Skip to main content

ಆಕೆಯ ಮಗಳು ಹೀಗೆ ಅಂತ ನಂಗೆ ಗೊತ್ತಿರಲಿಲ್ಲ - ಮುಕ್ತಾಯ ಸಂಚಿಕೆ.

ಬರೆದಿದ್ದುJanuary 15, 2009
12ಅನಿಸಿಕೆಗಳು

ಆಕೆಯ ಮಗಳು ಹೀಗೆ ಅಂತ ನಂಗೆ ಗೊತ್ತಿರಲಿಲ್ಲ - ಸಂಚಿಕೆ 4
ಈ ಕಥೆ ಸಂಚಿಕ 4 ರಿಂದ ಮುಂದುವರಿದಿದೆ.

ಮೊನ್ನೆ ನಿಮ್ಹಾನ್ಸ್ ನಲ್ಲಿ ಚಿಕಿತ್ಸೆಗೆ ಹೋಗಿದ್ದಾಗ ಡಾಕ್ಟರ್ ಹೇಳಿದ್ರು ತಾಯಿ ಪ್ರೀತಿ ಜೊತೆಗೆ ತಂದೆ ಪ್ರೀತಿಯನ್ನು ಮಗುವಿಗೆ ಸಿಗೋ ಹಾಗೇ ಮಾಡೋಕೆ ಸಾಧ್ಯವಾ...? ಪ್ರಯತ್ನಿಸಿ. ಹೇಳೋಕಾಗಲ್ಲ ಒಮ್ಮೊಮ್ಮೆ ಔಷದಿಗಳಿಗಿಂತ ಈ ತರಹದ ಚಿಕಿತ್ಸೆಗಳು ಹೆಚ್ಚು ಫಲಕಾರಿಯಾಗಿಬಿಡುತ್ತವೆ. ಅಂದರು. ಆಗ ತಂದೆ ತರ ನಟಿಸೋಕೆ ನನಗೆ ನೀವು ಬಿಟ್ಟರೇ ಬೇರೆ ಯಾರೂ ನೆನಪಾಗಲಿಲ್ಲ. ಇವತ್ತು ನನ್ನ ಮಗಳ ಬರ್ತಡೇ. ಅವಳಿಗೆ ಹೇಳಿದ್ದೇನೆ ನಿನ್ನ ಬರ್ತಡೇ ದಿನ ನಿಮ್ಮಪ್ಪ ಬರ್ತಾರೆ ಅಂತ . ನೀವು ಮಿಲ್ಟ್ರಿಯಲ್ಲಿ ಕೆಲಸ ಮಾಡ್ತೀರಿ ಅಂತ ಬೇರೆ ಹೇಳಿದ್ದೇನೆ. ಇದೊಂದು ಸಹಾಯ ನನಗೆ ನೀವು ಮಾಡೋಕಾಗುತ್ತಾ..? ಅಂತ ಒಂದೇ ಉಸಿರಿಗೆ ಹೇಳಿ.ಕೆನ್ನೆಗೆ ಕಣ್ಣೀರ ಸ್ನಾನ ಮಾಡಿಸಿ, ಕುರ್ಚಿಗೆ ಒರಗಿ , ನಿಟ್ಟುಸಿರುಬಿಟ್ಟು ಸುಮ್ಮನಾದಳು.

ಈಗ ಅಘಾತಕ್ಕೋಳಗಾಗುವ ಸರದಿ ನನ್ನದಾಗಿತ್ತು. ತಾನೊಂದು ಬಗೆದರೆ, ದೈವವೊಂದು ಬಗೆಯಿತು. ಈ ಮಾತು ನನ್ನ ವಿಷಯದಲ್ಲಿ ಪದೇ ಪದೇ ನಿಜವಾಗುತ್ತಿದೆ. "ಮೋಹದ ಪಾಶದ ವಿರುದ್ದ ಈಜಿ ಹೊರಬರಬೇಕು ಎನ್ನುವಾಗ ಒಳಸುಳಿಯ ಸೆಳೆತ, ಸುಳಿಗೆ ಸಿಲುಕಬೇಕು ಎಂದಾಗ ದಡತಲುಪಿಸುವ ಹುನ್ನಾರ" ಹೇ..ದೇವಾ ನಿನ್ನ ಲೀಲೆಗಳಿಗೆ ಕೊನೆಯೇ ಇಲ್ಲವೇ.? ಮುಂತಾಗಿ ಯೋಚಿಸುತ್ತಾ ಕುಳಿತಾಗಲೇ ಓಹ್ ನನ್ನ ಮಗಳು ಎದ್ದ ಹಾಗಿದೆ ಹೆಸರು ' ಕಾವ್ಯ' ಅಂತ. ನಾನು ಹೇಳೋದೆಲ್ಲ ಹೇಳಿದ್ದೇನೆ ಮುಂದಿನದು ನಿಮಗೆ ಸೇರಿದ್ದು ಎಂದು , ಸೆರಗಿನ ತುದಿಯನ್ನು ಕೆನ್ನೆಗೆ ತೀಡಿ, ಕಣ್ಣೀರಧಾರೆಯನ್ನು ಒರೆಸಿ, ಮಗಳ ಕೋಣೆಗೆ ಓಡಿಹೋಗಿ, ಅಗೋ ಪುಟ್ಟ ನಿಮ್ಮಪ್ಪ ಅನ್ನುತ್ತಾ ಮಗಳ ಕೈಹಿಡಿದು ಹೊರಬಂದಳು.

ಎಷ್ಟು ಮುದ್ದಾಗಿದ್ದಾಳೆ ಮಗು, ಥೇಟ್ ಅವರಮ್ಮನ ಹಾಗೆ. ಆದರೆ ವಯಸ್ಸಿಗೆ ತಕ್ಕ ಬೆಳವಣಿಗೆಯಿಲ್ಲ. ಹತ್ತುವರ್ಷದ ಮಗುವಿನ ಜಾಗದಲ್ಲಿ ಮೂರ್ನಾಲ್ಕು ವರ್ಷದ ಮಗುವಿದೆ. ನಿದ್ದೆಮಾಡುವಾಗ ಸುರಿಸಿದ ಜೊಲ್ಲಿನ ಕರೆ ಹಾಗೇ ಇದೆ. ನಡೆಯುವಾಗ ಸ್ವಲ್ಪ ಕುಂಟುತ್ತಾಳೆ . ನನ್ನ ಒಂದೇ ಸಮನೇ ನೋಡ್ತಿದ್ದಾಳೆ. ಮಾತನಾಡಿಸಿ ಎನ್ನುವಂತೆ ವಾಸಂತಿ ನನಗೆ ಕಣ್ಣಸನ್ನೆ ಮಾಡಿದಳು. ಇಷ್ಟ ಕಷ್ಟದ ಪ್ರಶ್ನೆ ಉದ್ಭವಿಸಲೇ ಇಲ್ಲ. ಹಾಯ್ ಪುಟ್ಟಾ ಎಂದು ಬಿಟ್ಟೆ. ಕೇಳಿಸಿತೋ ಇಲ್ಲವೋ ತಿಳಿಯದು, ಹಾಗೇ ನೋಡುತ್ತಿದ್ದಾಳೆ, ಸ್ವಲ್ಪ ಹತ್ತಿರ ಹೋಗಿ ಎತ್ತಿಕೊಳ್ಳಲು ಕೈಚಾಚಿದೆ. ಏನನ್ನಿಸಿತೋ ಏನೋ ಕಿಟಾರ್ ಅಂತ ಒಂದೇ ಸಮನೆ ಕಿರುಚಿಕೊಂಡುಬಿಟ್ಟಿತು. ವಾಸಂತಿಗೂ ಗಾಬರಿ. ಯಾಕೆ ಪುಟ್ಟಾ ಏನಾಯಿತು ಅಂದರೂ ಕೇಳಿಸಿಕೊಳ್ಳದೇ ಅಳ್ಳುತ್ತಲೇ ಇದ್ದಳು. ಒಂದ್ನಿಮಿಷ ಬಂದೆ ಅಂತ ವಾಸಂತಿ ರೂಮಿಗೆ ಕರೆದುಕೊಂಡು ಹೋಗಿ ಸಮಾಧಾನ ಮಾಡಿ, ಅವಳನ್ನು ರೂಮಿನಲ್ಲೇ ಆಟದ ಸಾಮಾನಿನ ಜೊತೆ ಬಿಟ್ಟು ಹೊರಬಂದಳು.

ಮೊದಲನೇ ಸಲ ನಿಮ್ಮನ್ನು ನೋಡಿದ್ದಕ್ಕಾಗಿ ಮಗು ಗಾಬರಿಯಾಗಿದೆ ಅಷ್ಟೆ, ಒಂದೆರಡು ಸಾರಿ ಕಾಣಸಿಕ್ಕರೆ ಸರಿಹೋಗಬಹುದು. ನೀವು ಆಗಾಗ ಇಲ್ಲಿಗೆ ಬರುತ್ತಿದ್ದರೆ ತುಂಬಾ ಉಪಕಾರವಾದಗಾಗುತ್ತೆ ಎನ್ನುತ್ತಲೇ, ಇರಿ ಅಡುಗೆ ಬಿಸಿಮಾಡ್ತೀನಿ, ಊಟ ಮಾಡ್ಕೊಂಡು ಹೋಗುವಿರಂತೆ ಅಂತ ಉತ್ತರಕ್ಕೂ ಕಾಯದೇ ಅಡುಗೆ ಮನೆ ಸೇರಿಬಿಟ್ಟಳು. ನಾನು ಸಹ ಮನೆಯಲ್ಲಿ ನನಗೆ ಅಡುಗೆ ಮಾಡಬೇಡಿ ಅಂತ ಹೇಳಿಬಂದಿದ್ದೆಯಾದ್ದರಿಂದ , ಊಟ ಮುಗಿಸಿಕೊಂಡೆ ಹೋಗಲು ನಿರ್ಧರಿಸಿ ಔಪಚಾರಿಕತೆಗಾದರೂ ಬೇಡ ಅನ್ನಲು ಮನಸ್ಸಾಗದೆ ಸುಮ್ಮನಾದೆ. ಆಮೇಲೆ ನಡೆದ್ದದ್ದೆಲ್ಲ ತೀರಾ ಕೃತಕವಾಗಿತ್ತು. ಹೇಗೋ ಊಟ ಮುಗಿಸಿಕೊಂಡು, ಅಲ್ಲಿಂದ ಹೊರಬಿದ್ದೆ. ನಾನು ಬರೋವರೆಗೂ ಮಗು ರೂಮಿನಿಂದ ಆಚೆ ಬರಲೇ ಇಲ್ಲ.

ಮಾರನೇ ದಿನ ಯಥಾಸ್ಥಿತಿ ಇಬ್ಬರೂ ಆಫೀಸಿಗೆ ಬಂದೆವು. ಹ್ಯಾಗಿದೆ ಈಗ ಮಗು ಎಂದೆ. ಪರ್ವಾಗಿಲ್ಲ but ನೆನ್ನೆ ಸ್ವಲ್ಪ ಗಾಬರಿಯಾಗಿದ್ದಳು ಅಷ್ಟೆ ಎಂದು ಸುಮ್ಮನಾದಳು. ನಾನೇ ಮತ್ತೆ ಮುಂದುವರೆಸಿ, ಹೌದು ದಿನಾ ಮಗಳನ್ನು ಎಲ್ಲಿ ಬಿಟ್ಟು ಬರ್ತಿರಾ ಅಂದೆ.. ಓಹ್ ನಿಮಗೆ ಹೇಳೋದೇ ಮರೆತಿದ್ದೆ. ನಮ್ಮ ಮನೆಯಲ್ಲಿ ಒಬ್ಬ ಕೆಲಸದಾಕೆ ಇದ್ದಾಳೆ, ಆಕೆ ಬೆಳಿಗ್ಗೆಯಿಂದ ಸಂಜೆತನಕ ಮಗುವನ್ನು ನೋಡಿಕೊಳ್ಳುತ್ತಾಳೆ. ನೆನ್ನೆ ನಾನೇ ರಜೆ ಕೊಟ್ಟಿದ್ದೆ. ಎಂದಳು. ಇದಾದನಂತರ ನನಗೆ ಅವಳಲ್ಲಿ ಮೊದಲಿನಷ್ಟು ಆಕರ್ಷಣೆ ಉಳಿದಿಲ್ಲ ಅನ್ನಿಸೋಕೆ ಶುರುವಾಯಿತು. ಈ ಮಧ್ಯೆ ಒಂದೆರೆಡು ಸಾರಿ ಅವರ ಮನೆಗೆ ಹೋಗಿದ್ದೆನಾದರೂ ಕಾವ್ಯ ನನ್ನ ಹತ್ತಿರ ಬರೋಕೆ ಅಂಜುತ್ತಿದ್ದಳು. ನಾನೂ ತೀರಾ ಬಲವಂತ ಮಾಡಿರಲಿಲ್ಲ.

ಒಂದು ದಿನ ಎಂದಿನಂತೆ ನಾನೂ , ವಾಸಂತಿ ಆಫೀಸಿನ ಕೆಲಸ ಮುಗಿಸಿಕೊಂಡು ಮನೆಗೆ ಹೊರೆಟೆವು. ನನಗೆ ಹೊರಗಡೆ ಸ್ವಲ್ಪ ಕೆಲಸವಿದ್ದುದರಿಂದ, ಸಹಕಾರನಗರಕ್ಕೆ ಹೊರಟಿದ್ದೆ. ಇನ್ನೂ ಸಹಕಾರ ನಗರ ತಲುಪಿರಲಿಲ್ಲ, ಅಷ್ಟರಲ್ಲಿ ವಾಸಂತಿ ಮನೆಯಿಂದ ಪೋನ್ ಬಂತು. ಇತ್ತೀಚೆಗೆ ಅವಳ ಮನೆಯಿಂದ ಪೋನ್ ಬಂದು ತುಂಬಾ ದಿನವಾಗಿದ್ದರಿಂದ, ಆಶ್ಚರ್ಯಗೊಂಡು ರಿಸೀವ್ ಮಾಡಿದೆ. ಅತ್ತಲಿಂದ ಅಳುವ ಶಬ್ದ . ಮೂರ್ತಿಯವರಾ.. ಸಾರ್ ವಾಸಂತಿ ಮೇಡಂ ಹೇಳಿದ್ರು ನೀವು ಅರ್ಜೆಂಟಾಗಿ ಇಲ್ಲಿಗೆ ಬರಬೇಕಂತೆ. ಎಂದೇಳಿ ಏನು .. ಎತ್ತ ಎಂದು ವಿಚಾರಿಸುವ ಮುನ್ನವೇ ಪೋನಿಟ್ಟು ಬಿಟ್ಟಳು. ನಾನು ಆತಂಕದಲ್ಲಿ ಅಲ್ಲಿಗೆ ಹೊರಡುವಷ್ಟರಲ್ಲಿ ಕಂಡಿದ್ದು 'ಕಾವ್ಯಾ' ಳ ಪಾರ್ಥೀವ ಶರೀರ. ವಾಸಂತಿ ನನ್ನ ನೋಡಿ ಮತ್ತಷ್ಟು ಅಳೋಕೆ ಶುರುಮಾಡಿದಳು. ನನಗೆ ಏನು ಹೇಳಬೇಕೋ ತಿಳಿಯಲಿಲ್ಲ. ಕೆಲಸದವಳನ್ನು ಕೇಳಿದೆ ಏನಾಯಿತು ಅಂತ ' ಮದ್ಯಾಹ್ನ ಊಟ ಮಾಡಿಸಿ, ಮಲಗಿಸಿಬಿಟ್ಟು, ನನ್ನ ಮಗಳನ್ನು ನೋಡೋಕೆ ಗಂಡಿನ ಕಡೆಯವರು ಬಂದಿದ್ದರು, ಅದಕ್ಕೆ ಮನೆ ಕಡೆಹೋಗಿದ್ದೆ. ಬರೋದು ಸ್ವಲ್ಪ ಲೇಟಾಯಿತು ಅಷ್ಟರಲ್ಲಿ ಮಗು ಬಾತ್ ರೂಮಿಗೆ ಹೋಗಿದೆ, ಅವಳಿಗೆ ಮೊದಲೇ ಕಾಲು ಸ್ವಲ್ಪ ಏಟಾಗಿತ್ತು, ಸರಿಯಾಗಿ ನಡೆಯೋಕೆ ಆಗುತ್ತಿರಲಿಲ್ಲ. ಹೇಗೋ ಆ ಬಾತ್ ರೂಮಿನಲ್ಲಿ ಬಿದ್ದುಬಿಟ್ಟಿದೆ. ಬಿದ್ದು ತಲೆಗೆ ಬಲವಾಗಿ ಏಟುಬಿದ್ದು ತುಂಬಾ ರಕ್ತ ಹೋಗಿ, ಕೊನೆಗೆ ಹೀಗಾಗಿಬಿಟ್ಟಿದೆ. ಅಂತ ಹೇಳಿ ಅವಳೂ ಅಳೋಕೆ ಶುರುಮಾಡಿಬಿಟ್ಟಳು.

ಸಮಾಧಾನಪಡಿಸೋಕೆ ನನಗೇನು ಗೊತ್ತು. ಕನಿಷ್ಟ ಕಾವ್ಯಳ ತಂದೆ ತರ ನಾಟಕ ಮಾಡೋಕೆ ಆಗದವನ ಕೈಲಿ ಇವರ ಕಣ್ಣೀರು ಒರೆಸುವ ಕೆಲಸ ಆಗುತ್ತಾ..? ಆದರೆ ಕಾಲ ಎಲ್ಲವನ್ನೂ, ಎಲ್ಲರನ್ನೂ ಸಮಾಧಾನಗೊಳಿಸಿಬಿಡುತ್ತೆ. ಇಲ್ಲೂ ಸಹ ಕಾಲದ್ದೇ ಕಾರುಬಾರು. ಪೋಲೀಸರ ತನಕ ಹೋಗದೆ, ಎಲ್ಲ ಕ್ರಿಯೆಗಳನ್ನು ಮುಗಿಸಿ ಎಲ್ಲರೂ ಹೊರಟು ಹೋದರು. ಉಳಿದದ್ದು ನಾನೂ ವಾಸಂತಿ ಮಾತ್ರ. ಸುಮಾರು ಗಂಟೆಗಟ್ಟಲೇ ಉಸಿರಾಡಿದರೆ ಕೇಳುತ್ತೆ ಅನ್ನೋಹಾಗೇ ನಾವಿಬ್ಬರು ಸುಮ್ಮನಿದ್ದುಬಿಟ್ಟಿದ್ದೆವು. ಎಷ್ಟೋ ಘಂಟೆಗಳ ನಂತರ ವಾಸಂತಿಯೇ ಹೇಳಿದಳು ನಿಮಗೆ ಹೊತ್ತಾಯಿತು, ಈಗ ಹೋಗಿ ಸಾಧ್ಯವಾದರೆ ನಾಳೆ ಬನ್ನಿ ಅಂತ. ಮೌನ ಒಂದು ಹಂತದವರೆಗೂ ತುಂಬಾ ಚೆನ್ನ, ಆನಂತರ ಅದರಷ್ಟು ಹಿಂಸೆ ಮತ್ತೊಂದಿಲ್ಲ. ಹೋಗಲು ಇಷ್ಟವಿಲ್ಲವಾದರೂ, ಮೌನದ ಭಯಕ್ಕೆ, ಮಾತಿಲ್ಲ ಎಂಬ ಕಾರಣಕ್ಕೆ ಹೊರಟುಬಂದೆ.

ಇದಾಗಿ ಹದಿನೈದು ದಿನ ಕಳೆದಿರಬಹುದು ಒಂದು ದಿನ, ವಾಸಂತಿ ' ಮೂರ್ತಿ, ನಾನು ಮತ್ತೆ ಮೈಸೂರಿಗೆ ಹೋಗಬೇಕೆಂದಿದ್ದೇನೆ. ಇವತ್ತು ಬಾಸ್ ಜೊತೆ ಮಾತನಾಡಿದೆ, ಅವರು ಒಪ್ಪಿದ್ದಾರೆ ಮುಂದಿನವಾರ ಹೋಗುತ್ತಿದ್ದೇನೆ. ಎಂದು ಹೇಳಿ ಸುಮ್ಮನೆದ್ದು ಹೋದಳು.
ನಾನು ಯಾಕೆ ಅಂತಾನೂ ಕೇಳಲಿಲ್ಲ, ಬೇಡ ಅಂತಾನೂ ಅನ್ನಲಿಲ್ಲ. ಆದರೆ ಮನಸ್ಸು ತಡೀಲಿಲ್ಲ, ಏನೋ ಚಡಪಡಿಕೆ, ಏನೋ ಹಪಾಹಪಿ, ಹೇಳಿಕೊಳ್ಳಲಾಗದ ವೇದನೆ, ಎಲ್ಲದರಲ್ಲೂ ನಿರುತ್ಸಾಹ. ಊಟ, ನಿದ್ದೆ, ಕೆಲಸ ಯಾವುದರ ಮೇಲೂ ಆಸಕ್ತಿ ಇಲ್ಲದಂತಾಯಿತು. ಶೇವ್ ಮಾಡೋದು ಕೂಡ ದಂಡ ಅನ್ನುವಂತಾಗಿಬಿಟ್ಟಿತು. ಜೊತೆ ಇದ್ದಷ್ಟು ದಿನ ಅವಳು ನನಗೇನೂ ಆಗಲಿಲ್ಲ, ಆದರೂ ಕಾಡಿದಳು, ಈಗ ದೂರವಾಗುತ್ತಿದ್ದಾಳೆ, ಅದಕ್ಕೂ ಕಾಡುತ್ತಿದ್ದಾಳೆ. ಹೆಣ್ಣು ಮಾಯೆ ಅನ್ನೋದು ಖರೇನಾ..?

ಮತ್ತೆ 'ಕಾಲ'ದ ಪಾತ್ರ. ವಾಸಂತಿ ಮೈಸೂರಿಗೆ ಹೋಗೋ ದಿನ ಬಂದೇ ಬಿಟ್ಟಿತು. ನನ್ನ ಮೂಕರೋಧನೆ , ಮಡುವಾಗಿ ಹರಿಯೋ ಹೊತ್ತು ಕೂಡ ಇದೇ ಆಗಿತ್ತು. ಭಾರವಾದ ಹೆಜ್ಜೆಗಳೊಂದಿಗೆ ಬಸ್ ನಿಲ್ದಾಣಕ್ಕೆ ಹೋಗಿದ್ದೆ. ಬೇಕಾಗಿದ್ದ ಬಸ್ಸುಗಳು ಬೇಕಾದಷ್ಟಿದ್ದರೂ, ಹತ್ತುವ ಮನಸ್ಸು ಅವಳಿಗಿರಲಿಲ್ಲ . ಒಂದೆರಡು ಘಂಟೆಗಳ ಕಾಲ ಮತ್ತೆ ಮೌನದ ಭರಾಟೆ ನಡೆಯಿತು. ಕೊನೆಗೆ ಅವಳೇ ಏನೋ ನಿರ್ಧಾರಕ್ಕೆ ಬಂದವಳ ಹಾಗೆ, ಆ ಮೌನವನ್ನು ಮುರಿದಳು.

ಮೂರ್ತಿ ನೀವು ನನಗೆ ತುಂಬಾ ಸಹಾಯ ಮಾಡಿದ್ದೀರಿ. ನಿಮ್ಮ ಋಣ ನನ್ನ ಮೇಲಿದೆ. ನನಗ್ಗೊತ್ತು, ನೀವು ನನ್ನಿಂದ ನಿರೀಕ್ಷಿಸಿದ್ದು , ನಿಮಗೆ ಸಿಗಲಿಲ್ಲ. ಆದರೆ ನನಗೆ ಮಾತ್ರ ಒಬ್ಬ ಒಳ್ಳೆ ಸನ್ಮಿತ್ರ ದೊರಕಿದ್ದಾನೆ. ಕ್ಷಣಿಕ ಸುಖ ಸಿಗಲಿಲ್ಲವೆಂಬ ನಿಮ್ಮ ನಿರಾಶೆಗಿಂತ, ಜೀವನ ಪೂರ್ತಿ ಇರಬಲ್ಲಂತಹ ಒಬ್ಬ ಹಿತೈಷಿ ಸಿಕ್ಕಿದ ಎಂಬ ನನ್ನ ಆನಂದ ದೊಡ್ಡದು. ನಿಮ್ಮದು ತುಂಬು ಸಂಸಾರ, ನಾನೂ ನಿಮ್ಮ ಹಾಗೇ ಯೋಚಿಸಿದ್ದರೆ ಇಷ್ಟೋತ್ತಿಗೆ ನೀವು ನಿಮ್ಮ ತುಂಬು ಸಂಸಾರದ ಆನಂದವನ್ನು ಕಳೆದುಕೊಳ್ಳುತ್ತಿದ್ದಿರಿ. ಒಂಟಿತನದ ನೋವೇನೆಂಬುದನ್ನು ಈ ಹತ್ತು ವರ್ಷಗಳಲ್ಲಿ ನಾನು ತುಂಬಾ ಅನುಭವಿಸಿದ್ದೇನೆ. ನೀವೂ ಸಹ ನನ್ನ ಹಾಗೇ ಆ ನೋವು ಅನುಭವಿಸಬಾರದು ಎಂಬ ಕಾರಣಕ್ಕೆ ನಾನು ನಿಮ್ಮ ಹಾಗೆ ಯೋಚಿಸಲಿಲ್ಲ. ಹಾಗಂತ ನನಗೇನು ಆಸೆಗಳಿಲ್ಲವಾ ಅಂತ ನೀವು ಕೇಳೋದಾದ್ರೆ ಖಂಡಿತ ನನಗೂ ಆಸೆಗಳಿದ್ದಾವೆ, ನಾನೇನೂ ಸಿನಿಮಾಗಳ ನಾಯಕಿಯಲ್ಲ. ಆದರೆ ನಾನು ಪಡೆಯಲಿಚ್ಚಿಸೋ ಗಂಡು ನನ್ನಂತಹವನೇ ಆಗಿರಬೇಕು. ಮಕ್ಕಳಿದ್ದರೂ ಪರ್ವಾಗಿಲ್ಲ, ಹ್ಯಾಗೂ ನನಗೆ ಇನ್ನು ಮಕ್ಕಳಾಗೋ ಯೋಗ ಇಲ್ಲ. Atleast ಭಾವಿ ಪತಿಯ ಮಕ್ಕಳನ್ನಾದರೂ ಪೋಷಿಸೋ ಭಾಗ್ಯ ಸಿಕ್ಕರೆ ಸಂತೋಷವೇ. ಅಂತಹ ಗಂಡು ಸಿಗಲಿಲ್ಲವೆಂದರೆ, No Problem ಹೀಗೆ ಇದ್ದುಬಿಡುತ್ತೇನೆ. ಆದರೆ ಇನ್ನೊಬ್ಬರ ಬದುಕಿನ ಜೊತೆ ಆಟವಾಡಲಾರೆ.
ಹೋಗ್ತಿದ್ದಿನಿ ಮೂರ್ತಿ. ಮತ್ತೆ ಬರ್ತೀನೋ ಇಲ್ಲವೋ ಗೊತ್ತಿಲ್ಲ. ಅಂತೇಳಿ ಸರಸರನೇ ಬಸ್ಸತ್ತಿ ಹೊರಟುಬಿಟ್ಟಳು.
ನಾನಿನ್ನೂ ಇಲ್ಲೇ ಕುಳಿತಿದ್ದೀನಿ, ಏನೋ ಮರೆತ ನೆನಪಲ್ಲಿ ಅವಳು ನನ್ನ ನೋಡೋಕೆ ಮತ್ತೆ ಬರ್ತಾಳೆ ಅಂತ. ಆದ್ರೆ ಅವಳು ಬೇಕಂತಲೇ ಮರೆತಿದ್ದಾಳೆ , ಇನ್ನು ಮತ್ತೆ ಬರೋ ಮಾತೆಲ್ಲಿ ಎಂಬುದು ನನಗೆ ಗೊತ್ತಾಗೋಕೆ ಇನ್ನೆಷ್ಟು ಸಮಯ ಬೇಕೋ..?

ಲೇಖಕರು

ವಿ.ಎಂ.ಶ್ರೀನಿವಾಸ

ಭಾವ ಲಹರಿ

ನನ್ನ ಹೆಸರು ವೀರಕಪುತ್ರ ಶ್ರೀನಿವಾಸ,

ಅನಿಸಿಕೆಗಳು

ರಾಜೇಶ ಹೆಗಡೆ ಗುರು, 01/15/2009 - 17:47

ಹಾಯ್ ಶ್ರೀನಿವಾಸ್,

ಕಥೆ ತುಂಬಾ ಚೆನ್ನಾಗಿ ಮೂಡಿ ಬಂತು. 8) ಮೂರ್ತಿಯ ವಾಸಂತಿಯ ಮೇಲಿರುವ ವಾಂಛೆ. ಅದನ್ನು ತಿಳಿದೂ ತಿಳಿಯದಂತೆ ವರ್ತಿಸುವ ವಾಸಂತಿ. ಕಾವ್ಯಳ ಸಾವು. :( ಮೂರ್ತಿಯ ಜೀವನ ಹಾಳಾಗಬಾರದೆಂದು ಕಾಳಜಿಯಿಂದ ದಾರಿ ತಪ್ಪದಂತೆ ಎಚ್ಚರವಹಿಸುವ ವಾಸಂತಿ. ಒಂದೇ ಎರಡೇ..?? ನಮ್ಮನ್ನು ಕೆಲವು ವಾರಗಳ ಕಾಲ ಮುಂದೇನಾಗುತ್ತೋ ಎಂಬ ಕುತೂಹಲ ಸಾಗರದಲ್ಲಿ ಮುಳುಗಿಸಿ ಕೊನೆಯಲ್ಲಿ ಪಕ್ವವಾದ ಅಂತ್ಯವನ್ನು ನೀಡಿದ ನಿಮಗೆ ವಂದನೆಗಳು. :)

ವಿ.ಎಂ.ಶ್ರೀನಿವಾಸ ಗುರು, 01/15/2009 - 18:42

ಧನ್ಯವಾದಗಳು ರಾಜೇಶ್ ಸಾರ್.
ಮೊದಲನೇ ಸಂಚಿಕೆಯಿಂದ, ಕೊನೆಯ ಸಂಚಿಕೆಯವರಿಗೆ ನೀವು ನೀಡಿದ ಪ್ರೋತ್ಸಾಹ, ತಿದ್ದಿದ ರೀತಿಗೆ ನಾನು ಅಭಾರಿ. ಯಾರು ಬೇಕಾದರೂ ಕಾಲೆಳೆಯೋ ಕೆಲಸ ಮಾಡಬಹುದು ಆದರೆ ಕೆಲವರಿಗೆ ಮಾತ್ರ ಇನ್ನೊಬ್ಬರನ್ನು ಪ್ರೋತ್ಸಾಹಿಸಿ, ಗೆಲ್ಲಿಸೋ ಗುಣವಿರುತ್ತೆ. ಆ ಕೆಲಸವನ್ನು ನೀವು ಮಾಡಿದ್ದೀರಿ. ನಿಮ್ಮ ಈ ಗುಣಕ್ಕೆ ನನ್ನ ಕೋಟಿ ನಮನಗಳು.
ಹಾಗೇಯೇ, ವಿಕ್ರಂ , ಎನ್.ಅಶ್ವಿನಿ, ತಿಲಕ್ , ಉಮೇಶ್ , ಮತ್ತು ಕೆಲವು ವಿಸ್ಮಯ ಪ್ರಜೆಗಳಲ್ಲದವರು ನನ್ನ ಮೊದಲ ಕಥೆಗೆ ಮಾರ್ಗದರ್ಶಿಗಳಾಗಿದ್ದಾರೆ. ಇವರೆಲ್ಲರಿಗೂ ನನ್ನ ಮನಃಪೂರ್ವಕ ಅಭಿನಂದನೆಗಳು. ನಿಮ್ಮ ಈ ಪ್ರೋತ್ಸಾಹ ಸದಾ ನನ್ನೊಂದಿಗಿರಲಿ ಎಂದು ಬಯಸುತ್ತೇನೆ.
ನಿಮ್ಮ ವಿಶ್ವಾಸಿ.
ವೀರಕಪುತ್ರ ಶ್ರೀನಿವಾಸ.

ಉಮೇಶ :) ಗುರು, 01/15/2009 - 20:36

ಗುಡ್, ಕಥೆಗೆ ಅನಿರೀಕ್ಷಿತ ಅಂತ್ಯ ನೀಡಿದ್ದೀರಿ. ಕೊನೆಯ ಕಂತಿನಲ್ಲಿ ಕಥೆ ಸ್ವಲ್ಪ ವೇಗವಾಗಿತ್ತು, ಮುಗಿಸುವ ಆತುರದಲ್ಲಿದ್ದೀರಿ ಅಂತ ಅನ್ನಿಸಿತು. ಮೊದಲ ಪ್ರಯತ್ನವಲ್ಲವೇ, ಚೆನ್ನಾಗಿಯೇ ಮೂಡಿ ಬಂದಿದೆ.

ವಿಕ್ರಂ ಶುಕ್ರ, 01/16/2009 - 12:48

ಕಥೆ ಚೆನ್ನಾಗಿತ್ತು, ಆದರೆ ನನಗೆ ಇಷ್ಟವಾಗದ್ದು ಕಥೆಯ ಹೆಸರು. ಚೆನ್ನಾಗಿರುವ ಕಥೆಗೆ ಬೇರೆ ಏನಾದರೂ ಚೆನ್ನಾಗಿರುವ ಹೆಸರಿಟ್ಟಿದ್ದರೆ ಚೆನ್ನಾಗಿರುತ್ತಿತ್ತು!!!

ಅಶ್ವಿನಿ ಶುಕ್ರ, 01/16/2009 - 15:15

ಹಾಯ್ ಶ್ರೀನಿವಾಸ್,
ಕಥೆ ತುಂಬಾ ಚೆನ್ನಾಗಿದೆ ಅದರಲು ಮುಕ್ತಾಯದ ಸಂಚಿಕೆ ಚೆನ್ನಾಗಿ ಮೂಡಿದೆ. ನಿಮ್ಮ ಲೇಕನ ಶ್ಯಿಲಿ ತುಂಬಾ ಚೆನ್ನಾಗಿ ಮೂಡಿ ಬಂಧಿಧೆ.
ನಿಮ್ಮ 2 ನೇ ಕಥೆಗೆ ಕಾಯೂತಿರುವೆ. :)

ತಿಲಕ್ ರಾಜ್ ಡಿ.ಟಿ. ಸೋಮ, 01/19/2009 - 14:55

ಧನ್ಯವಾದಗಳು ಶ್ರೀನಿವಾಸ್ ಸಾರ್,
ಕಥೆ ತುಂಬಾ ಚೆನ್ನಾಗಿ ಮೂಡಿ ಬಂತು.

ಮಾಧವನ್. ಮಸ್ಕಟ್ (ಪ್ರಮಾಣಿಸಲ್ಪಟ್ಟಿಲ್ಲ.) ಧ, 01/21/2009 - 21:38

ಕಥೆ ತುಂಬಾ ಚನ್ನಾಗಿದೆ. ಕೊನೆಯಲ್ಲಿ ವಾಸಂತಿ ಹೇಳುವ ಮಾತು ಚನ್ನಾಗಿದೆ.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 02/19/2009 - 16:01

ಕಥೆ ತು0ಬಾ ಚೆನ್ನಾಗಿತ್ತು

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 02/20/2009 - 17:07

I liked this story very much, Thank you very much, Best of luck Srinivas Sir!!!!
Sir will you please tell me how to type kannada font, i know kannada typing, but here i cant type some alphabets (ex:- kathe-(sotry)
From: Dorothy

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 02/23/2009 - 10:46

ಕಥೆ ತುಂಬಾ ಚೆನ್ನಾಗಿತ್ತು. ಧನ್ಯ್ವವಾದಗಳು.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 02/23/2009 - 15:14

:sick: :dance: :) :sleep: :symapthy: :symapthy: 8) :? :jawdrop: :sick: ;) :( :D }:) :P :O

rathna rao (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 03/02/2009 - 08:07

ಕಥೆ ಚೆನ್ನಾಗಿದೆ.ಒಳ್ಳೇ ಪ್ರಯತ್ನ.ಶುಭವಾಗಲಿ. 8)

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.