Skip to main content

ಗಣರಾಜ್ಯೋತ್ಸವದ ಶುಭಾಶಯಗಳು.

ಬರೆದಿದ್ದುJanuary 26, 2009
noಅನಿಸಿಕೆ

ಎಂದಿನಂತೆ ಅಮ್ಮ ಬಂದು,
ಕಂದ ಏಳು ಎನುವಳು,
ಗಣರಾಜ್ಯ ದಿವಸವಿಂದು, ಎಂದು
ಹಾಲು ಕೈಗೆ ಕೊಟ್ಟಳು...

ಕುಡಿದು ಹಾಲನೆಲ್ಲ ನಾನು,
ನಿತ್ಯ ಕರ್ಮ ಮುಗಿಸಿದೆ.
ಅಮ್ಮ ಕೊಟ್ಟ ತಿಂಡಿ ತಿಂದು,
ಸಮವಸ್ತ್ರ ಧರಿಸಿ, ಹೊರಟೆನು.

ಬಿಳಿಯ ಉಡುಪಿನೊಂದಿಗೆಲ್ಲ,
ಗೆಳೆಯರೆಲ್ಲ ನೆರೆದು,
ಗಣರಾಜ್ಯ ದಿವಸವನ್ನು.
ಹಬ್ಬದಂತೆ ಆಚರಿಸಿದೆವು,

ದೇಶ ಭಕ್ತಿ, ದೇಶ ಪ್ರೀತಿ,
ಸಮಾನತೆಯ ತಿಳಿಸಿದರು,
ಹೊರಡೊ ಮುನ್ನ, ಸಿಹಿಯ ಕೊಟ್ಟು,
ಶಾಲೆಗೆ ರಜೆಯ ಕೊಟ್ಟರು.

ನಾನು ಕೂಡ ಎಲ್ಲರಂತೆ,
ಓದು ಕಲಿಯಬೇಕಿದೆ.
ನನ್ನ ಜೀವ, ಕೆಲಸವೆಲ್ಲ,
ದೇಶಕ್ಕಾಗಿ ಮುಡಿಪಿದೆ...

ಲೇಖಕರು

ಯೋಗೇಶ್

ನಿನಗೇಳದ ಮಾತೊಂದು ಮನದ(ನ)ಲ್ಲೆ ಉಳಿದಿದೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.