Skip to main content

ನಂ ಯಜಮಾನ್ರು ವಿಮರ್ಶೆ.

ಬರೆದಿದ್ದುFebruary 27, 2009
22ಅನಿಸಿಕೆಗಳು

[img_assist|nid=3626|title=ನಂ ಯಜಮಾನ್ರು.|desc=|link=none|align=left|width=133|height=150]

ಸುಮಾರು ಒಂದು ವರ್ಷದ ನಂತರ ಡಾ. ವಿಷ್ಣು ರವರ ಚಿತ್ರವೊಂದು ಬಿಡುಗಡೆಯಾಗಿದೆ ಸಹಜವಾಗಿ ನಿರೀಕ್ಷೆಗಳಿರುತ್ತವೆ. ಅದೂ 25 ವರ್ಷಗಳ ನಂತರ ಡಾ.ವಿಷ್ಣು ಮತ್ತು ನಾಗಾಭರಣ ಜೊತೆಯಾಗಿದ್ದಾರೆ, ಈ ಯುಗಳ ಗೀತೆಗೆ ರಾಗಬ್ರಹ್ಮ ಹಂಸ ಲೇಖ ಸಂಗೀತ ಸಂಯೋಜನೆ ಮಾಡಿದ್ದಾರೆ ಎಂದ ಮೇಲೆ ನಿರೀಕ್ಷೆಗಳು ಸ್ವಲ್ಪ ಜಾಸ್ತಿಯೇ ಇರುತ್ತವೆ. ಹಾಗಾದರೆ ಚಿತ್ರ ನಿರೀಕ್ಷೆ ಯ ಮಟ್ಟಕ್ಕೆ ಇದೆಯಾ.. ವಿಷ್ಣುವಿಗೆ ಈ ಚಿತ್ರದಲ್ಲಾದರೂ ನಿರೀಕ್ಷಿಸಿದ ಸಕ್ಸಸ್ ಸಿಗುತ್ತಾ... ನೋಡೋಣ ಬನ್ನಿ.

ಕಥೆ ಇಷ್ಟು. ಜನುಮದ ಜೋಡಿ .ಕಾಮ್ ಎಂಬ ಸಂಸ್ಥೆಯ ಮಾಲೀಕ ವಿಷ್ಣು. ಈ ಸಂಸ್ಥೆಯ ಮೂಲಕ ಇವರು ಅನೇಕರಿಗೆ ಬದುಕನ್ನು ತೋರುತ್ತಿರುತ್ತಾರೆ. ಅಂತರ್ಜಾತಿಗೆ ಪ್ರೋತ್ಸಾಹ, ವರದಕ್ಷಿಣೆಗೆ ದಿಕ್ಕಾರ, ಪ್ರೀತಿಗೆ ಜೈ. ಇದು ಈ ಸಂಸ್ಥೆಯ ಉದ್ದೇಶವಾಗಿರುತ್ತದೆ. ಆದರೆ ಈ ಸಂಸ್ಥೆಯ ಯಜಮಾನರೇ ಒಂದು ಪ್ರೀತಿಯ ಇಕ್ಕಟ್ಟಿನಲ್ಲಿ ಸಿಕ್ಕಿ ಒದ್ದಾಡುತ್ತಿರುತ್ತಾರೆ ಅದರ ಸಂಪೂರ್ಣ ಸಾರವೇ ನಂ ಯಜಮಾನ್ರು.

ಚಾರು ( ನವ್ಯಾ ನಾಯರ್) ತಂದೆ ತಾಯಿಗಳ ಪ್ರೀತಿವಂಚಿತ ಹುಡುಗಿ, ಇಂತಹ ಹುಡುಗಿಯನ್ನು ಶಶಾಂಕ್ (ವಿಷ್ಣು) ಮತ್ತು ಊರ್ಮಿಳೆ ( ಲಕ್ಷ್ಮೀ ಗೋಪಾಲಸ್ವಾಮಿ) ಮಾನಸ ಪುತ್ರಿ ಯಾಗಿ ಸ್ವೀಕರಿಸಿ, ಪ್ರೀತಿಸಿರುತ್ತಾರೆ. ಚಾರು ಈ ದಂಪತಿಗಳ ಜೊತೆ ತುಂಬಾ ಸಲುಗೆಯಿಂದ ಇರುತ್ತಾಳೆ. ಅದರಲ್ಲೂ ಶಶಾಂಕ್ ಜೊತೆ, ಥೇಟ್ ಆತನ ಹೆಂಡತಿ ಊರ್ಮಿಳೆ ತರಾನೇ ವರ್ತಿಸಿ ಈ ದಂಪತಿಗಳನ್ನು ನಗಿಸುತ್ತಿರುತ್ತಾಳೆ. ಅವರಿಬ್ಬರ ಪ್ರೀತಿಯಿಂದ ತೀರಾ ಪ್ರಭಾವಿತಳಾಗಿರುತ್ತಾಳೆ. ಒಂದೊಮ್ಮೆ ಪ್ರವಾಸ ಹೊರಟಾಗ, ಚಾರು ತಂದೆತಾಯಿ, ಶಶಾಂಕ್ ಹೆಂಡತಿ ಎಲ್ಲರೂ ತೀರಿ ಹೋಗುತ್ತಾರೆ. ಆದರೆ ಬದುಕುಳಿದ ಚಾರುವಿನ ಮಿದುಳು ಮತ್ತು ನರಮಂಡಲ ವಿಕೃತಿಗೆ ತುತ್ತಾಗಿ, ಡಿಸೋಸಿಯೆಟೀವ್ ಐಡೆಂಟಿಟಿ ಡಿಸಾರ್ಡರ್ (ಅದೊಂದು ಖಾಯಿಲೆ, ಆಪ್ತಮಿತ್ರ ದಲ್ಲಿ ಸೌಂದರ್ಯಗೆ ಇದ್ದಂತಹುದು) ಶಶಾಂಕ್ ನ ಹೆಂಡತಿ ತರ ವರ್ತಿಸೋಕೆ ಶುರುಮಾಡಿಬಿಡುತ್ತಾಳೆ. ಶಶಾಂಕ್ ನನ್ನು ಗಂಡ ಅಂತಾನೆ ಭಾವಿಸಿಕೊಳ್ಳುತ್ತಾಳೆ. ಶಶಾಂಕ್ ಮಾತ್ರ , ನೆನ್ನೆ ತನಕ ಮಗಳಾಗಿದ್ದ ಹುಡುಗಿ, ಇವತ್ತು ಹೆಂಡತಿ ತರ ವರ್ತಿಸ್ತಿರೋದನ್ನು ನೋಡಿ, ಹೇಳಲೂ ಆಗದ ಅನುಭವಿಸಲೂ ಆಗದ ಸ್ಥಿತಿಯನ್ನು ತಲುಪಿ ಮಾನಸಿಕವಾಗಿ ವೇದನೆಯನ್ನು ಅನುಭವಿಸುತ್ತಿರುತ್ತಾನೆ.

ಈ ಮದ್ಯೆ ಚಾರುವಿನ ಪ್ರಿಯತಮ ಅಲೋಕ (ವಿಜಯ ರಾಘವೇಂದ್ರ) ಮಿಲ್ಟ್ರಿಯಿಂದ ಇವಳಿಗಾಗಿ ಬಂದಿರುತ್ತಾನೆ. ಆದರೆ ಚಾರು ಅವನನ್ನು ಗುರ್ತಿಸುವುದಿಲ್ಲ. ಅಲೋಕ್ ಗೆ ಶಶಾಂಕ್ ಮೇಲೆ ಅನುಮಾನ, ಈತನೇ ಅವಳ Brain wash ಮಾಡಿ ತನ್ನ ಹೆಂಡತಿ ಮಾಡ್ಕೊಂಡಿದ್ದಾನೆ ಅಂತ. ಶಶಾಂಕನ ಮೇಲೆ ರೌಡಿಗಳನ್ನು ಛೂಬಿಡುವಷ್ಟು ದ್ವೇಷ ಸಾಧಿಸುತ್ತಿರುತ್ತಾನೆ.

ಇತ್ತ ಶಶಾಂಕ್ ವೈದ್ಯರ ಹಿಂದೆ ಬಿದ್ದಿರುತ್ತಾನೆ. ಏನಾದರೂ ಮಾಡಿ ಅವಳನ್ನು ಉಳಿಸಿಕೊಡಿ ಎಂದು ಅಂಗಲಾಚುತ್ತಿರುತ್ತಾನೆ. ವೈದ್ಯರುಗಳು ಹೇಳುತ್ತಾರೆ , ಆಕೆಯಲ್ಲಿ ಎರಡು ಮೆಮೋರಿಗಳು Activate ಆಗಿವೆ. ಒಂದು ಊರ್ಮಿಳೆದು, ಮತ್ತೊಂದು ಚಾರುವಿನದು. ಇವೆರಡರಲ್ಲಿ ಒಂದು ಮೆಮೋರಿಯನ್ನು Delete ಮಾಡಬಹುದು But ಅದು ಯಾವುದು ಎಂಬುದು ನಮಗೂ ಗೊತ್ತಿಲ್ಲ. ಊರ್ಮಿಳೆಯದು ಅಳಸಿಹೋದರೆ, ಮೊದಲಿನ ಚಾರು ಸಿಗುತ್ತಾಳೆ ಯಾವುದೇ ಪ್ರಾಬ್ಲಮ್ ಇರೋಲ್ಲ, ಒಂದು ವೇಳೆ, ಚಾರುವಿನದು ಅಳಸಿಹೋದರೆ ನೀವು ಈಕೆಯನ್ನು ಊರ್ಮಿಳೆಯಾಗಿ ಸ್ವೀಕರಿಸದೆ ವಿಧಿಯಿಲ್ಲ. ಇದನ್ನು ಕೇಳಿ ಶಶಾಂಕ್ ಗೆ ಅಘಾತವಾಗುತ್ತದೆ ಮಗಳನ್ನು ಊರ್ಮಿಳೆಯಾಗಿ ಸ್ವೀಕರಿಸುವುದೇ. ಎಂಬ ಗೊಂದಲದಲ್ಲಿ ತೊಳಲಾಡುತ್ತಾನೆ.

ಕೊನೆಗೆ ಏನಾಯಿತು..? ಶಶಾಂಕ ವೈದ್ಯರ ಮಾತನ್ನು ಒಪ್ಪಿದನಾ..? ಯಾವ ಮೆಮೋರಿ ಅಳಿಸಿತು ಊರ್ಮಿಳೆಯದಾ..? ಚಾರುವಿನದಾ..?ಅಲೋಕ್ ಗೆ ಹೇಗೆ ನಿಜ ತಿಳಿಯಿತು. ? ಥೀಯೇಟರ್ ನಲ್ಲಿ ನೋಡಿ.

ಆಭಿನಯಃ ವಿಷ್ಣುವಿಗೆ ಈ ಚಿತ್ರದಲ್ಲಿ ಸವಾಲೆನಿಸುವಂತಹ ದೃಶ್ಯಗಳೇನೂ ಇಲ್ಲ. ವಹಿಸಿದ ಕೆಲಸವನ್ನು ಎಂದಿನಂತೆ ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ವಿಷ್ಣುರವರ ಇದರಪ್ಪನಂತಹ ಅದೆಷ್ಟೋ ನಟನೆಯ ಅದ್ಬುತಗಳನ್ನು ಈಗಾಗಲೇ ನಾವು ನೋಡಿಯಾಗಿದೆ. ನವ್ಯಾನಾಯರ್ ಅಭಿನಯ ಆಪ್ತಮಿತ್ರದ ಸೌಂದರ್ಯಳನ್ನು ನೆನಪಿಸುತ್ತೆ. ಅನಂತನಾಗ್ ವಿಜಯ್ ಗೆ ಹೆಚ್ಚಿನ ಕೆಲಸವಿಲ್ಲ.

ಸಂಗೀತಃ ಹಂಸಲೇಖ ರವರು ಮತ್ತೊಮ್ಮೆ ಮಿಂಚಿದ್ದಾರೆ. ನೆನ್ನೆರಾತ್ರಿ, ಗೊಂಬೆ ಮರಿ, ಈ ಮೌನ. ಮತ್ತು ದುಂಡು ಭೂಮಿಗೆ ಹಾಡುಗಳು ಮತ್ತೆ ಮತ್ತೆ ಕೇಳುವಂತಿವೆ. ಹಿನ್ನಲೆ ಸಂಗೀತ ಕೆಲವು ಕಡೆ ಅಮೋಘವಾಗಿದೆ.

ನಿರ್ದೇಶನಃ ಸಂಕಲನಕಾರರಿಂದ ಸರಿಯಾದ ಸಪೋರ್ಟ್ ಸಿಕ್ಕಿಲ್ಲ ಅನ್ನಿಸುತ್ತೆ, ಒಟ್ಟಾರೆಯಾಗಿ ನೋಡಿದರೆ ಸಿಗೋ Feel ಏನೇ ಇದ್ದರೂ ಕೆಲವು ಕಡೆ ತೀರಾ ಹಾಸ್ಯಸ್ವದವಾಗಿ ನಿರ್ದೇಶಿಸಲಾಗಿದೆ. ಕೆಲವು ಕಡೆ ಇನ್ನೂ ಸ್ವಲ್ಪ ಪ್ರಭಾವಿಯಾಗಿ ಚಿತ್ರಿಸಬೇಕಿತ್ತು.

ಛಾಯಾಗ್ರಾಹಣಃ ಕಲಾವಿದರನ್ನು ಹೊರತುಪಡಿಸಿದರೆ, ಚಿತ್ರದಲ್ಲಿ ಮೊದಲ ಸ್ಥಾನ ಛಾಯಗ್ರಾಹಕ ರಮೇಶ್ ಬಾಬು ವಿಗೆ ಸಲ್ಲಬೇಕು. ತುಂಬಾ ಸುಂದರವಾಗಿ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ.
ಸಂಭಾಷಣೆಃ ಪ್ರಭಾಕರ್ ರವರ ಸಂಭಾಷಣೆ ಈ ಚಿತ್ರದ ಪ್ರಮುಖಾಂಶಗಳಲ್ಲೊಂದು.

ಒಟ್ಟಾರೆಃ ಸುಂದರ ಕಥೆ, ಮನಮಿಡಿಯುವ ಅಭಿನಯ, ಮನಮುಟ್ಟುವ ಸಂಭಾಷಣೆ, ತಲೆದೂಗಿಸುವ ಗೀತೆಗಳು ಇದ್ದರೂ ಸಹ Super Hit ಅನ್ನಿಸಿಕೊಳ್ಳೋದು ಕಷ್ಟವೇ ಆದರೆ Success Movie ಅನ್ನಿಸಿಕೊಳ್ಳುವುದರಲ್ಲಿ ಎರಡು ಮಾತಿಲ್ಲ ಬಿಡಿ.

ಲೇಖಕರು

ವಿ.ಎಂ.ಶ್ರೀನಿವಾಸ

ಭಾವ ಲಹರಿ

ನನ್ನ ಹೆಸರು ವೀರಕಪುತ್ರ ಶ್ರೀನಿವಾಸ,

ಅನಿಸಿಕೆಗಳು

vinod ss (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 02/27/2009 - 19:59
ಕೆಎಲ್ಕೆ ಶನಿ, 02/28/2009 - 10:27

ಇವರ ಮಕ್ಕಳ ವಯಸ್ಸಿನ ನಾಯಕರಿಗಿಂತ ನೋಡಲು ಚೆನ್ನಾಗಿರುವ, ಇವರ ಅಪ್ಪನ ವಯಸ್ಸಿನ ನಟರಿಗಿಂತ ನಟನೆ ಮಾಗಿರುವ ವಿಷ್ಣು, ದೇವರಾಗುವ ತಮ್ಮ ಅಭಿಲಾಷೆಯನ್ನು ಬಿಡಬೇಕು. ಬೇರೆ ಬೇರೆ ವಿಬಿನ್ನ ಪಾತ್ರದಲ್ಲಿ, ತಮ್ಮ ವಯಸ್ಸಿಗೆ ತಕ್ಕಂತೆ ನಟಿಸಬೇಕು (ಹಿಂದಿಯಲ್ಲಿ ಅಮಿತಾಬ್ ನೋಡಿ). ಅವರಿಗೆ ಅಭಿಮಾನಿಗಳಿದ್ದಾರೆ. ಮಕಾಡೆ ಮಲಗಿರುವ ಕನ್ನಡ ಚಿತ್ರರಂಗಕ್ಕೆ ಅವರು ನಿಜಕ್ಕೂ ಆಸರೆಯಾಗಬಲ್ಲರು. ಅದ ಬಿಟ್ಟು ರಜನಿಕಾಂತ್ ಆಗ ಹೊರಟರೆ ಕನ್ನಡ ಪ್ರೇಕ್ಷಕರು ತಮಿಳರಲ್ಲ ಹಾಗೂ ತಮಿಳರಂತೆ ಅಂಧಾಭಿಮಾನಿಗಳಂತೂ ಮೊದಲೇ ಅಲ್ಲ.

ಸಿರಿರಮಣ ಗುರು, 03/05/2009 - 09:51

ಎಲ್ಲ ಲೇಖನಗಳ ವಿಷಯದಲ್ಲೂ ನಿನ್ನ ಪೋಟೋದ ಹಾಗೇ ನಿನ್ನ ಯೋಚನೆಯೂ ನೆಗೆಟಿವ್ ಆಗಿದೆಯಲ್ಲ ಮರೀ.

rajumysore (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 03/06/2009 - 15:21

Hi klk ,
Neevoo vimarshe chennagi hodiddiraa.. i cinemadalli vishnu devaragodakke hogilla ondo olle samajika family cinema dalli act maadiddare , summane vishnu ge negative aagi maathdbekantha enoo ondoo comment maadoddalla modaloo cinema nodi nanthra maathadii , eedakke kannada industry uddra aagalla nimmanthavaarinda..

ಸಮಾಜ ಮುಖಿ (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 03/06/2009 - 15:24

ಕೇಳ್ರಪ್ಪೋ ಕೇಳಿ, ರಾಜು ಮೈಸೂರಂಥವರಿಂದ ಕನ್ನಡ ಫಿಲ್ಮ ಇಂಡಸ್ಟ್ರಿ ಉಧ್ಧಾರ ಆಯ್ತದೆ.
ಕೇಳ್ರಪ್ಪೋ ಕೇಳಿ, ರಾಜು ಮೈಸೂರಂಥವರಿಂದ ಕನ್ನಡ ಫಿಲ್ಮ ಇಂಡಸ್ಟ್ರಿ ಉಧ್ಧಾರ ಆಯ್ತದೆ.
ಕೇಳ್ರಪ್ಪೋ ಕೇಳಿ, ರಾಜು ಮೈಸೂರಂಥವರಿಂದ ಕನ್ನಡ ಫಿಲ್ಮ ಇಂಡಸ್ಟ್ರಿ ಉಧ್ಧಾರ ಆಯ್ತದೆ.

rajumysore (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 03/06/2009 - 15:26

yes,
Naanu ellla olle kannada cinema nodthini.. nimma thara andaabhimaani alla

ಸಮಾಜ ಮುಖಿ (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 03/06/2009 - 15:32

ವಿಶ್ಣುವರ್ಧನಗೆ ಸಣ್ಣದಾಗಿ ಚುಚ್ಚಿದರೆ ನಿನಗೆ ನೋವಾಗುತ್ತದೆ. ಯಾರು ಅಂಧಾಭಿಮಾನಿ? ನಾನಾ ನೀನಾ ರಾಜು ಮೈಸೂರ್?

rajumysore (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 03/06/2009 - 15:38

Hello anamadeyaa.. iilli vishnu vishaya alvamma film chennagiddake comment maadidduu adre nimmanth a kelavoo dhrabimanigaloo yavagaloo idde iruthare..aduoo hesaroo kuda helada pukkalalugaaloo

rajumysore (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 03/06/2009 - 15:27

samajamuki idu ondu hesara..?

ಸಮಾಜ ಮುಖಿ (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 03/06/2009 - 15:34

samajamuki idu ondu hesara..?

ಇಲ್ಲ ಕಣೋ ಮೂರ್ಖ. ಅದು ಕಾವ್ಯನಾಮ. ಹೆಸರು ಅಂದರೆ "ರಾಜು", "ಮೋಜು", ಗೋಜು" ಎಂದಿರುತ್ತದೆ. ಅದರ ಜೊತೆಗೆ "ಮೈಸೂರು", " ಚನ್ನಪಟ್ಣ" ಎಂದು ಕೂಡ ಸೇರಿಸಿಕೊಳ್ಳಬಹುದು.

rajumysore (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 03/06/2009 - 15:56

pullingada hesaroo illa shrilingada hesaroo ninagilla check maadisikoo hijjda antha confirm aaguthe ninage..

savinay (ಪ್ರಮಾಣಿಸಲ್ಪಟ್ಟಿಲ್ಲ.) ಧ, 03/04/2009 - 17:30

ಒಪ್ಪ್ಲೆಸ್ಸ್ ಫಿಲ್ಮ

ಅಶ್ವಿನಿ ಧ, 03/04/2009 - 17:57

ನಿಮ್ಗೆ ಅದರಲ್ಲಿ ಏನ್ ಓಪ್ಲೆಸ್ ಅನ್ನಿಸಿತು ಅಂತ ಹೇಳ್ತೀರಾ ಸಾರ್. ನಿಜಕ್ಕೂ ಸಿನಿಮಾ ಚೆನ್ನಾಗಿದೆ. ಮಾತೆತ್ತಿದರೆ, ಮಚ್ಚು ಇಲ್ಲ ಬಿಚ್ಚು ಅನ್ನೋ ಈಗಿನ ಟ್ರೆಂಡ್ ನಲ್ಲಿ ಕುಟುಂಬ ಸಮೇತ ಮುಜುಗರವಿಲ್ಲದೇ ನೋಡಬಹುದಾದ ಸಿನಿಮಾ ಇದು. ನಿಮಗೊಂದು ಸವಾಲ್ ಹಾಕ್ತೀನಿ ಕನ್ನಡದಲ್ಲಿ ಈ ಸದ್ಯಕ್ಕೆ ಮತ್ತೋಂದು ಸಕುಟುಂಬ ನೋಡಬಹುದಾದ ಸಿನಿಮಾ ಇದ್ದರೇ ಹೇಳಿ.ಆಮೇಲೆ ಈ ಸಿನಿಮಾದ ಬಗ್ಗೆ ಮಾತನಾಡೋಣ.

ಸಿರಿರಮಣ ಗುರು, 03/05/2009 - 09:52

ನಿಮ್ಮ ಇಷ್ಟ ನಿಮ್ಮ ವ್ಯಕ್ತಿತ್ವವನ್ನು ಹೇಳುತ್ತೆ ಗುರೂ.

hema (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 03/05/2009 - 15:42

ಇದು ಒಂದು ಸಿನಿಮನಾ... ಇತ್ತೀಚೆಗೆ ಫ್ಯಾಮಿಲಿ ಜೊತೆ ನೋಡೊ ಸಿನಿಮಾ ಬಂದು ಬಹಳ ದಿನಗಲಾಯ್ತು.... ಸ್ಟೋರಿ ಕೇಳೆ ತಲೆ ನೋವು.... ಯಾಕೆ ನಮ್ಮ ಕನ್ನಡ ಚಿತ್ರಗಳು ಹೀಗೆ ಆಗುತ್ತಿದೆ...

Rammi (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 03/05/2009 - 19:55

ಏನಮ್ಮಾ.... ನಿನಗೆಸಿನಿಮಾ ನೋಡದೇನೇ, ಕಥೆ ಕೇಳಿದ್ದಕ್ಕೆ ತಲೆನೋವು ಬಂತಾ..? ಹುಷಾರು ತಾಯಿ ಮದುವೆಮಾಡ್ಕೊಳ್ಳದೇನೆ, ಬರೀ 'ಕೇಳಿ' ದ್ದಕ್ಕೆ ಗರ್ಭಿಣಿಯಾಗಿಬಿಟ್ಟೆ ಎಂದುಬಿಟ್ಟೀರಿ. ಜನ ಆಡ್ಕೋತಾರೆ. ಹೋಗ್ರಿ ಮೊದಲು ಸಿನಿಮಾ ನೋಡಿ, ಆಮೇಲೆ ಅದರ ಬಗ್ಗೆ ಬರೀರಿ. ನಿಮ್ಮಂತ ಅರೆಬೆಂದವರಿಂದಾನೇ ಕನ್ನಡ ಚಿತ್ರರಂಗ ಇವತ್ತು ಇಂತಾ ದುಸ್ಥಿತಿ ತಲುಪಿರೋದು.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 03/06/2009 - 03:37

hi kannadadha best film

ramamurthy (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 03/06/2009 - 15:24

super hit film & super acting by simha.

ಸಿಂಹಾದ್ದ್ರಿ (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 03/08/2009 - 09:19

ಪ್ರಿಯ ಓದುಗರೆ, ನೀವೆಲ್ಲ ಈ ಚಿತ್ರದ ಬಗ್ಗೆ ಹಾಗೂ ಲೇಖನದ ಬಗ್ಗೆ, ಮನಸೊ ಇಚ್ಚೆ ಬರೆಯುತ್ತಿದ್ದಿರಲ್ಲ ಖಂಡಿತವಾಗಿ ನಿಮಗೆ ಸಿಂಹದ ಬಗ್ಗೆ ಗೊತ್ತಿಲ್ಲ ಅನಿಸುತ್ತದೆ , ನೀವೆಲ್ಲ ಸಿನಿಮಾವನ್ನು ಸೂಕ್ಧ್ಮವಾಗಿ ಅರ್ಥವನ್ನು ಹುಡುಕಿ , ಅದರಲ್ಲಿ ವಿಷ್ಣುವಿನ ಪಾತ್ತ ಎಂತಹುದೆಂದು ಗೊತ್ತಾಗುತ್ತೆ ಆ ಪಾತ್ರದೆಲ್ಲಿನ ಅಮಾಯಕತ್ವ, ಅಸಾಯಕತೆ, ಇದೆ ಇಂತಹ ಪಾತ್ರ ಕ್ಕೂ ಸಿಂಹ ಎಷ್ಟು ಸಮಂಜಸವಾಗಿದ್ದಾರೆ. ಇನ್ನೂ ಕಥೆಗೆ ಬಂದರೆ 2ಃ30 ಗಂಟೆ ಸಿನಿಮಾ ಎಲ್ಲೂ ಬೆಸರವಾಗುವುದಿಲ್ಲ ಸಿನಿಮಾನ ಕರ್ಮಷಿಯಲಾಗಿ ನೋಡುವವರಿಗೆ ಮಾತ್ರ ಅದು ಇಷ್ಟವಾಗುವುದಿಲ್ಲ ಇದಕ್ಕೆ ಹೆಳುವುದು ಸಿನಿಮಾನ ನೊಡಬಾರದು ಅನುಬವಿಸಬೆಕು ಎಂದು . ನೋಡಿ ಅನುಭವಿಸಿ , ಆನಂದಿಸಿ, ಇಲ್ಲಿನ ವಿಮರ್ಶಕರೆಲ್ಲ ಮತ್ತೊಮ್ಮೆ ಸಿನಿಮಾ ನೊಡಿ

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 03/08/2009 - 10:28
ವೆಂಕಟೆಶ ಹೊಳಲಿ (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 03/09/2009 - 10:51

ಸಿನಿಮಾ ತುಂಬಾ ಚೆನ್ನಾಗಿದೆ. ಬಲು ಅಪರೂಪವಾಗಿದೆ

appi (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 03/13/2009 - 16:46

cinema tumba chennagi mudi bandide matthe matthe nodo hagide, hadugalanthu gunugunisuvahagide thankas to nagabharana & hams.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.