Skip to main content

ಯಾವನಿಗೆ ಬೇಕು ಈ ರೀತಿಯ ಸ್ಟ್ರೈಕು ?

ಬರೆದಿದ್ದುFebruary 8, 2007
5ಅನಿಸಿಕೆಗಳು

ಯಾವನಿಗೆ ಬೇಕು ಈ ರೀತಿಯ ಸ್ಟ್ರೈಕು ? ಒಂದು ಸ್ಟ್ರೈಕು , ಪ್ರತಿಭಟನೆ ಇದೆ ಅಂದ್ರೆ ಸಾಕು ನಾವು ಊಹೆ ಮಾಡ್ಬಹುದು ಒಂದಷ್ಟು ಬಸ್‌ಗಳು ಸುಟ್ಟೋಗತ್ತೆ ಅಂತಾ. ಹಾಗೆ ಒಂದ್ನಾಲ್ಕು ಜನ ಮಟಾಷ್ ಕೂಡಾ ಆಗ್ಬಹುದು ಅಂತಾ! ಇವೆಲ್ಲಾ ಯಾವ ಪುರುಷಾರ್ಥಕ್ಕಾಗಿ? ನಮಗೆ ಶಾಂತ ರೀತಿಯಿಂದ ಸ್ಟ್ರೈಕ್ ಮಾಡೋಕ್ಕೆ ಆಗಲ್ವಾ? ಕೆಲವೊಮ್ಮೆ ಅಂತೂ ವಾರಗಟ್ಟಲೆ ಸ್ಟ್ರೈಕು ನಡಿತಾನೆ ಇರತ್ತೆ. ಆಗ ಪ್ರತಿದಿನದ ಊಟ-ತಿಂಡಿಗಳಿಗೆ ಆ ದಿನ ಗಳಿಸಿದ ಹಣದ ಮೇಲೆ ಡಿಪೆಂಡ್ ಆಗಿರೋರ ಗತಿ? ಪಬ್ಲಿಕ್ ಆಸ್ತಿ ಹಾಳು ಮಾಡಿ ಜನರಲ್ಲಿ ಹೆದರಿಕೆ ಹುಟ್ಟಿಸೋದೇ ನಮ್ಮಲ್ಲಿ ಸ್ಟ್ರೈಕ್ ಅಂತಾ ಆಗಿ ಬಿಟ್ಟಿದೆ. ಸ್ಟ್ರೈಕ್‌ ಗಲಾಟೆಯಲ್ಲಿ ಸತ್ತವರ ಹಿಂದೆ ಕೊಲೆ ಸಂಚು ಏನಾದ್ರು ಇತ್ತಾ ಅಂತಾ ನಮ್ಮಲ್ಲಿ ಏನಾದ್ರು ಇನ್ವೆಸ್ಟಿಗೇಶನ್ ನಡೆಯುತ್ತಾ? ಕೆಲವೇ ಕೆಲವು ರಾಜಕಾರಣಿಗಳ ಹಿತಸಾಧನೆಗಾಗಿ ನಡೆಯೋ ಈ ಗಲಾಟೆಗಳಿಗೆ, ಹತ್ಯೆಗಳಿಗೆ ಕೊನೆ ಎಂದು ? ನಿಮ್ಮ ಅನಿಸಿಕೆ?

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಅನಿಸಿಕೆಗಳು

ashu ಗುರು, 02/08/2007 - 12:26

ನಿಮ್ ಮಾತನ್ನ ಒಪ್ತೀನಿ ರಾಜ್, ಆದ್ರೆ ನನ್ನ ಭಾವನೆ ಏನೆಂದು ತಿಳಿಸಿ ಬಿಡ್ತೀನಿ, ದಯವಿಟ್ಟು, ನನ್ನ ವಿಚಾರ ತಪ್ಪಾಗಿದ್ದರೆ, ನನ್ನ ಕ್ಷಮಿಸಿ ಬಿಡಿ, ಆದ್ರೆ, ಆಮೇಲೆ ಎಲ್ರೂ ಸೇರಿ ಬಯ್ಯೋಕೆ ಹೋಗ್‌ಬೇಡಿ, ಐ ಡೋಂಟ್ ಲೈಕ್ ಧ್ಯಾಟ್!!

ಸದ್ಯಕ್ಕೆ ಬೇರೆ ಚಳುವಳಿಗಳು ಬೇಡಾ, ಕಾವೇರಮ್ಮನ ಚಳುವಳಿ ಬಗ್ಗೆ ಮಾತಾಡೋಣ..

ಯಾಕ್ ಸಾರ್, ಬರೀ ಪಬ್ಲಿಕ್ ಮಾತ್ರ ಸ್ಟ್ರೈಕೆ ಮಾಡ್ ಬೇಕು?, ಸರ್ಕಾರಕ್ಕೇನಾಗಿದೆ?

ಯಾಕೆ ಕಾವೇರಿ, ಸರಕಾರಕ್ಕೆ ಸಂಬಂಧಿಸಿಲ್ಲವ?

ಬಸ್‌ಗಳನ್ನು ಒಡೆಯದಿದ್ರೆ, ರಸ್ತೆ ತಡೆ ಮಾಡದಿದ್ರೆ, ರೇಲ್ವೆ ತಡೆ ಮಾಡದಿದ್ರೆ, ಸರಕಾರ ಕಣ್ಣೆತ್ತೀನೂ ನೋಡೋಲ್ಲ.

ಸಧ್ಯದ ಪರಿಸ್ಥಿತಿಯಲ್ಲಿ, ಬೊಗಳೊ ನಾಯಿಯನ್ನೇ ಯಾರು ಕ್ಯಾರೇ ಅಂತಿಲ್ಲ, ಇನ್ನ ಮೌನವಾಗಿರೋ ನಾಯಿನಾ ಕೇಳ್ತಾರ?

ದಯವಿಟ್ಟು ನಾನ್ ನಮ್ಮಗಳನ್ನ ನಾಯಿಗೆ ಹೋಲಿಸ್ತಿದೀನಿ ಅನ್ನೋ ಅಪಾರ್ಥ ಮಾಡ್ಕೋಬೇಡಿ, ನಾನ್ ಹೇಳಬಯಸ್ತಾ ಇರೋ ಮಾತಿನ ಅರ್ಥ ಮಾಡ್‌ಕೊಳ್ಳಿ.

ಸಧ್ಯದ ಪರಿಸ್ಥಿತಿಯಲ್ಲಿ, ನಾವ್ ರಸ್ತೆ ತಡೆ, ರೇಲ್ವೆ ತಡೆ, ಮಾಡಲೇ ಬೇಕು, ರಾಜ್ಯ ಸರಕಾರಕ್ಕಿಂತ, ಕೇಂದ್ರ ಸರಕಾರದ ವ್ಯವಸ್ಥೆಗಳನ್ನ, ಸ್ವಲ್ಪ ಕದಲಿಸಲೇ ಬೇಕು. ಇಲ್ಲ ಅಂದ್ರೆ, ಲಾಲುಗೆ ಬಿಸಿ ತಟ್ಟುವುದು ಯಾವಾಗ?, ಮನಮೋಹನ ನಿಗೆ, ಕಾವೇರಿ ನಮ್ಮವಳು ಅಂತ ಕಿವಿಮಾತು ಹೇಳೋರು ಯಾರು?

ಸುಪ್ರೀಂ ಕೋರ್ಟ್‌ನಲ್ಲಿ, ಕಣ್ಣು ಮುಚ್‌ಕೊಂಡಿರೋ ನ್ಯಾಯದೇವತೆ, ಹಾಗೂ ನ್ಯಾಯಧೀಶ(ಅವ್ನು ನಿಜ್ವಾಗ್ಲೂ ನ್ಯಾಯಧೀಶನಾ?) ಅವರಿಗೆ ನಮ್ಮ ರೈತರ ಪರಿಸ್ಥಿತಿ ಅರ್ಥ ಮಾಡಿಸೋರು ಯಾರು?

ನನಗೆ ತಿಳಿದ ಮಟ್ಟಿಗೆ, ಬೆಂಗಳೂರು 1-2 ದಿನ ಸಂಪೂರ್ಣ ಬಂದ್ ಆದಾಗ್ಲೆ, ದಿನಪತ್ರಿಕೆಗಳಲ್ಲಿ ಅದು ಗೋಚರಿಸೋದು, ಆವಾಗ್ಲೇ, ದೆಹಲಿ ವರೆಗೂ ಸುದ್ದಿ ಮುತ್ತೋದು, ಆವಾಗ್ಲೇ, ಜಯಮ್ಮ-ಕರುಣಾನಿಧಿ ಇವರೆಲ್ಲ ಚಡ್ಡಿಗಳು ಸಡಿಲವಾಗೋದು.

ಹಾಂ, ಹಾಗೆ, ನಮ್ಮ ಕರ್ನಾಟಕದ ಸಂಪನ್ಮೂಲಗಳನ್ನ ಹಾಳು ಮಾಡಬೇಡಿ, ಯಾಕ್ ಅಂದ್ರೆ, ಇರೋ ರಸ್ತೆಗಳನ್ನೇ ಸುಧಾರಿಸೋಕೆ ಅಳುತ್ತಾ ಇರೋ ಕುಮಾರಣ್ಣ ಜಖಂ ಆಗಿರೋ ಸಂಪನ್ಮೂಲನ ಸಿದ್ಧಗೊಳಿಸೋಕೆ, ಇನ್ನೂ 5 ವರ್ಷ ತಗೋಬಹುದು.

ಆದ್ರೆ, ಪತ್ರಿಕೆಗಳಲ್ಲಿ, ಅಂತರ್ಜಾಲದಲ್ಲಿ, ಸುದ್ದಿವಾಹಿನಿಗಲ್ಲಿ, ಕರ್ನಾಟಕ ಎದ್ದು ಉರೀತೀರೋ ಗಾಂಭೀರ್ಯ ಕಾಣಲೇ ಬೇಕು. ಆಗಲೇ ಅಲ್ವಾ ನಮ್ಮ ಉಳಿದ ಭಾರತೀಯರಿಗೆ, ನಮ್ಮ ಕಷ್ಟ ಅರ್ಥಾ ಆಗೋದು!!!

inthi nimmava,
-Ashu

ರಾಜೇಶ ಹೆಗಡೆ ಶುಕ್ರ, 02/09/2007 - 08:24

ಚೆನ್ನಾಗಿ ಬ‍ರ್ದಿದಿರಾ ಅಶುರವರೆ. ನಿಮ್ಮ ಅಭಿಪ್ರಾಯಗಳು ತುಂಬಾ ವಿಚಾರ ಪ್ರಚೋದಕವಾಗಿರುತ್ತೆ. ನೀವು ಕನ್ನಡ ಭಾಷೆಯನ್ನು ತುಂಬ ಸರಳವಾಗಿ, ಸುಂದರವಾಗಿ ಬಳಸ್ತೀರಾ.

ಇಂತಿ
ರಾಜೇಶ ಹೆಗಡೆ

ಕೀರ್ತನ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 02/08/2007 - 13:04

ಸ್ಟ್ರೈಕ್ ನಿಂದ ಜನಗಳಿಗೆ ತೊಂದರೆ, ಸಾರ್ವಜನಿಕ ಆಸ್ತಿ ನಷ್ಟ ಎಲ್ಲವೂ ಸರಿ ಆದರೆ ಸ್ಟ್ರೈಕ್ ಯಾಕೆ ನಡೆಯುತ್ತವೆ? ಇದಕ್ಕೆ ಕಾರಣ ಏನು ಎಂಬುದನ್ನು ಮೊದಲು ನಾವು ಅರಿತು ಕೊಂಡರೆ ಪರಿಹಾರ ಹುಡುಕುವುದು ಸುಲಭ.

ಯಾವುದೇ ವ್ಯಕ್ತಿ ಆಗಲಿ ಹೊಡೆದಾಡಬೇಕು, ಬಸ್ಸುಗಳನ್ನು ಸುಡಬೇಕು, ಸಾರ್ವಜನಿಕ ಆಸ್ತಿಗಳನ್ನು ನಾಶಪಡಿಸಬೇಕು ಎಂದು ಮೊದಲೇನಿರ್ಧರಿಸಿ ಪ್ರತಿಭಟನೆಗೆ ಇಳಿಯುವುದಿಲ್ಲ. ಯಾವಾಗ ಜನರ ಭಾವನೆಗಳಿಗೆ, ಅವರ ಕಷ್ಟಗಳಿಗೆ, ಅವರ ಅನಿಸಿಕೆಗಳಿಗೆ ಬೆಲೆ ಸಿಗುವುದಿಲ್ಲವೊ ಆಗ ಜನ ಬೀದಿಗೆ ಇಳಿಯುತ್ತಾರೆ. ಮೊದಲು ಮೌನವಾಗೇ ಶುರುವಾಗುವ ಪ್ರತಿಭಟಿನೆ ನಂತರ ಜನಗಳ ಭಾವೋದ್ರೇಕದಿಂದ ಹಿಂಸಾರೂಪ ತಾಳುತ್ತದೆ.

ಇದಕ್ಕೆ ಮತ್ತೊಂದು ಕಾರಣ, ನಮ್ಮ ನಾಯಕರ ಹಾಗು ಜನಪ್ರತಿನಿಧಿಗಳ ಕುಟಿಲ ರಾಜಕಾರಣ ಮತ್ತು ಜಾಣ ಕಿವುಡು. ಎಲ್ಲಾ ನಾಯಕರುಗಳಿಗೆ ಅವರವರ ಪ್ರದೇಶದ ಜನಗಳ ತೊಂದರೆಗಳು, ಭಾವನೆ, ಅನಿಸಿಕೆಗಳು ತಿಳಿದಿರುತ್ತದೆ ಅವರು ಸಮಯಕ್ಕೆ ಸರಿಯಾಗಿ ಸ್ಪಂದಿಸಿ ಜನಗಳ ಅವಾಹಲನ್ನು, ಅವರ ಮನೋಭಿಲಾಷೆಗಳನ್ನು ಅರಿತು ಅದನ್ನು ಸಕ್ರಿಯಗೊಳಿಸಲು ತಕ್ಷಣವೇ ಕ್ರಮ ತೆಗೆದುಕೊಂಡರೆ ಇಂತಹ ಸ್ಟ್ರೈಕ್ ನಡೆಯುವುದಿಲ್ಲ.

ಜನಗಳಿಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ಹಲವಾರು ದಾರಿಗಳು ಇರಬಹುದು ಆದರೆ ಆ ದಾರಿಗಳು ಎಲ್ಲರಿಗೂ ತಿಳಿದಿರುವುದಿಲ್ಲ ಅಥವ ಆ ದಾರಿಯಲ್ಲಿ ಅವರಿಗೆ ಸರಿಯಾದ ನ್ಯಾಯ ಸಿಗುವುದಿಲ್ಲ ಎಂಬ ಅನುಮಾನ ಇರಬಹುದು ಇಲ್ಲವೆ ನಮ್ಮ ಜನನಾಯಕರ/ರಾಜಕಾರಿಣಿಗಳ ಪೊಳ್ಳು ಭರವಸೆಗಳ ಮೇಲೆ ನಂಬಿಕೆ ಇಲ್ಲದೆ ಹೋದಾಗ ಸ್ಟ್ರೈಕ್ ನಡೆಯುತ್ತವೆ.

ಎಲ್ಲಾ ಸಮಯದಲ್ಲೂ ಸ್ಟ್ರೈಕ್ ಹೀಂಸಾರೂಪ ತಾಳುವುದು ಜನಪ್ರತಿನಿಧಿಗಳ ಬೇಜವಾಬ್ದಾರಿ ಮತ್ತು ನಿರ್ಲಕ್ಷದಿಂದ. ಉ.ದಾ. ಡಾ||ರಾಜಕುಮಾರ್ ಅವರ ಸಾವಿನ ನಂತರದ ಗಲಭೆ. ಈ ಗಲಭೆಗೆ ಕಾರಣ ಪೋಲೀಸರು ಮತ್ತು ಮುಂದಾಲೊಚನೆ ಇಲ್ಲದ ಜನ ಪ್ರತಿನಿಧಿಗಳು.

ಡಾ||ರಾಜ್ ಅವರನ್ನು ಜೀವನದುದ್ದಕ್ಕೂ ಆರಾಧಿಸುತ್ತಿದ್ದ ಕನ್ನಡದ ಜನ ಅವರನ್ನು ಕಡೆಯಬಾರಿ ನೋಡಲು ಬಂದಿದ್ದರೆ ಹೊರತು ಗಲಭೆ ಉಂಟು ಮಾಡಬೇಕು ಎಂಬ ಉದ್ದೇಶದಿಂದಲ್ಲ. ಇಂತಹ ಭಾವುಕ ಸಮಯದಲ್ಲಿ ಜನರಿಗೆ ಡಾ||ರಾಜ್ ಅವರನ್ನು ನೋಡಲು ಸರಿಯಾದ ವ್ಯವಸ್ಥೆ ಮಾಡದೆ ಅವರ ಅಭಿಮಾನಿಗಳನ್ನು ದನಗಳಂತೆ ತಳ್ಳುವುದು, ಬೆತ್ತದಿಂದ ಹೊಡೆಯುವುದು ಮಾಡಿದರೆ ಯಾರು ತಾನೆ ಸುಮ್ಮನಿರಲು ಸಾಧ್ಯ. ಅಲ್ಲಿಗೆ ಬಂದಿದ್ದ ಜನಗಳು, ಕಳ್ಳರಲ್ಲ, ಕೊಲೆಗಡುಕರಲ್ಲ, ಕೋಟಿಗಟ್ಟಲೆ ಹಣದೋಚಿರುವ ರಾಜಕಾರಿಣಿಗಳಲ್ಲ, ಮುಗ್ಧ ಅಭಿಮಾನಿಗಳು.

santhosh_reach ಗುರು, 02/08/2007 - 14:28

Neejavaglu Ashu avaru bardirodu 100% sariyagide.

Regards,
Santhu

--------------------------
ಸಂತೋಷ್ ಅವ್ರ ಕ್ಷಮೆ ಕೋರಿ ಕನ್ನಡ ಲಿಪಿಯಲ್ಲಿ :

ನಿಜವಾಗ್ಲೂ ಅಶು ಅವರು ಬ‍ರ್ದಿರೋದು ೧೦೦% ಸರಿಯಾಗಿದೆ.

ಧನ್ಯವಾದಗಳೊಂದಿಗೆ
ಸಂತು

ashu ಶುಕ್ರ, 02/09/2007 - 09:58

ರಾಜಣ್ಣ, ನಿಮ್ಮ ಅಭಿನಂದನೆಗೆ ನಾನು ಚಿರಋಣಿ.

ನಾನ್ ಹೇಳೋ ಮಾತುಗಳು ನಿಮಗೆ ಸ್ವಾರಸ್ಯಕರ ಅನ್ನಿಸಿದ್ರೆ, ಸಂತೋಷದ ಸಂಗತಿ
ಆದರೆ, ನಾನು ಹೇಳೋದು ಸತ್ಯ. ಆ ಸತ್ಯ ಕಟುವಾಗಿರುತ್ತೆ ಅಂತ ಕೇಳಿದ್ದೆ. ಆದ್ರೆ ಸ್ವಾರಸ್ಯಕರ? ಆಗಿರುತ್ತೆ ಅಂತ ಈಗ್ಲೇ ಗೊತ್ತಾಗಿದ್ದು.

ಏನೇ ಆಗಲಿ, ರಾಜ್ ವಿಸ್ಮಯನಗರಿಗೆ ನಿಮ್ಮ ಕೊಡುಗೆ ಅತ್ತ್ಯಮೂಲ್ಯ. ಇದನ್ನು ಹೀಗೆ ಮುಂದುವರೆಸುತ್ತೀರಿ ಅನ್ನೋ ಆಶಾಭಾವನೆ ವ್ಯಕ್ತಪಡಿಸ್ತಾ ಇದೀನಿ.

ಹಾಗೆ, ಕಾವೇರಮ್ಮನಿಗೋಸ್ಕರ, ವಿಸ್ಮಯ ನಗರಿಯಿಂದ, ಏನಾದರೂ ಮಾಡಲು ಸಾಧ್ಯವೇ?....

ಯೋಚಿಸಿ, ನನಗೂ ತಿಳಿಸಿ, ನಾನು ನನ್ನ ಕೈಲಾದಷ್ಟು ಸಹಾಯ ಮಾಡ ಬಯಸುತ್ತೇನೆ.

ಹಾಗೆ, ನನ್ನ ಭಾವನೆಗಳನ್ನು ಸಮರ್ಥಿಸಿದ ಸ್ನೇಹಿತರಿಗೆ ಧನ್ಯವಾದಗಳು.

inthi nimmava,
-Ashu

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.