Skip to main content

ಚುಟುಕು ಸಾಹಿತ್ಯ

ಬರೆದಿದ್ದುFebruary 8, 2007
1ಅನಿಸಿಕೆ

ಪದ ಮಹಿಮೆ.

ಕಾವೇರಿಗೂ ಕರ್ನಾಟಕಕ್ಕೂ ಏನೋ ಅವಿನಾಭಾವ ಸಂಬಂಧ
ಇರಬಹುದು ಕಾರಣ ಈ ಎರಡು ಶುರುವಾಗುವುದು “ಕ” ಇಂದ
ಮತ್ತೇನು “ತರಲೆ” ಈ “ತಮಿಳು”ನಾಡಿನಿಂದ
ಇರಬಹುದು ಕಾರಣ ಈ ಎರಡು ಶುರುವಾಗುವುದು “ತ” ಇಂದ.

ಬೆಂಗಳೂರು.

ಕನಸು ಮಾರುವ ಊರು
ಐಟಿ-ಬಿಟಿಯ ತವರೂರು
ಎಲ್ಲಾ ಜನಗಳ ಭರವಸೆಯ ಕೊನರು
ಆದರೂ ಇಲ್ಲಿಲ್ಲ ನೆಮ್ಮದಿಯ ಉಸಿರು
ಕಾರಣ ಎಲ್ಲರಿಗೂ ಇಲ್ಲ ಒಂದು ಸೂರು.

ಸರ್ಕಾರ

ಸದಾ ಗದ್ದಲ ಮಾಡುವ
ಜನಗಳಲ್ಲಿ ಆಸೆಗಳನ್ನು ಬಿತ್ತುವ
ಮೂಲಕ ಸಮಾಜವನ್ನು ಜೀವಂತವಾಗಿಡುವ
ಭ್ರಮೆಯನ್ನು ಬಿತ್ತುವ ಯಂತ್ರವೇ
ಸರ್ಕಾರ.

ಜೀವನ

ಉಸಿರಾಡುವುದೂ ಜೀವನ
ಹೊಟ್ಟೆಹೊರೆಯುವುದೂ ಜೀವನ
ಸತ್ಯವನ್ನಾಡುವುದೂ ಜೀವನ
ಆದರ್ಶವೂ ಜೀವನ
ಓಹ್!
ಎಷ್ಟೊಂದು ಅಡಗಿದೆ ಈ ಜೀವನದಲ್ಲಿ
ಬಿಡಿಸಲಾಗದಷ್ಟಿದೆ ಈ ಜೀವನದಲ್ಲಿ
ಇದು ಎಲ್ಲಾ ಉಪನದಿಗಳು ಸೇರಿ ಸದಾಹರಿಯುವ
ಜೀವನದಿ

ಲೇಖಕರು

shivalinga swamy

naanu Chartered Accountant (final ) sarakari kelasadalli iddene bangalore nanna karya stala mattu nanu agriculturist.

ಅನಿಸಿಕೆಗಳು

khushi (ಪ್ರಮಾಣಿಸಲ್ಪಟ್ಟಿಲ್ಲ.) ಧ, 04/25/2007 - 17:04

ತುಂಬಾ ಚೆನ್ನಾಗಿದೆ...

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.