೀವು ಕೇಳುವುದು
ಆಯ್ತು ಸಾರ್. ನೀವು ಕೇಳುವುದು ಹೆಚ್ಚೋ ನಾವು ಕೊಡುವುದು ಹೆಚ್ಚೋ? ಈ ಸಲವೇ ಕೊಡುತ್ತೇವೆ.
ಅಂದ ಹಾಗೆ ಅವರ ಮೂಕಜ್ಜಿಯ ಕನಸುಗಳು ಪುಸ್ತಕ ಓದಿದೆ. ತುಂಬ ಚೆನ್ನಾಗಿದೆ. ಅದಕ್ಕೇ ಕೊಡುವಾ ಅಂತ ಇದೀವಿ.
-ಅಜ್ನಾನಪೀಠ ಸಮಿತಿಯ ಸದಸ್ಯ
ಪರ್ವ ನಿಜಕ್ಕೂ ಅದ್ಭುತವಾದ ಕೃತಿ.
ಪರ್ವ ನಿಜಕ್ಕೂ ಅದ್ಭುತವಾದ ಕೃತಿ. ಮಹಾಭಾರತ ನಿಜವಾಗಿ ನೆಡೆದಿರಬಹುದು ಅನ್ಸುತ್ತೆ ಇ ಪುಸ್ತಕ ಒದಿದ ಮೇಲೆ. ದೇವರು ರಾಕ್ಷಸರು ಇಲ್ಲವೇ ಇಲ್ಲ. ಎಲ್ಲ ಮನುಶ್ಯರೆ. ಇಂದ್ರ ಮೊದಲಾದ ದೇವತೆಗಳು ಹಿಮಾಲಯದಲ್ಲಿ ವಾಸಿಸುವ ಸ್ವಲ್ಪ ಮೆಲ್ವರ್ಗದ ಒಂದು ಜನಾಂಗ.
ಬೈರಪ್ಪನವರ ಕಲ್ಪನಾ ಶಕ್ತಿಗೆ ಒಂದು ನಮಸ್ಕಾರ..
ಇವರು ಬರೆದ ವಂಶವೃಕ್ಷ ಕೂಡ ತುಂಬ ಚೆನ್ನಾಗಿದೆ.
ಭೈರಪ್ಪನವರ ಬಗ್ಗೆ ಮಾತನಾಡುವವರು
ಭೈರಪ್ಪನವರ ಬಗ್ಗೆ ಮಾತನಾಡುವವರು ಅವರ ಕೃತಿಗಳನ್ನು ಓದದೇ ಇರುವವರು ಇಡೀ ಭಾರತದಲ್ಲಿ ಅತ್ಯದಿಕ ಮುದ್ರಣಗೊಂಡ ಹಾಗೊ ಎಲ್ಲಾ ಭಾಷೆಗಳಿಗೊ ಭಾಷಾಂತರಗೊಂಡ ಕಾದಂಬರಿಗಳು ಭೈರಪ್ಪನವರದ್ದು. ಅವರ ಆತ್ಮಕತೆ ಭಿತ್ತಿ ಓದಿದರೆ ತಿಳಿಯುತ್ತದೆ. ಅವರು ಎಸ್ಠ್ಟು ಕಷ್ಟ ಪಟ್ಟು ಬಂದಿದ್ದಾರೆ. ಅಂತ. ಮೊನ್ನೆ ಒಬ್ಬರು ಕುವೆಂಪು ಆತ್ಮಕತೆ ಬಗ್ಗೆ ಹೇಳುತ್ತಿದ್ದರು. ನಾನು ಭಿತ್ತಿಯ ಬಗ್ಗೆ ಮಾತನಾಡುತ್ತಿದ್ದೆ. ಅವರು ಕೇಳಿದರೆ ಯಾಕೆ ಕುವೆಂಪು ಬಗ್ಗೆ ಮಾತನಾಡುತ್ತಿಲ್ಲ. ನಾನು ಹೇಳಿದೆ ' ಸ್ವಾಮಿ ಕುವೆಂಪು ಜನ್ಮತಹ ಸಿರಿವಂತ. ಅವರಿಗೆ ಕಷ್ಟ ಗೊತ್ತಿರಲಿಲ್ಲ. ರಾಜಕೀಯ ಮತ್ತು ಜಾತಿಯಿಂದ ಮೈಸೊರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದರು. ಕೆಲವು ವರ್ಷಗಳ ಹಿಂದೆ ಸಾಹಿತಿಯೊಬ್ಬರು ಅಮೆರಿಕಾಕ್ಕೆ ಅಕ್ಕ ಸಮ್ಮೇಳನಕ್ಕೆ ಹೋದಾಗ ಅಲ್ಲಿನ ವಿವರಣೆಯನ್ನು ಬರೆಯುತ್ತಿದ್ದರು. ಭೈರಪ್ಪನವರ ಸುತ್ತ ಅವರ ಅಭಿಮಾನಿ ವೃಂದದವರು ಮುತ್ತಿದ್ದರು. ಎಂದು. ಆಗ ಆ ಸಾಹಿತಿ, ಕ.ಸಾ.ಪ. ಅಧ್ಯಕ್ಷರು. ಆ ಮನುಷ್ಯ ಬರೆದಿರುವ ಕೃತಿಗಳ 10 ಪುಸ್ತಕಗಳ ಹೆಸರು ರಾಜ್ಯದ ಶೇ. 2 ಜನಕ್ಕೆ ಗೊತ್ತಿಲ್ಲ. ಅವರು ಭೈರಪ್ಪನವ ಬಗ್ಗೆ ಮಾತನಾಡಲು ಅಯೋಗ್ಯ. ಭೈರಪ್ಪ ಕಲ್ಪಿಸಿ ಬರೆದಿದ್ದು ಸ್ವಲ್ಪ, ಅನುಭವಿಸಿ ಬರೆದಿದ್ದು ಅಧಿಕ
ಬೈರಪ್ಪನೋರ ಬಗ್ಗೆ ಹೇಳೋದು ಬಿಡೊದು
ಬೈರಪ್ಪನೋರ ಬಗ್ಗೆ ಹೇಳೋದು ಬಿಡೊದು ಈಗ ಬೇಡ.. ಆದರೆ ಕುವೆಂಪು ಕುಲಪತಿಗಳಗೋಕೆ ಜಾತಿ ರಾಜಕೀಯ ಕಾರಣ ಅಂತೀರಲ್ಲ ಕುವೆಂಪು ತೂಕ ಏನು ಅಂತ ತಿಳೀದೇ ಮಾತಡ್ತ ಇರೋ ಹಾಗಿದೆ.. ಬಹುಶ ನೀವ್ಯಾರೋ ಬ್ರಾಹ್ಮಣ್ಯ ಪರ ಇರೋರು ಇರ್ಬೇಕು.
"ಅವರ ಆತ್ಮಕತೆ ಭಿತ್ತಿ ಓದಿದರೆ
"ಅವರ ಆತ್ಮಕತೆ ಭಿತ್ತಿ ಓದಿದರೆ ತಿಳಿಯುತ್ತದೆ. ಅವರು ಎಸ್ಠ್ಟು ಕಷ್ಟ ಪಟ್ಟು ಬಂದಿದ್ದಾರೆ."
"ಕುವೆಂಪು ಜನ್ಮತಹ ಸಿರಿವಂತ. ಅವರಿಗೆ ಕಷ್ಟ ಗೊತ್ತಿರಲಿಲ್ಲ."
conclusion: ಒಳ್ಳೆಯ ಸಾಹಿತ್ಯ ರಚನೆಗೆ ಒಂದೇ ದಾರಿ. ಕಷ್ಟ ಪಡುವದು. ಕಷ್ಟ ಪಡದವರ ಸಾಹಿತ್ಯ ನಾಲಾಯಕ್ಕು.
ಕುವೆಂಪು ರಾಜಕೀಯ ಮತ್ತು ಜಾತಿಯಿಂದ ಮೈಸೊರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದರು.
conclusion: ಅವರಿಗೆ ಇನ್ಯಾವುದೇ ಅರ್ಹತೆ ಇರಲಿಲ್ಲ. ಜ್ನಾನಪೀಠ ಕೂಡ ರಾಜಕೀಯ ಮತ್ತು ಜಾತಿಯಿಂದ ಸಿಕ್ಕಿದ್ದು.
ಆದರೆ ಭೈರಪ್ಪನವರ ಅಭಿಮಾನಿಗಳಲ್ಲಿ ಹೆಚ್ಚಿನವರು ಬ್ರಾಹ್ಮಣರಾಗಿದ್ದರೂ ಬೈರಪ್ಪನವರ ಜಾತಿಯ ಬಗ್ಗೆ ದಯಮಾಡಿ ಯಾರೂ ಮಾತನಾಡಕೂಡದು.
ಕ.ಸಾ.ಪ. ಅಧ್ಯಕ್ಷರು. ಆ ಮನುಷ್ಯ ಬರೆದಿರುವ ಕೃತಿಗಳ 10 ಪುಸ್ತಕಗಳ ಹೆಸರು ರಾಜ್ಯದ ಶೇ. 2 ಜನಕ್ಕೆ ಗೊತ್ತಿಲ್ಲ. ಅವರು ಭೈರಪ್ಪನವರ ಬಗ್ಗೆ ಮಾತನಾಡಲು ಅಯೋಗ್ಯ
conclusion: ಪೋಲೀಸ್ ನ್ಯೂಸ್ ಪತ್ರಿಕೆ ರಾಜ್ಯಾದ್ಯಂತ ತುಂಬ ಜನರಿಗೆ ಗೊತ್ತಿರುವದರಿಂದ ಅದರ ಸಂಪಾದಕ ಭೈರಪ್ಪನವರ ಬಗ್ಗೆ ಮಾತನಾಡುವ 100% ಅರ್ಹತೆ ಹೊಂದಿದ್ದಾರೆ.
ಭೈರಪ್ಪ ಕಲ್ಪಿಸಿ ಬರೆದಿದ್ದು ಸ್ವಲ್ಪ, ಅನುಭವಿಸಿ ಬರೆದಿದ್ದು ಅಧಿಕ
ಭೈರಪ್ಪ ಅಧಿಕವಾಗಿ ಬರೆದಿದ್ದು ಸನಾತನ ನಿಯೋಗ ಸಂಪ್ರದಾಯದ ಬಗ್ಗೆ, ಸನ್ಯಾಸಿಗಳ ಬಗ್ಗೆ, ವೇಶ್ಯೆಯರ ಬಗ್ಗೆ, ವಿಟ ಪುರುಶರ ಬಗ್ಗೆ, ಮರು ಮದುವೆಯ ಬಗ್ಗೆ, ಗೋಮಾಂಸ ಭಕ್ಷಣೆಯ ಬಗ್ಗೆ, ಮತಾಂತರದ ಬಗ್ಗೆ. ಅಪ್ರಿಯವಾದರೂ ಪೂರ್ಣ ಸತ್ಯವೊಂದನ್ನೇ ನುಡಿದ ಅಪ್ಪಟ ಮನುಷ್ಯ. ಆದರೆ ಅವನ್ನು ಅನುಭವಿಸಿರಲು ಸಾಧ್ಯವೇ?
ಕುವೆಂಪು ಬಗ್ಗೆ ಇಷ್ಟೆಲ್ಲಾ
ಕುವೆಂಪು ಬಗ್ಗೆ ಇಷ್ಟೆಲ್ಲಾ ಮಾತಡಿರೊ ಜನ ಅನಾಮಿಕರಾಗೇ ಬರ್ದಿದಾರೆ. ಎನ್ ಪುರುಷತ್ವ ಗುರುಗಳೆ ನಿಮ್ದು. ಅದ್ಭುತ.
ಕನ್ನಡದ ಅದ್ಭುತ ಸಾಹಿತಿಗಳಲ್ಲಿ
ಕನ್ನಡದ ಅದ್ಭುತ ಸಾಹಿತಿಗಳಲ್ಲಿ ಬೈರಪ್ಪ ಮೊದಲನೆಯವರಾಗಿ ನಿಲ್ಲುತ್ತಾರೆ, ಅವರ ಭೀಮಕಾಯದಿಂದ ಆವರಣದ ಬಗ್ಗೆ ವಿವರಿಸಲು ಹೊರಟರೆ ಪದ,ಸಮಯ ಎರಡೂ ಸಾಲದು. ಅವರ ಕಾದಂಬರಿಗಳು ಯಾವಾಗಲೂ ಹಾಗೇ, ಇಂದ್ರಿಯಗಳನ್ನು ಮೀರಿ ಆನಂದದ ಪರಮಾವಧಿಗೆ ಕೊಂಡೊಯ್ಯುತ್ತದೆ. ಇದನ್ನು ಓದಿ ಸುಖಿಸುವವರರಿಗೆ ನಕಲಿ ಜಾತ್ಯಾತೀತರಾದ ಪೀಠಾಧಿಪತಿಗಲಳ ಗೊಡವೆ ಯಾಕೆ?
ಚಂದ್ರು
ಪರ್ವ ಅದ್ಬುತ ಎ0ಬುದಷ್ಟೇ
ಪರ್ವ ಅದ್ಬುತ ಎ0ಬುದಷ್ಟೇ ಹೆಳಬಹುದು
ನಮಸ್ಕಾರಗಳು, ಭೈರಪ್ಪನವರ ಭಿತ್ತಿ
ಪ್ರಿಯರೆ, ಭಿತ್ತಿ ಕಾದಂಬರಿಯಲ್ಲ.
ಪ್ರಿಯರೆ,
ಭಿತ್ತಿ ಕಾದಂಬರಿಯಲ್ಲ. ಆತ್ಮಕಥೆ.
ದಯಮಾಡಿ ಓದಿ.
ಭೈರಪ್ಪನವರ ಹೆಚ್ಚಿನ
ಭೈರಪ್ಪನವರ ಹೆಚ್ಚಿನ ಕಾದಂಭರಿಗಳನ್ನು ಓದಿದ್ದೇನೆ.ಅವರರಂತಹ ಕಾದಂಬರಿಗಾರರು ವಿಶ್ವದಲ್ಲೇ ಇರುವುದು ಬಹುಷ ವಿಶ್ವದಲ್ಲೇ ತೀರ ವಿರಳ.
ಗ್ರಹಭ0ಗದ ಬಹುಭಾಗ ಭೈರಪ್ಪನವರ ನಿಜ
ಗ್ರಹಭ0ಗದ ಬಹುಭಾಗ ಭೈರಪ್ಪನವರ ನಿಜ ಜೀವನದ ಕಥೆಯೇ. ಆದನ್ನ ಅವರೇ ಭಿತ್ತಿಯಲ್ಲಿ ಹೇಳಿದ್ದಾರೆ.
'ಗೃಹಭಂಗ' ಕಾದಂಬರಿ ಮತ್ತು . "
'ಗೃಹಭಂಗ' ಕಾದಂಬರಿ ಮತ್ತು . " ಭಿತ್ತಿ" ಆತ್ಮ ಚರಿತ್ರೆ
ಗಳ್ಳಲಿ ಸಾದೃಶಗಳಿವೆ
ಪೂಜಾರಿಯವರೇ, 'ಗೃಹಭಂಗ'
ಪೂಜಾರಿಯವರೇ, 'ಗೃಹಭಂಗ' ಭೈರಪ್ಪನವರ ಜೀವನದ ಕಥೆಯಲ್ಲ. " ಭಿತ್ತಿ" ಅವರ ಆತ್ಮ ಚರಿತ್ರೆ.
ಧನ್ಯವಾದಗಳು.
ಕನ್ನಡ ಸಾರಸ್ವತ ಲೋಕದಲ್ಲಿ
ಕನ್ನಡ ಸಾರಸ್ವತ ಲೋಕದಲ್ಲಿ ಅಜರಾಮರವಾಗಿರುವ ಹೆಸರು ಡಾ||ಭೈರಪ್ಪ, ನಾನು ಅವರ ಎಲ್ಲ ಕಾದಂಬರಿ, ಲೆಖನ ಗಳನ್ನು ಓದಿದವನು. ಧರ್ಮಶ್ರಿ ಯಿಂದ ಆವರಣ ದ ವರೆಗೂ ಅವರ ಒಂದೊಂದು ಕಾದಂಬರಿಯೂ ಅಧ್ಬುತ. ಓದುಗನನ್ನು ಆದಿಯಿಂದ ಅಂತ್ಯದವರೆಗೂ ಕಲ್ಪನೆಗೂ ನಿಲುಕದ ಲೋಕಕ್ಕೆ ಕರೆದೊಯ್ಯುವ ಕಲೆ ಅವರಿಗೆ ಕರಗತ. ಗೃಹಭಂಗ ದಶಮಾನ ಗಳ ಜನ ಜೀವನವನ್ನು ಹೆಳುವ ಕತೆ ಅವರದೆ ಜೀವನ ಕತೆ ಎಂದು ತಿಳಿದಾಗ, ಇಂತಹ ಮಹಾನ್ ಸಾದನೆಗೆ ಆ ಬದುಕು ನಿಜವಾಗಿಯೂ ಸ್ಪೂರ್ತಿಯೋ, ಅವರ ಯಶೋಗಾತೆಗೆ ಬರೆದ ಮುಣ್ಣುಡಿಯೋ ಅಥವಾ ಈ ಸಾದನೆಗೆ ಅದು ಪೂರಕವಾಗಿರಬೇಕು,
ನಾನಿನ್ನೂ ಒದಿಲ್ಲ ಓದಬೇಕು.
ನಾನಿನ್ನೂ ಒದಿಲ್ಲ ಓದಬೇಕು. thanks ನಿಮಗೆ
ಭೈರಪ್ಪನವರ ಎಲ್ಲಾ ಕಾದ0ಬರಿಗಳನ್ನ
ಭೈರಪ್ಪನವರ ಎಲ್ಲಾ ಕಾದ0ಬರಿಗಳನ್ನ ಓದಿದ್ದೇನೆ. ಪರ್ವದ ಬಗ್ಗೆ ಹೇಳಲು ಶಬ್ದಗಳು ಸಾಕಾಗಲ್ಲ ಹಿಮಾಲಯಕ್ಕೇ ಹೋಗಿಬ0ದ ಹಾಗೆ ಆಗುತ್ತದೆ.ಮಹಾಭಾರತ ನಿಜವಾಗಿ ನೆಡೆದದ್ದು ಎನ್ನಿಸಲು ಶುರುವಾಗುತ್ತದೆ.
ಭೈರಪ್ಪನವರ ಆವರಣ ಓದಿದೆ
ಭೈರಪ್ಪನವರ ಆವರಣ ಓದಿದೆ ಇತ್ತೀಚಿಗೆ . ಮೈ ನವಿರೇಳಿಸುವಂತಹ ಕಾದಂಬರಿ . ನಮ್ಮ ದೇಶವನ್ನಾಳಿದ ಮುಗಲ್ ದೊರೆಗಳು ಅವರ ಕ್ರೌರ್ಯದ ವರ್ಣನೆ ಇದೆ. ಅದನ್ನು ಓದಿ ಒಂದು ಧರ್ಮ ಹೀಗೂ ಇರಲು ಸಾಧ್ಯವೇ ಅಂತ ಅನ್ನಿಸ್ತ ಇದೆ! ಈಗಿನ ಕಾಲದ ಸಾಮಾಜಿಕ ಆಗುಹೋಗುಗಳೊಡನೆ ಇತಿಹಾಸವನ್ನ ತಳುಕು ಹಾಕಿ ಬರೆದಿದ್ದಾರೆ. ಕೆಲ ಮಟ್ಟಿಗೆ ಅದು ಮೇಲ್ನೋಟಕ್ಕೆ ಸತ್ಯವೂ ಅನ್ನಿಸುತ್ತಿದೆ.
ಆಡಿಸಲಿ ಬಿಡಿ ಕಬಡ್ಡಿ. ಯಾವುದಾದರೂ
ಆಡಿಸಲಿ ಬಿಡಿ ಕಬಡ್ಡಿ. ಯಾವುದಾದರೂ ಆಟ ಆಡುತ್ತಲಿರಬೇಕು. ಆಗಲೇ ನಮಗೆ ಸಚಿನ್ ತೆಂಡೂಲ್ಕರ್, ಪ್ರಕಾಶ್ ಪಡುಕೋಣೆ(ಜೊತೆಗೆ ದೀಪಿಕಾ) ಅಂಥವರು ಸಿಗುವುದು!
ಪ್ರಿಯ ಮಿತ್ರ KLK, ಸಂತೇಶಿವರ
ಪ್ರಿಯ ಮಿತ್ರ KLK,
ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ವಿಲಾಸಿಯಲ್ಲ. ವಿರಾಗಿ. ಆದರೂ ಅಲ್ಲೊಂದು ಇಲ್ಲೊಂದು ಸಣ್ಣ ಮಟ್ಟಿನ ಬೆಂಕಿ ಹಚ್ಚುತ್ತಿರುತ್ತಾರೆ ಅಶ್ಟೇ. ಕೆಲವರು ಕೇಳಬಯಸದ, ಇನ್ನು ಕೆಲವರಿಗೆ ಅಮೃತವೆನಿಸುವಂಥ ಸತ್ಯಗಳನ್ನೇ ನುಡಿದು ಕನ್ನಡ ಸಾರಸ್ವತ ಲೋಕವನ್ನು ಇಬ್ಭಾಗ ಮಾಡಿ ಕಬಡ್ಡಿ ಆಡಿಸುವದರಲ್ಲಿ ಭೈರಪ್ಪನವರಿಗೆ ಇದಿರಿಲ್ಲ.
ಆದರೆ ನೂರರಲ್ಲಿ ತೊಂಬತ್ತು ಜನ ಭೈರಪ್ಪನವರ ಗ್ರಂಥಗಳನ್ನು ಓದದೇ ಅವರ ವಿಮರ್ಷೆ ಮಾಡುವವರು ಎನ್ನುವದರಲ್ಲಿ ಸಂದೇಹವಿಲ್ಲ. ಇಲ್ಲದಿದ್ದರೆ, ನೀವು ಹೇಳಿದ ಪರ್ವ ಗ್ರಂಥದಲ್ಲೇ ಗೋಮಾಂಸದ ಅಡಿಗೆಯ ವರ್ಣನೆ ಮಾಡಿದ್ದು ಗೊತ್ತಿದ್ದರೆ ಮನುವಾದಿಗಳು ಜೊತೆಗಿರಲು ಸಾಧ್ಯವಿದ್ದಿತ್ತೇ?
ಮೊಸರಲ್ಲಿ ಕಲ್ಲೇ?
ನಿಮ್ಮ ಅನಿಸಿಕೆ ತಿಳಿಸಿ