Skip to main content

ಆಕಿ ಒಂಟ್ಯಾಳ ತವರಿಗ..!

ಬರೆದಿದ್ದುJanuary 26, 2009
3ಅನಿಸಿಕೆಗಳು

ಆಕಿ ಒಂಟ್ಯಾಳ ತವರಿಗ
ಬಲು ಬೇಸರ ನನಗ
ಬ್ಯಾಡ ಅಂತೀವ್ನಿ ಮನಸಿನ್ಯಾಗ

ನನ್ನ ಕಂಡ್ರ ಪ್ರಾಣ ಆಕಿಗ
ನನ್ನದ್ರುಷ್ಟ-ಸಿಕ್ಕಾಳ ಜೊತಿಗ
ಯವ್ವಿ-ಯವ್ವಿ, ಎಂತ
ಚೆಂದ ಕಾಣಿಸ್ತಾಳ ನಕ್ಕಾಗ

ನಾ ಓದಿಲ್ಲ-ಬರೀಲಿಲ್ಲ ಶಾಲೀನಾಗ
ಒಡ್ಡ-ದಡ್ಡ, ಅಂತರ ಮನೀಗ
ಕಲಿಸ್ತಾಳೆ ನನ್ನಾಕಿ ಗುರುವಂಗ
ನೋಡ್ಕೊಂತಾಳೆ ನನ್ನ ಮಗುವಂಗ

ಕೈರಟ್ಟೆನಾಗ ಶಕ್ತಿ ಅದ..
ಅಂಬಲಿಯೋ-ಗಂಜಿಯೋ..ಮನೆಗಿರ್ತದ
ಕುಡಿಯಾಂಗಿಲ್ಲ-ಬೀಡಿ ಸೇದೊಂಗಿಲ್ಲ
ಯಾರ ತಂಟಿಗ್ ನಾ ಹೋಗಾಕು ಇಲ್ಲ

ಖುಷಿ ಆಗ್ತದ ಈಗ ನಂಗ
ಆಕಿ ಜೊತಿ ನಾ ಕಳೆಯೊ ದಿನದಾಗ
ಬಾಳ ಮುದ್ ಮಾಡ್ತಾಳೆ ನಂಗ

ಮೊನ್ನೆ ಹಿಂಗ ಬಾ ಅಂತ ಕರೆದ್ಲು ನಂಗ
ಕಿವಿಯಲ್ಲಿ ಹೇಳಿದ್ಲು ಮೂರುತಿಂಗಲು ನಂಗೀಗ
ತಲೀಗೊಳಿಲಿಲ್ಲ.. ನಂಗಾ..ಗ

ನಾಚ್ಕೊಂತ-ನನ್ನ ಸತಾಯಿಸ್ಕೊಂತ
ಹೇಳಿದ್ಲು- ನೀ ಅಪ್ಪ ಆಗ್ತೀಯಂತ

ಅಪ್ಪ-ಸಾಮೀ...! ಕುಣಿದ್-ಕುಣಿದ್-
ನಲಿದಾಡ್‌ಬಿಟ್ಟೆ ಮನೆತುಂಬ-
ನಾನೆ ಮಗಿನಂಗ...

ಈಗ ಬಾಣಂತನಕ್ ಒಂಟ್ಯಾಳ ತವರಿಗ
ಬ್ಯಾಡ ಅಂದ್ಕೊಂಡೆ ಮನಸಿನ್ಯಾಗ
ನನ್ನ ಮನೀಗ ಹುಟ್ಟುದ್ರೆ ಬ್ಯಾಡಂತದೇನ್ ನನ್ ಮಗ

ಅಯ್ಯೋ ನನ್ ಬುದ್ದಿಗಿಷ್ಟು..ನಾ ಹೇಳಿದ್ದೆಲ್ಲ ಆಯ್ತದ?
ಅದ್ಕೊಂಡಿದ್ ಸಾಕಂತೇಳಿ
ಕಳಿಸಿಕೊಟ್ ಬಂದೆ ತವರಿಗ

ಲೇಖಕರು

ಯೋಗೇಶ್

ನಿನಗೇಳದ ಮಾತೊಂದು ಮನದ(ನ)ಲ್ಲೆ ಉಳಿದಿದೆ.

ಅನಿಸಿಕೆಗಳು

umeshhubliwala ಧ, 02/04/2009 - 19:54

ಸ್ವಾಮಿ ಒಂಟ್ಯಾಳ ಈ ಪದದ ಅರ್ಥ ಗೊತ್ತಾಗಲಿಲ್ಲ.....

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 12/21/2009 - 13:00

ವಾವ್!!! ಚೆನ್ನಾಗಿದೆ...

ವಿನೋದ್ ಕುಮಾರ್ ಬಿ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 03/02/2010 - 00:52

ಅಯ್ಯೊ ಗುರು ಎನ೦ತ್ತಾ ಹೇಳೊದು... ಎ೦ಗೇ ಬರ್ದೆ ಗುರು ದಯವಿಟ್ಟು ಇತರ ಹಳ್ಳಿ ಭಾಷೆಯಾ ಕವನ, ಹಸ್ಯಾ, ಕಥೆನ ಹುಚ್ಚಾನ೦ತೆ ಇಶ್ಟ ಪಡ್ತಿನೀ
ಸುಪರ್,......ವಾವ್
ನಾನು ನಿನ್ನ ಅಭಿಮಾನಿಯ್ಬಿಟಿದಿನಿ ಗುರು... ಇ ಲವ್ ಯು

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.