Skip to main content

ಆಕೆಯ ಮಗಳು ಹೀಗೆ ಅಂತ ಗೊತ್ತಿರಲಿಲ್ಲ. ಸಂಚಿಕೆ -3

ಬರೆದಿದ್ದುJanuary 1, 2009
8ಅನಿಸಿಕೆಗಳು

ಮೊದಲಿಗೆಎಲ್ಲಾ ವಿಸ್ಮಯನಗರಿಯ ಪ್ರಜೆಗಳಿಗೆ, ಓದುಗರಿಗೆ, ನಗರಿಯ ಅಭಿಮಾನಿಗಳಿಗೆ ಹೊಸವರ್ಷದ ಶುಭಾಶಯಗಳು.

ಸಂಚಿಕೆ-2 ರಿಂದ ಮುಂದುವರಿದಿದೆ.....
ಇಂತಹುದೇ ಗೊಂದಲಗಳ ಮಧ್ಯೆ ದಿನೇ ದಿನೇ ನಾನು ಎಲ್ಲಾ ಕೆಲಸಗಳಲ್ಲಿ ಆಸಕ್ತಿಯನ್ನು ಕಳೆದುಕೊಳ್ಳತೊಡಗಿದೆ. ಇದೇ ರೀತಿ ಮುಂದುವರಿದರೆ, ನನ್ನ ಭವಿಷ್ಯ ಏನಾಗುತ್ತೋ ಎಂಬ ಭಯವಾಗತೊಡಗಿತು. ಕೂಡಲೇ ದಿಕ್ಕು ತಪ್ಪಿದ ಮನಸ್ಸನ್ನು ನಿಯಂತ್ರಣಕ್ಕೆ ತಾರದೇ ಹೋದರೇ ದಿಕ್ಕೇ ಇಲ್ಲದವನಾಗುತ್ತೇನೇನೋ ಎಂಬ ಅರಿವಾಗಿ ಆ ನಿಟ್ಟಿನಲ್ಲಿ ಅವಳಿಂದ ದೂರವಾಗುವತ್ತ ಹೆಜ್ಜೆ ಇಡುವ ಮನಸ್ಸು ಮಾಡಿದೆ. ಈ ದೂರವಾಗೋ ಪ್ರಕ್ರಿಯೆ ' ಭವಿಷ್ಯದ ಭಯವಾಗಿ ರೂಪಗೊಂಡಿತು ಎಂಬುದಕ್ಕಿಂತ, ಎಟುಕದ ದ್ರಾಕ್ಷಿ ಹುಳಿ ಎಂಬ ನರಿ ಮನಸ್ಸಿನಿಂದ ರೂಪಗೊಂಡಿತು ' ಎಂಬುದು ಹೆಚ್ಚು ಸಮಂಜಸ.

ಆದರೆ ದೈವಲೀಲೆ ಬಲ್ಲವರಾರು..? ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂಬಂತೆ ಒಂದು ಕಡೆಯಿಂದ ನಾನು ಬಂಧಮುಕ್ತವಾಗೋಕೆ ಹೊರಟರೇ ಮತ್ತೊಂದು ಕಡೆಯಿಂದ ಬಂಧಗಟ್ಟಿ ಯಾಗೋಕೆ ಶುರುವಾಯಿತು. ಹೌದು ಅದೊಂದು ದಿನ ಬೆಳಿಗ್ಗೆ ಇನ್ನೂ ಯಾರೂ ಕಚೇರಿಗೆ ಬಂದಿರಲಿಲ್ಲ ನನ್ನ , ಅವಳನ್ನು ಹೊರತುಪಡಿಸಿ. ಎಂದಿನಂತೆ ನಾನು ದಿನಪತ್ರಿಕೆಯಲ್ಲಿ ಮುಳುಗಿದ್ದಾಗ ಏನ್ ಮೂರ್ತಿಯವರೇ ನ್ಯೂಸ್ ಎಂದ ಧ್ವನಿಯನ್ನು ಕೇಳಿ ನನ್ನ ಕಿವಿಯನ್ನು ನಾನೇ ನಂಬದಾದೆ ಆದರೆ ನಿಜವಾಗಿತ್ತು. ಆ ಧ್ವನಿ ವಾಸಂತಿಯದಾಗಿತ್ತು. ಯಾರಿಗಾಗಿ ವರ್ಷಗಟ್ಟಲೇ ತಪಸ್ಸು ಮಾಡಿದ್ದೇನೋ, ಯಾರ ಸನಿಹಕ್ಕೋಸ್ಕರ ಹಂಬಲಿಸಿದ್ದೇನೋ, ಯಾರ ಚಿಂತೆಯಲ್ಲಿ ಜೀವನದ ದಿಕ್ಕು ತಪ್ಪಿಹೋಗಿತ್ತೋ, ಈಗ ಯಾರ ನೆನಪಿನಿಂದ ಹೊರಬರಬೇಕು ಎಂದುಕೊಂಡಿದ್ದೇನೋ ಅದೇ ವಾಸಂತಿ, ನನ್ನ ಪಕ್ಕದಲ್ಲಿ ಕುರ್ಚಿ ಎಳೆದುಕೊಂಡು ಕೂತಾಗಿತ್ತು.

ಯಾಕೆ ಈ ಮದ್ಯೆ ಒಂಥರಾ ಇದ್ದೀರಿ..? ಯಾಕೆ ಮೈಯಲ್ಲಿ ಹುಷಾರಿಲ್ವ..? ನನ್ನ ಕಡೆಯಾದ್ರೆ ಅಸಲು ನೋಡೋದೇ ಇಲ್ಲ. ನನ್ನಿಂದೇನಾದ್ರು ತೊಂದ್ರೆಯಾಯ್ತ..? ಹೀಗೆ ಒಮ್ಮೆಗೆ ಮೇಲಿಂದ ಮೇಲೆ ಪ್ರಶ್ನೆಗಳನ್ನು ಕೇಳಿಬಿಟ್ಟಳು. ನನಗಾದ್ರೇ ಅವಳ ಸಾಮಿಪ್ಯದ ಸವಿಯನ್ನು ಅನುಭವಿಸೋ ತವಕ. ಆದ್ರೆ ಈ ಪ್ರಶ್ನೆಗಳಿಗೆ ಉತ್ತರಿಸುವ ಅನಿವಾರ್ಯತೆ ನನಗಿದ್ದುದರಿಂದ ಆ ಮೂಡಿನಿಂದ ಹೊರಬಂದು ' ಛೇ ಹಾಗೇನೂ ಇಲ್ಲ. ಮಾಮೂಲಿ ಥರಾನೇ ಇದ್ದೀನಿ ಅಂದೆ. ನೀವು ಬೇರೆಯವರಿಗೆ ಬೇಕಾದ್ರೆ ಈ ರೀತಿ ಹೇಳಿ ಮರೆಮಾಚಬಹುದು ಆದರೆ ನನಗಲ್ಲ, ನಿಮ್ಮ ಮನಸ್ಸು ನನಗೆ ಗೊತ್ತು ಅಂದಳಲ್ಲ ಆಗ ನನ್ನ ಖುಷಿ ನೋಡಬೇಕಿತ್ತು. ಇಡೀ ಜಗತ್ತನ್ನೇ ಗೆದ್ದ ಸಂಭ್ರಮ ನನ್ನ ಮನಸ್ಸಲ್ಲಿತ್ತು, ಆದರೆ ಹೇಳುವ ಮಾತಿನಲ್ಲಿರಲಿಲ್ಲ. ಆಶ್ಚರ್ಯವಾಗಿ ಹೌದಾ..? ಅಂದೆ. ಸಾಹೇಬ್ರೇ ನಾನು ಈ ಆಫೀಸಿಗೆ ಬಂದಾಗಿನಿಂದ ನಿಮ್ಮ ಬಗ್ಗೆ ಪಿ.ಹೆಚ್ .ಡಿ ನೇ ಮಾಡಿಬಿಟ್ಟಿದ್ದೇನೆ. ಆದ್ರೆ ನಿಮ್ಮ ಕಡೆಯಿಂದ ಡಾಕ್ಟರೇಟ್ ಸಿಗಬೇಕಷ್ಟೆ.ಎಂದು ಹೂನಗೆ ನಕ್ಕಾಗ , ಮಧುಹೀರುವ ದುಂಬಿಯ ಮನಸ್ಸು ನನ್ನದಾಗಿತ್ತು. ಹೇಳಿ ನಿಮಗೆ ಡಾಕ್ಟರೇಟ ಸಿಗಬೇಕಾದ್ರೆ ನಾನೇನು ಮಾಡಬೇಕು ಅಂತ ಅಮಾಯಾಕನ ತರ ಕೇಳಿದಾಗ, ಸಮಯ ಬಂದಾಗ ಕೇಳ್ತೀನಿ ಅಂತ ಎದ್ದು ಹೋದಳು.

ಆವತ್ತಿನಿಂದ ಮತ್ತೆ ನನ್ನ ದಿನಚರಿ ಮೊದಲಿನಂತಾಯ್ತು. ನಾಯಿಬಾಲ ಡೊಂಕು ಈ ಮಾತು ನನ್ನಂತಹವರಿಗೋಸ್ಕರವೇ ಹುಟ್ಟಿದೆಯೋ ಏನೋ..? . ದಿನೇ ದಿನೇ ನನ್ನ ಮತ್ತವಳ ನಡುವಿನ ಸಲುಗೆ, ಹೆಚ್ಚಾಗ್ತಾ ಹೋಯಿತು. ಕದ್ದು ಮುಚ್ಚಿ ಮಾತನಾಡೋದು, ಕಣ್ಣ ನೋಟಗಳ ಬೆರೆಸುವುದು, ಮೆಸೇಜ್ ಗಳ ರವಾನೆ, ಮಧ್ಯರಾತ್ರಿ ಮಿಸ್ಡ್ ಕಾಲ್ಸ್ , ಎದ್ದ ತಕ್ಷಣದ ಗುಡ್ ಮಾರ್ನಿಂಗ್ಸ್ , ಆಫೀಸಿನಲ್ಲಿ ಟೈಮ್ ಸಿಕ್ಕರೆ ಎರಡು ಮಾತು, ಒಂದು ಕಪ್ ಕಾಫಿ. ಹೀಗೆ ನಡೆದಿತ್ತು ನಮ್ಮ ಕಥಾನಕ. ಈ ಮದ್ಯೆ ಆಕೆ ಬಗ್ಗೆ ನನಗೆ ಗೊತ್ತಾದ ಒಂದು ವಿಷಯವೇನೆಂದರೆ ಆಕೆಗೆ ಗಂಡ ಇಲ್ಲ. ಒಬ್ಬ ಮಗಳು ಮಾತ್ರ ಇದ್ದಾಳೆ. ಗಂಡನ ಬಗ್ಗೆ ಪ್ರಶ್ನಿಸಿದಾಗಲೆಲ್ಲ ಆಕೆ ಹೇಳುತ್ತಿದುದು ಒಂದೇ ಮಾತು, 'ಆ ವಿಷಯ ಮಾತ್ರ ಕೇಳಬೇಡಿ'.

ಅದರಾಚೆ ಒಂದಿಂಚೂ ಆಚೀಚೆ ಹೋಗಿಲ್ಲ ಎನ್ನುವುದು ಸತ್ಯವಾದರೂ, ಹೋಗಬಾರದೆ , ಅಂತ ಕಾಯುತ್ತಿದುದು ಮಾತ್ರ ಕಟು ಸತ್ಯ. ಅದೂ ಗಂಡ ಇಲ್ಲ ಅಂತ ತಿಳಿದ ಮೇಲಂತೂ ಎಲ್ಲಾ ಅವಕಾಶವಾದಿ ಗಂಡಸರಂತೆ ನಾನು ಅವಕಾಶಕ್ಕಾಗಿ ಕಾದು ಕುಳಿತ್ತಿದುದು ಸತ್ಯ. ದೇವರು ಈ ವಿಷಯದಲ್ಲಿ ನನ್ನ ಪರ ಅನ್ನಿಸುತ್ತೆ. ಯಾಕೆಂದರೆ ವಾಸಂತಿ ಆಶ್ಚರ್ಯ ಎನಿಸುವಂತೆ ಆವತ್ತು ನನ್ನ ಬಳಿಗೆ ಬಂದು ' ಮೂರ್ತಿ ನಾಳೆ ಸಂಜೆ ನೀವು ನಮ್ಮ ಮನೆಗೆ ಬರ್ತೀರಾ..? ' ಎಂದು ಬಿಟ್ಟಳು. ಆವತ್ತು ಡಾಕ್ಟರೇಟ್ ಸಿಗಬೇಕಾದ್ರೆ ಏನ್ ಮಾಡಬೇಕು ಅಂತ ಕೇಳಿದ್ರಲ್ಲ, ಇವತ್ತು ಕೇಳ್ತೀನಿ, ನೀವು ನನ್ನ ಮನೆಗೆ ಬಂದರೆ ನನಗೆ ಡಾಕ್ಟರೇಟ್ ಕೊಟ್ಟಷ್ಟು ಸಂತೋಷ ಆಗುತ್ತೆ, ಬರ್ತೀರಲ್ವ..? ನಿಜ ಹೇಳ್ತೀನಿ , ಆವೊಂದು ಘಳಿಗೆ ನಾನು ತಡವರಿಸಿ ಬಿಟ್ಟೆ , ಮತಿಭ್ರಮಣೆಗೊಳಾಗಾಗಿದ್ದೆ , ದೇಹದಲ್ಲಿ ನನಗೇ ತಿಳಿಯದ ಒಂದು ರೀತಿಯ ನಡುಕ, ಭಯ.

ಆಕೆ ಮನೆಗೆ ಬರೋಕೆ ಹೇಳ್ತಿದ್ದಾಳೆ, ಅಂದರೆ....... !! ಸಾಹಿತಿಗಳು, ಸಿನಿಮಾದ ಹೀರೋಗಳು, ಸ್ತ್ರೀ ಸಮಾಜವನ್ನು ಉದ್ದರಿಸೋ ಗಂಡು ಸಮಾಜ ಸುಧಾರಕರು, ಸ್ತ್ರೀಯರಲ್ಲಿ ದೇವತೆಯನ್ನು ಕಾಣೋರು, ರಾಜಕಾರಣಿಗಳು ಆ ಕ್ಷಣದಲ್ಲಿ ಹೇಗೇ ಯೋಚಿಸುತ್ತಿದ್ದರೋ ಕಾಣೆ ಆದರೆ ನಾನು ಒಬ್ಬ ಸಾಮಾನ್ಯ ಗಂಡು ಪ್ರಾಣಿಯಾದ್ದರಿಂದ ಆ ಕ್ಷಣ ನಾನು ಯೋಚಿಸಿದ್ದು ಒಂದೇ... ಈ ವಯಸ್ಸಲ್ಲಿ ನಾನು ಆಕೆಯನ್ನ ಗೆಲ್ತೀನಾ..?

ಉಳಿದದ್ದು ಮುಂದಿನ ಸಂಚಿಕೆಯಲ್ಲಿ.

ಲೇಖಕರು

ವಿ.ಎಂ.ಶ್ರೀನಿವಾಸ

ಭಾವ ಲಹರಿ

ನನ್ನ ಹೆಸರು ವೀರಕಪುತ್ರ ಶ್ರೀನಿವಾಸ,

ಅನಿಸಿಕೆಗಳು

ತಿಲಕ್ ರಾಜ್ ಡಿ.ಟಿ. ಗುರು, 01/01/2009 - 13:10

ಆತ್ಮೀಯ ಶ್ರೀನಿವಾಸ್ ರವರಿಗೆ ಹೊಸ ವರ್ಷದ ಹಾರ್ಧಿಕ ಶುಭಾಷಯಗಳು.
ನೀವು ಡಾಕ್ಟರೇಟ್ ಕೊಡೋ ಎಪಿಸೋಡ್ ಆದಷ್ಟು ಬೇಗ ಭಿತ್ತರವಾಗಲಿ, ಅದಕ್ಕೆ ನಾವೆಲ್ಲರೂ ಜಾತಕ ಪಕ್ಷಿಯಂತೆ ಕಾಯುತ್ತಿದ್ದೇವೆ.
ಧನ್ಯವಾದಗಳು.

ರಾಜೇಶ ಹೆಗಡೆ ಶುಕ್ರ, 01/02/2009 - 12:12

ಹಾಯ್ ಶ್ರೀನಿವಾಸ್,
ಈ ಕಥೆಯ ಕೊನೆ ಏನಾಗುವದೋ ಅಂತಾ ಕುತೂಹಲ ಜಾಸ್ತಿ ಆಗುತ್ತಿದೆ. :dance: ಮುಂದಿನ ಭಾಗಕ್ಕೆ ಕಾಯುತ್ತಿರುವೆವು. :)

ಉಮೇಶ :) ಧ, 01/07/2009 - 15:40

ಲಗೂನ ಮುಂದಿನ ಭಾಗ ಬರೀರಿ ಸೀನು ಅವರ... ಭಾಳ ಲೇಟ್ ಪಾ ನೀವೂ... :sleep:

ರಾಜೇಶ ಹೆಗಡೆ ಶುಕ್ರ, 01/02/2009 - 10:53

ದಿನದ ಪ್ರತಿ ಕ್ಷಣಕ್ಕೂ ಅದರದ್ದೇ ಆದ ಮಹತ್ವ ಇದೆ.
ಮುಂಜಾನೆ ಬರವಸೆ ಮೂಡಿಸುತ್ತದೆ.
ಮಧ್ಯಾಹ್ನ ವಿಶ್ವಾಸವನ್ನು ತರುತ್ತದೆ.
ಸಾಯಂಕಾಲ ಪ್ರೀತಿಯನ್ನು ತರುತ್ತದೆ.
ರಾತ್ರಿ ವಿಶ್ರಾಂತಿಯನ್ನು ಕೊಡುತ್ತದೆ.
ಪ್ರತಿದಿನ ನಿಮಗೆ ಇವೆಲ್ಲವೂ ಸಿಗಲಿ ಎಂದು ಕೋಟಿ ದೇವರಲ್ಲಿ ಪ್ರಾರ್ಥಿಸುತ್ತಾ

ವಿಸ್ಮಯ ಪ್ರಜೆಗಳಿಗೆ, ಅನಾಮಿಕ ಓದುಗರಿಗೆ, ಕನ್ನಡಿಗರಿಗೆಲ್ಲರಿಗೂ ಹೊಸ ವರ್ಷ 2009 ರ ಶುಭಾಶಯಗಳು...

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 01/02/2009 - 14:38

ಆನಂದನಿಂದ ತಮಗೆ ಹೊಸ ಹೊಸವರ್ಷದ ಶುಭಾಶಯಗಳು

ANAND BALLOLLI (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 01/02/2009 - 14:55
aridra ಮಂಗಳ, 01/06/2009 - 18:27

ಶ್ರೀನಿವಾಸರವರೇ, ನಿಮ್ಮ ಕಥೆಗಾಗಿ ನಾವು ಇಲ್ಲಿ ಕಾದಿದ್ದೀವಿ..!
-ಆರಿದ್ರ.

ಅಶ್ವಿನಿ ಗುರು, 01/08/2009 - 16:26

ನಿಮ್ಮ 3 ಸಂಚಿಕೆಯೆನ್ನು ಒಧಿದೆ ತುಂಬಾ ಚೆನ್ನಾಗಿದೆ. 4 ಸಂಚಿಕೆಗೆ ಕಾಯುತಿರುವೆ, ಬೇಗನೇ ಬರೆಹಿರಿ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.